ನಿಮ್ಮನ್ನೆಲ್ಲಾ ನೋಡ್ ಕೊಳ್ಳೋರ್ ನಾವೇ ....

 ನಿಮ್ಮನ್ನೆಲ್ಲಾ ನೋಡ್ ಕೊಳ್ಳೋರ್ ನಾವೇ ಅಲ್ವಾ !

 ಅದಕ್ಕೇ ನಾವ್ ಹೇಳ್ದಂಗ್ ಕೇಳ್ಬೇಕು ! ಹೂಂ !

 ಲೇಖಕರು : ಎಂ ಆರ್ ವೆಂಕಟರಾಮಯ್ಯ 



  ಆವಾಜ್, ಗುಟರು ಯಾರದ್ದು, ಯಾರಿಗೀ ಕಮೇಂಡ್ ? ತಿಳಿಯಲಿಲ್ಲ ಎಂಬ ಗೊಂದಲವೇ ! ‘ಅನ್ಯಥಾ ಶರಣಂ ನಾಸ್ತಿಎಂದು ಕೈ ಗಳನ್ನು ಮೇಲೆತ್ತಿ ಮುಗಿಯುವ ಅಭಾಗ್ಯರಿಗೆ ಅಭಯವನ್ನು ನೀಡುವ ನಾಥರದು. ಅಯ್ಯೋ ಒಗಟಿನ ಮಾತುಗಳು ನಮಗೆ ಅರ್ಥವಾಗಲಿಲ್ಲ ಎಂದಿರಾ !

 ಸರಳವಾದ ಮಾತುಗಳಲ್ಲಿ ಹೇಳಬೇಕೇ ? ದುರ್ಭಲರು, ಅಸಹಾಯಕರು, ಮತ್ತೊಬ್ರ ಆಶ್ರಯ ಆಸರೆಯ ಮೇಲೇ ಉಸಿರಾಡಬೇಕಾದವರು, ರಕ್ಷಣೆ ಅಗತ್ಯವಾದವರು ಏನ್ ಮಾಡ್ತಾರೆ ? ಕೈ ಮುಗಿ ತಾರೆ. ಯಾರಿಗೆ ? ರಕ್ಷಕರಿಗೆ. “ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯು ಪಾಸತೇ | ತೇಷಾಂ ನಿತ್ಯಾಭಿ ಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್|| (ಭಗೀ 9. 22) ಯಾರು ಭಗವಂತನನ್ನೇ ಪರಮ ಆಶ್ರಯ, ಪರಮ ಗತಿ, ಎಂದು ದೃಢವಾಗಿ ನಂಬಿರುತ್ತಾರೋ, ಯಾರು ಎಲ್ಲ ಕಾಲಗಳಲ್ಲಿಯೂ ಭಗವಂತನ ಚಿಂತನೆ, ಧ್ಯಾನ ಮಾಡುತ್ತಾರೋ ಅಂತಹಾ ಅನನ್ಯ ಭಕ್ತರ ಹೊಣೆ, ಸಮಸ್ತ ಯೋಗಕ್ಷೇಮದ ಹೊಣೆ ನನ್ನದೇಎಂದಿಲ್ಲವೇ ಕೃಷ್ಣ ಅಂದು ? ಅದು ದ್ವಾಪರ ಯುಗದ ಕೃಷ್ಣನ ಅಭಯ ಭಕ್ತರಿಗೆ.

 ಇಂದು ನಾವಿರುವುದು ಕಲಿಯುಗದಲ್ಲಿ. ಯುಗದ ಕೃಷ್ಣ ಇಂದು ನಮ್ಮ ರಕ್ಷಣೆಗೆ ರ‍್ತಾನೋ ಇಲ್ಲವೋ ತಿಳಿಯದು. ಕಾರಣದಿಂದ ಕೃಷ್ಣನ ಬದಲಿಗೆ ಇಲ್ಲಿರುವ ಈತನ ಪ್ರತಿನಿಧಿ, ಅರ್ಥಾತ್ ನಮ್ಮ ಮಕ್ಕಳು, ನಮಗೆ ಕೊಡುತ್ತಿರುವ ಅಭಯ, ನಿಮ್ಮನ್ನೆಲ್ಲಾ ನೋಡ್ ಕೊಳ್ಳೋರ್ ನಾವೇ ಅಲ್ವಾ ! ಅದಕ್ಕೇ ನಾವ್ ಹೇಳ್ದಂಗ್ ಕೇಳ್ಬೇಕು ! ಹೂಂ !

 “ಪಿತಾ ರಕ್ಷತಿ ಕೌಮಾರೇ, ಭರ್ತಾ ರಕ್ಷತಿ ಯೌವನೇ\ ರಕ್ಷಂತಿ ಸ್ಥವಿರೇ ಪುತ್ರಾ,  ಸ್ತ್ರೀ ಸ್ವಾತಂತ್ರ್ಯಮ್ ಮರ್ಹತಿ” (9. 381)ಬಾಲ್ಯದಲ್ಲಿ ಸ್ತ್ರೀಯನ್ನು ತಂದೆಯು ರಕ್ಷಿಸುತ್ತಾನೆ, ಯೌವನದಲ್ಲಿ ಗಂಡನು ರಕ್ಷಿಸುತ್ತಾನೆ. ಮುಪ್ಪಿನಲ್ಲಿ ಮಕ್ಕಳು ರಕ್ಷಿಸುತ್ತಾರೆ. ಆದುದರಿಂದ ಸ್ತ್ರೀಯು ಸ್ವತಂತ್ರವಾಗಿ ಇರಲು ಅರ್ಹಳಲ್ಲ (ಅವಳಿಗೆ ರಕ್ಷಣೆಯು ಬೇಕೇ ಬೇಕು ಎಂಬ ಅರ್ಥದಲ್ಲಿ ಮಾತು) ಎಂದವರು ಮನುಸ್ಮೃತಿ ಬರೆದ ಮನು ಮಹರ್ಷಿ.

 ಆದರೆ Much water has flown under the bridge since then ಎಂಬ ಹಳೆಯ ಕಾಲದ ಇಂಗ್ಲಿಷ್ ಗಾದೆಯಂತೆ ಮನುವಿದ್ದ ಕಾಲದಿಂದ ಇಲ್ಲಿಯವರೆಗೆ ಹಲವು ಯುಗಗಳು ಕಳೆದಿವೆ. ಪರಿಣಾಮವಾಗಿ ಜನರ ಜೀವನ ಪದ್ಧತಿ, ಶೈಲಿ, ಆಲೋಚನೆಗಳು, ಸಾಮಾಜಿಕ ಆರ್ಥಿಕ ಶಾರೀರಿಕ ಪರಿಸ್ಥಿತಿಗಳಲ್ಲಿ ಬಹಳ ಬೆಳವಣಿಗೆಗಳು, ಬದಲಾವಣೆಗಳು ಆಗಿವೆ. ಹೀಗಾಗಿ ಮನು ಅಂದು ವಿಧಿಸಿದ್ದ ಷರತ್ತುಗಳ ಪೈಕಿಮುಪ್ಪಿನಲ್ಲಿ ಮಕ್ಕಳು ರಕ್ಷಿಸುತ್ತಾರೆಎಂಬುದು ಮಾತ್ರ ಉಳಿದು ಉಳಿದೆಲ್ಲ ಅಭಯಗಳೂ ಸವಕಲಾಗಿ ಚಲಾವಣೆಯಿಂದ ದೂರವಾಗಿದೆ..

 ಅಂದು ಸ್ತ್ರೀರಕ್ಷಣೆ ಬಗ್ಗೆ ಮನು ಹೇಳಿರುವುದನ್ನು ಆಧರಿಸಿ, ಹೆತ್ತ ತಾಯಿಯ ರಕ್ಷಣೆ ನನಗಿರಲಿ ಎಂದು ಪುತ್ರನಂದರೆ, ತಾಯಿಗೆ ವೃದ್ದಾಪ್ಯದ ವರೆಗೂ ರಕ್ಷಣೆ ಕೊಟ್ಟು, ಇಂದು ತನ್ನ ರಕ್ಷಣೆಯನ್ನೇ ತಾನು ಮಾಡಿಕೊಳ್ಳಲಾಗದ ತಂದೆಯ ರಕ್ಷಣೆಗೆ ಯಾರು ಮುಂದಾಗ ಬೇಕು ? ಇವರ ಮಕ್ಕಳೇ ಎಂಬುದರಲ್ಲಿ ಎರಡು ಮಾತುಗಳಿಲ್ಲವಾಗಿದೆ. ಸ್ಥಿತಿ, ದುಸ್ಥಿತಿ ತಿಳಿದೇ, ‘ಅನ್ಯಥಾ ಶರಣಂ ನಾಸ್ತಿಎಂದು ಕೈ ಗಳನ್ನು ಮೇಲೆತ್ತಿ ಮುಗಿಯುವವರು, ಅಭಾಗ್ಯ ವೃದ್ದ ದಂಪತಿಗಳು. ಯಾರು ಎಲ್ಲ ಕಾಲಗಳಲ್ಲಿಯೂ ನಮ್ಮ ಚಿಂತನೆ, ಧ್ಯಾನ ಮಾಡುತ್ತಾರೋ ಅಂತಹಾವರ ಸಮಸ್ತ ಯೋಗಕ್ಷೇಮದ ಹೊಣೆ ನನ್ನದೇ,. “ನಿಮ್ಮನ್ನೆಲ್ಲಾ ನೋಡ್ ಕೊಳ್ಳೋರ್ ನಾವೇ ಅಲ್ವಾ ! ಅದಕ್ಕೇ ನಾವ್ ಹೇಳ್ದಂಗ್ ಕೇಳ್ಬೇಕು ! ಹೂಂ !” ಎನ್ನುತ್ತಿದ್ದಾರೆ. ನಮ್ಮ ಪುತ್ರ ರತ್ನಗಳು.

 ವಿಶೇಷ ಸೂಚನೆ : ( ಪ್ರಸಕ್ತ ಲೇಖನದಲ್ಲಿ ಎಲ್ಲ ಮಕ್ಕಳೂ ಹೀಗೇ, ಒಳ್ಳೆಯ, ವಿನಯ, ವಿಧೇಯ ಮಕ್ಕಳು ಇಲ್ವೇ ಇಲ್ಲ ಎಂದು ಲೇಖನದಲ್ಲಿ ಜನರಲೈಸ್ ಮಾಡುವ, ಯಾರನ್ನೂ ಆಕ್ಷೇಪಿಸುವ, ಖಂಡಿಸುವ, ಅವಮಾನಿಸುವ ಉದ್ಧೇಶ ಲೇಖಕನದಲ್ಲ. ಬದಲಿಗೆ ಬೆಳೆದ ಬೆಳೆಯಲ್ಲಿ ಗಟ್ಟಿ ಕಾಳುಗಳ ಜೊತೆ ಹೆಚ್ಚು ಜೊಳ್ಳು ಕಾಳೂ ಸೇರಿರುವಂತೆ, ಅಸಲಿ ನೋಟುಗ ಜೊತೆ ನಕಲಿ ನೋಟು ಗಳೂ ಹೆಚ್ಚಾಗ ಸೇರಿವೆ. ಹೀಗೇನೇ ಒಳ್ಳೆಯ ಮಕ್ಕಳು ಇಂದೂ ಇದ್ದಾರೆ ಆದರೆ ಬೆÉಳೆಯಲ್ಲಿ ಜೊಳ್ಳೇ ಹೆಚ್ಚುತ್ತಿರುವಂತೆ ಹೆತ್ತವರ ಬಗ್ಗೆ ಇಂದು ದಯೆ ಕರುಣೆ ಸಹಾನುಭೂತಿ ಇಲ್ಲದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ದುರದೃಷ್ಟಕರ)

 ಮೇಲೆ ಉಲ್ಲೇಖಿಸಿರುವ ಗೀ ಸಾಲಿನಲ್ಲಿ ªಯಾರು ಎಲ್ಲ ಕಾಲಗಳಲ್ಲಿಯೂ ನಮ್ಮ ಚಿಂತನೆ, ಧ್ಯಾನ ಮಾಡುತ್ತಾರೋಎಂಬೀ ಮಾತುಗಳ ಅರ್ಥವೇನು ಎಂದಿರಾ ! ಇಷ್ಟೂ ಗೊತ್ತಾಗಲಿಲ್ವೇ ನಿಮಗೆ ? “ಎಲ್ಲ ಕಾಲಗಳಲ್ಲಿಯೂ ನಮ್ಮ ಚಿಂತನೆ, ಧ್ಯಾನಅಂದರೆ ನಮ್ಮ ಮಕ್ಕಳ, ತಿಂಡಿ, ಅಡುಗೆ, ಡಬ್ಬಿ ಕಟ್ಟುವುದು, ಮನೆ ಕ್ಲೀನ್, ಪಾತ್ರೆ ಪಗಡ ತೊಳೆದು ಮನೆಯನ್ನು ಫಳ ಫಳ ಅಂತ ಹೊಳೆಯುವಂತೆ ನಿರ್ವಹಿಸುವುದು, ಇವರ ಮಕ್ಕಳ ಲಾಲನೆ, ಪಾಲನೆ, ಜೋಪಾನ, ಮನೆಯ ಸಕಲ ಆಗು ಹೋಗುಗಳು ಎಲ್ಲವನ್ನೂ ಎಲ್ಲ ಕಾಲಗಳಲ್ಲಿಯೂ ಯಾರು ಚಿಂತಿಸಿ ಚಾ ಚೂ ತಪ್ಪದೆ ನಡು ಬಗ್ಗಿಸಿ, ತಲೆ ತಗ್ಗಿಸಿ, ( ಈಗಾಗಲೇ ಇವರ ನಡು ಬಗ್ಗಿ ಬಹಳ ಕಾಲವೇ ಆಗಿದೆ. ನಡು ಬಗ್ಗಿದ ಮೇಲೆ ತಲೆ ಬಾಗಿಯೇ ಬಾಗು ತ್ತದೆ ಅಲ್ಲವೇ ! ಇದಕ್ಕೆ ಇವರೇನೂ ಕಷ್ಟ ಪಡಬೇಕಿಲ್ಲ ಇವು ತಾವೇ ತಾವಾಗಿ ಬಗ್ಗುತೆ)ಪಾಲಿಸುವರೋ, ಪಾಲಿಸಿದರೋ, ಅವರ ಯೋಗ ಕ್ಷೇಮದ ಹೊಣೆ ನಮ್ಮದು ಎಂಬ ಅಭಯ ನೀಡುತ್ತಿದ್ದಾರೆ ನಮ್ ಮಕ್ಕಳು. ಯಾವ ಕಂಡೀಶನ್ ಉಲ್ಲಂಘಿಸಿದರೂ ಇವರ ಅಭಯ ಹೆತ್ತವರಿಗೆ ನಿಲ್ .

 ಇವರು (ಇಂದಿನ ನಮ್ಮ ಮಕ್ಕಳು) ಸಣ್ಣವರಿದ್ದಾಗ ಇವರನ್ನು ನಾವು ಗದರಿಸಿ ಹೇಳ್‌ತಿದ್ದೆವು, “ಚಿಕ್ಕವರು ದೊಡ್ಡವರು ಹೇಳಿದ ಹಾಗೆ ಕೇಳಬೇಕುಅಂತಾ. ಈಗ ಇವರು ಹಿಗ್ಗಿ ದೊಡ್ಡವಾಗಿದ್ದಾರೆ. ನಾವು ವಯಸ್ಸಿನ ಕಾರಣದಿಂದ ಕುಗ್ಗಿ ಚಿಕ್ಕವರಾಗಿದ್ದೀವಿ, ಚಿಕ್ಕವರು ದೊಡ್ಡವ್ರು ಹೇಳಿದ ಹಾಗೆ ಕೇಳಬೇಕು ಎಂಬ ನಮ್ಮ ಅಂದಿನ ಮಾತು, ಇಂದು ನಮಗೇ ತಿರುಗುಬಾಣವಾಗಿದೆಮಾಡಿದ್ದುಣೋ ಮಹರಾಯಎಂ¨ ನಮ್ ಶಾಸ್ತçಗಳು ಹೇಳಿರೋ ಮಾತು ಸರ್ವ ಕಾಲಿಕ ಸತ್ಯಾರೀ ಅಂತಾರೆ ನಮ್ಮೀ ವಯೋ ವೃದ್ಧರು.

 ಇದುವರೆಗೂ ಹೇಳಿದೆಲ್ಲಾ ಕೇಳಿದವರು,, ‘ದಿಸ್ ಈಸ್ ಟೊ ಮಚ್ನಮ್ಮ ಮಕ್ಕಳು ಹೀಗಂತಾರೇನ್ರೀ ? ನೀವ್ ಸುಮ್ಮನೆ ಉತ್ಪ್ರೇಕ್ಷೆ ಮಾಡಬೇಡರಪ್ಪ ಎಂದವರನ್ನು ಈಗ ನಾನು ನನ್ನ ಮಿತ್ರನ ಮನೇಗೆ ಕರಕೊಂಡ್ ಹೋಗತಾ ಇದ್ದೀನಿ, ಇದುವರೆಗೂ ನಾ ಹೇಳಿದ್ ರಾಮಾಯಾಣಾನ ಲೈವ್ ಆಗಿ ಅಲ್ಲಿ ನೋಡಬಹುದು.

 ಪರಿಚಯಸ್ಥರು ಹೋದೆವಲ್ಲಾ ಅಂತಾ ಮನೆಯವರು ಕಾಫಿಕೊಟ್ಟವರು, ಸಕ್ಕರೆ ಹಾಕಬೇಕಾಗಿತ್ತಾ ಅಂಕಲ್ ! ಅಂದಾಗ ಬೇಡಮ್ಮಾ ಸರಿಯಾಗಿದೆ ಎಂದೆವು. ಅಲ್ಲೇ ಇದ್ದ ಮನೆಯ ನಿವೃತ್ತ ಯಜಮಾನರು, ನನ್ನ ಕಾಫಿಗೆ ಸ್ವಲ್ಪ ಸಕ್ಕರೆ ಹಾಕ್ ಬೇಕಿತ್ತು ಎಂದರು ಪಿಸು ಧ್ವನಿಯಲ್ಲಿ. ಯಜಮಾನರ ಮುಖ ದುರುಗುಟ್ಟಿ ನೋಡಿದ ಪಾಲಕ, ರಕ್ಷಕ, ಯಾಕೆ ? ಈಗಿರೋ ಶುಗರ್ ಲೆವಲ್ ಕಡಿಮೆಯಿದೆ ಅಂತಾನಾ ! ಕೊಟ್ಟಿದ್ದನ್ ಕುಡಿಯೋದ್ ಕಲಿತ್ಕೊಳ್ಳಿ ಅಂದರು, ಅಲ್ಲೇ ಇದ್ದ ಎಕ್ಸ್ ಯಜಮಾನರ ಪ್ರೆಸೆಂಟ್ ಯಜಮಾನರು .

 ಎಲ್ಲರೂ ಊಟಕ್ ಕೂತೆವು . ನಾವು ಹೋಗಿದ್ದೇವೆ ಅಂತಾ ವಿಶೇಷ ಅಡುಗೆ ಮಾಡಿಸಿದು.್ರ ಊಟ ಶುರು ಮಾಡಿದಾಗ ಎಕ್ಸ್ ಯಜಮಾನರು ಆಗಾಗ್ಗೆ ನಮ್ಮ ಎಲೆಗಳ ಕಡೆ ನೋಡುತ್ತಾ ತಿನ್ತಾ ಇದ್ದರು ಯಾಕೋ ಈತ ನಮ್ಮ ಎಲೆಗಳ ಕಡೇನೇ ನೋಡ್ತಾರಲ್ಲಾ ಎನಿಸಿತು. ಇಷ್ಟರಲ್ಲೇ ಅಡುಗೆ ಹೇಗಿದೆಯೋ ಏನೋ ! ಉಪ್ಪು, ಕಾರ ಸರಿಯಿದೆಯಾ ಎಂದ ಸೊಸೆಯ ಮಾತಿಗೆ, ಅಡುಗೆ ದಿವ್ಯವಾಗಿದೆಯಮ್ಮಾ ಎಂದೆವು. ಸೊಸೆ ಅಡುಗೆ ಮನೆಯೊಳಗೆ ತೂರುತ್ತಿದ್ದಂತೆ ನಮ್ಮೀ ಎಕ್ಸ್ ಯಜ,ಮಾನರು, ಸ್ವಾಮಿ, ನನಗೆ ಬಡಿಸಿದ ಪದಾರ್ಥ ನೀವ್ ತಿಂದ್ ನೋಡಿ, ನಿಮಗೇ ಗೊತ್ತಾಗುತ್ತೆ ಉಪ್ಪು ಕಾರ ಸಾಕೋ, ಬೇಕೋ ಎಂಬುದು ಎಂದರು. ಬಲು ಸೂಕ್ಷ್ಮ ಶ್ರವಣ ಶಕ್ತಿ ಹೊಂದಿದ್ರೇನೋ ಸೊಸೆ, ಅಡುಗೆ ಮನೆಯೊಳಗಿ ನಿಂದಲೇ ಹೂ, ಇವರಿಗಿರೋ ಬಿ. ಪಿ. ಲೇವೆಲ್ ಹೇಗಪ್ಪಾ ಕಂಟ್ರೋಲ್ ಮಾಡೋದು ಅಂತಾ ನಾವ್ ಹೆಣಗಾಡ್ತಾ ಇದ್ದೀವಿ, ಆದ್ರೆ ಇವರು ಉಪ್ ಸಾಲದು, ಕಾರ ಕಡಿಮೆ ಅಂತಾ ಮೂಲಗತಾg.É ನಮ್ ಕಷ್ಟ ನಮಗೆ ಗೊತ್ತು, ನಾಳೆ ಬಿ. ಪಿ. ಜಾಸ್ತಿ ಆಗಿ, ಹಾರ್ಟೋ, ಕಿಡ್ನೀನೋ ಡೇಮೇಜ್ ಆದರೆ ಲಕ್ಷಳಷ್ಟು ಹಣ ನಾವ್ ಎಲ್ಲಿಂದ್ ತರೋಣ ? ಬಾಧೆ ನಮಗೇ ತಾನೇ ? ಅದಕ್ಕೇ ನಾವ್ ಹೇಳ್ದಂಗ್ ಕೇಳಿ ! ಹೂಂ ! ಎಂದಳಾ ಶ್ರೀಮಾತೆ, ಪಾಪ ಯಜಮಾನ್ರು ಎಲೆ ಬಿಟ್ಟು ಮೇಲೆದ್ರು. ‘ನಾ ಮಾಡಿದಾ ಕರ್ಮ ಬಲವಂತನಾದರೆ ನೀ ಮಾಡುವುದೇನೋ ಹರಿಯೇಎಂದು ಸಮಾಧಾನ ಪಟ್ಟುಕೊಂಡರು.

 ನಾವು ಅವರ ಮನೆಯಿಂದ ಹೊರಟ ನಂತರ ನನ್ನ ಮಿತ್ರನೆಂದ, ಇಲ್ಲಿಗೆ ಬರೋ ಮುಂಚೆ ನೀ ನಮ್ ಮಕ್ಕಳ ಬಗ್ಗೆ ವರ್ಣಿಸಿದನ್ನ ಕೇಳಿ, ಇದೆಲ್ಲಾ ವಾಸ್ತವ ಅಲ್ಲ, ಕಟ್ಟು ಕತೆ, ಬಣ್ಣ ಕಟ್ಟಿದ್ದು ಎಂದುಕೊAಡಿದ್ದೆ, ಆದರೆ ಮನೆ ಕತೆ ಕಣ್ಣಾರೆ ನೋಡಿದ ಮೇಲೆ ತಿಳೀತಾಯಿದೆ, ನೀ ಹೇಳಿದ್ದು ಇಂಟಿಂಟಿ  ರಾಮಾಯಣ್ ಕಣಯ್ಯಾ, ಇಷ್ಟ್ ಹೊತ್ತೂ ನಾ ಅವರಿವರ ಮನೆ ಕತೆ ಕೇಳ್ದೆ .‘ಎಲ್ಲರ ಮನೆ ದೋಸೇನೂ ತೂತೇಅಂತಾ ಈಗನ್ನಿಸ್ತಿದೆಯಯ್ಯಾ. ಇದರ ಯಥಾವತ್ ಚಿತ್ರವೇ ನಮ್ ಮನೇದೂ ಕಣಯ್ಯಾ, ನಾ ಬಂದ್ ಬಹಳ ಹೊತ್ತಾಯ್ತು. ಹೋಗ್ತೀನಪ್ಫಾ ಇಷ್ಟ್ ಹೊತ್ ಎಲ್ಲಿ ಅಲೆಯೋಕೆ ಹೋಗಿದ್ರೀ, ? ನಿಮಗೆ ಕಾಯಿಲೆ ಕಷ್ಟ ಬಂದ್ರೆ ಯಾರ್ ನೋಡ್ತಾರೆ ? ನಿಮ್ಮನ್ನೆಲ್ಲಾ ನೋಡ್ ಕೊಳ್ಳೋರ್ ನಾವೇ ಅಲ್ವಾ ! ಅದಕ್ಕೇ ನಾವ್ ಹೇಳ್ದಂಗ್ ಕೇಳ್ಬೇಕು ! ಹೂಂ ! ಅಂತಾರಪ್ಪಾ ನನ್ನ ಮಗ ಸೊಸೆನೂ ಎಂದು ತನ್ ಕಣ್ ಮುಂದೆಯೇ ಹುಟ್ಟಿ ಬೆಳೆದ ಛೋಟಾ ಗಳಿಗೆ ಹೆದರಿದ ನನ್ನ ಮಿತ್ರ ಸರ ಸರನೆ ಮನೆಯತ್ತ ಹೆಜ್ಜೆ ಹಾಕಿದ.                        

Comments

  1. ಸ್ತ್ರೀರಕ್ಷಣೆ ಮತ್ತು ಹಿರಿಯರ ಬಗ್ಗೆ ಈಗಿನವರು ತೋರಿಸುತ್ತಿರುವ ಧೋರಣೆ ಎತ್ತಿ ತೋರಿಸಿದ್ದೀರಿ ತಮ್ಮ ಲೇಖನದಲ್ಲಿ. ತಮ್ಮ ಕಳಕಳಿ ಈಗಿನ ಸಂತತಿಗೆ ಅರ್ಥವಾಗುವುದು ಹೇಗೆ ಎನ್ನುವುದೇ ಚಿಂತೆ. ತಮ್ಮ ನಿರಂತರ ಲೇಖನಕ್ಕೆ ಧನ್ಯವಾದಗಳು

    ReplyDelete
  2. ತುಂಬ ಗಾಢವಾದ ವಿಷಯವನ್ನು ತಿಳಿಹಾಸ್ಯದ ಮುಸುಕಿನಿಂದ ಮುಚ್ಟಿದ್ದೀರಿ! ಆದಷ್ಟೂ ಸ್ವಾಲಂಭಿಗಳಾಗಿ
    ನಮ್ಮನ್ನು ನಾವು ನೋಡಿಕೊಳ್ಳಬೇಕು. ದೂರವಿದ್ದರೆ ನಮಗೇ ಮರ್ಯಾದೆ!

    ReplyDelete
  3. Thammellara sadabhiprayakke Dhanyavadagalu

    ReplyDelete

Post a Comment