ಇಂದೇನಾಗಿದೆ ನಮ್ಮ ಮಕ್ಕಳಿಗೆ ! ?

 ಇಂದೇನಾಗಿದೆ ನಮ್ಮ ಮಕ್ಕಳಿಗೆ ! ?

ಲೇಖಕರು : ಎಂ. ಆರ್. ವೆಂಕಟರಾಮಯ್ಯ



     ಶೀರ್ಷಿಕೆ ಓದಿದವರೆಲ್ಲಾ, ಆಶ್ಚರ್ಯಭರಿತರಾಗಿ, “ಏನಾಗಿದೆ ನಮ್ಮ ಮಕ್ಕಳಿಗೆ ? ಏನೋ ಆಗಿದೆ ನಮ್ಮ ಕರುಳಿನ ಕುಡಿಗಳಿಗೆ ಎಂದು ನಾವು ಯಾವಾಗಲೂ ಯಾರಲ್ಲೂ ದೂರಿಲ್ಲವಲ್ಲಾ ! ಹೀಗಿರುವಾಗ, ಪ್ರಶ್ನೆ ನಮಗೇಕೆ ಹಾಕುತ್ತಿರುವಿರಿ ? ನಮ್ಮ ಮಕ್ಕಳಿಗೆ ಏನೂ ಆಗಿಲ್ಲ, ಎಲ್ಲರೂ ಚೆನ್ನಾಗಿದ್ದಾರೆ, ದಿವ್ಯವಾಗಿದ್ದಾರೆ, ಹೆತ್ತವರನ್ನೂ ಮೀರಿಸಿದ ಎತ್ತರಕ್ಕೆ ಬೆಳೆದಿದ್ದಾರೆ. ವಯಸ್ಸಿಗೆ ಸರಿಯಾದ : ಮೀರಿದ  ಬುದ್ದಿ, ಬೆಳವಣಿಗೆ ಹೊಂದಿದ್ದಾರೆ. ಒಳ್ಳೆಯ ರಂಗು, ರೂಪ, ನಾವೂ ಕಷ್ಟಪಟ್ಟು ಅವರಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸ್ತಿದ್ದೀವಿ,  ಅಂತಾರಾಷ್ಟ್ರೀಯ  ಮಟ್ಟದ ಉದ್ಯಮದಲ್ಲಿ ಉದ್ಯೋಗ, ಹಿಂದೆAದೂ ಕಂಡಿರದಷ್ಟು,  ಕೇಳಿರದಷ್ಟು ಸಂಪಾದನೆ, ಇಷ್ಟರಲ್ಲೇ ಒಬ್ಬ ಸಿರಿವಂತನ ಮಗಳನ್ನು, ಅದೂ ನಮ್ಮ ಹುಡುಗನಷ್ಟೋ, ಇವನಿಗೂ ಮೀರಿದಷ್ಟು ಹಣ ಗಳಿಸುವ ರೂಪವತಿಯನ್ನು ಹುಡುಕಿ ಮದುವೆ ಮಾಡಬೇಕೆಂದಿದ್ದೇವೆ ಇತ್ಯಾದಿ, ಇತ್ಯಾದಿಯಾದ ವರ್ಣನೆಯನ್ನು ಗಂಡು ಮಕ್ಕಳನ್ನು ಹೆತ್ತ ಬಹಳಷ್ಟು ಮಾತಾಪಿತೃಗಳೂ ಹೊರಬಿಡುವವರೇ ವಿನಹಾ, ನಮ್ಮ ಮಕ್ಕಳು ಪರವಾಗಿಲ್ಲವಾದರೂ, ಅವರಲ್ಲಿ ಇದಿಲ್ಲ, ಅದಿಲ್ಲ ಎಂದು ತಾವು ಹೆತ್ತ ಮಕ್ಕಳಲ್ಲೇ ಹುಳುಕು ಹುಡುಕಿ ಹೊರಗಿನವರೊಂದಿಗೆ ದೂರುವ ಅಪ್ಪ ಅಮ್ಮಂದಿರು ಬಹಳ ಕಡಿಮೆ ಎಂಬ ನಿಜವನ್ನು  ನೀವೂ ಒಪ್ಪುತ್ತೀರಲ್ಲವೇ !

 ಇವೆಲ್ಲಾ ಏನಾದರೂ ಆಗಿರಲಿ, ನಿಮ್ಮ ಪ್ರಕಾರ, ಏನಾಗಿದೆ, ನಮ್ಮ ಮಕ್ಕಳಿಗೆ ? ಎಂಬ ಪ್ರಶ್ನೆಯನ್ನು ಲೇಖಕರಿಗೇ ಹಾಕಬಹುದು ಬಹಳಷ್ಟು ಓದುಗರು. ಇದಕ್ಕೆ ಇಲ್ಲಿದೆ ನನ್ನ ಅನಿಸಿಕೆಗಳು :

  ಹೆತ್ತವರಿಗೆ ….. ಮುದ್ದೇ ಎಂಬ ಗಾದೆ ಬಳಕೆಯಲ್ಲಿದೆ. ನಮ್ಮನ್ನು ನಾವು ಸುಂದರ, ರೂಪವಂತ, ಗುಣವಂತ, ಸುಸಂಸ್ಕೃತ, ನಾಗರಿಕ, ಎಲ್ಲಾ  ಸದ್ಗುಣಗಳೂ ನಮ್ಮಲ್ಲಿವೆ ಎಂದು ಸ್ವಪ್ರಶಂಸೆ ಮಾಡಿಕೊಳ್ಳುವುದು ಸಹಜವೇ. ಆದರೆ ನಾವೇನು ? ಎಂಬುದನ್ನು ನಮಗೆ ನಾವೇ ಸರ್ಟಿಫೈ ಮಾಡಿಕೊಳ್ಳುವುದಲ್ಲ. ಬದಲಿಗೆ, ನಾವೇನು ಎಂಬುದನ್ನು ನಮ್ಮನ್ನು ಹತ್ತಿರದಿಂದ, ಕೆಲ ಕಾಲದಿಂದ ಬಲ್ಲವರು ಪೂರ್ವಗ್ರಹ ಪೀಡಿತರಲ್ಲದವರು ಪ್ರಮಾಣೀಕರಿಸಿದಾಗ, ಅವರ ಮಾತು ಒಪ್ಪತಕ್ಕದ್ದಾಗಿರುತ್ತದೆ. ಇಂದು ಮಕ್ಕಳ ಸಾಕ್ಷರತೆಯ ಪ್ರಮಾಣ ಹಿಂದೆಂದಿಗಿಂತಾ  ಹೆಚ್ಚಾಗಿದೆ. ಕಲಿಕೆಯಲ್ಲಿ ಆಸಕ್ತರಾದವರಿಗೆ ಹೆಚ್ಚಿನ ವಿದ್ಯಾಭ್ಯಾಸ ಗಳಿಸಲು ಸೌಕರ್ಯ ಸೌಲಭ್ಯಗಳು ವೃದ್ಧಿಸಿವೆ. ಹಿಂದುಳಿದ, ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಶಾಲಾ ಕಾಲೇಜಿನಲ್ಲಿ ಕಲಿಯಲು ಹಲವು ರಿಯಾಯತಿಗಳನ್ನೂ ಸರ್ಕಾರ ನೀಡುತ್ತಿದೆ. ಪರಿಣಾಮ, ಹಣ ಕಾಸಿನ ಭಾರವಿಲ್ಲದೇನೇ ಎಲ್ಲಿಯವರೆಗಾದರೂ ಕಲಿಯಬಹುಧಾದ ಅನುಕೂಲಗಳಿವೆ. ಕಲಿತವರಿಗೆ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಇಲ್ಲಿಯವರೆಗೂ ಎಲ್ಲವೂ ಚಂದ, ಆನಂದವೇ.

    ಆದರೆ ಇಂದು ಶಾಲಾ ಕಾಲೇಜುಗಳಲ್ಲಿ ಮಕ್ಕಳು ಎಂತಹಾ ಶಿಕ್ಷಣ ಪಡೆಯುತ್ತಿದ್ದಾರೆ ? ಅವರು ಕಲಿಯುತ್ತಿರುವುದೇನು ? ಅಷ್ಟೇ  ಸಾಕೇ ! ಎಂಬತ್ತ ಗಮನ ಹರಿಸುವುದು ಸೂಕ್ತ.  

    ಶಿಕ್ಷಣ ಎಂದರೆ ಥ್ರೀ ್ಸ್, ಅಂದರೆ ಓದು, ಬರಹ, ಗಣಿತ ಎಂಬ ಮೂರು ವಿಷಯಗಳನ್ನು ಕಲಿತರೆ ಸಾಕು, ಅವ, ಅಕ್ಷರಸ್ತ ಎನಿಸಿತ್ತು. ಹಿಂದೊಂದು ಕಾಲದಲ್ಲಿ. ಆದರೆ ನಾವಿಂದಿರುವುದು ವಿಜ್ಞಾನ  ಯುಗದಲ್ಲಿ. ಯಂತ್ರ ಜ್ಞಾನ, ತಂತ್ರ ಜ್ಞಾನ ಯುಗದಲ್ಲಿ, ಎಲ್ಲಾ ಕ್ಷೇತ್ರ : ವಿಷಯಗಳಲ್ಲೂನೆಕ್ ಟು ನೆಕ್ ಎಂಬ ಇಂಗ್ಲಿಷ್ ಗಾದೆಯಂತೆ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ. ಹೆಚ್ಚಿನ ಸಂಖ್ಯೆಯಷ್ಟು ಯುವಕರು ಹಲವಾರು ವಿಷಯಗಳಲ್ಲಿ ಯಂತ್ರ, ತಂತ್ರಜ್ಞಾನ ಗಳಲ್ಲಿ   ವಿಶೇಷ ಪರಿಣತಿ ಪಡೆದುಕೊಂಡವರು. ಅಂತರ್ಜಾಲದ ಒಂದು ಗುಂಡಿ ಒತ್ತಿದರೆ ಸಾಕು, ವಿಶ್ಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿ, ವಿಷಯವನ್ನೂ ಕ್ಷಣ ಮಾತ್ರದಲ್ಲಿ ಅರಿಯುತ್ತಿದ್ದೇವೆ. ಸಹಸ್ರಾರು ಮೈಲಿಗಳ ದೂರದಲ್ಲಿರುವ  ವ್ಯಕ್ತಿ : ವಿಷಯಗಳ ಕ್ಷಣ ಕ್ಷಣದ ಬೆಳವಣಿಗೆಗಳನ್ನೂ ಕುಳಿತ ಕಡೆಯೇ ಅರಿಯುವಷ್ಟು ಮುಂದುವರಿದವÀರು  ನಮ್ಮ ನೋವು ನಲಿವು ಸಂತಸಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸುಲಭ ಸಾಧನೆಗಳನ್ನು ನಾವು ಕಂಡುಹಿಡಿದು ಬಳಸುತ್ತಿದ್ದೇವೆ, ಎಂತಹಾ ಜಟಿಲ ಸಮಸ್ಯೆ ವೈಯಕ್ತಿಕ : ಸಾರ್ವಜನಿಕ ಆಸಕ್ತಿಯ ವಿಷಯವನ್ನು ಬಹು ಬೇಗ ಪರಿಹರಿಸಿಕೊಳ್ಳುವಷ್ಟು ಬುದ್ಧಿ ಶಕ್ತಿ ಸಾಮರ್ಥ್ಯಗಳನ್ನು ರೂಪಿಸಿಕೊಂಡವರು.. ಇದೆಲ್ಲಾ ಸಾಮಾನ್ಯ ಸಾಧನೆಯೇ !  ಹೀಗಾಗಿ, ಇಂದು ನಮ್ಮ ಮಕ್ಕಳು ಇಂಗ್ಲಿಷ್, ಕನ್ನಡ, ಹಿಂದಿವಿಜ್ಞಾನ , ತಂತ್ರ ಜ್ಞಾನ , ಇಂಜಿನಿಯರಿಂಗ್, ಮೆಡಿಕಲ್, ಕಂಪ್ಯೂಟರ್ ಸೈನ್ಸ್,      ಆರ್ಕಿಟೆಕ್ಷರ್, ಆನಿಮೇಶನ್ ಇತ್ಯಾದಿಯಾಗಿ ಕಲಿಯದ ಪಠ್ಯ ಪುಸ್ತಕದ ವಿಷಯವಿಲ್ಲ.

       ಇನ್ನು ನಮ್ಮ ಇಂದಿನ ಕುಟುಂಬದ ಸ್ವರೂಪ.  ಮಕ್ಕಳಿರಲವ್ವ ಮನೆ ತುಂಬಾ ಎಂದಿದ್ದ ಆಂದಿನ ಕಾಲವನ್ನು ಥೂ, ಛೀ, ಎಂದೆಲ್ಲಾ ಹೀಗಳೆದು  ಡಬ್ಬಲ್ ಚೈಲ್ಡ್ : ಸಿಂಗಲ್ನಾರ್ಮ್ ಪಾಲಿಸು ನಾರ್ಮ್ ಪಾಲಿಸಿದ ಕಾಲ ಬಂದಿತು. ನಂತರದಲ್ಲಿ ವ್ಯವಸ್ಥೆಯೂ ಸರಿ ಕಾಣಿಸಲಿಲ್ಲ ಹಲವರಿಗೆ. , ಮಕ್ಕಳನ್ನು ಹೆರುವುದರಿಂದ ಬಾಡಿ  ಬ್ಯೂಟೀನೂ ಹಾಳಾಗುತ್ತೆ,  ಜೊತೆಗೆ ಕೆರಿಯರ್ಗೂ ಕಂಟಕ. ಅದಕ್ಕೇ ಅಡಾಪ್ಶನ್ : ಆರ್ ನೊ ಚೈಲ್ಡ್ ಪಾಲಿಸಿಯೇ ಇಂದಿಗೆ ಬೆಸ್ಟ್ ಪಾಲಿಸಿ ಅನ್ನೋ ಕೂಗು  ಈಗ ಕೇಳಿಸ್ತಿದೆ.  

  ಇದುವರೆಗೂ ವರ್ಣಿಸಿದ್ದು ಹೈ ಟೆಕ್: ಟೆಕ್ಕೀಸ್ ವಿಷಯಗಳದ್ದಾಯ್ತು. ನಾವಷ್ಟೆಲ್ಳಾ ಉನ್ನತ ಶಿಕ್ಷಣ, ಆದಾಯ ಪಡೆಯುತ್ತಿರುವವರಲ್ಲಪ್ಪಾ, ಎನ್ನುವವರು, ಮನೆ ಬೆಳಗಲು, ವಂಶ ಉದ್ದರಿಸ ಲಾದರೂ ಒಂದು ಮಗು ಬೇಕೇ ಬೇಕು ಎನ್ನುವ ಅಪ್ಪರ್  ಮಿಡಲ್ ಕ್ಲಾಸ್ : ಮಿಡಲ್ ಕ್ಲಾಸ್  ಕುಟುಂಬಗಳು ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಒಂದೇ ಮಗು ಅಥವಾ ಆರತಿ ಗೊಂದು ಕೀರುತಿಗೊಂದು ಎಂಬ ಕಾರಣದಿಂದ ಮಗ, ಮಗಳನ್ನು  ಪಡೆಯುತ್ತಿರುವವರು. ಇಲ್ಲಿನ ಕುಟುಂಬ ಮುಖ್ಯಸ್ಥರೆಲ್ಲಾ  ಉದರ           ನಿಮಿತ್ತ ಅದೆಂತಹಾ ವೃತ್ತಿಯನ್ನಾದರೂ ಅವ ಲಂಭಿಸಿರಲಿ, ನಾವಂತೂ ಬಾಲ್ಯದಲ್ಲಿ ಸುಖ ಪಡಲಿಲ್ಲ, ನಮ್ಮ ಮಕ್ಕಳಾದರೂ ಸುಖವಾಗಿರಲಿ ಎಂದು ತಾವು ಹೊಟ್ಟೆ ಬಟ್ಟೆ ಕಟ್ಟಿ ಎಷ್ಟೇ ಕಷ್ಟವಾದರೂ ಅನುಭವಿಸಿ ತಮ್ಮ ಮಕ್ಕಳಿಗೆ ಒಳ್ಳೆಯ ಪುಷ್ಟಿಕರ ಆಹಾರ, ಉಡುಪು, ಓಡಾಡಲೊಂದು ವಾಹನ, (ಸೈಕಲ್ ? ಥೂ, , ಅಸಹ್ಯ, ) ಅದೂ ಸ್ಕೂಟರ್ : ಮೋಟರ್ ಬೈಕ್ ಹೀಗೆ,  ಮಕ್ಕಳು ಕೇಳಿದ್ದನ್ನು ಇಲ್ಲ ಎನ್ನದೆ, ಕೊಡಿಸಿ ಆನಂದಿಸುತ್ತಿರುವವರೇ. 

   ಹೀಗೆ ಬೆಳೆಯುತ್ತಾ, ಬೆಳೆಸಿದ ಬಹಳಷ್ಟು ಕುಟುಂಬಗಳಲ್ಲಿ ತಮ್ಮ ಮಕ್ಕಳು ಏನು ಮಾಡಿ ದರೂ ಮುದ್ದೇ, ಅವರ ಯಾವ ಕೃತ್ಯಗಳೂ ತಪ್ಪು ಎನಿಸಿಸುವುದೇ ಇಲ್ಲ. ಮನೆಯಲ್ಲೂ ಏನೇ  ತಪ್ಪು ಮಾಡಲಿ, ಹೊರಗಡೆ ಯಾರ ಬಗ್ಗೆ ಏನೇ ದುರ್ವರ್ತನೆ ನಡೆಸಲಿ, ಅದು ಹಾಗಾಗ ಬಾರದಿತ್ತು ಎಂದು ತಿದ್ದದೆ, ಪಾಪ, ಮಗು, ಅವನಿಗೇನೂ ಗೊತ್ತಿಲ್ಲ ಎನ್ನುತ್ತಾ ಅವನ ಪರ ಮಾತನಾಡುವ ಪ್ರವೃತ್ತಿ, ಶಾಲಾ : ಕಾಲೇಜಿಗೆ ಎಂದು ಮನೆ ಬಿಟ್ಟು ಹೊರಟವ, ಅಲ್ಲಿಗೆ ಹೋಗದೆ, ತನ್ನ ಮನ ಬಂದ ಕಡೆ ಸ್ನೇಹಿತರ ಜೊತೆ ಸಿನಿಮಾ, ಮಾಲ್ಗಳು, ಪಬ್ ಕ್ಲಬ್ ಪಾರ್ಕ್ ಎಂದು ಸುತ್ತಾಡಿ, ಒಲ್ಲದ ಮನಸ್ಸಿನಿಂದ ಮನೆಗೆ ಬರುವವರು. ಅಟೆಂಡೆನ್ಸ್ ಶಾರ್ಟೇಜ್ ಬಂದಾಗ, ನೀ ಏಕೆ ಶಾಲಾ, ಕಾಲೇಜ್ ಗೆೆ ಹೋಗಲಿಲ್ಲ ಎಂದು ವಿಚಾರಿಸದ ತಂದೆ ತಾಯಿಯರು, ಇಂತಿಷ್ಟು ಹಣ ಪೆನಾಲ್ಟಿಯಾಗಿ ಕಟ್ಟಿ ಅಟೆಂಡೆನ್ಸ್ ರೀದಿಸುವ, ರಸ್ತೆಯಲ್ಲಿ ಟ್ರಾಫಿಕ್ ನಿಯಮ ಪಾಲಿಸದಿದ್ದಕ್ಕೋ, ಅವ ಮಾಡಿದ ಅಪಘಾತಕ್ಕೋ ಮಕ್ಕಳನ್ನು ದಂಡಿಸದೆ ತಪ್ಪಿಗೆ ದಂಡ ಕಟ್ಟಿ, ‘ಎರ್ ಈಸ್ ಹ್ಯೂಮನ್, ಫರ್ಗಿವ್ ಈಸ್ ಡಿವೈನ್, ನಾ ಇರುವವರೆಗೂಡೋಂಟ್ ವರಿ, ಗೋ ಅಹೆಡ್, ಎಂದು ಈಗ ಮಾಡಿದಂತಹಾ ತಪ್ಪುಗಳನ್ನೋ ಇನ್ನೂ ಘೋರವಾದದನ್ನೋ ಮಾಡಲು ಮಕ್ಕಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವ ಹೆಚ್ಚಿನ ಸಂಖ್ಯೆಯ ತಂದೆ ತಾಯಿಯರು ಇಂದು ನಮ್ಮ ಮಧ್ಯೆಯೇ ಇದ್ದಾರೆ .ಎಂಬುದನ್ನು ನಂಬಲು ಕಷ್ಟ ಎನಿಸುತ್ತಿದೆಯೇ !

   ಪರಿಣಾಮ : ಹೀಗೆ ಬೆಳೆದ ಹಲವು ಮಕ್ಕಳ ಮನಸ್ಸಿನಲ್ಲಿ ತಾವು ಮಾಡುವುದೆಲ್ಲಾ  ಸರಿಯೇ , ತಪ್ಪು ಮಾಡುವುದೇ ಇಲ್ಲ, ಅಕಸ್ಮಾತ್ ಆದರೆ ! ಇದ್ದಾರಲ್ಲಾ ನಮ್ಮ ಬ್ಯಾಕ್ ಬೋನ್ ಆದ ಪಾಲಕರು, ಅವರೇ ಎಲ್ಲ ನಿಭಾಯಿಸ್ತಾರೆ, ನಮ್ಮನ್ನು ಬಚಾಯಿಸ್ತಾರೆ ಎಂಬ ದೃಢ ನಂಬಿಕೆ ಬಲವಾಗಿ ಬೇರೂರುತ್ತದೆ.    ಅಹಂನಿA ಕೂಡಿದವೆಲ್ ಎಜುಕೇಟೆಡ್ ಎನಿಸಿಕೊಂಡ ಹಣ ಕಾಸಿನ ಬಲ, ಅಧಿಕಾರ, ಅಂತಸ್ತಿನ ಬಲ, ಜಾತಿ ಬಲ ರಾಜಕೀಯ ಬಲ ಇರುವ ಕುಟುಂಬಗಳ ಹೆಚ್ಚಿನ ಸಂಖ್ಯೆಯ ಮಕ್ಕಳು, ಮುಂದೆ, ತಮ್ಮ ವಿಲಾಸೀ ಜೀವನಕ್ಕೆ ಹಣ ಸಿಗದಾಗ, ಶ್ರಮವಿಲ್ಲದೆಯೋ, ಅತ್ಯಂತ ಕಡಿಮೆ ಶ್ರಮದಿಂದ ಹಣ ಗಳಿಸುವ ಮಾರ್ಗ, ಉದಾಹರಣೆಗೆ :ನಿಷಿದ್ದ ವಸ್ತುಗಳ ಅಕ್ರಮ ಸಾಗಾಣಿಕೆ, ದೇಶದ ರಹಸ್ಯ ಗುಪ್ತ ಮಾಹಿತಿ : ದಾಖಲಾತಿಗಳನ್ನು ಪರ ದೇಶದವರಿಗೆ ನೀಡುವ ರಾಷ್ಟದ್ರೋಹಿ ಕೆಲಸಸ್ತ್ರೀಯರ ಶೀಲ ಭಂಗ, ಕೊಲೆ, ಸಿರಿವಂತರ ಕಿಡ್ನಾಪಿಂಗ್   ಟಿ ಎಂ ಗಳ ದರೊಡೆ, ಖೋಟಾ ಕರೆನ್ಸಿ : ನೋಟು, ವಿಶ್ವ ವಿದ್ಯಾಲಯಗ¼         ಪರೀಕ್ಷೆಗಳ ಖೋಟಾ         ಪ್ರಮಾಣ ಪತ್ರಗಳ ತಯಾರಿ,  ಅಧಿಕಾರದಲ್ಲಿರು ವವರ ಸಹಿಯನ್ನು ನಕಲು ಮಾಡಿ, ಯಾರದೋ ಸೈಟು, ಮನೆಗಳನ್ನು ಓನರ್ಗಳ ಅರಿವೆಗೆ ಬರದ ಹಾಗೆ ಖೋಟಾ ದಾಖಲಾತಿಗಳನ್ನು ಸಿದ್ದಪಡಿಸಿ ಮತ್ಯಾರಿಗೋ ಹಸ್ತಾಂತರ ಮಾಡುವ ಮೂಲಕ ಅಕ್ರಮ ಹಣ ಮಾಡುವುದು, ಮಾದಕ ದ್ರವ್ಯಗಳ ಮಾರಾಟ, ಹೊರದೇಶಗಳಿಗೆ ಇತ್ಯಾದಿ ಸಮಾಜ ಘಾತುಕ ಕಾರ್ಯ, ಹೀಗೆ ಯಾವುದರಲ್ಲಿ ಕಷ್ಟವಿಲ್ಲದೆ ಹೆಚ್ಚು ಹಣ ಸಿಗುತ್ತದೋ ಕೆಲಸದಲ್ಲಿದಲ್ಲಿ ನಿರತರಾಗುತ್ತಿರುವುದು, ಇವರು ಕಾನೂನಿನ ಬಲೆಗೆ ಸಿಲುಕಿ ದಾಗ ತಮ್ಮ ಮಗನಿವನು ಎಂಬ ವ್ಯಾಮೋಹಕ್ಕೋ, ಇವನು ನಮ್ಮ ಮಗ ಎಂಬ ಸುದ್ದಿ ಹೊರ ಪ್ರಪಂಚಕ್ಕೆ ತಿಳಿದು ನಮ್ಮ ಮಾನ ಕಳೆಯುವ ಮೊದಲೇ ಇವನ ಬಿಡುಗಡೆಗೆ ಎಷ್ಟು ಹಣ  ಖರ್ಚಾದರೂ ಪರವಾಗಿಲ  ಎಂದು ಬಿಡಿಸುವ , ಪ್ರಕ್ರಿಯೆಯಿಂದ  ಮಗನಿಗೆ ಮತ್ತಷ್ಟು ಪ್ರೋತ್ಸಾಹ ದೊರೆತು ಇವನು ಮತ್ತಷ್ಟು  ಅಪರಾಧಗಳನ್ನು ಮಾಡುವ ದಂಧೆಗೆ ಸಿದ್ದವಾಗುವಂತೆ  ರಂಗ ಸಿದ್ದವಾಗುತ್ತಿದೆ.

   ಇವೆಲ್ಲಾ  ಮಾಡಬಾರದ್ದು, ಆಗಬಾರದ  ದುಷ್ಟ ಕೃತ್ಯಗಳಲ್ಲವೇ ? ಇಂತಹಾ ಮನ ಸ್ಥಿತಿಯನ್ನುನಿಪ್ ಇಟ್ ಇನ್ ದಿ ಬಡ್ ಎಂಬಂತೆ ಮೊಳಕೆಯಲ್ಳೇ ಚಿವುಟಿ ಮಕ್ಕಳನ್ನು ಸರಿ ದಾರಿಗೆ ತಂದಿದ್ದರೆ ಆರೋಗ್ಯಕರ ಸಮಾಜ, ಸಜ್ಜನ ನಾಗರಿಕರು   ದೇಶಕ್ಕೆ ದೊರಕಲು ಸಾಧ್ಯವಾಗುತ್ತಿರಲ್ಲವೇ ! ಹೀಗ್ಯಾಕಾಗಲಿಲ್ಲ ? ಇದಕ್ಕೆ ಹೊಣೆ ಯಾರು ?  ಇದನ್ನೆಲ್ಲಾ ಚಿಂತನ, ಮಂಥನಕ್ಕೊ ಒಳಪಡಿಸಿದಾಗ, “ಇಂದೇನಾಗಿದೆ ನಮ್ಮ ಮಕ್ಕಳಿಗೆ “ ? ಎನಿಸುವುದಿಲ್ಲವೇ ?  ದಿಸೆಯಲ್ಲಿ ಆತ್ಮಾವಲೋಕನಕ್ಕೆ ಇಂದಾದರೂ ಸಕಾಲವಲ್ವೇ ! ?



          ಮಕ್ಕಳಿಗೆ ತಾಯಿಯೇ ಮೊದಲ ಪಾಠಶಾಲೆ, ಆಕೆಯೇ ಪ್ರಥಮ ಗುರು    ಎಂಬ ಮಾತು ಬಳಕೆಯಲ್ಲಿದೆ. ನಂತರದ ಗುರು ಅಕ್ಷರ ಕಲಿಸುವ ಉಪಾಧ್ಯಾಯ. ಮಕ್ಕಳು ಸಾಧಾರಣವಾಗಿ, ಎಲ್ಲದರಲ್ಲೂ ಹಿರಿಯರನ್ನು ಅನುಸರಿಸುವುದು     ರೂಢಿ. ಹೀಗಾಗಿ, ಹಡೆದವರು ನೀತಿ ಪಾಠ ಬೋಧಿಸುವ ಶಿಕ್ಷಕರು ತಮ್ಮ ನಿಯಂತ್ರಣಕ್ಕೆ ಬರುವ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಸಿ ಸತ್ ಪ್ರಜೆಗಳಾಗಿ ಸದ್ಗುಣವಂತರಾಗಿ ಸಜ್ಜನರಾಗಿ ದೇಶ ಪ್ರೇಮಿಗಳಾಗಿ ಬೆಳೆಸ ಬೇಕಾದ ಹೊಣೆ ಸಬಂಧಿತರದಾಗಿರುತ್ತದೆ. 

        ಶಿಕ್ಷಣ ನೀಡುವವರುಶಿಕ್ಷಕರು ಎನಿಸಿಕೊಳ್ಳುತ್ತಾರೆ,  ಹೀಗಂದಾಗ    ಶಿಕ್ಷಣ  ಎಂದರೇನು ? ಶಿಕ್ಷಣದ ಗುರಿ ಏನಾಗಿರಬೇಕು ಎಂಬ ಬಗ್ಗೆ  ಪ್ರಸ್ತಾವಿಸುತ್ತಾ, ಮಾತನಾಡಿರುವ ಸ್ವಾಮಿ ವಿವೇಕಾನಂದರು : “ಪುಸ್ತಕಗಳನ್ನು ಓದಿ, ಕಂಠಪಾಠ ಮಾಡಿ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು, ಹಲವು ವಿಷಯಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುವುದು ಶಿಕ್ಷಣ ಎನಿಸಿಕೊಳ್ಳುವುದಿಲ್ಲ. ಬದಲಿಗೆ, ಮಕ್ಕಳಲ್ಲಿ ಒಳ್ಳೆಯ ಚಾರಿತ್ರ್ಯ ನಿರ್ಮಾಣ ಮಾಡಬಲ್ಲ ಮಾನಸಿಕ ಶಕ್ತಿಯನ್ನು ಹೆಚ್ಚಿಸಬಲ್ಲ, ಸತ್ಪಜೆಗಳನ್ನು ನಿರ್ಮಾಣ ಮಾಡಬಲ್ಲ   ರಾಷ್ಟಾಭಿವೃದ್ದಿಗೆ-ಪುನರುಜ್ಜೀವನಕ್ಕೆ ನಾಂದಿಯಾಗ ಬಲ್ಲಂತಹಾ ಮಾಧ್ಯಮವೇಶಿಕ್ಷಣ ಎಂದಿದ್ದಾರೆ. ಮುಂದು ವರಿಸುತ್ತಾ,  ಒಳ್ಳೆಯ ಚಾರಿತ್ರ್ಯ ವಿಲ್ಲದ ವಿದ್ಯೆಗೆ ಸಮಾಜದಲ್ಲಿ ಮನ್ನಣೆ ದೊರೆಯುವುದಿಲ್ಲ. ಶಿಕ್ಷಣವೆಂದರೆ ಬರೀ ಪುಸ್ತಕ ಪಾಂಡಿತ್ಯವಲ್ಲ. ಬದಲಿಗೆ, ಮಾನವನ ಸಮಗ್ರ ಬೆಳವಣಿಗೆಯೇ ಸರಿಯಾದ ಶಿಕ್ಷಣ ಎಂದಿದ್ದಾರೆ ಸ್ವಾಮೀಜಿ. 



          ಹಿನ್ನೆಲೆಯಲ್ಲಿ, “ಇಂದೇನಾಗಿದೆ !  ನಮ್ಮ ಮಕ್ಕಳಿಗೆ ? ಎಂಬ ಪ್ರಶ್ನೆಗೆ , ಬಾಲ್ಯ ದಿಂದಲೂ ಮಕ್ಕಳಿಗೆ ನಿಜವಾದ ಅರ್ಥದ ಶಿಕ್ಷಣ ದೊರೆಯದಿರುವುದೇ ಇಂದಿನ ಅವರ ಎಲ್ಲ ಸಮಸ್ಯೆಗೆ ಕಾರಣ ಎಂಬುದೇ ತಜ್ಞರ ಉತ್ತರವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಸಣ್ಣ ವಯಸ್ಸಿ ನಿಂದಲೇ ನೀತಿ ಪಾಠಗಳನ್ನು ಕಲಿಸಬೇಕು. ನಾವು ಮಾನವರು, ಮಾನವರಂತೆ ವರ್ತಿಸುವು ದನ್ನು ಮೊದಲು ಕಲಿಸಬೇಕುಸ್ತ್ರೀಯರಿಗೆ, ಹಿರಿಯರಿಗೆ ಗೌರವ ಸಲ್ಲಿಸುವ, ದೀನ ದುರ್ಬಲ ವೃದ್ಧ ಅಂಗವಿಕಲರಲ್ಲಿ ದಯೆ, ಅನುಕಂಪ, ಸಹಾನುಭೂತಿ, ಪ್ರೀತಿ, ವಿಶ್ವಾಸಗಳನ್ನಿಟ್ಟು ಅವರಿಗೆ ನೆರವು ನೀಡುವ, ತನ್ನಂತೆಯೇ ತನ್ನ ಸಹ ಜೀವಿಗಳು, ಅವರಿಗೂ ಗೌರವಯುತವಾಗಿ ನೆಮ್ಮದಿಯಾಗಿ ಬಾಳಲು ತನ್ನಂತೆಯೇ ಹಕ್ಕಿದೆ ಎಂಬ ಸತ್ಯವನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು. ಪಾಪ, ಪುಣ್ಯ, ನೀತಿ, ಅನೀತಿ, ಧರ್ಮ, ಅಧರ್ಮ, ನ್ಯಾಯ, ಅನ್ಯಾಯ ಎಂದರೇನು, ಹೆತ್ತವರ ಬಗ್ಗೆ, ಸಮಾಜಕ್ಕೆ, ದೇಶಕ್ಕೆ ಮಕ್ಕಳ ಹೊಣೆ, ಜವಾಬ್ಧಾರಿಗಳೇನು ಎಂಬುದನ್ನು ಪ್ರತಿ ಮನೆಯ ಹಿರಿಯನೂ ತನ್ನ ಮಕ್ಕಳಿಗೆ ಉದಾಹರಣೆ ಸಹಿತ ವಿವರಿಸಿ, ತನ್ಮೂಲಕ ಅವರು ಸನ್ಮಾರ್ಗದಲ್ಲಿ ನಾಗರಿಕರಾಗಿ ನಡೆಯುವಂತೆ ಪ್ರೇರೇಪಿಸಬೇಕು. ನಿತ್ಯದ ಕೆಲಸಗಳ ನಿರ್ವಹಣೆಯಲ್ಲಿ ಸ್ವಚ್ಛತೆ, ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆ, ಸಹನೆ, ಸನ್ನಡತೆ, ಕುಟುಂಬದ ಸದಸ್ಯರೊಡನೆ  ನ್ನ ಅನಿಸಿಕೆ ಅಭಿಪ್ರಾಯಗಳನ್ನು ಇತರರಿಗೆ ಸ್ಪಷ್ಟವಾಗಿ, ಸರಿಯಾಗಿ ತಿಳಿಸುವ, ಇತರರ ಅಭಿಪ್ರಾಯಗಳನ್ನು ಸಾವಧಾನವಾಗಿ ಆಲಿಸುವ, ವಿಷಯ, ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ರಿಹರಿಸುವ ವ್ಯಾವಹಾರಿಕ ಚತುರತೆ ಯನ್ನು ಕಲಿ¸ಬೇಕು. ಜೊತೆಗೇನೇ, ತನ್ನ ಬೋಧನೆಯಂತೆ ಅವರು ವರ್ತಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ನಿಗಾ ವಹಿಸಿ ಅವರು ತಪ್ಪು ಮಾಡಿದಾಗ ಆದ ತಪ್ಪನ್ನು ಅವರಿಗೆ ತಿಳಿಸಿ ಅದು ಪುನರಾವರ್ತನೆಯಾಗದಂತೆ ತಿಳಿ ಹೇಳುವ, ಅವ ಮಾಡಿದ ಒಳ್ಳೆಯ ಕೆಲಸವನ್ನು ಹೊಗಳುವ ಕಾರ್ಯ ಇಂದು ಜರೂರಾಗಿ ಆಗಬೇಕಾಗಿರುತ್ತದೆ.   

    ಹೆತ್ತವರು, ಗುರುಗಳು, ಸಮಾಜ, ದೇಶದ ಹಿರಿಯರು, ನಾಯಕರು, ಪ್ರe ಪ್ರತಿನಿಧಿಗಳು ಇವರನ್ನೇ ಇಂದಿನ ಮಕ್ಕಳುಆದರ್ಶ ಪುರುಷರು, ಮಾದರಿ ವ್ಯಕ್ತಿಗಳು, ನಾವು ಬೆಳೆದು ದೊಡ್ಡವರಾದ ಮೇಲೆ ನಾವೂ ಇವರಂತೇನೇ ಆಗಬೇಕುಎಂಬ ಹಿರಿಯಾಸೆ ಇಂದಿನ ಮಕ್ಕಳ ಮನಸ್ಸಿನಲ್ಲಿ ದೃಢವಾಗಿ ಬೇರೂರಿರುತ್ತದೆ. ಇಂದಿನ ಮಕ್ಕಳು ಮುಂದೇನಾಗಬೇಕು ? ಎಂಬುದಕ್ಕೆ ಭದ್ರ ಬುನಾದಿ ಹಾಕಬೇಕಾದವರುನಾವು-ನೀವೇ ಎಂಬುದನ್ನು ಮರೆತು ನಾವು, ನೀವು ಹೊಣೆ ರಹಿತರಾಗಿ ವರ್ತಿಸಿದರೆ, ಮುಂದೆ ಅವರು ಮಾಡಬಹುದಾದ ಅನಾಹುತ, ಪರಿಣಾಮದ ಅಪಕೀರ್ತಿಗಳಿಗೆ ನಾವೆಲ್ಲರೂ ಪಾಲುದಾರರಾಗಬೇಕಾಗುತ್ತದೆ ಎಂಬ ಸತ್ಯ ವನ್ನು ನೆನಪಿಡಬೇಕು. ಇದೇ ಸಂದರ್ಭದಲ್ಲಿ, “ತಾಯಯಂತೆ ಮಗಳು ನೂಲಿನಂತೆ ಶಾಲೆ (ಗ್ರಾಮ್ಯ ಭಾಷೆಯ ಸೀರೆ) ಯಥಾ ಗುರು, ತಥಾ ಶಿಷ್ಯ, ಯಥಾ ರಾಜ ತಥಾ ಪ್ರಜಾ, ನಾಯಕನಂತೆ  ಸೈನಿಕ ಎಂಬ ಗಾದೆಗಳು ಸದಾ ಸ್ಮರಣಾರ್ಹ.

                    *********************

Comments