ವಿವಾಹ, ಹೀಗೂ ಆಗಬಾರದೇಕೇ ! ?

ವಿವಾಹ, ಹೀಗೂ ಆಗಬಾರದೇಕೇ ! ?

ಲೇಖಕರು : ಎಂ ಆರ್ ವೆಂಕಟರಾಮಯ್ಯ


 ಪ್ರತಿ ಮನುಷ್ಯನ ಜೀವನದಲ್ಲೂ, ‘ವಿವಾಹ’ ಎಂಬುದು ಅತಿ ಮಹತ್ವದ ಹಾಗೂ ಪವಿತ್ರ ಸಂಸ್ಕಾರ, ಧಾರ್ಮಿಕ ಕ್ರಿಯೆ ಎನಿಸಿದೆ. ಸಂಸ್ಕಾರವೆAದರೆ, ಶುಚಿ, ಶುದ್ಧಿಗೊಳಿಸುವುದು ಎಂಬ ಅರ್ಥವಿದೆ. ಒಟ್ಟು (16) ಷೋಡಶ ಸಂಸ್ಕಾರಗಳ ಪೈಕಿ, ಜನನ ಕಾಲದಲಿ 3 ಹಾಗೂ ಜನ್ಮಾ ನಂತರದಲ್ಲಿ 13 ಸಂಸ್ಕಾರಗಳನ್ನು ಆಚರಿಸಬೇಕೆಂದು ನಮ್ಮ ಸನಾತನ ಧರ್ಮ ತಿಳಿಸುತ್ತದೆ. ‘ವಿವಾಹ’ ಎಂದರೆ, ವಿಶೇಷವಾಗಿ ಹೊತ್ತುಕೊಳ್ಳುವುದು (ವಹ = ಹೊರು) . ಅರ್ಥಾತ್, ಕೌಟುಂಬಿಕ, ಸಾಮಾಜಿಕ, ಪ್ರಾಕೃತಿಕ, ಕ್ಷೇತ್ರಗಳಲ್ಲಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳವುದು ಎಂಬ ಅರ್ಥವಿz 

ವೈದಿಕ ಧರ್ಮದ ದೃಷ್ಠಿಯಲ್ಲಿ, ವಿವಾಹ, ಒಂದಷ್ಟು ಕಾಲ, ಅವಧಿಗಾಗಿ ಸ್ತ್ರೀ  ಪುರುಷರು ಮಾಡಿಕೊಳ್ಳುವ ಒಂದು ಸಾಮಾಜಿಕ ಒಪ್ಪಂದವಲ್ಲ. ಬದಲಿಗೆ, ಅದು, ಆಮರಣ ಪರ್ಯಂತ ಪಾಲಿಸಬೇಕಾದ ಒಂದು ಅಧ್ಯಾತ್ಮಿಕ ವ್ರತ. ಇದು ಎರಡು ಆತ್ಮಗಳ ಸಂಬಂಧ. ನರ ನಾರಿಯರ ಅನುಬಂಧ. ‘ನರನಿಲ್ಲದ ನಾರಿ, ನಾರಿಯಿಲ್ಲದ ನರನ ಜೀವನ ಅಪೂರ್ಣ. ಇವರಿಬ್ಬರ ಸಂಯುಕ್ತ ಜೀವನವೇ ಸಂಪುರ್ಣ ಜೀವನ’. ದೈಹಿಕ ಶಕ್ತಿಯನ್ನು ಬೆಳೆಸಿಕೊಂಡು, ಬಳಸಿಕೊಂಡು, ತನ್ನ ಕುಟುಂಬ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಸತ್ ಸಂಕಲ್ಪ ಮಾಡುವ ಸಮಾರಂಭವೇ ವಿವಾಹ. ಅರ್ಥಾತ್, ವಿಶೇಷ ರೀತಿಯಿಂದ ನಾರಿಯನ್ನು ನರನು ವಹಿಸಿಕೊಳ್ಳುವ ವಿಧಾನವೇ (ವಿಶೇಷ ವಹನವೇ) ವಿವಾಹ. 

     ವಿವಾಹ ಕಾರ್ಯದಲ್ಲಿ ಅನುಸರಿಸುವ ಹಲವು ಕ್ರಮಗಳ ಪೈಕಿ, ಅರಿಸಿನ ಎಣ್ಣೆ ಶಾಸ್ತ್ರ ,ಗೌರೀ ಹರ ಪೂಜೆ (ಗೌರೀ ಪೂಜೆ) , ಬಾಸಿಂಗ ಕಟ್ಟುವಿಕೆ, ಕಂಕಣ ಧಾರಣೆ, ಅಂತಃ ಪಟ (ಅಂತರ್ ಪಟ), ಜೀರಿಗೆ ಬೆಲ್ಲ, ಮಾಂಗಲ್ಯ ಧಾರಣೆ, ಲಾಜಾ ಹೋಮ, ಪಾಣಿ ಗ್ರಹಣ, ಸಪ್ತ ಪದಿ ಇತ್ಯಾದಿಗಳು ಪ್ರಮುಖವಾಗಿವೆ. ಗೃಹಸ್ಥನು ತನ್ನ ಜೀವಮಾನದಲ್ಲಿ ಮಾಡಲೇಬೇಕಾದ ಕರ್ತವ್ಯಗಳನ್ನು, ಪತಿ ಪತ್ನಿ ಮಾಡಲೇಬೇಕಾದ ವ್ಯವಹಾರವನ್ನು ಸಮಾಜದ, ದೇಶದ, ಸುಖ ಶಾಂತಿಗಳಿಗಾಗಿ ಅನುಷ್ಠಾನ ಮಾಡಬೇಕಾದ ನಿಯಮಗಳನ್ನು, ವಿವಾಹ ಸಂಸ್ಕಾರದ ಮಂತ್ರಗಳು ಒಳಗೊಂಡಿವೆ. ಭಾರತೀಯ ವಿವಾಹ ಪದ್ದತಿಯಲ್ಲಿ, ವಧು ವರರನ್ನು ವೈವಾಹಿಕ ಜೀವನಕ್ಕೆ ಸಜ್ಜುಗೊಳಿಸುವ ಮನೋ ವೈಜ್ಞಾನಿಕ ಕ್ರಮಗಳು ಅಡಕವಾಗಿರುವುದು ಗಮನಾರ್ಹ. ಇಂತಹಾ ಉಚ್ಛತಮವಾದ ಆದರ್ಶವು ವೈದಿಕ ಪದ್ದತಿಯಲ್ಲಿ ಹೊರತು ಇತರ ಪದ್ದತಿಗಳಲ್ಲಿ ಸಿಗುವುದಿಲ್ಲ. ಆದರೆ, ಇಂತಹಾ ವಿವಾಹ ಕ್ರಮಗಳ ಅಂತರಾರ್ಥವನ್ನು ತಿಳಿಯುವ ಮನಸ್ಸು ಇಲ್ಲದೆ, ಪುರೋಹಿತರು ಹೇಳಿದಂತೆ ಗಿಣಿ ಪಾಠ ಒಪ್ಪಿಸಿ, ಈ ಶಾಸ್ತ್ರ  , ನಿಯಮಗಳೆಲ್ಲಾ, ಹಿರಿಯರ, ಪುರೋಹಿತರ ಸಮಾಧಾನಕ್ಕಾಗಿ ಎಂಬ ಅಸಡ್ಡೆ, ನಿರ್ಲಕ್ಷ್ಯ ಭಾವನೆ ಬಹಳಷ್ಟು ವಧು ವರರಲ್ಲಿ ಬೆಳೆಯುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. 

ಇನ್ನು, ವಧು ವರರ ಆಯ್ಕೆ, ಅಂದು ಹೇಗಿತ್ತು, ಇಂದು ಅದು ಹೇಗೆ ವಿರೂಪಗೊಂಡಿದೆ ಎಂಬು ದನ್ನು ವಿಚಾರ ಮಾಡೋಣ. 

ಅಂದು, ವಧು ಸತ್ಕುಲವಂತಳಾಗಿರಬೇಕು, ಒಳ್ಳೆಯ ಸಾಂಸಾರಿಕ ಹಿನ್ನೆಲೆ ಇರಬೇಕು, ತುಂಬಿದ ಸಂಸಾರ ದಲ್ಲಿ ಜನಿಸಿರಬೇಕು, ಮದುವೆಗೆ ಮುನ್ನ ಆಕೆ ಜಂಟೀ ಕುಂಟುAಬದಲ್ಲಿದ್ದುಕೊAಡು, ಗೃಹ ಕೃತ್ಯಗಳೆಲ್ಲವನ್ನೂ ಕಲಿತಿರಬೇಕು, ಸದ್ಗುಣವಂತಳೂ ರೋಗರಹಿತಳೂ, ವಿದ್ಯೆ ರೂಪಗಳನ್ನು ಹೊಂದಿರಬೇಕು, ಎಲ್ಲಕ್ಕಿಂತಾ ಮುಖ್ಯವಾಗಿ, ಆಕೆ, ಸಂಸಾರ ಯೋಗ್ಯಳಾಗಿರಬೇಕು ಎಂಬ ನಿರೀಕ್ಷೆ ಇತ್ತು, ವರನ ಮನೆಯವರಿಗೆ. ಇದೇ ರೀತಿ, ವರನಾದವನು, ಆರೋಗ್ಯವಂತ, ದೃಢ ಕಾಯ, ಉತ್ತಮ ಕುಲ ಗೋತ್ರದವನು, ವಿದ್ಯೆ ರೂಪ ಗಳನ್ನು ಹೊಂದಿದವನು, ತನ್ನ ಕುಟುಂಬದ ಜವಾಬ್ದಾರಿÀಯನ್ನು ಭರಿಸಬಲ್ಲವನು, ತನ್ನ ಪತ್ನಿ, ಸಂತಾನ ವನ್ನು ಪ್ರೀತಿ ವಿಶ್ವಾಸÀಗಳಿಂದ ಪಾಲಿಸಿ, ಪೋಷಿಸಬಲ್ಲವನು, ಆಗಿರಬೇಕೆಂಬ ನಿರೀಕ್ಷೆ ಹೆಣ್ಣಿನ ಮನೆಯವರದಾಗಿತ್ತು. 

ಕಾಲ ಕಳೆದಂತೆ, ಬವಧೂ ವರರ ವಿದ್ಯಾಭ್ಯಾಸದ ಮಟ್ಟ, ಹೊಂದಿದ ಉದ್ಯೋಗ, ವರಮಾನ, ಕುಟುಂಬದ ಸಿರಿ ಸಂಪತ್ತು, ಇವಕ್ಕೆ ತಕ್ಕ ಆಸೆ ಆಕಾಂಕ್ಷೆಗಳು, ರುಚಿ ಅಭಿರುಚಿಗಳನ್ನು ಆಧರಿಸಿದ್ದೇ ಅಲ್ಲದೆ, ಇವೆಲ್ಲಕ್ಕೂ ಮಿಗಿಲಾಗಿ, ವಿವಾಹವೊಂದು ವ್ಯಾಪಾರ, ವ್ಯವಹಾರವಾಗಿ ಪರಿವರ್ತನೆಗೊಂಡಿತು. ವಿವಾಹ ದೊಂದಿಗೆ, ವಧುವು, ವರನ ಮನೆಗೆ ಇಂತಿಷ್ಟು ಹಣ (ವರ ದಕ್ಷಿಣೆ), ಬೆಳ್ಳಿ ಬಂಗಾರದ ಅಭರಣಗಳು, ಸಂಸಾರಕ್ಕೆ ಅಗತ್ಯವಾದ ಪದಾರ್ಥಗಳು, ಬೆಲೆಬಾಳುವ ವಸ್ತçಗಳು, ಸೈಟು, ಮನೆ, ವಾಹನ (ದ್ವಿಪಾದ ಕ್ಕಿಂತಾ ಚತುಷ್ಪಾದಕ್ಕೇ ಆದ್ಯತೆ) ಇತ್ಯಾದಿಗಳನ್ನು ವಧುವು ತನ್ನೊಂದಿಗೆ ವರನ  ಮನೆಗೆ ಕೊಂಡೊಯ್ಯ ಬೇಕಾಗಿದೆ. ವರನ ಕುಟುಂಬ, ಸಮಾಜದಲ್ಲಿ ಹೊಂದಿರುವ ಘನತೆ ಸ್ಥಾನಮಾನಗಳಿಗೆ ಅನುಗುಣವಾಗಿ ಬೇಡಿಕೆ ಪಟ್ಟಿಗಳು ಅಲ್ಲಿ , ಇಲ್ಲಿ ಬದಲಾವಣೆಗಳೊಂದಿಗೆ ವಧುವಿನÀ ಮನೆಗೆ ಸೇರಲಾರಂಭಿಸಿದೆ. ವಧು ವಿನ ಮನೆಯಲ್ಲಿ ಅಷ್ಟು ಕೊಡುವ ಶಕ್ತಿ ಇದೆಯೋ ಇಲ್ಲವೋ, ನಮಗದು ಅನಾವಶ್ಯಕ, ನಮ್ಮ ಹುಡುಗ ನೊಂದಿಗೆ ವಿವಾಹ ಬೇಕು ಎಂದರೆ, ನಮ್ಮ ಪಟ್ಟಿಯನುಸಾರ ಕೊಡ ಬೇಕಾದ್ದೇ ಎಂಬ ಧೋರಣೆ  ವರ ನಲ್ಲಿ, ಈತನ ಕುಟುಂಬದಲ್ಲಿ ಕಾಣಿಸತೊಡಗಿದೆ. ಇದರ ಜೊತೆಗೊಂದಿಷ್ಟು ಒಗ್ಗರಣೆ ಎಂಬಂತೆ, ದಿನ ವೊಂದಕ್ಕೆ ಲಕ್ಷಗಳಷ್ಟು ಬಾಡಿಗೆ ನೀಡಿ ವಿಶಾಲವಾದ ಸಾಲಂಕೃತ ಛತ್ರ, ಹೆಸರಾಂತ ಕಲಾವಿದರಿಂದ ಸಂಗೀತ (ಅದನ್ನು ಕೇಳಿ ಆನಂದಿಸುವಷ್ಟು ರಸಿಕತೆ, ಸಹೃದಯೀ ಅತಿಥಿ ಅಭ್ಯಾಗತರಿಲ್ಲದಿದರೂ ಪರವಾಗಿಲ್ಲ), ಉತ್ತರ ದಕ್ಷಿಣ ಇತ್ಯಾದಿ ದಿಕ್ಕುಗಳವರು ಭುಂಜಿಸುವ ವೈಭವೋಪೇತ ಊಟೋಪ ಚಾರಗಳು, ಒಟ್ಟಾರೆ,  ಬಲು ಅದ್ದೂರಿ, ಆಡಂಬರ, ಸಿರಿ ಸಂಪತ್ತು ಘನತೆ ಪ್ರತಿಷ್ಠೆಗಳ ಪ್ರದರ್ಶನದ ಕಾರ್ಯ, ಅದಾಗಿರಬೇಕು, ‘ನ ಭೂತೋ ನ ಭವಿಷ್ಯತಿ’ ಎಂಬAತೆ ಯಾರೂ ಕಂಡು. ಕೇಳಿರದಂತಹಾ ವೈಭವದ ಮದುವೆ ನಮ್ಮ ದಾಗಿರಬೇಕು ಎಂಬ ನಿಲುವು, ಪೈಪೋಟಿ, ಸಮಾಜದ ಹೆಚ್ಚಿನ ಜನರಲ್ಲಿ ಕಾಣಿಸತೊಡಗಿದೆ, ಇಂದು. 

ಇಂತಹಾ, ವಿವಾಹಗಳು ನಡೆಯುತ್ತಿರುವಷ್ಟೇ ಶೀಘ್ರ ಗತಿಯಲ್ಲಿ, ನಾನಾ ಕಾರಣಗಳಿಗಾಗಿ, ವಿವಾಹ ವಿಚ್ಛೇದನ ಪ್ರಕರಣಗಳು, ಹಲವಾರು ಆಸೆ ಆಮಿಶ ಸೇಡು, ಪ್ರತೀಕಾರಗಳ ಕಾರಣ, ಪತಿ ಪತ್ನಿಯರ ನಡುವೆ ವೈಮನಸ್ಯ, ಕೊಲೆ, ಮುಂತಾದ ಅತಂಕಕಾರಿ ಬೆಳವಣಿಗೆಗಳೂ ಹೆಚ್ಚುತ್ತಿರುವುದು ದುರದೃಷ್ಟಕರ ಎನಿಸುತ್ತಿದೆ. 

ಇಂತಹಾ ವಿವಾಹ ಪದ್ದತಿ , ನಮಗೆ, ಇದರಲ್ಲೂ ಕೆಳ ಮಧ್ಯಮ, ಮಧ್ಯಮ ವರ್ಗದ ಜನರಿಗೆ ಅಗತ್ಯವೆ ? ಅನಿವಾರ್ಯವೆ ? ಎಂದು ಯೋಚಿಸಲು ಇದು ಸಕಾಲವೆನಿಸಿದೆ. ಈ ಹಿನ್ನೆಲೆಯಲ್ಲಿ, ದಿವಂಗತ ಕು.ವೆಂ. ಪು ರವರ ಕಲ್ಪನೆಯ ಸರಳ ವಿವಾಹದ ಬಗ್ಗೆ ಒಂದು ವಿಹಂಗಮ ನೋಟ ಇಲ್ಲಿದೆ:

“ಮಂತ್ರ ಮಾಂಗಲ್ಯ” ಕು,ವೆಂ,ಪು ರವರ ಅನುಪಮ ಕೊಡುಗೆ. ಸರಳ ವಿವಾಹದ ಪರಿಕಲ್ಪನೆ, ಏಳೆಂಟು ಜನ್ಮದ ಅನುಬಂಧ ಎಂಬAತೆ, ಎರಡು ಹೃದಯ : ಮನಗಳ ಸಮ್ಮಿಲನದಿಂದ ಈ ಶುಭ ಕಾರ್ಯ ನಡೆಯಬೇಕು. ಅದು, ಅದ್ದೂರಿ, ಆಡಂಬರದ ಆಚರಣೆಯಾಗಬಾರದು. ಅದೊಂದು ಸಂತಸದ, ಮಧುರ ಬಾಂಧವ್ಯವಾಗಿ ಪರಿಣಮಿಸಬೇಕೆಂಬುದು ಕು.ವೆಂ.ಪು ರವರ ಮಹತ್ವಾಕಾಂಕ್ಷೆ. ಈ ‘ಮಂತ್ರ ಮಾಂಗಲ್ಯ’ ವಿಧಾನದಲ್ಲಿ, ಚಪ್ಪರ, ಕಿವಿಗಡಚಿಕ್ಕುವ ಸಂಗೀತದ ಅಬ್ಬರವಿಲ್ಲ. ವಿಪರೀತ ಬೆಲೆ ಬಾಳುವ ಉಡುಪು, ಆಭರಣಗಳ ಪ್ರದರ್ಶನ, ಮೆರವಣಿಗೆ ಇಲ್ಲ, ಶುಭ ಮುಹೂರ್ತ, ರಾಹು ಕಾಲ, ಯಮಗಂಡ ಕಾಲ, ಗುಳಿಕ ಕಾಲಗಳ ಹಾವಳಿಯಿಲ್ಲ. ಸತತವಾಗಿ ಏರುತ್ತಿರುವ ಬೆಲೆಗಳು, ಹಣ ಕೊಟ್ಟರೂ ಸಿಗದ ಆಹಾರ ಧಾನ್ಯಗಳ ಕೊರತೆ ಇರುವ ಈ ‘ಸರ್ವ ಅಭಾವ’ ಕಾಲದಲ್ಲಿ, ಹೊಟ್ಟೆ ತುಂಬಿದ ಸಹಸ್ರಾರು ಜನಕ್ಕೆ ಭೂರಿ ಭೋಜನವಿಟ್ಟು, ಆಹಾರ ಪದಾರ್ಥಗಳ ಹಾಳಿಲ್ಲಾ. ಈ ‘ಎಲ್ಲಾ ಇಲ್ಲಪ್ಪಗಳ’ ನಡುವೆ, ಈ ಪದ್ದತಿಯಲ್ಲಿ ಇರುವುದೇನು ? ಎಂದಿರಾ: 

ವಧೂ ವರರು, ಅವರವರ ಮಾತಾಪಿತರು, ಪರಸ್ಪರರು ಒಪ್ಪುವ ದಿನಾಂಕದಂದು, ಉಭಯತ್ರ ರಿಗೂ ಸೌಕರ್ಯವಾದ ಸ್ಥಳದಲ್ಲಿ, ಹಿರಿಯರ ಸಾನ್ನಿಧ್ಯದಲ್ಲಿ ವಿವಾಹ ನಡೆಯುವುದು. ಇದಕ್ಕಾಗಿ, ಆದಷ್ಠೂ ಕಡಿಮೆ ಸಂಖ್ಯೆಯ ಬಂಧು ಮಿತ್ರರಿಗೆ ಆಹ್ವಾನ. ಹೀಗೆಂದು, ಆಹ್ವಾನ ¥ತ್ರಿಕೆಗಳ ಮುದ್ರಣವಿಲ್ಲ. ಪುರೋ ಹಿತರ ಹಾಜರಾತಿಯಿಲ್ಲ. ವಧೂವರರಿಂದ ವೇದೋಪನಿಷತ್ತುಗಳ ಶಾಂತಿ ಮಂತ್ರ ಪಠಣ, ವಿಘ್ನ ನಿವಾರಕ, ವಿಘ್ನೇಶ್ವರನ ಸ್ತುತಿ, ಮಾನವ ಜನಾಂಗಕ್ಕೆ ಆದರ್ಶ ದಂಪತಿಗಳಾದ ಶ್ರೀರಾಮಚಂದ್ರ, ಸೀತಾಮಾತೆ, ಶ್ರೀರಾಂ  ಕೃಷ್ಣ ಪರಮಹಂಸ, ಶಾರದಾ ಮಾತೆಯರನ್ನು ಕುರಿತ ಸ್ತೋತ್ರಗಳ ಪಠಣ, ವಧೂವರರು ಪರಸ್ಪರ  ಹೂ ಹಾರಗಳ ವಿನಿಮಯ, ಮಾಂಗಲ್ಯ ಧಾರಣೆ, ಹಿರಿಯರಿಂದ ಆಶೀರ್ವಚನದೊಂದಿಗೆ ವಿವಾಹ ಕಾರ್ಯಕ್ರಮ ಮುಕ್ತಾಯ. ಇದೆಲ್ಲಾ ಹೇಳಿ, ಕೇಳಲು ಚೆನ್ನಾಗಿರುತ್ತದೆ. ಯಾರಾದರೂ ಮಾಡಿ ತೋರಿಸಲಿ, ಆಮೇಲೆ ನೋಡೋಣ, ಎನ್ನಬಹುದು, ಕೆಲವರು. ಆದರೆ, ಈ ಪದ್ದತಿಯನ್ನು ಇತರರಿಗೆ ಬೋಧಿಸಿದ್ದೇ ಅಲ್ಲದೆ, ಕು. ವೆಂ. ಪು ರವರು, ತಮ್ಮ ಮಗ, ಶ್ರೀ ಪೂರ್ಣಚಂದ್ರ ತೇಜಸ್ವಿಯವರ ವಿವಾಹವನ್ನೂ ಈ ಮಂತ್ರ ಮಾಂಗಲ್ಯ’ ಪದ್ಧತಿಯಲ್ಲೇ ಆಚರಿಸಿ ಇತರರಿಗೆ ಮಾರ್ಗದರ್ಶನ ಮಾಡಿ ಆದರ್ಶಪ್ರಾಯರಾದರು ಎಂಬ ಸುದ್ಧಿ, ಹಲವರಿಗೆ ತಿಳಿದಿರಲಾರದು. ನಂತರದ ಕಾಲದಲ್ಲಿ, ಈ ಕವಿವರ್ಯರು ಹಾಕಿ ಕೊಟ್ಟ ದಾರಿಯಲ್ಲಿ ನಡೆದು, ತಮ್ಮ ಕುಟುಂಬದಲ್ಲಿ, ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿವಾಹವನ್ನು ಅಂದಿನ ಹಲವಾರು ಸುಪ್ರಸಿದ್ದ ರಾಜಕೀಯ ಮುಖಂಡರು, ಬುದ್ಧಿ ಜೀವಿಗಳು ನಡೆಸಿದರು ಎಂಬ ಮಾಹಿತಿ, ಪತ್ರಿಕೆಗಳಲ್ಲೂ ವರದಿಯಾಗಿತ್ತು ಎಂಬುದು ಗಮನಾರ್ಹ.  

ಇದೇ ಸಂದರ್ಭದಲ್ಲಿ, ಬಲು ಅಪರೂಪದ, ಮತ್ತೊಂದು ರೀತಿಯ ಅತಿ ಸರಳ, ಸಜ್ಜನಿಕೆಯ ವಿವಾಹ ಕ್ರಮವನ್ನು ಪಾಲಿಸಿ, ಇತರರಿಗೆ ದಾರಿ ದೀಪವಾಗಿರುವ ಕೆಲವು ಮಹನೀಯರ ಉದಾಹರಣೆಗಳು ಹೀಗಿವೆ :  

ಮೊದಲ ಮಾದರಿಯಲ್ಲಿ, ನಮ್ಮ ನಾಡಿನ ಪ್ರಖ್ಯಾತ ಕವಿ ಶ್ರೇಷ್ಠರು ಒಬ್ಬರು,  ತಮ್ಮ ಮಗನ ವಿವಾಹದ ಸಂಬಂಧ ಬಳಸಿದ ಆಹ್ವಾನ ಪತ್ರಿಕೆ , ಅದೂ ಕೇವಲ ಕೆಲವರನ್ನು ಮಾತ್ರ ಆಹ್ವಾನಿಸಿದ್ದು ಅದರಲ್ಲಿ ಈ ಕೆಳಕಂಡ ಒಕ್ಕಣೆ ಇತ್ತು :

“ನನ್ನ ಮಗನದು ಇಂತಹಾ ಕನ್ಯೆಯೊಡನೆ, ಇಂತಹಾ ದಿನಾಂಕದAದು, ಇಂತಹಾ ಸ್ಥಳದಲ್ಲಿ  ವಿವಾಹ ನಡೆಯಲಿದೆ, ನಮ್ಮ ಹಿತೈಷಿಗಳಾದ ತಾವು ತಮಗೆ ಅನುಕೂಲ, ಆರಾಮ ದೊರೆತಾಗ,  ನಮ್ಮಲ್ಲಿಗೆ ಆಗಮಿಸಿ, ವಧೂ ವರರ ಆತಿಥ್ಯ ಸ್ವೀಕರಿಸಿ, ಅವರನ್ನು ಆಶೀರ್ವದಿಸಿ, ಅವರ ಶ್ರೇಯೋಭಿವೃದ್ಧಿಯನ್ನು  ಕೋರಬೇಕೆಂದು ವಿಜ್ಞಾಪಿಸಿಕೊಳ್ಳುತ್ತೇನೆ. 

ಎರಡನೆಯ ಮಾದರಿಯಲ್ಲಿ, ಹಲವಾರು ವರ್ಷಗಳಿಂದ ರಾಜ್ಯದ ರಾಜಕಾರಣದಲ್ಲಿ, ಸಕ್ರಿಯ ಪಾತ್ರ ವಹಿಸಿ, ಖ್ಯಾತ ರಾಜಕಾರಣಿ, ಒಳ್ಳೆಯ ವಾಕ್ಪಟು ಎಂದು ಹೆಸರು ಗಳಿಸಿರುವ ಗಣ್ಯರೊಬ್ಬರು ತಮ್ಮ ಮಗಳ ವಿವಾಹದ ಸಂಬಂಧ ದ ಆಹ್ವಾನ ಪತ್ರಿಕೆಯಲ್ಲಿ : “ಇಂತಹ ವರನ ಜೊತೆ, ನನ್ನ ಮಗಳ ವಿವಾಹ, ಇಂತಹಾ ದಿನ ನಡೆಯುತ್ತದೆ, ಅದ್ಧೂರಿ ಮತ್ತು ಆಡಂಬರದ ಮದುವೆಗಳು ನನಗೆ ಇಷ್ಟವೂ ಇಲ್ಲ ಮತ್ತು ನನ್ನ ಕೈಲಿ ಸಾಧ್ಯವೂ ಇಲ್ಲ, ಕುಟುಂಬದ ಹಿರಿಯರ ಅಪೇಕ್ಷೆಯಂತೆ, ಮದುವೆಯು ಮನೆತನಕ್ಕೆ ಮಾತ್ರ ಸೀಮಿತವಾಗಿ ನಡೆಯಲಿದೆ. ತಮ್ಮೆಲ್ಲರಿಗೂ ಆಹ್ವಾನ ನೀಡದಿದ್ದಕ್ಕಾಗಿ ಅನ್ಯಥಾ ಭಾವಿಸಬೇಡಿ, ನೂತನ ವಧೂ ವರರಿಗೆ ನಿಮ್ಮ ಆಶೀರ್ವಾದವನ್ನು ನಮ್ರತೆಯಿಂದ ಕೋರುತ್ತೇನೆ”ೆ  ಎಂಬ ವಿನಂತಿ. ಕೋರಿಕೆ ಇತ್ತು .   ಇನ್ನು ಮೂರನೆಯ ಮಾದರಿ ಎಂದರೆ, ಬೀರೂರಿನ ಒಂದು ಸುಸಂಸ್ಕೃತ, ಸಾಂಪ್ರದಾಯಿಕ ಕುಟುಂಬದ ದಂಪತಿಗಳು ತಮ್ಮ ಪುತ್ರಿಯ ವಿವಾಹದ ಸಂದರ್ಭದಲ್ಲಿ, ವಿವಾಹದ ಅರ್ಥ,  ಮಹತ್ವಗಳನ್ನು ಓದುಗರಿಗೆ ಮನವರಿಕೆ ಮಾಡಲು, ಮಂತ್ರಗಳ ಅರ್ಥಗಳುಳ್ಳ ಚಿಕ್ಕ ಪುಸ್ತಕವನ್ನು ಸಿದ್ಧಪಡಿಸಿ, ಆ ಪುಸ್ತಕದ ಹಿಂಬದಿ ರಕ್ಷಾ ಪುಟದ ಒಳ ಪುಟದಲ್ಲಿ ತಮ್ಮ ಮಗಳ ವಿವಾಹದ ಆಹ್ವಾನವನ್ನು ಮುದ್ರಿಸಿ, ಬಂಧು ಮಿತ್ರ‍್ರರಿಗೆ ವಿತರಿಸಿದ್ಧಾರೆ. ಇಂತಹಾ ಪ್ರಕ್ರಿಯೆಗೆ ಇವರು ನೀಡಿರುವ ಕಾರಣ ಎಂದರೆ, ಮದುವೆಯ ಸಮಾರಂಭದಲ್ಲಿ, ಗೌಜು, ಗದ್ದಲ,ಗಲಾಟೆಗಳಲ್ಲಿ ಮಂತ್ರಗಳು ಮುಳುಗಿ ಹೋಗಿರುತ್ತವೆ. ಮದುವೆಯ ನಂತರವಾದರೂ,  ವಧೂ ವರರಾದಿಯಾಗಿ ಈ ಪುಸ್ತಕವನ್ನು ಓದಿ, ಗೃಹಸ್ಥ ಜೀವನಕ್ಕೆ ಅಗತ್ಯವಾದ ಸುಖದಾಯಕ ಸಂದೇಶವನ್ನು ಮನನ ಮಾಡಿ, ಅನುಕರಿಸಿದರೆ ಗೃಹಸ್ಥ  ಜೀವನ ಯಶಸ್ವಿಯಾಗುವುದು ಎಂಬುದು. 

ಮೇಲೆ ತಿಳಿಸಿದ ಎಲ್ಲಾ ಮಾದರಿಗಳೂ ಸ್ವಲ್ಪ ಕಾಲದ ಹಿಂದಿನದಾದರೂ, ಇತ್ತೀಚಿನ ದಿನದಲ್ಲಿ ಬೆಂಗಳೂರು ನಗರದ ಪ್ರಸಿದ್ಧ ದೇವಾಲಯದಲ್ಲಿ ನಡೆದ ಒಂದು ಮದುವೆಯ ವಿಶೇಷಗಳೆಂದರೆ :

ಅ) ಕೇವಲ ವಧೂ ವರರೇ ಅಲ್ಲದೆ, ಮದುವೆಗೆ ಬಂದ ಅತಿಥಿಗಳೆಲ್ಲರೂ ರೇಷ್ಮೆ ಚಿನ್ನ, ಬೆಳ್ಳಿಗಳಿಂದ ದೂರವಿದ್ದದ್ದು, (ಆ) ಮಹಿಳೆಯರು ಕಾಟನ್ ಸೀರೆ, ಪುರುಷರು ಖಾದಿ ವಸ್ಥç ಧಾರಣೆ, (ಇ) ಆಹ್ವಾನ ಪತ್ರಿಕೆ ಕೈ ಬರಹದಲ್ಲಿದ್ದದ್ದು, (ಈ) ಆಹ್ವಾನ ಪತ್ರಿಕೆಯಲ್ಲಿನ ಕೆಲವು ಷರತ್ತುಗಳೆಂದರೆ, ಕಾರ್ಯಕ್ರಮದ ಆರಂಭಕ್ಕೆ 15 ನಿಮಿಷ ಮುಂಚಿತವಾಗಿ ಅತಿಥಿಗಳು ಬರಬೇಕು, ಮೊದಲಿನಿಂದ ಕೊನೆಯವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಪುಷ ್ಪಗುಚ್ಚಗಳನ್ನು ತಂದು ಒಣಗಿಸಬಾರದು, (ಉ) ಮದುವೆಯಲ್ಲಿ ನಡೆಸುವ ಹೋಮಗಳು ಏಕೆ, ಅದರಿಂದ ಪರಿಸರದದ ಮೇಲೆ ಆಗುವ ಪರಿಣಾಮ, ಹೋಮಕ್ಕೆ ಬಳಸುವ ವಸ್ತುಗಳ ವಿವರ ಇತ್ಯಾದಿಗಳನ್ನು ಅತಿಥಿಗಳಿಗೆ ಮದುವೆಯ ಸ್ಥಳದಲ್ಲಿಯೇ ವಿವರಿಸಲಾಗುವುದು, ಇದರ ಜೊತೆಗೆನೇ, ಲಾಜ ಹೋಮ, ಪಾಣಿಗ್ರಹಣ ಸಪ್ತ ಪದಿ ಇತ್ಯಾದಿಗಳ ಅರ್ಥ,  ವಿವರಣೆ ಬಂದವರೆಲ್ಲರಿಗೂ ತಿಳಿಸಲಾಗುವುದು, (ಊ) ಭಾಗÀವಹಿಸುವವರೆಲ್ಲರೂ ಏಕ ಕಂಠದಲ್ಲಿ “ಓಂ ಸೌಭಾಗ್ಯಮಸ್ತು, ಓಂ ಶುಭಂ ಭವತು, ಸ್ವಸ್ತಿ , ಸ್ವಸ್ತಿ “ ಎಂದು ವಧೂ ವರರಿಗೆ ಆಶೀರ್ವದಿಸಬೇಕು, (ಋ) ಮದುವೆಯ ಮಂಟಪದಲ್ಲಿ ವಾದ್ಯದ ಸದ್ದು, ಅತಿಥಿಗಳ ಗದ್ದಲ, ಆಹಾರದ ಬಗ್ಗೆ ನಿರ್ಲಕ್ಷö್ಯ ಇವೆಲ್ಲಕ್ಕೂ ಕಡಿವಾಣ, (ಎ) ಬಂದವರಿಗೆ ಕಾಫೀ ಟೀ ಇಲ್ಲ, ಬದಲಿಗೆ, ಬೆಲ್ಲದ ಪಾನಕ, ನಿಯಮಿತ ಊಟೋಪಚಾರ, (ಏ) ಫಲ , ತಾಂಬೂಲದ ಬದಲಾಗಿ, ಪ್ರತಿ ಅತಿಥಿಗೆ ಆರು ಪುಸ್ತಕಗಳ ಉಡುಗೊರೆ, ಮತ್ತು, 

(ಐ) ಬಂದ ಎಲ್ಲಾ ಅತಿಥಿಗಳ ವೈಯಕ್ತಿಕ ವಿಳಾಸ ವಿವರಗಳ ಸಂಗ್ರಹ, (ವಿವಾಹದ ನಂತರದ ಅವಧಿಯಲ್ಲಿ ಎಲ್ಲಾ ಬಂಧುಗಳೊಡನೆ ಸತತ ಸಂಪರ್ಕವಿರಿಸಿಕೊಳ್ಳಲು )

ಮೇಲೆ ಉಲ್ಲೇಖಿಸಿರುವ ಎಲ್ಲಾ  ಮಾದರಿಗಳನ್ನು ಅನುಸರಿಸಿದವರ ಬಳಿ ಹಣಕ್ಕೆ ಕೊರತೆ ಇರಲಿಲ್ಲ, ಜನ ಸಹಾಯಕ್ಕೆ ಅಭಾವವಿರಲಿಲ್ಲ, ಇರ‍್ಯಾರೂ ಅನಾಮಧೇಯರಲ್ಲ, ಇವರೆಲ್ಲರೂ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನಗಳನ್ನು ಹೊಂದಿದ್ದು, ಆಡಂಬರದ ಮದುವೆ, ಸಹಸ್ರಾರು ಜನರಿಗೆ ಆಹ್ವಾನ, ಭರ್ಜರಿ ಊಟೋಪಚಾರ, ನಡೆಸಬಲ್ಲ ಶಕ್ತಿ ಇದ್ದರೂ ಹಾಗೆ ಮಾಡದೆ, ಸರಳ,  ಸಜ್ಜನಿಕೆಯ, ಅರ್ಥಪೂರ್ಣ ವಿವಾಹ ವ್ಯವಸ್ಥೆ ಆರಿಸಿಕೊಂಡವರಿವರು,  ತಮ್ಮ ಮನಸ್ಸಿಗೆ ಸರಿ ಎನಿಸಿದ್ದನ್ನು ಮಾಡಿ ತೋರಿಸಿದವರು, ವಿವಾಹವೆಂಬ ಪವಿತ್ರ ಸಂಸ್ಕಾರವನ್ನು ಹೀಗೂ ನಡೆಸಬಹುದು,  ಆ ಪವಿತ್ರ ಕಾರ್ಯದ ಮೂಲ ಉದ್ಧೇಶವನ್ನು ಹೀಗೂ ಸಫಲಗೊಳಿಸಬಹುದು ಎಂದು ಸಮಾಜಕ್ಕೆ ದಿಟ್ಟತನದಿಂದ ಎತ್ತಿ ತೋರಿಸುವ ಮೊದಲ ಹೆಜ್ಜೆ ಇಟ್ಟ” ಸಾಮಾನ್ಯರಲ್ಲಿ ಅಸಾಮಾನ್ಯರಿವರು. “  

       ರಂಗ, ಸಿಂಗರಿಗಿAತಾ ನಾ ಏನು ಕಡಿಮೆ ? ಎಂದು ಬೀಗಿ, ಇದಕ್ಕೆ ಆರ್ಥಿಕ ಶಕ್ತಿ ಇಲ್ಲದಿದ್ದರೂ ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂಬ ಗಾದೆಯಂತೆ, ಸಾಲ ಮಾಡಿ ಉಳ್ಳವರ ಮೇಲೆ  ಪೈಪೋಟಿಗಾಗಿ ಅದ್ಧೂರಿಯ ಮದುವೆಗಳನ್ನು ನಡೆಸಲಾಗುತ್ತಿದೆ. ಇದು ನಮಗೆ ಅಗತ್ಯವೆ ?

    ಧನ ಬಲ ಜನ ಬಲ ಗಳಿದ್ದರೂ ಇವು ಅನವಶ್ಯಕ ಎಂದು ಬಲು ಸರಳ ಆದರೂ ಅರ್ಥಪೂರ್ಣವಾಗಿ ಆದರ್ಶ ವಿವಾಹಗಳನ್ನು ನಡೆಸಿ ವಿವಾಹವನ್ನು ಹೀಗೂ ಮಾಡಬಹುದು ಎಂದು ಸಮಾಜಕ್ಕೆ  ಎತ್ತಿ  ತೋರಿಸಿದ ಮಹನೀಯರು ನಮ್ಮ ಸಮಾಜದಲ್ಲಿರುವವರೇ. ಇದುವರೆಗೂ  ಹೇಳಿದ್ದು ಕಥೆ ಕಲ್ಪನೆಯಲ್ಲ, ಇದು ವಾಸ್ತವ, ಈ  ಮಹನೀಯರಿಗೆ ಹೇಟ್ಸ್ ಆಫ್” ಎನ್ನೋಣವೆ ? ಅಥವಾ “ಮೇ ದೇರ್ ಟ್ರೆöÊಬ್ ಇನ್ಕಿçÃಸ್” ಎಂದು ಆಶಿಸಿದರೆ ಸರಿಯಾದೀತೇ !  ಇನ್ನಾದರೂ ಈ ವಿಷಯದಲ್ಲಿ “ಹೂ ಹೇಸ್ ಟು ಬೆಲ್ ದಿ ಕೇಟ್” ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂದು ಅತ್ತಿತ್ತ ನೋಡದೆ, ಇಂತಹಾ ವಿಶಿಷ್ಟ, ಅಪರೂಪದ, ಅನುಕರಣಾರ್ಹ ವಿವಾಹ ಪದ್ಧತಿ ನಮ್ಮಿಂದಲೂ ಶುರುವಾಗಲೀ ಎಂದು ಧೈರ್ಯ ವಹಿಸಿ, ಯಶಸ್ವಿಯಾಗಿ ಸರಳ ಅರ್ಥಪೂರ್ಣ ವಿವಾಹ ಜರುಗಿಸಿ ನಾವೂ  ಇತರರಿಗೆ ಮಾದರಿಯಾಗಲು  ಇದು ಸಕಾಲವಾಗಬಾರದೇಕೇ ! 


      


Comments