ಸಿಡ್ನಿ ಕನ್ನಡ ಶಾಲೆಯ ಚಿಣ್ಣರಿಂದ ಯುಗಾದಿ ಸಂಭ್ರಮ
ವರದಿ - ದತ್ತು ಕುಲಕರ್ಣಿ ಸಿಡ್ನಿ.
https://photos.app.goo.gl/
Pics of ಯುಗಾದಿ event
ಕಳೆದ ರವಿವಾರ ಏಪ್ರಿಲ್ 6ರಂದು ಸಿಡ್ನಿ ಕನ್ನಡ ಶಾಲೆಯ ಚಿಣ್ಣರಿಗಾಗಿ ಯುಗಾದಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತುಂಗಾಬಿಯ ಶಾಲೆಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಣ್ಣರು ಮತ್ತು ಅವರ ಪಾಲಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಮಕ್ಕಳೆಲ್ಲ ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ಓಡಾಡುತ್ತಿದ್ದರೆ ಪಾಲಕರು ಸೀರೆ ಮತ್ತು ಧೋತಿಯಲ್ಲಿ ಸಂಭ್ರಮಿಸಿದರು.
ಕಾರ್ಯಕ್ರಮ ಮಧ್ಯಾಹ್ನ ನಿಗದಿತ ವೇಳೆಗೆ ಸರಿಯಾಗಿ 3:00 ಗಂಟೆಗೆ ಗಣೇಶನ ಹಾಡುಗಳೊಂದಿಗೆ ಶುರುವಾಯಿತು.
ಪ್ರಥಮ ಅಪ್ಪಳ ‘ಗಣಪತಿ ಎನ್ನ ಪಾಲಿಸೊ’ ಹಾಡಿದರೆ ಪ್ರೇರಣ ಇನ್ನೊಂದು ಗಣಪತಿ ಸ್ತುತಿಯನ್ನು ತನ್ನ ಬಾಲ ನುಡಿಯಲ್ಲಿ ಹಾಡಿದಳು.ನಂತರ ಯಶಸ್ವಿ ಸುಚಿಂದ್ರ ‘ಜೀವ ಕುಸುಮ’ ಎನ್ನುವ ಹಾಡನ್ನು ಹಾಡಿದಳು. ಹಾಗೆಯೇ ಮನಸ್ವಿ ಹಾಡಿದ ‘ಅ ಆ ಇ ಈ ಕನ್ನಡದ ಅಕ್ಷರಮಾಲೆ’ ಹಾಡು ಬಹಳ ಮಧುರವಾಗಿ ಮೂಡಿ ಬಂತು. ನಂತರ ಧೃತಿ ಕುಲಕರ್ಣಿ ಕನ್ನಡ ಶಾಲೆಯ ಬಗೆಗಿನ ಗೀಗಿ ಪದವನ್ನು ಹಾಡಿ ಎಲ್ಲರನ್ನು ರಂಜಿಸಿದಳು. ಚಾರ್ವಿ ಮೋದಿ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎನ್ನುವ ಭಕ್ತಿ ಗೀತೆಯನ್ನು ಸುಮಧುರವಾಗಿ ಹೇಳಿದಳು. ಅಂದು ರಾಮನವಮಿ ಇದ್ದದರಿಂದ ಈ ಹಾಡನ್ನು ಹಾಡಿದ್ದು ಯೋಗ್ಯವಾಗಿತ್ತು. ಹೀಗೆ ಮಕ್ಕಳು ಗಾಯನದ ಮೂಲಕ ರಂಜಿಸುತ್ತಿರುವಾಗ ಇನ್ನು ಕೆಲವರು ಭಾಷಣದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿರಾಜ, ಪ್ರಥಮ ಮತ್ತು ರಾಘವ ಬಹಳ ಸ್ವಾರಸ್ಯವಾಗಿ ಮಾತನಾಡಿ ಚಪ್ಪಾಳೆ ಗಿಟ್ಟಿಸಿದರು.
ನಂತರ ಮಕ್ಕಳು ಕನ್ನಡದ ಪ್ರಸಿದ್ಧ ಭಾವಗೀತೆಗಳನ್ನು ಪ್ರಬುದ್ಧವಾಗಿ ಹಾಡಿ ಭಾವಲಹರಿಯನ್ನು ಹರಿಸಿದರು.
ಮೌನೀಶಾ ಸಂತೋಷ ನಿಸಾರ್ ಅಹಮದ್ ಅವರ ಪ್ರಸಿದ್ಧ ಗೀತೆ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡಿದರೆ, ಮಾನ್ವಿ ಮತ್ತು ವಿಭವ ‘ವಸಂತ ಬರುತಿದೆ’ ಎನ್ನವ ಭಾವಗೀತೆಗೆ ಧ್ವನಿಯಾದರು. ಆರ್ವಿ ಅಶ್ವಿನ ಹಾಡಿದ ‘ಅಮ್ಮ ನಾನು ದೇವರಾಣೆ’ ಚೆನ್ನಾಗಿ ಮೂಡಿ ಬಂತು.ಚಾರ್ವಿ ಮತ್ತು ಲಕ್ಷ ‘ಮಾಯಾವಿ’ ಅನ್ನುವ ಹಾಡನ್ನು ಬಹಳ ಭರ್ಜರಿಯಾಗಿ ಹೇಳಿದರು. ನಂತರ ವಿರಾಜ್ ಮತ್ತು ಯಶಸ್ವಿನಿ ಅವರು ಪಂಚಾಕ್ಷರಿ ಗವಾಯಿಗಳ ಹಾಡು ‘ನೀಡು ಶಿವ ನೀಡದಿರು ಶಿವ’ ಇದನ್ನು ಬಹಳ ಸುಶೃವ್ಯವಾಗಿ ಹಾಡಿದರು. ಹಾಗೆಯೇ ಆಯುಕ್ತ ಮತ್ತು ಅಥರ್ವ ಹಾಡಿದ ‘ತಾಯಿ ಶಾರದೆ ಲೋಕ ಪೂಜಿತೆ’ ಬಹಳ ಸುಂದರವಾಗಿ ಮೂಡಿಬಂತು. ‘ಆಕಾಶದಾಗೆ ಯಾರೊ ಮಾಯಗಾರನು’ ಎನ್ನುವ ಮಧುರ ಹಾಡನ್ನು ಸಮುದ್ಯತಾ ವಾಸುದೇವ ಮತ್ತು ಆಧ್ಯಾ ಲಂಕ ಅವರು ಬಹಳ ಸುಂದರವಾಗಿ ಪ್ರಸ್ತುತಪಡಿಸಿದರು. ನಂತರ ಮಕ್ಕಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಯುಗಾದಿ ಸಂಭ್ರಮಕ್ಕೆ ಕಳೆ ತಂದರು.
ತುಂಗಾಬಿ ಶಾಲೆಯ ಚಿಕ್ಕ ಮಕ್ಕಳ ಸಮೂಹ ನೃತ್ಯ ಬಹಳ ಮುದ್ದಾಗಿತ್ತು.
ನಂತರ ಶನಯ, ಲಕ್ಷ, ಚಾರ್ವಿ,ಆದ್ರಿತ ಮತ್ತು ಹೊನಲ್ ಅವರ ಕಣ್ಮನ ಸೆಳೆದ ನೃತ್ಯರೂಪಕ್ಕೆ ಎಲ್ಲರೂ ಚಪ್ಪಾಳೆ ಹೊಡೆದರು. ಹಾಗೆ ಮನಸ್ವಿ ದ್ರುವ ಆರ್ಯನ್ ಮೈರಾ ಆಶಿ ಅನ್ಯ ಮತ್ತು ಯಶ್ ಬಹಳ ಸುಂದರವಾಗಿ ನೃತ್ಯ ಮಾಡಿದರು.
ಇದಾದ ನಂತರ ದೊಡ್ಡವರು ಕನ್ನಡದ ಸುಮಧುರ ಹಾಡುಗಳನ್ನು ಹೇಳಿ ಎಲ್ಲರನ್ನೂ ಮನರಂಜಿಸಿದರು.
ಅಕ್ಷತಾ ಅವರು ‘ಯುಗ ಯುಗಾದಿ ಕಳೆದರೂ’ ಮತ್ತು ದೇವಿಕಾ ‘ಇಂದು ನಾಡಿಗೆಲ್ಲಾ ಹಬ್ಬ’ ಹಾಡು ಹೇಳಿ ಯುಗಾದಿಯ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು. ಸಿಂಧು ನಾರಾಯಣ್ ‘ಭಾವ ಎಂಬ ಹೂವು ಅರಳಿ’ ಎನ್ನುವ ಸುಮಧುರ ಗೀತೆಯನ್ನು ಅಷ್ಟೇ ಮಧುರವಾಗಿ ಹಾಡಿದರು. ಅಂತರ ಅರ್ಚನಾ ವಾಸುದೇವ್ ತಮ್ಮ ಇಂಪಾದ ಧ್ವನಿಯಿಂದ ‘ಹೇಳೇ ಕೋಗಿಲೆ ಇಂಪಾಗಲ’ ಎನ್ನುವ ಸಿನಿಮಾ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ಕೊನೆಗೆ ರಾಜೇಶ್ ಹೆಗಡೆ ಅವರು ಎರಡು ಮೂರು ಸಿನಿ ಗೀತೆಗಳ ಮೇಡ್ಲೆಯನ್ನು ಚೆನ್ನಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯರಾದ ರಚನಾ ಮತ್ತು ಅಕ್ಷತಾ ಅವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಲಘು ಉಪಹಾರದ ವ್ಯವಸ್ತೆಯನ್ನು ಮಾಡಲಾಗಿತ್ತು. ಒಟ್ಟಿನಲ್ಲಿ ಕಾರ್ಯಕ್ರಮ ಮಕ್ಕಳಿಗೆ ಮತ್ತು ಪಾಲಕರಿಗೆ ಬಹಳ ಮುದ ಕೊಟ್ಟಿತು. ಅದಕ್ಕಾಗಿ ಕಾರ್ಯಕ್ರಮ ಆಯೋಜಿಸಿದ ಸಿಡ್ನಿ ಕನ್ನಡ ಶಾಲೆಯ ನಾರಾಯಣ ಕನಕಪುರ ಮತ್ತು ಸಂಗಡಿಗರಿಗೆ ಎಲ್ಲರೂ ಧನ್ಯವಾದ ಹೇಳಿದರು.
ತುಂಬಾ ಖುಷಿ ಆಯ್ತು
ReplyDelete