ಕಲ್ಲಿಗೂ ಒಂದು ಕಥೆಯುಂಟೇ ! ?

ಕಲ್ಲಿಗೂ ಒಂದು ಕಥೆಯುಂಟೇ ! ? 

                                           ಲೇಖಕರು : ಎಂ ಆರ್ ವೆಂಕಟರಾಮಯ್ಯ         


           

                     

    “ಕಲ್ಲಿಗೂ ಕಥೆಯುಂಟೇ “ ? ಎಂದಿರುವ ಶೀರ್ಷಿಕೆಯನ್ನು ಓದಿದವರು, ಕಲ್ಲು ಒಂದು ಜಡ ವಸ್ತು, ನಿರ್ಜೀವ ವಸ್ತು, ಹೀಗಿರುವಾಗ ಇದಕ್ಕೇನು ಕತೆ ಇರಲು  ಸಾಧ್ಯ  ರ‍್ರೀ  ? ಎಲ್ಲಿ ತಳ್ಳಿದರೆ ಅಲ್ಲಿ ಬಿದ್ದಿರುತ್ತೆ ಅನ್ನೋ ವಾದ ಬಹಳಷ್ಟು ಜನರದ್ದು.  ಈ ವಾದ ಸರಿಯೇ ? ನೀವೇ ಯೋಚಿಸಿ ಹೇಳಿ. ನಮ್ಮ ನಿಮ್ಮ ವಾಸದ ಮನೆಗಳಿಗೆ, ದೊಡ್ಡ ಬಂಗಲೆಗಳಿಗೆ,  ಸರ್ಕಾರಿ, ಖಾಸಗಿ ಕಚೇರಿಗಳು, ವ್ಯಾಪರಸ್ಥರ ಮಳಿಗೆಗಳು, ಮಹಡಿ ಮೆಟ್ಟಿಲುಗಳಿಗೆ  ಬಳಸಿರುವ ಕಲ್ಲುಗಳನ್ನು ಈ ಕಟ್ಟಡಗಳ ಮಾಲಿಕರೇ ಸ್ವತಃ ತಯಾರಿಸಿದ್ದರೆ ?  ಶಿಲ್ಪಿಗಳ ಕೈ ಸೆರೆಯಾಗಿ ಜನರ ಕಣ್ ಮನಗಳಿಗೆ ಸಂತಸ ಕೊಡುತ್ತಿರುವ  ಅಂದವಾದ ಕಲಾಕೃತಿಗಳಿಗೆ ,  ದೇವಾಲಯಗಳಲ್ಲಿನ ದೇವ ದೇವತೆಗಳ ಮೂರ್ತಿಗಳನ್ನು ಕೆತ್ತಲು ಬಳಸಿದ ಕಲ್ಲುಗಳು,  ದೊರಕಿದ್ದೆಲ್ಲಿ ? ಇವರ ಸಮೀಪದಲ್ಲಿಯೇ ಬಿದ್ದಿತ್ತೇ ?  ಈ ಕಲ್ಲುಗಳು ಹಾದಿ  ಬೀದಿಗಳಲ್ಲಿ ಬಿದ್ದಿದ್ದೋ, ಹಲವಾರು ವರ್ಷಗಳ ಕಾಲ, ಹಲವಾರು ಮೈಲಿಗಳ ದೂರದಲ್ಲೆಲ್ಲೋ  ಕಂಡು ಬಂದಿದ್ದ ಗುಡ್ಡ ಬೆಟ್ಟ ಪರ್ವತಗಳ ಮೇಲೆ ಯರ‍್ಯಾರದೋ ಕಾಲ್ ತುಳಿತಕ್ಕೆ ಸಿಲುಕಿ, ಅವರಿವರಿಂದ ಒದೆ ತಿಂದ ಕಲ್ಲುಗಳು ಇವಾಗಿರಬಹುದು, ಹೀಗೆ ಎಲ್ಲೊ ಹುಟ್ಟಿ ಎಲ್ಲೋ ಬೆಳೆದು,  ಯಾರೋ ಸಜ್ಜನರ ಕೈ ಚಳಕಕ್ಕೆ ಸಿಲುಕಿ ಈ ಕಲ್ಲುಗಳು  ಉನ್ನತ, ಪೂಜ್ಯ ಸ್ಥಾನ ಸೇರಿ  ಎಲ್ಲರಿಂದಲೂ ಕೈ ಜೋಡಿಸಿದ ನಮಸ್ಕಾರ ಸ್ವೀಕರಿಸಿ ನಿನ್ನ ತಪ್ಪನ್ನ ಮನ್ನಿಸಿದ್ದೇನೇ ಹೋಗೋ ಎಂದೋ, ನೀ ಬೇಡಿದ್ದೆಲ್ಲಾ ಕೊಡ್ತೇನೆ ಹೋಗು ಎಂಬ ಆಶೀರ್ವಾದ  ಮಾಡಿದ ಈ ಕಲ್ಲಿಗೆ ಕತೆ ಇಲ್ಲ ಅನ್ನುತ್ತೀರಾ ? 

ಭಗವಂತ  ಈ ಕಲ್ಲಿಗೆ ಬಾಯಿ ಮಾತು ಕೊಟ್ಟಿದ್ದರೆ ತಾವು ಅನುಭವಿಸಿದ  ಕಷ್ಟ ನೋವಿನ ಕರುಣಾ ಜನಕ ಕತೆಗಳನ್ನು ಗಟ್ಟಿಯಾಗಿ ಘೋಷಿಸುತ್ತಿತ್ತಿನೋ, ಆದರೆ ಇವಕ್ಕೆ ಮಾತು ಬರದೆಯಿದ್ದ ಕಾರಣಕ್ಕೆ ಇವಕ್ಕೆ ನೋವು ಕೊಟ್ಟವರು  ಬಚಾವ್ ಆಗಿದ್ದಾರೆ.  ಈಗ ಹೇಳಿ, ಪ್ರತಿ ಕಲ್ಲಿಗೂ ಕಥೆ ಇರಲಾರದೆ ? ಇರಬಾರದೇ ! 

    ಪ್ರತಿ ಕಲ್ಲಿಗೂ ಕತೆಯುಂಟು ಎಂದು ಸಾರಿರುವ ಕೆಲವು ಪುರಾಣ ಪ್ರಸಂಗಗಳು ಹೀಗಿವೆ :    ಮೊದಲನೆಯದು ಗೌತಮ ಮಹರ್ಷಿ ಅಹಲ್ಯ  ಆದರ್ಶ ದಂಪತಿಗಳ ಪ್ರಸಂಗ. ಇವರು ಪರಸ್ಪರರನ್ನು ಸರಿಯಾಗಿ ಅರ್ಥಮಾಡಿಕೊಂಡು ಆಶ್ರಮಕ್ಕೆ ಬರುವ ಅತಿಥಿ ಅಭ್ಯಾಗತರೆಲ್ಲರಿಗೂ ಊಟ ಉಪಚಾರಗಳನ್ನು ನೀಡುತ್ತಾ ಸರಳ ಜೀವನ ನಡೆಸುತ್ತಾ ತಪಸ್ಸನ್ನೂ ಮುಂದುವರಿಸಿದ್ದರು, ಇವರು ಘೋರ ತಪಸ್ಸಿನಿಂದ ಭಗವಂತನನ್ನು ಮೆಚ್ಚಿಸಿ ತಾನು ಹೊಂದಿರುವ ಇಂದ್ರ ಪದವಿಯನ್ನು ಗೌತಮರು ಕಸಿದುಕೊಳ್ಳಬಹುದು ಎಂಬ ಹೆದರಿಕೆ ದೇವೇಂದ್ರನಿಗೆ ಉಂಟಾಯಿತು.  ಇಂದ್ರ ಪಟ್ಟವನ್ನು ಪಡೆಯುವುದು ಬಹು ಕಷ್ಟ. ತಾನು ಕಷ್ಟಪಟ್ಟು ಪಡೆದಿರುವ ಈ ಪದವಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿ, ಆ ಗುರಿಯನ್ನು ಸಾಧಿಸಲು ಏನನ್ನಾದರೂ ಮಾಡಲು ಸಿದ್ಧನಾದನು, ದೇವೇಂದ್ರ. 

ಇಂದ್ರ ಪದವಿಯನ್ನು ಕಸಿದುಕೊಳ್ಳಲು ಈ ಹಿಂದೆ ಪ್ರಯತ್ನಿಸಿದವರ ಪ್ರಸಂಗಗಳನ್ನು ಸೂಕ್ಷöವಾಗಿ ಪರಿಶೀಲಿಸಿದಾಗ, ಅಂತಹಾ ತಪಸ್ವಿಗಳನ್ನು ತನ್ನ (ಇಂದ್ರ) ಅಂತಃಪುರದ ಸುಂದರ ಸ್ತ್ರೀಯರ ಕಣ್ಣೋಟಕ್ಕೆ ಸಿಲುಕಿಸಿ, ಅವರಿಂದ ಆಕರ್ಷಿತರಾಗುವಂತೆ ಮಾಡಿ, ತನ್ಮೂಲಕ ಅವರನ್ನು ತಪೋ ಭ್ರಷ್ಟರನ್ನಾಗಿಸುವ ಉಪಾಯ ದೇವೇಂದ್ರನದಾಗಿತ್ತು. ಆದರೆ ಗೌತಮರು ಬಹು ಕೋಪಿಷ್ಟರು. ಅವರು ತನ್ನೀ ಅಗ್ಗದ ತಂತ್ರಕ್ಕೆ ಸಿಲುಕುವವರಲ್ಲ ಎಂದು ತಿಳಿದ ಮಹೇಂದ್ರ, ನೇರವಾಗಿ ಗೌತಮರ ಸುಂದರ ಪತ್ನಿ ಅಹಲ್ಯೆಯ ಕಡೆ ತನ್ನ ಕೆಟ್ಟ ದೃಷ್ಟಿ ನೆಟ್ಟ. ಗೌತಮರು ಪ್ರತಿ ದಿನವೂ ಬೆಳಗಿನ ಜಾವದಲ್ಲೇ ಎದ್ದು ಸ್ನಾನಕ್ಕಾಗಿ ನದಿಗೆ ಹೋಗುವ ನಿತ್ಯ ಕಟ್ಟಳೆಯನ್ನು ದೇವೇಂದ್ರನು ಗಮನಿಸಿದ್ದ. ತನ್ನ ಕೆಟ್ಟ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶದಿಂದ ಅದೊಂದು ದಿನ ಬೆಳಗಾಗುವ ಬಲು ಮೊದಲೇ ಕೋಳಿ ಕೂಗಿದಂತೆ ಕೂಗಿ ಮರೆಯಲ್ಲಿ ನಿಂತನು. ಕೋಳಿಯ ಕೂಗು ಕೇಳಿದ ಗೌತಮರು, ಅದು ಸ್ನಾನದ ಸಮಯವೆಂದು ತಿಳಿದು ತಮ್ಮ ಕುಟೀರದಿಂದ ಹೊರಗೆ ಹೊರಟರು. ಅದೇ ಸಮಯಕ್ಕಾಗಿ ಕಾದಿದ್ದ ದೇವೇಂದ್ರನು ಕೂಡಲೇ ಗೌತಮರ ವೇಷ ಧರಿಸಿ, ಕುಟೀರದ ಒಳ ಬಂದನು. ಅಹಲ್ಯೆಯ ಜೊತೆ ಸಮಾಗಮಕ್ಕಾಗಿ ಒತ್ತಾಯಿಸಿದನು. ಹಿಂದೆಂದೂ ತನ್ನೀ ಪತಿ ಹೀಗೆ ವರ್ತಿಸದವನು ಇಂದೇಕೆ ಹೀಗೆ ? ಎಂಬ ಸಂಶಯ ಅಹಲ್ಯೆಗೆ ಉಂಟಾದರೂ, ಕಾಲ, ಪರಿಸ್ಥಿತಿಗಳ ವಶಳಾಗಿ ಆಗುತ್ತಿರುವ ಮೋಸ ಅರಿಯದ ಆಕೆಯು ಗೌತಮರ ರೂಪದಲ್ಲಿದ್ದ ಇಂದ್ರನ ಇಚ್ಚೆ ಪೂರೈಸಿದಳು. 

ತನ್ನ ಉಪಾಯ ಫಲಿಸಿತೆಂದು ಸಂತಸಗೊಂಡ  ದೇವೇಂದ್ರನು ಕುಟೀರದ ಹೊರ ಬಾಗಿಲಿಗೆ ಬರುವ ವೇಳೆಗೆ ನದಿ ತೀರಕ್ಕೆ ಹೊರಟಿದ್ದ ಗೌತಮರು ಸ್ನಾನ ಮಾಡಿ ಕುಟೀರದ ಬಾಗಿಲ ಬಳಿ ಬಂದರು. ಆಗ ಅವರ ಕಣ್ಣಿಗೆ ಕಾಣಿಸಿದ್ದು ತಮ್ಮ ಕುಟೀರದಿಂದ ಹೊರ ಬರುತ್ತಿದ್ದ ದೇವೇಂದ್ರ. ಅದುವರೆಗೂ ಏನೆಲ್ಲ ನಡೆದಿರಬಹುದೆಂಬುದನ್ನು ಗ್ರಹಿಸಿದರು, ಗೌತಮರು, ದೇವತೆಗಳ ಒಡೆಯನಾಗಿದ್ದೂ ಮಾಡಿದ ಅಕಾರ್ಯಕ್ಕಾಗಿ ಕುಪಿತರಾಗಿ ಇಂದ್ರನಿಗೆ ಶಾಪವಿತ್ತ ಗೌತಮರು, ತಮ್ಮ ಪತ್ನಿಯೂ ತಪ್ಪಿ ನಡೆದ ಕಾರಣ, ಆಕೆಯನ್ನು ‘ಕಲ್ಲಾಗು’ ಎಂದು ಶಪಿಸಿದರು. ಆದ ತಪ್ಪಿಗೆ ಪಶ್ಚಾತ್ತಾಪಪಟ್ಟ ಋಷಿ ಪತ್ನಿ ಅಹಲ್ಯೆ, ತನ್ನ ಅಮಾಯಕತನ, ನಡೆದ ಮೋಸದ ರೀತಿಯನ್ನು ಪತಿಗೆ ವಿವರಿಸಿ ತನ್ನ ಅಸಹಾಯಕತೆಯನ್ನು ನಿರೂಪಿಸಿದಳು. ಪರಿಸ್ಥಿತಿಯ ಕೈಗೊಂಬೆಯಾಗಿ ವರ್ತಿಸಿದ ಅಹಲ್ಯೆಯ ಬಗ್ಗೆ ಮರುಕಗೊಂಡ ಗೌತಮರು, ತ್ರೇತಾಯುಗದಲ್ಲಿ ಶ್ರೀರಾಮನು ಈ ಮಾರ್ಗವಾಗಿ ಬರುವನು. ಆತ ನಿನ್ನೀ ಶಿಲೆಯನ್ನು ಸ್ಪರ್ಶಿಸಿದಾಗ ನಿನಗೆ ಮೊಕ್ಷ ಪ್ರಾಪ್ತಿಯಾಗುತ್ತದೆ ಎಂದು ಶಾಪ ವಿಮೋಚನೆಯ ಕಾಲ ತಿಳಿಸಿ ಗೌತಮರು ತಪಸ್ಸಿಗೆ ತೆರಳಿದರು. ಶಾಪಗ್ರಸ್ಥಳಾದ ಅಹಲ್ಯೆ ಕೂಡಲೇ ನಿಂತಲ್ಲೇ ಕಲ್ಲಾದಳು.     

ತ್ರೇತಾ ಯುಗದಲ್ಲಿ ವಿಶ್ವಾಮಿತ್ರರು ಯಜ್ಞ ಪೂರ್ತಿಯಾದನಂತರ ಶ್ರೀರಾಮ ಲಕ್ಷ್ಮಣರನ್ನು ಕರೆದುಕೊಂಡು ಸೀತಾ ಸ್ವಯಂವರಕ್ಕಾಗಿ ಮಿಥಿಲಾ ನಗರಕ್ಕೆ ಹೋಗುವ ಮಾರ್ಗದಲ್ಲಿ ಶಿಲೆಯಾಗಿದ್ದ ಅಹಲ್ಯೆಯು ಶ್ರೀರಾಮಚಂದ್ರನ ಸ್ಪರ್ಶದಿಂದ ದಿವ್ಯ ರೂಪವನ್ನು ಪಡೆದಳು. 

ಎರಡನೆಯ ಪ್ರಸಂಗವೂ ಮತ್ತೆ ಇದೇ ಇಂದ್ರ- ಶುಕ್ರನ ಮಗನಾದ ತ್ವಷ್ಟೃವಿನದು. ಇಂದ್ರ ಪದವಿಯನ್ನು ಗಳಿಸ ಬೇಕಾದರೆ ಇಂದ್ರನೇ ಜೀವಂತವಾಗಿಲ್ಲದಂತೆ ಮಾಡಬೇಕು ಎಂದು ಆಲೋಚಿಸಿ ಇದು ಕಾರ್ಯಗತಗೊಳಿಸಲು ತ್ವಷ್ಟೃ ವೃತ್ರಾಸುರನ ನೆರವು ಬಯಸಿದನು. ವೃತ್ರಾ ಸುರನು ಇಂದ್ರನೊಡನೆ ಯುದ್ಧಕ್ಕೆ ಸಿದ್ಧವಾದನು. ಇಬ್ಬರ ಮಧ್ಯೆ ಘೋರ ಯುದ್ಧ ಬಹು ಕಾಲ ನಡೆದರೂ ವೃತ್ರಾಸುರ ಸೋಲಲಿಲ್ಲ. ಯಾವುದೇ ಅಸ್ತç, ಅದು ಒಣಗಿರುವುದೋ, ಒದ್ದೆಯಾಗಿ ರುವುದೋ, ಇವ್ಯಾವುದರಿಂದಲೂ ವೃತ್ರಾಸುರನನ್ನು ಕೊಲ್ಲಲಾಗದು ಎಂಬ ರಹಸ್ಯ ಇಂದ್ರನಿಗೆ ಅರಿವಾಯಿತು. ಕೂಡಲೇ ಇಂದ್ರನು ತನ್ನ ನೆರವಿಗಾಗಿ ಜಗನ್ಮಾತೆಯನ್ನು ಪ್ರಾರ್ಥಿಸಿದನು. ಮಾತೆಯು ಇಂದ್ರನ ಮೇಲೆ ದಯೆ ತೋರಿಸಿ ವಿಷಮಯವಾದ ನೊರೆಯಂತಹಾ ವಸ್ತುವು ಸಮುದ್ರದಿಂದ ಹೊರ ಬರುವಂತೆ ಮಾಡಿದಳು. ಇಂದ್ರನು ಆ ವಿಷ ನೊರೆಯನ್ನು ತನ್ನಲ್ಲಿದ್ದ ವಜ್ರಾಯುಧಕ್ಕೆ ಲೇಪಿಸಿ ವೃತ್ರಾಸುರನ ಮೇಲೆ ಪ್ರಯೋಗಿಸಿದ ಪರಿಣಾವiವಾಗಿ ರಕ್ಕಸನು ಮರಣಿಸಿದನು. ಆ ಸಮಯದಲ್ಲಿ ವೃತ್ರಾಸುರನು ಇಂದ್ರನನ್ನು ಕುರಿತು “ನೀನು ನನ್ನ ಮೇಲೆ ನೇರ ಯುದ್ಧ ಮಾಡಿ ಸೋಲಿಸದೆ ಮೋಸದಿಂದ ಕೊಂದೆ. ನೀನು ಕಲ್ಲು ಹೃದಯದವನು. ನೀನು ಮಾಡಿದ ಮೋಸಕ್ಕಾಗಿ ತಕ್ಕ ಪ್ರತಿಫಲವನ್ನು ಅನುಭವಿಸು, ನೀನು ಈ ಕ್ಷಣದಿಂದಲೇ ಕಲ್ಲಾಗಿ ಹೋಗು ಎಂದು ವೃತ್ರಾಸುರನು ಶಪಿಸಿದನು. ಇಂದ್ರನು ಕಲ್ಲಾಗಿ ಪುಂಡಲೀಕನ ಆಶ್ರಮದ ಜಾಗದಲ್ಲೇ ಅದೆಷ್ಟೋ ಕಾಲ ಬಿದ್ದಿರಬೇಕಾಯಿತು. “

ನಂತರದ ಕಾಲದಲ್ಲಿ ಶ್ರೀಕೃಷ್ಣನು ಪುಂಡಲೀಕನ ಆಶ್ರಮಕ್ಕೆ ಬಂದು ತನ್ನ ಭಕ್ತನ ಇಚ್ಛೆಯಂತೆ ಅವನು ತೋರಿದ ಕಲ್ಲಿನ ಮೇಲೆ ನಿಂತನು. ಶ್ರೀ ಹರಿಯ ಪಾದ ಸ್ಪರ್ಶದಿಂದ ಕಲ್ಲಾಗಿದ್ದ ಇಂದ್ರನು ಕೂಡಲೇ ಶಾಪ ವಿಮುಕ್ತನಾಗಿ ದೇವನಿಗೆ ನಮಿಸಿ  ತನ್ನ ಲೋಕ ಸೇರಿದನು ಎಂಬುದರೊAದಿಗೆ ಪ್ರಸಂಗ ಮುಗಿಯುತ್ತದೆ. 



     ಮೂರನೆಯ ಪ್ರಸಂಗ ತುಳಸಿಯದು. ಹಿಂದೆ ಸುಧಾಮನೆಂಬ ಪಾರಿಷದನು ರಾಧೆಯ ಶಾಪದಿಂದ ಭೂ ಲೋಕದಲ್ಲಿ ಶಂಖಚೂಡನೆAಬ ರಾಕ್ಷಸನಾಗಿ ಗೋಕುಲದಲ್ಲಿ ಜನಿಸಿದನು. ನಂತರದ ಕಾಲದಲ್ಲಿ, ತುಳಸಿ ಎಂಬ ಕನ್ಯೆಯೊಡನೆ ಅವನ ವಿವಾಹವಾಯಿತು. ತುಳಸಿ ಯಾದರೋ ವಿಷ್ಣು ಭಕ್ತೆ ಮತ್ತು ಮಹಾಪತಿವ್ರತೆ. ಶಂಖಚೂಡನು ಅಸುರನಾದರೂ ತಪಸ್ಸು ಮಾಡಿ ‘ಅಭ್ಯಂಗ ಕವಚ’ವನ್ನು ಸಂಪಾದಿಸಿದ್ದನು ದೇಹ ಬಲ, ದೈವ ಬಲವಿದ್ದ  ಕಾರಣ, ಅವನು ಲೋಕ ಕಂಟಕನಾದನು. ಇವನ ಬಾಧೆಯನ್ನು ಸಹಿಸಲಾರದೆ ತಮ್ಮ ರಕ್ಷಣೆಗಾಗಿ ದೇವತೆಗಳು ವಿಷ್ಣುವಿನ ಮೊರೆ ಹೊಕ್ಕರು. ಈ ಅಸುರನಿಗೆ ಅವನ ಪತ್ನಿಯ ದೈವ ಭಕ್ತಿ ಹಾಗೂ ಪತಿ ಭಕ್ತಿಯೇ ರಕ್ಷಾ ಕವಚವಾಗಿತ್ತು. ಇವನ ಪತ್ನಿಯ ಪಾತಿವ್ರತ್ಯ ಭಂಗಪಡಿಸದೆ ಶಂಖಚೂಡನನ್ನು ಗೆಲ್ಲಲ್ಲಾಗದೆಂಬ ಸತ್ಯ ಅರಿವಾದ ಕೂಡಲೇ ಅದಕ್ಕೆ ಉಪಾಯವನ್ನು ಯೋಚಿಸಿದ ವಿಷ್ಣುವು, ಒಂದು ದಿನ ತಾನು ಶಂಖಚೂಡನAತೆ ವೇಷ ಧರಿಸಿ, ತುಳಸಿಯ ಪಾತಿವ್ರತ್ಯ ಭಂಗಪಡಿಸಿದ. ಇದರ ಪರಿಣಾಮವಾಗಿ ಶಂಖಚೂಡನ ಕವಚವು ಒಡೆಯಿತು. ಇದೇ ಸಮಯ ಕಾದಿದ್ದ ರುದ್ರನು ಶಂಖಚೂಡನೊಡನೆ ಯುದ್ಧ ಮಾಡಿ ಅವನನ್ನು ಸುಲಭ ವಾಗಿ ಸಂಹರಿಸಿದನು. ಪತಿಯ ನಿಧನ, ತನ್ನ ಪಾತಿವ್ರತ್ಯ ಭಂಗ ಪಡಿಸಿದ್ದು ಎಲ್ಲವನ್ನೂ ತಿಳಿದ ತುಳಸಿಯು ಮಹಾ ಕೋಪಿತಳಾಗಿ, ‘ನೀನು ಪಾಷಾಣ ಹೃದಯಿ, ನೀ ಮಾಡಿದ ತಪ್ಪಿಗೆ, ಕಲ್ಲಾಗಿ ಹೋಗು’ ಎಂದು ವಿಷ್ಣುವಿಗೆ ಶಾಪವಿತ್ತಳು. 

ಕೋಪಿತಳಾದ ತುಳಸಿಯನ್ನು ವಿಷ್ಣುವು ಸಮಾಧಾನಪಡಿಸಿ, ನಿನಗೆ ಈ ಕ್ಷಣವೇ ಮುಕ್ತಿ ಸಿಗುತ್ತದೆ, ಈ ಕೂಡಲೇ ನೀನು ಭೂ ಲೋಕಕ್ಕೆ ತೆರಳು. ಅಲ್ಲಿ ನೀನು ಗಂಡಕಿ ನದಿಯಾಗಿ ಹರಿಯುತ್ತೀಯೆ, ನಿನ್ನ ತಲೆಯ ಕೂದಲು ಪವಿತ್ರವಾದ ತುಳಸಿ ಗಿಡವಾಗಲಿ, ಶಂಖಚೂಡನು ಅಲ್ಲಿ ಶಂಖವಾಗಿರಲಿ, ನಿನ್ನ ಶಾಪದಂತೆ ನಾನು ಗಂಡಕಿ ನದಿಯಲ್ಲಿ ಸಾಲಿಗ್ರಾಮ ಶಿಲೆಯಾಗಿ ನೆಲೆಸುವೆ ಎಂದು ಶ್ರೀ ಮಹಾವಿಷ್ಣುವು ತುಳಸಿಯನ್ನು ಹರಸಿದನು. ಈ ಕಾರಣದಿಂದಲೇ, ಸಾಲಿಗ್ರಾಮ ಶಿಲೆಯನ್ನು ತುಳಸಿಯಿಂದ ಪೂಜಿಸುವ ಪದ್ದತಿ ಭೂ ಲೋಕದಲ್ಲಿದೆ. ತುಳಸಿ ಗಿಡಕ್ಕೆ ಹೀಗೆ ದೈವತ್ವ ಲಭಿಸಿದೆ ಎಂದಿದೆ ಪುರಾಣ ಕಥೆ. 

     ಅಹಲ್ಯ  ತುಳಸಿ ಎರಡೂ ಪ್ರöಸಂಗಗಳಲ್ಲೂ ಪತಿವ್ರತಾ ಸ್ತ್ರೀಯರಪಾತಿವ್ರತ್ಯವನ್ನು ದೇವನೇ ಭಂಗ ಪಡಿಸಿದ್ದು ತಪ್ಪಲ್ಲವೇ ? ಎಂಬ ವಾದ ಕೆಲವು ಓದುಗರದಾಗಿರಬಹುದು. 

   ಅಹಲ್ಯೆ ಪ್ರಸಂಗದಲ್ಲಿ ಇಂದ್ರನ ದುರ್ನಡತೆ ಗಮನಿಸಿದ ಗೌತಮರು  ಇಂದ್ರನಿಗೂ ಶಾಪ ನೀಡಿ  ದುಷ್ಕಾರ್ಯಕ್ಕೆ ದುಷ್ಫಲ ಅನುಭವಿಸದೆ ತಪ್ಪದು ಎಂಬ ಸಂದೇಶವನ್ನು ಗೌತಮರು ಲೋಕಕ್ಕೆ ಸಾರಿದರು.  

   ದುರುಳನ ಮೋಸಕ್ಕೆ ಬಲಿಯಾಗಿ ಪಾತಿವ್ರತ್ಯ ಭಂಗಕ್ಕೆ ಗುರಿಯಾದ ಅಹಲ್ಯೆಗೆ ಪತಿ ಗೌತಮರು ಕಲ್ಲಾಗೆಂದು ಶಾಪ ನೀಡಿದರೂ ಈಕೆಯ ಮೇಲೆ ಕನಿಕರ ತೋರಿ ಶಾಪ ವಿಮೋಚನೆಯನೂ ತಿಳಿಸಿದ್ದೇ ಅಲ್ಲದೆ ತನ್ಮೂಲಕ ಈಕೆಗೆ ಶ್ರೀರಾಮಚಂದ್ರನ ಅನುಗ್ರಹ ಪಡೆಯಲು  ಅವಕಾಶ ಕಲ್ಪಿಸಿಕೊಟ್ಟಿದ್ದು ಗಮರ್ನಾಃ ವಿಷಯವಾಗಿದೆ.  

   ತುಳಸಿ ಶಂಖಚೂಡನ ಪ್ರಸಂಗದಲ್ಲಿ ಗಮನಿಸಬೇಕಾದ  ವಿಶೇಷ ಎಂದರೆ “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ \ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್\ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್\ಧರ್ಮ ಸಂಸ್ಥಾನಾರ್ಥಾಯ ಸಂಭವಾಮಿ ಯುಗೇ ಯುಗೇ || (ಭ ಗೀ  4. 7\8) ಎಂಬ ಗೀತಾ ವಾಕ್ಯ. ಧರ್ಮ ಪಾಲನೆಗೆ ಅಡ್ಡಿಗಳಾದಾಗ, ಸಾಧು ಸಂತರ ಪವಿತ್ರ ಕಾರ್ಯಗಳಿಗೆ ಅಡ್ಡಿಯಾದಾಗ ಭಗವಂತ ಸಮಯೋಚಿತ ಅವತಾರಗಳನ್ನು ಎತ್ತಬೇಕಾಗುತ್ತದೆ. ಉಲ್ಲೇಖಿತ ಪ್ರಸಂಗಗಳಲ್ಲಿ ಧರ್ಮಾಚರಣೆಗೆ ಅಡ್ಡಿಯಾಗಿ ನಿಂತ ದುಷ್ಟ ರಕ್ಕಸರನ್ನು ನಾಶಪಡಿಸಿ ಸಾಧು ಸಜ್ಜನರಿಗೆ ರಕ್ಷಣೆ  ನೀಡುವುದು ಭಗವಂತನ ಕರ್ತವ್ಯವಾದ್ದರಿಂದ. ಹೀಗೆ ರಕ್ಕಸರ ಹತ್ಯೆ ಸಾಧಿಸಲು ಅಗತ್ಯ ಮಾರ್ಗಗಳನ್ನು ಬಳಸಬೇಕಾಯಿತು.  

  ಆದರೂ ತುಳಸಿಗೆ ಆದ ಮೋಸ  ಅನ್ಯಾಯಕ್ಕೆ  ಶ್ರೀ ಮಹಾ ವಿಷ್ಣವೂ ತುಳಸಿ ನೀಡಿದ ಶಾಪವನ್ನು ಸ್ವೀಕರಿಸಿ  ಗಂಡಕಿ ನದಿಯಲ್ಲಿ ಸಾಲಿಗ್ರಾಮ ಶಿಲೆಯಾಗಿದ್ದು, ತುಳಸಿಗೆ ಮುಕ್ತಿ ಭಾಗ್ಯ ನೀಡಿದ್ದು ಒಂದು ವಿಶೇಷತೆಯಗಿದೆ.  

ಹೀಗೆ, ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣವಿದ್ದೇ ಇರುತ್ತದೆ . ಕಾರಣವಿಲ್ಲದೆ ಯಾವ ಕಾರ್ಯವೂ ಜರುಗಲಾ ರದು. ನಡೆದ ಕಾರ್ಯ : ಘಟನೆಗೆ ಕಾರಣವೇನೆಂದು ತಿಳಿಯುವ ಕುತೂಹಲ, ಆಸಕ್ತಿ ಇರುವವರು ಈ ದಿಸೆಯಲ್ಲಿ ಚಿಂತಿಸಿ ಕಾರ್ಯ ಕಾರಣಗಳನ್ನು ತಿಳಿಯಲು ಮುಂದಾಗುತ್ತಾರೆ.       

                   ******************************

Comments