ಯಾಕ್ಲಾ ಪುಟ್ನಂಜ ಇಂಗಾಗ್ಬಿಟ್ಟೆ

 ಯಾಕ್ಲಾ ಪುಟ್ನಂಜ ಇಂಗಾಗ್ಬಿಟ್ಟೆ ! ಎಂಗಿದ್ದೋನು ಇಂಗಾಗ್ಬಿಟ್ಟೇ ! ?

 ಲೇಖಕರು : ಎಂ ಆರ್ ವೆಂಕಟರಾಮಯ್ಯ 



 ನಮ್ಮ ಪುಟ್ನಂಜ ಹೇಗಿದ್ದೋನು ಹೇಗಾಗ್ಬಿಟ್ಟ ! ಎಂಬ ಅಚ್ಚರಿ ಪ್ರಸಕ್ತ ಶೀರ್ಷಿಕೆಯಲ್ಲಿ ಉಲ್ಲೇಖಿತವಾಗಿದೆ. ಇಲ್ಲಿ ‘ಪುಟ್ನಂಜ’ ಎಂಬ ಹೆಸರನ್ನು ಬಳಸಿರುವುದು ಇದೇ ಹೆಸರಿರಬಹುದಾದ ಯಾವ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಕುರಿತು ಪ್ರಸ್ತಾವಿಸಲಾಗಲಿ, ಅವರನ್ನು ಕೆಟ್ಟದಾಗಿ ಬಿಂಬಿಸುವ, ಆಕ್ಷೇಪಿಸುವ, ನಿಂದಿಸುವ, ಖಂಡಿಸುವ ದುರುದ್ದೇಶವಾಗಲಿÀ ಈ ಲೇಖನದ್ದಲ್ಲ, ಬದಲಿಗೆ ಲೇಖನಕ್ಕೆ ಒಬ್ಬ ವ್ಯಕ್ತಿಯ ಹೆಸರಿರಬೇಕು, ಈ ಉದ್ದೇಶದಿಂದ ಪುಟ್ನಂಜ ಎಂಬ ಕಾಲ್ಪನಿಕ ವ್ಯಕ್ತಿಯ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. 

 ಲೇಖನದ ನಾಯಕ, ನಮ್ಮ ಪುಟ್ನಂಜ, ಅಂದು ಹೇಗಿದ್ದ ? ಇವನು ಇಂದ್ಯಾಕೆ ಹೀಗಾಗಿ ದ್ದಾನೆ ? ಎಂಬುದನ್ನು ನೋಡೋಣ ಬನ್ನಿ. 

 ಭಾರತೀಯರು ಸನಾತನ ಧರ್ಮ ಪಾಲಕರು. ಸಂಪ್ರದಾಯ ನಿಷ್ಠರು. ಹಿರಿಯರಿಂದ ಬಳುವಳಿಯಾಗಿ ಬಂದ ಆಚಾರ, ವಿಚಾರ, ಸಂಪ್ರದಾಯಗಳನ್ನು ತಪ್ಪದೆ ಕಟ್ಟುನಿಟ್ಟಾಗಿ ಪಾಲಿಸುವವರು. ಅವು ಸರಿಯಾದ್ದೋ, ಮೂಢ ನಂಬಿಕೆಗಳೋ, ಎಂತಹದಾದರೂ ಸರಿ, ಒಮ್ಮೆ ಆಚರಿಸಲು ಪ್ರಾರಂಭಿಸಿದರೆ ಮುಗಿಯಿತು, ಬಿಡದೆ ಪಾಲಿಸುವ ಛಲಗಾರರು ಎಂಬ ಹಣೆ ಪಟ್ಟಿ ಕಟ್ಟಿಸಿಕೊಂಡವರು. ಈ ಮಾತಿನ ಜೊತೆಗೆ ಹೇಳಬೇಕಾದ ಮತ್ತೊಂದು ವಿಷಯ ಎಂದರೆ, ನಮ್ಮ ಎಲ್ಲಾ ಪದ್ಧತಿ, ಸಂಪ್ರದಾಯಗಳಿಗೂ ಅದರದರದೇ ಕಾರಣವಿರುತ್ತದೆ. ಪ್ರತಿ ಕಾರ್ಯಕ್ಕೂ ಕಾರಣವಿರುತ್ತದೆ. ಕಾರಣವಿಲ್ಲದೆ ಕಾರ್ಯವಿರುವುದಿಲ್ಲ ಎಂಬುದಂತೂ ಸರ್ವಕಾಲಿಕ ಸತ್ಯ. 

ಭಗವದ್ಗೀತೆಯ ಪ್ರಕಾರ, ‘ಸನಾತನ ಧರ್ಮ’ ಎಂದರೆ, ಅಗ್ನಿ, ಆಯುಧ, ಜಲ, ವಾಯುಗಳಿಂದ ನಶಿಸಲಾಗದ್ದು ಎಂಬ ಅರ್ಥವಿದೆ.’ ಧರ್ಮ’ ಎಂದರೆ ಎಲ್ಲಾ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕಾರಗಳನ್ನು ಒಳಗೊಂಡು ಅದಕ್ಕೆ ಬದ್ಧವಾಗಿ ಬದುಕುವ ರೀತಿಯಾಗಿರುತ್ತದೆ. ಸನಾತನ ಧರ್ಮಕ್ಕೆ ಅಧ್ಯಾತ್ಮದ ಹಾಗೂ ವೈಜ್ಞಾನಿಕ  ತಳಹದಿ ಇದೆ. ನಮ್ಮ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ವೈಜ್ಞಾನಿಕ  ಜ್ಞಾನವನ್ನು, ಮೋಕ್ಷವನ್ನು ಸಾಧಿಸಲು, ತತ್ವ ಜ್ಞಾನದಿಂದ ಅಧ್ಯಾತ್ಮಿಕ ಜ್ಞಾನವನ್ನು ಬಳಸಿಕೊಳ್ಳಬೇಕೆಂದಿರುವ ಈಶಾವಾಸ್ಯ ಉಪನಿಷತ್ತಿನ 40 ನೇ ಅಧ್ಯಾಯದಲ್ಲಿರುವ ಉಲ್ಲೇಖ ಗಮನಾರ್ಹ. ನಮ್ಮ ನಿತ್ಯ ಜೀವನದಲ್ಲಿನ ಪ್ರತಿಯೊಂದು ಆಚರಣೆಗೂ ಅಧ್ಯಾತ್ಮದ ಹಿನ್ನೆಲೆಯಿದ್ದು, ಇವುಗಳ ಪಾಲನೆಯಿಂದ ಮನುಷ್ಯನ ಸರ್ವತೋಮುಖ ಏಳಿಗೆ ಸಾಧ್ಯ ಎಂಬುದು ಅನುಭವ ವೇದ್ಯ. ಇಂತಹಾ ಧರ್ಮದ ಅಂಗವಾಗಿ ಹಲವು ಮೌಲಿಕ, ತತ್ವ, ಸಿದ್ಧಾಂತಗಳನ್ನು ನಂಬಿ ನೂರಾರು ವರ್ಷಗಳಿಂದ ಆಚರಿಸುತ್ತಾ ಬಂದಿದ್ಧೇವೆ. ಮನುಷ್ಯ, ಆಯುರಾರೋಗ್ಯ ಭಾಗ್ಯಗಳೊಂದಿಗೆ ಶಾಂತಿ ನೆಮ್ಮದಿಯ ಜೀವನ ನಡೆಸಬೇಕಾದರೆ ನಮ್ಮ ಪೂರ್ವಿಕರು ಅನುಸರಿಸಿದ ಕೆಲವು ಧಾರ್ಮಿಕ ಆಚಾರ ವಿಚಾರ, ನೀತಿ, ನಿಯಮಗಳು, ಕಟ್ಟು ಕಟ್ಟಲೆಗಳನ್ನು ನಂಬಿ ಪಾಲಿಸುವುದು ಅಗತ್ಯ. ಏಕೆಂದರೆ, ಈ ನಂಬಿಕೆ, ಆಚರಣೆಗಳಿಗೆ ಧೀರ್ಘ ಹಿನ್ನೆಲೆಯಿದೆ, ಗೂಢಾರ್ಥವಿದೆ. ಇವುಗಳ ಅನುಷ್ಠಾನದಿಂದ ಒಳಿತಾಗುತ್ತದೆ ಎಂಬ ವಿಶ್ವಾಸವಿದೆ ಜೊತೆಗೆ ಹಾದು ಈಮಾತು ನಿಜ ಎಂದು ಸಾಭೀತೂ ಆಗಿದೆ. ಈ ಬಗ್ಗೆ ಹಿಂದಿನ ಅನುಭವವೂ ನಮಗೆ ಪಾಠ ಕಲಿಸಿದೆ. ಈ ಪದ್ಧತಿ ಆಚರಣೆಗಳೆಲ್ಲವೂ ಪೀಳಿಗೆಯಿಂದ ಪೀಳಿಗೆಗೆ ಬಂದ ಬಳುವಳಿಗಳಾಗಿವೆ. ಇವನ್ನೆಲ್ಲಾ, ಹಿರಿಯರಿಂದ ಕಿರಿಯರು ಕೇಳಿ, ನೋಡಿ ತಿಳಿದುಕೊಂಡು ಇವುಗಳಿಂದ ಒಳಿತಾದ ಅನುಭವದಿಂದ ಮುಂದಿನ ತಲೆಮಾರಿಗೆ ಪ್ರಸಾರ ಮಾಡಿದ್ದಾರೆ. 

 ಇಂದಿನ ಆಧುನಿಕ ಶಿಕ್ಷಣ, ವಿಜ್ಞಾನ, ತಂತ್ರ ಜ್ಞಾನ, ಗ್ಲೋಬಲೈಸೇಶನ್, ವಿದ್ಯುನ್ಮಾನ. ಮುದ್ರಣ ಮಾಧ್ಯಮಗಳ ಮೂಲಕ ಜನರಿಗೆ ತಿಳಿದುಬರುತ್ತಿರುವ ದೂರ ದೂರದವರ ವೈವಿಧ್ಯಮಯ ಮಾಹಿತಿಗಳು, ಪಾಶ್ಚಾತ್ಯ ದೇಶಗಳ ಸಂಸ್ಕೃತಿ, ಜೀವನ ಶೈಲಿ, ಅವುಗ¼ ಅನುಕರಣೆ ನಮ್ಮ ಮೇಲೆ ಭಾರೀ ಪ್ರಭಾವ ಬೀರುತ್ತಿದೆ. ಇವೆಲ್ಲದರ ಪರಿಣಾಮ, ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಜನ, ನಾವು ನಮ್ಮತನ, ವ್ಯಕ್ತಿಗತ ಅಭಿಮಾನ, ಸ್ವಾಭಿಮಾನ, ನಮ್ಮ ಧರ್ಮ, ಆಚಾರ ವಿಚಾರ, ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ ಇವೆಲ್ಲವನ್ನೂ ಮೂಢ ನಂಬಿಕೆಗಳು, ಔಟ್ ಡೇಟೆಡ್, ಹಳೆಯದು, ಹಳಸಲು, ಓಬಿರಾಯನ ಕಾಲದವು, ಅರ್ಥಹೀನ ಇತ್ಯಾದಿ ಹಣೆಪಟ್ಟಿ ಕಟ್ಟಿ ಅವನ್ನು ನಿರ್ಲಕ್ಷಿಸಿ, ಪಕ್ಕದ ಮನೆಯವನ. . . . . . …ಚೆನ್ನ, ಅವನದೆಲ್ಲವೂ ಅಂದ, ಚಂದ, ಅದರಲ್ಲಿದೆ ಆನಂದ ಎನ್ನುತ್ತಾ ಅವರ, ಪಾಶ್ಚಾತ್ಯ ದೇಶಗಳ ಆಚಾರ, ರೀತಿ. ನೀತಿಗಳಿಗೆ ಜೋತುಬಿದ್ದು, ಅವರ ಬೆನ್ನು ನೆಕ್ಕುವ ಕೆಲಸ ಮಾಡ್ತಿದ್ದೇವೆ ಎಂದರೆ ನಿಮಗೆ ನಂಬಿಕೆ ಬರದೇ ! ? ಹೀಗಂದಾಗ,. ನಾವು ಎಲ್ಲಿ ಎಡವಿ ತಪ್ಪು ಮಾಡಿದ್ದೇವೆ ತೋರಿಸಿ ಎನ್ನುವವರ ಮಾಹಿತಿಗಾಗಿ ಇಲ್ಲಿದೆ ಕೆಲವು ಉದಾಹರಣೆಗಳು : ಇವುಗಳ ಸರಿ : ತಪ್ಪುಗಳನ್ನು ನಿರ್ಧರಿಸುವ ನ್ಯಾಯಾಧೀಶ . . . ನಮ್ಮ : ನಿಮ್ಮ ಅಂತರಾತ್ಮನೇ. 

ಶಾಲೆ, ಕಾಲೇಜು, ಉದ್ಯೋಗ, ವ್ಯಾಪಾರ, ವ್ಯವಹಾರ, ಬಂಧು ಮಿತ್ರರ ಬೇಟಿ, ಹೀಗೆ ಯಾವುದೋ ಒಂದು ಉದ್ದೇಶಕ್ಕಾಗಿ ಮನೆಯಿಂದ ಹೊರಡುವ ಮುನ್ನ ನಮ್ಮ ಹಿಂದಿನವರ ಬಾಯಿಂದ ರ‍್ತಿದ್ದ ಮಾತು ಎಂದರೆ “ಹೋಗಿ ರ‍್ತೇನೆ “ ಎಂಬುದು. ಇದಕ್ಕೆ ಇವರು ನಮ್ಮ ಪುಟ್ನಂಜ ಹಾಗೂ ಇಂತಹಾ ವರ್ಗದವರಿಂದ ಕೇಳುತ್ತಿದ್ದ ಪ್ರತ್ಯುತ್ತರ ಎಂದರೆ “ಕ್ಷೇಮವಾಗಿ ಹೋಗಿಬಾರಪ್ಪಾ, ಹುಷಾರು, ಜಾಗ್ರತೆ” ಎಂಬುದು. ಹೊರಡುತ್ತಿರುವವರ “ಹೋಗಿ ರ‍್ತೇನೆ” ಎಂಬ ಮಾತಿನಲ್ಲಿ ಎರಡು ಪ್ರಕ್ರಿಯೆಗಳಿರುವುದನ್ನು ನಾವು ಗಮನಿಸಬೇಕು. ಅದೇ ಹೋಗುವುದು + ಬರುವುದು = ಹೋಗಿಬರುವುದು. ಹೊರಗೆ ಹೋಗಿ, ಮತ್ತೆ ಇಲ್ಲಿಗೇ ಹಿಂತಿರುಗುವ ಸದುದ್ದೇಶ ಈ ಪದ ಗುಚ್ಚದಲ್ಲಿದೆ. “ಇಲ್ಲಿದೆ ನಮ್ಮ ಮನೆ, ಅಲ್ಲೆಲ್ಲಾ ಸುಮ್ಮನೆ” ಎಂಬAತೆ ಹೊರಗೆ ಹೋಗುತ್ತಿರುವುದು ಕೆಲ ಗಂಟೆಗಳ ಕಾಲಕ್ಕಷ್ಟೇ, ತಾತ್ಕಾಲಿಕ, ಕ್ಷಣಿಕ. ಹೋದ ಮೇಲೆ ಇಲ್ಲಿಗೆ ಬರಲೇಬೇಕು ಎಂಬ ನಿಯಮ ಈ ಮಾತಿನದು. ಎವ್ವೆರಿ ಆಕ್ಚನ್ ಹ್ಯಾಸ್ ಅನ್ ಈಕ್ವಲ್ ಅಂಡ್ ಆಪೋಸಿಟ್ ರೀಆಕ್ಚನ್” ಎಂಬ ವೈಜ್ಞಾನಿಕ ತತ್ವ ಇಲ್ಲಿ ಕಾಣುತ್ತೇವೆ.

 ಈ “ಹೋಗಿ ರ‍್ತೀನಿ” ಎಂಬ ಮಾತು ಯಾರಿಗೆ, ಯಾಕೆ ಹೇಳಬೇಕು ? ಅವರ ಅಪ್ಪಣೆ, ಅನುಮತಿ, ಆದೇಶ ಬೇಕೆ ? ಎಂಬ ಪ್ರಶ್ನೆ ಉದ್ಭವಿಸಬಹುದು ಹೀಗೇ ಹೇಳಿ ಹೋಗಿ ಎಂದು ಯಾವ ಸರ್ಕಾರಿ ನಿಯಮ, ನೀತಿ, ಆದೇಶ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಾವು ಕೇವಲ ನಮಗಾಗಿ ಬದುಕುತ್ತಿಲ್ಲ, ನಮ್ಮ ಮೇಲೆ ಹಲವರ ಋಣ. ಹೊಣೆ, ಜವಾಬ್ಧಾರಿ ಇರುತ್ತದೆ. ಅದು ಅಮ್ಮ, ಅಪ್ಪ,, ಪತ್ನಿ, ಮಕ್ಕಳು, ಅಜ್ಜ, ಅಜ್ಜಿ, ಹೀಗೆ ಹಲವರ ಪಾಲನೆ, ಪೋಷಣೆ, ನಿರ್ವಹಣೆ ನಮ್ಮದಾಗಿರುತ್ತದೆ. ಹೀಗಾಗಿ ನಾವು ಅವರಿಗೆ, ಅವರು ನಮಗೆ ಉತ್ತರದಾಯಿತ್ವ ಉಳ್ಳವರು (ಆನ್ಸರಬಲ್). “ಪರಸ್ಪರ ಭಾವಯಂತ” ಎಂಬಂತೆ  

ಇನ್ನು “ಹೋಗಿರ‍್ತೇನೆ” ಎಂದ ಮಾತಿಗೆ, ಬರುತ್ತಿದ್ದ ಪ್ರತ್ಯುತ್ತರ “ ಹೋಗಿ ಬಾಪ್ಪಾ, ಕ್ಷೇಮವಾಗಿ ಹೋಗಿ ಬಾ, ಹುಷಾರು, ಜಾಗ್ರತೇ” ಇದರ ರೆಲವೆನ್ಸ್, ಪ್ರಸ್ತುತೆ ಕುರಿತು ನೋಡೋಣ. ಈ ಎಲ್ಲಾ ಮಾತುಗಳೂ ಅವರು ನಮ್ಮ ಬಗ್ಗೆ ಹೊಂದಿರುವ ಕಾಳಜಿ, ಆತಂಕ, ವ್ಯಾಮೋಹ, ಕೇರ್, ಕನ್‌ಸರ್ನ್, ಕನ್‌ಸಿಡರೇಶನ್, ಅಟೇಚ್‌ಮೆಂಟ್ ವ್ಯಕ್ತಪಡಿಸುತ್ತವೆ. ಯಾಕಿವರು ಇಷ್ಟೊಂದು ಆತಂಕ ಹೊಂದಿರುತ್ತಾರೆ ಎಂದಿರಾ ! ನಮ್ಮವರು ನಮ್ಮ ಕಣ್ಣೆÀದುರಿಗಿರುವವರೆಗೂ ಸುಖವಾಗಿದ್ದಾರೆ ಎಂಬ ನೆಮ್ಮದಿ ನಮಗಿರುತ್ತದೆ, ಹೊರಗೆ ಹೊರಟಾಗ, ಇವರಿಗೇನೂ ತೊಂದರೆ, ತಾಪತ್ರಯ, ಕಷ್ಟ, ನಷ,್ಟ ಕಂಟಕ, ಅಪಘಾತ, ಒದಗದಿರಲಿ, ಕ್ಷೇಮವಾಗಿ ಮನೆ ಸೇರಲಿ, ನಾವೊಬ್ಬರೇ ಕ್ಷೇಮವಾಗಿದ್ದರೆ ಸಾಲದು, ನಮ್ಮವರೆಲ್ಲರೂ ಕ್ಷೇಮವಾಗಿರಬೇಕು ಎಂಬುದು ಇವರ ಕಳಕಳಿ. ಈ ಮನೋಸ್ಥಿತಿ ಇವರಲ್ಲಿ ಇರುವುದರಿಂದಲೇ ಹೊರಗೆ ಹೊರಟವರನ್ನು ಶುಭ ನುಡಿಗಳಿಂದ ಬೀಳ್ಕೊಡುವುದು ನಮ್ಮ ಸಂಸ್ಕೃತಿ, ಸಂಪ್ರದಾಯವಾಗಿದೆ. ಈ ಶುಭ ನುಡಿ ಕೇಳಿದವರಿಗೂ, ಹಿರಿಯರ ಆಶೀರ್ವಾದ ನಮ್ಮ ಮೇಲಿದೆ, ನಮಗ್ಯಾವ ತೊಂದರೆಯೂ ಆಗದು ಎಂಬ ಮನೋ ಧೈರ್ಯ, ಮನಃಸ್ಥೈರ್ಯ ಇರುತ್ತದೆ.

 ಇದೆಲ್ಲಾ ಕೆಲ ದಶಕಗಳ ಹಿಂದಿನವರ ಮಾತಿನ ರೀತಿ, ವರ್ತನೆಯಾಗಿತ್ತು. ಆದರೆ ಇಂದೇನಾಗಿದೆ ಇವರಿಗೆ ! ? “ನೆರೆ ನೋಡಿ ಬದುಕೋ ನಿರ್ಭಾಗ್ಯ . . “ ಆಕಸ್ಮಿಕವಾಗಿ ಬಾಲ ಕತ್ತರಿಸಿಹೋದ ನರಿಯನ್ನು ಕಂಡು ಉಳಿದ ನರಿಗಳೂ ತಮ್ಮ ಬಾಲ ಕತ್ತರಿಸಿಕೊಂಡು “ನಾನೆಷ್ಟು ಶಾರ್ಟ್, ಸ್ಮಾರ್ಟ್” ಎಂದು ಬೀಗಿದಂತೆ, ನಮ್ಮ ಪುಟ್ನಂಜ ಹಾಗೂ ಇವನ ವರ್ಗಕ್ಕೆ ಸೇರಿದ ಶೇ 90 ರಷ್ಟು ಜನರಿಗೆ “ಹೋಗಿ ರ‍್ತೇನೆ, ಕ್ಷೇಮವಾಗಿ ಹೋಗಿ ಬಾರಪ್ಪಾ, ಹುಷಾರು, ಭದ್ರ” ಎಂಬ ಮಾತುಗಳು, ಥೂ, ಬಹಳ ಹಳೆಯದು ಎಂದೋ, ಔಟ್ ಡೇಟೆಡ್ ಎಂದೋ ಅನಿಸಿದೆ. ನಾವೂ ಪರದೇಸಿಗರಂತೆ “ಹಾಯ್, ಬಾಯ್, ಟಾಟಾ, ಬಾಟಾ, ಓಟಾ” ಎಂದು ಕೈ ಅಡ್ಡವಾಗಿ ತಿರುಗಿಸದಿದ್ದರೆೆ ನಾವು ಅನಾಗರೀಕರು, ಅಸಂಸ್ಕೃತರು ಎನಿಸಿಕೊಳ್ಳುವುದಿಲ್ಲವೇ ? ಎಂಬ ಭ್ರಮೆ ಇವರನ್ನು ಆವರಿಸಿದೆ. ಇದರ ಪರಿಣಾಮ ! ? ಬೀಳ್ಕೊಡುವವರು, ಹೊರಗೆ ಹೋಗುವವರು, ಇಬ್ಬರೂ, “ನಾ ಇಲ್ಲ, ಮತ್ತೆ ಬರುವುದಿಲ್ಲ “ ಎಂಬ ಅರ್ಥ ಬರುವಂತೆ ತಮ್ಮ ಕೈ ಅಡ್ಡವಾಗಿ ತಿರುಗಿಸುವುದು, ಇದಕ್ಕೆ ಬೀಳ್ಕೊಡುವವರು, “ಬೇಡ, ಮತ್ತೆ ಬರಬೇಡ” ಎಂಬ ಅರ್ಥ ಬರುವಂತೆ ತಮ್ಮ ಕೈ ಅಡ್ಡ ತಿರುಗಿಸುವ” ಪ್ರತಿ ವರ್ತನೆ ಕಂಡುಬರುತ್ತಿದೆ. ಈ ಟಾಟಾ, ಬಾಟಾ, ಓಟಾ, ಬಾಯ್, ಕೈ ಎಂಬ ಅಸಂಸ್ಕೃತಿ ನಮ್ಮ ಸಂಪ್ರದಾಯವೇ ? ಇವೆಲ್ಲಾ ಏನು ಅರ್ಥ, ಅನರ್ಥ ತಿಳಿಸುತ್ತೆ ? ಇವೆಲ್ಲಾ ಶುಭ ವಾಕ್‌ಗಳೇ ! ಶುಭ ಸಂಜ್ಞೆಗಳೇ ! ಹೀಗೆ ವರ್ತಿಸಿ ಎಂದು ಯಾವ ಗ್ರಂಥದಲ್ಲಿ ಸೂಚಿಸಿದೆ ? ಉತ್ತರ ಬಲ್ಲವರಿದ್ದರೆ ತಿಳಿಸಬಹುದಾಗಿದೆ.

ಹಿರಿಯರಿಗೆ ಗೌರವ ಸಲ್ಲಿಸುವ ನಮನ ಪದ್ಧತಿ ಅಂದು ಹೀಗಿತ್ತು “ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪ ಸೇವಿನಃ ಚತ್ವಾರೀ ತಸ್ಯ ವರ್ಧಂತೇ ಆಯುರ್ವಿಧ್ಯಾ ಯಶೋ ಬಲಂ ”ದಿನವೂ ಗುರು ಹಿರಿಯರಿಗೆ ಯಾರು ನಮಸ್ಕರಿಸಿ, ಅವರ ಸೇವೆಯನ್ನು ಮಾಡುವರೋ ಅವರ ಆಯುಷ್ಯ, ವಿದ್ಯೆ, ಕೀರ್ತಿ ಮತ್ತು ಶಕ್ತಿ ವರ್ಧಿಸುತ್ತದೆ. ಮನುಸ್ಮೃತಿಯ ಅಧ್ಯಾಯ 2 ಶ್ಲೋಕ 121 ರಿಂದ 132 ರ ವರೆಗಿನ ಶ್ಲೋಕಗಳಲ್ಲಿ ಅಭಿವಾದನ, ನಮಸ್ಕಾರದ ಬಗ್ಗೆ ವಿವರವಾಗಿ ತಿಳಿಸಿದೆ. ಇದರ ಜೊತೆಗೇನೇ, ಮಹಾಭಾರತದ ಶಾಂತಿ ಪರ್ವದಲ್ಲೂ ್ಲ ಭೀಷ,್ಮ ಯುಧಿಷ್ಠೀರ, ವ್ಯಾಸ, ಶುಕರ ಸಂವಾದಗಳಲ್ಲೂ ಅಭಿವಾದನದ ಬಗ್ಗೆ ವಿವರಣೆ ಇರುವುದು ಗಮನಾರ್ಹ.ನಮಸ್ಕಾರದಲ್ಲಿ,”ಪಾದೋಪ ಸಂಗ್ರಹಣ”ಎAಬ ಹೆಸರಿನಲ್ಲಿ ಪಾದಕ್ಕೆ ಶಿರ ಮುಟ್ಟಿಸಿ ನಮಸ್ಕರಿಸುವ ಪದ್ಧತಿ ನಮ್ಮಲ್ಲಿ ರೂಢಿಯಲ್ಲಿದೆ. 

 ನಮಸ್ಕಾರಗಳಲ್ಲಿ ಹಲವಾರು ಭಂಗಿ, ರೀತಿಗಳಿವೆ. ಎರಡೂ ಕೈಗಳನ್ನು ಜೋಡಿಸಿಕೊಂಡು “ನಮಸ್ಕಾರ” ಎಂದು ವಿನಮ್ರ ಹೇಳಿಕೆ ನೀಡುತ್ತಾ ತಲೆ ಭಾಗಿ ನಮಸ್ಕರಿಸುವುದು ಸಾಮಾನ್ಯವಾಗಿ ಬಹಳ ಮಂದಿ ಅನುಸರಿಸುವ ಕ್ರಮ. ವ್ಯಕ್ತಿ ತನ್ನ ತಲೆಯಮೇಲೆ ಕೈಗಳನ್ನು ಜೋಡಿಸಿ ಹಿರಿಯರಿಗೆ, ದೇವತೆಗಳಿಗೆ ನಮಸ್ಕರಿಸುವ ಕ್ರಮವೂ ನಮ್ಮಲ್ಲಿ ಪಾಲನೆಯಲ್ಲಿದೆ. :

 ಹಿರಿಯರ ಎರಡೂ ಪಾದ ಮುಟ್ಟಿ ನಮಸ್ಕರಿಸುವುದು ಒಳ್ಳೆಯ ಕ್ರಮ ಎಂದು ಹೆಚ್ಚಿನ ಸಂಖ್ಯೆಯ ಜನರು ನಂಬಿದ್ದರೂ ಇದಕ್ಕೆ ಇಷ್ಟಪಡದವರು, ಕನಿಷ್ಠ ಎರಡೂ ಕೈಗಳನ್ನು ಜೋಡಿಸಿ, ತಲೆ ಭಾಗಿಸಿ ಶ್ರದ್ಧೆಯಿಂದ ನಮಸ್ಕರಿಸಬಹುದು. ಹಿರಿಯರ, ಸಂತರ, ಸಜ್ಜನರ, ದೇವರ, ಆಶೀರ್ವಾದ ಶುಭಾಶÀಯ ಗಳನ್ನು ಪಡೆಯಲು ಆಸಕ್ತ ಆಸ್ತಿಕ ಮಹಾಶಯರು ಶ್ರದ್ಧಾ ಭಕ್ತಿ ಗೌರವಗಳಿಂದ ಮನಃ ಪೂರ್ವಕ ವಾಗಿ ನಮಸ್ಕರಿಸುವುದು, ಇದಕ್ಕೆ ಪ್ರತಿಯಾಗಿ, ಅವರಿಂದ, ಶುಭವಾಗಲೆಂಬ ಹಾರೈಕೆ, ಆಶಯ ಕೆಲವು ದಶಕಗಳವರೆಗೆ ಆಚರಣೆಯಲ್ಲಿತ್ತು. 

 ಆದರೆ ಇಂದು ಏನಾಗಿದೆ ನಮ್ಮೀ ಪುಟ್ನಂಜ, ಅವನಂತಹಾ ಹಲವರಿಗೆ ? ಇವರ ನಮನ ಪದ್ಧತಿ ಹೇಗೆ ಬದಲಾಗಿದೆ ! ನೋಡೋಣ ಬನ್ನಿ. 

 ಹಿರಿಯರನ್ನು ಕಂಡಾಗ, “ನಮ್ಮ ನಡುವೆ ಯಾವ ವ್ಯತ್ಯಾಸವೂ ಇಲ್ಲ, ನಾವು ಸಮಾನರು, ‘ಆಲ್ ಆರ್ ಈಕ್ವಲ್ ಬಿಫೋರ್ ಲಾ “ ಎಂಬAತೆ ಒಂದು ಕೈ ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು, ಮತ್ತೊಂದು ಕೈನಲ್ಲಿ ಹಿರಿಯರ ಕೈ ಕುಲುಕಿ, ಹಲೋ ಸರ್\ಮೇಡಂ, ಹೌ ಆರ್ ಯು ! ಎನ್ನುವ ವಿದೇಶಿ ಸಂಸ್ಕೃತಿಯನ್ನು ಇವರದಾಗಿಸಿಕೊಂಡಿದ್ದಾರೆ. 

ಮತ್ತೊಂದು ವರ್ಗದ ಜನರ ನಮನದ ರೀತಿ ಇದಕ್ಕೆ ವಿಭಿನ್ನ. ಇವರು ಕೆಳಗೆ ಬಗ್ಗಲೋ, ಬೇಡವೋ ಎಂಬಂತೆ ತುಸು ಬಗ್ಗಿ (ಹಿರಿಯರ ಪಾದ ಸ್ಪರ್ಶಿಸುವುದಿರಲಿ) ನೆಲ ಮುಟ್ಟಿದನೋ ಇಲ್ಲವೇ ಎಂಬುವಷ್ಟರಲ್ಲಿಯೇ ನಮನದ ಶಾಸ್ತç ಮಾಡಿ ಮುಗಿಸುವವರು. ಇಷ್ಟರಲ್ಲೇ ನಮನ ಮಾಡಿಸಿಕೊಂಡವನು, ತನ್ನದುರಿಗಿರುವನ ತೋಳು ಹಿಡಿದು ಮೇಲೆತ್ತಿ ‘ಜೀತೇ ರಹೋ, ಸೌ ಸಾಲ್ ಜೀತೇ ರಹೋ, ಜುಗ್ ಜುಗ್ ಜೀವೋ ಭೇಟಾ’ ಎಂದೋ ‘ಲಾಂಗ್ ಲಿವ್ ಮೈ ಸನ್’ ಎಂಬ ತನ್ನದಲ್ಲದ ಭಾಷೆಯಲ್ಲಿ ಹರಕು ಮುರುಕು ನುಡಿದರೆ ಸಾಕು. “ನಮನ ಕಾರ್ಯಂ, ಆಶೀರ್ವಾದಂ ಸಂಪೂರ್ಣ “ 

 ಇದೇನಾ ಸಭ್ಯತೆ ! ಇದೇನಾ ಸಂಸ್ಕೃತಿ ! ಇದು ನಮ್ಮ ಸನಾತನ ಆಚಾರ, ಸಂಪ್ರದಾಯ ಪಾಲನೆಯೇ ! ಇದೇನೇ ಶುಭ ಆಶಿಸುವ, ಹಾರೈಸುವ ರೀತಿ ? ಯಾಕ್ಲಾ ಪುಟ್ನಂಜ ಹಿಂಗಾಗ್ಬುಟ್ಟೆ ! ಎಂಗಿದ್ದೋನು ಇಂಗಾಗ್ಬುಟ್ಟೆ ! ? 

 ಇನ್ನು ಮುಂದಿನ ವಿಷಯ- ವ್ಯಕ್ತಿಗಳ ಹುಟ್ಟು ಹಬ್ಬದ ಆಚರಣೆ. ಜನ್ಮ ದಿನ ಆಚರಣೆ ಪ್ರತಿ ವ್ಯಕ್ತಿಗೂ ಒಂದು ವಿಶೇಷ ದಿನ. ನಾ ಜನಿಸಿ ಇಂದಿಗೆ ಇಷ್ಟು ವರ್ಷಗಳು ಕಳೆದಿವೆ. ಹೀಗೆ ಕಳೆದ ಸಮಯದಲ್ಲಿ ನಾ ಸಾಧಿಸಿದ್ದೇನು ? ನನ್ನ ಮುಂದಿನ ಜೀವಿತಾ ಅವಧಿಯಲ್ಲಿ ಏನನ್ನು ಸಾಧಿಸಬೇಕು ? ಎಂಬ ಆತ್ಮಾವಕಲೋಕನದ ಸಮಯವಿದು. ಸಾಧಾರಣವಾಗಿ ಈ ಶುಭ ದಿನದಂದು ದೇವತಾರಾಧನೆ, ದೇವಾಲಯಗಳಿಗೆ ಭೇಟಿ, ಹಿರಿಯರಿಗೆ ಪಾದಾಭಿವಂದನೆ, ಅವರ ಆಶೀರ್ವಾದ ಪಡೆಯುವಿಕೆ, ಹೊಸ ಉಡುಪು ಧಾರಣೆ, ಸಿಹಿ ಸೇವನೆ, ಬಂಧು ಮಿತ್ರರಿಂದ ಶುಭ ಹಾರೈಕೆ : ಬಹುಮಾನಗಳ ಸ್ವೀಕಾರ ನಡೆಯುವಂತಾ ಪ್ರಕ್ರಿಯೆಗಳು. 

 ಆದರೆ ಕಳೆದ ವಾರ ಪುಟ್ನಂಜ ಜನ್ಮ ದಿನ ಆಚರಣೆಯ ಭಾಗವಾಗಿ ಬೆಳಗ್ಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಂದವರು, ರಾತಿ ತಮ್ಮ ಇಷ್ಟಾನುಸಾರವೋ, ಬಂಧುಗಳ ಒತ್ತಾಯಕ್ಕೋ, ಕಾರಣ ಬಹಿರಂಗವಾಗಲಿಲ್ಲ, ಹೋಟೆಲ್‌ನಲ್ಲಿ ಕೇಕ್ ಕಟ್ ಮಾಡಿ ಎಲ್ಲರಿಗೂ ತಿನ್ನಿಸಿ, ತಾವೂ ತಿಂದವರು, ತಮ್ಮ ವಯಸ್ಸಿನ ಸಂಖ್ಯೆಯಷ್ಟು ದೀಪಗಳನ್ನು ಹೊತ್ತಿಸಿ, ನಂತರ ಅವನ್ನು ಇವರೇ ಆರಿಸಿ, ಸೇರಿದವರಿಂದ “ಹ್ಯಾಪಿ ಬರ್ತ್ ಡೇ ಟು ಯು” ಎನಿಸಿಕೊಂಡು ಸಂತಸಪಟ್ಟಿದ್ದು ತಿಳಿಯಿತು. ಇವರ ಅಂದಿನ ಬೆಳಗಿನ ಆಚರಣೆ, ಅಧ್ಯಾತ್ಮಿಕ ಎನಿಸಿಕೊಂಡರೆ, ರಾತ್ರಿಯ ಆಚರಣೆ ‘ಲೌಕಿಕ, ಆರ್ಡರ್ ಆಫ್ ದಿ ಡೇ’ ಎನಿಸಿಕೊಂಡಿತು ಎಂಬುದು ಇವರ ಸಮಾಧಾನವಿರಬಹುದು. ಈ ಆಚರಣೆ ‘ಒಪ್ಪು (ಯೋಗ್ಯ) ಎನ್ನೋಣವೇ ! ತಪ್ಪು ಎನ್ನೋಣವೇ ? ಅರಿತವರು ಇದನ್ನು ಸ್ಪಷ್ಟಪಡಿಸಬೇಕು. 

 ಇಂತಹಾ ವಿಕಾರ, ಅರ್ಥಹೀನ ಆಚಾರ ಸಂಪ್ರದಾಯಗಳ ಆಚರಣೆಗಳನ್ನು ಗಮನಿಸಿದ ಮೇಲೆ, “ಯಾಕ್ಲಾ ಪುಟ್ನಂಜ ಇಂಗಾಗ್ಬಿಟ್ಟೆ ! ಎಂಗಿದ್ದೋನು ಎಂಗಾಗ್ಬಿಟ್ಟೆ ! ? ಎಂಬ ಉದ್ಗಾರ ಬಾಯಿಂದ ಬರದೆ ಮತ್ತೇನು ಶಬ್ಧ ಬರಲು ಸಾಧ್ಯ !

 ಪ್ರಸಕ್ತ ಲೇಖನದ್ದು ಎರಡು ಸದುದ್ದೇಶಗಳು. ನಮ್ಮ ಸನಾತನ ಧರ್ಮ, ಸಂಪ್ರದಾಯ, ಪದ್ಧತಿಗಳು ಹೇಗೆ ಅಡ್ಡ ದಾರಿ ಹಿಡಿಯುತ್ತಿದೆ ಎಂಬುದನ್ನು ಜನರಿಗೆ ತೋರಿಸುವುದು ಮೊದಲನೆಯ ಉದ್ದೇಶವಾದರೆ, ಅಡ್ಡ ದಾರಿ ಹಿಡಿಯುತ್ತಿರುವವರನ್ನು ಸರಿ ದಾರಿಗೆ ತರಬೇಡವೇ ? ಎಂಬ ಸಾಮಾಜಿಕ ಕಾಳಜಿ ಎರಡನೆಯ ಉದ್ದೇಶ. ಹೀಗೆಂದಾಗ, ‘ಪರರ ಚಿಂತೆ ನಮಗೇತಕಯ್ಯಾ ! ಎಂಬಂತೆಯಾರು ಎಲ್ಲಾದರೂ ಹೋಗ್ಲಿ ಬಿಡ್ರಿ, ಎಂದು ನುಣಚಿಕೊಂಡರೆ ಹಲವಾರು ತಲೆಮಾರುಗಳಿಂದ ಪಾಲಿಸಿಕೊಂಡು ಬಂದ ಒಳ್ಳೆಯ ಪದ್ಧತಿಗಳು ಅತಿ ಶೀಘ್ರವಾಗಿ ಆಚರಣೆಯಿಂದ ಮಾಯವಾಗಿ ಬೀರುವಿನಲ್ಲಿರುವ ಪುಸ್ತಕಗಳಲ್ಲಿ ಸ್ಥಳ ಪಡೆಯುವ ದಿನಗಳು ದೂರವಿರಲಾರದು.

 ಇದಕ್ಕೆ ಪರಿಹಾರವೆಂದರೆ, ನಮ್ಮ ಸನಾತನ ಧರ್ಮ, ಸಂಪ್ರದಾಯ, ಪದ್ಧತಿಗಳ ಆಚರಣೆ, ಅವುಗಳ ಅಧ್ಯಾತ್ಮಿಕ ಹಿನ್ನೆಲೆಗಳನ್ನು ಸರಿಯಾಗಿ ಅರಿತ ಹಿರಿಯರು, ಜ್ಞಾನಿಗಳು ಅಡ್ಡ ದಾರಿ ಹಿಡಿಯುತ್ತಿರುವವರಿಗೆ ಪ್ರತಿ ಕಾರ್ಯಕ್ಕೂ ಇರುವ ಕಾರಣ ತಿಳಿಸಿ, ಇವೆಲ್ಲಾ ಮೂಢ ನಂಬಿಕೆಯಲ್ಲ, ಇದಕ್ಕೆ ಅಧ್ಯಾತ್ಮಿಕ\ವೈಜ್ಞಾನಿಕ ಹಿನ್ನೆಲೆ, ಅರ್ಥವಿದೆ, ಇದರ ಪಾಲನೆಯಿಂದ ನಿನಗೆ, ನಿನ್ನವರಿಗೇ ಒಳಿತಾಗುತ್ತದೆ ಎಂಬುದಾಗಿ ಸನ್ಮಾರ್ಗದರ್ಶನ ಮಾಡುವ ಹೊಣೆ ಹೊರುವುದು ಅನಿವಾರ್ಯ ಎನಿಸಿದೆ. 

 ‘ಊರ ಜನರಿಗೆ ಬುದ್ಧಿ ಹೇಳುವುದು ನಮ್ಮ ಕೆಲಸವಲ್ಲ’ ಎಂದು ತಮ್ಮ ಕಣ್ಣೆದುರಿಗೇ ಲೋಪ ದೋಷಗಳು ನಡೆಯುತ್ತಿದ್ದರೂ ಅದನ್ನು ಸರಿಪಡಿಸದೆ ನಿರ್ಲಕ್ಷಿö್ಯಸಿ ಮೌನ ವಹಿಸಿದರೆ, ಲೋಪ ದೋಷಗಳು ಮುಂದುವರಿಯಲು ನಾವೇ ಪ್ರೋತ್ಸಾಹಿಸಿದಂತಾಗುವುದಿಲ್ಲವೇ ? ಇವೆಲ್ಲಾ ಪಕ್ಕದ ಮನೆಯಲ್ಲಿ ತಾನೇ ನಡೆಯುತ್ತಿರುವುದು ಎಂದು ನಿರ್ಲಕ್ಷಿಸಿದರೆ ‘ಊರಿಗೆ ಬಂದವನು ನೀರಿಗೆ ಬರದಿರುತ್ತಾನೆಯೇ ? ಎಂಬ ಗಾದೆಯಂತೆ ಮುÀಂದಿನ ದಿನಗಳಲ್ಲಿ ಈ ದುರಭ್ಯಾಸಗಳು ನಮ್ಮ ಮನೆಗೂ ಪ್ರವೇಶಿಸುವುದರಲ್ಲಿ ಸಂಶಯವಿಲ್ಲ. ಆಗ ನಮ್ಮ ನಿರ್ಲಕ್ಷö್ಯದ ಫಲವನ್ನು ನಾವೂ ಸವಿಯಬೇಕಾಗುತ್ತದೆ ಎಂಬ ಸತ್ಯವನ್ನು ನೆನಪಿಡಬೇಕು.

 ಮಹಾಭಾರತದ ಸಮಯದಲ್ಲಿ ದುರ್ಯೋಧನಾದಿ ಕೌರವರು ಮಾಡಿದ ಅಧರ್ಮ, ಅನ್ಯಾಯ, ಪಾಪ, ಹೀನ ಕೃತ್ಯಗಳನ್ನು ಅಂದು ಹಿರಿಯರು, ಜ್ಞಾನಿಗಳು ಎನಿಸಿಕೊಂಡ ಭೀಷ್ಮ, ದ್ರೋಣ ಕೃಪಾಚಾರ್ಯ ಮೊದಲಾದವರು ಖಂಡಿಸಿ, ದುರ್ಮಾರ್ಗಿಗಳನ್ನು ಸಕಾಲದಲ್ಲಿ ಸರಿದಾರಿಗೆ ತರದೆ ಮೌನ ವಹಿಸಿದ ಕಾರಣ “ಈ ಹಿರಿಯರೂ ದುರ್ಮಾರ್ಗಿಗಳನ್ನು ಪ್ರೋತ್ಸಾಹಿಸಿ, ಅವರ ನಾಶಕ್ಕೆ ಕಾರಣರಾದಂತಾಯಿತು. ಈ ಕಾರಣದಿಂದ ಇವರೂ ದೋಷಿಗಳೇ ಎಂಬ ಕೆಟ್ಟ ಹೆಸರನ್ನು ಪಡೆದು ಇತಿಹಾಸ ಸೇರಿದ್ದು ಪ್ರಸಕ್ತ ಸಂದರ್ಭದಲ್ಲಿ ಸ್ಮರಣಾರ್ಹ. 

 ಈ ತಿದ್ದ ಬೇಕಾದ ಕಾರ್ಯದ ಹೊಣೆ, ಜವಾಬ್ದಾರಿ, ಕೇವಲ ಅವರದು, ಇವರದು, ಎಂದು ಅತ್ತಿತ್ತ ಬೆರಳು ತೋರಿಸದೆ ಪ್ರತಿಯೊಬ್ಬರೂ ಇದು ನನ್ನ ಬಾಧ್ಯತೆ ಎಂದು ಕಾರ್ಯೋನ್ಮುಖರಾದರೆ ಜನರನ್ನು ಸರಿ ದಾರಿಗೆ ತರುವುದು ಕಷ್ಟದ ಕೆಲಸ ಎನಿಸದು. ಇದಕ್ಕೆ ಬೇಕಾದ್ದು ಮನಸ್ಸು, ಮನಸ್ಸಿದ್ದರೆ ಮಾರ್ಗ ತಾನೇ ತೆರೆದುಕೊಳ್ಳುತ್ತದೆ. ‘ವೇರ್ ದೆರೀಸ್ ಎ ವಿಲ್, ದೇರ್ ವಿಲ್ ಬೀ ಎ ವೇ”.

 || ಸರ್ವೇ ಜನಾಃ ಸುಖಿನೋ ಭವಂತು|

Comments