ಹಂಗಿನ ಅರಮನೆಗಿಂತಾ ಗುಡಿಸಿಲೇ ಲೇಸು

 ಹಂಗಿನ ಅರಮನೆಗಿಂತಾ ಗುಡಿಸಿಲೇ ಲೇಸು 

 ಲೇಖಕರು : ಎಂ ಆರ್ ವೆಂಕಟರಾಮಯ್ಯ



 ‘ಹಂಗು’ ಎಂಬ ಎರಡಕ್ಷರದ ಪದಕ್ಕೆ ಮುಲಾಜು ದಾಕ್ಷಿಣ್ಯ, ಋಣ, ಆಸೆ, ಹಂಬಲ, ಹಿಯ್ಯಾಳಿಸು, ಮೂದಲಿಸು ಎಂಬ ಅರ್ಥಗಳಿವೆ. ಹೀಗೇನೇ “ನೀನು ತಿಂದರೂ ಸರಿ, ಉಪವಾಸವಿದ್ದರೂ ಸರಿ, ಒಬ್ಬರ ಬಾಯಿಗೆ ಮಾತಾಗಬಾರದು, “ಉಪ್ಪೋ ಗೊಜ್ಜೋ ಯಾವುದೋ ಒಂದನ್ನು ತಿಂದು ನಮ್ಮ ಮನೇಲಿ ಇರೋದರ ಸಮಾನ, ಸುಖ, ನೆಮ್ದಿ, ಸಂತಸ ಮತ್ತೊಂದಿಲ್ಲ” ಯಾರ ಮುಲಾಜು, ದಾಕ್ಷಿಣ್ಯ, ಋಣ, ನಮಗೆ ಬೇಡ, ಅವರ ನಿಯಂತ್ರಣ, ಅಧೀನತೆ, ನೆರಳಿನಲ್ಲಿ ನಾವಿರಬಾರದು. ನಾವು ಸ್ವತಂತ್ರರಾಗಿರಬೇಕು ಎಂಬ ಋ

ರೂಢಿಯಲ್ಲಿರುವ ಗಾದೆಗಳನ್ನು ನಾವು ಆಗಾಗ್ಗೆ ನೆರೆಹೊರೆಯವರ ಬಾಯಿಂಧ ಕೇಳ್ತರ‍್ತೆವೆ. ಈ ನುಡಿಗಳೆಲ್ಲದರ ಒಟ್ಟು ಸಾರಾಂಶ, ಸದುದ್ದೇಶವಾಗಿರುತ್ತದೆ,

 

 ಆದರೆ ಇಂದು ರಾಜರು, ಅವರ ಅರಮನೆ ಇದ್ದ ಕಾಲ ದೂರವಾಗಿ ಬಹಳ ಕಾಲವಾಗಿದೆಯಾದ್ದರಿಂದ ಹಂಗಿನರಮನೆಯ ಮಾತು ಉದ್ಭವಿಸುವುದಿಲ್ಲ. 

 ‘ಹಂಗಿನ ಅರಮನೆಗಿಂತಾ ಗುಡಿಸಲೇ ಮೇಲು’ ಎಂಬ ಹಿಂದಿನ ಗಾದೆ ಇಂದಿನ ಕಾಲಘಟ್ಟದಲ್ಲೂ ಎಷ್ಟರ ಮಟ್ಟಿಗೆ ಪ್ರಸ್ತುತ ! ಇಲ್ಲಿದೆ ಇದರ ಒಂದು ಚಿತ್ರಣ :

 ನನ್ನ ಮಿತ್ರನ ಖಾಸಗಿ ಸಂಸ್ಥೆಯಲ್ಲಿ ಮೈಯ್ಯಲಿ ಶಕ್ತಿ ಇದ್ದಷ್ಟು ಕಾಲ ಶ್ರಮಿಸಿ ಸೇವೆಯಿಂದ ನಿವೃತ್ತಿಯಾದ ಸಜ್ಜನ. 2 ಗಂಡು 2 ಹೆಣ್ಣು ಮಕ್ಕಳ ಎಲ್ಲಾ ಜವಾಬ್ದಾರಿಯನ್ನೂ ಸೇವೆಯಲ್ಲಿದ್ದಾಗಲೇ ಮುಗಿಸಿದ್ದ. ಯಾರ ಹಂಗೂ ಬೇಡ, 1 ನೇಯ ತಾರೀಖು ಬಂದ ಕೂಡಲೇ ಬಾಡಿಗೆ ಕೊಡ್ತೀರಾ ? ಎಂದು ಹೊಸ್ತಿಲಲ್ಲಿ ಯಾರೂ ನಿಲ್ಲಬಾರದು, ನಾನು ಯಾರ ಹಂಗಿನಲ್ಲೂ ಇರಬಾರದು ಎನಿಸಿ ಇದು ನನ್ನ ಸ್ವಂತದ್ದು ಎಂಬ ಹೆಮ್ಮೆಯಲ್ಲಿ ತಲೆಯ ಮೇಲೊಂದು ಸೂರನ್ನು ಹೊಂದಿದ್ದ. ನಿವೃತ್ತಿ ನಂತರ ದೊರೆತ ಪುಟ್ಟ ಗಂಟನ್ನು ಆಪದ್ಧನವೆಂದು ಜೋಪಾÀನಮಾಡಿ ನಾನು ನನ್ನವಳು ಎಂಬ ತೃಪ್ತಿಯಲ್ಲಿ ಮಿತ ಹಿತವಾದ ಸರಳ ಜೀವನ ನಡೆಸಿದ್ದರು. ನೆಮ್ಮದಿ ಸಮಾಧಾನ ಶಾಂತಿಯನ್ನು ತಮ್ಮದಾಗಿಸಿಕೊಂಡರು. 

 ಹಿಂದೊAದು ಕಾಲದಲ್ಲಿ ನಂದಗೋಕುಲದAತಿದ್ದ ನಮ್ಮೀ ಮನೆಯಲ್ಲೇ ಶರೀರದಲ್ಲಿ ಶಕ್ತಿಇರೋವರೆಗೂ ಸ್ವತಂತ್ರವಾಗಿರೋಣ. ಯಾರಿಗೂ ಹೊರೆಯಾಗÀಂತೆ ದಿನ ಕಳೆಯೋಣ. ತ್ರಾಣ ಕಳೆದುಕೊಂಡಾಗ ‘ಆತ ನಡೆಸುದಂತೆ ನಡೆಯೋಣ’ ಎಂಬ ನಿರ್ಧಾರ ಅವರದಾಗಿತ್ತು. 

 ದಿನಗಳು ಮಾಸಗಳಾಗಿ ಇವು ವರ್ಷಗಳಾಗಿ ಓಡಿತ್ತು ಕಾಲ. ಪ್ರಕೃತಿ ನಿಯಮದಂತೆ ಈ ದಂಪತಿಗಳು ಸರದಿಯ ಮೇಲೆ ನಿತ್ರಾಣಗೊಳ್ಳಲಾರಂಭಿಸಿದರು. ಬಿ. ಪಿ. ಶುಗರ್. ್ನ ಕೆಲ ವರ್ಷ ಗಳ ಹಿಂದೆಯೇ ಇವರ ಶರೀರದಲ್ಲೇ ಆಶ್ರಯ ಪಡೆದ್ದಿದ್ದ ಕಾರಣ ಆಗಾಗ್ಗೆ ಸುಸ್ತು, ತಲೆ ಚಕ್ಜರ್, ಲೋ ಬಿ ಪಿ, ಇತ್ಯಾದಿ ದಾಳಿ ಮಾಡಲು ಶುರುವಾಗಿತ್ತು. ಕಾಲ ಕಾಲಕ್ಕೆ ಇವಕ್ಕೆ ಚಿಕಿತ್ಸೆ ಕೊಡಿಸಿ ಕೇರ್ ತಗೊಂಡಿದ್ದ ಪುತ್ರರು, ಯಾಕಪ್ಪಾ ಈ ಪಡಿಪಾಟಲು ನಿಮಗೆ, ನಮ್ಮನೇಲಿ ಬಂದಿರಿ ಹಾಯಾಗಿ. ಅದೂ ನಿಮ್ಮನೇನೇ ಅಲ್ವೇ ? ಎಂದು ಒತ್ತಾಯ ಹೇರಲಾರಂಭಿಸಿದರು. ಆಗಲಪ್ಪಾ ಯೋಚನೆ ಮಾಡಿ ನಿರ್ಧಾರ ತಗೊಳ್ತೀನಿ ಎನುತ್ತಾ ನನ್ನ ಮಿತ್ರ ಟೈಮ್ ಗೈನ್ ಮಾಡುತ್ತಿದ್ದ. 

 ಅಂದು ಇವರ ಪಾಲಿಗೆ ದುರ್ದಿನ. ರಾಯರಿಗೆ ಬಿ ಪಿ ಸಮಸ್ಯೆ ತೀವ್ರವಾಗಿ ದಿಢೀರನೆ ಆಸ್ಪತ್ರೆ ದಾಖಲಾಗಬೇಕಾಯಿತು. ಅಪ್ಪ ಆಸ್ಪತ್ರೆಲಿದ್ದರೆ ನೀ ಒಬ್ಬಳೇ ಇಲ್ಲೇನ್ ಮಾಡ್ತೀಯಮ್ಮ ? ಎನ್ನುತಾ ಮಗ ಅಮ್ಮನನ್ನು ತನ್ನ ಮನೆಗೆ ಕರೆತಂದ. 10-12 ದಿನಗಳಲ್ಲಿ ಅಪ್ಪ ಗುಣ ಮುಖರಾಗಿದ್ದು ಅಪ್ಪನನ್ನೂ ಮಗ ತನ್ ಮನೆಗೇ ಕರೆದೊಯ್ದ. ಕೆಲ ದಿನಗಳು ಉರುಳಿದುವು. ನಾ ಈಗ ಪೂರ್ತಿಯಾಗಿ ಆರೋಗ್ಯವಾದೆನಲ್ಲಪ್ಪ, ಇನ್ನು ನಮ್ಮ ಮನೆಗೆ ಹೊರಡ್ತೀವಿ ಎಂದಾಗ ಮಗ ಅಂದ, ಯಾಕಪ್ಪಾ, ನಮ್ಮ ಮನೆ, ನಮ್ಮ ಮನೆ ಅಂತಾ ಪೇಚಾಡ್ತೀರಿ ? ಇದು ನಿಮ್ಮದೇ ಅಲ್ವಾ ಮನೆ, ನಾ ಬೇರೆಯವನಾ ! ಇಲ್ಲಿ ನಿಮಗೆ ಇಷ್ಟ ಬಂದ ಹಾಗೆ ಫ್ರೀಯಾಗಿರಿ. ನೀವಲ್ಲಿದ್ದರೆ ಯಾವ ಕ್ಷಣ ಏನಾಗುತ್ತೋ ಅಂತ ನಮಗೆ ಟೆನ್ಶನ್, ಅಲ್ಲಿ ನಿಮ್ಮಬ್ರ ಪೈಕಿ ಯಾರೊಬ್ಬರಿಗೆ ವ್ಯತ್ಯಾಸ ವಾದರೆ ನಿಮಗೂ ಭಯ, ಆತಂP.À ಯಾಕೆ ಬೇಕು ಈ ತಲೆ ನೋವೆಲ್ಲಾ ! ಇಲ್ಲಿ ನೀವ್ ಖುಷಿಯಾಗಿರಿ. ಆ ನಿಮ್ಮ ಮನೇನ ನನ್ನ ಹೆಂಡತಿ ತಮ್ಮನಿಗೆ ಬಾಡಿಗೆಗೆ ಕೊಡೋಣ. ಅವನು ಮನೇನ ಚೆನ್ನಾಗಿಟ್ಕೊಳ್ಳತಾ£.ೆ ಜೊತೆಗೆ ಸಲೀಸಾಗಿ ಬಾಡಿಗೇನೂ ಕೊಡ್ತಾನೆ ಅದನ್ನ ನೀವೇ ಇಟ್ಕೊಳ್ಲಿ ಎಂದ ಮಗ, ಹೀಗೆ ಅಪ್ಪ ಅಮ್ಮನನ್ನು ಅವರ ಮನೆಯಿಂದ ಸುಲಭವಾಗಿ ವೆಕೇಟ್ ಮಾಡಿಸಿ ತನ್ನಲ್ಲಿ ಸೇರಿಸಿಕೊಂಡ. 

 ‘ಹೊಸದರಲ್ಲಿ ಅಗಸ ಗೋಣಿ ಎತ್ತೆತ್ತಿ ಒಗೆದ’ ಎಂಬುದು ಹಳೆಯ ಗಾದೆ. 1-2 ತಿಂಗಳು ಮಗ ಮೊಮ್ಮಕ್ಕಳೂ ಎಲ್ಲರೂ ಜೊತೆಯಾಗಿ ಕೂತು ನಗುನನಗುತ್ತ ಉಂಡು ಮಲಗುತ್ತಿದ್ದರು. ಕಾಲ ಕಳೆದಂತೆ ಮಗ ಮನೆಗೆ ಬರೋದು ಲೇಟ್ ಆದಾಗ ಸೊಸೆ, ಅಮ್ಮ ನೀವು ಅವರಿಗಾಗಿ ಕಾಯಬೇಡಿ, ಊಟ ಮಾಡಿ ಮಲಗಿ. ಅವರು ಬಂದ ಮೇಲೆ ನಾನು ಮಕ್ಕಳು ಊಟ ಮಾಡ್ತೀವಿ ಎನ್ನಲಾರಂಭಿಸಿದಳು ಸೊಸೆ. ಅದೂ ಸರಿಯ ಎನಿಸಿತು ಈ ಹಿರಿಯರಿಗೆ. ಊಟ ಮುಗಿÀಸಿ ಮಗ ಬರೋವರೆಗೂ ಕಾಯುತ್ತಿದ್ದು ಬಂದ ನಂತರ ಮುಖ ನೋಡಿ ಮಲಗುವ ಅಭ್ಯಾಸವಾಯ್ತು, 

 ನಂತರದ ದಿನಗ¼ಲ್ಲಿ ಬೇಗನೆ ಮನೆಗೆ ಬಂದ ದಿನ ಅಪ್ಪಾ, ಊಟಕ್ಕೆ ಏಳ್ತೀರಾ , ಹಸಿವಿಲ್ಲದಿದ್ದರೆ ಆ ಮೇಲೇ ಮಾಡಿ ಎನ್ನುತ್ತಾ ತಾನು ಮಕ್ಕಳು ಊಟ ಮುಗಿಸುತ್ತಿದ್ದರು. 1 ನೆಯ ತಾರೀಖು ಬಂದಿತ್ತು. ಅಪ್ಪ ನಿಮ್ಮ ಮನೆ ಬಾಡಿಗೆ ತಗೊಳ್ಳಿ ಎಂದ ಮಗನನ್ನು ಕುರಿತ ರಾಯರು ನನಗ್ಯಾಕಪ್ಪಾ ದುಡ್ಡು, ನಮ್ಮಿಬ್ಬರ ತಿಂಡಿ ಊಟ ಖರ್ಚೆಲ್ಲಾ ನೀನೇ ಭರಿಸ್ತಿದ್ದೀಯೆ, ನಾನೇನು ಮಾಡಲಿ ಈ ಹಣದಿಂದ ! ಇದು ನಿನ್ನ ಬಳಿಯೇ ಇರಲಿ, ನನಗೆ ಅಗತ್ಯವಾದಾಗ ಕೇಳ್ತೀನಿ ಎಂದರು. ಹಣ ಕಣ್ಣಿಗೊತ್ತಿಕೊಂಡ ಮಗ ಅದನ್ನು ಜೇಬಿಗೆ ಇಳಿಸಿದ. 

 ಆನಂತರದ ದಿನಗಳಲ್ಲಿ ಮಗ ಸೊಸೆಗೆ ಇಷ್ಟವಾದ ಅಡುಗೆ, ತಿಂಡಿ, ಜೀವನ ಶೈಲಿಯೊಂದಿಗೆ ಇವರು ಒಗ್ಗಿಕೊಳ್ಳಬೇಕಾದದ್ದು ಅನಿವಾರ್ಯವಾಯಿತು. ಆಕಸ್ಮಿಕವಾಗಿ ಈ ಹಿರಿಯರು ಮೊಮ್ಮಕ್ಕಳಿಗೆ ಏನಾದರೂ ತಿಳಿವಳಿಕೆ ಹೇಳಿದಾಗ, ಅದು ಈ ಕಿರಿಯರಿಗೆ ಕಿರಿ ಕಿರಿ ಎನಿಸುತ್ತಿತ್ತು. ಕಾರಣ ಅಪ್ಪಾ, ಈಗ ಕಾಲ ಬದಲಾಗಿದೆ, ನೀನ್ಯಾಕೆ ಇದಕ್ಕೆ ತಲೆ ಕೆಡಿಸಿಕೊಳ್ತೀಯ, ಅವರ ತಂಟೆಗೆ ಹೋಗಬೇಡ ಎನ್ನುತ್ತಿದ್ದ. ಮಗ.

 ವಿಷಯಗಳ ವಿನಿಮಯ ಮಾಡಿಕೊಳ್ಳಲು ಆಗೊಮ್ಮೆ ಈಗೊಮ್ಮೆ ಮನೆಯವರೆಲ್ಲೂ ಒಟ್ಟಾಗಿ ಸೇರಿದಾಗ ಅಮ್ಮ, ಅಪ್ಪ, ಹೆಚ್ಚು ಕಾಲ ಕೂತಿದ್ರೆ ನಡು ನೋಯುವುದಿಲ್ಲವೇ ಹೋಗಿ ಆರಾನಾಗಿ ಮಲಗಿ ಅನ್ನೋದು. ಹೆಚ್ಚು ಕಾಲ ಮಲಗಿದ್ದg,É ಸದಾ ಮಲಗಿದ್ದೆ ಮೈ ದಪ್ಪ ಆಗ್ತೀರಿ ಸ್ವಲ್ಪ ಆಚೆ ವಾಕ್ ಮಾಡಿ ಅನ್ನೋದು. ಜೋಕ್ ಮಾತಿಗೆ ಮÀಗ, ಸೊಸೆ, ಮೊಮ್ಮಕ್ಕಳು ನಕ್ಕಾಗ ಈ ವೃದ್ದರು ನಗದಿದ್ದರೆ, ಯಾಕೆ ಹಾಗೆ ಮುಖ ಸಿಂಡರಿಸ್ರಿö್ತÃರಾ ಸದಾ ? ನಗೋದಕ್ಕೆ ಕಾಸು ಖರ್ಚಿಲ್ಲ, ಸ್ವಲ್ಪ ನಗಿ, ಮುಖದ ನರಗಳು ಸಡಿಲವಾಗುತ್ತೆ ಎಂಬ ಮಗನ ವ್ಯಂಗ್ಯ. ಕೂತgರೆ ತಪ್ಪು, ನಿಂತರೂ ತಪ್ಪು, ಮಲಗಿದರೂ, ಮಲಗದಿದ್ದರೂ ಆಕ್ಷೇಪಣೆ ! ಬಹಳವಾಗಿ ನೊಂದು, ಯಾಕೋ ಬಹಳ ಕಷ್ಟಕ್ಕೆ ಬಂತ್ರೀ, ನಮ್ಮ ಮನೆಗೆ ಹೋಗಿ ನೆಮ್ಮದಿಯಿಂದ ಇರೋಣ ಎನ್ನಲಾರಂಭಿಸಿದರು ರಾಯರ ಪತ್ನಿ. ಆದರೇನ್ ಮಾಡೋದು ? ನಮ್ಮ ಮನೆ ಖಾಲಿ ಇಲ್ಲವಲ್ಲ ಎಂಬುದು ಇವರ ಚಿಂತೆಯಾಯಿತು. ನಿಮಿಷ ಕಳೆಯೋದು ನರ್ಷ ಕಳೆದಂತೆ ಭಾಸವಾÀಗ ತೊಡಗಿತು,

 ಇವನ ಬಾ ಮೈದನ್ನ ನಮ್ಮ ಮನೆ ಬಿಟ್ಕೊಡು ಎಂದು ನಿನ್ನ ಬಾ ಮೈದುನನಿಗೆ ಹೇಳು ಎಂದರೆ ಅªನಿಗೆ ಬೇರೆ ಮನೆ ಸಿಗಬೇಕಲ್ಲಪ್ಪ ಎನ್ನುವ ಮಗ, ಹೋಗಲಪ್ಪ, ಅವನು ಕೊಡೋ ಬಾಡಿಗೆಯಿಂದ ನಾವೇ ಬೇರೇ ಬಾಡಿಗೆ ಮನೆಗೆ ಹೋಗ್ತೀವಪ್ಪ ಎಂದರೆ, (ಪ್ರತಿ ತಿಂಗಳ ಇವನ ಜೇಬಿಗೆ ಬೀಳುತ್ತಿದ್ದ ಆ ಮನೆ ಬಾಡಿಗೆ ಇವನಿಗೆ ಖೋತಾ ಆಗುತ್ತಲ್ಲ ಎಂಬ ದುಃಖ ಮಗನಿಗೆ) ಇಲ್ಲೇನಾಗಿದೆಂiÀiಪ್ಪ ತೊಂದರೆ ನಿನಗೆ, ನಾವ್ ನಿಮ್ಮನ್ ಚೆನ್ನಾಗಿ ನೋಡ್ಕೊಳ್ತಿಲ್ಲವಾ ! ಎಂಬ ದಬಾವಣೆ. ಹೀಗಾಯ್ತೇ ನಮ್ಮ ಹಣೆ ಬರಹ ? ಎಂದು ದುಃಖಿತರಾದ ಹಿರಿಯರು, ಸ್ವಲ್ಪ ದಿನ 

 ಚಿಕ್ಕ ಮಗನ ಹತ್ರ ಇದ್ದು ರ‍್ತೀವಿ ಎಂದ ರಾಯರ ಮಾತಿಗೆ (ಇವರು ಅವನ ಹತ್ರ ನಿಂತರೆ ಇವರ ಮನೆ ಬಾಡಿಗೆ ಅವನಿಗೆ ಹೋಗುತ್ತೆ . ಉಹೂ, ಏನಾದರಾಗಲಿ ಇರ‍್ನ ಅವನ ಬಳಿ ಸೇರಿಸಬಾರದು ಎನಿಸಿತು) ನಿಮಗೆ ಹಿರಿ ಮಗ ನಾನೇ ಅಲ್ವಾ , ನಿಮ್ಮ ಜವಾಬ್ದಾರಿ ನನ್ನದೇ ಅಲ್ವಾ ? ನೀವಿಲ್ಲೇ ಇರಬೇಕಾದವರು ಎನ್ನುತ್ತಾ ಚರ್ಚೆಗೆ ಪೂರ್ಣ ವಿರಾಮವಿಟ್ಟ ಪುತ್ರ ರತ್ನ. 

 ತಮಗೆ ಕಾಣಿಸಿದ್ದ ಎಲ್ಗಲಾ ರಸ್ತೆಗಳೂ ಬಂದ್ ಆದಾಗ ರಾಯರಿಗೆ ದಿಕ್ಕು ತೋಚದಂತಾಗಿ ಕಣ್ಣಿರು ಸುರಿಸುವಂತಾಯಿತು. ನಾ ಜೀವಂತವಿರುವಾಗಲೇ ಇವನು ಹೀಗೆ ನಮಗೆ ಕಷ್ಟ ಕೊಡುವವನು ನನ್ನ ನಂತರ. . . ? ಅಂದು ನನ್ನೇ ನಂಬಿ ನನ್ನ ಕೈ ಹಿಡಿದು ಬಂದ ಈ ಅಮಾಯಕಳ ಗತಿ ಏನಾಗುತ್ತೋ ? ದೇವರೆ ಬೇಗ ನಮ್ಮನ್ನು ಇವನ ಹಿಡಿತದಿಂದ ಪಾರು ಮಾಡಪ್ಪಾ. “ಈ ಹಂಗಿನ ಅರಮನೆಯಿಂದ ಬೇಗನೆ ಬಿಡುಗಡೆ ಮಾಡಿ ಆ ನಮ್ಮ ಗುಡಿಸಿಲಿಗೇ ಸೇರಿಸಿ ನೆಮ್ಮದಿ ನೀಡಪ್ಪಾ ,” ದಯೆ ತೋರು ದೇವ, ಸ್ವಾಮಿ ಎಂಬುದು ರಾಯರ 24 * 7 ಪ್ರಾರ್ಥನೆಯಾಯಿತು ದೇವರೊಂದಿಗೆ. 

 “ಮಕ್ಕಳಿರಲವ್ವ ಮನೆ ತುಂಬಾ” ಎಂದವರು ಅಂದಿನವರು. “ಮನೆ ತುಂಬ ಮಕ್ಕಳಾದರೆ ಕೇಡೇ, ಮಳೆಯಾದರೆ ಕೇಡೇ” ಎಂದರು ಅಂದಿನವರು, ಸಂತಾನವಿಲ್ಲದವರು ಮಕ್ಕಳಾಗಲಿ ಎಂದು ಕಂಡ ಕಂಡ ಕಲ್ಲು, ಕಂಬ ದೇವರುಗಳಿಗೆಲ್ಲಾ ನಮಿಸಿ, ಪೂಜಿಸಿ, ಉಪವಾಸ ಮಾಡಿ, 9 ತಿಂಗಳು ಹೊತ್ತು, ಹೆತ್ತು, ಪೋಷಿಸಿ, ಪಾಲಿಸಿ ಇವರನ್ನ ಬೆಳೆಸಿದ್ದು ಈ ಸೌಭಾಗ್ಯ, ಫಲ ಉಣ್ಣಲೇ ! ಬೇಡ ಸ್ವಾಮಿ, ಇನ್ನು ಯಾವ ಜನ್ಮಕ್ಕೂ ನಮಗೆ ಮಕ್ಕಳ ಕೊಡಬೇಡ ತಂದೆ, ಸ್ವಾಮಿ, ಈ ಜನ್ಮಕ್ಕೆ “ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ” ವರ ಕೊಡು ಸ್ವಾಮಿ ಎಂದು ಈ ಹಿರಿÀಯ ಚೇತನಗಳು ದುಃಖಿಸುತ್ತಿದ್ದಾರೆ. ಇವರ ಕಣ್ಣೀರನ್ನು ನೀವು ನಾವು ಒರೆಸಲಾರೆವು. ಬದಲಾಗಿ, ‘ಸಬ್ ಕೊ ಸನ್ಮತಿ ದೇ ಭಗವಾನ್’ ಆ ದೇವ ದೇವನೇ ಇಂತಹಾ ಸಂತಾನಕ್ಕೆ ಸದ್ಬುದ್ಧಿ ಕೊಡಲೆಂದು ಪ್ರಾರ್ಥಿಸಬಹುದಷ್ಟೇ ನೀವು ನಾವು.

 *******************

Comments