ನಿತ್ಯ ಸತ್ಯ
ಲೇಖಕರು :ಎಂ ಆರ್ ವೆಂಕಟರಾಮಯ್ಯ
“ವೇದಗಳು ಸುಳ್ಳಾಗಬಹುದು, ಆದರೆ ಗಾದೆ ಸುಳ್ಳಾಗದು” ಎಂಬ ಮಾತು ಬಳಕೆಯಲ್ಲಿದೆ. ಇದ್ಯಾಕೆ ಹೀಗಂದ್ರಿ ? ವೇದಗಳು ಅಪೌರುಷೇಯ, ಅದು ಪರಮಾತ್ಮನ ಮುಖವಾಣಿ, ಪರಮಾತ್ಮ ನಿರುವುದು ಅÀದೆಷ್ಟು ಸತ್ಯವೋ ಅಷ್ಟೇ ಸತ್ಯ ವೇದಗಳಿರುವುದು. ವಸ್ತು ಸ್ಥಿತಿ ಹೀಗಿರುವಾಗ ವೇದಗಳು ಸುಳ್ಳಾಗ ಬಹುದೇ ? ಎಂದು ವಾದಮಾಡಬಹುದು ಕೆಲವರು. ವೇದಗಳು ಸುಳ್ಳಾಗುತ್ತದೆ ಎಂದಿಲ್ಲ. ಬದಲಿಗೆ ಸುಳ್ಳಾಗಬಹುದೇನೋ, ಅಕಸ್ಮಾತ್, ಎಂ¨ ಸಂಶಯ ಭಾವನೆ ಇಲ್ಲಿ ವ್ಯಕ್ತ[ಪಡಿಸಲಾಗಿದೆಯಷ್ಟೆ. ಆದರೆ ಗಾದೆಯ ವಿಚಾರ ಬೇರೆ. ಗಾದೆಗಳು ಎಂಬುದು ಅನುಭವಿಗಳ ಮಾತಾಗಿದೆ. ಹಿಂದಿನವರು ತಮ್ಮ ಧೀರ್ಘಕಾಲದ ಜೀವನಾನುಭವದಿಂದ ಕಲಿತದ್ದು, ಕಂಡುಕೊಂಡಿದ್ದು, ಅವರಿವರ ಬಾಯಿಂದ ಹೊರಬಿದ್ದ ಅನುಭವದ ಮಾತುಗಳೇ ಈ ಗಾದೆಗಳು ಎನಿಸಿಕೊಂಡಿವೆ. ಬಹಳಷ್ಟು ಗಾದೆ ಮಾತುಗಳು ಬಹು ಕಾಲ ದಿಂದಲೂ ಸತ್ಯ ಎಂದು ಕಂಡುಬಂದು ಬಳಕೆಯಲ್ಲಿ ಇರುವ ಕಾರಣ, ಎಲ್ಲ ಕಾಲಗಳಲ್ಲೂ ಈ ಗಾದೆ ನುಡಿಗಳು ಸತ್ಯ ನುಡಿಯಗಿ, ನಿತ್ಯ ನುಡಿಯಾಗೇ ಬಳಕೆಯಲ್ಲಿ ಮುಂದುವರಿಯುತ್ತಿರುತ್ತವೆ. ಈ ಹಿನ್ನೆಲೆ ಯಲ್ಲಿ ಪ್ರಸಕ್ತ ಲೇಖನಕ್ಕೆ “ನಿತ್ಯ ಸತ್ಯ” ಎಂಬ ಶೀರ್ಷಿಕೆಯನ್ನು ಬಳಸಲಾಗಿದೆ. ಏನಿದೆ ಅಂತಹಾ ನಿತ್ಯ ಸತ್ಯ ಈ ಲೇಖನದಲ್ಲಿ ಎಂಬ ಕುತೂಃಲವೇ ! ಇಲ್ಲಿ ಬಿಚ್ಚಿಡಲಾಗಿದೆ ಈ ನಿತ್ಯ ಸತ್ಯವನ್ನು :
“ಸತ್ಯವಂತರಿಗಿದು ಕಾಲವಲ್ಲ, (2) ದುಷ್ಟ ಜನರಿಗೆ ಸುಭಿಕ್ಷ, ಪರಮ ಪಾಪಿಗಳಿಗೆ ಸುಭಿಕ್ಷ ಕಾಲ, (3) ಉಪಕಾರ ಮಾಡಿದರೆ ಅಪಕರಿಸುವ ಕಾಲ, (4)ಪತಿ ಸುತರು ಎಂಬುವರ ನಂಬಲರಿಯದ ಕಾಲ, (5) ಧರ್ಮವ ಮಾಡುವಗೆ ನಿರ್ಮೂಲವಾಗುವ ಕಾಲ, (6)ಕರ್ಮಿ ಪಾತಕರಿಗೆ ಬಹು ಸೌಖ್ಯ ಕಾಲ” ಎಂದಿದ್ದಾರೆ ದಾಸ ಶ್ರೇಷ್ಠ ಪುರಂದರ ದಾಸರು.
“ದಾಸರೆಂದರೆ ಪುರಂದರ ದಾಸರಯ್ಯ, ವಾಸುದೇವ ಕೃಷ್ಣನ್ನ ಸೂಸಿ ಪೂಜಿ ಸುವ ದಾಸರೆಂದರೆ ಪುರಂದರ ದಾಸರಯ್ಯ ! ಕರ್ನಾಟಕ ಸಂಗೀತಕ್ಕೆ, ದಾಸ ಸಾಹಿತ್ಯಕ್ಕೆ ಪುರಂದರ ದಾಸರ ಕೊಡುಗೆ ಅಪಾರ. ಆದ್ದರಿಂದಲೇ ಇವರು ‘ವಾಗ್ಗೇಯಕಾರ’ ‘ಕರ್ನಾಟಕ ಸಂಗೀತದ ಪಿತಾಮಹ” ಎಂಬೆಲ್ಲಾ ಬಿರುದುಗಳನ್ನು ಪಡೆದರು. ಗುರು ವ್ಯಾಸರಾಯರಿಂದಲೇ ಹೊಗಳಿಕೆ ಪಡೆದವರು ಈ ಪುರಂದರ ದಾಸರು.
ದಾಸರ ಸಾಮಾಜಿಕ ಪ್ರಜ್ಞೆ ಅದ್ಭುತವಾದದ್ದು. ಸಮಾಜದಲ್ಲಿ ಕಾಣಿಸಿದ ಲೋಪ ದೋಷಗಳನ್ನು ಕಟುವಾಗಿ ಠೀಕಿಸಿ ಬುದ್ಧಿ ಹೇಳಿ ಜನರ ನಡತೆಯನ್ನು ಠೀಕಿಸಿ, ತಿದ್ದುವ ಕೆಲಸವನ್ನು ತಮ್ಮ ರಚನೆಗಳಲ್ಲಿ ಮಾಡಿದ್ದಾರೆ. ಸುಂದರವಾದ ಪದ ಪ್ರಯೋಗ, ಆಕರ್ಷಕ ಶೈಲಿ. ಮಾಧುರ್ಯ, ಸುಕುಮಾರತೆ ಮೊದಲಾದ ಗುಣಗಳು, ಹಲವು ಅಲಂಕಾರಗಳು, ಅನುಭವ ಲೋಕೋಕ್ತಿಗಳು ಇವರ ಪದ್ಯಗಳಲ್ಲಿ ಕಾಣಸಿಗುತ್ತವೆ. ಪದ್ಯಗಳ ಮುಖ್ಯ ಗುರಿಯು ಭಕ್ತಿ ಪ್ರಧಾನವಾದರೂ, ನೀತಿ ಭೋದೆ, ಸಮಾಜದಲ್ಲಿ ಕಂಡು ಬರುತ್ತಿರುವ ಡಂಭಾಚಾರ, ದುರಾಚಾರ, ಹಲವು ಲೋಪ, ದೋಷಗಳನ್ನು ತಿದ್ದಿ ಜನರನ್ನು ಸನ್ಮಾರ್ಗಕ್ಕೆ ತರುವ ಪ್ರಯತ್ನ ಇವರ ರಚನೆಗಳಲ್ಲಿವೆ
ಕ್ರಿ ಶ 1484- 1564 ರ ಅವಧಿಯ ನಡುವೆ ಬಾಳಿ ಬದುಕಿದ್ದ ಈ ದಾಸರು ನಮ್ಮೆಲ್ಲರಿಂದ ದೂರವಾಗಿ ಇಂದಿಗೆ ಸುಮಾರು 457 ವರ್ಷಗಳು ಕಳೆದಿವೆ. ಇಷ್ಟು ಸುಧೀರ್ಘ ಕಾಲದ ಹಿಂದೆ ಇವರಾಡಿದ ಮಾತು, ಅದೇ “ಸತ್ಯವಂತರಿಗಿದು ಕಾಲವಲ್ಲ” ಎಂಬುದು ಅಂದು ಸಮಾಜದಲ್ಲಿ ಮಾತ್ರ ಇದ್ದಿದ್ದೇ ಅಲ್ಲದೆ ಇಂದೂ ಮುಂದುವರಿದು ಚಾಲ್ತಿಯಲ್ಲಿದೆ, ಭವಿಷ್ಯತ್ ಕಾಲದಲ್ಲೂ ಈ ನುಡಿ ಹೀಗೇ ಮುಂದುವರಿಯಬಹುದೇನೋ ಎಂದರೆ ಮಾತು ಉತ್ಪ್ರೇಕ್ಷೆ ಎನಿಸದು. ಇದೇಕೆ ಹೀಗಾಗಿದೆ ? ಎಂದರೆ ಕಾಲ ಮುಂದೋಡಿರಬಹುದು. ಆದರೆ ಬಹಳಷ್ಟು ಮನುಷ್ಯರ ಮೂಲ ಗುಣ, ಸ್ವಭಾವಗಳು ಮಾತ್ರ ಅಂದು ಹೇಗಿತ್ತೋ ಇಂದೂ ಬದಲಾಗದೆ ಹಾಗೇ ಇದೆ. ಕಲಿಕೆ ವಿಷಯದಲ್ಲಿ ಅಂದಿಗಿAತಾ ಇಂದಿನ ಮಾನವ ಹೆಚ್ಚು ವಿದ್ಯಾವಂತನಾಗಿದ್ದಾನೆ, ಸಂಸ್ಕಾರವಂತನಾಗಿದ್ದಾನೆ, ನಯ ನಾಜೂಕುಗಳನ್ನು ಕಲಿತಿದ್ದಾನೆ, ಬಾಹ್ಯಾಕಾಶದತ್ತ ದಾಪುಗಾಲು ಹಾಕುತ್ತಿದ್ದಾನೆ, ಹೆಚ್ಚು ನಾಗರಿಕ ಎನಿಸಿಕೊಂಡಿದ್ದಾನೆ ಎಂಬೆಲ್ಲಾ ಪ್ರಶಂಸೆಗಳು ಈ ವರ್ಗದವರಿಗೆ ನೀಡಿದ್ದರೂ, ಇವರ ಪೈಕಿ ಬಹು ಜನರಲ್ಲಿ ಹುದುಗಿರುವ ಮೂಲ ಗುಣ, ಅಂದರೆ, ಅಹಂ, ಎಲ್ಲವೂ ನಾನೇ, ನನ್ನದೇ ನನಗಾಗೇ, ಎಂ¨s ಸ್ವಾರ್ಥ, ಆಸೆ, ದುರಾಸೆ ಮೋಸ ವಂಚನಗಳು ಮಾತ್ರ ಅಂದಿಗಿಂತಾ ಇಂದು ಹೆಚ್ಚಾಗೇ ಬೆಳೆಯುತ್ತಿರುವುದರಿಂದ ಇವನು ಅಂದಿಗಿAತಲೂ ಇಂದು ಬದಲಾಗಿಲ್ಲ ಎನ್ನಬಹುದು. ಈ ಮೂಲ ಕಾರಣಕ್ಕಾಗಿಯೇ “ಸತ್ಯವಂತರಿಗಿದು ಕಾಲವಲ್ಲ” ಎಂದ ದಾಸರ ಅಂದಿನ ನುಡಿ, ಇಂದೂ ಸತ್ಯ ಎಂದು ಇಂದಿನ ಮಾನವ ತನ್ನ ನಡೆ ನುಡಿಗಳಿಂದ ಗಟ್ಟಿಯಾಗಿ ಸಮರ್ಥಿಸಿಕೊಳ್ಳುತ್ತಿದ್ದಾನೆ. ಹೀಗಾಗಿಯೇ “ಸತ್ಯವಂತರಿಗಿದು ಕಾಲವಲ್ಲ” ಎಂ¨ ಅನುಭವಾಧಾರಿತ ಮಾತೂ ಜನರ ಬಾಯಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿದೆ.
ಇಂದಿನ ಯಾವುದೇ ಸಾರ್ವಜನಿಕ ಕಾರ್ಯಕ್ಷೇತ್ರವ್ನೇ ಉದಾಹರಣೆಯಾಗಿ ತೆಗೆದುಕೊಂಡು ಇಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಲಘು ಪರೀಕ್ಷೆ ನಡೆಸಿದರೂ ನಮ್ಮ ಕಣ್ಣೆದುರಿಗೇ ನಿರ್ಭಯವಾಗಿ ನಡೆಯತ್ತಿರುತ್ತದೆ ವಿವಿಧ ರೂಪಗಳ ಭ್ರಷ್ಠಾಚಾರ. ಎಲ್ಲೆಲ್ಲೂ ಮೋಸ, ವಂಚನೆ, ಸುಳ್ಳನ್ನೇ ಸತ್ಯ, ಅಪ್ಪಟ ಸತ್ಯ ಆನೆ ನಡೆದಿದ್ದೇ ದಾರಿ ಎಂಬಂತೆ ತಾ ಹೇಳಿದ್ದೇ ಧರ್ಮ, ನ್ಯಾಯ, ಕಾನೂನು, ಮಾಡಿದ್ದೇ ಘನ ಕಾರ್ಯ ಎಂದು ಬಿಂಬಿಸುತ್ತಿರುವುದು, ಅಧಿಕಾರದಲ್ಲಿರುವವರನ್ನು ಸುತ್ತುವರಿದಿದ್ದಾರೆ ಹೊಗಳು ಭಟ್ಟರು ಭಟ್ಟಂಗಿಗಳು. ಇವರು ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರದಲ್ಲಿರುವರ‍್ನು ಓಲೈಸುತ್ತಿರುವುದು, ಸತ್ಯವಂತರನ್ನು ಅಧಿಕಾರದಿಂದ ದೂರವಿರಿಸುವುದೋ, ಅವರಿಗೆ ಕಿರುಕುಳಕೊಟ್ಟು ಅವರಾಗೇ ಅವರೇ ತಮ್ಮ ಸ್ಥಾನ ತ್ಯಜಿಸಿ ದೂರ ಸರಿಯುವಂತೆ ಮಾಡುತ್ತಿರುವ ಹುನ್ನಾರಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತವೆ.
ಸತ್ಯವಂತರು ಚಲಾವಣೆಯಿಂದ ದೂರವಾದ ಪರಿಣಾಮವಾಗಿ ಇವರಿಗೆ ದಕ್ಕಬೇಕಾಗಿದ್ದ ಸುಭಿಕ್ಷ ಕಾಲ ಸುಳ್ಳು, ಮೋಸ, ವಂಚಕರಿಗೆ, ದುಷ್ಟರಿಗೆ, ಪರಮ ಪಾಪಿಗಳಿಗೆ ಸಿಗುತ್ತಿದೆ. ದುಷ್ಟರು, ದುರಾತ್ಮರು ಇತರ ರಿಂದ ಉಪಕೃತರಾಗಿ ಅವರಿಗೇ ಅಪಕಾರವೆಸಗುತ್ತಿದ್ದಾರೆ ಇಂದೂ.
ಪತಿಯನ್ನು ಕಂಡರೆ ಸತಿಗೆ, ಸತಿಯನ್ನು ಕಂಡರೆ ಪತಿಗೆ ಆಗದು. (ಇಲ್ಲೂ ಮತ್ತೆ ಅಹಂ, ಸ್ವಾರ್ಥ ಕಾರಣ) ಇನ್ನು ಮಕ್ಕಳು, ಎಷ್ಟು ಕಾಲವಾದರೂ ಸಿರಿ, ಸಂಪತ್ತು ಅಪ್ಪನ ಬಳಿಯೇ ಉಳಿದರೆ ಅದು ನಮ್ಮದಾಗುವುದು ಎಂದು ? ನಾಳೆ ಬಪ್ಪುದು ನಮಗಿಂದೇ ಬರಬಾರದೆ ! ಎಂಬ ಅಸಹನೆ, ಬೇಸರ ಹೆತ್ತವರ ಬಗ್ಗೆ ಮಕ್ಕಳಿಗೆ. ಕುಟುಂ¨ ಸದಸ್ಯರಲ್ಲಿ ಒಲ್ಲದ ಮನ, ಎಂತಹುದೋ ರಾಗ ದ್ವೇಷ ಮನದಲ್ಲೇ ಗುಪ್ತವಾಗಿ ಹೊಗೆಯಾಡುತ್ತಿರುವ ಕಾರಣ, ಯಾರನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲದ ಪ್ರöಸಂಗಗಳನ್ನು ದಿನ ಬೆಳಗಾದರೆ ಮಾಧ್ಯಮಗಳಲ್ಲಿ ವರದಿಯಾಗಿ ಓದುತ್ತಿದ್ದೇವೆ.
“ಧರ್ಮಿ ನಿರ್ಮೂಲವಾಗುವ ಕಾಲ” ದಾಸರ ಈ ನುಡಿ ಬಗ್ಗೆ-“ಯಾವುದರೀ ಧರ್ಮ, ಕರ್ಮ ? ನಾವು ಹೇಳಿದ್ದೇ ಧರ್ಮ, ಮಾಡಿದ್ದೇ ಕವið ಎಂಬ ಮಾತೇ “ಆರ್ಡರ್ ಆಫ್ ದಿ ಡೇ” ಎಂಬAತಾಗಿದೆ ಇಂದು.
“ನೀವು ನಮ್ಮ ಹಿತ ಕಾಪಾಡಿ ಎಂದು ಅಧಿಕಾರಕ್ಕೆ ಏರಿಸಿದರೆ, ಏರಿಸಿದವರನ್ನು ತುಳಿದು, ಪಕ್ಷ ಪಕ್ಷಗಳು ಪೈಪೋಟಿ, ನಡೆಸುತ್ತಾ, ರ‍್ರೀ, ನಾವು ನಿಮ್ಮಷ್ಟು ಮೋಸ ವಂಚನೆ ಭ್ರಷ್ಟಾಚಾರ ಮಾಡಿಲ್ಲ ಎಂದು ಒಂದು ಪಕ್ಷ ಆಂದರೆ, ಸುಮ್ಮನೆ ಕೂಡ್ರೀ ಸಾಕು, ಈಗ ನಿಮ್ನ ಚರಿತ್ರೆ ಬಿಚ್ಚಿಟ್ರೆ ಮಾನ ಕಳಕೋತೀರಾ ನಮಗಿಂತಾ ನೀವೇ ತುಂಬಿಸಿಕೊAಡಿದ್ದೀರಾ ಹೆಚ್ಚಾಗಿ ಹೊಟ್ಟೆನಾ, ಜೇಬನಾ ಅನ್ನೋರು ಎದುರು ಪಕ್ಷದವರು. ಈ ಮೂಲಕ, ನಾವಿಬ್ರೂ ತಿಂದವರೇ ಎಂಬುದನ್ನು ತಮ್ಮದೇ ಮಾತುಗ¼ಲ್ಲಿ ಹೊರಗೆಡವಿ ಸಾರ್ವಜನಿಕಕರನ್ನು ಮೂಗ ಕಿವುಡರನ್ನಾಗಿ ಕೂಡಿಸಲಾಗುತ್ತಿದೆ.. “ಧರ್ಮ ನಿರ್ಮೂಲವಾಗುವ ಕಾಲ ಮುಂದಿದೆ” ಎಂದ ದಾಸರ ಅಂದಿನ ವಚನ ಇಂದೂ ಚಾಲಿಯಲ್ಲಿದೆಯಲ್ಲವೇ !
ಇದುವರೆಗೂ ಉಲ್ಲೇಖಿಸಿದ್ದು ಒಂದು ನಿತ್ಯ ಸತ್ಯದ ಬಗ್ಗೆ. ಈಗ ಮತ್ತೊಂದು ನಿತ್ಯ ಸತ್ಯ-“ಒಲ್ಲೆನೆ ವೈದಿಕ ಗಂಡನ ನಾ.” ಉಟ್ಟೆನೆಂದರೆ ಇಲ್ಲ, ತೊಟ್ಟೆನೆಂದರೆ ಇಲ್ಲ, ಕೆಟ್ಟ ಸೀರೆಯ ನಾನುಡಲಾರೆ, ಕೃಷ್ಣಾಜಿನವನ್ನು ರಟ್ಟೆಲಿ ಹಾಕಿಕೊಂಡು, ಬಟ್ಟಲು ಗಿಂಡಿಯ ಹಿಡಿದಿಹನೆ, ಬಿನ್ನಾಣ ಮಾತಿಲ್ಲ, ಕಣ್ಣ ಸನ್ನೆಗಳು ಮೊದಲೇ ಇಲ್ಲ, ನಾನೆದುರಿಗೆ ಹೋದರೆ ದೃಷ್ಟಿಯಿಂದಲೇ ನೋಡುವನಮ್ಮ, ನಿನ್ನಾಣೆ ಹುಸಿಯಿಲ್ಲ, ಎಷ್ಟಂತ ಹೇಳಲಿ ಕಷ್ಟದ ಒಗೆತನ, ಒಲ್ಲೆನೆ ವೈದಿಕ ಗಂಡನ ನಾ” ಇದೂ ಪುರಂದರ ದಾಸರ ರಚನೆ.
ಈ “ಒಲ್ಲೆನೆ ವೈದಿಕ ಗಂಡನ ನಾ” ಈ ನುಡಿ 500 ವರ್ಷಗಳ ಹಿಂದೆ ದಾಸರು ನುಡಿದಿದ್ದು, 500 ವರ್ಷಗಳಾದ ನಂತರದ ಇಂದಿನ ಅವಧಿಯಲ್ಲೂ ಇದೇ ಮಾತು ಕೇಳಿ ಬರುತ್ತಿದೆ ಬಹಳಷ್ಟು ಅವಿವಾಹಿತ ಕನ್ಯೆಯರ ಬಾಯಲ್ಲಿ. ಇದಕ್ಕೆ ಮೂಲ ಕಾರಣವೆಂದರೆ ಹುಡುಗರ ಜನನದ ಸಂಖ್ಯೆ ಹೆಚ್ಚು, ಹುಡುಗಿಯರ ಜನನದ ಸಂಖ್ಯೆ ಕಡಿಮೆಯಾಗಿರುವ ಜೊತೆಗೆ ಹುಡುಗಿಯರು ಹೆಚ್ಚು ವಿದ್ಯೆ ಕಲಿತು ಹುಡುಗರಿಗಿಂತಾ ಹೆಚ್ಚು ಸಂಬಳ ಪಡೆಯುತ್ತಿರುವುದು. ಈ ಸೌಲಭ್ಯಗಳ ಕಾರಣ ನನಗಿಂತಾ ಹೆಚ್ಚಿ ಓದಿ ಹೆಚ್ಚು ಸಂಬಳ ತರುವ ಗಂಡ ನನಗೆ ಇರಲಿ ಎನ್ನುತ್ತಿರುವ ಹುಡುಗಿಯರ ಸಂಖ್ಯೆ ಹೆಚ್ಚುತ್ತಿರುವುದು ಹೀಗಾಗಿ ಈ ಕಾಲದಲ್ಲಿ ಹುಡುಗರ ವಿವಾಹಕ್ಕೆ ಹುಡುಗಿಯರೇ ಸಿಗುತ್ತಿಲ್ಲವಾದ ಕಾರಣ ದೊಡ್ಡ ಸಂಖ್ಯೆಯ ಅವಿವಾಹಿತ ಹುಡುಗರು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ ಈ ಜನ್ಮದಲ್ಲಿ ತಮಗೆ ವಿವಾಹವಾಗುವುದೇ ಇಲ್ಲವೇನೋ ಎಂಬ ನಿರಾಸೆಯಲ್ಲಿ. ಸಿಕ್ಕಿದ್ದೊಂದು ವೃತ್ತಿ ಮಾಢಿಕೊಂಡು ಜೀವನೋಪಾಯ ನಡೆಸುತ್ತಿದ್ದಾರೆ.
ವೈದಿಕ ವೃತ್ತಿಯನ್ನು ಆಶ್ರಿಯಿಸಿಕೊಂಡಿರುವ ಹುಡುಗರನ್ನು ವಿವಾÀಹವಾಗುವ ಹುಡುಗಿಯರಿಗೆ ಇಂತಿಷ್ಟು ಧನಸಹಾಯ ನೀಡುವ ಆಸೆ ಆಮಿಶಗಳನ್ನು ಹಲವಾರು ಸರ್ಕಾರಗಳು ತೋರಿದ್ದರೂ ಈ ಬಗ್ಗೆ ನಿರೀಕ್ಷಿತ ಪ್ರಮಾಣದ ಪರಿಹಾರ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಈ ಸಮಸ್ಯೆಗೆ ಪರಿಹಾರ . . . ! ಸಂಬAಧಿತರೆಲ್ಲರ ಮನ ಪರಿವರ್ತನೆಯಾಗಬೇಕು. ಈ ಕಾಲ ಬೇಗ ಬರಲೆಂದು ಹಾರೈಸುತ್ತಾ ‘ಕಾಪಾಡು ಶ್ರೀ ಸತ್ಯನಾರಾಯಣ ಎಂದು ಭಗವಂತನನ್ನು ಪ್ರಾರ್ಥಿಸೋಣ..
***********************
Comments
Post a Comment