ಮುತ್ತು ಕೊಡೋಳು ಬಂದ ಮೇಲೆ...

 ಮುತ್ತು ಕೊಡೋಳು ಬಂದ ಮೇಲೆ ತುತ್ತು ಕೊಟ್ಟೋಳ್ನ ಮರೆತವರು

 ಲೇಖಕರು : ಎಂ ಆರ್ ವೆಂಕಟರಾಮಯ್ಯ 


 ಶೀರ್ಷಿಕೆಯಲ್ಲಿನ ಗಾದೆಯನ್ನು ಕೆಲವರು ಸಮ್ಮತಿಸಬಹುದು, ಮತ್ತೆ ಕೆಲವರು, ಎಲ್ಲರೂ ಹಾಗಿರೊಲ್ಲಾ, ಯಾರೋ ಕೆಲವರು ಹಾಗಿರಬಹುದು ಅನ್ನಬಹುದು. ಆದರೆ ನನ್ನ ಅನುಭವ, ಅಂದರೆ ನಾ ಸ್ವತಃ ನೋಡಿದ್ದು, ಅವರಿವರಿಂದ ಕೇಳಿದ್ದು, ಓದಿದ್ದರ ಅನುಸಾರ ಗಾದೆ ಬಹುಶಃ ಜನಸಂಖ್ಯೆಯ ಶೇ 60-65 ರಷ್ಟು ಮಂದಿ ಜನಕ್ಕೆ ಅನ್ವಯಿಸುತ್ತದೆ ನಿಸುತ್ತದೆ. ‘ಲೋಕೋ ಭಿನ್ನ ರುಚಿಃಎಂಬ ಗಾದೆಯಂತೆ ಅವರವರ ಅಭಿಪ್ರಾಯ ಅವರವರಿಗೆ, ನಾ ಕಂಡ ಒಂದು ಕುಟುಂಬದಲ್ಲಿ ಶೀರ್ಷಿಕೆ ಯಲ್ಲಿನ ಗಾದೆ ಕಾರ್ಯತವಾದ ರೀತಿಯ ಕಿರು ಚಿತ್ರಣ ಹೀಗಿದೆ :

 ಶ್ರೀಮತಿ ಸುಂದರರಾಜ್ (ನಿಜವಾದ ಹೆಸರುಗಳನ್ನು ಬದಲಿಸಿ ಇಲ್ಲಿ ಬಳಸಿದೆ) ರದು ಮಧ್ಯಮ ವರ್ಗದ ಕುಟುಂಬ. ‘ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ’ ಎಂಬಂತೆ ಸಮತೋಲನ ಪಾಲಿಸಿದ ಕುಟುಂಬ. ಇಬ್ಬರದೂ ಅನ್ಯೋನ್ಯ ದಾಂಪತ್ಯ. ‘ಮೇಡ್ ಫಾರ್ ಈಚ್ ಅದರ್’ ಎಂಬಂತೆ ಇದ್ದರು ಎಂದರೂ ಮಾತು ತಪ್ಪಾಗಲಾರದು. ದಾಂಪತ್ಯ, ಸಂಸಾರ ಎಂದ ಮೇಲೆ ಮುಂದೇನಾಗುತ್ತೆ ! ಮಾಮೂಲಾಗಿ ಎಲ್ಲರಿಗೂ ಆದಂತೇನೇ ಇವರಿಗೂ ಆಯಿತು ಇಬ್ಬರು ಮಕ್ಕಳು. ಮಕ್ಕಳೇ ! ಎಂತಾದ್ದು ? ಎಂದು ನೀವು ವಿಚಾರಿಸೋಕೆ ಮುಂಚೆ ನಾನೇ ಹೇಳಿಬಿಡ್ತೇನೆ. ಗಂಡು ಮಕ್ಕಳಾದರು. , ಗಂಡೇ ! ರತ್ನದ ಗುಂಡುಗಳು, ಅಸೆಟ್ಸ್, ಅರ್ಥತ್ ಆಸ್ತಿ, ಇವರಿಗಾಗಿ ಖರ್ಚು ನಾಸ್ತಿ, ಇಬ್ಬರು ಮಕ್ಕಳು ದೊಡ್ಡವರ ಆದ ಮೇಲೆ ಅವರ ಸಂಪಾದನೆ ನಮ್ಮ ಕೈಲಿಡತಾರೆ, ತೊಗೊಪ್ಪಾ ನಮ್ಮ ಸಂಬಳ ಅಂತಾ. ಒಳ್ಳೆ ಉದ್ಯೋಗ, ಉನ್ನತ ಅಧಿಕಾರ. ಹೆಚ್ಚು ಸಂಬಳ. ಶ್ರೀಮಂತ ಮನೆತನದ ಹುಡುಗಿ ಇವರ ಪತ್ನಿಯಾಗಿ ಬಂದರೆ ಅವಳ ಜೊತೆ ಅವಳ ಅಪ್ಪನ ಆಸ್ತಿ ಎಲ್ಲಾ ನಮ್ಮ ಹುಡುಗರಿಗೇ, ಅಂದರೆ ಅವು ನಮ್ಮದೇ ಆಗುತ್ತೆ ಅಲ್ವೇ ! ಆಮೇಲೆ ಮೈ ತುಂಬಾ ಆಭರಣ, ಓಡಾಡೋದಕ್ಕೆ ಭರ್ಜರಿ ಕಾರು, ಬಂಗಲೆ, ಆಳು, ಸೇವಕರು, ಒಳ್ಳೆಯ ಥಳಿಯ ನಾಯಿ ಹೀಗೇ ಮಕ್ಕಳು ಇನ್ನೂ ಶಿಶುಗಳಾಗಿರುವಾಗಲೇ ಅವರು ಭವಿಷ್ಯದಲ್ಲಿ ಅನುಭವಿಸಬಹುದಾದ ವೈಭವೋ ಪೇತ ಜೀವನದ ಕನಸು ಕಂಡವರು ದಂಪತಿಗಳು

 ಗಂಡು ಮಕ್ಕಳು ಎಂದರೆ ಸಾಮಾನ್ಯವೇ ! ಹೆಚ್ಚಿನ ಸಂಖ್ಯೆಯ ಮಾತಾ ಪಿತರ ಅಭಿಪ್ರಾಯದಂತೆ, ಬಂಗಾರದ ಮೊಟ್ಟೆ ಇಡುವ ಕೋಳಿಗಳಲ್ಲವೇ ? ಕನಸು ನನ ಸಾಗಬೇಕೆಂದು ಮಕ್ಕಳನ್ನು ಮುದ್ದಾಗಿ ಸಾಕಿದರು. ಬಡತನವಿದ್ದರೂಋಣಂ ಕೃತ್ವಾ ಘೃತಂ ಪಿಬೇತ್ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಗಾದೆ ಪಾಲಿಸಿ ಮಕ್ಕಳು ಕೋರಿದ್ದಕ್ಕೆನೋಎಂ¨ ಪದವೇ ಇಲ್ಲ ಎಂಬಂತೆ ಕೋರಿದ್ದು ತಕ್ಷಣ ಅವರ ಕೈಲಿ ತಂದಿಡ್ತಿದ್ದರು. ಇವರ ಅದೃಷ್ಟ ಚೆನ್ನಾಗಿತ್ತು. ‘ ಕ್ಲಾಸ್ಎಂದು ಹೆಸರು ಪಡೆದ ಶಾಲೆ ಕಾಲೇಜುಗಳಲ್ಲಿ ಶಿಕ್ಷಣ ಸಿಕ್ಕಿತು, ಪರಿಣಾಮ. ಇಬ್ಬರು ಮಕ್ಕ್ಕಳಿಗೂ .ಹೆಚ್ಚು ಸಂಬಳ ಸಿಗುವ ಉದ್ಯೋಗಗಳು ದೊರೆತವು.

 ಮಕ್ಕಳು ವಯಸ್ಸಿಗೆ ಬಂದಿವೆ. ಆದಷ್ಟೂ ಬೇಗ ಮದುವೆ ಮಾಡಿಬಿಡಬೇಕು, ನಿಧಾನಿಸಿದರೆ ಲವ್ವು ಬೊವ್ವು ಅಂತಾ ಯಾರೋ ಗತಿ ಇಲ್ಲದೋಳ್ನ ಕಟ್ಟಿಕೊಂಡು ಬಂದರೆ ನಾವು ಇವ್ರ ಬಗ್ಗೆ ಕಂಡ ಕನಸ ನನಸಾಗ ಬೇಡವೇ ? ಎಂದು ಯೋಚಿಸಿದರು ಹೆತ್ತವರು, ಇದೆಲ್ಲಾ ಸಹಜ ಪ್ರಕ್ರಿಯೆಳೇ ಅಲ್ಲವೇ ! ಮುಂದುವರಿದ ಶ್ರೀಮಂತ ಮನೆಗಳಿಂದ ಹೆಣ್ಣುಗಳನ್ನು ಹುಡುಕಾರಲಾರಂಭಿಸಿದರು. ಸಿರಿವಂತರೊಂದಿಗೆ ಸರಿಯಾಗಿ ತೂಗೋರು ಸಿರಿವಂತರೇ ಅಲ್ವೇ ? . ‘ಋಣಾನುಬಂ ರೂಪೇಣ’ ಎಂಬಂತೆ ಇಬ್ಬರು ಮಕ್ಕಳಿಗೂ ಸಿರಿ ತಂದ ಸೊಸೆಯರೇ ಸಿಕ್ಕಿದರು.

  ವೇಳೆಗೆ ಸಂದರರಾಜ್ 60 ವಯಸ್ಸು ದಾಟಿದ್ದು ವೃತ್ತಿಯಿಂದ ನಿವೃತ್ತರಾಗಿ ದ್ದರು, ಕೂಡಿಟ್ಟಿದ್ದ ಕಾಸೆಲ್ಲಾ ವೇಳೆಗೆ ಮಕ್ಕಳಿಗಾಗಿ ವೆಚ್ಚ ಮಾಡಿದ್ದ ಪರಿಣಾಮ ಕೈ ಖಾಲಿಯಾಗಿತ್ತು. ವಯೋ ಸಹಜ ಹಲವು ಕಾಯಿಲೆಗಳು ಇವರಲ್ಲಿ ಮನೆ ಮಾಡಿದ್ದುವು. ಅನತಿ ಕಾಲದಲ್ಲೇ ಸುಂದರರಾಜ್ ವೈದ್ಯರೇ ಪತ್ತೆಮಾಡಲಾಗದ ಕಾಯಿಲೆಗೆ ಸಿಲುಕಿ ವಿಧಿವಶರಾದರು, ಈಗ ಶ್ರೀಮತಿ ರಾಜ್ ಒಂಟಿಯಾದರು

 ಇತ್ತ ಮನೆ ಸೊಸೆಯಂದಿಯರು ಇಲಿಯಂತೆ ಮನೆಹೊಕ್ಕವರು ವೇಳೆಗೆ ಹುಲಿಗಳಾಗಿ ಗರ್ಜಿಸಲಾರಂಭಿಸಿದ್ದರು. ತಮ್ಮ ಪತಿಯ ಮೇಲೆ ಏಕಸ್ವಾಮ್ಯ ಹಕ್ಕು ಸ್ಥಾಪಿಸಿದ್ದರು, ತಮ್ಮ ರಾಗಕ್ಕೆ ತಕ್ಕಂತೆ ಕುಣಿಯಬೇಕಾದ ಕಲೆಯನ್ನು ಪತಿಗೆ ಕಲಿಸಿದ್ದ ಪರಿಣಾಮ, ಪತ್ನಿ ಗೀಚಿದ ಗೆರೆಯನ್ನು ದಾಟುವ ಸಾಹಸ ಮಾಡಲಾರದದಂಇಲ್ಲದ ಪತಿಯಾಗಿ ಉಳಿದರು.

 ಅದೊಂದು ದಿನ ಗಂಡ ಹೆಂಡತಿ ಇಬ್ಬರೇ ಏಕಾಂತದಲ್ಲಿದ್ಧಾಗನಾನು ನನ್ನ ಹೆತ್ತವರಿಗೆ ಒಬ್ಬಳೇ ಮಗಳು, ಅವರಿಗೆ ಗಂಡು ಮಕ್ಕಳಿಲ್ಲವಾದ ಕಾರಣ, ಅವರು ನನ್ನೇ ಗಂಡು ಹೆಣ್ಣು ಎಂದು ಸಾಕಿದ್ದಾರೆ. ಈಗ ಅವರಿಗೂ ವಯಸ್ಸಾಗಿದೆ. ಹೆಚ್ಚು ಆದಾಯವಿಲ್ಲ ಮ್ಮ ಅಪ್ಪ ಜೀವನ ನಡೆಸೋದು ಕಷ್ಟಕರವಾಗಿದೆ. ಆವರ ಆರೋಗ್ಯ ವಿಚಾರಿಸೋರಿಲ್ಲ. ಅದಕ್ಕೇ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ನಾವಿಬ್ಬರೂ ಅವರ ಮನೆಯಿಲ್ಲೇ ಇದ್ದರೆ ನಾವು ತಿಂದಿದ್ದು ಅವರಿಗೂ ಆಗುತೆ.್ತ ಯಾವ ಹೊತ್ತಿನಲ್ಲಿ ಏನು ತೊಂದರೆಯಾದರೂ ತಕ್ಷಣ ಅವರಿಗೆ ಚಿಕಿತ್ಸೆ ಕೊಡಿಸಬಹುದು. ನನ್ನೀ ಮಾತಿಗೆ ನೀವು ಯಾವ ಕ್ಷೇಪಣೆಯನ್ನೂ ಎತ್ತುವಹಾಗಿಲ್ಲಎಂದಳಾ ಹಿರಿಯ ಪುತ್ರನ ಪತ್ಮಿ. ನನಗಿಷ್ಟವಿಲ್ಲಪ್ಪಾ ಮನೆಯ ಅಳಿಯ ಆಗೋದಕ್ಕೆ, ಎಂದ ಪತಿ. ನೋ, ನೋ, ನಥಿಂಗ್ ಡೂಯಿಂಗ್, ನಾಳೆ 1 ನೆಯ ತಾರೀಕಿಗೇ ಇಲ್ಲಿನ ಲಗ್ಗೇಜ್ ಅಲ್ಲಿಗೆ ಶಿಫ್ಟ್ ಆಗುತ್ತೆ ಎಂದಳಾ ಪತಿ.್ನ ನಾವು ಇಲ್ಲಿಂದ ಹೊರಟರೆ ಅಮ್ಮನ್ನ ನೋಡೋರು ಯಾರು ? ಎಂಬ ಮಾತು ಗಂಡನ ಬಾಯಿಂದ ಬರುತ್ತಿದ್ದ ಹಾಗೇ ಯಾಕರೀ ! ನಿಮ್ಮ ತಮ್ಮ ಇಲ್ವಾ ಇಲ್ಲಿ ! ನೋಡಿಕೊಳ್ಞಲಿ. ಅಗತ್ಯವಿದ್ದರೆ ನಾವೂ ಆಗಾಗ್ಗೆ ಬಂದ್ ಹೋಗ್ತಿರೋಣ ಎಂದು ಗಂಡನ ಬಾಯಿ ಮುಚ್ಚಿಸಿದಳು.. ನನ್ಮಾತು ನಿಮಗೆ ಇಷ್ಟ ಇಲ್ಲ ಅಂದ್ರೆ ನೀವು ಇಲ್ಲೇ ಅಮ್ಮನ ಪಾದ ಸೇವೆಮಾಡ್ತಾಯಿರಿ, ನಾ ಹೋಗ್ತೇನೆ ಅಮ್ಮನ ಮನೆಗೆ ಎಂ¨ ಹೆದರಿಕೆ ಬಾಣ ಎಸೆದಳು.

 ಓಹೋ ! ಇವಳು ಸಾಮಾನ್ಯಳಲ್ಲ, ಆಡಿದಂತೆ ನಡೆಯುವವಳೇ, ಇದಕ್ಕೆ ನಾ ಒಪ್ಪದಿದ್ದರೆ ನನ್ನ ಮೇಲೆ ಡೊಮೆಸ್ಟಿಕ್ ವಯೊಲೆನ್ಸ್ ಕೇಸೋ, ಡೈವೋರ್ಸ್ ಪತ್ರ ಬರೆದು ಜೀವನಾಂಶ ಕೇಳೋದು, ಅದಕ್ಕೆ ಪೋಲೀಸ್, ಕೋರ್ಟು, ಲಾಯರ್, ಅಯ್ಯೋ ಬೇಡಪ್ಪಾ ಮಾನಸಿಕ ಹಿಂಸೆ, ಅಮ್ಮನಿಗೆ ಏನಾದರೂ ಸಮಾಧಾನ ಹೇಳಿ ಇವಳ ಮಾತಿಗೆ ಅಸ್ತು ಎನಿಸಿಕೊಳ್ಳೋಣ ಎಂದುಕೊಂಡ  ಪತಿರಾಯ. ಅದೊಂದು ದಿನ ಅಮ್ಮ ಒಳ್ಳೆ ಮೂಡ್ನಲ್ಲಿದ್ದಾಗ ಮಗರಾಯ ತನ್ನ ಪ್ರಸ್ತಾವನೆ ಮುಂದಿಟ್ಟುನಾ ಏನ್ ಮಾಡ¯ಮ್ಮಾ ! ಅವಳದು ಒಂದೇ ಹಠ, ಹಿಡಿದ ಪಟ್ಟು ಸಡಿಲಗೊಳಿಸ್ತಿಲ್ಲ. ನಾ ನಿನ್ನೂ ಬಿಡೋ ಹಾಗಿಲ್ಲ, ಅವಳನ್ನೂ ಬಿಡೋಹಾಗಿಲ್ಲಎಂದು ಪೇಚಾಡಿಕೊಂಡ.

 ನಾನೆಷ್ಟು ದಿನಾ ್ತೀನಪ್ಪಾ ಇನ್ನ ! ನೀವು ನೂರ್ಕಾಲ ಬಾಳಬೇಕಾದವರು, ಗಂಡ ಹೆಂಡತಿ ನಡುವೆ ನನಗಾಗಿ ವಿರಸ ತಂದ್ಕೋಬೇಡಿ, ಅವಳು ಹೇಳಿದಂತೆ ನಡಕೋ ಎಂದಳಾ ಅಮ್ಮ. ಮನದಲ್ಲೇ ಅಮ್ಮನಿಗೆ ಥ್ಯಾಂಕ್ಸ್ ಹೇಳಿದ ಮಗ ನಿಶ್ಚಿಂತ ನಾದ ಸಮಸ್ಯೆ ಪರಿಹಾರವಾಗಿದ್ದಕ್ಕೆ.

 ಇದರೊಂದಿಗೆ ಮನೆಯಿಂದ ಹಿರಿ ಮಗ, ಸೊಸೆ ಹೊರ ಹೊರಟರು. ಬೆಳವಣಿಗಗೆಳನ್ನೆಲ್ಲಾ ಮೌನವಾಗಿ ವೀಕ್ಷಿಸುತ್ತಿದ್ದ ಕಿರಿಯ ಸೊಸೆ ಮನದಲ್ಲೇ ತನ್ನ ಯೋಜನೆಯ ರೂಪು ರೇಶೆಗಳನ್ನು ಅಂತಿಮಗೊಳಿಸತೊಡಗಿದಳು. ಅದೊಂದು ಶುಭ ಮುಹೂರ್ತದಲ್ಲಿ ತನ್ನ ಪತಿಯ ಮುಂದೆ ಘೋಷಿಸಿಯೇಬಿಟ್ಟಳು ನೋಡಿದರೇನ್ರಿ , ನಿಮ್ಮ ಅಣ್ಣ ! ಹಿರಿಯನಾಗಿ ಇಲ್ಲಿ ನಿಂತು ಅಮ್ಮನ ನಿಮ್ಮ ಯೋಗಕ್ಷೇಮ ನೋಡಬೇಕಾದವನು ಮೆಲ್ಲಗೆ ಜವಾಬ್ದಾರಿಯಿಂದ ಹೇಗೆ ನುಣಚಿಕೊಂಡ ! ಮಳ್ಳಿಗಳು. ಏನೂ ತಿಳಿಯದಂತೆ ಇದ್ಚವರು, ದಿಢೀರನೇ ಇಲ್ಲಿಂದ ಕಂಬಿ ಕಿತ್ತರು. ಇನ್ನು ನಾವೂ ಅಷ್ಟೇ, ಬೇರೆ ಮನೆ ಮಾಡಿಕೊಂಡು ಹೊರಟು ಹೋಗೋಣ. ಇಲ್ಲೇ ಇದ್ರೆ ನಿಮ್ಮಮ್ಮನ ಕಾಯಿಲೆ ನಮಗೂ ಮಕ್ಕಳಿಗೂ ಅಂಟಿದ್ರೆ ಬಾಧೆ ಪಡಬೇಕಾಗುತ್ತೆ. ಚೆನ್ನಾಗಿ ಯೋಚನೆ ಮಾಡಿ ಬೇಗ ಒಂದು ನಿರ್ಧಾರಕ್ಕೆ ಬನ್ನಿ. ‘ಆಲಸ್ಯಂ ಅಮೃತಂ ವಿಷಂಎಂಬ ಗಾದೆ ನೆನಪಿಡಿ ಎನ್ನುತ್ತಾ ಪತಿಯ ಮೇ¯ ಮನ್ಮಥನ ಪುಷ್ಪ ಬಾಣ ಪ್ರಯೋಗಿಸಿದಳು.

 ಅಣ್ಣ ಹೊರಟುಹೋದ. ಹಿಂದೇನೇ ನಾವೂ ಬೇರೆ ಹೋಗ್ತೀವಿ ಅಂದರೆ ಅಮ್ಮನ್ನ ನೋಡೋರು ಯಾರು ? ಅವಳ್ನ ಅನಾಥಳನ್ನಾಗಿ ಮಾಡಿ ನಮ್ಮ ಸ್ಭಾರ್ಥ ಸಾಧಿಸ್ಕೋಬೇಕಾ ? ಬೇರೆ ಮನೆ ಮಾಡಿದರೆ ದುಬಾರಿ ಬಾಡಿಗೆ, ಅಡ್ವಾನ್ಸ್, ಎಲ್ಲಾ ಎಲ್ಲಿಂದ ಕಟ್ಟೋದು, ನನ್ನ ಒಬ್ಬನ ಸಂಬಳದಿಂದ ಇದೆಲ್ಲಾ ಅಸಾಧ್ಯ. ನಿಮಗೆಲ್ಲಾ ಬುದ್ಧಿಗೆ ರಾಹು ಹೊಡೆದ ಹಾಗಿದೆ. ಇಲ್ಲೇ ನೆಮ್ಮದಿಯಿಂದ ಜೀವನ ಮಾಡೋಕಾಗೊಲ್ವಾ ! ಎಂದು ಗರಂ ಆದ ಪತಿ. ಒಬ್ಬನು ಗುರ್ ಎಂದರೆ ಎದುರಿಗಿರೋವ್ನು ಸುಮ್ಮನರ್ತಾನಾ, ಇನ್ನೂ ಹೆಚ್ಚಾಗೇ ರೇಗಿದಳು ಪತ್ನಿ. ಬೇರೆ ಮನೇಗೆ ಹೋದ ಮೇಲೆ ನಾನೂ ಕೆಲಸಕ್ಕೆ ಸೇರಿ ಸುಬಳ ್ತೀನಿ, ಸಂಸಾರ, ಬಾಡಿಗೆ, ಮಗು ಸ್ಕೂಲ್ ಫೀಸ್ ಇಬ್ಬರ ಸಂಬಳದಿಂದ ಸುಲಭವಾಗಿ ಮೇನೇಜ್ ಮಾಡೋಣ. ನೀವು ಮೊದಲು ಅಮ್ಮನ ಹತ್ರ ಮಾತಾಡಿ, ನೆನಪಿರುತ್ತಾ ನಾ ಹೇಳಿಕೊಟ್ಟ ಪಾಠಾಯೆಲ್ಲಾ ! ಹೂಂ ಹೋಗಿ ಮೊದಲು ಎಂದು ಜಬರಿಸಿದಳು ಗಂಡನ್ನ.

 ಅಂದು ಅಮ್ಮ ಶಿವನ ಸ್ತೋತ್ರ ಪಠಿಸುತ್ತಿದ್ಧಾಗ ಕಿರಿ ಮಗ ಮೆಲ್ಲಗೆ ಬಂದ ಅಮ್ಮನ ಪಕ್ಕದಲ್ಲಿ ಕುಳಿತ. ಅಮ್ಮ ಸ್ತೋತ್ರದ ಕಡೆ ಕಣ್ ಹಾಯಿಸಿದಾಗ ಸುಮ್ಮನಿದ್ದರೆ ಇನ್ನು ಹೊತ್ತಾಗುತ್ತೆ, ಹೇಳಿಯೇ ಬಿಡೊಣ ಎಂದು ಧೈರ್ಯ ತಗೊಂಡ್ ಅಮ್ಮಾ ! ಎಂದ. ಏನಪ್ಪಾ ನಿನ್ ಪೀಠೀಕೆ ? ನೀನೂ ಬೇರೆ ಹೋಗ್ತೀಯಾ ! ಚಿಂತಿಸಬೇಡ, ಹೋಗಿ ಎಲ್ಲಾದರೂ ಚೆನ್ನಾಗಿರು. ನಿಮ್ಮಪ್ಪ ಇದ್ದಿದ್ದರೆ ನೀವ್ ಹೀಗಾಗತಿದ್ರಾ ! ‘ಕಾಲಾಯ ತಸ್ಮೈ ನಮಃಹೋಗಪ್ಪಾ ಹೋಗು gಂದರು ಶಾಂತಚಿತ್ತರಾದ ತಾಯಿ,

 ಅಲ್ಲಮ್ಮಾ ನೀ ಕೋಪ, ಬಾಧೆ ಪಡೆಬೇಡ, ನನ್ನ ಮಗು ಸ್ಕೂಲಿಗೆ ಮನೆಯಿಂದ ಬಹಳ ದೂರ ಆಗ್ತಿದೆ. ದಿನಾ ಶಾಲೆಗೆ ಬಿಟ್ಟು ್ಕೊಂಬರೋದಕ್ಕೆ ನಡೆದು ಬರೋದಕ್ಕೆ ಆಗೊಲ್ಲ, ಕ್ಯಾಬ್ಗೆ ದುಡ್ಡು ಕೊಡೋಕೆ ದುಡ್ಡಿಲ್ಲ. ಅದಕ್ಕೇ ನಾನು ನನ್ನ ಮಾವನ ಮನೆ ಹತ್ರ ಮನೆ ಮಾಡಿದರೆ ಪಾಪುಗೆ ಶಾಲೆಗೆ ಹತ್ತಿರವೂ ಆಗುತ್ತೆ, ನನ್ನ ಹೆಂಡ್ತಿ ಕೆಲಸಕ್ಕೆ ಹೋದರೆ ಮಗೂನ ಅವಳ ಹೆತ್ತವರು ನೋಡ್ಕೊಳ್ತಾರೆ. ಇದರಿಂದ ನನಗೂ ಸ್ವಲ್ಪ ಹಣದ ಸಹಾಯ ಆಗುತ್ತೆ. ನೀ ಹೂಂ ಅಂದರೆ . .. ಅಂದು ಕ್ಷಣ ಮೌನಿಯಾದ. ಹೊತ್ತಿಗೆ ದುಃಖ ತಾಳಲಾರದೆ ಆಕೆಯ ಕಣ್ಗಳಲ್ಲಿ ನೀರು ತುಂಬಿ ಹೊರಗೆ ತೊಟ್ಟಿಕ್ಕಲಾರಂಭಿಸಿತು. ಗದ್ಗದಿತಳಾಗಿ, “ನೀವ್ಯಾರೂ ನನ್ನ ಬಳಿ ಇಲ್ದೆ ಹೋದ್ರೆ ನಾ ಸತ್ಹೋಗ್ತೇನೆ ಅಂತ ನೀವ್ ಅಂದ್ಕೊಂಡಿದ್ದೀರಾ ! ಹೆದರಬೇಡಿ, “ತಲ್ಲಣಿಸದಿರು ಕಂಡ್ಯ ತಾಳು ಮನವೆ ಪುಟ್ಟಿಸಿದ ದೇವ ತಾ ರಕ್ಷಿಸಲು ತಾನು ಹೊಣೆಗಾರನಾಗಿರಲು |ಎಲ್ಲರನು ಅವನೇ ಸಲಹುವನು ಇದಕೆ ಸಂಶಯವಿಲ್ಲಎಂದಿಲ್ಲವೇನಪ್ಪಾ ಕನಕದಾಸರು ! ‘ಅನಾಥೋ ದೈವ ರಕ್ಷಕಎಂಬಂತೆ ಅವನೇ ನನ್ನೂ ರಕ್ಷಿಸ್ತಾನೆ. ಹೋಗೋಕೆ ಸಿದ್ದಮಾಡಿಕೋ ಹೋಗು ಎಂದರಾ ಅಮ್ಮ.

 ಎರಡು ದಶಕಗಳ ಹಿಂದೆ ಇದೇ ಮಕ್ಕಳು ಅನ್ನ ತಿನ್ನದೆ ಬೇಡ ಎಂದು ಹಠ ಹಿಡಿದಾಗ ಆಕಾಶದಲ್ಲಿನ ಚಂದ್ರನ್ನ , ಬೀದಿ ನಾಯೀನ ತೋರಿಸಿ ತುತ್ತು ಬಾಯಿ ಗಿಟ್ಟೆ, ಬಲವಂತವಾಗಿ ತಿನ್ನಿಸ್ದೆ. ಓಡುತ್ತಾ ಬಿದ್ಧಾಗ ಇವನಿಗಾದ ಗಾಯಕ್ಕೆ ನಾ ಗಳ ಗಳನೆ ಅತ್ತೆ. ಮೈ ಬಿಸಿಯಾದಾಗ ಇವರ ಬಳಿ ಕೂತು ಸ್ವಾಮಿ ನಮ್ಮಪ್ಪ, ಇವನ ಜ್ವರ ನನಗೆ ವರ್ಗಾಯಿಸಿ ಇವನ್ನ ಜೋಪಾನ ಮಾಡಪ್ಪಾ ಎಂದು ದೇವನಿಗೆ ನಮಿಸಿದೆ. ಅಮ್ಮಾ ದೊಡ್ಡ ಹುದ್ದೆ ಸಿಕ್ತಮ್ಮಾ ಎಂದು ಇವರು ನನಗೆ ಹೇಳ್ದಾಗ ದೇವಾ ಇರ್ನ ನೂರ್ಕಾಲ ಬಾಳಿಸಪ್ಫಾ ಎಂದು ನಮಿಸಿದೆ ಆತನಿಗೆ. ನನ್ನ ಮನೇಗೆ ಒಳ್ಳೇ ಸೊಸೇರು ಬಂದ್ರು ಅಂತ ಹಿರಿ ಹಿಗ್ಗಿದೆ. ಆದರೆ ಇಂದು .. ! ಅವರೇನಾ ಇವರು … ! ಅನ್ನಿಸ್ಯಾಯಿದೆ. “ನೀನೇ ಸಾಕಿದಾ ಗಿಣೀ, ನಿನ್ನಾ ಮುದ್ದಿನಾ ಗಿಣೀ, ಹದ್ದಾಗಿ ಕುಕ್ಕಿತಲ್ಲೋ, ನಿನ್ನ ಹದ್ದಾಗಿ ಕುಕ್ಕಿತಲ್ಲೋಎನ್ನುತ್ತಾ ಗಳಗಳನೆ ಅತ್ತರು ಅಮ್ಮ. “ಮುತ್ತು ಕೊಡೋಳು ಬಂದಾಗ ತುತ್ಕೊಟ್ಟೋಳ್ನ ಮರೆತ ಕೃತಘ್ನರು, ಸ್ವಾರ್ಥಿಗಳು, ನೀಚರುಎನಿಸಿತು ಮಾತೆಗೆ, ಹಡೆದ ಜನನಿಗೆ.

 ಇಂದಿನ ಕಾಲಘಟ್ಟದಲ್ಲಿ ಬಹಳಷ್ಟು ಜನರು ಹೆತ್ತವರನ್ನು ಮೇಲೆ ಹತ್ತಲು ನೆರವಾಗುವ ಏಣಿಯಂತೆ ಬಳಸುತ್ತಿರುವುದು ಕಂಡು ಬರುತ್ತಿದೆ. ಮೇಲೇರಲು ಏಣಿ ಬೇಕೇ ಬೇಕು ಅಲ್ವೇ ! ಮೇಲೆ ಹತ್ತಿದ ಮೇಲೆ ಕೆಳಗ್ಯಾರು ಇಳೀತಾರೆ ? ಈಗ್ಯಾಕೆ ಬೇಕು ಥೂ ಏಣಿ ! ಮಕ್ಕಳು ಸಣ್ಣವರಿದ್ದಾಗ ಅವರ ಸಿಂಬಳ ಒರೆಸಿ, ಶರೀರದ ಕೊಳೆ ತೆಗೆದು ಸ್ನಾನ ಮಾಡಿಸಿ ಬಾಯಾಗೆ ಬುವ್ವ ಇಟ್ಟು, ಅತ್ತಾಗ ಅಳಬೇಡ, ಅತ್ತರೆ ಗೊಗ್ಗ ್ತಾನೆ ಅಂತ ಪಾಪುವನ್ನು ಸೆರಗಿನೊಳಗೆ ಮಲಗಿಸಿ, ನಿದ್ದೆ ಮಾಡಿಸೋದು ಹೆತ್ತ ಅಮ್ಮನಲ್ಲದೆ ಮತ್ಯಾರು ಮಾಡ್ತಾರೆ ಬಿಟ್ಟಿ ಚಾಕರಿ ?

 ಮಕ್ಕಳು ಬೆಳೆದು ದೊಡ್ಡವರಾಗಿ ವಿದ್ಯೆ ಬುದ್ದಿ ಕಲಿತು, ಉದ್ಯೋಗಸ್ಥರು, ವಿವಾಹಿತರಾದವರಿಗೆ ತುತ್ತು, ಮುತ್ತು ಕೊಡಲೊಬ್ಬ ಹೆಣ್ಣಿರುವಾಗ ದೊಡ್ಡ ಗುಮ್ಮನಂತೆ ಕಾಣುವ ಅಮ್ಮ ಯಾಕೆ ಬೇಕು ! ಆದಷ್ಟೂ ಬೇಗ ಅಮ್ಮನೆಂಬ ರೋಗದ ಗೂಡಿಂದ ದೂರಾಗೋಣ ಅನ್ನೋಕೆಟ್ಟ ಮನಸ್ಥಿತಿ ಇಂದು ಹೆಚ್ಚಿನ ಜನರಲ್ಲಿ ಇರುವುದು ಬಲು ದುರದೃಷ್ಟಕರ ಬೆಳವಣಿಗೆಯಾಗುತ್ತಿದೆ. ಮಾನವೀಯತೆ, ಕೃತಜ್ಞತೆ, ಪ್ರೀತಿ, ವಿಶ್ವಾಸ ಇರಬೇಕಾದ ಸ್ಥಳದಲ್ಲಿ ಅಸುರೀ ಗುಣ, ಸ್ವಾರ್ಥ ನಿರ್ಲಕ್ಷ್ಯ ಮೊದಲಾದ ದುರ್ಗುಣಗಳೇ ಇಂತಹಾ ಅಮಾನವೀಯ ನಡೆ ನುಡಿಗೆ ಕಾರಣವಾಗುತ್ತಿದೆ. ಮಾನವ ದಾನವನಾಗಿ ಪೂರ್ತಿಯಾಗಿ ಪರಿವರ್ತನೆಯಾಗುವ ಮುನ್ನವೇ ವರ್ಗವನ್ನು ತಿದ್ದಿ, ಸರಿ ದಾರಿಗೆ. ತರಲು ಸಂಬಂಧಿತರೆಲ್ಲರೂ ಕಾರ್ಯೋನ್ಮುಖರಾಗಲು ಇಂದಿನ ದಿನವೇ ಶುಭ ದಿನವು.       

Comments