ಓ , ದೇವಾ ! ನನ್ನನ್ನು ಅವನ ಹಾಗೆ ಯಾವಾಗ ಮಾಡ್ತೀಯಪ್ಪಾ !
ಲೇಖಕರು : ಎಂ. ಆರ್. ವೆಂಕಟರಾಮಯ್ಯ
ಯಾರದೀ ಪ್ರಲಾಪ ! ಆಲಾಪ ? ಯಾರು, ಯಾರ ಹಾಗೆ ಆಗಬೇಕು ? ಎಂಬುದೇ ಅರ್ಥವಾಗುತ್ತಿಲ್ಲವಲ್ಲಾ ಎಂಬುದು ನಿಮ್ಮ ಗೊಂದಲವೇ ?
ಇದು ನಮ್ಮ, ನಿಮ್ಮ ನಡುವೆಯೇ ಇರುವ ಹಲವು ಜನರದು. ಮನುಷ್ಯರಲ್ಲಿ ಸಾಧಾರಣವಾಗಿ ಕಂಡುಬರುವ ಹಲವು ಸಹಜ ಗುಣಗಳಲ್ಲಿ ‘ಅತೃಪ್ತಿ’ ಎಂಬುದೂ ಒಂದು. ಅತೃಪ್ತಿ ಇಲ್ಲದ ಮನುಷ್ಯನನ್ನು ನೀವು ಕಂಡಿರುವಿರಾ ? ಎಂಬ ಪ್ರಶ್ನೆಗೆ ನಾ ಕಂಡಿದ್ದೀನಿ ಎಂಬ ಉತ್ತರ ಕೇಳಲು ಸಾಧ್ಯವೇ ? ಮನುಷ್ಯ ಯಾವಾಗಿನಿಂದ ಅತೃಪ್ತನಾದ ? ಎಂ¨ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ನಮಗೆ ಇದರ ಮೂಲ ಕಾಣಸಿಗುವುದು ಸೃಷ್ಟಿಕರ್ತನ ಪ್ರಸಂಗದಲ್ಲಿ :
ಸೃಷ್ಟಿಕರ್ತ ತನ್ನ ಸೃಷ್ಟಿ ಕಾರ್ಯದ ಅಂಗವಾಗಿ, ಮನುಷ್ಯ, ನಾಯಿ, ಕತ್ತೆ, ಗೂಬೆಗಳನ್ನು ಸೃಷ್ಟಿಸಿ, ಅವುಗಳಿಗೆ ತಲಾ 40 ವರ್ಷ ಆಯುಸ್ಸನ್ನು ನೀಡಿದನಂತೆ. ನಂತರದಲ್ಲಿ, ಮನುಷ್ಯನನ್ನು ಹೊರತುಪಡಿಸಿ, ಉಳಿದ ಮೂರು ಪ್ರಾಣಿಗಳೂ ಒಟ್ಟಾಗಿ ಸೇರಿ ತಮಗೆ ಇಷ್ಟು ಧೀರ್ಘಾಯುಸ್ಸು ಬೇಡ ದೇವ ಎಂದು ಮೊರೆಯಿಟ್ಟುವು. ಆಗ ಭಗವಂತನು ನಸುನಗುತ್ತಾ ಮನುಷ್ಯನ ಕಡೆ ನೋಡಿದಾಗ, ತನಗೆ ನೀಡಿರುವ ಅಲ್ಪಾಯುಸ್ಸು ಯಾತಕ್ಕೂ ಸಾಲದು. ಆ ಪ್ರಾಣಿಗಳಿಗೆ ಬೇಡವಾದ ಅಯುಸ್ಸನ್ನು ನನಗೇ ಕೊಡು ದೇವ ಎಂದು ಗೋಗರೆದನಂತೆ. ಈ ಹಿನ್ನೆಲೆಯಲ್ಲಿ, ಆ ಮೂರೂ ಪ್ರಾಣಿಗಳಿಗೆ ನೀಡಿದ್ದ ತಲಾ 20 ವರ್ಷಗಳ ಆಯುಸ್ಸು, ಒಟ್ಟು 60 ವರ್ಷಗಳು, ಈ ಮನುಷ್ಯನಿಗೆ ಮೊದಲೇ ನೀಡಿದ್ದ 40 ವರ್ಷಗಳು, ಹೀಗೆ ಒಟ್ಟು 100 ವರ್ಷಗಳ ಆಯುಸ್ಸನ್ನು ಮನುಷ್ಯನಿಗೆ ಅನುಗ್ರಹಿದನಂತೆ ದೇವರು. ಹೀಗೆ ಈ ಸುಧೀರ್ಘ ಶತಾಯುವಾದ ಮನುಷ್ಯ, ಸಂತಸ, ದುಃಖ, ಪ್ರೀತಿ, ದ್ವೇ಼ಷ, ಈರ್ಷೆ ಇತ್ಯಾದಿ ಗುಣಗಳ ಜೊತೆಗೆ ಈ ಅತೃಪ್ತಿಯ ಗುಣವನ್ನೂ ಅಂದಿನಿAದಲೇ ಕಾಲಕ್ರಮೇಣ ಹೆಚ್ಚಿಸಿಕೊಳ್ಳುತ್ತಾ ಬಾಳ್ವೆ ಮಾಡುತ್ತಾ ಇಂದಿವನು ಗರಿಷ್ಠ ಪ್ರಮಾಣದ ಅತೃಪ್ತ ಎನಿಸಿಕೊಂಡಿದ್ದಾನೆ. ಅತೃಪ್ತ ಎಂಬ ಗುಣದಲ್ಲಿ ಇವನನ್ನು ಸೃಷ್ಟಿಯಲ್ಲಿರುವ ಬೇರೆ ಯಾವ ಜೀವಿಯೂ ಮೀರಿಸಲಾರದು ಎಂದರೆ ಮಾತು ಉತ್ಪೆçÃಕ್ಷೆ ಎನಿಸಲಾರದು.
ಇಲ್ಲಿಯವರೆಗೆ ಮನುಷ್ಯನ ಅತೃಪ್ತ ಗುಣ ಕುರಿತಂತೆ ಚರ್ಚಿಸಿದೆವು. ಸೃಷ್ಟಿಯಲ್ಲಿ ಇವನಂತೇನೇ ಇತರೇ ಅತೃಪ್ತ ಜೀವಿಗಳಿವೆಯೋ ಎಂಬ ಬಗ್ಗೆ ಪರಿಶೀಲಿಸೋಣ.
ಇತರ ಜೀವಿಗಳಿಗೆ ನೀಡಿದಷ್ಟು ಸೌಂದರ್ಯವನ್ನು ದೈವ ತನಗೆ ನೀಡಿಲ್ಲ, ತನಗೆ ಅನ್ಯಾಯ ಮಾಡಿದೆ ಎಂಬ ಅಳುಕನ್ನು ಮನದಲ್ಲಿ ಸ್ಥಾಪಿಸಿಕೊಂಡ ಕಾಗೆಯೊಂದು ಸುಂದರ ಜೀವಿಗಳನ್ನು ಮಾತನಾಡಿಸಿ ಬರೋಣ ಎಂದು ಕಾಡಿನಲ್ಲಿ ಸಂಚರಿಸಲಾರAಭಿಸಿತು. ಇದರ ದೃಷ್ಟಿಗೆ ಮೊದಲು ಕಾಣಿಸಿದ್ದು ಶ್ವೇತ ವರ್ಣದ ಹಂಸ (ಸ್ವಾನ್). ಅಣ್ಣಾ, ನನ್ನ ನೋಡು, ಕರಾಳ, ಕಪ್ಪು ಬಣ್ಣ. ಈ ಕಪ್ಪು ಬಣ್ಣ ಹೊತ್ತು ತಿರುಗಲು ನನಗೆ ಅಸಹ್ಯವಾಗುತ್ತಿದೆ. ಆದರೆ ನೀನು, ಅದೆಂತಹಾ ಶುದ್ಧ ಬಿಳುಪು ವರ್ಣ. ಇದಕ್ಕಾಗಿ ನೀನು ಬಹಳ ಸಂತಸದಿAದಿರಬೇಕಲ್ಲವೇ ! ಎಂದಿತು ಕಾಗೆ.
ತಕ್ಷಣವೇ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದ ಹಂಸ, ಓ ಕಾಕರಾಜ, ಬಿಳುಪನ್ನು ಜಗತ್ತು ಮೆಚ್ಚಿದರೂ, ಗಾಳಿ ಜೋರಾಗಿ ಬೀಸಿದರೆ ಸಾಕು ಎಲ್ಲೆಲ್ಲಿಂದಲೋ ಧೂಳು, ಕಸ ಹಾರಿಬಂದು ನನ್ನ ಮೈ ಮೇಲೆ ಕುಳಿತರಾಯ್ತು, ನನ್ನ ಮೈ ಬಿಳುಪು ಕೊಳೆಯಾಗಿ ಕಾಣುತ್ತದೆ. ಅದಕ್ಕೇ ನನಗೂ ಬೇಸರ ಎಂದ ಹಂಸ, ನಮಗಿಬ್ಬರಿಗಿಂತಲೂ ಸುಂದರ ಪ್ರಾಣಿ ಇರುವುದೇನೋ ನೋಡಿ ಬರೋಣ ಬಾ ಎನ್ನುತಾ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದುವು.
ಸ್ವಲ್ಪ ದೂರದಲ್ಲೇ ಇವರಿಬ್ಬರಿಗೂ ಕಾಣಿಸಿತು ಡಬ್ಬಲ್ ಕಲರ್ ಹೊಂದಿರುವ ಗಿಣಿ. ನಿನ್ನ ಕಪ್ಪು, ನನ್ನ ಬಿಳುಪಿಗಿಂತಾ ಎಲ್ಲರನ್ನೂ ಆಕರ್ಷಿಸುವ ಬಣ್ಣ ಬಣ್ಣದ ರೆಕ್ಕೆ ಪುಕ್ಕಗಳೊಂದಿಗೆÀ ಮಧುರ ಧ್ವನಿಯನ್ನು ಹೊಂÀದಿರುವ ಈ ಗಿಣಿ ನನಗೂ ನಿನಗಿಂತಾ ಸುಂದರವಾಗಿದೆ ಎಂದು ಮಾತಾನಾಡಿಕೊಂಡವು. ತಕ್ಷಣವೇ ಈ ವಿಷಯ ಕುರಿತಂತೆ ಗಿಣಿಯೊಂದಿಗೆ ಮಾತನಾಡಿದಾಗ, ಎಲ್ಲರಿಗಿಂತಾ ನಾನೇ ಸುಂದರ ಎಂಬ ಖುಷಿ, ಹೆಮ್ಮೆ ಮೊದಲಿಗೆ ನನಗೂ ಇತ್ತು. ಆದರೆ ನವಿಲನ್ನು ನೋಡಿದ ಮೇಲೆ ನನ್ನ ಖುಷಿಯೆಲ್ಲಾ ರ‍್ರನೆ ಜಾರಿ ಮಾಯವಾಯಿತು. ನನಗಿಂತಾ ಸುಂದರ ಪಕ್ಷಿ ಮತ್ತೊಂದು ಪಕ್ಷಿಯಿದೆ ಎಂದು ತಿಳಿದ ಮೇಲೆ ನಾನು ಹೇಗೆ ನೆಮ್ಮದಿಯಿಂದ ಇರಲಿ ಎಂದಿತು ಗಿಣಿ ದುಃಖದ ಧ್ವನಿಯಲ್ಲಿ. ಈಗ ಕಾಗೆಯೊಂದಿಗೆ ಹಂಸ, ಗಿಣಿ ನವಿಲಿನ ನೋಡಿ ಬರಲು ಹೊರಟವು.
ಈ ಮೂವರೂ ನವಿಲನ್ನು ಕಂಡು ನೀನು ರಾಷ್ಟçಪಕ್ಷಿ ಎಂಬ ಹೆಗ್ಗಳಿಕೆ ಗಳಿಸಿದ್ದೀಯೆ. ನಿನ್ನ ಬಾಲದ ಗರಿಗಳು ನೀಲಿ, ಹಸಿರು ಮಿಶ್ರಿತ ಹೊಳೆಯುವ ಬಣ್ಣದಿಂದ ಕೂಡಿವೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿದೆ. ಇದರ ಮಧ್ಯದಲ್ಲಿ ಕಣ್ಣಿನ ಚಿತ್ರವಿದೆ. ಕುತ್ತಿಗೆಗೆ ಹಸಿರÀÄ ಬಣ್ಣ, ಹೊಟ್ಟೆಗೆ ಕಪ್ಪು ಬಣ್ಣವಿದೆ. ಖುಷಿಯಾದಾಗ ಗರಿ ಗೆದರಿ ನರ್ತಿಸಿದರೆ ನಿನ್ನ ನರ್ತನಕ್ಕೆ ಮಾರುಹೋಗದವರಾರು ! ನಮ್ಮೆಲ್ಲರಿಗಿಂತಾ ನೀನೇ ಸುಂದರ, ಅತಿ ಸುಂದರ, ಅದಕ್ಕೇ ನೀ ಖುಷಿಯಾಗಿದ್ದೀಯೆ ಎಂದು ಕಾಗೆ, ಹಂಸ, ಗಿಣಿಗಳು ನವಿಲುನ್ನು ಹೊಗಳಿದುವು.
ಈ ಹೊಗಳಿಕೆಗೆಲ್ಲವನ್ನೂ ಕೇಳಿ ಒಂದು ಕ್ಷಣ ಉಬ್ಬಿ ಹೋದ ನವಿಲಿಗೆ ಮರು ಕ್ಷಣದಲ್ಲಿಯೇ ಮುಖ ಬಾಡಿತು, ನನ್ನ ಸೌಂದರ್ಯ ಕುರಿತು ನೀವು ವರ್ಣಿಸಿ ಹೊಗಳಿದ್ದೆಲ್ಲ ಸರಿಯೇ. ನಾನೆಷ್ಟು ಸುಂದರವಾಗಿದ್ದೇನೆ ಎಂದು ಕೆಲ ಕಾಲ ಸಂತಸಪಟ್ಟಿದ್ದೆ. ಹೆಮ್ಮೆಯಿಂದ ಬೀಗಿದ್ದೆ. ಆದರೆ ನನ್ನೀ ಸೌಂದರ್ಯವೇ ಇಂದು ನನಗೆ ಮುಳುವಾಗಿದೆ. ನಾನು ಸುಂದರ ಪಕ್ಷಿ ಎಂದೇ ಜನ ಈ ಪ್ರಾಣಿ ಸಂಗ್ರಹಾಲಯದಲ್ಲ್ಲಿ ಕೂಡಿಹಾಕಿದ್ದಾರೆ. ನೀವು ಬೇಕಾದರೆ ಇಲ್ಲಿರುವ ಪ್ರಾಣಿ ಪಕ್ಷಿಗಳೆಲ್ಲವನ್ನೂ ಒಮ್ಮೆ ನೋಡಿ ಬನ್ನಿ, ಇವುಗಳಲ್ಲಿರುವ ಯಾವುದೋ ಒಂದು ಗುಣಕ್ಕಾಗಿಯೇ ಇವನ್ನು ಇಲ್ಲಿ ಕೂಡಿ ಹಾಕಿ ಅವುಗಳ ಸ್ವತಂತ್ರö್ಯ ಹರಣ ಮಾಡಿದ್ದಾರೆ. ಇಲ್ಲಿ ಕೂಡಿಹಾಕದಿರುವ ಒಂದೇ ಒಂದು ಪಕ್ಷಿ ಎಂದರೆ ಕಾಗೆ. ಈಗ ನನಗೂ ಅನ್ನಿಸುತ್ತೆ ನಾನು ಕಾಗೆಯ ಹಾಗೆ ಇದ್ದಿದ್ದರೆ ಯಾರ, ಯಾವ ಬಂಧನವೂ ಇಲ್ಲದೆ ಇಚ್ಚಿಸಿದ ಜಾಗದಲ್ಲಿ ಸ್ವತಂತ್ರವಾಗಿ ಹಾರಾಡಿಕೊಂಡಿರಬಹುದಾಗಿತ್ತು ಎಂದು ದುಃಖಿಸಿತು ಮಯೂರ ಅರ್ಥಾತ್ ನವಿಲು. ಇದುವರೆಗೂ ನವಿಲು ಹೇಳುತ್ತಿದ್ದ ಕತೆ ಕೇಳುತ್ತಿದ್ದ ಕಾಗೆ ತಲೆ ಮೇಲೆತ್ತಿ “ಓ, ದೇವಾ ! ನನ್ನನ್ನು ಯಾರ ಹಾಗೂ ಮಾಡಬೇಡಪ್ಪಾ, ಸಧ್ಯ, ಈಗಿರುವಂತೆ ನನ್ನನ್ನು ಕಾಗೆಯಾಗೇ ಉಳಿಸು ಎಂದು ಕಾಣಿಸದ ದೈವಕ್ಕೆ ನಮಿಸಿತು” ಎಂಬುದರೊAದಿಗೆ ಈ ಪ್ರಸಂಗ ಮುಗಿಯುತ್ತೆದೆ.
ಇದೆಲ್ಲಾ ಸಣ್ಣ ಮಕ್ಕಳಿಗೆ ಹೇಳುವ ಕತೆಗಳಂತಿವೆ. ದೊಡ್ಡವರಾದ ನಮಗೇನು ಸಂದೇಶವಿದೆ ಇಲ್ಲಿ ! ಎಂಬ ನಿ¯ðಕ್ಷö್ಯ ಸಲ್ಲದು. “ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು\ಗುರುತಿಸೊಳಿತಿರುವುದನು ಕೇಡುಗಳ ನಡುವೆ || ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು \ಹರುಷಕದೆ ದಾರಿಯಲೋ –ಮಂಕುತಿಮ್ಮ” (759) ನಿನ್ನÀ ಕೈಗೆ ಬರದಿರುವುದರ ಆಲೋಚನೆಯಲ್ಲಿ ಬಂದಿರುವುದನು ಮರೆಯಬೇಡ. ನಿನಗೆ ಇರುವ ಭಾಗ್ಯವನು ನೆನಪಿಸಿಕೊಂಡು, ಬರದಿರುವ ಕನ್ನಡಿಯಳಗಿನ ಗಂಟಿಗೆ ಆಸೆಪಡಬೇಡ ಎಂದು ಎಚ್ಚರಿಸಿರುವ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಸಾಲುಗಳು ಈ ಸಂದರ್ಭದಲ್ಲಿ ಸ್ಮರಣಾರ್ಹ.
ತೃಪ್ತಿಗಿಂತಾ ಮೀರಿದ ಸುಖ ಮತ್ತೊಂದಿಲ್ಲ. ಭಗವಂತ ನಮ್ಮಲ್ಲಿ ಹುದುಗಿಸಿಟ್ಟಿರುವ ಬುದ್ಧಿ, ,ವಿವೇಕ, ವಿವೇಚನೆ, ಧೈರ್ಯ, ಉತ್ತಮನಾಗಬೇಕೆಂಬ ಛಲ, ಮೊದಲಾದ ಘನ ಸಂಪತ್ತಿನ ಕಡೆ ನಾವು ಅಂತರ್ಮುಖಿಗಳಾಗಿ ಕಂಡುಕೊAಡು, ಸ್ವಾಮಿ, ನನಗಿÀಷ್ಟು ದಯಪಾಲಿಸಿದ್ದಕ್ಕೆ ನಿನಗಿದೋ ನನ್ನ ನಮನ ಎಂದು ಆತನಿಗೆ ನಾವು ವಂದನೆ ಸಲ್ಲಿಸಬೇಕು. ದುರದೃಷ್ಟವೆಂದರೆ ಹೆಚ್ಚಿನವರು ಹೀಗೆ ವರ್ತಿಸದೆ, ಸದಾ ಬಹಿರ್ಮುಖಿಗಳಾಗಿ, ಅತೃಪ್ತರಾಗಿ, ಹೊರಗಿನವರಲ್ಲಿÀ್ಲರುವುದನ್ನೇ ದುರುಗುಟ್ಟಿ ನೋಡುತ್ತಾ ಅತೃಪ್ತರಾಗಿ ಜೀವಿಸುತ್ತಿದ್ದೇವೆ “ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್\ಅವರೆಷ್ಟು ಯಶವಂತರ್ ಎನುವ ಕರುಬಿನಲಿ\ ಭವಿಕ ನಿನಗೆಷ್ಟಿಹುದೋ ಮರೆತು ನೀಂ ಕೊರಗುವುದು\ ಶಿವನಿಗೆ ಕೃತಜ್ಞತೆಯೇ ? ಮಂಕುತಿಮ್ಮ ಎಂದಿರುವ ಡಿ. ವಿ. ಜಿ. ಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ಅತೃಪ್ತರಿಗೆ ಸನ್ಮಾರ್ಗ ತೋರಲೆಂದು ಆಶಿಸೋಣ.
06\09\ 2020
Comments
Post a Comment