ಟೈಮ್ ಸೆನ್ಸ್ ನಾನ್ ಸೆನ್ಸ್
ಲೇಖನ - ಕನಕಾಪುರ ನಾರಾಯಣ
ನಮ್ಮ ಕನ್ನಡ ಶಾಲೆಯಲ್ಲಿ ಹಿರಿಯ ಮಕ್ಕಳಿಗೆ ಪುಸ್ತಕದ ಪಾಠ ಹೇಳಿಕೊಡುವಾಗ ಆಗ್ಗಾಗೆ ಹಲವಾರು ವಿಚಾರಗಳು ಚರ್ಚೆ ಬರುತ್ತವೆ. ಮಕ್ಕಳು ಒಳ್ಳೆಯ ಮೂಡ್ ನಲ್ಲಿ ಇದ್ದು ಆಸಕ್ತರಾಗಿ ಕೇಳುವಾಗ ಒಳ್ಳೆಯ ಉದಾಹರಣೆಗಳು, ಅನುಭವಗಳು, ಹತ್ತಾರು ವಿಷಯಗಳೂ ಹಂಚಿಕೊಳ್ಳುವುದೂ ಉಂಟು. ಕೆಲವು ಬಾರಿ ಸಂಧರ್ಭಕ್ಕೆ ಸರಿಯಾದ ತಿಳಿಹಾಸ್ಯದ ಹಾಸ್ಯ ಚಟಾಕಿಯನ್ನೂ ಹಂಚಿಕೊಳ್ಳುವ ಪಮೇಯ ಬಂದಿವೆ. ವಾರಾಂತ್ಯದಲ್ಲಿ ಮಾತ್ರ ನಡೆಯುವ ನಮ್ಮ ಶಾಲೆಯಲ್ಲಿ ಕೊಟ್ಟ ಮನೆಕೆಲಸವನ್ನು ಮಾಡದೇ ಇರುವ ಮಕ್ಕಳೂ ಇದ್ದಾರೆ, ಅವರು ಮನೆಕೆಲಸ ಮಾಡದೇ ಬಂದು ತರಗತಿಯಲ್ಲಿ ಕುಳಿತು ಸುಳ್ಳು ನೆಪ ಹೇಳಿ ತಿಣುಕುವಾಗ ಅವರ ಕಷ್ಟದ ಅರಿವು ನಮಗಾಗುತ್ತದೆ.
ಮಕ್ಕಳು ಹೋಮ್ ವರ್ಕ್ ಮಾಡದಿದ್ದಕ್ಕೆ ಕೊಡುವ ಕಾರಣಗಳಿಗೆ ನಮ್ಮಲ್ಲಿ ಉತ್ತರವೇ ಇರುವುದಿಲ್ಲ. ಹೀಗಿದ್ದಾಗ ಉಪಾಯಮಾಡಿ ಆಗಿಂದಾಗ್ಗೆ ಒಂದು ಪುಟ್ಟ ಚಟುವಟಿಕೆ ನಡೆಸಲಾಗುವುದು. ಅದು ಬಹಳ ಪರಿಣಾಮಕಾರಿ ಹಾಗೂ ಸಮಯದ ಬಗ್ಗೆ ಒಳ್ಳೆಯ ಅರಿವು ಮೂಡಿಸುತ್ತದೆ. ಇದೆ ಚಟುವಟಿಕೆಯನ್ನು ವರ್ಷಕ್ಕೊಮ್ಮೆ ಭೇಟಿಯಾಗುವ ಪೋಷಕರ ಜೊತೆಯಲ್ಲೂ ನಡೆಸುವ ಪ್ರಯತ್ನ ಮಾಡಲಾಗುವುದು. ಆ ಚಟುವಟಿಕೆ ಕಷ್ಟದ್ದೇನಲ್ಲ. ಬಹಳ ಸುಲಭವಾದದ್ದೇ.
ಆ ಚಟುವಟಿಕೆ ಎಲ್ಲರೂ ಒಟ್ಟಿಗೆ ಒಂದೇ ದಿಕ್ಕಿನ್ನತ್ತ ನೋಡುತ್ತಾ ಕುಳಿತಿರಲು ಮಾಡುವಂಥದ್ದು. ಪೋಷಕರ ಮುಂದೆ ಒಂದು ದೊಡ್ಡ ಗಡಿಯಾರವನ್ನು ಇಡಲಾಗುವುದು, ಅವರಿಗೆ ಕಣ್ಣುಮಿಟುಕಿಸದೇ ಒಂದು ನಿಮಿಷ ಅವಧಿಯವರೆಗೆ ಸೆಕೆಂಡ್ ಮುಳ್ಳನ್ನೇ ನೋಡಲು ಹೇಳುವುದು. ಅವರು ಗಡಿಯಾರವನ್ನು ದಿಟ್ಟಿಸಿ ನೋಡುತ್ತಿರಲು ಅವರನ್ನು ನೋಡುವುದೇ ಒಂದು ಮಜ. ೪೩,೪೨,೪೧,೪೦ ಅಯ್ಯೋ ಇದೇನಿದು ಒಂದು ನಿಮಿಷ ಮುಗೀತಾನೇ ಇಲ್ಲವೇ ? ಕೆಲವರಿಗೆ ಕಣ್ಣಲ್ಲಿ ನೀರು, ಬಲವಂತವಾದಿ ದಿಟ್ಟಿಸಿ ನೋಡುವವರು ಕೆಲವರಾದರೆ, ಹುಶ್ಯಾಪ್ಪಾ ಸಾಕಾಯ್ತು ಅಂತ ಹೇಳಿ ಕೆಲವೇ ಸೆಕೆಂಡುಗಳಲ್ಲಿ ಔಟ್ ಆದವರು ಕೆಲವರು. ಹಾಗೆ ಔಟ್ ಆದವರು ಎರಡೂ ಕೈ ತಮ್ಮ ತಲೆಯ ಮೇಲೆ ಇಟ್ಟುಕೊಳ್ಳಬೇಕು. ಅದೇ ಒಂದು ನಿಮಿಷದ ಸಮಯದಲ್ಲಿ ಮತ್ತೊಬ್ಬರು ಬೋರ್ಡಿನ ಮೇಲೆ ಸಾಧ್ಯವಾದಷ್ಟು ವೇಗವಾಗಿ ಸಂಖ್ಯೆಗಳನ್ನು ಗೀಚುತ್ತಾ ಇರುತ್ತಾರೆ, ಕಡೆಯಲ್ಲಿ ಉಳಿದವರು ಸಧ್ಯ ಮುಗೀತಲ್ಲ, ಏನು ಈ ಆಟದ ಫಲಿತಾಂಶ ಎಂದು ಅವರ ತಲೆಯಲ್ಲಿ ಅನ್ನಿಸುವಾಗ "ನೋಡಿದ್ರಾ ಒಂದು ನಿಮಿಷ ಕಳೆಯೋದು ಎಷ್ಟು ಹೊತ್ತು ತೆಗೆದುಕೊಳ್ಳುತ್ತದೆ ?'' ಎಂದು ಹೇಳಿ ಬೋರ್ಡಿನ ಮೇಲೆ ಗೀಚಿದ ಒಟ್ಟು ಸಂಖ್ಯೆಗಳನ್ನು ತೋರಿಸಿದಾಗ ಅವರ ಕಣ್ಣು ಅರಳುತ್ತದೆ. ಒಂದು ನಿಮಿಷದಲ್ಲಿ ಇಷ್ಟೊಂದು ಸಂಖ್ಯೆ ಬರೆಯಬಹುದಾ? ಹಾಗಾದರೆ ಎಷ್ಟು ಪದ ಬರೆಯಬಹುದು, ಓದ ಬಹುದು, ಏನೇನು ಕೆಲಸ ಮಾಡಿ ಮುಗಿಸಬಹುದು ? ಎಂದು ಹೇಳಿದಾಗ ಪೋಷಕರ ಹುಬ್ಬೇರುತ್ತವೆ. ಒಂದು ನಿಮಿಷ ಅರೆ! ಅರವತ್ತು ಸೆಕೆಂಡು ? ಎಷ್ಟು ಸಮಯ?" ಎಂದವರು ಗುನುಗುತ್ತಿರಲು ಕೂಡಲೇ ಅವರಿಗ
ಹೀಗೊಂದು ಪ್ರಶ್ನೆ ಎಸದಾಗ ತಲೆಯಾಡಿಸದ ಇರುವುದಿಲ್ಲ. ಸಾಮಾನ್ಯವಾಗಿ ಮಕ್ಕಳು ಶಾಲೆ ಮುಗಿಸಿ ಮನಗೆ ಬರುವುದು ಸೆಂಜೆ ೪ಕ್ಕೆ . ಮಲಗುವುದು ರಾತ್ರಿ ೧೦ ಅಂದಾಜು, ಈ ನಡುವೆ ಸುಮಾರು ಆರು ತಾಸು ಸಮಯ, ಅಂದರೆ ೩೬೦ ನಿಮಿಷ ಇದ.ಅದರಲ್ಲಿ ಊಟ, ಆಟ, ಪಾಠ, ಟಿ ವಿ ಎಲ್ಲಾ ಕಳೆದರೂ ಇನ್ನೂ ಎರಡು ಘೆಂಟ ಉಳಿದಿದ. ಅರೇ !! ಹಾಗಾದರ ಈ ವರೆಗೆ
ಎಷ್ಟು ಸಮಯ ನಾವು ವ್ಯರ್ಥ ಮಾಡಿದ್ದೇವೆ ! ಎಂಬ ಆಶ್ಚರ್ಯ ಆತಂಕ ಅವರ ಮುಖದಲ್ಲಿ ಎದ್ದು ಸೋತು ಗೆದ್ದವರಂತೆ ಮುಗುಳ್ನಗೆ ಕಾಣುತ್ತದೆ. ಹಾಗಾದರೆ ದಿನಕ್ಕೆ ಎಷ್ಟು ಸಮಯ ನಾವು ನಾನ್ ಸೆನ್ಸ್ ಗಳಿಂದಲೇ ಕಳೆಯುತ್ತೇವೆ? ನಮ್ಮ ಗಮನಕ್ಕೆ ಇದು ಬರಲೇ ಇಲ್ಲವೇ ? "ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ" ಎಂದು ಕನವರಿಸುತ್ತಾ "ಟೈಮ್ ಈಸ್ ಮನಿ" ಎಂದು ತಿಳಿದು ಮುಂದೆ ಎಲ್ಲರೂ ಸಮಯದ ಸದುಪಯೋಗ ಮಾಡಿಕೊಳ್ಳುವರೆಂಬ ಆಶಯದಿಂದ ಚಟುವಟಿಕೆ ಅಲ್ಲಿಗೆ ಮುಗಿಸಿ, ಈ ಪುಟ್ಟ ಲೇಖನ ತಮಗೆಲ್ಲರಿಗೂ ಅರ್ಪಿಸುತ್ತಿದ್ದೇನೆ. ಅದಾದ ನಂತರ ಮಕ್ಕಳಲ್ಲಿ ಪೋಷಕರಲ್ಲಿ ಬದಲಾವಣೆ ಕಂಡದ್ದು ಖಂಡಿತ.
ಒಳ್ಳೆಯ ವಿಚಾರ. ಯೋಚಿಸಲೇಬೇಕು.
ReplyDelete