ಇಂದಾದರೂ ಕರುಣಿಸೆಯಾ ನನಗೊಂದು ಕನ್ಯೆಯಾ

 ಇಂದಾದರೂ ಕರುಣಿಸೆಯಾ ನನಗೊಂದು ಕನ್ಯೆಯಾ, ದೇವಾ !

 ದೇವಾ . .!

 ಲೇಖಕರು : ಎಂ ಆರ್ ವೆಂಕಟರಾಮಯ್ಯ 


 ಶೀರ್ಷಿಕೆಯಲ್ಲಿರುವ ಕೋರಿಕೆ ವಿಚಿತ್ರ ಎನಿಸುತ್ತಿದೆಯೇ ! ಯಾರದೀ ಮೊರೆ ಎಂದಿರಾ ? ಇದು ಕನ್ಯಾನ್ವೇಷಣೆಯಲ್ಲಿರುವ ದೈವ ಭಕ್ತನೊಬ್ಬನ ಬೆಳಗಿನ ಪ್ರಾರ್ಥನೆ. ಸಾಧಾರಣವಾಗಿ ಬೆಳಗ್ಗೆ ಹಾಸಿಗೆಯಿದ ಏಳುವಾಗ ಜನ ಕೈ ಗಳುಜ್ಜಿಕರಾಗ್ರೇ ವಸತಿ ಎಂಬ ಶ್ಲೋಕವನ್ನು ಜಪಿಸಿ, ದೇವರಿಗೆ ನಮಿಸಿ ಮೇಲೆ ಏಳಬೇಕೆಂಬುದು ಹಿರಿಯರ ಸದುಪದೇಶವಾದರೂ, ಇದರ ಪಾಲನೆ ಮಾತ್ರ ಅಲ್ಪ ಸಂಖ್ಯಾತರಿAದಲೇ ಎಂದರೆ ಮಾತು ಉತ್ಪೆçÃಕ್ಷೆಯಾಗಲಾರದು. ಇಂದೆಲ್ಲಾ ಬಹಳಷ್ಟು ಮಂದಿ, ಬೆಳಗ್ಗೆ ಭಗವಂತನನ್ನು ಸ್ಮರಿಸಿ, ಆತನ ಪಾಡಿಗೆ ಆತನನ್ನು ಬಿಡದೆ, ‘ಸ್ವಾಮಿ, ನನ್ನೆಲ್ಲಾ ಕೋರಿಕೆಗಳನ್ನೂ ಇಂದೇ ನಡೆಸಿಕೊಡು, ಬರಬೇಕಾದ ಬಾಕಿಗಳನ್ನು ಇಂದೇ ನನಗೆ ಬರುವಂತೆ ಮಾಡು, ತಂಟೆ ತಕರಾರಿನಲ್ಲಿ ಬಿದ್ದಿರುವ ಪ್ರಸಂಗಳನ್ನೆಲ್ಲಾ ಇಂದೇ ನನ್ನ ಪರವಾಗಿ ಇತ್ಯರ್ಥ ಮಾಡಿಸಿಕೊಡು ಇತ್ಯಾದಿಯಾದ ಬಾಕಿ ಪಟ್ಟಿಯನ್ನು ದೇವರ ಮುಂದೆ ವಿವರವಾಗಿ ಓದಿ, ನಿನ್ನ ಮೇಲೇ ಭಾರ ಹಾಕಿದ್ದೇನೆ ಸ್ವಾಮಿ ಎನ್ನುತ್ತಾ ಹಾಸಿಗೆ ಬಿಟ್ಟು ಮೇಲೇಳುವವರು. ಹೀಗ್ಯಾಕೆ ಎಂದರೆ ನಮ್ಮ ಬಾಕಿ ಕೆಲಸಗಳ ಭಾರ ಹೊರುವುದಕ್ಕೇ, ಅವನ್ನು ನಮ್ಮ ಹೆಗಲಿನಿಂದ ಇಳಿಸುವುದಕ್ಕೇ ಅಲ್ವೇಆತ ಇರೋದು ? ಆತÀನಲ್ಲದೆ ಮತ್ಯಾರಿದ್ದಾರೆ ? ಅದಕ್ಕೇ ನಾವು ಆತನಿಗೇ ಸದಾ ಅಪೀಲು ಮಾಡುವುದು ಅಲ್ಲವೇ. ಹೀಗೆ ಬೆಳ್ಳಂಬೆಳಗ್ಗೆಯೇ ಇವರು ಶುರು ಮಾಡ್ತಾರೆಅದು ಬೇಕು, ಇದು ಬೇಕು ಎಂಬ ಜಪವನ್ನು .

 ವಿಷಯ ಹೀಗಿರುವಾಗ, ಅದು ಕೊಡು, ಇದು ಕೊಡು ಎಂದು ಹಲವು ಕೋರಿಕೆಗಳನ್ನು ಕೋರಿ ದೇವರನ್ನು ಕಾಡದೆ, ನನ್ನದೊಂದೇ ಕೋರಿಕೆ ಸ್ವಾಮಿ, ನಿನ್ನೆಯವರೆಗೂ ನನ್ನ ಕೋರಿಕೆ ನೀ ನೆರವೇರಿಸಲಿಲ್ಲ. ಇಂದಾದರೂ ನನ್ನ ಕೋರಿಕೆ ನೀ ನೆರವೇರಿಸಿ, ನನಗೊಂದು ಕನ್ಯೆಯನ್ನು ತೋರಿಸು ಎಂಬ ಕಳ ಕಳಿ ದೈವ ಭಕ್ತನದು. ಇದನ್ನು ಕೇಳಿದ ನೀವನ್ನಬಹುದು, ಥೂ, ಏನ್ರೀ ಇದು, ಭಕ್ತನಿಗೇನೋ ಮದುವೆ ಹುಚ್ಚು ಹಿಡಿದಿದೆ ಅನ್ನಿಸುತ್ತೆ. ಇಂದಲ್ಲ ನಾಳೆ ಇವನಿಗೆ ಸೂಕ್ತ ಕನ್ಯೆ ಕಾಣಿಸಿ ಮದುವೆ ಆಗಬಹುದು. ಅದಕ್ಯಾಕಿಷ್ಟು ಆತುರ, ಕಾತುರ ? ಎಂದು.

 ಹೀಗಂದ್ರೆ ನಿಮಗಿವನ ಬಾಧೆ ತಿಳಿದಿಲ್ಲ ಎಂದಂತಾಯ್ತು. ಅಲ್ಲಾ ಸ್ವಾಮಿ, ನನ್ನ  ಜೂನಿಯರ್ಸ್ಗಳಿಗೆಲ್ಲಾ ಮದುವೆಯಾಗಿ ಮಕ್ಕಳನ್ನೆತ್ತಿ ಆಡಿಸ್ತಿದ್ದರೆ, ನನ್ನ ಕೈ ಹಿಡಿಯೋ ಒಬ್ಬ ಕನ್ಯೆ ಸಿಗಲಿಲ್ಲ ಅಂದ್ರೆ ನನಗೆಷ್ಟು ನೋವಾಗುತ್ತೆ ಅನ್ನೋದು ನಿಮಗೇನು ಗೊತ್ತು ಅಂತಾ ತನ್ನ ದುಃಖ ತೋಡಿಕೊಳ್ತಾನೆ ಭಕ್ತ. ನನ್ನ ಕಡೆಯಿಂದ ನಾನೇನು ಪ್ರಯತ್ನ ಮಾಡದೆ ಸುಮ್ನೆ ಕೂತಿಲ್ಲ.. ಸೋಮವಾರ ಶಿವನಿಗೆ ಪ್ರೀತಿ ಅಂತಾ ಅಂದು ಉಪವಾಸ ಮಾಡ್ದೆ. ಆದರೆ ಕಣ್ ಮುಚ್ಚಿ ಕುಳಿತ ಶಿವ ಕಣ್ತೆರೆದು ನನ್ನತ್ತ ನೋಡಲೇ ಇಲ್ಲ ಎಷ್ಟು ಕಾಲವದರೂ. ಅದಕ್ಕೇ ನಮ್ಮ ರಾಯರು ಕೈ ಹಿಡಿತಾರೆ ಅಂತ ಗುರುವಾರ ಉಪವಾಸ ಶುರು ಹಚ್ಕೊಂಡೆ. ಸ್ವಾಮಿಗಳು ಅಭಯ ಹಸ್ತ ತೋರಿದರು. ಆದರೆ ನನ್ನ ಕನ್ಯೆ ಕಾಣಲಿಲ್ಲ.

 ದೇವಸ್ಥಾನದಲ್ಲಿ ಉರಳು ಸೇವೆ ಮಾಡ್ದೆ. ಹರಕೆ ಕಟ್ಕೊಂಡೆ, ಮಾತಾಪಿತ ಹಿರಿಯರ ಸೇವೆ ಮಾಡ್ದೆ, ನನ್ನ ಕನ್ಯೆಯಂತೂ ಕಾಣಿಸಲೇ ಇಲ್ಲ. ಊರಿನಲ್ಲಿ ಅದೆಷ್ಟು ಮೆಟ್ರಿಮೋನಿ ಬ್ಯೂರೋ ಇವೆಯೋ ಅಷ್ಟರಲ್ಲೂ ರಿಜಿಸ್ಟರ್ ಮಾಡಿದ್ದೀನಿ, ಆದರೂ ಯಾವ ಕನ್ಯೆನೂ ನನ್ನ ಬಯೋಡೇಟಾ ; ರಿಸ್ಯುಂ ಲೈಕ್ ಮಾಡ್ತಾನೇ ಇಲ.್ಲ ನಾ ತಾನೇ ಇನ್ನೆಷ್ಟು ದಿನ ಕಾಯ್ಲಿ ? ಹೀಗಂತಾ ನನ್ನ ಕುರೂಪಿ ಅಂತಾ ಅನ್ಕೋ ಬೇಡಿ ಸುಂದರವಾಗೇ ಇದ್ದೀನಿ, ವಯಸ್ಸೇನು ಹೆಚ್ಚಾಗಿಲ್ಲ 38 ಅಷ್ಟೇ. ವಿಮಾನ ಆಫೀಸಿನಲ್ಲಿ ಕೆಲಸ, ತಿಂಗಳಾಗೋ ಹೊತ್ತಿಗೆ ಮಾಲೀಕರೇ ನನ್ನ ಕರೆದು ಕೈ ತುಂಬಾ ಕೊಡತಾರೆ ಸಂಬಳಾವ. ಮನೇಲಿರೋದು ನಾನು, ಸೇವೆ ಮಾಡೋಕೆ ವಯಸ್ಸಾದ ಅಮ್ಮ. ಇನ್ನೇನ್ ಕೊರತೆಯಿದೆ ಕನ್ಯೆ ನನ್ನ ಮದುವೆ ಆಗಲು ! ಏನೋ ಅರ್ಥಾನೇ ಆಗತಿಲ್ಲ ಅಂತಾ ಕೊರಗತಿದ್ದಾನೆ ನಮ್ಮೀ ಭಕ್ತ.

 ಆದರೆ ನಮ್ಮೀ ಭಕ್ತನ ಮದುವೆಗೆ ಅಡ್ಡವಾಗತಿರೋ ಇಂದಿನ ಸಮಸ್ಯೆಯೆಂದರೆ ಹುಡುಗರ ಜನನದ ಸಂಖ್ಯೆ ಜಾಸ್ತಿ, ಹುಡುಗಿಯರ ಜನನದ ಸಂಖ್ಯೆ ಕಡಿಮೆ. ಕಡಿಮೆ ಸಂಖ್ಯೆಯವರು ಯಾರೂ ಎಸ್ ಎಸ್ ಎಲ್ ಸಿ ಎಂಬ ನಾಲಕ್ ಅಕ್ಷರದ ಪರೀಕ್ಷೆಗೇ ಶಿಕ್ಷಣ ನಿಲ್ಲಿಸುತ್ತಿರುವವರಲ್ಲ. ಬಡವರು ಶ್ರೀಮಂತರು ಅನ್ನೋ ತಾರತಮ್ಯ ಇಲ್ಲದೆ ಹೆಚ್ಚಿನವರು ಡಬ್ಬಲ್ ಡಿಗ್ರಿ ಓದಿ, ತಿಂಗಳಿಗೆ ಅರ್ಧ ಲಕ್ಷ, ಅದಕ್ಕೂ ಹೆಚ್ಚಿನಷ್ಟು ಸಂಬಳ ಪಡೆಯುತ್ತಿರುವವರು, ತಾನು ಮದುವೆಯಾಗುವ ಹುಡುಗ ಸ್ವಂತದ್ದು ದೊಡ್ಡ ಮನೆ ಮಾಡಿರಬೇಕು, ತನಗಿಂತಾ ಹೆಚ್ಚು ಸಂಬಳ ಪಡೆಯುತ್ತಿರಬೇಕು, ಕಾರ್ ಹೊಂದಿರಬೇಕು, ನೋಡಲು ಸ್ಮಾರ್ಟ್ ಆಗಿರಬೇಕು ಎಂಬ ಕಂಡೀಶನ್ಸ್ ಹುಡುಗಿಯರದು. ಆದರೆ ನಮ್ಮೀ ಭಕ್ತನೋ, ಪೈಕಿ ಕನಿಷ್ಠ ಒಂದನ್ನೂ ಪೂರೈಸಲಾರ. ಹೀಗಿರೋವಾಗ ಇವನಿಗೆ ಮದುವೆ ವಿವಾಹ ಎಂಬುದು ಮರೀಚಿಕೆಯಂತಾಗಿದೆ. ದುಸ್ಥಿತಿ ಇವನಲ್ಲಿ ಹೆದರಿಕೆ ಉಂಟುಮಾಡಿ, ಸ್ವಾಮಿ ಒಂದು ಕನ್ಯೆ ತೋರಿಸು ಎಂದು ದೇವರನ್ನು ಸದಾ ಕಾಡುವಂತೆ ಮಾಡಿದೆ,

 ಇದುವರೆಗೆ ಹೇಳೀದ್ದೆಲ್ಲಾ ಕೇಳಿದ ಕೆಲವರು, ಆಯ್ತಪ್ಪ, ಇವನಿಗೆ ಕನ್ಯೆ ದೊರೆಯಲಿಲ್ಲ, ಮದುವೆಯಾಗಲಿಲ್ಲ ಅಂತಾನೇ ಇಟ್ಟುಕೊಳ್ಳೋಣ, ಆಗ ಏನು ಕೊಳ್ಳೆ ಹೋಗುತ್ತೆ ? ಆಕಾಶ ತಲೆ ಮೇಲೆ ಬಿದ್ದುಹೋಗುತ್ತಾ ! ಅಥವಾ ಇವನು ಜೀವನಾನೇ ನಡೆಸೋಕೆ ಆಗೊಲ್ವಾ ? ಮದುವೆ ಆಗಲಿ ಎಂದೇ ಇವನ ಜನ್ಮ ತಳೆದಿದ್ದಾನಾ ? ಮದುವೆ ಆದರೆ ಭಗವಂತನ ಪಾದ ಸಿಕ್ಕಿದಷ್ಟು ಪುಣ್ಯವೋ ? ಮದುವೆ ಆಗಲೇ ಬೇಕು ಎಂ¨ ಹಪಾಹಪಿ ಯಾಕೆ ? ಇಂದೆಲ್ಲಾ ಒಂಟಿಯಾಗಿರೋರಿಗೆ, ಮದುವೆಯಾಗಿದ್ದರೂ ಪತ್ನಿ ಒಂದೂರು, ಪತಿ ಇನ್ನೊಂದೂರಿನಲ್ಲಿ ಕೆಲಸ ಮಾಡ್ತಿರೋರು, ವಿವಾಹ ವಿಚ್ಚೇದನ ಪಡೆದವರು ಹೀಗೆ ನಾನಾ ಕಾರಣಗಳಿಂದ ಒಂಟಿಯಾಗಿರೋರಿಗೆ ಅದೆಷ್ಟೋ ಪಿ ಜಿ ಗಳು ಹಣ ಪಡೆದು ಅನ್ನ, ನೆಲೆ ಒದಗಿಸ್ತಿವೆ, ಅವರಿಗ್ಯಾಕೆ ಅಷ್ಟು ಹಣ ಕೊಡಬೇಕು ನಾನೇ ಖುದ್ದಾಗಿ ಅಡುಗೆ ಮಾಡಿ ಊಟ ಮಾಡ್ತೇನೆ ಎನ್ನುವವರೂ ಸ್ವಯಂ ಪಾಕದಿಂದ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ,

 ಅಕಸ್ಮಾತ್ ನನಗೆ ಮದುವೆಯಾಗದೆ ವೃದ್ಧಾಪ್ಯ ಬಂದರೆ ಆಗ ಒಂಟಿಯಾದ ನನಗೆ ಅನ್ನ ನೀರು ಕಾಣಿಸುವವರು ಯಾರು ? ಎಂಬ ಇವನ ಪ್ರಶ್ನೆಗೆ, ಇಂದು ನಿಗದಿತ ಹಣ ಪಾವತಿಸಿದರೆ ಸಾಕು, ನೀವು ಕೋರುವ ಎಲ್ಲಾ ಸೌಕರ್ಯಗಳನ್ನೂ ನಿಮ್ಮ ಕಾಲು ಬುಡಕ್ಕೆ ತಂದಿಡುವ ಹೈ ಟೆಕ್ ಆಶ್ರಮಗಳಿವೆ. ಇವನೂ ಮದುವೆಯಿಲ್ಲದೇನೇ ಹಾಯಾಗಿ ಜೀವನ ನಡೆಸಬಹುದು, ವಸ್ತುಸ್ಥಿತಿ ಹೀಗಿರುವಾಗ, ಅಯ್ಯೋ ನನಗೆ ಮದುವೆ ಆಗಲಿಲ್ಲವೇ ? ಬೇಗ ಒಂದು ಕನ್ಯೆ ಕಾಣಿಸಪ್ಪಾ ಎಂದ್ಯಾಕೆ ಭಕ್ತ ದೇವರನ್ನ ಕಾಡ್ತಿರೋದು ? ಅಂತ ಖಂಡಿಸ್ತಾರೆ ಜನ.

 ಇವರ ವಾದ ಕೇಳಿದ ನಮ್ಮ ಭಕ್ತನ ಪಿತ್ತ ನೆತ್ತಿಗೇರಿತು. ್ರೀ ಸ್ವಾಮಿ, ನನ್ಬ ಕಷ್ಟ ತಿಳಿಯದೆ ಏನೇನೋ ಮಾತಾಡಬೇಢ್ರೀ ನನ್ನ ಸಂಕಟ ನನಗೆ, ಇದು ನಿಮಗೆ ತಮಾಶೆ ವಿಷಯವಾಗಿದೆ. “ಋಷಯಃ ಪಿತರೋ ದೇವಾ ಭೂತಾನ್ಯತಿಥಯಸ್ತಥಾ , ಆಶಾಸತೇ ಕುಟುಂಬಿಭ್ಯಸ್ತೇಭ್ಯ ಕಾರ್ಯಂ ವಿಚಾನತಾ ಎಂಬAತೆ ಪ್ರತಿಯೊಬ್ಬನೂ ಮಾತಾ ಪಿತೃ ಋಣ, ಆಚಾರ್ಯ ಋಣ, ದೇವ ಋಣ, ಭೂತ ಋಣ ಮತ್ತು ಸಾಮಾಜಿಕ ಋಣಗಳೆಂಬ ಪಂಚ ಋಣಗಳನ್ನು ತೀರಿಸಲೇಬೇಕು ಎಂದಿಲ್ಲವೇನ್ರೀ ನಮ್ಮ ಸನಾತನ ಧರ್ಮ, ಶಾಸ್ತçಗಳು ! ನನಗೆ ವಿವಾಹವೇ ಅಗದೆ ಬ್ರಹ್ಮಚಾರಿಯಾಗೆ ಸತ್ತರೆ ನಮ್ಮ ವಂಶ ವೃದ್ದಿಯಾಗದೆ ನನ್ನೊಂದಿಗೇ ಕೊನೆಯಾಗುತ್ತಲ್ರೀ, ನೀ ಕಲ್ಯಾಣವಾಗಿ ಗೃಹಸ್ಥಾಶ್ರಮ ಸೇರಿ ಪುತ್ರ ಸಂತಾನ ಪಡೆದಿದ್ದರೆ ಆಗ ನಿನಗೆ, ನಿನ್ನ ಪಿತೃಗಳಾದ ನಮಗೆಲ್ಲಾ ಸದ್ಗತಿ ದೊರಕುತ್ತಿತ್ತು. ನೀನು ವಿವಾಹವಾಗದೆ ಬ್ರಹ್ಮಚಾರಿಯಾಗಿ ಸತ್ತೆಯಾದ ಕಾರಣ ನಮಗೆ ಸದ್ಗತಿ ದೊರಕದಾಯಿತು, ಲೋಪಕ್ಕೆ ಕಾರಣ ನೀನೇ, ಕಾರಣ ನೀನೇ, ನೀನೇ ಕಾರಣ ಅಂತ ಅವರು ನನ್ನ ಶಪಿಸ್ತಾರಲ್ಲಾ , ಆಗ ಅವರಿಗೆ ನೀವ್ ಉತ್ತರ ಹೇಳ್ತೀರೇನ್ರೀ ?

 ನಿಮಗಾದರೆ ನನಗೊಂದ್ ಕನ್ಯೆ ತೋರಿಸಿ ವಿವಾಹ ಮಾಡಿ ಪುಣ್ಯ ಗಳಿಸಿ, ನಿಮ್ ಕೈಲಿ ಏನೂ ಆಗದಿದ್ದರೆ ಸುಮ್ಮನಾದರೂ ಇರಿ. ನಿಮ್ಮಂತಹವರನ್ನು ನೋಡಿಯೇ ಇರಬೇಕು ಒಬ್ಬ ಕವಿ ಅಂದೇ ಅಂದಿದ್ದು, “ಬೇಡುವುದಾದರೆ ನರನನ್ನು ಬೇಡಬೇಡ, ಏಕೆ ಎಂದರೆ ಅವನೇ ಒಬ್ಬ ತಿರುಕ ( ಇವನೂ ಸದಾ ದೇವರ ಮುಂದೆ ಬೇಡುವವನೇ, ಎಂಬ ಅರ್ಥದಲ್ಲಿ) ಬೇಡುವುದಾದರೆ ಹರನನ್ನು ಬೇಡು, ಅವನೇ ನಿನ್ನ ನೆರವಿಗೆ ನಿಲ್ತಾನೆ ಅಂತಾ ಹೇಳೀದ್ದು ಎಂದು ಗರಂ ಆದ ಬ್ರಹ್ಮಚಾರಿ ಭಕ್ತ.

 ಮದುವೆ ಎಂಬುದರ ಸ್ವರೂಪ ಎಂತಹುದು ಎಂಬುದನು ನಮ್ಮೀ ಭಕ್ತ ತಿಳಿದಿಲ್ಲವೆನಿಸುತ್ತದೆ. “Marriage is a beautiful fort, those who are outside it want to get into it curiously\ Those who are inside it want to get out of it  desperately” ಎಂದಿದ್ದಾನೆ ಒಬ್ಬ ಅಜ್ಞಾತ ಆಂಗ್ಲ ಕವಿ.

 ಇದೆಲ್ಲಾ ಏನೇ ಆಗಿರಲಿ, ನಮ್ಮೀ ಬ್ರಹ್ಮಚಾರಿ ಭಕ್ತನಿಗೆ ಸೂಕ್ತವಾದ ಕನ್ಯೆ ನಿಮಗೇನಾದರೂ ಕಾಣಿಸಿದರೆ ದಯವಿಟ್ಟು ಇವನನ್ನು ಗೃಹಸ್ಥನನ್ನಾಗಿ ಮಾಡಿದರೆ, ಪ್ರತಿ ದಿನವೂಇಂದಾದರೂ ಕರುಣಿಸೆಯಾ ನನಗೊಂದು ಕನ್ಯೆಯಾ, ದೇವಾ ! ದೇವಾ ! ಎಂದು ಇವನು ದೇವನನ್ನು ಕಾಡುವುದು ತಪ್ಪುತ್ತದೆ. ಇವರಿಗೆ ಹೆಲ್ಪ್ ಮಾಡುವಿರಾ ಸರ್ ! ಪ್ಲೀಸ್, ಪ್ಲೀಸ್ !                        

Comments