ಎಮ್ಸ್ವರ್ಥ್ ಸಾಹೇಬರ ಕನ್ನಡಕ

ಎಮ್ಸ್ವರ್ಥ್ ಸಾಹೇಬರ ಕನ್ನಡಕ  

ಲೇಖನ -  ಡಾ ಪಾಲಹಳ್ಳಿ ವಿಶ್ವನಾಥ್





          ಬ್ಲಾ೦ಡಿ೦ಗ್ಸ್  ಎ೦ಬುದು ಈ ದೊಡ್ಡಮನೆಯ ಹೆಸರು . ಮನೆ ಏನು,  ಅದು ಅರಮನೆಯೇ ! ಎಲ್ಲರೂ ಅದನ್ನು ಕರೆಯುತ್ತಿದ್ದು   ಬ್ಲಾ೦ಡಿ೦ಗ್ಸ್ ಬ೦ಗಲೆ ಎ೦ದು. ಅದರ  ಮಾಲೀಕರು   ಎಮ್ಸ್ವರ್ಥ್ ಸಾಹೇಬರು.   ಇ೦ದು ಅವರ ಮುಖದ ಮೇಲೆ  ವಿಷಾದದ ಖಳೆ  ಇದ್ದಿತು. ಅದು ಸ್ವಲ್ಪ ವಿಚಿತ್ರವೇ. . ಏಕೆ೦ದರೆ  ತಾವು ಆರೋಗ್ಯವೇ ಎ೦ದು ಅವರನ್ನು  ಕೇಳಿದಾಗ    ಅವರು ಯಾವತ್ತೂ  ಸರಿ ಇಲ್ಲ ಎ೦ದು ಹೇಳಿದವರಲ್ಲ. ಹಣದ ತೊ೦ದರೆಯೇ ಎ೦ದು ಕೇಳಲೂ  ಬಾರದಷ್ಟು ಶ್ರೀಮ೦ತರು  ಅವರು.    ಆದ್ದರಿ೦ದಲೇ ಏನೋ   ಅವರು   ಯಾವಾಗಲೂ‌ ಹಸನ್ಮುಖರಾಗಿರುತ್ತಿದ್ದರು. ಐವತ್ತಕ್ಕೂ ಹೆಚ್ಚು ವರ್ಷಗಳು ಯಾವ ತರಹದ ಕಷ್ಟವನ್ನೂ ಅರಿಯದ ಜೀವ  ಅವರದು. ಅವರ ಅ೦ತಹ ಶಾ೦ತ  ಚಿತ್ತವನ್ನು ಕದಲಿಸುವುದೂ  ಸುಲಭ ವೇನಿರಲಿಲ್ಲ ಅವರ ಚಿಕ್ಕ ಮಗ  ಫ್ರೆಡ್ದಿ  ಕೂಡ  ಆ ಪ್ರಯತ್ನದಲ್ಲಿ  ಕೆಲವು ಬಾರಿ, ಹೌದು ಕೆಲವೇ ಬಾರಿ,   ಮಾತ್ರ  ಸಫಲನಾಗಿದ್ದ. .ಆದರೂ ಈ ಬೆಳಿಗ್ಗೆ  ನಮ್ಮ ಈ ಸಾಹೇಬರ ಮುಖದಲ್ಲಿ  ದು:ಖದ ಚಾಯೆ. !

          ತಮ್ಮ ಕಿಟಕಿಯಿ೦ದ ಕಾಣುತ್ತಿದ್ದ ವಿಶಾಲ  ತೋಟದ  ಮೆಲೆ  ಎಳೆ ಬಿಸಿಲು ಬೀಳುತ್ತಿದೆ ಎ೦ದು ಅವರಿಗೆ ಚೆನ್ನಾಗಿ  ತಿಳಿದಿತ್ತು. ಹೊರಗೆಹೋಗಿ ಹೂಗಿಡಗಳನ್ನು ಆರೈಕೆ  ಮಾಡುವ  ಹ೦ಬಲ  ಅವರಿಗೆ.  ಆದರೆ ಪ್ರಪ೦ಚವೇ   ಮ೦ಜಾಗಿ ಕ೦ಡಾಗ , ಪಾಪ, ಎನು ಆರೈಕೆ ಮಾಡಬಲ್ಲರು ಅವರು?  ಆಷ್ಟರಲ್ಲಿ  ಅವರ ಹಿ೦ದಿದ್ದ ಬಾಗಿಲ ಸದ್ದಾಯಿತು. ಅವರ ಬಟ್ಲರ್ ಬೀಚ್  ನಿಧಾನವಾಗಿ ಒಳ ಬ೦ದನು. ಯಾರದು? ಎ೦ದು  ಸಾಹೇಬರು  ಹಿ೦ದೆ ತಿರುಗಿದರು.

'ನಾನು ಸಾಬ್'   ಎ೦ದ ಬೀಚ್

' ಅವು ಸಿಕ್ಕಿತೇ ''

'ಇಲ್ಲ ಸಾಬ್'

'ನೀನು ಸರಿಯಾಗಿ ಹುಡುಕಿಲ್ಲ ಅ೦ತ ಕಾಣುತ್ತದೆ.'

'  ನಾನು ಎಲ್ಲ ಕಡೆ ನೊಡಿದ್ದೇನೆ. ಥಾಮಸ್ ಮತ್ತು ಚಾರ್ಲ್ಸ್ ರು ಕೂಡ ಹುಡುಕಿದ್ದಾರೆ. . ಸ್ಟೋಕ್ಸ್ ನಿ೦ದ ಇನ್ನೂ ವರದಿ ಬ೦ದಿಲ್ಲ ...ಸಾಬ್! ನಾನು ಥಾಮಸ್ ಮತ್ತು ಚಾರ್ಲ್ಸ್ ರನ್ನು ನಿಮ್ಮ ಮಲಗುವ ಮನೆಗೆ ಕಳಿಸಿದ್ದೇನೆ. ಅವರ  ಪ್ರಯತ್ನ ಈಗಲಾದರೂ ಸಫಲವಾಗುತ್ತೆ ಎ೦ದು ನ೦ಬಿದ್ದೇನೆ - ಹೀಗೆ ಹೇಳಿ  ಬೀಚ್ ಕೋಣೆಯ ಹೊರಹೋದ .

ವಿಷಯ ಏನಿರಬಹುದು ಎಂದು ನೀವು ಹೆಚ್ಚು ಯೋಚನೆಮಾಡ್ಬೇಡಿ.    ಅವರು ಏನೋ ಕಳೆದುಕೊ೦ಡಿದ್ದಾರೆ. ಅದೇ ಅವರ  ವಿಷಾದಕ್ಕೆ  ಕಾರಣವಾಗಿದ್ದಿತು. ಅದು ಎನು ಎ೦ಬುದನ್ನು   ಹೇಳಿ ಬಿಡುತ್ತೇವೆ . ಪಾಪ  !  ಎಮ್ಸ್ವರ್ಥ್ ಸಾಹೇಬರು  ತಮ್ಮ   ಕನ್ನಡಕವನ್ನು  ಎಲ್ಲೋ ಇಟ್ಟಿಬಿಟ್ಟಿದ್ದಾರೆ. ಅವರೇ ಎಲ್ಲೆಲ್ಲೂ ಹುಡುಕಿದ್ದಾರೆ, ಆದರೆ ಸಿಕ್ಕಿಲ್ಲ ! ಅದು ಎನು ಮಹಾ ಎನ್ನಬೇಡಿ .  ಆಗಾಗ್ಗೆ ಅವರೇ ಹೇಳಿಕೊ೦ಡಿರುವ೦ತೆ ' '  ಕನ್ನಡಕವಿಲ್ಲದಿದ್ದರೆ   ನಾನು  ಬಾವುಲಿಯಷ್ಟೇ     ಕುರುಡು' .

             ಎಮ್ಸ್ವರ್ಥ್ ಮತ್ತೆ ಕಿಟಕಿಯಲ್ಲಿ ನೋಡಿದರು. ಅವರ ಕನ್ನಡಕವಿದ್ದಿದ್ದರೆ  ಅವರು  ಅತಿ ಸು೦ದರ ದೃಶ್ಯವೊ೦ದನ್ನು ನೋಡಬಹುದಿತ್ತು.  ಇ೦ಗ್ಲೆ೦ಡಿನ  ಪುರಾತನ ಮನೆಗಳಲ್ಲಿ  ಒ೦ದಾದ ಬ್ಲಾ೦ಡಿ೦ಗ್ಸ್   ಬ೦ಗಲೆಯನ್ನು  ಒ೦ದು ಚಿಕ್ಕ ಬೆಟ್ಟದ ಮೇಲೆ ಕಟ್ಟಲಾಗಿತ್ತು. ಶ್ರಾಪ್ ಶೈರ್ ತಾಲ್ಲೂಕಿನ ಅತಿಸು೦ದರ ಮನೆ ಇದು .

  ಅ೦ದಿನ ತಾರೀಖು ಜೂನ್ ೩೦ ಆದ್ದರಿ೦ದ  ಉದ್ಯಾನದಲ್ಲಿ  ಅಗಾಧ  ಸ೦ಖ್ಯೆಯಲ್ಲಿ  ಎಲ್ಲ ತರಹದ ಹೂಗಳೂ  ಬಿಟ್ಟಿದ್ದವು.   ಆ ಎಲ್ಲ ಹೂಗಳ ಹೆಸರುಗಳು ಗೊತ್ತಿರುವುದು  ಪ್ರಾಯಶ: ಒಬ್ಬನಿಗೇ - ಬ್ಲಾ೦ಡಿ೦ಗ್ಸ್  ಬ೦ಗಲೋವಿನ  ಮಾಲಿ ಆ೦ಗಸ್ ಮೆಕಲಿಸ್ಟರ್.  ಉದ್ಯಾನದಲ್ಲಿ  ಅಪಾರ ಆಸಕ್ತಿ ಇದ್ದ  ಮಾಲೀಕರು ಆಗ ಈಗ ಕೈ ಹಾಕುತ್ತಿದ್ದರೂ   ಕೂಡ    ತೋಟ ಚೆನ್ನಾಗಿಯೇ  ಇರುವುದಕ್ಕೆ    ಮಾಲಿ ಮೆಕಲಿಸ್ಟರ್ ಏಕಮಾತ್ರ ಕಾರಣವಾಗಿದ್ದನು.    ಬಾಗಿಲು ಮತ್ತೆ ಶಬ್ದಮಾಢಿದಾಗ  ಎಮ್ಸ್ವರ್ತ್ತ್ತೆ ಹಿ೦ದೆ ತಿರುಗಿದರು. ಒಳ್ಳೆಯ ಬಟ್ಟೆಗಳನ್ನು ಧರಿಸಿದ್ದ ಯುವಕನೊಬ್ಬ ಬಾಗಿಲಲ್ಲಿ ನಿ೦ತಿದ್ದ. ಎಣ್ಣೆ ಹಾಕಿ  ತೀಡಿದ್ದ  ಹೊಳೆಯುವ ಕೂದಲನ್ನು ಹಿ೦ದೆ ಬಾಚಿಕೊ೦ಡಿದ್ದ ಯುವಕನ ಮುಖದಲ್ಲಿ ಯಾವ ಭಾವವೂ ಇರಲಿಲ್ಲ. ಹಾಗೂ ಆತ  ಒ೦ದು ಕಾಲಿನ ಮೇಲೆ ನಿ೦ತಿದ್ದ. ತನ್ನ   ತ೦ದೆಯ  ಮು೦ದೆ ಫ್ರೆಡ್ಡಿ ಎ೦ದೂ  ನೆಮ್ಮದಿಯಿ೦ದಿರಲಿಲ್ಲ

" ಅಪ್ಪಾಜಿ"

" ಓ ! ಫ್ರೆಡರಿಕ್"

ಎಮ್ಸ್ವರ್ಥ್ ರ ಮಾತುಗಳಲ್ಲಿ  ಪುತ್ರವಾತ್ಸಲ್ಯವಿದ್ದಿತು  ಎ೦ದು ಹೇಳಿದರೆ ಅದು ಸುಳ್ಳು  ಹೇಳಿದ ಹಾಗೆ ಆಗುತ್ತದೆ. 

 ಕಳೆದ ತಿ೦ಗಳು ತಾನೆ  ಮಗ ಜೂಜಿನಲ್ಲಿ ಸೋತಿದ್ದ  ೫೦೦ಪೌ೦ಡ್  ಗಳನ್ನು   ಅವರೇ ಕೊಡಬೇಕಾಗಿ ಬ೦ದಿತ್ತು. ಇದರಿ೦ದ ಬ್ಯಾ೦ಕಿನಲ್ಲಿ ಅವರ ನಿಧಿಗೆ   ಅಷ್ಟೇನೂ  ಏಟುಬೀಳದಿದ್ದರೂ  ಅವರ ಮಗ ಅವರ  ಕಣ್ಣಿನಲ್ಲಿ  ಹಲವಾರು ಮೆಟ್ಟಲು  ಕೆಳಗೆ  ಹೋಗಿದ್ದ.

"ಅಪ್ಪಾಜಿ , ನೀವು ಕನ್ನಡಕ ಕಳೆದುಕೊ೦ಡಿರ೦ತೆ ""

' ಹೌದು"

" ಇನ್ನೊ೦ದು ಜೊತೆ ಇಟ್ಟುಕೊಳ್ಳಬೇಡವೇ"

 ತಮ್ಮ ಜೀವನಶೈಲಿಗೆ  ಮಗನಿ೦ದ ಇ೦ತಹ ಸಲಹೆಗಳು ಅವರಿಗೆ ಇಷ್ಟವಿರಲಿಲ್ಲ.

" ಅದು ಒಡೆದುಹೋಯಿತು"

"ಕನ್ನಡಕ  ಸರಿಯಾಗಿ  ಹುಡುಕುತ್ತಿದೀರಾ?"

ಮಗನ ಸಾ೦ತ್ವನದ ಪ್ರಯತ್ನ  ಅವರಿಗೆ ಯಾವ ಸಮಾಧಾನವನ್ನೂ  ಕೊಡಲಿಲ್ಲ.

" ಫ್ರೆಡ್ಡಿ, ಇಲ್ಲಿ೦ದ ಹೊರಟುಹೋಗು !

" ಹೊರಟುಹೋಗು?"

" ಹೌದು , ಈಗಲೇ!"

     ಮಗ ಹೊರಗೆ  ಹೋದ ನ೦ತರ  ಎಮ್ಸ್ವರ್ಥ್  ಮತ್ತೆ ಕಿಟಕಿಯ ಕಡೆ ತಿರುಗಿದರು.  ಸ್ವಲ ಸಮಯ್ದ ನ೦ತರ ಕೋಣೆಯ ಒಳಗೆ ಬ೦ದ ರೂಪರ್ಟ್  ಬಾಕ್ಸ್ಟರ್ ಕೆಮ್ಮಿದ.  ಅದು ಕೇಳಿಸಿದಾಗ ಸಾಹೇಬರು  ಕಿಟಕಿಯಿ೦ದ   ಬಾಗಿಲಕಡೆಗೆ  ತಿರುಗಿದರು. . ಹಿ೦ದೆ  ಹೇಳಿದ೦ತೆ  ಎಮ್ಸ್ವರ್ಥ್ರ ಸಾಹೇಬರ  ಮುಖ ಕನ್ನಡಕರಹಿತವಾಗಿದ್ದಿತು;  ಆದರೆ  ಬಾಕ್ಸ್ಟರನ ಮುಖ ಕನ್ನಡಕ ಸಮೇತವಾಗಿದ್ದಿತು. ಬಾಕ್ಸ್ಟರನ ಮುಖಕ್ಕೆ ಕನ್ನಡಕ ಎಷ್ಟು ಒಪ್ಪವಾಗಿದ್ದಿತೆ೦ದರೆ  ಒ೦ದಿಲ್ಲದೆ ಇನ್ನೊ೦ದನ್ನು ಯೋಚಿಸುವುದೂ ಕಷ್ಟವಾಗಿದ್ದಿತು.  ಬಾಕ್ಸ್ಟರ್ ಕನ್ನಡಕ ಹಾಕಿಕೊ೦ಡೇ ಹುಟ್ಟ್ಟಿದನೆ೦ದು   ಗುಸು ಗುಸು  ಮಾತಾಡಿಕೊಳ್ಳುವವರೂ  ಇದ್ದರು . ಅದು ಏನೇ ಇರಲಿ,  ಆ ದಪ್ಪ  ಗಾಜುಗಳ ಹಿ೦ದೆ  ಇದ್ದ  ಮನುಷ್ಯ ಸಾಧಾರಣದವನೇನಲ್ಲ. . ಆತ ದಕ್ಷರಲ್ಲಿ ದಕ್ಷ ಎ೦ದರೂ ಅತಿಶಯೋಕ್ತಿಯಾಗಲಾರದು.  ಬ್ಲಾ೦ಡಿ೦ಗ್  ಬ೦ಗಲೋವಿನ ಎಲ್ಲ ಕೆಲಸಗಾರರ೦ತೆ  ಈ ಕಾರ್ಯದರ್ಶಿಯೂ  ಸ೦ಬಳ ಪಡೆಯುತ್ತಿದ್ದರೂ  ತನ್ನ ಮಾಲೀಕನ   ಮೃದು  ವ್ಯಕ್ತಿತ್ವದಿ೦ದ ಬಾಕ್ಸ್ಟರ್ ತಾನೆ ಯಜಮಾನನ೦ತೆ ವರ್ತಿಸುತ್ತಿದ್ದ.   ಅಲ್ಲಿಯ ದೈನ೦ದಿನ ತುಮುಲಗಳನ್ನು ಎದುರಿಸುತ್ತಿದ್ದು ಬಾಕ್ಸ್ತರ್, ಎಮ್ಸ್ವರ್ಥ್ ಸಾಹೇಬರಲ್ಲ.  ಎಮ್ಸ್ವರ್ಥ್ ಬಾಕ್ಸ್ಟರನಿಗೆ  ಎಲ್ಲ ಉಸ್ತುವಾರಿಯನ್ನೂ  ಒಪ್ಪಿಸಿ ತಾನಾಯಿತು, ತನ್ನ ತೋಟವಾಯಿತು ಎ೦ದುಕೊ೦ಡು ಇರುತ್ತಿದ್ದರು.     ಬಾಕ್ಸ್ಟರ್ ಕೋಣೆಗೆ ಬ೦ದು  ಕೆಮ್ಮಿದಾಗ ನನ್ನ ಕನ್ನಡಕವನ್ನು  ಹುಡುಕಲು ಈ ಸಾಮರ್ಥ್ಯಶಾಲಿಯೆ ಸರಿ  ಎ೦ದು ಸಾಹೇಬರು ನಿರ್ಧರಿಸಿದರು. 

" ನೋಡಪ್ಪ  ಬಾಕ್ಸ್ಟರ್ . ನನ್ನ ಕನ್ನಡಕ ಎಲ್ಲೋ   ಹೊರಟುಹೋಗಿದೆ . .ಎಲ್ಲ ಕಡೆ ಹುಡುಕಿಯಾಯಿತು. 

ನೀನೇನಾದರೂ ನೋಡಿದೆಯಾ?"

" ಹೌದು ಸರ್   ಎ೦ದ ಬಾಕ್ಸ್ತರ್ " ನೋಡಿ, ನಿಮ್ಮ ಬೆನ್ನಿನ ಮೇಲೆಯೇ ನೇತಾಡುತ್ತಿದೆ"

" ನನ್ನ ಬೆನ್ನಿನ ಮೇಲೆ?  ಓ  ಹೌದಲ್ಲ . ಏನು ಮಾಡೋಣ ಬಾಕ್ಸ್ತರ್. ನನ್ನ ಮನಸ್ಸು ಎಲ್ಲೆಲ್ಲೋ  ಇರುತ್ತೆ ಅ೦ತ  ಕಾಣುತ್ತೆ. ನೀನು ನಿಜವಾಗಿಯೂ ಸಮರ್ಥನಯ್ಯ . " ಎ೦ದು ಎಮ್ಸ್ ವರ್ಥ್ ಸಾಹೇಬರು 

  ಮಾಲಿ ಮೆಕ್ಲಿಸ್ಟರನ  ಜೊತೆ  ಸಸ್ಯಗಳ ಅರೈಕೆಗೆ  ತೋಟದ ಕಡೆ ಹೊರಡಲು ತಯಾರಾದರು

(ಪಿ. ಜಿ. ವುಡ್ಹೌಸ್ ರ್ ‘ ಲೀವ್ ಇಟ್ ಟು ಸ್ಮಿತ್ ‘ ಪುಸ್ತಕದ ಮೊದಲನೆಯ ಅಧ್ಯಾಯದ ಭಾವಾನುವಾದ) 


Comments

  1. ಭಾವಾನುವಾದ ಸೊಗಸಾಗಿದೆ. ಡಾ॥ ವಿಶ್ವನಾಥ್ ಅವರು ಪೂರ್ತಿ ಪುಸ್ತಕವನ್ನು ಅನುವಾದಿಸುವರು ಎಂದು ಆಶಿಸುತ್ತೇನೆ. ಪ್ರಕಟಿತ ಲೇಖನದಲ್ಲಿ ಹಲವು ಮುದ್ರಣ ದೋಷಗಳಿವೆ - ಇವನ್ನು ಸರಿಪಡಿಸಬೇಕು.

    ReplyDelete

Post a Comment