ಹಿಟ್ಲರ್

ಹಿಟ್ಲರ್ 

ಲೇಖಕರು : ಎಂ  ಆರ್ ವೆಂಕಟರಾಮಯ್ಯ                                            

                               


        

    ಈ ‘ಹಿಟ್ಲರ್’ ಎಂಬ ಪದ ಕೇಳಿದವರಿಗೆ ಅವರವರದೇ ಆದ ನೆನಪುಗಳು ತಟ್ಟನೆ ಬರಬಹುದು. ಇಂದಿನ ಕೆಲವು ಯುವಕರು, ಏ,  ಈ ಹಿಂದೆ ತೆಲುಗು, ಕನ್ನಡ, ಹಿಂದಿ, ಭಾಷೆಗಳಲ್ಲಿ ಫಿಲ್ಮ್ ಬಂದಿತ್ತಲ್ಲಾ ಅದರ ಬಗ್ಗೆ ಇರಬಹುದು ಈ ಲೇಖನ ಎನಿಸಬಹುದು. ೬-೭ ದಶಕಗಳ ಹಿಂದೆ ಜನಿಸಿದವರಿಗೆ ಒಂದ ನೆಯದೋ ೨ ನೆಯದೋ ಮಹಾ ಯುದ್ದ ಆದಾಗ ಆ ಯೂರೋಪ್‌ನಲ್ಲೋ ಎಲ್ಲೋ ರಾಜನಾಗಿದ್ದನಲ್ಲಪ್ಪಾ,  ಅವನ ಬಗ್ಗೆ ಇರಬಹುದು ಈ ಲೇಖನ ಎನಿಸಬಹುದು. ಇತಿಹಾಸ ಓದಿ, ಇಂದೂ ಅದನ್ನು ನೆನಪಿಟ್ಟು ಕೊಂಡಿರುವವರಿಗೆ  ಈ ಹಿಟ್ಲರ್ ಯಾರು ? ಏನಿವನ ಸಾಧನೆ  ? ಎಂ¨ ಬಗ್ಗೆ ಸ್ವಲ್ಪ ಮಾಹಿತಿ ತಿಳಿದಿರಬಹುದು.

    ಒಂದಷ್ಟು ಅಕ್ಷರ ಕಲಿತವರಿಗೆ, ಈ ಹಿಟ್ಲರ್ ಪದ ಕೇಳಿದಾಗ ಏ, ಹಿಟ್ರ‍್ರೋ, ಬಟ್ರ‍್ರೋ ಯಾರೋ ನನಗೆ ಗೊತ್ತಿಲ್ಲ ಹೋಗಯ್ಯ ಎನ್ನಬಹುದು. ಹೀಗೆ,  ಈ ‘ಹಿಟ್ಲರ್’ ಎಂ¨ ಪದ ಒಬ್ಬೊಬ್ಬರಿಗೆ ಒಂದು ಭಾವನೆಯನ್ನು ಮೂಡಿಸಬಹುದು. ಇವೆಲ್ಲಾ ಏನೇ  ಇರಲಿ, ಈತ ಕಾಲವಾಗಿದ್ದು ೩೦\೪\೧೯೪೫ ಅಂದರೆ ೮೦ ವರ್ಷಗಳಾದರೂ ನಾವ್ಯಾಕೆ ಈತನನ್ನು ಇಂದೂ ನೆನಪಿಸಿಕೊಳ್ತೀವಿ  ಎಂಬುದು ನಿಮ್ಮ ಕುತೂಹಲವೇ ! ಇಲ್ಲಿದೆ ಇದಕ್ಕೆ ಉತ್ತರ :      

   ಇವನ ಪೂರ್ಣ ಹೆಸರು ‘ಅಡಾಲ್ಫ್ ಹಿಟ್ಲರ್’. ಹಿಟ್ಲರ್ ಎಂಬುದು ಆಸ್ಟಿçಯನ್ ಮೂಲದ ಉಪನಾಮ. ಅಲೊಯಿನ್ ಹಿಟ್ಲರ್ ಮತ್ತು ಪತ್ನಿ ಕ್ಲಾರಾ ದಂಪತಿಗಳ ನಾಲ್ಕನೆಯ ಪುತ್ರನಾಗಿ ಜನಿಸಿದನು ಈ ಹಿಟ್ಲರ್. ಈತ  ತಂದೆಯೊAದಿಗೆ ಅಷ್ಟೇನೂ  ಮಧುರ ಸಂಬAಧ ಹೊಂದಿರದಿದ್ದರೂ ತಾಯಿಯನ್ನು ಬಹಳ ಪ್ರೀತಿಸಿದ್ದನು.

      ಬಾಲ್ಯದಲೇ ತಾನೊಬ್ಬ ದೊಡ್ಡ ಕಲಾವಿದನಾಗಬೇಕೆಂಬ ಆಸೆ ಹೊಂದಿದ್ದ ಹಿಟ್ಲರ್  ವಿದ್ಯಾಬ್ಯಾಸದಲ್ಲಿ ಹೆಚ್ಚು ಆಸಕ್ತಿ ತೋರಲಿಲ್ಲ. ಇದರಿಂದ ತಂದೆಯ ಕೋಪಕ್ಕೆ  ಇವನು ಗುರಿಯಾಗಬೇಕಾಯಿತ.

      ೧೯೧೦- ೧೪ ರ ನಡುವಿನ ಅವಧಿಯಲ್ಲಿ ಹಿಟ್ಲರ್ ಕಲೆಯನ್ನೇ ಉದ್ಯೋಗ ಮಾಡಿಕೊಂಡು ಮೊದಲಿಗೆ  ಪೋಸ್ಟ್ ಕಾರ್ಡ್ಗಳು ಹಾಗೂ ಜಾಹೀರಾತುಗಳ ಮೇಲೆ ತನ್ನ ಕಲಾ ನೈಪುಣ್ಯವನ್ನು  ಪ್ರದರ್ಶಿಸಿದನು. ಮುಂದೆ ವಿಯನ್ನಾದಲ್ಲಿನ ಫೈನ್ ಆರ್ಟ್ಸ್  ಅಕಾಡೆಮಿಯ ಜನರಲ್ ಸ್ಕೂ;ಲ್ ಆಫ್ ಪೈಂಟಿAಗ್‌ನಲ್ಲಿ ತರಬೇತಿ ಪಡೆದನು ಆದರೂ  ಚಿತ್ರಕಲೆಯಲ್ಲಿ ಮುಂದುವರಿಯಲಾಗದ ಕಾರಣ ವಾಕ್ ಕೌಶಲ್ಯದಲ್ಲಿ ಮುಂದಾಗಿ ಪ್ರಭಾವಿ ವಾಗ್ಮೀ, ಆರೇಟರ್ ಎನಿಸಿಕೊಂಡನು ಸಹಜವಾಗಿಯೇ ಪ್ರಭಾವಿ ಭಾಷಣಕಾರ,, ಇತರ ಸಮಕಾಲೀನ ಜರ್ಮನ್ ರಾಜಕಾರಣಿಗಳಿಗಿಂತಾ ಹೆಚ್ಚಾಗಿ ತನ್ನ ಫೋರ್ಸ್ಫುಲ್ ಮಾತುಗಳಿಂದ ಪ್ರೇಕ್ಷಕರನ್ನು ಬಹು ಬೇಗ ಉದ್ವೇಗಕ್ಕೆ ಒಳಗಾಗಿಸಿ ಕುಪಿತರಾಗಿಸಿ ಇವನ ಮಾತಿನಂತೆ ನಡೆಯುವ ಹಾಗೆ ಪ್ರೇಕ್ಷರರಿಗೆ ಪ್ರಚೋದನೆ ಉಂಟಾಗುವAತೆ ಮಾತಾಡುತ್ತಿದ್ದವನು ಈ ಹಿಟ್ಲರ್. ಬಹುಶಃ ಈ ಗುಣದಿಂದಾಗಿಯೇ ಇರಬೇಕು ‘ನಾಜಿ ಪಕ್ಷದೊಳಗಿನ ಆರಂಭಿಕ ಪ್ರಭಾವೀ ಪ್ರಾಭಲ್ಯ ಆಟಗಾರ’ ಎಂಬ ಪ್ರೊ.. ಕೆರ್ಶಾರವರಿಂದ ಹೊಗಳಿಕೆಗೆ ಪಾತ್ರನಾದನು. ಇದಕ್ಕೆಲ್ಲಾ ಕಾರಣವಾಗಿದ್ದು ಇವನೊಬ್ಬ ವೊರೇಶಿಯಸ್ ರೀಡರ್ ಆಗಿದ್ದ. ಹೀಗೆ ಓದಿದ್ದನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಂಡು ಅದನ್ನು ಸಮಯೋಚಿತವಾಗಿ ಬಳಸುವ ಕಲೆಯನ್ನು ಈತ ಕಲಿತಿದ್ದ ಅತ್ಯುತ್ತಮ ಸ್ಮರಣ ಶಕ್ತಿಯನ್ನು ಹೊಂದಿದ್ದ.  ತನ್ನ ಮಾತಿನ ವಾಕ್ಜರಿಯಿಂದ ತನ್ನ ಸುತ್ತಲಿರುವರನ್ನು  ಬಹು ಬೇಗ ತನ್ನೆಡೆಗೆ  ಸೆಳೆಯುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದನು.

    ಮೊದಲನೆಯ ವಿಶ್ವ ಯುದ್ದವಾದಾಗ ಕೇವಲ ೨೦ ರ ಹರೆಯದಲ್ಲಿದ್ದ ಈ  ಹಿಟ್ಲರ್  ಜರ್ಮನಿಯ ಬವೇರಿಯನ್ ಸೇನೆಯನ್ನು ಸೇರಿದನು. ಕೆಲ ಕಾಲದಲ್ಲಿಯೇ “ನಾನು ಜರ್ಮನಿಯನ್ನು ಉದ್ಧಾರಮಾಡಿ ಅದನ್ನು ಶ್ರೇಷ್ಠ ರಾಷ್ಟçವನ್ನಾಗಿ ಮಾಡುತ್ತೇನೆ” ಎಂಬ ಪಣತೊಟ್ಟು ಅದನ್ನು ಘೋಷಿಸಿದ್ದನು. ಈ ಉದ್ದೇಶ್ಯವನ್ನು ಸಫಲಗೊಳಿಸಲು ಜರ್ಮನಿಯ ಭವಿಷ್ಯದ ಸಂಪೂರ್ಣ ಜವಾಬ್ಧಾರಿಯನ್ನು ತನ್ನ ಹೆಗಲ ಮೇಲೆ ಹೊತ್ತನು. ‘ನಾಜಿ’ (ನೇಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕPðÀಸ್) ಪಕ್ಷದ ನಾಯಕನಾದನು  

   ಬಲಾತ್ಕಾರದಿಂದ ಅಧಿಕಾರ ಪಡೆಯುವುದು ಕಷ್ಟವೆಂದು ಅರಿವಾದಾಗ ಈತ ಮೊದಲು ಡೆಮೋಕ್ರೇಟಿಕ್ ಮೂಲಕ ಅಧಿಕಾರಕ್ಕೆ ಬಂದು ನಂತರದಲ್ಲಿ ತನ್ನೆಲ್ಲ ವಿರೋಧಿಗಳನ್ನು ನಿರ್ಮೂಲಮಾಡಿ ವಿಶ್ವದ ಸರ್ವಾಧಿಕಾರಿಯಾUಬೇಕೆಂಬ ಆಸೆಯನ್ನು ಬೆಳೆಸಿಕೊಂಡನು.

    ಅತ್ಯಾಲ್ಪಾವಧಿಯಲ್ಲೇ ರಾಷ್ಟಿçÃಯ ಸಮಾಜವಾದದ ಸಂಪೂರ್ಣ ಅಧಿಕಾರ ಹಾಗೂ ನಿರಂಕುಶ  ಪ್ರಭುತ್ವಗಳ ಬಲದಿಂದ ಏಕಪಕ್ಷೀಯ ಸರ್ವಾಧಿಕಾರವನ್ನು ಸ್ಥಾಪಿಸಿದನು 

     ನಂತರದ ಅವಧಿಯಲ್ಲಿ ಈ ಹಿಟ್ಲರ್ ಲಕ್ಷಾಂತರ ಯಹೂದಿಗಳ ಮಾರಣ ಹೋಮ, ನರಮೇಧಕ್ಕೆ ಕಾರಣನಾದ ಎಂಬ ಕುಖ್ಯಾತಿಯನ್ನು ಪಡೆದನು.  

     ಯುದ್ಧ ಸಮಯದಲ್ಲಿ ಇವನು ಪ್ರದರ್ಶಿಸಿದ ಧೈರ್ಯ ಶೌಂiÀiðಗಳಿಗಾಗಿ ಇವನಿಗೆ ಹಲವು ಅವಾರ್ಡ್ಗಳು ದೊರೆತವ.ಈ ಪೈಕಿ  ಬಹಳ ಗೌರವಯುತವಾದ ‘ಐರನ್ ಕ್ರಾಸ್ ಫಸ್ಟ್ ಕ್ಲಾಸ್’  ಸೇರಿದೆ.

    ಇವನ ಗುಣ ಸ್ವಭಾವ ಕಾರ್ಯವೈಖರಿಯಿಂದ ಹಿಟ್ಲರ್ ಎಂದರೆ “ಸರ್ವಾಧಿಕಾರಿ, ನಿರಂಕುಶಮತಿ, ಏಕಾಧಿಪತಿ, ಪ್ರಜಾಪೀಡಕ, ದಬಾವಣೆ, ಕಟ್ಟಪ್ಪಣೆಗಾರ, ಕ್ರೂರಿ,  ಬಲು ಶಿಸ್ತಿನ ಮನುಷ್ಯ,  ಅಪ್ರೆಸರ್, ಡಿಕ್ಟೇಟರ್ ಆಟೋಕ್ರೇಟ್, ಡೆಸ್ಪಾಟ್, ಅಥಾರಿಟೇರಿಯನ್,  ಣಥಿಡಿಚಿಟಿಣ   ಎಂಬ  ಬಿರುದುಗಳನ್ನು ಜನರಿಂದ ಪಡೆದ 

    ೨೦ ನೆಯ ಶತಮಾನದ ವಿಶ್ವದ ಸಮಸ್ತ ನಾಯಕರುಗಳ ಪೈಕಿ ಅಡಾಲ್ಫ್ ಹಿಟ್ಲರ್ ಬಹಳ ನಟೋರಿಯಸ್ ಎಂಬು ದಾಗಿ ಜನ ಇಂದೂ ಸ್ಮರಿಸುವಂತಾದ. ಆದರೂ ಹಿಟ್ಲರ್‌ನನ್ನು ಲೆಕ್ಕವಿಲ್ಲದಷ್ಟು ಪುಸ್ತಕಗಳು, ಟಿ ವಿ ಕಾರ್ಯಕ್ರಮಗಳು, ಚಲನಚಿತ್ರಗಳಲ್ಲಿ ಸ್ಮರಿಸಲಾಗಿದೆ.

  ಉತ್ತರ ಭಾರತದ ಒಂದು ಐಸ್ಕಿçÃಮ್ ಬ್ರಾಂಡ್‌ಗೆ ‘ಹಿಟ್ಲರ್’ ಎಂಬ ಹೆಸರಿದೆ, ಮುಂಬೈನ ಒಂದು ಕೇಫ್ ಹಾಗೂ ಅಹಮದಾಬಾದ್‌ನ ವಸ್ತçದ ಮಳಿಗೆಗೆ ಹಿಟ್ಲರ್ ಹೆಸರಿದೆ. ಹೀಗೇನೇ ಅಮೆಜಾನ್, ಫ್ಲಿಪ್‌ಕಾರ್ಟ್ನಂತಹಾ ಇ ಕಾಮರ್ಸ್ನಲ್ಲಿನ ಹಲವು ಪದಾರ್ಥಗಳು ಉದಾಹರಣೆಗಾಗಿ, ಕಾಫಿ ಮಗ್ಸ್,  ಸ್ವಸ್ತಿಕ್ ಲ್ಯಾಪ್ ಟಾಪ್ ಕೇಸಿಂಗ್ಸ್ ಮೊಟಾರ್ ಸೈಕಲ್ಸ್ ಹೆಲ್ಮೆಟ್ಸ್, ಟಿ ಶಟ್ಸ್ ಸ್ಪೆöÊಕ್ ಬಸ್ಟರ್ಸ್, ಐ ಫೋನ್ ಕವರ್ಸ್ ಮೊದಲಾದ ವಸ್ತುಗಳೆಲ್ಲಾ ಹಿಟ್ಲರ್ ಹೆಸರಿನ ಬ್ರಾಂಡ್ ಮೇಲೆ ಮಾರಾಟವಾಗುತ್ತಿವೆ ಎಂದರೆ ಹಿಟ್ಲರ್ ಹೆಸರಿಗೆ ಇಂದೂ ಇಷ್ಟೊಂದು ಬೇಡಿಕೆ, ಡಿಮ್ಯಾಂಡ್ ಇದೆ ಎಂದ ಹಾಗಾಯಿತಲ್ಲವೆ !

    ಎಂದೋ ಸತ್ತ ಹಿಟ್ಲರ್‌ನನ್ನ್ನು ಇಂದೂ ಏಕೆ ನೆನಪಿಸಿಕೊಳ್ತೀವಿ ಅಂದರೆ. ಹಿಟ್ಲರ್‌ನ ಗುಣ ಸ್ವಭಾವಗಳು, ಅವನ ಮನದಲ್ಲಿ ಬೇರೂರಿದ್ದ ಮಹದಾಕಾಂಕ್ಷೆಯೋ ಆಸೆ ದುರಾಸೆಗಳೋ ಹೆಸರು ಯಾವುದಾದರೂ ಸರಿಯೇ,  ವಿಶ್ವದಲ್ಲಿ ಅವನೆಷ್ಟು ಬೆಳಗಿ ತನ್ನ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದನೋ ಹಾಗೇ ನಾವೂ ಅವನಂತಾಗಬೇಕು ಎಂದು ಬಯಸಿ ಕಾರ್ಯೋನ್ಮುಖರಾಗಿರುವ ಮನಸ್ಸಿನ ಅತಿನ ಹೆಚ್ಚಿನÀ ಜನ ಇಂದೂ ನಮ್ಮ ನಡುವೆಯೇ ಇರುವ ಕಾರಣ. ಇವನ ಹೆಸರು, ರೂಪ ನಮಗೆ ಮೇಲಿಂದ ಮೇಲೆ ನೆನಪಿಗೆ ಬರುತ್ತಲೇ ಇರುತ್ತದೆ.

     ಹೀಗಂದಾಗ  ನಾವ್ಯಾಕ್ರಿ ಹಿಟ್ಲರ್‌ನಂತಾಗೋಣ ? ಎಂಬ ಮಾತು ಕೆಲವರ ಬಾಯಿಂದ ಹೊರ ಬಂದರೂ ಇವರ  ಮನದ ಯೋಚನಾ ಯೋಜನೆಗಳು ಇವನ್ನು ಜಾರಿ ಮಾಡುತ್ತಿರುವ ರೀತಿ ನೀತಿಗಳನ್ನು  ಕಂಡೇ ಹೇಳ ಬಹುದು ಇªರು ಈ ಶತಮಾನದ  ಹಿಟ್ಲರ್, ಅವನದೇ ಮನಸ್ಥಿತಿ ಇವರದು ಎಂದು. 

              ಇದಕ್ಕೆ ಸಾಕ್ಷಿಯಾಗಿ ಇಲ್ಲಿವೆ ಕೆಲವು ಉದಾಹರಣೆಗಳು : 

    ಮೊದಲಿಗೆ ನಮ್ಮ ಮನೆಗಳ ಸದಸ್ಯರತ್ತಲೇ ನೋಡೋಣ. ಇಲ್ಲಿ ಯಜಮಾನನೋ ಯಜಮಾನತಿಯೋ ಯಾರೋ ಒಬ್ಬರು ಕುಟುಂಬದ ಆಗು ಹೋಗುಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದಾಗ ವಿಷಯವನ್ನು ಸಂ¨AಧಿಸಿÀದವರೆಲ್ಲರೂ ಒಟ್ಟಾಗಿ ಕೂತು ಅದರ ಸಾಧಕ ಬಾಧಕUಳನ್ನು ಕೂಲಂಕಶವಾಗಿ ಚರ್ಚಿಸಿ ಸಾದ್ಯವಾದಷ್ಟೂ ಒಮ್ಮತದ ನಿರ್ಧಾರ ಕೈಗೊಳ್ಳುವುದು ಸಹಜ ಪ್ರಕ್ರಿಯೆಯಾಗಿರುತ್ತದೆ, ಆದರೆ  ಹಲವು ಕುಟುಂಬUಳಲ್ಲಿ ಹೀಗಾಗುವುದಿಲ್ಲ. ಅಪ್ಪನೋಅಮ್ಮನೋ ಮಗ ಮಗಳು ಯಾರೋ ಒಬ್ಬರು ತಮಗೆ ತೋಚಿದಂತೆ ನಿರ್ಧರಿಸಿ ‘ಇದು ಹೀಗೇ ಆಗಬೇಕು’ ಎನ್ನುವುದು., ಇದಕ್ಕೆ ಯಾರಾದರೂ ಆಕ್ಷೇಪಣೆ ಎತ್ತಿದಾಗ, ಉಹೂ, ಅದೇನೂ ಆಗದು, ನಾ ಹೇಳಿದಂತೆ ಮಾಡಿ ಎನ್ನುವವರಿಲ್ಲವೇ ? ಇದು ಇವರ ಸರ್ವಾಧಿಕಾರಿ ಧೋರಣೆ, ನಿರಂಕುಶ, ಏಕಾಧಿಪತಿ, ದಬಾವಣೆ, ಮನಸ್ಥಿತಿ ಸೂಚಿಸುವುದಿಲ್ಲವೇ ? ಈಗ ಹೇಳಿ, ಈ ವರ್ಗದವರನ್ನು ಹಿಟ್ಲರ್ ಸಂತತಿ ಎಂದೋ ಅವನ ಶಿಷ್ಯರು ಎಂದೇಕೆ ಎನಬಾರದು ?  

       ಮನೆಯಲ್ಲಿ ಪತಿಯ ಮೇಲೆ ಜೋರು ಮಾಡುವ ಪತ್ನಿ ಇದ್ದರೆ  ಈಕೆಗೂ ಈ ಹಿಟ್ಲರ್‌ನ ಹೆಸರು ಅಂಟಿಕೊAಡಿರುತ್ತದೆ ಎಂದರೆ ಅಚ್ಚರಿಯೇ !

     ಇನ್ನು ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ  ತಾಣಗಳಲ್ಲೂ ಸಾಮೂಹಿಕ ಚರ್ಚೆ, ಹೊಣೆಗಾರಿಕೆ ಇರುವೆಡೆಗಳಲ್ಲೂ ‘ಬಾಯಿ ಇದ್ದವನು ¨ದುಕಿದ’ ಎಂಬ ಗಾದೆಯಂತೆ ಬಾಯಿ ಜೋರಿದ್ದವರೋ, ಅಧಿಕಾರ ಬಲ, ಧನ ಬಲ, ತೋಳ್ ಬಲ, ಜಾತಿ ಬಲ, ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಯ ಬಲ, ಹೀಗೆ ಯಾವುದೋ ಒಂದೆರಡg ಬಲ ಹೊಂದಿರುವವರು  ವಿಷಯಕ್ಕೆ ಸಂಬAಧಿಸಿದ ಇತರರ ಧ್ವÀನಿಯನ್ನು ಅದುಮಿಯೋ ನಿರ್ಲಕ್ಷಿಸಿಯೋ ತಾನೇ ಅಂತಿಮ ನಿರ್ಧಾರ ಕೈಗೊಂಡು ‘ಕೆಲಸ ನಾ ಹೇಳಿದ ಹಾಗೇ ನಡೆಯಬೇಕು’ ಎಂದು ಆಜ್ಞೆ ಮಾಡುತ್ತಿರುವ ಜನ  ಹಿಟ್ಲರ್‌ನನ್ನು ನೆನಪಿಸುತ್ತಿಲ್ಲವೇ ?  

     ಈÀ ತಾಣಗಳಲ್ಲಿ ಕಾರ್ಯಗಳ ಸುಗಮ ನಿರ್ವಹಣೆಗೆ ಎಂದು ಸೂಕ್ತ ನೀತಿ ನಿಯಮ ಕಾನೂನು ವಿಧಿ ವಿಧಾನಗಳನ್ನು ರಚಿಸಿ ಇದರಂತೆಯೇ ನಡೆಸಬೇಕು ಕಾರ್ಯಗಳು ಎಂಬ ಸೂಚನೆ ನೀಡಿದ್ದರೂÉ ಇವನ್ನು ಪಾಲಿಸದೆ, ತಮ್ಮ ಅನುಕೂಲಕ್ಕೆ ತಕ್ಕಂತೆ  ಕೆಲಸ ಮಾಡಿಕೊಂಡು,   ತಮ್ಮೀ ಚಾಕಚಕ್ಯತೆ ಜಾಣ್ಮೆ  ಚತುರತೆ ಬುದ್ದಿವಂತಿಕೆಯನ್ನು . ಇತರರಿಗೂ ಕಲಿಸುತ್ತಿರುವ ಜನ,  “ನನ್ನ ಮನದಿಚ್ಚೆಯಂತೆ ನೀನು ಕೆಲಸ ಮಾಡು, ನಾನೂ ಬದುಕತೀನಿ, ನೀನೂ ಬದುಕು, ಲಿವ್ ಅಂಡ್ ಲೆಟ್ ಲಿವ್’ ಎಂಬ ಸೂತ್ರವನ್ನು  ಪಾಲಿಸುತ್ತಿರುವ ಜನ, ಹಿಟ್ಲರ್‌ನನ್ನು ನೆನಪಿಸುತ್ತಿಲ್ಲವೇ ! 

   ತಮ್ಮ ವಿರೋಧಿಗಳನ್ನು ಹಾಗೋ, ಹೀಗೋ, ಹ್ಯಾಗೋ ಸದೆ ಬಡಿದು, ಅವರಿಗೆ ಮುಕ್ತಿ ಕಾಣಿಸಿ ತಾವು ವಿರೋಧ ಮುಕ್ತರು, ಅಜಾತಶತ್ರುಗಳು ಎಂದು ಬಿಂಬಿಸಿಕೊAಡು ಆತ್ಮ ವಂಚನೆ ಮಾಡಿಕೊಂಡು ಕಾರ್ಯ ನಿರತರಾಗಿರುವ ಜನ ಹಿಟ್ಲರ್‌ನನ್ನು ನೆನಪಿಸುತ್ತಿಲ್ಲವೇ ! 

     ಹೀಗೆ ಹಲವು ರೀತಿಗಳಲ್ಲಿ ಹಿಟ್ಲರ್‌ನನ್ನು ಹೆಜ್ಜೆ ಹೆಜ್ಜೆಗೂ ನೆನಪಿಸುಸುತ್ತಿರುವ ಇವರಿಂದ  ಜನಕ್ಕೆ ಬಿಡುಗಡೆ ಇಲ್ಲವೇ ? ಎಂಬ ಹತಾಶೆ ಬೇಡ.  ಸಮಸ್ಯೆಗೊಂದು ಪರಿಹಾರವಿದ್ದೇ ಇರುತ್ತದೆ ಅಲ್ವೇ ? 

   .ಪುರಾಣ ಕಾಲದ ನಹುಷನ ಪ್ರಸಂಗ ಕೇಳಿಲ್ಲವೇ ? ಏನಾಯ್ತು ಅವನಿಗೆ !   ಬಹಳ ಶ್ರಮಪಟ್ಟು ಇಂದ್ರ ಪಟ್ಟ ಪಡೆದ. ತಾನು ಇಂದ್ರನಾದ ಮೇಲೆ ಇಂದ್ರನ ರಾಣಿ ತನ್ನವಳಾಗಬೇಡವೇ ! ಎನಿಸಿತು  ಇವನಿಗೆ.  ಕೂಡಲೇ  ಇಂದ್ರಾಣಿ ಇದ್ದ ಅರಮನೆ ಸೇರಲು ಸಡಗರ ಪಟ್ಟು ಸಪ್ತ ಋಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಧಿಮಾಕಿನಿಂದ ಕುಳಿತ ನಹುಷ,  ವಿಳಂಬವಾಗುತ್ತಿದೆ. ಬೇಗ ನಡೆಯಿರಿ ಎಂದವನೇ ಪಲ್ಲಕ್ಕಿಯನ್ನು ಹೊತ್ತು ನಡೆಯುತ್ತಿದ್ದ  ಅಗಸ್ತö್ಯರನ್ನು ಕಾಲಿನಿಂದ ಒದ್ದ, ಈ ಅಕಾರ್ಯದೊಂದಿಗೆ ಇವನಿಗಿದ್ದ ದೈವ ಕೃಪೆ ಮುಗಿಯುತ್ತಾ  ಬಂದಿತ್ತು.  ಅವಮಾನಿತ ಋಷಿ ಅಗಸ್ತö್ಯರು ‘ನೀ  ಸರ್ಪವಾಗು’  ಎಂದು ನಹುಷನನ್ನು ಶಪಿಸಿದರು. ಕೂಡಲೇ  ಪಲ್ಲಕ್ಕಿಯಲ್ಲಿ ಆಸೀನನಾಗಿದ್ದ ನಹುಷ ಹೆಬ್ಬಾವಾಗಿ ನೆಲಕ್ಕೆ ಬಿದ್ದ. 

   ಪ್ರಕೃತಿಯಲ್ಲಿನ  ಪ್ರತಿ ಆಗು ಹೋಗುವಿಕೆಗೂ ಆದಿ ಇದ್ದಂತೆ ಅಂತ್ಯ, ಜನನವಿದ್ದ ಮೇಲೆ ಮರಣ ಇರುವುದು ನಿಶ್ಚಿತ. ಲೋಕದಲ್ಕಿ ಧರ್ಮಕ್ಕೆ ಚ್ಯುತಿ ಬಂದಾಗ, ಅಧರ್ಮ ಹೆಚ್ಚಿ ಧರ್ಮವನ್ನು ಮೆಟ್ಟಿ  ನಿಂತಾಗ \ ಅವನತಿ ಹೊಂದಿ ಅಧರ್ಮ ವೃದ್ಧಿಯಾದಾಗ  ಧರ್ಮ ಸಂಸ್ಥಾಪನೆ ಆಗಬೇಕಲ್ಲವೇ ! “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನ  ಮಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಮ್ (ಭ ಗೀ ೪.೭ ) ಧರ್ಮ ಅವನತಿ ಹೊಂದಿ ಅಧರ್ಮ ವೃದ್ಧಿಯಾದಾಗ ಧರ್ಮ ಸಂಸ್ಥಾಪನೆÉಗಾಗಿ ನಾನು ಅವತರಿಸುತ್ತೇನೆ ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ  ನೀಡಿರುವ ಭರವಸೆಯೇ ಸಜ್ಜನರಿಗೆ ಬೇಗ ಶ್ರೀರಕ್ಷೆಯಾಗಲಿ ಎಂದು ಆಶಿಸೋಣ.

                                 ********************************************

Comments