ಯುಗಾದಿ
ಲೇಖನ ಶ್ರೀಮತಿ ಪಲ್ಲವಿ ಕಟ್ಟಿ - Sydney
ಯುಗ
ಯುಗಾದಿ
ಕಳೆದರೂ
ಯುಗಾದಿ
ಮರಳಿ
ಬರುತಿದೆ
ಎನ್ನುವ
ಹಾಡಿನ
ಹಾಗೆ
ಈ
ವರ್ಷವೂ
ಮತ್ತೆ
ಮರಳಿ
ಬಂದಿದೆ ಯುಗಾದಿ. ಯುಗಾದಿ ಎಂದರೆ ಹೊಸ
ಯುಗದ
ಆರಂಭ.
ಭಾರತದಾದ್ಯಂತ
ವಿವಿಧ
ಹೆಸರಿನಲ್ಲಿ
ಆಚರಿಸುವಂತಹ
ಈ
ಹಬ್ಬ
ಹಿಂದೂಗಳ
ದೃಷ್ಟಿಯಲ್ಲಿ
ಬಹಳ
ಪವಿತ್ರವಾದ
ದಿನ.
ಪಕ್ಷಿಗಳಲ್ಲಿ
ನವಿಲು,
ಋತುಗಳಲ್ಲಿ
ವಸಂತ
ಋತು
ಹೇಗೆ
ಶ್ರೇಷ್ಠವೆಂದು
ಹೇಳಲ್ಪಡುತ್ತದೆಯೋ
ಹಾಗೆ
ಹಬ್ಬಗಳಲ್ಲಿ
ಶ್ರೇಷ್ಠವಾದದ್ದು
ಯುಗಾದಿ
ಹಬ್ಬ.
ಯುಗಾದಿ
ಹಬ್ಬವು
ಹಿಂದೂ
ಪುರಾಣಗಳಲ್ಲಿ ಹಾಗೂ ಇತಿಹಾಸದಲ್ಲಿ
ಬಹಳ
ವಿಶೇಷತೆಗಳ
ದಿನವಾಗಿದೆ.
ಚೈತ್ರ
ಮಾಸದ,
ಶುಕ್ಲ
ಪಕ್ಷದ
ಪಾಡ್ಯದಂದು
ಈ
ಹಬ್ಬವನ್ನು
ಆಚರಿಸುವ
ರೂಢಿ.
ಚಿಕ್ಕಂದಿನಿಂದ
ಮನೆಯಲ್ಲಿ
ಯುಗಾದಿ
ಹಬ್ಬವನ್ನು
ಬಹಳ
ಸಡಗರದಿಂದ
ಆಚರಿಸುವುದನ್ನು
ನೋಡಿದ್ದೇನೆ.
ಪರೀಕ್ಷೆಯ
ಸಮಯದಲ್ಲಿ
ಅಥವಾ
ಪರೀಕ್ಷೆ
ಮುಗಿದ
ಕೂಡಲೇ
ಬರುವ
ಹಬ್ಬ
ಇದಾಗಿತ್ತು.
ಎಷ್ಟೋ
ಬಾರಿ
ಧಾರವಾಡದಲ್ಲಿ
ಅಜ್ಜ
ಅಜ್ಜಿಯ
ಮನೆಯಲ್ಲಿ
ಆಚರಿಸಿದ್ದುಂಟು.
ಹಬ್ಬದ
ಹಿಂದಿನ ದಿನವೇ ಮಾವಿನ ತೋರಣ ತಯಾರಿಸುವುದು,
ಹಬ್ಬದ
ದಿನ
ಅಭ್ಯಂಗ
ಸ್ನಾನಕ್ಕೆ
ಹಂಡೆಯಲ್ಲಿ
ನೀರು
ತುಂಬಿಸಿ
ಅದರಲ್ಲಿ
ಬೇವಿನ
ಎಲೆ
ಸಮೇತ
ಒಂದೆರಡು
ಟೊಂಗೆಯನ್ನು
ಹಾಕುವುದು
ಹೀಗೆ ಹಬ್ಬಕ್ಕೆ ಎಲ್ಲರೂ ಸಜ್ಜಾಗುತ್ತಿದ್ದೆವು..
ಒಮ್ಮೆ ಅಮ್ಮನನ್ನು ಕೇಳಿದ್ದೆ ನೀರಿಗೆ
ಬೇವಿನ
ಎಲೆ
ಏಕೆ
ಎಂದು.
ಬೇವಿಗೆ
ಔಷಧೀಯ
ಗುಣಗಳಿವೆ.
ಈ
ನೀರಿನಲ್ಲಿ
ಸ್ನಾನ
ಮಾಡಿದರೆ
ಯಾವುದೇ
ಚರ್ಮದ
ಕಾಯಿಲೆ
ಬರುವುದಿಲ್ಲ
ಎಂದು
ಅಮ್ಮ ತಿಳಿ ಹೇಳಿದ್ದಳು.
ಸ್ನಾನದ
ನಂತರ
ಅಜ್ಜನ
ಪೂಜೆ,
ಇದ್ದಿಲ
ಒಲೆಯ
ಮೇಲೆ
ಅಜ್ಜಿಯ
ಮಡಿ
ಅಡಿಗೆ,
ನಂತರ
ನೈವೇದ್ಯ
ಮತ್ತೆ
ಪ್ರಸಾದ.
ಇದಾದ
ನಂತರ
ಅಜ್ಜನ
ಪಂಚಾಂಗ
ಪಠನೆ.
ಯಾವುದೇ
ಆಯ
ಇಲ್ಲದಿದ್ದರೂ ಪ್ರತೀ ವರ್ಷ ನನ್ನ
ಆಯ
ವ್ಯಯ
ಏನು
ಎಂದು
ತಿಳಿದು
ಕೊಳ್ಳುವ
ಕುತೂಹಲ. ಪ್ರಸಾದಕ್ಕೆ ಬೇವು ಬೆಲ್ಲ
ಸ್ವಲ್ಪವೂ
ಇಷ್ಟವಾಗದಿದ್ದರೂ
ಅಜ್ಜನ ಭಯಕ್ಕೆ ತಿನ್ನಲೇ ಬೇಕಾದ ಪರಿಸ್ಥಿತಿ.
ಮತ್ತೇ
ಅಮ್ಮನನ್ನ
ಕೇಳಿದ್ದೆ.
ಬರೀ
ಬೆಲ್ಲವೊಂದಿದ್ದರೆ
ಸಾಕಮ್ಮ
ಜೊತೆಗೆ
ಬೇವು
ಏಕೆ
ಎಂದು.
ಅದಕ್ಕೆ
ಅಮ್ಮ
ಬೇವು
ಬೆಲ್ಲ
ಮನುಷ್ಯನ
ಜೀವನದ
ಸುಖ
ದುಃಖಗಳ
ಸಂಕೇತ.
ಬೇವು
ಬೆಲ್ಲ
ತಿನ್ನುವುದರ ಮೂಲಕ ನಮ್ಮ ಜೀವನದಲ್ಲಿ
ಸುಖ
ಹಾಗು
ದುಃಖ
ಸರಿಸಮನಾಗಿ
ಇರಲಿ
ಎಂದು
ಆ
ಪರಮಾತ್ಮನಲ್ಲಿ
ಬೇಡಿಕೊಳ್ಳುತ್ತೇವೆ
ಎ೦ದು ವಿವರಿಸಿದ್ದಳು.
ಎಷ್ಟು
ಸುಂದರವಾದ ಆಚರಣೆಗಳು!! ಈ ಸಣ್ಣ
ಸಣ್ಣ
ಆಚರಣೆಗಳ
ಹಿಂದೆ
ಎಷ್ಟು
ಸುಂದರವಾದ
ಆಳವಾದ
ಅರ್ಥ
ಅಡಗಿವೆ!!
ಎಷ್ಟೋ
ವರ್ಷಗಳವರೆಗೂ
ಯುಗಾದಿ
ಹಬ್ಬದ
ಮಹತ್ವ
ಏನು
ಎಂಬುದರ
ಬಗ್ಗೆ
ನನಗೆ
ಅರಿವೇ
ಇರಲಿಲ್ಲ.
ಒಮ್ಮೆ
ಅಜ್ಜನನ್ನು
ಕೇಳಿದ್ದೆ
ಆಗ
ಅವರು
ಕೆಲವೊಂದು
ಕಥೆಗಳನ್ನು
ಹೇಳಿದ್ದರು.
ಆ
ಕಥೆಗಳು
ಇನ್ನೂ
ನನ್ನ
ನೆನಪಿನಲ್ಲಿ
ಉಳಿದಿವೆ.
ಹಿಂದೂ
ಪುರಾಣಗಳ
ಪ್ರಕಾರ
ಸೋಮಕಾಸುರನೆಂಬ
ಒಬ್ಬ
ರಾಕ್ಷಸ
ಬ್ರಹ್ಮ
ದೇವನಿಂದ
ವೇದಗಳನ್ನು ಕದ್ದು ಸಮುದ್ರದಲ್ಲಿ
ಅಡಗಿಸಿಟ್ಟನಂತೆ.
ಹೊಸ
ಬ್ರಹ್ಮಾಂಡವನ್ನು
ಸೃಷ್ಟಿಸಬೇಕೆಂದಿದ್ದ
ಬ್ರಹ್ಮ
ದೇವರಿಗೆ
ಈ
ವೇದಗಳ
ಪುನಃ
ಪ್ರಾಪ್ತಿ
ಅನಿವಾರ್ಯವಾಗಿತ್ತು.
ಅದಕ್ಕಾಗಿ
ಬ್ರಹ್ಮದೇವರು
ಭಗವಾನ್
ವಿಷ್ಣುವಿನ
ಮೊರೆ
ಹೋದರು.
ಆಗ
ವಿಷ್ಣು
ತನ್ನ
ಮತ್ಸ್ಯಾವತಾರದಲ್ಲಿ
ಬಂದು
ಸೋಮಕಾಸುರನನ್ನು
ಕೊಂದು
ವೇದಗಳನ್ನು
ಬ್ರಹ್ಮದೇವರಿಗೆ
ಹಿಂದಿರುಗಿಸಿದನಂತೆ.
ನಂತರ
ಬ್ರಹ್ಮದೇವರು
ಈ
ಸೃಷ್ಟಿಯನ್ನು
ಸೃಷ್ಟಿಸಿದರಂತೆ. ಯುಗಾದಿಯ ದಿನವೇ ಈ
ಬ್ರಹ್ಮಾಂಡವು
ಸೃಷ್ಟಿಯಾದ
ದಿನ
ಎಂಬ ನಂಬಿಕೆ. ಪ್ರಕೃತಿಮಾತೆಯು
ಹರ್ಷೋಲ್ಲಾಸದಿಂದ
ತುಂಬಿ
ಎಲ್ಲೆಡೆ
ಹಸಿರು
ಮರ
ಬಳ್ಳಿಗಳನ್ನು,
ಹೂವು
ಹಣ್ಣುಗಳನ್ನು
ಮನು
ಕುಲಕ್ಕೆ
ಕಾಣಿಕೆಯ
ರೂಪದಲ್ಲಿ
ಕೊಡುತ್ತಾಳೆ.
ಶ್ರೀ
ರಾಮ
ಚಂದ್ರನು
ಲಂಕೆಯಲ್ಲಿ
ರಾವಣನ್ನು
ಸಂಹರಿಸಿ
ಸೀತಾ
ಮಾತೆಯೊಂದಿಗೆ
ಅಯೋಧ್ಯೆಗೆ
ಬಂದು
ರಾಮರಾಜ್ಯ
ಆರಂಭಿಸಿದ
ದಿನವೇ
ಯುಗಾದಿಯ
ದಿನ ಎಂದೂ ಪುರಾಣಗಳಲ್ಲಿ
ಇದೆಯಂತೆ.
ಪರದೇಶದಲ್ಲಿದ್ದರೂ
ನನ್ನ
ಮಕ್ಕಳಿಗೆ
ಈ
ಹಬ್ಬ
ಹರಿದಿನಗಳ
ಬಗ್ಗೆ
ನಮ್ಮ
ಆಚಾರ,
ಸಂಸ್ಕೃತಿಗಳ
ಬಗ್ಗೆ
ಹೇಳಿಕೊಡಬೇಕು
ಎಂಬುದು
ನನ್ನ
ಉದ್ದೇಶ.
ಅದಕ್ಕಾಗಿಯೇ
ಈ
ವರ್ಷವೂ
ಯುಗಾದಿ
ಹಬ್ಬ
ಆಚರಿಸಬೇಕು
ಎಂಬ
ನನ್ನ
ಪ್ರಯತ್ನ
ಪೂರ್ತಿಯಾಗಿ
ಫಲಿಸಲಿಲ್ಲ. ಬೇವು ಬೆಲ್ಲಕ್ಕೆ ಬೇವು
ಸಿಗಲೇ
ಇಲ್ಲ.
ನನ್ನ
ಗೆಳತಿಗೆ
ಕರೆ
ಮಾಡಿ
ಬೇವು
ಸಿಗಲಿಲ್ಲ
ಕಣೇ
ಎಂದರೆ ಆಕೆ ಹೋಗಲಿ ಬಿಡೆ ನಿನ್ನ ಜೀವನದಲ್ಲಿ ಬರೀ
ಸುಖವೇ
ಇರಲಿ
ಬೇವಿನ
ಕಹಿ
ಬೇಡ
ಎಂದು
ಹಾರೈಸಿದಳು. ಆಗ
ಯೋಚಿಸಿದೆ
ಬೇವಿನ
ಕಹಿಯೇ
ಇಲ್ಲದಿದ್ದರೆ ಸುಖದ ಸಿಹಿಗೆ ಎಲ್ಲಿಯ ಬೆಲೆ? ಸುಖ ದುಃಖಗಳ ಸಮತೋಲನವೇ ನಮ್ಮೆಲ್ಲರ
ಜೀವನದ
ಆಧಾರದಲ್ಲವೇ?
ಯುಗಾದಿಯ ಹಿನ್ನೆಲೆಯನ್ನೂ ಅದರ ಮಹತ್ವವನ್ನೂ ಪರಿಚಯಿಸುವ ಸುಂದರ ಲೇಖನ. ಲೇಖಕಿಯರಿಗೆ ಅಭಿನಂದನೆಗಳು.
ReplyDelete