ನಾಯಕನೆಂದರೆ ಹೇಗಿರಬೇಕು ! ?

ನಾಯಕನೆಂದರೆ ಹೇಗಿರಬೇಕು ! ? 

ಲೇಖಕರು :ಎಂ ಆರ್ ವೆಂಕಟರಾಮಯ್ಯ

     


                                      

      ‘ನಾಯಕ’ ಎಂಬ ಮೂರಕ್ಷರದ  ಪದಕ್ಕೆ ಒಡೆಯ, ಒಂದು ಗುಂಪಿನ ಮುಖ್ಯಸ್ಥ, ಪಾಳೇಗಾರ, ತಂಡದ ಮುಖ್ಯಸ್ಥ, ಒಂದು ಸಂಸ್ಥೆಯ ಮುಖ್ಯಸ್ಥ ಎಂಬ ಕನ್ನಡದ ಸರಳಾರ್ಥಗಳಿವೆ. ಇದೇ ಪದಕ್ಕೆ ಇಂಗ್ಲೀಷಿನಲ್ಲಿ ‘ಲೀಡರ್’ ಎಂದು ಕರೆಯಲಾಗುತ್ತದೆ. ಈ ನಾಯಕನ ಕಾರ್ಯ ವೇನು ? ಎಂದರೆ ಕಾರ್ಯನಿರ್ವಹಣೆಯಲ್ಲಿ ತನ್ನ ಅಧೀನದಲ್ಲಿರುವವರನ್ನು ತನ್ನೊಂದಿಗೆ ಜೊತೆಯಾಗಿ ಕರೆದೊಯ್ಯುವುದು, ಅವರ ಕೆಲಸ ಕಾರ್ಯಗಳ ಮೇಲ್ವುಚಾರಣೆ, ಮಾರ್ಗದರ್ಶನ, ದಾರಿ ತೋರಿಸಿ ನಿಗದಿತ ಗುರಿ ಸಾಧಿಸುವ ಹೊಣೆ ಇವನದಾಗಿರುತ್ತದೆ. ತಂಡದಲ್ಲಿ ಇವನದು ಪ್ರಥಮ, ಮೊದಲ, ಅಗ್ರಸ್ಥಾನ. 

      ಪ್ರಸಕ್ತ ಲೇಖನದಲ್ಲಿ ‘ನಾಯಕ’ ಎಂಬ ಪದವನ್ನು ಇಂಗ್ಲೀಷಿನ ‘ಲೀಡರ್’ ಎಂಬ ಅರ್ಥದಲ್ಲಿ ಬಳಸಿಕೊಳ್ಳಲಾಗಿದೆ. ಈ ನಾಯಕನ ಗುಣ, ಲಕ್ಷಣಗಳು ಹೇಗಿರಬೇಕು ? ಎಂಬ ಪ್ರಶ್ನೆಗೆ ತನಗೆ ವಹಿಸಲಾಗಿರುವ ಕೆಲಸ,À ಕಾರ್ಯ, ಕಾಯಕ, ಕರ್ತವ್ಯಗಳ ಪೂರ್ಣ ಅರಿವಿರಬೇಕು. ಆ ಕೆಲಸಗಳನ್ನು ಅತಿ ಕಡಿಮೆ ಕಾಲದಲ್ಲಿ, ಕಡಿಮೆ ಕೆಲಸಗಾರರಿಂದ, ಕಡಿಮೆ ಖರ್ಚು, ವೆಚ್ಚದಲ್ಲಿ ಸಂಪೂರ್ಣಗಳಿಸುವ ಅರಿವು, ತಿಳಿವಳಿಕೆ ಇರಬೇಕು. ತನ್ನ ತಂಡದಲ್ಲಿ ಯಾವುದಾದರೂ ಕಾರಣಕ್ಕೆ ಕೆಲಸಗಾರರು ಗೈರಾದರೆ, ಅವರ ಕೆಲಸವನ್ನು ಹಾಜರಿರುವ ಮತ್ತೊಬ್ಬರಿಗೆ ವಹಿಸಿ ಅದನ್ನು ಪೂರ್ಣಗೊಳಿಸುವ ಹೊಣೆ, ಜವಾಬ್ದಾರಿ ವಹಿಸಿಕೊಳ್ಳಬೇಕು. ಕೆಲಸಗಾರರು ಎಂದ ಮೇಲೆ ಅವರಲ್ಲಿ ವಿವಿಧ ಗುಣ ಸ್ವಭಾವಗಳನ್ನು ಹೊಂದಿರು ವವರಿರುತ್ತಾರೆ. ಉದಾಹರಣೆಗೆ ಕೆಲವರು ಆಲಸಿಗಳಿರಬಹುದು. ಅವನಿಗೆ ವಹಿಸಿದ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸದಿರಲು ಯಾವುದೋ ಒಂದು ಕಾರಣ, ನೆಪ ಒಡ್ಡಿ ಈ ಕೆಲಸವನ್ನು ಇಂದು ಮಾಡಲಾಗದು, ನಾಳೆ ಎಂದು ಮುಂದೂಡುವ ಸ್ವಬಾವ, ಮತ್ತೆ ಕೆಲÀವರು ಮುಂಗೋಪಿ  : ಶೀಘ್ರ ಕೋಪದವ, ಮಾತು ಹೆಚ್ಚು, ಕೆಲಸ ಕಡಿಮೆ ಮಾಡುವವರು, ತಪ್ಪೋ ಸರಿಯೋ, ನನಗೆ ಗೊತ್ತಿರುವ ಹಾಗೆ, ನನ್ನ ಕೈಲಾದಷ್ಟು ಮಾಢಿದ್ದೀನಿ, ಇದನ್ನು ಸÀರಿ ಮಾಡಿ ಪೂರ್ತಿಯಾಗಿಸುವುದು ನಾಯಕನ ಹೊಣೆ ಎನ್ನುವ ಬೇಜವಾವಾಬ್ದಾರಿ ಜನ, ನಾಯಕನ ಬಳಿ ಸಲಿಗೆ ಬೆಳೆಸಿ, ಏ ! ಅವನು ನನಗೆ  ಪರಿಚಯ, ನನಗೇನೂ ಮಾಡೊಲ್ಲ ಎಂದು ಅವನ ಆಜ್ಞೆ, ಆದೇಶ ಪಾಲಿಸದವರು, ನಾಯಕ ನಮ್ಮ ಜಾತಿ, ಧರ್ಮ, ಸಂಬAಧ ಎಂಬ ಕಾರಣಕ್ಕೆ ನಾಯಕನನ್ನು ಲೆಕ್ಕಿಸದವನು, ಒಬ್ಬ ಕೆಲಸಗಾರ, ನಾಯಕನ ಮೇಲಧಿಕಾರಿಯ ಕೃಪೆ ಗಿಟ್ಟಿಸಿ, ನನ್ನ ನಾಯಕನ ನಾಯಕನೇ ನನಗೆ ಚೆನ್ನಾಗಿ ಪರಿಚಯ ಇರುವವನು, ಹೀಗಾಗಿ, ಈ ನಾಯಕ ನನ್ನೇನೂ ಮಾಡಲಾರ ಎಂಬ ಧೋರಣೆಯವ,  ಹೀಗೆ ನಾನಾ ರೀತಿಯ ಕೆಲಸಗಾರರು ನಾಯಕನ ತಂಡದಲ್ಲಿರಲು ಸಾಧ್ಯ. ಇಂತಹವರಿAದ ನಾಯಕನಾದವನು ಕೆಲಸ ಮಾಡಿಸುವುದು ಕಷ್ಟವಲ್ಲವೇ ? ಪಾಪ, ನಾಯಕ, ಲೀಡರ್ ಏನು ಮಾಡಲು ಆಗುತ್ತೆ ! ಅವನು ನಿಸ್ಸಹಾಯಕ, ಅಸಹಾಯಕ, ಹೆಲ್ಪ್ಲೆಸ್ ಎಂಬ ಅನುಕಂಪ ಪಡೆಯಲು ಪ್ರಯತ್ನಿಸುವವನು ಒಳ್ಳೆಯ ನಾಯಕನಾಗಲಾರ. 

    ಇದೆಲ್ಲಾ ಹೇಳಿದ್ದು ಕೇಳಿ, ಹಾಗಾದರೆ ನೀವೇ ಹೇಳಿ, ಆದರ್ಶ. ಮಾದರಿ ನಾಯಕ   ಎಂದರೆ ಹೇಗಿರಬೇಕು ? ಎಂದು ಪ್ರಶ್ನಿಸಬಹುದು. ಇದಕ್ಕೆ ಉತ್ತರವಾಗಿ ಒಂದು ಮನೆಯ ಯಜಮಾನನಾದವನು ಹೇಗಿರಬೇಕು ? ಎಂಬುದನ್ನು ಉದಾಹರಣೆಯಾಗಿ ಪರಿಶೀಲಿಸೊಣ. ‘ಯಜಮಾನ’ ಎನಿಸಿಕೊಳ್ಳುವವನು ಆ ಕುಟುಂಬದಲ್ಲಿನ ತನ್ನ ಒಡಹುಟ್ಟಿದವರಿಗೆ ಸೋದರನಾಗಿ, ವೃದ್ಧ ಮಾತಾಪಿತರಿಗೆ ಮಗನಾಗಿ, ಒಬ್ಬ ಸ್ತಿçÃಗೆ ಪತಿಯಾಗಿ, ಮಕ್ಕಳಿಗೆ ತಂದೆಯಾಗಿ ಇರುವಾಗ, ಇವರೆಲ್ಲರೊಂದಿಗೆ ಎಲ್ಲ ಕಾಲ, ಸರ್ವ ವಿಷಯಗಳಲ್ಲೂ ಏಕ ರೀತಿ\ನಿಷ್ಪಕ್ಷಪಾತಿಯಾಗಿ ಹಲವು ಕಾರಣಗಳಿಂದ ವರ್ತಿಸಲು ಸಾಧ್ಯವಾಗದು. ಕೆಲವು ಸಂದರ್ಭ, ವಿಷಯಗಳಲ್ಲಿ ಕಠಿಣವಾಗಿ, ಮತ್ತೆ ಕೆಲವು ಸಮಯಗಳಲ್ಲಿ ಹೂವಿನಷ್ಟು ಮೃದುವಾಗಿ, ಹಾಸ್ಯ, ನಗೆ, ಹೀಗೆ ನವರಸಗಳಲ್ಲಿ ಹಲವನ್ನು ಬಳಸಿ ಕುಟುಂಬದವರ ಮನವನ್ನು ಇವನು ಗೆದ್ದು ಕಾರ್ಯಸಾಧಿಸಬೇಕಾಗುತ್ತೆದೆ. 

   ಇವನ ಮಾತಾ ಪಿತರಿಗೆ ಗೌರವ, ಕರುಣೆ, ದಯೆ, ಅವರೊಂದಿಗೆ ಪ್ರೀತಿಪೂರ್ವಕವಾದ ಮಾತು, ನಡೆ ಇರಬೇಕು. ಸೋದರ : sಸೋದರಿಯರ ಸಲಹೆ ಸೂಚನೆಗಳನ್ನು ಶಾಂತ ರೀತಿಯಲ್ಲಿ ಆಲಿಸಬೇಕು, ಪತಿಯಾಗಿ ಪತ್ನಿಗೆ ಅಗತ್ಯ ಪ್ರೀತಿ, ಅನುಕಂಪ, ಮಾರ್ಗದರ್ಶನ ನೀಡಬೇಕು, ಇವರೆಲ್ಲರ ಸಮಯೋಚಿತ ಸಲಹೆ, ಸೂಚನೆಗಳನ್ನು ಸ್ವೀಕರಿಸಿ ಅದರಲ್ಲಿ ಯಾವುದು, ಯಾವಾಗ ಸೂಕ್ತ ಎನಿಸುವುದೋ ಅದನ್ನು ಜಾರಿಗೆ ತರುವ ಹೊಣೆ ಯಜಮಾನನದು, 

    ಇನ್ನು ಮಕ್ಕಳೊಂದಿಗೆ ಸಮಯಾ ಸಮಯವನ್ನರಿತು ಜವಾಬ್ದಾರಿಯುತವಾಗಿ ನಡೆಯಬೇಕಾಗುತ್ತದೆ. ಇಂತಹವನ್ನೆಲ್ಲಾ ಅದೆಷ್ಟೇ ಪಟ್ಟಿ ಮಾಡಿ ಹೇಳಿ ಮಾರ್ಗದರ್ಶನ ನೀಡಿದರೂ, ಯಜಮಾನನಾದವನು ತನ್ನ ಮೇಲಿರುವ ಹೊಣೆಗಳನ್ನು ತನ್ನ ವಿವೇಕ, ವಿವೇಚನೆ ಬಳಸಿ ವರ್ತಿಸಿದಾಗ ಮಾತ್ರ ಕುಟುಂಬವನ್ನು ಸುರಕ್ಷಿತವಾಗಿ ಮುನ್ನಡೆಸಲು ಸಾಧ್ಯ. 

      ಕುಟುಂಬವನ್ನು ಒಂದು ಸಮುದ್ರದಲ್ಲಿ ಪಯಣಿಸುತ್ತಿರುವ ಹಡಗಿಗೆ ಹೋಲಿಸಬಹು ದಾಗಿದೆ. ಹಡಗನ್ನು ಬಿರುಗಾಳಿ ಇರಲಿ, ಚಳಿ, ಮಳೆಗಿರಲಿ, ಅದರ ನಾಯಕ ಹೇಗೆ  ತನ್ನ ಚತುರತೆ, ಚಾಕಚಕ್ಯತೆ, ಬುದ್ಧಿ, ಶಕ್ತಿ, ಸಾಮರ್ಥ್ಯಗಳಿಂದ ಹಡಗನ್ನು ಹೇಗೆ ಸುರಕ್ಷಿತವಾಗಿ ದಡ ಮುಟ್ಟಿಸುತ್ತಾನೋ ಹಾಗೇನೇ ಕುಟುಂಬದ ಯಜಮಾನ ಕುಟುಂಬವನ್ನು ಯಾರ ಆಕ್ಷೇಪ ಆಗ್ರಹಗಳಿಗೂ ಗುರಿಯಾಗದಂತೆ ಎಚ್ಚರಿಕೆ ವಹಿಸಿ ಕುಟುಂಬವೆAಬ ಹಡಗನ್ನು  ಸುರಕ್ಷಿತವಾಗಿ ನಡೆಸಬೇಕು. ಇಲ್ಲವಾದಲ್ಲಿ ಕುಟುಂಬದ ಎಲ್ಲ ಆಗುಹೋಗುಗಳಿಗೆ  ಅದರ ಒಳಿತು, ಕೆಡಕುಗಳಿಗೆ ಯಜಮಾನನೇ ಹೊಣೆಗಾರನಾಗುತ್ತಾನೆ.   

     ಯಜಮಾನನಾದವನು ತನ್ನವರನ್ನು ತನ್ನಂತೆಯೇ ಟ್ರೀಟ್ ಮಾಡಿ, ಅವರ ಸುಖ, ಕಷ್ಟ,  ನೋವು ನಲಿವುಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ ಎನಿಸಿದರೂ ಅತಿ ಎಲ್ಲೂ ಸಲ್ಲದು, ‘ಅತಿ ಸರ್ವತ್ರ ವರ್ಜಯೇತ್’ ಎಂಬ ಎಚ್ಚರಿಕೆಯನ್ನು ಸದಾ ನೆನಪಿಡಬೇಕು. ತಾನು ಎಲ್ಲರಿಂದಲೂ ಒಳ್ಳೆಯವನು ಎನಿಸಿಕೊಳ್ಳಬೇಕು ಎಂಬ ಹಂಬಲದಲ್ಲಿ ಎಲ್ಲರೊಂದಿಗೆ ಅತಿ ಸಲಿಗೆ, ಯಾರ ಬಗ್ಗೆಯೂ ಕಠಿಣವಾಗಿ ವರ್ತಿಸುವುದು ಬೇಡ, ಯಾರು ಹೇಗೇ ಇರಲಿ,  ಏನೇ ಮಾಡಲಿ, ಬಿಡಲಿ, ನಾನು ಅವರನ್ನು ಶಿಸ್ತಿಗೆ ಒಳಪಡಿಸುವುದಿಲ್ಲ ಎಂಬ ಮೃದು ದೋರಣೆ ತಳೆದರೆ ಅದರ ಕೆಟ್ಟ ಪ್ರತಿಫಲವನ್ನು ಯಜಮಾನ, ನಾಯಕ, ಲೀಡರ್  ಉಣ್ಣುವುದು ಅನಿವಾರ್ಯವಾಗುತ್ತದೆ.  ತನ್ನ ಮೇಲಧಿಕಾರಿಗಳ ದೃಷ್ಟಿಯಲ್ಲಿ ಈ ನಾಯಕ ಯೂಸ್ಲೆಸ್, ಅನ್‌ಫಿಟ್, ನಾಯಕನಾಗಿರಲು ನಾಲಾಯಕ್ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಇಂತಹಾ ಪಟ್ಟಿ ಕಟ್ಟಿಸಿಕೊಂಡವನು ನಂತರದಲ್ಲಿ ತನ್ನ ವರ್ತನೆಯನ್ನು ಸರಿಪಡಿಸಿಕೊಂಡರೂ ಅವನಿಗೆ ಈ ಹಿಂದೆ ದೊರಕಿದ್ದ ಕುಖ್ಯಾತಿಯಿಂದ ಬೇಗ ಹೊರಬರಲಾಗದು. \

   ಇದೇ ಸಂದರ್ಭದಲ್ಲಿ ನಾ ಕಂಡ ಒಬ್ಬ ಒಳ್ಳೆಯ ಕೆಲಸಗಾರ, ನಾಯಕನಾದ ಮೇಲೂ ನಾಯಕನಾಗಿ ಕಾರ್ಯನಿರ್ವಹಿಸದೆ ಒಳ್ಳೆಯ ಕೆಲಸಗಾರನಾಗಿಯೇ ಕೆಲಸ ಮಾಢಿದ ಕಾರಣ, ಇವ ನಾಯಕನಾÀಗಲು ಅನರ್ಹ, ನಾ ಲಾಯಕ್, ಅನ್ ಫಿಟ್ ಎಂ¨ ಹಣೆಪಟ್ಟಿ ಮೇಲಧಿಕಾರಿಗಳಿಂದ ಕಟ್ಟಿಸಿಕೊಂಡು ಕೆಟ್ಟ ಹೆಸರು ಪಡೆದ ವ್ಯಕ್ತಿಯೊಬ್ಬರ ಉದಾಹರಣೆ ಈಗ ನೆನಪಿಗೆಬರುತ್ತಿದ್ದು ಅದು ಹೀಗಿದೆ :  

   ಅದೊಂದು ಕಚೇರಿಯ ಶಾಖೆ. ಅಲ್ಲಿ ೩-೪ ಗುಮಾಸ್ತರು, ಅವರಿಗೆ ಸಹಾಯಕ ಸಿಬ್ಬಂದಿ, ಇವರ ಕೆಲಸಗಳ ಮೇಲ್ವಿಚಾರಣೆಗೆ ಒಬ್ಬ ಯಜಮಾನ, ಲೀಡರ್, ಈತ ಶಾಖೆಯ ಕೆಲಸಗಳನ್ನು ಅಧೀನ ಸಿಬ್ಬಂದಿಯಿAದ ಮಾಡಿಸಿ, ಅದರಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ, ಅದರ ಅನುಮೋದನೆ, ಮಂಜೂರಾತಿಗೆ ತನ್ನ ಮೇಲಧಿಕಾರಿಗಳಿಗೆ ಕಳುಹಿಸಬೇಕಾದ ಹೊಣೆ ಈ ಶಾಖೆಯ ಲೀಡರ್‌ದಾಗಿತ್ತು. ಇಲ್ಲಿನ ಲೀಡರ್ ಬಹಳ ವರ್ಷಗಳ ಅನುಭವ, ಉನ್ನತ ಮಟ್ಟದ ವಿದ್ಯಾರ್ಹತೆ, ತನ್ನ ಶಾಖೆಯ ಕೆಲಸಗಳ ಬಗ್ಗೆ ಸಂಪೂuð ಜ್ಞಾನ ಗಳಿಸಿದ್ದವನು. ಇಷ್ಟೆಲ್ಲಾ ಸದ್ಗುಣಗಳಿದ್ದ ಮೇಲೆ ಈ ಲೀರ‍್ಗೆ ಒಳ್ಳೆಯ ಸರ್ಟಿಫಿಕೆಟ್ ಸಿಗಬೇಕಲ್ಲವೇ ! ಎನ್ನಬಹುದು ಇದುವರೆಗೂ ತಿಳಿಸಿದ್ದನ್ನು ಓದಿದವರು. ಆದರೆ ಇಲ್ಲಾದ ಎಡವಟ್ಟೇ ಬೇರೆ. ಈತನ ದೊಡ್ಡ ದೌ¨sðÀಲ್ಯ ಎಂದರೆ ಅತಿಯಾದ ವಿನಯ, ಮೃದುತ.್ವ. ಯಾರ ಬಗ್ಗೆಯೂ ಕಠಿಣವಾಗಿ ಮಾತಾಡುವುದು, ವರ್ತಿಸುವುದೂ ಬೇಡ ಎಂಬ ಈತನ ಈ ಅವಗುಣವನ್ನು ಇವರ ಸಿಬ್ಬಂದಿ ದುರುಪಯೋಗಪಡಿಸಿಕೊಂಡರು. ಸಿಬ್ಬಂದಿ ಪಡೆದ ರಜೆಗಳಿಗೆ ಲೆಕ್ಕವಿಲ್ಲ. ಇವರು ಕೆಲಸ ಮಾಡದಿದ್ದಾಗ, ಅದನ್ನು ಈ ಶಾಖಾಧಿಕಾರಿಯೇ ಮಾಡಿ ಮೇಲಧಿಕಾರಿಗಳಿಗೆ ಕಳುಹಿಸುತ್ತಿದ್ದ ಕಾರಣ, ಸಿಬ್ಬಂದಿ ತಮ್ಮ ಕೆಲಸ ಕಲಿಯಲು ಅವಕಾಶ ಕಳೆದುಕೊಂಡು, ಕೆಲಸಕ್ಕೆ ನಾಲಾಯಕ್ ಎನಿಸಿಕೊಂಡರು.

    ಶಾಖೆಯ ನಾಯಕನ ಈ ದೌರ್ಭಲ್ಯ ಗಮನಿಸಿದ ಮೇಲಧಿಕಾರಿಗಳು ಈತನನ್ನು ಕುರಿತು, “ನಿಮ್ಮ ಸಿಬ್ಬಂದಿಯ ಕೆಲಸವನ್ನು ನೀವು ಮಾಡುವುದಲ್ಲ. ಅಧೀನ ಸಿಬ್ಬಂದಿಗೆ ಕೆಲಸ ಕಲಿಸಿ ಅದನ್ನು ಅವರಿಂದ ಮಾಡಿಸ ಬೇಕಾದ್ದು ನಿಮ್ಮ ಕರ್ತವ್ಯವೇ ಆಗಲಿ, ಅವರಿಗೆ ಸೋಮಾರಿತನ ಕಲಿಸುತ್ತೀದ್ದೀರಿ, ಅವರಲ್ಲಿ ಶಿಸ್ತನ್ನು ಮೂಡಿಸಿಲ್ಲ., ನಿಮ್ಮ ಈ ಚರ್ಯೆ ಸಿರಿಯಾದದ್ದಲ್ಲ,  ಒಬ್ಬ ನಾಯಕ, ಲೀಡರ್ ಹೇಗೆ ವರ್ತಿಸಬೇಕೆಂಬುದು ನಿಮಗೆ ತಿಳಿಯದು” ಎಂಬ ಕಟು ಶಬ್ಧಗಳಲ್ಲಿ ಈತನನ್ನು ನಿಂದಿಸಿ, ಇದಕ್ಕೆ ಶಿಕ್ಷೆ ಎಂಬAತೆ ಈತನಿಗೆ ಸಲ್ಲದ ಶಾಖೆಗೆ ವರ್ಗಾಯಿಸಿದರು. ಈ ಪ್ರಸಂಗ ನಾಯಕ ಹೇಗಿರಬೇಕು ? ಏನುಮಾಡಬಾರದು ಎಂಬುದನ್ನು ಸ್ಪಷ್ಟಪಡಿಸಿದೆ.) 

     ನಾಯಕನಾದವನು ಹೇಗಿರಬೇಕು ಎಂಬ ಚರ್ಚೆಗೆ ಬಂದಾಗ  ತಕ್ಷಣ ನೆನಪಿಗೆ ಬರು ವುದು ಎರಡು ಪ್ರಸಂಗಗಳು. ಅದರಲ್ಲಿ ಮೊದಲನೆಯದು ಇತಿಹಾಸ ಪ್ರಸಿದ್ಧ ಅಲೆಕ್ಸಾಂಡರ್ ದು. ಎರಡನೆಯದು  ಅಮೆರಿಕಾದ ಹಿಂದಿನ ಸುಪ್ರಿಸಿದ್ಧ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್‌ಟನ್.

       ಜಗತ್ತನ್ನೇ ಜಯಿಸಿ, “ವಿಶ್ವ ಸಾಮ್ರಾಟ್” ಎಂಬ ಬಿರುದು ಪಡೆಯುವ ಹುಚ್ಚು ಅಲೆಕ್ಸಾಂಡರ್‌ದಾಗಿತ್ತು.. ಈ ಗುರಿ ಸಾಧನೆಗಾಗಿ ಅವನು ತನ್ನ  ದೇಶದಿಂದ ಬಹು ದೂರ ಪಯಣಿಸಿ, ಆರೋಗ್ಯವನ್ನೂ ಲಕ್ಷಿಸದೆ ಒಂದೊAದೇ ಹೊರ ರಾಜ್ಯಗ¼ನ್ನು ಜಯಿಸುತ್ತಾ, ಮುನ್ನಡೆಯ ತೊಡಗಿದ. ಇಂತಹಾ ವಿಶ್ವ ಪರ್ಯಟೆನೆಯಲ್ಲಿ ಅವನು ಭಾರತದ ಮರುಭೂಮಿಯಲ್ಲಿ ಸಂಚರಿಸುತ್ತಿದ್ದಾಗ ಈ ನಾಯಕ ಹಾಗೂ ಕೆÀಲವು ಸೈನಿಕರು ದಾಹದಿಂದ ನರಳಿ ಕುಡಿಯಲು ಒಂದಿಷ್ಟು ನೀರು ದೊರೆತರೆ ಪ್ರಾಣ ಉಳಿಸಿಕೊಳ್ಳಬಹುದು ಎಂಬ ಸ್ಥಿತಿ ತಲುಪಿದ್ದರು. ನೀರಿನ ತಾಣ ಅರಸುತ್ತಾ  ಸೈನಿಕನೊಬ್ಬ ಮರುಭೂಮಿಯಲ್ಲಿ ಹೊರಟವನು. ನೀರೇನೋ ಪಡೆದ. ಆದರೆ ಇದು ದಾಹದಿಂದ ನರಳುತ್ತಿದ್ದ  ಎಲ್ಲರಿಗೂ ಸಾಲದೆ ಕೇವಲ  ಇಬ್ಬರು ಮೂವರಿಗಾಗುವಷ್ಟು ಇತ್ತು. ನೀರನ್ನು ನೋಡಿದ ಕೂಡಲೇ  ಇಷ್ಟು ಅಲ್ಪ ನೀರು ಎಲ್ಲರಿಗೂ ಸಾಲದು. ದೊರೆತಿರುವ ನೀರುನ್ನು ಯಾರು ಯಾರು ಕುಡಿಯಬೇಕು. ಎಂಬ ಸಮಸ್ಯೆ ಉಂಟಾಯಿತು. 

      “ನಮಗೆಲ್ಲಾ ನಾಯಕನೇ ಮುಖ್ಯ. ಅವನೇ ಈ ನೀರನ್ನು ಕುಡಿದು ಗುರಿ ಸಾಧನೆಗಾಗಿ ಮುನ್ನಡೆಯಲಿ” ಎಂದರು ದಾಹದಿಂದ ನರಳುತ್ತಿದ್ದ ಕೆಲವು ಸೈನಿಕರು. ಆದರೆ ಇದಕ್ಕೆ ಒಪ್ಪದ ನಾಯಕನು, “ನಾಯಕನಾದವನು ಸಂಗಡಿಗರಿಗಾಗಿ ತಾನು ತ್ಯಾಗ ಮಾಡಬೇಕು. ಸೈನಿಕರಿದ್ದರೆ ಒಬ್ಬ ನಾಯಕನಾಗಬಹುದು. ಸೈನಿಕರೇ ಇಲ್ಲದಾಗ, ಯಾರಿÀಗಾಗಿ ಯಾರು ನಾಯಕನಾಗಬಲ್ಲ ! ? ಎಂದು ವಾದಿಸಿದÀ ಅಲೆಕ್ಸಾಂಡರ್. ಈ ವಾದ, ಪ್ರತಿವಾದ ಕೊಂಚ ಕಾಲ ಮುಂದುವರಿದಿತ್ತು. ಸಮಸ್ಯೆ ಪರಿಹಾರವೇ ಆಗದಾಗ. ಕುಪಿತನಾದ ಅಲೆಕ್ಸಾಂಡರ್, ನನ್ನ ಸೈನಿಕರಿಗೆ ಸಿಗದ ನೀರು ನನಗೂ ಬೇಡ ಎಂದು ದೊರೆತಿದ್ದ ನೀರನ್ನು ಮರಳಿನ ಮೇಲೆ ಚೆಲ್ಲಿ ಪ್ರಯಾಣ ಮುಂದುವರಿಸಿದನು ಎಂಬುದರೊAದಿಗೆ ಈ ಪ್ರಸಂಗ ಮುಗಿಯುತ್ತದೆ. “ನಾಯಕನಾದವನು ಸ್ವಾರ್ಥಿಯಾಗದೆ ತನ್ನ ತ್ಯಾಗದಿಂದ ಸಂಗಡಿಗರನ್ನು ಸಂರಕ್ಷಿಸಿದಾಗ ಅವನು “ಆದರ್ಶ ನಾಯಕನೆನಿಸಿಕೊಳ್ಳುತ್ತಾನೆ ಎಂಬ ನೀತಿ ಪಾಠ ಕಲಿಸುತ್ತದೆ  ಈ ಪ್ರಸಂಗ”.   

      ಇನ್ನು ಎರಡನೆಯ ಉದಾಹರಣೆ ಜಾರ್ಜ್ವಾಷಿಂಗ್‌ಟನ್‌ದು .ಒಮ್ಮೆ ಈತ ತನ್ನ ವೇಷ ಮರೆಸಿ, ನಗರ ಸಂಚಾರ ಹೊರಟಾಗ ಮಾರ್ಗ ಮಧ್ಯೆ ಒಂದು ಭಾರಿ ಗಾತ್ರದ ಮರದ ದಿಮ್ಮಿಯೊಂದು ಬಿದ್ದಿದ್ದಿತು. ಈತನ ಸೈನಿಕರು ಅದನ್ನು ಪಕ್ಕಕ್ಕೆ ತಳ್ಳಲು ಶ್ರಮಿಸುತ್ತಿದ್ದರೂ ಅದು ಪಕ್ಕಕ್ಕೆ ಸರಿಯಲಿಲ್ಲ. ಇದನ್ನೆಲ್ಲಾ ಮೂಕನಾಗಿ ವೀಕ್ಷಿಸುತ್ತಿದ್ದ ಕಾರ್ಪೊರಲ್ ಒಬ್ಬನನ್ನು ಕುರಿತು ನೀನು ಇವರಿಗೆ ಏಕೆ ಸಹಾಯಮಾಡುತ್ತಿಲ್ಲ ಎಂದು ವಾಷಿಂಗ್‌ಟನ್ ಪ್ರಶ್ನಿಸಿದಾಗ, ‘ನಾನು ಕಾರ್ಪೊರಲ್. ಇವರಿಗೆ ಹೀಗೆ ಮಾಡಿ ಎಂದು ಆದೇಶ ಕೊಡುವ ಕೆಲಸ ಮಾತ್ರ ನನ್ನದು’ ಎಂದ ಕಾರ್ಪೊರಲ್. ಓಹ್, ಹೌದೇ ! ಎನ್ನುತ್ತಾ ತಕ್ಷಣವೇ ಕುದುರೆಯಿಂದಿಳಿದು ಮರದ ತುಂಡನ್ನು ಪಕ್ಕಕ್ಕೆ ತಳ್ಳಲು ಶ್ರಮಿಸುತ್ತಿದ್ದ ಸೈನಿಕರ ಬಳಿ ಹೊಗಿ ಅವರೊಂದಿಗೆ ಆ ಕೆಲಸದಲ್ಲಿ ತಾನೂ ನೆರವಿನ ಹಸ್ತ ನೀಡಿದ, ಈ ಹೆಚ್ಚುವರಿ ನೆರವಿನಿಂದ ಸೈನಿಕರು ಮರದ ತುಂಡನ್ನು ಪಕ್ಕಕ್ಕೆ ತಳ್ಳಿದರು. ಕಾರ್ಪೊರಲ್ ಬಳಿ ಧಾವಿಸಿ, ಮತ್ತೊಮ್ಮೆ ನಿನ್ನ ಸೈನಿಕರಿಗೆ ನೆರವು ಬೇಕಾದರೆ ನೀವು ಕಮಾಂಡರ್ ಇನ್ ಚೀಫ್ ನೆರವು ಪಡೆಯಬಹುದು ಎಂದು ತಿಳಿಸಿದ ವಾಷಿಂಗ್‌ಟನ್.

   ತನ್ನ ಕೆಲಸಗಾರರಿಗೆ ವಹಿಸಿದ ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದರೆ ‘ನಾನು ನಾಯಕ’ ಕೆಲಸ ಮಾಡಿ ಎಂದು ಆಜ್ಞೆ ಮಾಡುವುದು ಮಾತ್ರ ನನ್ನ ಕೆಲಸ’ ಎನ್ನದೆ, ಸಂದ¨sð ಬಂದರೆ ತಾನೂ ಅವರೊಡನೆ ಸೇರಿ ಕೆಲಸ ಪೂರ್ಣಗೊಳಿಸುವುದೂ ಅವಶ್ಯಕ ಎಂಬ ನೀತಿ ಪಾಠ ಕಲಿಸಿದೆ ಈ ಜಾರ್ಜ್ ವಾಷಿಂಗ್‌ಟನ್‌ನ ಈ  ಪ್ರಸಂಗ.     

                 **********


Comments