ಮನೆ ತುಂಬಾ ಜನ, ಆದರೂ ನಾ ಒಂಟಿ ! ?
ಲೇಖಕರು : ಎಂ ಆರ್ ವೆಂಕಟರಾಮಯ್ಯ
ಇದೇನೀ ಒಗಟು ಮಾತು ! ಮನೆ ತುಂಬಾ ಜನವಿದ್ದ ಮೇಲೆ ಯಾರು, ಯಾಕಾದರೂ ಒಂಟಿಯಾಗಿರತಾರೆ ? ಒಂಟಿತನ ಎಲ್ಲಿರುತ್ತೆ ? ಸಾಧಾರಣವಾಗಿ ಮನೆಯೆಂದ ಮೇಲೆ ಗಲಗಲನೆ ಮಾತುಗಳು, ನಗುವಿನ ಅಲೆಗಳು, ಚರ್ಚೆ, ವಾದ ವಿವಾದಗಳು, ತರ್ಕ ಆಕ್ಷೇಪಣೆಗಳು ಇದ್ದೇ ಇರುತ್ತವೆ. ಈ ಪೈಕಿ ಯಾವುದು ಇಲ್ಲವಾದರೂ ಯಾರಾದರೊಬ್ರು ಮತ್ತೊಬ್ಬರೊಡನೆ ಏತಕ್ಕಾದರೂ ಜಗಳ, ಕಿತ್ತಾಟ, ನಡೆದಿದ್ದು, ಇದನ್ನು ಇತ್ಯರ್ಥಪಡಿಸಲು ಮನೆಯ ಮತ್ತೊಬ್ಬ ವ್ಯಕ್ತಿಯ ಪ್ರವೇಶ, ಬುದ್ಧಿವಾದ, ಮತ್ತೆ ಮನೇಲಿ ಶಾಂತಿ ಸಮಾಧಾನದ ವಾತಾವರಣ ಇವಾದರೂ ಇದ್ದೇ ಇರುತ್ತವಲ್ಲವೇ ! ಪರಿಸ್ಥಿತಿ ಹೀಗಿರುವಾಗ “ಮನೆ ತುಂಬಾ ಜನ, ಆದರೂ ನಾ ಒಂಟಿ” ಎಂ¨ ಮಾತನ್ನು ನಂಬಲು ಹೇಗೆ ಸಾಧ್ಯ ? ಎಂಬುದು ಬಹಳ ಓದುಗರ ವಾದ, ತರ್ಕವಾಗಿರಬಹುದು.
ಒಂದು ದೃಷ್ಟಿಕೋನದಲ್ಲಿ ಈ ವಾದ, ತರ್ಕ ಸರಿ ಎನಿಸಿದರೂ ತುಂಬಾ ಜನವಿರುವ ಹಲವು ಮನೆಗಳಲ್ಲೂ ಯಾರಾದರೊಬ್ಬರು “ಪರರ ಚಿಂತೆ ನನಗೇತಕಯ್ಯಾ “ ಎಂಬ ಅಣ್ಣನವರ ವಚನದಂತೆ ಯಾರೊಡನೆ ಸೇರದೆ ಏಕಾಂಗಿಯಾಗಿ ತಮ್ಮ ವ್ಯವಹಾರದಲ್ಲಿ ನಿರತಾಗಿರುವುದು, ಇವನ್ನು ನೋಡಿದ ಮನೆಯ ಜನ, ಏ ಬಿಡಪ್ಪಾ, ಅವನು ಯಾರೊಡನೆಯೂ ಹೆಚ್ಚು ಸೇರೊಲ್ಲ, ಬಹಳ ರಿಸರ್ವ್ಡ್, ಮೊದಲಿನಿಂದಲೂ ಹಾಗೇ ಅವನು ಎನ್ನುತ್ತಾ ಅಂತಹವರನ್ನು ಒಂಟಿಯಾಗೇ ಇರಲು ಬಿಟ್ಟಿರುವುದನ್ನೂ ನೋಡಿದ್ದೇವೆ. ಈ ವರ್ಗದವರ ಕುರಿತ ಜನರ ಬಾಯಿಂದ ಉದ್ಗಾರವಾಗುವ ಮಾತೇ “ಮನೆ ತುಂಬಾ ಜನ, ಆದರೂ ಇವನು ಒಂಟಿ” ಎಂಬುದಾಗಿರುತ್ತದೆ.
ಈ ಮಾತು ಕೇವಲ ಯುವಕರು, ಮಧ್ಯ ವಯಸ್ಸಿನವರಿಗೆ ಮಾತ್ರ ಅನ್ವಯ ಎನ್ನಲಾಗದು. ಬದಲಿಗೆ ಈ ಮಾತು ಹೆಚ್ಚಾಗಿ ಅನ್ವಯಿಸುವುದು ವೃದ್ಧವರಿಗೇ ಎಂದರೆ ಮಾತು ಉತ್ಪೆಕ್ಷೆ ಯಾಗಲಾರದು.. ಏಕೆಂದರೆ ‘ಮುದುಕ, ವೃದ್ಧ, ವಯಸ್ಸಾದವನು ಎಂದರೇನೇ ಇವನಿಗಾಗಿ ಮೀಸಲಿಟ್ಟ ಸ್ಥಳ ಮೂಲೆ” ಅರ್ಥಾತ್ ಇವನು ಮೂಲೆಗುಂಪಾಗಿರುವವನು’ ಎಂ¨ ಅರ್ಥ ನಿತ್ಯ ಜೀವನದಲ್ಲಿ ಬಳಕೆಯಲ್ಲಿದೆ. ಮನೆ ತುಂಬಾ ಜನವಿರಬಹುದು, ಆದರೆ ಇವರಿಗ್ಯಾರಿಗೆ ಬೇಕಾಗಿದೆ ಮುದುಕನೊಡನೆ ಮಾತು ! ಇಷ್ಟಕ್ಕೂ ಈತನೊಡನೆ ಮಾತನಾಡುವುದೇನಿರುತ್ತದೆ ? ಸಂಸಾರ ತಾಪತ್ರಯವೇ, ಹಣ ಕಾಸಿನ ವ್ಯವಹಾರ, ಕೊರತೆ, ಕಷ್ಟವೇ, ಆಫೀಸಿನ ವಿಷಯಗಳೇ ? ಏನಿರುತ್ತೆ ? ಈತನಲ್ಲಿ ಇರುವ ಸಮಸ್ಯೆ ಎಂದರೆ ವೃದ್ದಾಪ್ಯ, ಅದರ ಬಾಧೆ, ಭವಣೆ ಕಿತ್ತು ತಿನ್ನುತ್ತಿರುವ ಕಾಯಿಲೆ, ಮನೆಯವರು ಯಾರೂ ನನ್ನ ಚೆನ್ನಾಗಿ ನೋಡಿಕೊಂಡಿಲ್ಲ ಎಂ¨ ಮಾಮೂಲು ಆರೋಪ, ಅಷ್ಟೇ ಅಲ್ಲವೇ ! ಇವೆಲ್ಲಾ ಕಟ್ಟಿಕೊಂಡು ನಾವೂ ಮಾಡೋದೇನಿದೆ ? ಎಂಬ ಕಾರಣ ಮುಂದೊಡ್ಡಿ ಈತನನ್ನು ಯಾರೂ ಲೆಕ್ಕಿಸುವುದಿಲ್ಲ. ತಮ್ಮೊಡನೆ ಸೇರಿಸಿಕೊಳ್ಳದ ಕಾರಣ, ಎಲ್ಲರ ನಿರ್ಲಕ್ಷö್ಯದಲ್ಲಿ ಈತ ಒಂಟಿತನ ಅನುಭವಿಸಬೇಕಾಗುತ್ತದೆ.
ಏ ! ನಿಮ್ಮೀ ಮಾತನ್ನು ನಾ ಒಪ್ಪೋದಿಲ್ಲ, ಮುದುಕರು ಅಂದರೆ ಹಿರಿಯರು, ಅವರ ಆಶೀರ್ವಾದ, ಸಲಹೆ, ಸೂಚನೆ, ಮಾರ್ಗದರ್ಶನದ ಲಾಭ ನಮಗೆ ಬೇಡವೇ ? ಹೀಗಿರುವಾಗ ಅವರನ್ಯಾಕೆ ನಾವು ಒಂಟಿಯಾಗಿರಿಸ್ತೀವಿ ಎನ್ನುವುದು ನಿಮ್ಮ ಅಭಿಪ್ರಾಯವಾದರೆ, ನಿಮ್ಮ ರಕ್ಷಣೆಯಲ್ಲಿರುವ ವೃದ್ಧರು ಬಹಳ ಪುಣ್ಯವಂತರು, ಇಂತಹಾ ಮಕ್ಕಳನ್ನು ಪಡೆದ ಆ ಹೆತ್ತವರೇ ಧನ್ಯರು ಎನ್ನಬಹುದು, ಆದರೆ ಇಂದಿನ ಕಾಲಘಟ್ಟದಲ್ಲಿ ಇಂತಹವರ ಸಂಖ್ಯೆ ಬಹಳ, ಬಹಳ ಕಡಿಮೆ. ಇವರು ಮೈನಾರಿಟಿ ಎಂದರೂ ಮಾತು ತಪ್ಪಾಗಲಾರದು.
ಪ್ರಸಕ್ತ ಲೇಖನದಲ್ಲಿ ಈ ಪುಣ್ಯವಂತರ ವಿಷಯ ನಾ ಎತ್ತಿಲ್ಲ, ಬದಲಿಗೆ ಬಹು ಸಂಖ್ಯಾತ ವೃದ್ಧರು ಅನು¨sವಿಸುತ್ತಿರುವ ಒಂಟಿತನ ಎಂತಹುದು ? ಎಂಬುದನ್ನು ಕುರಿತ ಒಂದು ಪ್ರಸಂಗ ಇಲ್ಲಿದೆ :
ಇದು ನನ್ನ ಮಿತ್ರನ ಮನೆಯ ಮಾತು. ಇಲ್ಲಿರುವವರು ನನ್ನ ಮಿತ್ರ, ಪತ್ನಿ ಇಬ್ಬರು ಮಕ್ಕಳು, ಜೊತೆಗೆ ಇವರನ್ನೇ ಅವಲಂಭಿಸಿ ಇನ್ನೂ ಉಸಿರಾಡುತ್ತಿರುವ, ನನ್ನ ಮಿತ್ರನನ್ನು ಅಂದೆAದೋ ಹೆತ್ತವರು. ಇಂದು ವಯೋವೃದ್ಧರಾಗಿ ‘ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಮ್’ ನೀಡು ಸ್ವಾಮಿ ಎಂದು ಸೃಷ್ಡಿಕರ್ತನಿಗೆ ಮೊರೆಯಿಡುತ್ತಿರುವ ವೃದ್ದರು. ಮನೆಯ ಯಜಮಾನನೇ ನನ್ನ ಮಿತ್ರ. ಇವರದು ಮಧ್ಯಮ ವರ್ಗದ ಕುಟುಂಬ. ಆದಾಯ ಕಡಿಮೆ, ಖರ್ಚು ಹೆಚ್ಚು, ಪ್ರತಿ ತಿಂಗಳೂ ಕೊರತೆ ಬಜೆಟ್, ಈತನ ಪತ್ನಿ ಮನೆ ಕೆಲಸಗಳಲ್ಲಿ ನಿರತೆ. ಮಕ್ಕಳು, ಶಾಲೆ, ಓದು, ಬರಹ, ಆಟ, ಊಟ, ನಿದ್ದೆ, ಇನ್ನು ಉಳಿದವರು ಯಾರು ? ಇವರೇ, ಇಲ್ಲಿನವರ ಮೇಲೆ ಅವಲಂಭಿತರು. ಅರ್ಥಾತ್ ವೃದ್ಧರು.
ಈ ಮನೆಯ ದಿನಚರಿ ಎಂದರೆ ಯಜಮಾನ ಬೆಳಗ್ಗೆ 9 ಗಂಟೆಯೊಳಗೆ ತಿಂಡಿ ಮುಗಿಸಿ ಊಟದ ಡಬ್ಬಿ ಕೈಲಿ ಹಿಡಿದು ಕೆಲಸಕ್ಕೆ ಹೊರಟರೆ ಮತ್ತೆ ಮನೆಗೆ ಮರಳೋದು ರಾತ್ರಿ 8 ಕ್ಕೇನೇ. ಮಕ್ಕಳು ಶಾಲೆಯ ವೇಳೆಗೆ ಮುಂಚೆಯೇ ತಿಂಡಿ ತಿಂದು, ಲಂಚ್ ಅವರ್‌ಗೆ ಅಂತಾ ತಿಂಡಿ ಡಬ್ಬಿ ಹಿಡಿದು ಹೊರಟರೆ ಮಧ್ಯಾಹ್ನ 4 ಕ್ಕೆ ಮನೆಗೆ ಹಿಂತಿರುಗುವುದು. 5 ಗಂಟೆಗೆ ಟ್ಯೂಷನ್ ಮನೆಗೆ, ರಾತ್ರಿ 7 ಕ್ಕೆ ಇವರು ವಾಪಸ್, ಇಷ್ಟರ ಮಧ್ಯೆ ಈ ಮನೆ ಯಜಮಾನತಿ ತಿಂಡಿ ಊಟ ರೆಡಿಯಾಗಿದೆ. ಎಂಬ ಮಾಹಿತಿ ವೃದ್ದರಿಗೆ ನೀಡಿದರೆ ತನ್ನ ಕೆಲಸವಾಯ್ತು, ಯಾರಿಗೆ ಯಾವಾಗ ಹಸಿವಾಗುತ್ತದೋ ಆಗ ಉಣ್ಣಬಹುದು ಮಾಡಿದ ಅಡುಗೆಯನ್ನು ಎಂದು ಕೊಳ್ಳುವವಳು,.
ರಾತ್ರಿ 8 ಕ್ಕೆ ನನ್ನ ಮಿತ,್ರ ಅರ್ಥಾತ್ ಈ ಮನೆಯ ಯಜಮಾನ, ಮನೆಗೆ ವಾಪಸ್. ಅಲ್ಪ ಕಾಲ ವಿಶ್ರಾಂತಿ ನಂತರ,” ಏನಪ್ಪ, ಅಮ್ಮ, ಏನ್ ಸಮಾಚಾರ ? ಏನಾದರೂ ಬೇಕಿತ್ತಾ ಎಂದು ವಿಚಾರಿಸುವುದು, ಬೇರ‍್ತೀರಾ ಊಟಕ್ಕೆ ಅಥವಾ ನಿಧಾನಾನಾ ? ಎಂದು ಕೇಳುತ್ತಲೇ ಮಕ್ಕಳ ಜೊತೆ ತನ್ನ ಆಫೀಸಿನ ವಿಚಾರ, ಮಕ್ಕಳು ತಮ್ಮ ಶಾಲೆಯ ಆಟ ಪಾಠಗಳ ವಿಚಾರ ಹರಟುತ್ತಾ ಉಂಡು ಕೈ ತೊಳೆಯುವರು, ಇವರ ಜೊತೆ ಊಟಕ್ಕೆ ಕುಳಿತ ವೃದ್ದರು ಮಾತನಾಡಲು ವಿಷಯ ಏನಿದೆ ! ಮಗ ಆಗಲೇ ವಿಚಾರಿಸಿ ಆಯಿತಲ್ವಾ ಇವರ ಯೋಗಕ್ಷೇಮವ ! ಹಿಗಾಗಿ ಮಾತನಾಡಲು ಏನಿಲ್ಲದ ಇವರು ಮೌನವಾಗಿ ಉಂಡು ಮೇಲೇಳುವವರು. ಮಗ ಮಲಗಲು ಮಂಚ ಸೇರಿದರೆ ಹೆತ್ತವರು ಬಿಡಿಸುತ್ತಾರೆ ಮೂಲೆಯಲ್ಲಿನ ಹಳೆಯ ಹಾಸಿಗೆಯ. ದಿನ ಕಳೆಯಿತಲ್ಲವೇ ! ಇದು ಸ್ವಾಮಿ ಈ ಮನೆಯ ಹಿರಿಯರ ಜೀವನ ಶೈಲಿ.
ಮತ್ತೆ ಮರು ದಿನ ಸೂರ್ಯ, ಚಂದ್ರ ಹುಟ್ತಾರೆ, ಮುಳಗತಾರೆ. ಹೀಗೇನೇ ಈ ಮನೆಯ ಸದಸ್ಯರ ಹಿಂದಿನ ದಿನದ ಕಾರ್ಯಕ್ರಮ ಪುನರಾವರ್ತನೆ. ‘ಪುನರಾಯನ್ ಮಹಾ ಕಪಿ’ ಎಂಬ ರಾಮಾಯಣದಲ್ಲಿನ ವಾಕ್ಯದಂತೆ. ಮಗನ ನಿತ್ಯದ ವಿಚಾರಣೆಯ ಸಂದರ್ಭದಲ್ಲಿ ಹೆತ್ತವರು ತಮ್ಮ ಕಾಯಲೆ, ಖರ್ಚಿಗೆ ಕಾಸೋ ಕೇಳಿದರೆ, ಕಾಸಿನ ಮಾತು ಕೇಳಿಸದಂತೆ ನಟಿಸಿ, ಲೇ ಇವಳೇ ನಾಳೆ ಇರ‍್ನ ಸರ್ಕಾರಿ ಆಸ್ಪತ್ರೆಗೆ ಕರಕೊಂಡ್ ಹೋಗಿ ಔಷಧಿ ಕೊಡಿಸಿ ಬಾ ಎಂ¨ ಪರಿಹಾರ ಸೂಚಿಸುವವ ಮಗ.
ಇನ್ನು ಭಾನುವಾರ, ರಜಾ ದಿನಗಳಂದು ಯಜಮಾನ, ಪತ್ನಿ, ಮಕ್ಕಳನ್ನು ಕರೆದುಕೊಂಡು ಆಚೆ ಸುತ್ತಾಡಲು ರೆಡಿಯಾಗಿ, ಅಮ್ಮಾ ಮನೆ ಕಡೆ ನೋಡಿಕೊ, ನಾವು ಆಚೆ ಹೋಗಿರ‍್ತೇವೆ ಎನ್ನುವುದರ ಜೊತೆಗೆ ರಾತ್ರಿ ಊಟಕ್ಕೆ ನಮಗೆ ಕಾಯಬೇಡಿ, ನಿಮ್ಮ ಪಾಡಿಗೆ ನೀವು ಊಟ ಮುಗಿಸಿ ಎನ್ನುವವ.
ಬಂಧುಗಳ್ಯಾರಾದರೂ ಮನೆಗೆ ಬಂದು ತಮ್ಮ ಮನೆಯಲ್ಲಿ ನಡೆಯುವ ಯಾವುದಾದರೂ ಶುಭ ಕಾರ್ಯ, ಮದುವೆ, ಮುಂಜಿ, ಗೃಹ ಪ್ರವೇಶ, ಇತ್ಯಾದಿಗಳಿಗೆ ಬರಲು ಆಹ್ವಾನಿಸಿ ಹೋದ ಮೇಲೆ, ಈ ವೃದ್ದರು ‘ಏನಪ್ಪಾ, ನಾವು ಅವರ ಕಾರ್ಯಕ್ರಮಕ್ಕೆ ಹೋಗಿ ಬರೋಣ ಅಂತಾ ಇದ್ದೀವಿ, ಆಗ ನಮ್ಮೆಲ್ಲಾ ಬಂಧುಗಳನ್ನು ನೋಡಿ ಮಾತನಾಡಿಸಿದ ಹಾಗಾಗುತ್ತೆ’ ಎಂಬ ಪ್ರಸ್ತಾವ ಮಗನ ಮುಂದಿಟ್ಟಾಗ ಆ ಮಗ ರಾಯನು, ನೀವು ಅಲ್ಲಿಗೆ ಹೋಗಿ ಎದ್ದೋ ಬಿದ್ದೋ ಮಾಡು ವುದೋ, ಆಳು ಮೂಳು ತಿಂದು ಹೊಟ್ಟೆ ಕೆಡಿಸಿಕೊಂಡರೆ ಡಾಕ್ಟರ್, ಶಾಪು ಎಂದೆಲ್ಲಾ ಅಲೆದಾಡಿ ದುಡ್ಡು ಯಾಕೆ ಖರ್ಚು ಮಾಡಬೇಕು ? ಅದೆಲ್ಲಾ ಏನೂ ಬೇಡ, ನೀವು ನೆಮ್ಮದಿಯಾಗಿ ಮನೇಲಿರಿ, ನಿಮ್ಮ ಪರವಾಗಿ ನಿಮ್ಮ ಸೊಸೆ, ನಾನೂ ಹೋಗಿ ರ‍್ತೇವೆ. ಇಷ್ಟು ªರ್ಷಗಳು ಇಂತಹಾ ಹಲವಾರು ಕಾರ್ಯಗಳನ್ನು ನೋಡಿದ ನಿಮಗೆ ಈ ಇಳಿ ವಯಸ್ಸಿನಲ್ಲೂ ಚಪಲವೇ ! ರಾಮ ಕೃಷ್ಣ ಅಂತ ದೇವರ ಸ್ಮರಣೆ ಮಾಡ್ತಾ ಮನೇಲಿರಿ, ನಾಳೆ ನಿಮಗೆ ಕೆಲವು ಸ್ತೋತ್ರಗಳ ಪುಸ್ತಕಗಳನ್ನು ತಂದು ಕೊಡ್ತೇನೆ ಎಂದ ಮಗ ಹಿರಿಯರ ಆಸೆಗೆ ತಣ್ಣೀರು ಎರಚುವವ. “ನಮಗೆ ಅಂತ್ಯಕಾಲವೆAದೋ ಗೋವಿಂದಾ, ಬೇಗನೆ ನಮ್ಮನ್ನು ನಿನ್ನ ಪಾದಕ್ಕೆ ಸೇರಿಸಿಕೋ ತಂದೆ” ಎಂದು ಮನದಲ್ಲೇ ಕೊರಗುತ್ತಾ ನಿದ್ದೆಗೆ ಜಾರುವವರು ಈ ದುರದೃಷ್ಟ ಹಿರಿಯ ಜೀವಿಗಳು.
ಅದೊಂದು ದಿನ ನನ್ನೀ ಮಿತ್ರನ ಕಡೆ ನನ್ನ ಕೆಲಸ ಇದ್ದ ಕಾರಣ ಅವನ ಮನೆಗೆ ನಾ ಭೇಟಿ ಕೊಟ್ಟಾಗ, “ಈ ಕಾಲಕ್ಕೆ ನೀನೇ ಪುಣ್ಯವಂತನಯ್ಯ, ಹೆತ್ತ ಹಿರಿಯರ ಸೇವೆ ಮಾಡೋ ಭಾಗ್ಯ ಸಿಕ್ಕಿದೆ, ಆದರೆ ನನಗೇ ಈ ಸೌಭಾಗ್ಯವಿಲ್ಲ, ಅದಕ್ಕೇ “ತಾಯಿ ತಂದೆಯ ಸೇವೆಯಾ ಯೋಗ, ಬರಬಾರದೆ ಬೇಗ” ಎಂದು ಹಾಡ್ತಾ ಸಮಾಧಾನ ಪಟ್ಟುಕೊಳ್ತಿದ್ದೀನಿ ಎಂದೆ. ಅದಕ್ಕೆ “ನಾನು ಹೆತ್ತವರಿಗೆ ಸಕಾಲದಲ್ಲಿ ತಿಂಡಿ, ಊಟ ನೀಡಿ ಚೆನ್ನಾಗೇ ನೋಡಿಕೊಳ್ಳತಿದ್ದೀನಪ್ಪಾ” ಎಂದ. ಮಿತ್ರ.. ಇವನ ಮಾತು ಕೇಳಿ ನನಗ್ಯಾಕೋ ಬೇಸರವಾಯ್ತು.. ಒಚಿಟಿ ಜoes ಟಿoಣ ಟive bಥಿ bಡಿeಚಿಜ ಚಿಟoಟಿe ಎಂಬ ಇಂಗ್ಲಿಷ್ ಗಾದೆ ಕೇಳಿಲ್ವೇನಯ್ಯಾ ! ತಿಂಡಿ, ಊಟ ಈ ಎರಡರಿಂದಾನೇ ಯಾರೂ ಸುಖ, ನೆಮ್ಮದಿಯಿಂದ ಇರೋಕಾಗೊಲ್ವಯ್ಯ. ಈ ವಯಸ್ಸಿನಲ್ಲಿ ಅವರಿಗೆ ಬೇಕಾದ್ದು ‘ಸಾತೀ’ ಅರ್ಥಾತ್ ಜೊತೆಗಾರರು, ಜನರ ಸಂಘ, ಸÀಂಪರ್ಕ, ಸಹವಾಸ. ಅದಕ್ಕೇ ನೀನು ದಿನವೂ ಆಫೀಸಿನಿಂದ ಮನೆಗೆ ಬಂದ ಮೇಲೆ ಅಮ್ಮ ಅಪ್ಪನ ಬಳಿ ಸ್ವಲ್ಪ ಹೊತ್ತು ಕುಳಿತು” ಏನ್ ಇಂದಿನ ಸಮಾಚಾರ , ಏನೇನ್ ಮಾಡಿದಿರಿ ನೀವು, ಹೇಗೆ ಸಮಯ ಕಳೆದಿರಿ, ನಿಮ್ಮ ಆರೋಗ್ಯ ಹೇಗಿದೆ ಎಂದು ಸಮಾಧಾನ, ನಗುಮುಖದಿಂದ ಮಾತನಾಡಿಸು, ತಮ್ಮ ಅನಿಸಿಕೆಗಳನ್ನು ಕೇಳುವ ವರು ಒಬ್ಬರಿದ್ದಾರೆ ಎಂ¨ ಸಂತಸ ಸಮಾಧಾನ ಅವರದಾಗುತ್ತದೆ. ದಿನವೂ ಅವರನ್ನು ನಿನ್ನ ಕುಟುಂಬದವರೊಡನೆ ಸೇರಿಸಿಕೊಂಡು ಸಮಯ ಕಳಿ.
ಕನಿಷ್ಟ, ವಾರ, ಹತ್ತು ದಿನಕೊಮ್ಮೆಯಾದರೂ ಅವರನ್ನು ಹೊರಗೆ ಓಡಾಡಿಸಿ ಕರೆ ತಾ. ನಿಮ್ಮವರ ಪೈಕಿ ಯಾವುದಾದರೂ ಸಮಾರಂಭ ಹಬ್ಬ ಹರಿದಿನ ನಡೆದರೆ ಅಲ್ಲಿಗೆ ಕರೆದುಕೊಂಡು ಹೋಗಿ ಬಂಧು ಬಾಂಧವರ ದರ್ಶನ ಹೆತ್ತವರಿಗೆ ಮಾಡಿಸು, ಇಂತಹಾ ಹಲವು ಕ್ರಮಗಳಿಂದ ಅವರನ್ನು ಒಂಟಿತನ ಎಂಬುದು ಕಾಡದೆ, ನಾವೂ ಈ ಕುಟುಂಬದ ಸದಸ್ಯರೇ, ಇವರೆಲ್ಲಾ ನನ್ನವರೇ, ನಾವು ಇವರಿಗೆ ಬೇಕಾದವರು ಎಂಬ ಭಾವನೆ ಅವರಲ್ಲಿ ಮೂಡಿದರೆ ಅವರು ಕೊನೆಯ ದಿನಗಳನ್ನು ನೆಮ್ಮದಿ¬ಂದ ಕಳೆಯಲು ಸಾಧ್ಯ. ನನ್ನ ಹೆತ್ತವರು ಬದುಕಿದ್ದಾಗ ನಾ ಹೀಗೇ ಮಾಡಿದ್ದೆ ಆಗ ನೀ ನೋಡಬೇಕಿತ್ತು ಅವರ ಮುಖದಲ್ಲಿ ಆ ಸಂಪೂuð ಸಮಾಧಾನ ನೆಮ್ಮದಿ ಎಂದೆ ನಾ. ನನ್ನ ಮಿತ್ರನೊಂದಿಗೆ.
ಇದೇ ಸಂದರ್ಭದಲ್ಲಿ ನನ್ನ ಮಿತ್ರನಂತಹಾ ಹಲವರಿಗೆ ಇಲ್ಲೊಂದು ಕಿವಿ ಮಾತು.
ಎಲ್ಲಾ ವೃದ್ಧರಿಗೆ ಅಗತ್ಯವಾಗಿ ಬೇಕಾದದ್ದು ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದೇ ಅಲ್ಲ ಬದಲಿಗೆ ಅವರಿಗೆ ಬೇಕಾದದ್ದು ಪ್ರೀತಿ, ವಿಶ್ವಾಸ ಕುಟುಂಬದವರ ಸಾಂಗತ್ಯ, ಸಾಮಿಪ್ಯ. ಅವರ ಮನ ದಾಳದ ಭಾವನೆಗಳನ್ನು ಸಮಾಧಾನದಿಂದ ಆಲಿಸಿ ಅವರ ಸಂತಸದಲ್ಲಿ ನಾವೂ ಭಾಗಿಯಾದರೆ ಇಳಿವಯಸ್ಸಿನಲ್ಲಿ ಹಿರಿಯ ಜೀವಿಗಳು ತಮ್ಮ ಕೊನೆಯ ಕಾಲದಲ್ಲಿ ಸಂತಸದಿAದ ಉಸಿರಾಡಲು ಸಾಧ್ಯ. ಇಲ್ಲವಾದರೆ ನಾವು ಅವರಿಗೆ ಪಂಚಭಕ್ಷö್ಯ ಪರಮಾನ್ನವಿಟ್ಟು ಬಂಗಾರದ ಪಂಜರದಲ್ಲಿಟ್ಟ ಗಿಣಿಯಂತೆ ಸಾಕಿದರೂ, ತಮಗೆ ಅಗತ್ಯವಾದ್ದು ಸಿಗದ ಹಿರಿಯರು ತಮ್ಮ ಒಂಟಿತನಕ್ಕಾಗಿ ಕೊರಗುತ್ತಲೇ ಪ್ರಾಣ ತ್ಯಜಿಸುತ್ತಾರೆ. ಇದರ ಪರಿಣಾಮ . . . . ! ? “ಮಾಡಿದುಣ್ಣೋ ಮಹರಾಯ” ಎಂಬAತೆ ಮುಂದೆ ನಾವು ವೃದ್ದರಾದಾಗ ನಮ್ಮ ಮಕ್ಕಳೂ ನಮಗೆ ಅದೇ ಊಟ ನೀಡುತ್ತಾರೆ, ಆಗ ನಾವು ನೋವು ಪಟ್ಟು ಪ್ರಯೋಜನವಿಲ.್ಲ. ಅದಕ್ಕಾಗಿಯೇ ಮಾನವರಾದ ನಾವು ನಮ್ಮಲ್ಲಿ ಮಾನವತ್ವ ಉಳಿಸಿಕೊಂಡು ಇಂದೇ ಎಚ್ಚೆತ್ತು ಮಾಡಬೇಕಾದ ಕರ್ತವ್ಯಗಳನ್ನು ಶ್ರದ್ದಾ ಸಕ್ತಿಗಳಿಂದ ನಿರ್ವಹಿಸಿದರೆ ಸತ್ಕಾರ್ಯಕ್ಕೆ ಸತ್ಫಲ ಪಡೆಯಲು ಸಾಧ್ಯ ಎಂ¨ ನೀತಿ ಪಾಠ ನೆನಪಿಡಬೇಕಾಗಿದೆ..
Comments
Post a Comment