ವಿಶಿಷ್ಟ ರೀತಿಯ ಪಾಯಸ

 ವಿಶಿಷ್ಟ ರೀತಿಯ ಪಾಯಸ 

ಲೇಖನ  -  ಜೆ.ಎಸ್.ಗಾಂಜೇಕರ, ಕುಮಟಾ (ಉ.ಕನ್ನಡ.)



ನಿರೂಪಕಿ : ವೀಕ್ಷಕರೇಇಂದಿನ " ಸವಿ ರುಚಿ " ಕಾರ್ಯಕ್ರಮ ದಲ್ಲಿ  ನಮ್ಮವರೇ  ಆದ ಶ್ರೀಮತಿ ಸವಿತಾರವರು   ವಿನೂತನ ರೀತಿಯ  ಅಡುಗೆಯನ್ನು  ನಿಮಗೆ ತಿಳಿಸಲಿದ್ದಾರೆ. ಅವರನ್ನು  ಸ್ವಾಗತಿಸೋಣ.
ಸವಿತಾರವರೇತಮಗೆ  " ಅಭಿರುಚಿ " T V  ಚನಲ್ ಗೆ  ಸ್ವಾಗತ , ಸುಸ್ವಾಗತ.

ಸವಿತಾಮೊದಲನೆಯದಾಗಿ  ತಮಗೆಲ್ಲರಿಗೂ           ರಾಜ್ಯೋತ್ಸವದ ಶುಭಾಶಗಳು. ನಿಮಗೆಲ್ಲರಿಗೂ  ಧನ್ಯವಾದಗಳು.

ನಿರೂಪಕಿ : ಮೇಡಂ, ಇಂದು ಯಾವ ಅಡುಗೆ ನಮ್ಮ 
               
ವೀಕ್ಷಕರಿಗೆ  ತಿಳಿಸಿಕೊಡುವಿರಿ?

ಸವಿತಾ :    ತಮ್ಮ  T V  ಚನಲ್  ಹೆಸರೇ     ಸೂಚಿಸುವಂತೆ  " ಅಭಿರುಚಿ " ಹಾಗೂ ನಿಮ್ಮ ಪ್ರೋಗ್ರಾಮ್   ಹೆಸರೇ "ಸವಿ ರುಚಿಹೇಳುವಂತೆ  ನಾನೀಗ " ಭಾವಗೀತಾ   ಪಾಯಸ" ಹೇಗೆ
ಮಾಡುವ ವಿಧಾನ ಹೇಳಿ  ಕೊಡಲು ಬಯಸುತ್ತೇನೆ.

ನಿರೂಪಕಿ :" ಭಾವಗೀತಾ    ಪಾಯಸ"
 
ಆಹಾ!   ಪಾಯಸದ ಹೆಸರೇ ಕೇಳಲಿಲ್ಲ.
 
ರುಚಿಯೂ  ನೋಡಲೇ  ಇಲ್ಲನಮ್ಮ ವೀಕ್ಷಕರು
  
ಕಾತುರದಿಂದ ಕಾಯುತ್ತಿದ್ದಾರೆ ,ಸವಿಯಲು .

ಸವಿತಾ :   ಭಾವಗಿತಾ ಪಾಯಸ ಮಾಡಲು ಪೂರ್ವ  ಸಿದ್ಧತೆ ಬೇಕು.
           (1)
ಏಕಾಗ್ರತೆ
           (2)
ಏಕಾಂತ
           (3)
ಮೌನ
            (4)
ಧ್ಯಾನ
             (5) 
ಅಧ್ಯಯನ .
            "
ಭಾವಗೀತಾ    ಪಾಯಸಮಾಡಲು ಬೇಕಾಗುವ
           
ಸಾಮಾನು ----
           (1)
ಹಾಳೆ ಎಂಬ ದೊಡ್ಡ ಪಾತ್ರೆ( ಹೆಚ್ಚು ಪಾಯಸ
                
ಮಾಡಲು     ದೊಡ್ಡ ಗಾತ್ರದ ಪಾತ್ರೆ )
            (2)
ಪೆನ್ ವೆಂಬ ಸೌಟ್
             (3)
ಅಕ್ಷರ ವೆಂಬ ಹೆಸರು ಕಾಳು ( ಅಳತೆ : ಹೆಚ್ಚಿನ ಪ್ರಮಾಣದ ಪಾಯಸ ಬೇಕಿದ್ದರೆ ಹೆಚ್ಚಿನಅಕ್ಷರ)
            (4)
ನವರಸವೆಂಬ ತುಪ್ಪ
            (5)
ಆಶ್ಚರ್ಯ,ಕುತೂಹಲ,ಉಲ್ಲಾಸ,ವಿನೋದ
     
ಗಳೆಂಬ ಒಣ ದ್ರಾಕ್ಷೆ ,ಗೋಡಂಬಿ, ಬಾದಾಮು,
      
ಕೇಸರಿ
            (6)
ಪವಿತ್ರ ಭಾವನೆಯೆಂಬ ತಿಳು  ಬೆಲ್ಲ
             (7)
ಪರಿಶುದ್ಧ  ಮನಸ್ಸೆಂಬವೆಂಬ ಹಾಲು.
            (8) 
ರುಚಿಗೆ   ತಕ್ಕಷ್ಟು ಉಪ್ಪು  ಅಲ್ಪವಿರಾಮ. ಪೂರ್ಣವಿರಾಮ ರೂಪದಲ್ಲಿ.
           
ಮಾಡುವ ವಿಧಾನ :

              ಮೊದಲಿಗೆ ದೊಡ್ಡ ಹಾಳೆ ಎಂಬ ಪಾತ್ರೆ ತೆಗೆದುಕೊಂಡು  ಅದರಲ್ಲಿ  ಅಕ್ಷರವೆಂಬ ಹೆಸರುಕಾಳು  ಹಾಕಿ ಚನ್ನಾಗಿ ವಿವೇಕವೆಂಬ ನೀರಿನಿಂದ ತೊಳೆದು  ಜ್ಞಾನ ವೆಂಬ ಬೆಂಕಿಯಲ್ಲಿ  ಕಾಯಿಸಬೇಕು. ಆಗಾಗ ಪೆನ್  ವೆಂಬ ಸೌಟಿ ನಿಂದ  ತಿರುಗಿಸುತ್ತ ಇರಬೇಕು. ಅದು ಹದವಾಗಿ  ಬೇಯಿಸಿದ ಮೇಲೆ ನವರಸವೆಂಬ ತುಪ್ಪವನ್ನು ಸುರಿದು ಅದಕ್ಕೆ  ಆಶ್ಚರ್ಯ,ಕುತೂಹಲ,ಉಲ್ಲಾಸ,ವಿನೋದ ಗಳೆಂಬ ಒಣ ದ್ರಾಕ್ಷೆ ,ಗೋಡಂಬಿ, ಬಾದಾಮು, ಕೇಸರಿ ಸಮ ಪ್ರಮಾಣದಲ್ಲಿ  ಹಾಕಿ ಪರಿಶುದ್ಧ  ಮನಸ್ಸೆಂಬವೆಂಬ ಹಾಲುನ್ನು  ಸುರಿಯಬೇಕು. ತದನಂತರ ಪವಿತ್ರ ಭಾವನೆಯೆಂಬ ತಿಳು  ಬೆಲ್ಲ  ಮಿಕ್ಷ್ಸಿ ಮಾಡಿದರೆ   "ಭಾವಗೀತಾ   ಹೆಸರು ಕಾಳಿನ  ಪಾಯಸ" ಸವಿಯಲು  ಸಿದ್ಧ .

ನಿರೂಪಕಿ : ನೋಡಿದಿರಲ್ಲಾ ವೀಕ್ಷಕರೇ, ಕಡಿಮೆ 
                
ಸಮಯದಲ್ಲಿ  "ಭಾವಗೀತಾ  ಪಾಯಸ"
                
ಮಾಡುವುದನ್ನು .   ಮತ್ತೇಕೆ ತಡ ?"ಭಾವಗೀತಾ" ಪಾಯಾಸ ತಯಾರಿಸಿ ಮನೆ ಮಂದಿಗೆಲ್ಲಾ ನೀಡಿ ಸವಿದು ಆನಂದಿಸಿ.

                 ಶ್ರೀಮತಿ  ಸವಿತಾರವರೇ, ತಾವು ಸವಿಸವಿಯಾದ ಘಮ  ಘಮ ಎನ್ನುವ "ಭಾವಗೀತಾ  ಪಾಯಸ" ಮಾಡುವ  ವಿಧಾನ ನಮ್ಮ ವೀಕ್ಷಕರಿಗೆ  ತಿಳಿಸಿದಿರಿ
ತುಂಬು ಹೃದಯದ  ಧನ್ಯವಾದಗಳು.

Comments