ಒಂದು ಮನೆ ಎರಡು ಒಲೆ ! ?

 ಒಂದು ಮನೆ ಎರಡು ಒಲೆ ! ?  (ಯಾಕ್ ಹಿಂಗ್ ಆಡ್ತಾರೋ ! ?

ಲೇಖಕರು : ಎಂ ಆರ್ ವೆಂಕಟರಾಮಯ್ಯ 



     ಈ ಶೀರ್ಷಿಕೆ ನೋಡಿದರೆ ಇದೇನು ಪತ್ತೆದಾರಿ ಕತೆಯೋ, ಫಿಕ್ಚನ್ನೋ  ? ಶೀರ್ಷಿಕೆಯಲ್ಲಿ ಏನೋ ಗೂಢಾರ್ಥವಿದ್ದಂತೆ, ರಹಸ್ಯ ಅಡಗಿಸಿದಂತಿದೆ ಎಂಬ ಸಂಶಯ ನಿಮ್ಮದೇ ! ಪ್ರಸ್ತುತ ಪಡಿಸುತ್ತಿರುವ ಲೇಖನದ ವಿಷಯ ಪತ್ತೆದಾರಿ ಕತೆ, ಫಿಕ್ಚನ್ ಯಾವುದೂ ಅಲ್ಲ. ಬದಲಿಗೆ ಮಧ್ಯಮ ವರ್ಗದ ಒಂದು ಸಾಮಾನ್ಯ ಕುಟುಂಬದ ಜೀವನ ಶೈಲಿ ಹೀಗೂ ಇರುತ್ತದೆ ಎಂಬ ಚಿತ್ರಣ ಇಲ್ಲಿದೆ. ಇದನ್ನು ಓದಿದ ಮೇಲೆ ಏ, ಬಿಡ್ರೀ, ಮನೆ ಒಂದೆಯೇ, ಒಂದೊAದು ಕೋಣೇಲಿ ಒಬೊಬ್ಬ  ಸೋದರ ಬೇರೆ ವಾಸವಾಗಿದ್ದು ಬೇರೆ ಅಡುಗೆ ಮಾಡಿಕೊಂಡಿರಲು ಸಾಧ್ಯ, ಇಲ್ಲಿ  ಮನೆ \ಕಟ್ಟಡ ಒಂದೇ, ಆದರೆ ಒಲೆಗಳು ಮೂರೋ ನಾಲ್ಕೋ ಯಾಕಿರಬಾರದು ? ಇದೇನು ಅಸಾಮಾನ್ಯ ಅಲ್ಲ. ಹಲವು ಮನೆಗಳಲ್ಲಿ ಸಾಮಾನ್ಯ ದೃಶ್ಯವೇ ಆಗಿರಬಹುದು. ಈ ಹಿನ್ನೆಲೆಯಲ್ಲಿ  ಶೀರ್ಷಿಕೆಯಲ್ಲಿ ಏನೂ ಸ್ವಾರಸ್ಯವಿಲ್ಲ ಎಂದಿರಾ ! 

    ಸ್ವಾಮಿ, ಒಂದೇ ಮನೆಯಲ್ಲಿ ಬೇರೆ ಬೇರೆ ಸಂಸಾರ ಹೂಡಿರುವ ಸೋದರರು ಬೇರೆ ಒಲೆಗಳನ್ನಿಟ್ಟುಕೊಂಡಿರಬಹುದು. ಆದರೆ ಪ್ರಸಕ್ತ ಲೇಖನದ ಪಾತ್ರಧಾರಿಗಳು ವೃದ್ಧೆ ಮಾತೆ, ಮಗ ಸೊಸೆ ಮೊಮ್ಮಗಳು. ಹೀಗಾಗಿ ಇವರೆಲ್ಲಾ ಒಂದೇ ಕುಟುಂಬ ದವರೇ ಆದರೂ ಎರಡು ಒಲೆ ಎಂದರೆ . . . ! ವಿಚಿತ್ರ ಎನಿಸುವುದಿಲ್ಲವೇ  ? 

   ಇನ್ನು ಶೀರ್ಷಿಕೆಯಲ್ಲಿ “ಯಾಕ್ ಹಿಂಗ್ ಆಡ್ತಾರೋ” ಎಂಬ ಸಾಲನ್ನು ಬಳಸಿರುವ ಬಗ್ಗೆ :     

    ಕೆಲವು ವರ್ಷಗಳ ಹಿಂದೆ ಕರ್ನಾಟಕದ ಚಿತ್ರಮಂದಿರಗಳಲ್ಲಿ ತೆರೆ ಕಂಡ ಕನ್ನಡ ಚಲನ ಚಿತ್ರದ ಒಂದು ಗೀತೆ, “ಏನ್ ಹುಡ್ಗೀರೋ ! ಯಾಕ್ ಹಿಂಗ್ ಆಡ್ತಾರೋ” ಇದನ್ನು ಹಾಡಿದ್ದು ಬಹುಶಃ ಪುನೀತ್ ರಾಜ್ ಕುಮಾರ್ ಎಂಬAತೆ ನನ್ನ ನೆನಪು, ಪ್ರಸಕ್ತ ಲೇಖನ ಬÀರೆಯುವ  ಸಂದರ್ಭಕ್ಕೆ ಈ ಗೀತೆ ನೆನಪಾಗ್ತಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಜನ “ಯಾಕ್ ಹಿಂಗಾಡ್ತಾರೋ” ಅನ್ನಿಸ್ತಾಯಿದೆ. ಈ ಹಿನ್ನೆಲೆಯಲ್ಲಿ  ನಾ ಹತ್ತಿರದಿಂದ ಕಂಡ ಎರಡು ಮಧ್ಯಮ ವರ್ಗದ ಸಾಮಾನ್ಯ ಕುಟುಂಬಗಳ ಜೀವನÀ ಶೈಲಿಯ ಕಿರು ಚಿತ್ರಣ ಇಲ್ಲಿ ನೀಡ್ತಿದ್ದೇನೆ. ಓದಿದ ನಂತರ ನೀವೇ ಅನ್ನಬಹುದು “ಯಾಕ್ ಹಿಂಗಾಡ್ತಾರೋ” ಅಂತ.

    ಆ ಮನೆಯಲ್ಲಿ ೭೦ ಪ್ಲಸ್ ವಯಸ್ಸು ದಾಟಿದ ವೃದ್ದೆ, ಈಕೆಯ ಪತಿ ಸರ್ಕಾರಿ ವೃತ್ತಿಯಲ್ಲಿದ್ದು ಹಲವು ದಶಕಗಳ ಹಿಂದೆ ನಿಧನರಾಗಿದ್ದು ಈಕೆ ಕುಟುಂಬ ಪಿಂಚಣಿ ಪಡೆಯುತ್ತಿರುವಾಕೆ. ಈಕೆಯ ಮಗ ವಯಸ್ಸು ಸುಮಾರು ೫೬ ಇರಬಹುದು. ಒಂದು ಪ್ರಸಿದ್ದ ಕಾರ್ಖಾನೆಯಲ್ಲಿ ಮುಖ್ಯಸ್ಥನ ಹುದ್ದೆಯಲ್ಲಿ ಇದ್ದು ತಿಂಗಳಿಗೆ ಸುಮಾರು ೮೦ ಸಹಸ್ರಕ್ಕೂ ಮೀರಿದಷ್ಟು ವೇತನ ಪಡೆಯುತ್ತಿರಬಹುದು. ಇನ್ನು ಈತನ ಪತ್ನಿ ವಯಸ್ಸು ೫೦ ದಾಟಿದೆ. ಕೇಂದ್ರ ಸರ್ಕಾರದ ಹುದ್ದೆಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದು ೫೦ ಸಹಸ್ರದಷ್ಟು ಪಿಂಚಣಿ ಪಡೆಯುತ್ತಿರುವಾಕೆ. ಇಬ್ಬರು ಮಕ್ಕಳು. ಮಗ ಇಂಜಿನಿಯರ್ ಆಗಿ ಹೊರ ದೇÃಶದಲ್ಲಿ ಉದ್ಯೋಗ. ಮಗಳೂ ಇಂಜಿನಿಯರಿAಗ್ ಮುಗಿಸಿ, ಸೇವೆಗೆ ಸೇರಲಿಚ್ಚಿಸದೆ, ಅಮ್ಮನ ಮುದ್ದಿನ ಚೀಲಿ. ಈ ಸಂಸಾರದಲ್ಲಿ ಒಬ್ಬ ಮಗಳನ್ನು ಹೊರತುಪಡಿಸದರೆ, ಉಳಿದೆಲ್ಲಾ ೪ ಸದಸ್ಯರೂ ವೇತನವೋ : ಕೈ ತುಂಬಾ ಪಿಂಚಣಿಯನ್ನೋ ಪಡೆಯುತ್ತಿರುವವರೇ . 

   ನಾಲ್ವರ ಆದಾಯದಲ್ಲಿ ತಿನ್ನುವವರು ೫ ಮಂದಿಯಾದg ಇಲ್ಲಿ ಯಾವುದಕ್ಕೆ ಬಡತನವಿದೆ ? ಈ ಪ್ರಶ್ನೆಗೆ ಬಹು ಜನರ ಉತ್ತರ ಬಡತನ  ಎಲ್ಲಿದೆ ರ‍್ರೀ ? ಎಂಬುದೇ ಆಗಿರಬಹುದು. ಆದರೆ ಈ ಕುಟುಂಬದಲ್ಲಿನ  ಒಂದು ವಿಚಿತ್ರ ಎಂದರೆ, ಕೆಳ ಮನೆಯಲ್ಲಿ ವೃದ್ಧೆ ತಾಯಿ, ಒಬ್ಬಾಕೆಯೇ ಕೆಲಸದಾಕೆಯನ್ನಿಟ್ಟುಕೊಂಡು ತನ್ನ ಪರಮಾಯಿಶಿ ತಿಂಡಿ, ಅಡುಗೆ ಮಾಡಿಸಿಕೊಂಡು ಉಂಡು, ತನ್ನೆಲ್ಲಾ ಅಗತ್ಯಗಳಿಗೆ ಆ ಕೆಲಸದಾಕೆಯ ನೆರವು ಪಡೆಯುತ್ತಾ ನಾ ಯಾರ ಹಂಗಿನಲ್ಲೂ ಇಲ್ಲ ಎಂಬ ನಿರಾಳ ಜೀವನ ನಡೆಸ್ತಿದ್ದಾರೆ. 

    ಇನ್ನು ಉಳಿದ ಮೂವರು ಸದಸ್ಯರು ಪತಿ ಪತ್ನಿ ಮಗಳು ಮೊದಲ ಮಹ ಡಿಯ ವಿಶಾಲ ಜಾಗದಲ್ಲಿ ಇವರ ಸುಖ ವಾಸ. ಇಲ್ಲಿ ಪತ್ನಿ ಅಂದರೆ ಕೆಳ ಮನೆ ಯಲ್ಲಿ ವಾಸವಾಗಿರುವ ವೃದ್ಧೆಯ ಸೊಸೆ, “ನನಗೆ ಯಾರೂ ಹೇಳುವವರೂ ಕೇಳುವವರೂ ಇರಬಾರದು. ನೋ ಆಸ್ಕರ್, ನೋ ಟೆಲ್ಲರ್, ಇಂಡಿಪೆAಡೆAಟ್ ಜೀವನ ನನ್ನದು” ಅನ್ನೋ ಧೋರಣೆಗಾರ್ತಿ, ಈ ಪಿಂಚಣಿಗಾರ್ತಿ. ತನ್ನ ಪತಿ, ಮಗಳಿಗೆ ಇಷ್ಟವಾದ ಅಡುಗೆ ಮಾಡಿ, ಉಂಡು, ಇಚಿಸಿದ ವೇಳೆಯಲ್ಲಿ ಇಚ್ಚಿಸಿದ ಜಾಗಕ್ಕೆ ಹೋಗಿ “ರ‍್ತೀನಿ. ಸಮಾನರಾರಿಹರು, ಎನ್ನ ಸಮಾನರಾರಿಹರು ! ಎಂದು ಬೀಗುತ್ತಿರುವ ಹೆಣ್ಣು. 

     ಇವರನ್ನ ನೋಡಿದ ಸಮೀಪದ ಹಿತೈಷಿಗಳು, “ಅಲ್ಲಾ ಸರ್, ಇಷ್ಟು ದೊಡ್ಡ ಮನೇಲಿ ನೀವು ನಾಲ್ಕೇ ಜನ ಮಹಡಿಯ ವಿಶಾಲ ಜಾಗದಲ್ಲಿ, ಆದರೆ ಆ ಕೆಳ ಮನೆಯಲ್ಲಿ ವೃದ್ಧೆ ಏಕಾಂಗಿಯಾಗಿದ್ದಾರೆ. ಆಕೆ ಬೇರೆ ಯಾರೂ ಅಲ್ಲ, ನಿಮ್ಮನ್ನು ಹೆತ್ತು ಹೊತ್ತವಳಲ್ಲವೇ ! ಎಲ್ಲಾ ಒಂದೇ ಕಡೆ ಕಲೆತು ಕೂತು ಸಂತೋಷದಿAದ ಮಾತು ಕತೆ ಆಡುತ್ತಾ ತಿಂದು ಸಂತಸ ಪಡಬಾರದೆ ? ಆಕೇನ ಯಾಕೆ ಒಂಟಿಯಾಗಿ ಬೇರೇ ಹಾಕೀದೀರಿ ? ಎಂದು ಪ್ರಶ್ನಿಸುವವರಿಗೆ, ಈ ಮಗ ರಾಯ, ಸಣ್ಣ ದ್ವನೀಲಿ(ಪತ್ನಿಗೆ ಕೇಳಿಸದಿರಲಿ ಎಂದು) ಉತ್ತರಿಸ್ತಾರೆ, “ನಮ್ಮ ತಾಯಿಗೂ ನನ್ನ ಪತ್ನಿಗೂ ಎಣ್ಣೆ ಸೀಗೇ ಕಾಯಿಯಷ್ಟು ವಿಶ್ವಾಸ. ಅಮ್ಮ ಸ್ವತಂತ್ರವಾಗಿ ಇರಬೇಕಂತೆ. ಅದಕ್ಕೇ ಹಾಗಿದ್ದಾರೆ, ಇರಲಿ ಬಿಡಿ, ಆಕೆಯ ಪಿಂಚಣಿ, ಅದರಿಂದ ಖರ್ಚು. ಇದರಿಂದ ಅಮ್ಮನಿಗೆ, ನನ್ನ ಪತ್ನಿಗೆ, ಸಮಾಧಾನ. ಇವರಿಬ್ಬರಿಗೂ ಸಮಾಧಾನವಾದ್ದು ನನಗೂ ಸಮಾಧಾನವೇ ಅಲ್ಲವೇ  ! ?

    ಈ ಪ್ರಸಂಗದಲ್ಲಿ ಯಾರಿಗೂ ಹಣದ ಸಮಸ್ಯೆಯಿಲ್ಲ. ವಾಸಿಸುವ ಜಾಗದ ಸಮಸ್ಯೆಯಿಲ್ಲ. ಸದಸ್ಯರೆಲ್ಲರೂ ಉನ್ನತ ಶಿಕ್ಷಣ ಪಡೆದು ಅಗತ್ಯಕ್ಕಿಂತಾ ಹೆಚ್ಚಿನ ಆದಾಯ ಪಡೆಯುತ್ತಿರುವವರು. ಯಾರಿಗೂ ಯಾವುದಕ್ಕೂ ಬಡತನವಿಲ್ಲ. ಆದರೂ ಯಾಕೆ  “ಒಂದು ಮನೆ-ಎರಡು ಒಲೆ “ ? ಎಂದಿರಾ ! ಇಲ್ಲಿ ಇದೆ ಬಡತನ. ಸಹೃದಯತೆಯ ಬಡತನ. ಸಂಸ್ಕಾರದ ಬಡತನ. ತಾಳ್ಮೆ ಸಹನೆ ಕ್ಷಮೆಯ ಬಡತನವಿದೆ. ಜೊತೆಗೆ ಈ ಕುಟುಂಬದ ನಾಲ್ವರಲ್ಲೂ ತುಂಬಿದೆ ಸ್ವಾರ್ಥ. ನಾನು,  ನನ್ನದು ನನಗೇ, ನಾ ಹೇಳಿದ ಹಾಗೆ ಅವರು ಕೇಳಬೇಕು ಅನ್ನೋ ಡಾಮಿನೇಟಿಂಗ್ ಬುದ್ಧಿ. ಸ್ವಾರ್ಥ ಇದ್ದ ಕಡೆ ಕಣ್ಣು ಇದ್ದೂ ಕುರುಡಾಗಿರುತ್ತದೆ. ಇವರ ಜ್ಞಾನ ನೇತ್ರಗಳು ಮುಚ್ಚಿ ಹೋಗರ‍್ತವೆ. 

     ನನ್ನ ಅತ್ತೆ ನನ್ನ ಅಮ್ಮನಿಗೆ ಸಮಾನವಲ್ಲವೇ ! ಆಕೆ ಇಷ್ಟಪಟ್ಟ ಆಹಾರ, ವಾತಾವರಣ, ಪರಿಸರ ಕಲ್ಪಿಸೋದಕ್ಕೆ ನನಗೇನೂ ಕಷ್ಟವಿಲ್ಲ ಅಮ್ಮಾ, ನೀವು ಯಾಕೆ ಒಂಟಿಯಾಗಿರಬೇಕು ? ನಮ್ಮ ಜೊತೆಯೇ ಇದ್ದು ಮಾರ್ಗದರ್ಶಕರಾಗಿರಿ ಎನ್ನುವ ಮನಸ್ಸಿಲ್ಲ ಈ ಮನೆಯ ಸೊಸೆಗೆ. ಹೆತ್ತ ಅಮ್ಮನ್ನ ಬೇರೆ ಇಡೋದೇ ? ಆಗದು, ಇದು ತಪ್ಪಾಗುತ್ತದೆ, “ತಾಯಿ ತಂದೆಯಾ ಸೇವೆಯಾ ಯೋಗ, ಬರಬಾರದೆ ಈ ಬಾಳಿನಲಿ ಬೇಗ”  (ಭಕ್ತ ಹರಿದಾಸ ಎಂಬ  ಕನ್ನಡಸ ಬಹಳ ಹಳೆಯ ಚಿತ್ರದ ಹಾಡು) ಎಂದು ಮಾತಾ ಪಿತರನ್ನು ಬಹು ಬೇಗ ಕಳೆದುಕೊಂಡ ನತದೃಷ್ಟ ಮಕ್ಕಳು  ಹೆತ್ತವರ ಸೇವಾ ಭಾಗ್ಯಕ್ಕಾಗಿ ಹಲಬುದ್ನು ನಾವೆಲ್ಲಾ ನೋಡಿ, ಅಯ್ಯೊ ಪಾಪ ? ಎಂದು ಮರುಗಿಲ್ಲವೇ ! ನನಗೆ ಹೆತ್ತವಳಿದ್ದರೂ ಆಕೆಯ ಸೇವಾ ಭಾಗ್ಯದಿಂದ ವಂಚಿತನಾಗುತ್ತಿದ್ದೇನಲ್ಲಾ,  ನಾನು ! ಎಂಬ ಅಳಲು, ಮಾತೃ ಭಕ್ತಿ, ಇಲ್ಲಿನ  ಮಗನಲ್ಲಿಲ್ಲ. 

    ನÀನ್ನವರೆಲ್ಲಾ ಇದ್ದೂ ಇಲ್ಲದಂತೆ ನಾ  ಏಕೆ ಒಂಟಿಯಾಗಿ ಅನಾಥೆಯಂತಿರ ಬೇಕು ? ಅವರೆಲ್ಲಾ ತಿಂದಿದ್ದು ನನಗೂ ಆಗುತ್ತೆ. ಮಗ ಸೊಸೆ, ಮೊಮ್ಮಗಳ ಜೊತೆ ಸಂತೋಷವಾಗಿರೋಣ ಇಂತಹಾ ಪುಣ್ಯ ಅದೆಷ್ಟು ಜನಕ್ಕುಂಟು ? ಅನ್ನೋ ಸಹೃದಯತೆ, ಸಹಬಾಳ್ವೆ, ಹೊಂದಾಣಿಕೆಯ ಮನ ಇಲ್ಲಿನ ವೃದ್ಧೆಗಿಲ್ಲ. 

   ಇದೆಲ್ಲಾ ಕೇಳಿದಮೇಲೆ ನಿಮಗನ್ನಿಸೋದಿಲ್ವೇ “ ಯಾಕ್ ಹಿಂಗಾಡ್ತಾರೋ” ಅಂತ ! ?

   ಇನ್ನು ೨ ನೇ ಕುಟುಂಬದ ದೃಶ್ಯ. ಅಮ್ಮ, ಅಪ್ಪ, ಹಿರಿಯ ನಾಗರಿಕರು. ಮಗ, ಸೊಸೆ, ಮಧ್ಯ ವಯಸ್ಕರು. ಇವರ ಪುಟ್ಟ ಮಗ ಈ ಕುಟುಂಬದಲ್ಲಿ. ಇಲ್ಲಿನ ಅಪ್ಪ ಅಮ್ಮನಿಗೆ ಎಂತಹುದೇ ಆದಾಯವಿಲ್ಲ. ವಾಸಿಸಲು ಸ್ವಂತ ಮನೆಯಿಲ್ಲ. ಮಗನೇ ಇವರೆಲ್ಲ ಅಗತ್ಯಗಳಿಗೆ ಆಧಾರ. ಈ ಮಗನದು ಸ್ವಂತ ಉದ್ಯೋಗ. ೪ ಪ್ಲಸ್ ೧ ಜನರ ಊಟ, ಬಟ್ಟೆಗೆ ಸಾಕಾಗುವಷ್ಟು ಸಂಪಾದನೆಯಿದೆ. ಈ ಮನೆಯಲ್ಲೂ “ಒಂದು ಮನೆ-ಎರಡು ಒಲೆ” ಆಗಬೇಕೇ !  ಸೊಸೆ ಮಾಡಿದ ಅಡುಗೆ ಈ ಹಿರಿ ಯರಿಗೆ ಹಿಡಿಸೊಲ್ವೋ : ಈ ವೃದ್ಧರಿಗೆ ಊಟ ತಿಂಡಿ ಮಾಡಲು ಸೊಸೆಗೆ ಇಷ್ಟ ವಿಲ್ಲವೋ, ಕಾರಣ ಏನೋ ಹೊರಗಿನವರಿಗೆ ತಿಳಿಯದ ಗುಟ್ಟು. 

    ನಾವು ಸ್ವತಂತ್ರವಾಗಿರಲು ನಮಗೆ ಬೇರೊಂದು ಮನೆ, ಪುಟ್ಟದಾದರೂ ಪರ ವಾಗಿಲ್ಲ, ಮಾಡಿಕೊಡಯ್ಯಾ, ಅಂತ ಮಗನನ್ನು  ಈ ಹೆತ್ತವರು ಗೋಗರೆದರೆ,  ಆ, ನನಗೊಂದು, ನಿಮಗೊಂದು ಅಂತ ಎರಡು ಮನೆಗಳಿಗೆ ಬಾಡಿಗೆ ಕಟ್ಟೋಕಾಗುತ್ತಾ ! ಅದೆಲ್ಲಾ ಆಗೊಲ್ಲಾ,  ನನ್ನ ಹೆಂಡತಿ ಮಾಡೋ ಅಡುಗೆ ನಿಮಗೆ ಸರಿಹೋಗೊಲ್ಲಾ ಎನಿಸಿದರೆ,  ಮನೆಗೆ ತಂದಿರೋ ಸಾಮಾನಿನಲ್ಲೇ, ಈಗ ಇರೋ ಅಡುಗೆ ಮನೇಲೇ ಆ ಕಡೆ ಒಂದು, ಈ ಕಡೆ ಒಂದು, ಎರಡು ಸ್ಟೌವ್ ಇಟ್ಕೊಂಡು ನಿಮಗೆ ಬೇಕಾದ ಅಡುಗೆ, ತಿಂಡಿ ನೀವೇ ಮಾಡಿಕೊಳ್ಳಿೆ, ಅಂದ ಮಗ. 

   ಈ ಮಾತು ಕೇಳಿ, ‘ಆಹಾ ! ಎಂತಹಾ ಬುದ್ಧಿವಂತನೋ ನನ ಗಂಡ ! ಅಂತ ಹಿರಿ ಹಿಗ್ಗಿದಳು ಮಗನ ಪತ್ನಿ. ಸಧ್ಯ, ನಾಳೆಯಿಂದ ಈ ಅತ್ತೆ ಮಾವ ಅನ್ನೋ ಮುದುಕರಿಗೆ ಬೇಯಿಸೋ ಕಷ್ಟ ನನಗೆ ತಪ್ಪಿತು. ನನಗೆ ಗಂಡ ಮಗನಿಗೆ ಏನು ಅಡುಗೆ ತಿಂಡಿ ಇಷ್ಟವೋ ಅದನ್ನು ಮಾಡಿಕೊಂಡು ಖುಷಿಯಾಗಿರಬಹುದು ಅಂತ ಹಿರಿ ಹಿಗ್ಗಿದಳು ಮಗನ ಪತ್ನಿ.

     ಈ ಸಿಂಡಿರು ಮುಖದೋಳ ಕೈಲಿ ಅಡುಗೆ ತಿಂಡಿ ತಿನ್ನೋದು ನಮಗೂ ತಪ್ಪಿತು. ನಮಗಿಬ್ಬರಿಗೆ ಬೇಕಾದ್ದನ್ನು ನಾನೇ ಸಂತೋಷದಿAದ ಮಾಡಿ ಉಣ್ಣಬಹುದು

ಅಂತ ಅತ್ತೆ ಸಮಾಧಾನದ ಉಸಿರು ಬಿಟ್ಟಳು. ಮರು ದಿನದಿಂದ ಈ ಕುಟುಂಬ ದಲ್ಲೂ “ಒಂದು ಮನೆ-ಎರಡು ಒಲೆ”  

   ನಾವು ಆರ್ಥಿಕವಾಗಿ ಸದೃಢರಲ್ಲ. ನಮ್ಮೆಲ್ಲ ಅಗತ್ಯಗಳಿಗೂ ಮಗ ಸೊಸೆ  ಮೇಲೇ ಅವಲಂಭಿಸಿದ್ದೀವಿ. ಹೀಗಿರುವಾಗ ನಾವೇ ಅವರೊಂದಿಗೆ ಹೊಂದಿಕೊAಡು ಹೋಗಬೇಕು ಅನ್ನೋ ಪರಿಸ್ಥಿತಿ ಪ್ರಜ್ಞೆ ಈ ವೃದ್ಧ ದಂಪತಿಗಿಲ್ಲ. ನಮ್ಮ ಮಗ ಸೊಸೆ ನಮಗೆ ಬೇಡವಾದ್ದೇನೂ ಮಾಡಿಹಾಕೋದಿಲ್ಲ. ಅವರೇನು ಕಚಡಾ ಪಿಚಡಾ ತಿನ್ತಾರಾ ! ಅವರು ತಿಂದಿದ್ದನ್ನ ನಾವೂ ತಿನ್ನೋಣ. ಸೊಸೆಗೆ ಕೈಲಾಗದ ದಿನ ನಾನೇ ಅಡುಗೆ ತಿಂಡಿ ಮಾಡೋಣ, ಇಲ್ಲಿರೋ ನಾಲ್ವರಿಗೆ. ಇವರೆಲ್ಲಾ ಯಾರು ? ಬೇರೆಯವರೇ ?  ನಮ್ಮವರೇ ಅಲ್ಲವೇ ಇವರೆಲ್ಲಾ ! ಇಷ್ಟೇ ಜನಕ್ಕೆ ಎರಡು ಒಲೆಗಳೇ ! ನೋಡಿದವರಾದರೂ ನಗಾಡುವುದಿಲ್ಲವೇ ? ಅನ್ನೋ ಹೊಂದಾಣಿಕೆ ಮನ ವಯಸ್ಸಾದ ಅತ್ತೆಗಿಲ್ಲ. 

   ಈ ಹಿರಿಯರು ನನ್ನ ಅಮ್ಮ ಅಪ್ಪ ಇದ್ದಂತೆ ಅಲ್ವೇ !  ಏನೋ ಅವರಿಗೆ ಬೇಜಾರಾದಾಗ ನನಗೆ ಸರಿಹೊಂದದ ಮಾತಾಡಿರಬಹುದು, ಅದನ್ನೆಲ್ಲಾ ಮನಸ್ಸಿನಲ್ಲಿ 

  ಇಟ್ಟುಕೊಳ್ಳಬಾರದು, ‘ಫರ್ ಗೆಟ್ ಅಂಡ್ ಫರ್ ಗಿವ್ ‘ ಅನ್ನೋ ವಿಶಾಲ ಮನಸ್ಸು ಸೊಸೆಗಿಲ್ಲ.

     “೪ ಜುಟ್ಟು ಒಂದು ಕಡೆ ಹೊಂದಿಕೊಂಡಿರ‍್ತಾರೆ, ಆದರೆ ೨ ಜಡೆಗಳು ಹೊಂದಿ ಕೊಳ್ಳುವುದಿಲ್ಲ” ಈ ಅನ್ನೋ ಗಾದೇನ ನೀವು ಸುಳ್ಳು ಮಾಡಿ, ಹೆಂಗಸರು ನೀವಿಬ್ಬರೂ    ಹೊಂದಿಕೊಂಡು ಕೆಲಸ ಮಾಡಿ ಅಂತ ಮಗ, ಅಮ್ಮನಿಗೂ ಪತ್ನಿಗೂ ತಿಳಿಹೇಳಿ  ಒಟ್ಟಾಗಿ ಸಂಸಾರ ನಡಸೋ ಬುದ್ದಿವಂತತೆ ಚತರುತೆ ಚಾಕಚಕ್ಯತೆ ಈ ಮಗನಿಗಿಲ್ಲ. ಪರಿ 

ಣಾಮ :  ಈ ಕುಟುಂಬದಲ್ಲೂ “ಒಂದು ಮನೆ-ಎರಡು ಒಲೆ’ ಈ ಪ್ರಸಂಗವನ್ನು ಓದಿದ ಮೇಲೂ ನಿಮಗನ್ನಿಸೋದಿಲ್ವೇ “ಯಾಕ್ ಹಿಂಗ್ ಆಡ್ತಾರೋ”  ಅಂತ ! 


   Miss understanding and less understanding are the main  causes of our misfortunes,  “ಮಾನವ ಆಕಾಶದಲ್ಲಿ ಹಾರುವುದನ್ನು ಕಲಿತ, ಶತ್ರುಗಳನ್ನು ನಾಶಪಡಿಸಲು ವಿಷ ಪೂರಿತ ಮದ್ದು ಗುಂಡುಗಳ ತಯಾರಿಕೆ ಕಲಿತ . ಆದರೆ ಮನುಷ್ಯ ಮನುಷ್ಯನಾಗಿ ಬಾಳುವುದನ್ನು ಮಾತ್ರ ಕಲಿಯದೆ ಮೃಗೀಯ ಗುಣಗಳನ್ನು ಬೆಳೆಸಿಕೊಳ್ಳುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ” ಎಂದಿರುವ ಒಬ್ಬ ಕವಿ ವಾಣಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು.

Comments