ಪ್ರವಾಹದ ಹರಿಕಾರ ಕಪ್ಪೆ

ಪ್ರವಾಹದ ಹರಿಕಾರ ಕಪ್ಪೆ 

ಆದಿವಾಸಿಗಳ ಕಥೆ - ಸಿಡ್ನಿ ಶ್ರೀನಿವಾಸ್ 



ಬೈಯಾಮಿ (ಸೃಷ್ಟಿಕರ್ತಭೂಮಿಯ ಮೇಲಿನ ತನ್ನ ಪ್ರವಾಸವನ್ನು ಮುಗಿಸಿ ತನ್ನ  ಬುಲಿಮಾಗೆ ( ಸ್ವರ್ಗ) ಹಿಂತಿರುಗಿ ಹೊರಟ. ತಾನು ಬಂದಿದ್ದ ವಕ್ರ ಮಾರ್ಗವನ್ನೇ ಹಿಡಿದುಕಲ್ಲಿನ ಮೆಟ್ಟಿಲುಗಳನ್ನು ಹತ್ತುತ್ತಾ, ಊಬಿ ಊಬಿ ಪರ್ವತದ ತುದಿಗೆ  ಬಂದ. ವಿರೀನನ್ ಗಳಿಗೆ (ಪುರೋಹಿತ ಅಥವಾ ವೈದ್ಯ) ಮಾತ್ರ ಅವನನ್ನು ಸಂಪರ್ಕಿಸುವುದು ಸಾಧ್ಯವಾಗಿತ್ತು. ಅದು ಕೂಡ ಅವನ ಧಾರ್ಮಿಕ ಹರಿಕಾರ, ವಲ್ಲಾಗೂರೂನ್ ಬೂಆನನ್ನನ  ಮುಖಾಂತರ   ಮಾತ್ರ

 ಬೈಯಾಮಿ, ಬಿರಾನೂಲೂಳಂತೆ,   ಒಂದು  ಶೀಲಾ ಸ್ಫಟಿಕದ ಮೇಲೆ ಕುಳಿತಿದ್ದ. ಅವರಿಬ್ಬರ ದೇಹದ ಮೇಲ್ಭಾಗ ಭೂಮಿಯ ಮೇಲೆ ಇದ್ದಂತೆಯೇ ಇದ್ದವು. ಆದರೆ ಕೆಳ ಭಾಗ ಶಿಲೆಯೊಳಗೆ ಹುದುಗಿಹೋಗಿದ್ದವು

ವಲ್ಲಾಗೂರೂನ್ ಬೂಆನ್ , ಬೈಲಾಬುರ್ರಾ ಮತ್ತು ಕುನುಮ್ ಬೆಯೆಲಿ    ಮಾತ್ರ ಬೈಯಾಮಿ ಮತ್ತು  ಬಿರಾನೂಲೂ ಅವರನ್ನು ಕಾಣಬಹುದಿತ್ತು. ಅವರೇ ಇಬ್ಬರ ಆಣತಿಗಳನ್ನು ಇತರರಿಗೆ ಸಾರುತಿದ್ದರು. ಬಿರಾನೂಲೂ ಪ್ರವಾಹಗಳನ್ನು ಆಗಿಸುವ ದೇವತೆತಮ್ಮ ನಾಡಿನ ತೊರೆಗಳು ಒಣಗುತ್ತಿದ್ದು , ವಿರೀನನ್ ಗಳಿಗೆ ಪ್ರವಾಹ ಬೇಕು ಎನಿಸಿದಾಗ ಅವರು ಊಬಿ ಊಬಿ ಪರ್ವತದ ತುದಿಗೆ ಹೋಗಿ, ಅಲ್ಲಿದ್ದ ಕಲ್ಲಿನ ವೃತ್ತಗಳಲ್ಲಿ ನಿಂತು ವಲ್ಲಾಗೂರೂನ್ ಬೂಆನನ ಆಗಮನಕ್ಕಾಗಿ ಕಾಯುತ್ತಿದ್ದರು. ಇವರಿಂದ ಮನವಿಯನ್ನು ಕೇಳಿಸಿಕೊಂಡ ಅವನು ನೇರ ಹೋಗಿ ಬೈಯಾಮಿಗೆ ವರದಿ ಮಾಡುತ್ತಿದ್ದ

 ಬೈಯಾಮಿ ಬಿರಾನೂಲೂಗೆ ಕೆಲಸವನ್ನು ಒಪ್ಪಿಸುತಿದ್ದ. ಅವಳು, ತನ್ನ  ಮನಸ್ಸು ಒಲಿದರೆಕುನುಮ್ ಬೆಯೆಲಿಯನ್ನು,
ವಿರೀನನ್ ಗಳತ್ತ  ಕಳಿಸಿ ಸಂದೇಶ ನೀಡುತ್ತಿದ್ದಳು. “ನೀವು ಈಗ ಕೂಡಲೇ ಹೋಗಿ ಬುಂಗುನ್ ಬುಂಗುನ್ ಜನಕ್ಕೆ  ಸಿದ್ಧರಾಗುವಂತೆ ಹೇಳಿ. ನಾವು ಕಳಿಸುವ ರಕ್ತದ ಚೆಂಡು ಇನ್ನೇನು ಅವರತ್ತ ಉರುಳಿ ಬರುತ್ತದೆ.”

ಒಮ್ಮೆ, ಇದನ್ನು ಕೇಳಿದ ವಿರೀನನ್ ಗಳು ತರಾತುರಿಯಲ್ಲಿ ಬೆಟ್ಟವನ್ನಿಳಿದು, ಕೆಳಗಿದ್ದ ವೋಗೀ ಪ್ರದೇಶವನ್ನು  ದಾಟಿ ಬುಂಗುನ್ ಬುಂಗುನ್ ಜನರತ್ತ ನಡೆದರು. ಅದೊಂದು ಪ್ರಬಲ  ಜನಾಂಗ. ಅದರ ಜನಕ್ಕೆ   ಬಲಿಷ್ಠ ಬಾಹುಗಳಿದ್ದು ಅವರು (ಕಲ್ಲು, ಬಾಣ, ಇತ್ಯಾದಿ ) ಎಸೆಯುವುದರಲ್ಲಿ ಮತ್ತು ನಿರಂತರ, ಒಂದೇ ಸಮಕೂಗುವುದರಲ್ಲಿ ಹೆಸರುಗಳಿಸಿದ್ದರು

ವಿರೀನನ್  ಹೇಳಿದ ಕೂಡಲೇ, ಸಂತೋಷಪಟ್ಟ ಅಲ್ಲಿಯ ಜನ , ಬತ್ತಿಹೋಗಿದ್ದ  ನದಿಯ ತೀರದ ಎರಡೂ  ಬದಿಗಳಲ್ಲಿ, ಅದರ ಮೂಲದಿಂದ ಸ್ವಲ್ಪ ದೂರದವರೆಗೂ ನಿಂತರುದಾರಿಯಲ್ಲಿ  ಬೆಂಕಿಯ ಉರಿಯೆಬ್ಬಿಸಿ  ಅದರೊಳಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿದರು. ಕಲ್ಲುಗಳು ಕಾದ ಮೇಲೆ ಬುಂಗುನ್ ಬುಂಗುನ್ ಮಂದಿ ಪ್ರತಿಯೊಬ್ಬನ ಮುಂದೆಯೂ ಒಂದೊಂದು ಕಲ್ಲನ್ನು ಮರದ ತೊಗಟೆಯೊಂದರಲ್ಲಿ ಇಡುತ್ತಾ ಬಂದರು. ಎಲ್ಲರೂ ರಕ್ತದ ಚೆಂಡಿನ ಆಗಮನಕ್ಕಾಗಿ ಉತ್ಸುಕರಾಗಿ ಕಾದುಕುಳಿತರು

ಭಾರಿ ಗಾತ್ರದ  ರಕ್ತ ಬಣ್ಣದ ಚೆಂಡು ನದಿಯ ಮೂಲದಲ್ಲಿ ಕಂಡುಬಂದಾಗ ಒಬ್ಬೊಬ್ಬನೂ ನಿಂತು ನೋಡಿ, ತನ್ನ ಮುಂದಿದ್ದ ಕಾದಕಲ್ಲನ್ನು ಎತ್ತಿ, ಜೋರಾಗಿ ಕೂಗುತ್ತಾ ತನ್ನ ಬಲವನ್ನೆಲ್ಲಾ ವಿನಿಯೋಗಿಸಿ ಚೆಂಡಿನತ್ತ ಎಸೆದ. ಅದಕ್ಕೆ ಬಿದ್ದ ಅಸಂಖ್ಯಾತ ಕಲ್ಲುಗಳ ಏಟಿಗೆ ಮತ್ತು ಎಸೆದ ಬಲಕ್ಕೆ ಚೆಂಡು ಛಿದ್ರವಾಯಿತು, ನದಿಯೊಳಗೆ ರಕ್ತ ಪ್ರವಾಹ ಬರಬರನೆ ಹರಿದು ಬಂತುಬುಂಗುನ್ ಬುಂಗುನ್ ಜನರ ಚೀರಾಟ ಅಧಿಕವಾಯಿತು. ಅವರು ಕಲ್ಲುಗಳನ್ನು ತೆಗೆದುಕೊಂಡು ಪ್ರವಾಹದೊಂದಿಗೆ ಓಡಿದರು. ಜನ ಮತ್ತೂ  ಅಧಿಕವಾಗಿ ಚೀರಾಡುತ್ತಾ ನದಿಯತ್ತ ಕೊನೆಯಿಲ್ಲದಂತೆ ಕಲ್ಲುಗಳನ್ನು ಎಸೆದರು. ನಿಧಾನವಾಗಿ, ರಕ್ತ ಪ್ರವಾಹ ಕಾದಕಲ್ಲುಗಳಿಂದ ಶುದ್ಧವಾಗಿ  ನೀರಾಯಿತು

ಬುಂಗುನ್ ಬುಂಗುನ್ ತಮ್ಮ ಜನರಿಗೆ  ಆಗಲೇ ಎಚ್ಚರಿಕೆ ನೀಡಿದ್ದರು. ನೀರು ಅವರ ಮನೆಗಳಿಗೆ ನುಗ್ಗುವ ಮುನ್ನ , ಬೀಡಿನ ಮಂದಿ  ತಮ್ಮ ಮನೆಗಳನ್ನು ಬಿಟ್ಟು ಎತ್ತರದ ಜಾಗಗಳಲ್ಲಿ ಹೋಗಿ ನೆಲೆಸಬೇಕು ಎಂದು. ಪ್ರವಾಹದ ನೀರು ಹರಿಯುತ್ತಿದ್ದಂತೆ ಬುಂಗುನ್ ಬುಂಗುನ್ ಮಂದಿ  ಕೂಗಾಡುವುದನ್ನು ನಿಲ್ಲಿಸಲಿಲ್ಲ. ಇಂದಿಗೂ ಪ್ರವಾಹ ಹರಿದಂತೆ ಅವರ ಧ್ವನಿಗಳು ಕೇಳಿಬರುತ್ತವೆ. ಅವುಗಳನ್ನು ಕೇಳಿ, ಡಾಯೆನ್ ಗಳು ಹೇಳುತ್ತಾರೆ, “ಬುಂಗುನ್ ಬುಂಗುನ್ ಅಥವಾ ಕೋಡಿಗಪ್ಪೆಗಳು  ಅರಚುತ್ತಿವೆ. ಪ್ರವಾಹ ಬರುತ್ತಿರಬೇಕು. ನಂತರ , “ಬುಂಗುನ್ ಬುಂಗುನ್ ಗಳು ಅರಚುತ್ತಿವೆ. ಪ್ರವಾಹ ಬಂದಿದೆ ನೋಡಿ.” 

ಪ್ರವಾಹದ ನೀರು ಕೆಂಪಾಗಿ, ಗಡುಸಾಗಿ ಇದ್ದರೆ ಡಾಯೆನ್ ಗಳು ಹೇಳುತ್ತಾರೆ, “ ಬುಂಗುನ್ ಬುಂಗುನ್ ಗಳು ರಕ್ತವನ್ನು ಶುದ್ಧಿ ಮಾಡದೆ ಬಿಟ್ಟಿರಬೇಕು.” 

 

 ಪರಿವಿಡಿ 

ಊಬಿ ಊಬಿ ಪರ್ವತ (Oobi Oobi, ಸ್ವರ್ಗದಲ್ಲಿ ಬೈಯಾಮಿ ಇದ್ದ ಪರ್ವತ)
ಕುನುಮ್ ಬೆಯೆಲಿ (Cunnumbeillee, ಹೆಂಗಸಿನ ಹೆಸರು)
ಡಾಯೆನ್ (Daen, ಕರಿ ಮನುಷ್ಯ, ಆದಿವಾಸಿ)
ಬೈಯಾಮಿ (Byamee, ದೊಡ್ಡ ಮನುಷ್ಯ, ಸೃಷ್ಟಿಕರ್ತ)
ಬುಂಗುನ್ ಬುಂಗುನ್(Bungun Bungun, ಕಪ್ಪೆ, flood-frog, ಕೋಡಿಗಪ್ಪೆ)
ಬುಲಿಮಾ (Bullimah, ಒಂದು ಬಗೆಯ ಸ್ವರ್ಗ)
ಬಿರಾನೂಲೂ (Birrahgnooloo, ಹೆಂಗಸಿನ ಹೆಸರು, ಕೊಡಲಿ ಹಿಡಿಯಂತೆ ಮುಖವುಳ್ಳವಳು ಎಂದರ್ಥ)
ಬೈಲಾಬುರ್ರಾ (Baillahburrah), ವ್ಯಕ್ತಿಯ ಹೆಸರು
ವಿರೀನನ್  (wirreenun, ಪುರೋಹಿತ ಅಥವಾ ವೈದ್ಯ)
ವೋಗೀ    (wogghee) , ಒಂದು ಪ್ರದೇಶ 

Comments