ಕಾಸು ಬೇಕೋ ! ಕೂಸು ಬೇಕೋ ?

  ಕಾಸು ಬೇಕೋ ! ಕೂಸು ಬೇಕೋ ?

                                  ಲೇಖಕರು : ಎಂ ಆರ್ ವೆಂಕಟರಾಮಯ್ಯ                  

    ಶೀರ್ಷಿಕೆಯಲ್ಲಿನ ವಿಷಯದ ಬಗ್ಗೆ ನಿರ್ಧಾರ ಬಹಳ ಕಷ್ಟಕರ ಹಾಗೂ ಕ್ಲಿಷ್ಟಕರ ಎಂದರೆ ಮಾತು ಉತ್ಪ್ರೇಕ್ಷೆ  ಎನಿಸದು. ಏಕೆಂದರೆ ಜೀವಿಗೆ ಕಾಸೂ ಬೇಕು. ಕೂಸೂ ಬೇಕು. ಹೀಗಿರುವಾಗ ಅದು ಬೇಕೋ, ಇದು ಬೇಕೋ ! ಯಾರು ಹಿತವರು ನಿನಗೆ ಈ ಇಬ್ಬರೊಳಗೆ ? ಈ ಯಾವುದಾದರೂ ಒಂದನ್ನು ಕೋರು ಎಂದರೆ ಇದು ಹೇಗೆ ಸಾಧ್ಯ ? ಏನೂ ಹೇಳಲಾರದ ಸ್ಥಿತಿಯಾಗುತ್ತದೆ.  

ಮೊದಲು ಶೀರ್ಷಿಕೆಯಲ್ಲಿನ ಎರಡನೆಯ ಆಯ್ಕೆ, ‘ಕೂಸು’ ಎಂಬ ಬಗ್ಗೆಯೇ ಚರ್ಚಿ ಸೋಣ. ‘ಕೂಸು’ ಎಂದರೆ ಮಗು, ಶಿಶು, ಹಸುಳೆ, ಎಂಬ ಕನ್ನಡ ಎಂಬ ಅರ್ಥಗಳು, ಬೇಬಿ, ಚೈಲ್ಡ್, ಇನ್‌ಫೇಂಟ್, ಮೊದಲಾದ ಇಂಗ್ಲಿಷ್ ಅರ್ಥಗಳಿವೆ. ಭಾರತ ದೇಶದ ಸಂಪತ್ತೆಂದರೆ ಮಕ್ಕಳು. ”ಮನೆಗೆ ಮಕ್ಕಳೇ ಸೌಭಾಗ್ಯ, ಆಭರಣ, ಮನೆಗೆ ಮಕ್ಕಳು, ಮರಕ್ಕೆ ತುಂಬಾ ಎಲೆ, ಹೂವು, ಕಾಯಿಗಳೇ ಆಭರಣ, ಅಲಂಕಾರ, ದೊಡ್ಡ ಸಂಪತ್ತು, ಮನೆಯಲ್ಲಿ ಮಕ್ಕಳು ತುಂಬಿದ್ದು, ಅವರ ನಗೆ, ಚೇಷ್ಟೆ, ತುಂಟಾಟ, ಕೂಗಾಟ, ಗಲಾಟೆಗಳನ್ನು ಯಾವ ತಂದೆ ತಾಯಿ ತಾನೇ ಇಷ್ಟಪಡುವುದಿಲ್ಲ !  ಮನೆಯ ತುಂಬಾ ಮಕ್ಕಳು ತುಂಬಿದ್ದರೆ ಅದೇ ನಂದನವನ, ಮಕ್ಕಳಿದ್ದರೆ ಮನಿ ಚಂದ, ಅವುಗಳ ಕಿಲ ಕಿಲ ನಗು ಇನ್ನೂ ಚಂದ, ದುಡಿ ದುಡಿದು ದಣಿದು ತಂದೆ ತಾಯಿಗಳು ಮನೆಗೆ ಬಂದರೆ ಅವರ ಮೈ ಮೇಲೆ ಬಿದ್ದು ಹೊರಳಾಡಿದರೆ ಬ್ಯಾಸರಿಕಿ, ಆಸರಿಕೆ ಅಳಿದಾವು” ಎಂದು ಜನಪದರು ಹಾಡಿದ್ದಾರೆ. ಮಕ್ಕಳ ಲಾಲನೆ ಪಾಲನೆ ಎಂದೂ ತಂದೆ ತಾಯಿಯರಿಗೆ ಅಂದಿನ ದಶಕಗಳಲ್ಲಿ ಬೇಸರ ತರುತ್ತಿರಲಿಲ್ಲ ಎಂಬುದಕ್ಕೆ ಸಮರ್ಥನೀಯವಾಗಿಯೋ ಎಂಬಂತೆ “ಅತ್ತರೆ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೆ ಕೆಡಲಿ ಮನಿ ಕೆಲಸ, ನನ ಕಂದ, ಮಕ್ಕಳಿರಲವ್ವ ಮನಿ ತುಂಬಾ” ಎಂಬ ಜಾನಪದ ಗೀತೆ, ‘ಮಕ್ಕಳಾದರೆ  ಕೇಡೇ ಮಳೆ ಬಂದರೆ ಕೇಡೇ’ ಎಂಬ ಗಾದೆಯೂ ಗ್ರಾಮೀಣ ಪ್ರದೇಶಗಳಲ್ಲಿ ಬಳಕೆಯಲ್ಲಿವೆ. ಇವೆಲ್ಲಾ ಕೆಲ ದಶÀಕಗಳ ಹಿಂದಿನ ಹಿರಿಯರ ಮಾತುಗಳನ್ನು ಅಂದಿನ ಜನ ಸಂತಸದಿAದ ಸ್ವೀಕರಿಸಿ ತಮ್ಮದಾಗಿಸಿಕೊಂಡಿದ್ದರು. 

      ಆದರೆ ಇಂದು ಆ ಕಾಲ ಬದಲಾಗಿದೆ. ‘ಮನೆಯ ತುಂಬಾ ಮಕ್ಕಳು’ ಎಂಬ ಕಾನ್ಸೆಪ್ಟ್ ಅನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲೂ ಸಹಾ ಹೆದರುತ್ತಾರೆ ಹಲವರು. ‘ನಾವಿಬ್ಬರು- ನಮಗಿಬ್ಬರು, ಆರತಿಗೊಂದು-ಕೀರ್ತಿಗೊಂದು ’ ಎಂಬ ಘೋಷಣೆ ಕೆಲ ಕಾಲ ನಮ್ಮ ಸಮಾಜದಲ್ಲಿ ನಲಿದಾಡಿ, ನಂತರದಲ್ಲಿ, ‘ಸಿಂಗಲ್ ಚೈಲ್ಡ್ ನಾರ್ಮ್’ ಸಧ್ಯ, ಗಂಡೋ-ಹೆಣ್ಣೋ, ಯಾವುದೋ, ಮಗು ಎಂಬುದೊAದಿದ್ದರೆ ಸಾಕು ಎಂಬುದು ಹೆಚ್ಚಿನ ಜನರ ಮಾತಾಗಿತ್ತು ಸ್ವಲ್ಪ ಕಾಲ.  

     ಇಷ್ಟೆಲ್ಲಾ ಹೇಳಿದ್ದು ಕೇಳಿ, ನಿಜ ನಿಮ್ಮ ಮಾತುಗಳು. ‘ಮಗುವಿಲ್ಲದ ಮನೆ ಮನೆಯೇ ಅಲ್ಲ. ಅದು ‘ಗೃಹಿಣಿಯಿಲ್ಲದ ಗೃಹದಂತೆ’ ಆದಕಾರಣ ಕೂಸು ಬೇಕು .ಎಂ¨ ನಿರ್ಧಾರಕ್ಕೆ ಬರಬಹುದು.  ಇವರು.

    ಹಾಗಾದರೆ ‘ಕಾಸಿನ ಮಾತು ? ಇದು ಬೇಡವೇ, ಕೂಸೊಂದಿದ್ದರೆ ಸಾಕೇ ? ಎಂ¨ ಪ್ರಶ್ನೆ ಎತ್ತಿದಾಗ, ಏ, ಕಾಸಿಲ್ಲದ ಬದುಕನ್ನು ಊಹಿಸಲೂ ಸಹಾ ಆಗದು. ಅಷ್ಟರ ಮಟ್ಟಿಗೆ ಕಾಸು ನಮ್ಮ ಜೀವನದೊಂದಿಗೆ ಹಾಸುಹೊಕ್ಕಾಗಿ ಪ್ರತ್ಯೇಕಿಸಲಾರದಷ್ಟು ಗಟ್ಟಿಯಾಗಿ ಬೆಸೆದುಕೊಂಡಿದೆ. ‘ದುಡ್ಡಿದ್ವವನು ದೊಡ್ಡಪ್ಪ’, ದುಡಿಲ್ಲದವನು ದಡ್ಡನಪ್ಪ’ ಕಾಸೇ ಕೈಲಾಸ’, ಕಾಸು ತರುವ ಆದಾಯದಿಂದ ಮನುಷ್ಯ ಸುಖ ಜೀವನ ನಡೆಸಲು ಸಾಧ್ಯ. ಸಮಾಜದಲ್ಲಿ, ಅಧಿಕಾರ, ಅಂತಸ್ತು, ಘನತೆ, ಗೌರವ, ಪ್ರತಿಷ್ಠೆಗಳನ್ನು ಗಳಿಸಿ ಕೊಡುವುದು ಕಾಸೇ. ಇವೆಲ್ಲವೂ ಭೋಗ ಜೀವನದ ಗುಣ ಲಕ್ಷಣಗಳಾದ್ದರಿಂದ ಎಲ್ಲರೂ ಸಿರಿವಂತರಾಗಲು ಜೀವನವೆಲ್ಲಾ ಶ್ರಮಿಸುತ್ತಾರೆ. ಹಣವೇ ಪ್ರಧಾನ, ಅದರ ಗಳಿಕೆಯೇ ಮನುಷ್ಯ ಜೀವನದ ಪರಮೋಚ್ಛ ಗುರಿ ಎಂಬ ತಾರಕ ಮಂತ್ರವನ್ನು ಜಪಿಸಿ, ‘ಕಾಸೂ ಬೇಡ ಎನ್ನಲಾರೆ’ ಎನ್ನುವವರು ಈ ವರ್ಗದ ಜನ.

    ‘ಕಾಸೂ ಬೇಕು ಕೂಸೂ ಬೇಕು ‘ ಎಂದ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ್ದು,’ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂ¨ ಗಾದೆ.  ನೆಂಟರು ಎಂದರೆ ನಮಗೆ ಬಹಳ ಪ್ರೀತಿ. ಇವರು ಆಗಾಗ್ಗೆ ನÀಮ್ಮ ಮನೆಗೆ ಬರುತ್ತಿರಬೇಕು, ಆದರೆ ಅವರಿಗೆ ಊಟ ಹಾಕೋಹಾಗಿಲ್ಲ. ಹಾಕಿದರೆ ಅಕ್ಕಿ ಖರ್ಚಾಗುತ್ತಲ್ಲಾ ! ನಿಮ್ಮ ಈ ವರ್ತನೆ ‘ಮಾಟಲಕು ಮಾ ಇಂಟಿಕಿ ರಾ, ಕೂಟಿಕಿ ಗುರಕ್ಕಿಂಟಿಕಿ ಪೋ’ ಅರ್ಥಾತ್ ನಮ್ಮ ಮನೇಲೆ ಮಾತನಾಡ್ತಾ ಇದ್ದು ಹಸಿವಾದಾಗ ಪಕ್ಕದ ಗುರಕ್ಕನ ಮನೆಯಲ್ಲಿ ಉಂಡು ಹೋಗು ಎಂಬ ತೆಲುಗು ಗಾದೆಯಂತಾಗುತ್ತದೆ.. ಈ ಕಾರಣದಿಂದ, ‘ನೀನು ಕಾಸೋ, ಕೂಸೋ, ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೋಬೇಕು’ ಎಂದು ಕಟ್ಟುನಿಟ್ಟಾಗಿ ಹೇಳಿದಾಗ, ಕೂಸೇನು ಯಾವಾಗಲಾದರೂ ಮಾಡಿಕೋಬಹುದು. ಕಾಸಿನ ವಿಷಯ ಹಾಗಲ್ಲ. ಈಗ ಬಿಟ್ಟರೆ ಮತ್ತೆ ಕಾಸು ಸಂಪಾದನೆ ಮಾಡೋಕಾಗುತ್ತೋ ಇಲ್ಲವೋ ಹೇಳಲಾಗದು. ಎನ್ನುವವರು ಇವರು. 

     ಇಂದಿನ ಹೆಚ್ಚಿನ ಜನ ಯಾವುದನ್ನು ಆಯ್ಕೆ ಮಾಡಿಕೊಳ್ಳತಾರೆ ? ಎಂಬ ಬಗ್ಗೆ ಇತ್ತೀಚೆಗೆ ಖಾಸಗಿ ಸಂಸ್ಥೆಯೊAದು ಸರ್ವೇ ನಡೆಸಿದಾಗ, ಹೆಚ್ಚಿನ ಜನರ ಕಂಠದಿAದ ಹೊರಹೊಮ್ಮಿದ ಘೋಷಣೆ ಯಾವುದು ಊಹಿಸಬಲ್ಲಿರಾ ! ಅದೇ ಕಾಸು. 

    ಇದೆಲ್ಲಾ ‘ಕಾಸು ಮೊದಲು ಕೂಸು ಆಮೇಲೆ’ ಎನ್ನುವವರ ಕತೆಯಾಯಿತು.. ಇವರನ್ನು ಹೊರತುಪಡಿಸಿ ಮತ್ತೂ ಒಂದು ವರ್ಗದವರಿದ್ದಾರೆ. ಇವರೇ, ‘ಕಾಸೂ ಇರಲಿ, ಕೂಸು ಬರಲಿ’ ಎನ್ನುವವರು.

     ನನ್ನ ದೂರದ ಬಂಧುವಿನ ಮನೆಯ ಕತೆಯಿದು.  ಮದುವೆಯಾದ 2-3 ವರ್ಷಗಳು ‘ನೀ ನನಗೆ, ನಾ ನಿನಗೆ’ ಎಂದು ಪತಿ ಪತ್ನಿ ಸ್ವೇಚ್ಛೆಯಿಂದ ತಿರುಗಾಡಿದರು. ದಾಂಪತ್ಯದ ಪರಿಣಾಮ ಕೂಸಿನ ಆಗಮನ. ಸ್ವಲ್ಪ ಕಾಲ, ಪತ್ನಿಯ ಅಮ್ಮ, ಮತ್ತೆ ಕೆಲವು ಕಾಲ ಪತಿಯ  ಅಮ್ಮ  ತಮ್ಮ  ಮೊಮ್ಮಗನನ್ನು  ಸಂಬಾಳಿಸಿ, ಕೂಸಿನ  ಅಮ್ಮ  ಅಪ್ಪ ಕೆಲಸ ಮುಗಿಸಿ ಬರಲು ನೆರವಾದರು. ಪ್ರತಿ ವ್ಯವಸ್ಥೆಗೂ ಒಂದು ಕಾಲ ಮಿತಿ ಇರುತ್ತÀಲ್ಲವೇ ? ಇಲ್ಲೂ ಈ ತತ್ವವೇ ಕೆಲಸ ಮಾಡಿತು. ಅಜ್ಜಿಯರಿಂದ ಈ ಕೂಸಿನ ರೊಟೇಶನ್ ಕೇರ್ ನಿಂತುಹೋಯಿತು. 



     ಈಗ ಮತ್ತೆ ಶುರುವಾಯಿತು ಗಂಡ ಹೆಂಡಿರ ನಡುವೆ ವಾಗ್ವಾದ, ಮಗೂನ ನಿಮ್ಮ ಅಮ್ಮ ಅಪ್ಪ ನೋಡಿಕೊಳ್ಳಲಿ ಎಂದು ಗಂಡ, ಆಗೊಲ್ಲಪ್ಪಾ, ನನ್ನ ಹೆತ್ತವರು ನನ್ನ ಸೋದರನ ಮಕ್ಕಳನ್ನು ನೋಡಿಕೊಳ್ತಿದ್ದಾರೆ. ನಮ್ಮ ಮಗೂನೂ ಅವರು ನೋಡಿಕೊಳ್ಳಲಾಗದು ನಿನ್ನ ಹೆತ್ತವರು ನೋಡಿಕೊಳ್ಳಲಿ ಎಂದಳು ಪತ್ನಿ ಗಂಡನ ಕಡೆ ತಿರುಗಿ. ನಿನ್ನವರೂ ಬೇಡ, ನನ್ನವರೂ ಬೇಡ, ಒಬ್ಬ ಲೇಡಿ ಕೇರ್ ಟೇಕರ್ ನಾಳೆ ಮನೆಗೆ ಕರೆ ರ‍್ತೇನೆ. ಒಂದಷ್ಟು ಕಾಸು ಅವಳತ್ತ ಬಿಸಾಕಿ ನಮ್ಮ ಪಾಡಿಗೆ ನಾವು ನಮ್ಮ ಕೆರಿಯರ್ ಕಡೆ ಹೊರಡೋಣ ಎಂದು ನಿರ್ಧರಿಸಿದರು. ಅಂದುಕೊAಡAತೆ ಈ ಯೋಜನೆಯೂ ಜಾರಿಯಾಯಿತು. 

   ಆದರೆ  ಈ ಜಗತ್ತೇ ಶಾಶ್ವತವಲ್ಲದಾಗ ಇದರೊಳಗಿನ ವ್ಯವಸ್ಥೆ ಶಾಶ್ವತವಾಗಿರಲು ಸಾಧ್ಯವೇ ! ಎಂದಿಗೂ ಇಲ್ಲ. ಹೀಗೇನೇ ಮೇಲಿನ ವ್ಯವಸ್ಥೆ ಅಲ್ಪ ಕಾಲ ನಡೆಯಿತು. ನಂತರದಲ್ಲಿ  ಮಗುವಿನ ಕೇರ್ ಟೇಕರ್ ಮಗುವಿನ ಅಳು ಹಠ  ಕಾಟ ತಾಳಲಾರದೆ ಮಗುವಿಗೆ  ದಿನವೂ ನಿದ್ದೆ ಮಾತ್ರೆ ಹೆಚ್ಚು ಹೆಚ್ಚು ಕೊಡಲಾರಂಭಿಸಿದಳು. ಪರಿಣಾಮ ಮಗು ಸದಾ ಮಂಕಾಗಿ ತೂಗಡಿಸಲು ಶುರುಮಾಡಿತು. ಥೂ, ಹಾಳಾದವಳು, ಮಗುವನ್ನ ಈ ಗತಿಗೆ ತಂದಳು, ಇವರಿಗೆ ನಿಯತ್ತು ಪಾಪ ಪುಣ್ಯ ಎಂಬುದೇ ಇಲ್ಲ ಎಂದು ಗೊಣಗಿದ ಮಗುವಿನ ತಾಯಿ ಕೇರ್ ಟೇಕರ್ ನ ಡಿಸ್ಮಿಸ್ ಮಾಡಿದಳು ಕೋಪದಲ್ಲಿ.

  ಮತ್ತೆ ಮನೇಲಿ ಶುರುವಾಯ್ತು ವಾದ  ವಿವಾದ, ಮಗೂನ ಕೇರ್ ಮಾಡೋರ್ ಯಾರು ಅಂತ. ಕೊನೆಗೆ ಸೋಲಬೇಕಾಗಿದ್ದು, ಸೋತಿದ್ದು  ಗಂಡನೇ. ಇವನು ನಿಮ್ಮ  ವಂಶೋÀದ್ದಾರಕ. ಆದ್ದರಿಂದ ಸ್ವಲ್ಪ ಕಾಲ ನೀವು ಇವನ ಕೇರ್ ತಗೊಳ್ಳಿ ಎಂದ ಕೂಸಿನ ಅಪ್ಪ ತನ್ನ ಹೆತ್ತವರೊಡನೆ. ‘ಅನ್ಯಥಾ ಶರಣಂ ನಾಸ್ತಿ’ ಎಂಬAತೆ,  ಹೊಸದರಲ್ಲಿ ‘ಅಗಸ ಗೋಣಿ ಎತ್ತೆತ್ತಿ ಒಗೆದ’ ಎಂಬ ಗ್ರಾಮೀಣ ಪ್ರದೇಶದವರ ಗಾದೆಯಂತೆ ಪ್ರಾರಂಭದ ಕೆಲ ತಿಂಗಳುಗಳು ಕೂಸಿನ ಅಪ್ಪನ ಅಪ್ಪ, ಅಮ್ಮ ತಮ್ಮ ಮೊಮ್ಮಗನನ್ನು ಮುದ್ದಿಸಿ ನೋಡಿಕೊಂಡರು, ಕೂಸಿನ ಅಪ್ಪ ಅಮ್ಮ ನಿಶ್ಚಿಂತೆಯಿAದ ಕೆಲಸ ಮುಗಿಸಿ ಬರಲಾರಂಭಿಸಿದರು. 

     ಇಷ್ಟರಲ್ಲಿ ಕೂಸಿನ ಅಜ್ಜ (ಅಪ್ಪನ ಅಪ್ಪ) ನೆಲಕ್ಕೆ ಬಿದ್ದು ಕಾಲು ಮುರಿದುಕೊಂಡ. ನಾ ಪತಿ ಸೇವೆ ಮಾಡಬೇಕು, ಮನೆಯ ಅಡುಗೆ ಕೆಲಸ ನಿರ್ವಹಿಸಬೇಕು, ಈ ಎರಡರ ಮಧ್ಯೆ ನಿನ್ನ ಕೂಸನ್ನು ನೋಡಲು ನನಗೆ ಸಮಯವೆಲ್ಲಿದೆ ಎಂದಳು ಕೂಸಿನ ಅಜ್ಜಿ.

    ನಾನೇನು ಮಾಡಲಿ, ಕೂಸನ್ನು ನೋಡಿಕೊಳ್ಳಲು ಕೆಲಸಕ್ಕೆ ರಜೆ ಹಾಕಿ ಮನೇಲಿ ಕೂಡಲೇ  ಅಂತ ಕೂಸಿನ ಅಪ್ಪ ತನ್ನಮ್ಮನ  ಮೇಲೆ ರೇಗಿದ. ನಿನ್ನ ಹೆಂಡ್ತಿಗೆ ಮನೇಲಿ ಇರೋದಕ್ಕೆ ಹೇಳು ಎಂದಳು ಅಜ್ಜಿ.. ಅವಳು ಮನೇಲಿ ಕೂತರೆ ನನ್ನ ಸಂಸಾರದ ಖರ್ಚು ವೆಚ್ಚ ನನ್ನೊಬ್ಬನ ಸಂಬಳದಿAದ ಸಾಗಿಸಲಾಗದು, ನೀನೇ ಸ್ವಲ್ಪ ಅಡ್ಜೆಸ್ಟ್ ಮಾಡಿಕೋ ಅಂದ ಕೂಸಿನ ಅಪ್ಪ ತನ್ನಮ್ಮ ನೊಂದಿಗೆ.  ಎಂದಿನAತೆ  ಮಗ ಸೊಸೆ ಇಬ್ಬರೂ  ಜಾಬ್ ಮಾಡಲು  ಹೊರ ಹೊರಟರು. 

    ಈ ಪೈಪೋಟಿ, ‘ಅಪ್ಪ ಅಮ್ಮನ ಜಗಳದಾಗೆ ಕೂಸು ಬಡವಾಯಿತು’ ಎಂ¨ ಗಾದೆಯಂತೆ ಪಾಪ, ಅ ಎಳೆಯನ ಪಾಡು ವರ್ಣಿಸಲಾಗದು. ಘಳಿಗೆಗೊಂದು ಸಾರಿ ಅಮ್ಮಾ, ಅಮ್ಮಾ ಅಂತಾ, ಅಳು, ಮತ್ತೊಮ್ಮೆ ಅಪ್ಪ ಬೇಕು, ನನಗೆ ಅಪ್ಪಾ, ಅಪ್ಪಾ ಅಂತಾ ಅಳುತ್ತಾ  ಬೀದಿ ಕಡೆ ಓಡೋ ಆ ಕೂಸಿನ ಆರ್ತನಾದ ಕಂಡು, ಕೇಳಿÀದÀವರಿಗೆ ಕರುಳು ಕಿತ್ತು ಬರುವಂತಾಗಿತ್ತು.. ಅದೇನು ಪಾಪ ಮಾಡಿ ಇವರ ಹೊಟೆಯಲ್ಲಿ ಹುಟ್ಟಿತೋ ಈ ಕೂಸು, ಅತ್ತ, ಅಮ್ಮ, ಅಪ್ಪನಿಗೂ ಬೇಡ, ‘ತನ್ನ ವಂಶದ ಕೂಸಿದು’ ಎಂದು ಆಧರಿಸಬೇಕಾದ ಅಜ್ಜ ಅಜ್ಜಿಗೂ ಬೇಡ ಈ ಪಾಪದ ಕೂಸು ಎಂದು ಈ ಗೋಳಿನ ದೃಶ್ಯ ನೋಡಿದವರು ಕಣ್ಣೊರಸಿಕೊಂಡರು. ಆದರೆ ಈ ಕರುಳು ಕಿತ್ತು ಬರುವ ದೃಶ್ಯ ಮಾತ್ರ ಕೂಸಿನ ಅಮ್ಮ ಅಪ್ಪನ ಮೇಲೆ ಎಂತಹುದಾದರೂ ಪ್ರಭಾವ ಬೀರಿತ್ತೋ, ಇಲ್ಲವೋ, ಅಥವಾ ಬೀರಿಯೂ ‘ಸಣ್ಣ ಮಗು ಎಂದ ಮೇಲೆ ಸ್ವಲ್ಪ ಹೊತ್ತು ಅಳುತ್ತೆ.  ಸುಸ್ತಾಗಿ ಸುಮ್ಮನಾಗುತ್ತೆ. ಅದು ಅಳುತ್ತೆ ಅಂತಾ ನಾವು ಕೆಲಸ ಬಿಟ್ಟು ಮನೇಲಿ ಕೂತರೆ ಸಂಸಾರದ ರಥ ಎಳಿಯೋವರರಾರು ? ಎಂಬ ಗಟ್ಟಿ ನಿರ್ಧಾರ ತಗೊಂಡ್ರೋ’ ತಿಳಿಯದು. 

    ಈ ಮನೆಯ ಕಡೆ ನಾವು ಹೋದಾಗಲೆಲ್ಲಾ ಆ ಕೂಸು ತನ್ನ ಅಮ್ಮ ಅಪ್ಪನನ್ನು ನೆನೆಸಿ ಅಳುವುದನ್ನು ಕಂಡು, ಕೇಳಿದರೆ ನಮ್ಮ ಹೃದಯ ಬಿರಿಯುತ್ತೆ. “ಥೂ, ಎಂತಹಾ ಕಟುಕರಪ್ಪಾ ಈ ಕೂಸನ್ನು ಹೆತ್ತವರು. ಕಾಸು, ಕಾಸು, ಕಾ, ಕಾ, ಎಂದು ಹೊಡಕೊಳ್ಳೋರು ಮಗುವನ್ನು ಏಕೆ ಪಡೆಯಬೇಕಾಗಿತ್ತು ! ಎಂಬ ಅಸಹ್ಯ ತರಿಸುತ್ತಿದೆ.   

     ‘ಕಾಸೂ ಬೇಕು, ಕೂಸೂ ಬೇಕು’ ಎಂದು ಕೂಸನ್ನು ಗೋಳಾಡಿಸುತ್ತಿರಬಹುದಾದ ದಂಪತಿಗಳು ಇವರೊಬ್ಬರೇ ಆಗಿರಲಾರರು. ಇನ್ನೂ  ಅದೆಷ್ಟೋ ಮಂದಿ ಇರಬಹುದು ನಮ್ಮೀ ಸಮಾಜದಲ್ಲಿ. ‘ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ’ ಎಂಬುವ ಇಂತಹವರು ನಿಮಗೆಂದಾದರೂ  ಕಾಣಿಸಿದರೆ “ನೀವು ನಡೆಯಬೇಕಾದ  ಸರಿ ಹಾದಿ ಯಾವುದು” ಎಂಬುದನ್ನು ದಯವಿಟ್ಟು ಇವರಿಗೆ ತೋರಿಸ್ತೀರಾ ಫ್ಲೀಸ್’ ! 


Comments

  1. ನಿಜ ಜೀವನದ ಸಂಗತಿಗಳನ್ನು ಚೆನ್ನಾಗಿ ವರ್ಣಿಸಿದ್ದೀರಿ. ಪೋಷಕರು ಮಕ್ಕಳು ಓದಯೇಬೇಕು

    ReplyDelete
  2. Thamma manadalada bhavanegalannu vyaktapadisiddakkagi dhanyavadagalu sir

    ReplyDelete

Post a Comment