ವಧುಅನ್ವೇಷಣೆ ಕುರಿತು .... ಸಂವಾದ.

ವಧುಅನ್ವೇಷಣೆ   ಕುರಿತು  ತಂದೆ - ಮಗನ ನಡುವೆ ನಡೆದ ಸಂವಾದ.

ಲೇಖನ - ಜೆ.ಎಸ್.ಗಾಂಜೇಕರ, ಕುಮಟಾ (ಉ. ಕನ್ನಡ.)ಕರ್ನಾಟಕ


ಪಾತ್ರ : ತಂದೆ -    ಕಿಶೋರ  (ನಿವೃತ್ತ  ಅಂಚೆ ಇಲಾಖೆಯ ಗುಮಾಸ್ತ )

ಮಗ  : ಶಿವರಾಜ ( ಇತ್ತೀಚಿಗಷ್ಟೇ ನೇಮಕಗೊಂಡ  ಬ್ಯಾಂಕ್ ಅಧಿಕಾರಿ  ಯುವಕ  )

ಸಮಯ  : ಸಾಯಂಕಾಲ

ತಂದೆ : (ಗಂಭೀರ ಧ್ವನಿಯಲ್ಲಿ )ಶಿವು ,  ಬಾ ಇಲ್ಲಿ . ಕುಳಿತುಕೊ .

ಶಿವರಾಜ : (ವಿನಯದಿಂದ ) ಯಾಕಪ್ಪಾ , ಕರೆದಿರಿ ?

ತಂದೆ : ಕುಳಿತುಕೊ ಹೇಳುತ್ತೇನೆ.  ಶಿವು  , ನೀನಿಗ ಕೈ ತುಂಬಾ ಗಳಿಸುತ್ತಿದ್ದಿಯಾ . ನಿನಗೀಗ ಮದುವೆಯ ವಯಸ್ಸಾಗಿದೆ .ಈ ಹೊತ್ತು  ಜೋಯಿಷರು ಬಂದಿದ್ದರು.ಅವರು ಕೆಲವು ಹುಡುಗಿಯರ ಫೋಟೊ ತಂದಿದ್ದಾರೆ. ನೋಡು , ತೆಗೆದು ಕೊ.

ಶಿವರಾಜ : ಅಪ್ಪಾ , ನನಗೆ ಇಷ್ಟು ಬೇಗ  ಮದುವೆ ಬೇಡ. ಈಗಷ್ಟೇ ನೌಕರಿ ಸೇರಿದ್ದೇನೆ.

ತಂದೆ : ಶಿವು , ನಿನ್ನ ವಯಸ್ಸಿನವರು ಈಗಾಗಲೇ ಮದುವೆಯಾಗಿ  ಎರಡು ಮಕ್ಕಳ ತಂದೆಯಾಗಿದ್ದಾರೆ. ಮದುವೆ ಯಾಕೆ ಬೇಡ ಅಂತಿಯಾ? ನಿನಗೆ ಈಗಾಗಲೇ ಮುವತ್ತೆರಡು ಆಗಿದೆ. ಯಾರನ್ನಾದರೂ  ಪ್ರೀತಿಸುತ್ತಿದ್ದಿಯಾ ?  ನಿಜ ಹೇಳು.

ಶಿವರಾಜ :  ಇಲ್ಲಪ್ಪಾ . ಯಾರನ್ನೂ ಪ್ರೀತಿಸುತ್ತಿಲ್ಲ .

ತಂದೆ : ನೋಡು ಶಿವು, ನನಗೂ ವಯಸ್ಸಾಗಿದೆ. ನಿನ್ನ ಅಮ್ಮ ಇದ್ದಿದ್ದರೆ  ಅವಳು ಒತ್ತಾಯಿಸುತ್ತಿದ್ದಳು .ಶಿವು, ನಿನ್ನನ್ನು ಮದುವೆಯಾಗುವವಳು ಹೇಗಿರಬೇಕೆಂದು ಇಚ್ಚಿಸುತ್ತಿಯಾ ?

ಶಿವರಾಜ  : ಅಪ್ಪಾ , ನೀವು ಒಪ್ಪಿದ ಹುಡುಗಿಯನ್ನು ಮದುವೆಯಾಗುವೆ.

ತಂದೆ :  ಹಾಗಲಪ್ಪ ಶಿವು, ಮುಂದೆ ಸಂಸಾರ ಮಾಡಬೇಕಾದವನು ನೀನು.  ಬಾಳಿ ಬದುಕಬೇಕಾದವನು   ನೀನು  .ನಿನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಬೇಕಾದವನು ನೀನೇ.ಶಿವು , ಮದುವೆಯಾಗುವವಳು ಹೇಗಿರ ಬೇಕೆಂದು ಬಯಸುವೆಯಾ ? ಶ್ರೀಮಂತ ಮನೆತನದವಳೋ ? ನೌಕರಿಯಲ್ಲಿ ಇರುವವಳೋ ? ಸೌಂದರ್ಯವತಿಯೋ? ಹೇಳು.

ಶಿವರಾಜ : ಅಪ್ಪಾ , ಆಕೆ ಗುಣವಂತೆ   ಇದ್ದರೆ ಸಾಕು.

ತಂದೆ :  ( ಮಗನ  ಮನಸ್ಸು ಅರಿಯಲೋಸುಗ)  ಆಕೆ ಕುರುಪಿ ಇದ್ದರೆ ,ತುಂಬಾ ಬಡತನದವಳಾದರೆ  ಆಗಬಹುದೇ?

ಶಿವರಾಜ : ಅಪ್ಪಾ , ಆಕೆ ಬಡವಳಾದರೂ ಸರಿಯೇ, ತಕ್ಕಮಟ್ಟಿಗೆ  ಸುಂದರಿಇದ್ದರೆ ಸಾಕು.ಅದು ಅಲ್ಲದೇ, ತಾಯಿ ಇಲ್ಲದ ತಬ್ಬಲಿಯಾದ ನನ್ನನ್ನು ಯಾವ ಕೊರತೆ ಇಲ್ಲದೇ ಪೋಷಿಸಿದ ನಿಮಗೆ , ಗೌರವ ಮನ್ನಣೆ ಕೊಟ್ಟು , ಜವಾಬ್ದಾರಿಯಿಂದ  ಮನೆಯನ್ನು ನಡೆಸುವಂತವಳಾಗಿರಬೇಕು .ಎಷ್ಟೇ ಶ್ರೀಮಂತ ಮನೆತನದ ಹೆಣ್ಣಾದರು ಸರಿಯೇ  ನಿಮ್ಮ ಮನಸ್ಸನ್ನು ನೋಯಿಸುವವಳನ್ನು    ನಾನು  ಮದುವೆಯಾಗಲಾರೆ. 

ತಂದೆ : ( ಮಗನ  ಮನಸ್ಸನ್ನು ಪರೀಕ್ಷಿಸುಲೋಸುಗ )ಶಿವು, ನಿನಗೆ   ಒಂದು  ಪ್ರಶ್ನೆ  ಕೇಳುತ್ತೇನೆ. ನಿನ್ನಿಂದ ಪ್ರಾಮಾಣಿಕ ಉತ್ತರವನ್ನು ಬಯಸುತ್ತೇನೆ.

ಶಿವು :  ಕೇಳಪ್ಪಾ .ಖಂಡಿತವಾಗಿಯೂ ನಾನು ಪ್ರಾಮಾಣಿಕವಾಗಿ  ಉತ್ತರಿಸುತ್ತೇನೆ.

ತಂದೆ : ನೋಡು ಶಿವು, ನೀನು ಮದುವೆ ಆದನಂತರ ಮುಂದೆ ಕಾಲಾಂತರದಲ್ಲಿ  ಪ್ರಮೋಷನ್ ಆಗಿ ದೊಡ್ಡ ಹುದ್ದೆಗೆ ಹೋದನಂತರ ನಾನು ನಿನ್ನಲ್ಲಿದ್ದಾಗ ನಿನ್ನ ಮಡದಿ, " ಈ ಮುದಿ ಮಾವನನ್ನು   ನಮ್ಮಲ್ಲಿ ಇಟ್ಟುಕೊಳ್ಳುವುದು ಬೇಡ.ನನಗೆ ಆರೈಕೆ ಮಾಡಲು ಸಾಧ್ಯವಿಲ್ಲಾ .  ಅವರನ್ನು  ವೃದ್ಧಾ ಶ್ರಮಕ್ಕೆ ಸೇರಿಸಿ  .  ಇಲ್ಲವಾದರೆ ತವರು ಮನೆಗೆ ಹೋಗುವೆ."  ಎಂದು ಹೇಳಿದರೆ ನೀನು ಏನು ಮಾಡುವೆ ?

ಶಿವು :( ಬೇಸರ ವ್ಯಕ್ತ ಪಡಿಸುತ್ತ) ಇದೆಂಥ  ಪ್ರಶ್ನೆ  ಕೇಳಿದಿರಿ ಅಪ್ಪಾಜಿ ?

ತಂದೆ : ಬೇಸರ ಪಡಬೇಡ ಶಿವು.  ಒಂದು ವೇಳೆ ಈ ಪ್ರಸಂಗ ಬಂದರೆ ನೀನು ಏನು ಮಾಡುವೆ ? ಇಂಥ ಘಟನೆಗಳು ಜರುಗುವುದನ್ನು  ಟಿ.ವಿ. ಯಲ್ಲಿ ನೋಡಿರುತ್ತೇವೆ. ಪೇಪರನಲ್ಲಿ ಓದಿರುತ್ತೇವೆ.    ಅದಕ್ಕೆ ಕೇಳಿದೆ.

ಶಿವು : ಅಪ್ಪಾಜಿ, ಯಾವ ಪರಿಸ್ಥಿತಿಯಲ್ಲಿಯೂ ನಿಮ್ಮನ್ನು ಅನಾಥಾಶ್ರಮಕ್ಕೆ ಸೇರಿಸಲಾರೆ. ನನ್ನನ್ನು ಸಾಕಿ  ಸಲುಹಿಸಿ ವಿದ್ಯಾವಂತನನ್ನಾಗಿಮಾಡಿ ಬೆಳೆಸಿದ ನಿಮ್ಮನ್ನು ಹೆಂಡತಿಯ ಮಾತನ್ನು ಕೇಳಿ  ಅನಾಥಾಶ್ರಮಕ್ಕೆ ಸೇರಿಸುವೆನೆಂದು ತಿಳಿದಿರಾ?  ಖಂಡಿತ ಇಲ್ಲಾ.   ಈ ಸಮಯದಲ್ಲಿ ಭರವಸೆ ಕೊಡುವೆ  ಅಪ್ಪಾಜಿ.    ನಾನು ಚಿಕ್ಕವನಿರುವಾಗಲೇ ತಾಯಿಯನ್ನು ಕಳಕೊಂಡೆ. ತಾಯಿಯ ಪ್ರೀತಿಯನ್ನು ನೀಡಿದಿರಿ.  ನನ್ನ ಸರ್ವಸ್ವವೂ ನೀವಾಗಿದ್ದಿರಿ. ನಿಮ್ಮ ಇಳಿ ವಯಸ್ಸಿನಲ್ಲಿ ಸೇವೆ ಮಾಡುವುದು  ಮಗನಾಗಿ ಮಾಡುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿಯೂ ಹೌದು.  ನಾನು ಎಂದೂ ನಿಮ್ಮನ್ನು ಬಿಟ್ಟಿರಲಾರೆ.  ನಾನು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕೂಡ ನಾನು ನಿಮ್ಮ ಮಗ . ನಿಮ್ಮ ಯೋಗಕ್ಷೇಮವೇ ಮುಖ್ಯ.  ನನಗೆ ನೀವೆ ಎಲ್ಲಾ ಅಪ್ಪಾ .ಎಂದೂ ನಿಮ್ಮನ್ನು ಅನಾಥಾಶ್ರಮಕ್ಕೆ ಕಳಿಸೊಲ್ಲಪ್ಪಾ .ಈ ಮಾತು ಎಂದೂ ಹೇಳಬೇಡಿ.

ತಂದೆ : ಶಿವು, ನಾನು ಸುಮ್ಮನೆ ಕೇಳಿದೆ. ನನಗೆ ಗೊತ್ತು ನನ್ನ ಮಗ ನನ್ನ ವೃಧ್ಯಾಪ್ಯದಲ್ಲಿ  ಚನ್ನಾಗಿ ನೋಡಿಕೊಳ್ಳುತ್ತಾನೆಂದು.

ಶಿವು, ನಿನಗೆ ಸುಸಂಸ್ಕ್ತೃತ ಸಂಸ್ಕಾರವುಳ್ಳ ಮನೆತನದ ಹುಡುಗಿಯನ್ನು ತಂದು ಮದುವೆ ಮಾಡಿಸುವೆ.

ಶಿವು. : (ಸಂತೋಷದಿಂದ) ಆಗಲಿ ಅಪ್ಪಾಜಿ.

ಈ ರೀತಿಯಾಗಿ ತಂದೆ- ಮಗನ ಸಂವಾದ ಜರುಗಿತು.

-.

Comments