ಸರಸ - ಸಲ್ಲಾಪ ದಾಂಪತ್ಯ ಜೀವನಕ್ಕೆ ಮೆರಗು

 ಸರಸ - ಸಲ್ಲಾಪ  ದಾಂಪತ್ಯ ಜೀವನಕ್ಕೆ ಮೆರಗು 

ಲೇಖನ : ಜೆಎಸ್ಗಾಂಜೇಕರಕುಮಟಾ (ಕನ್ನಡ.)



ದಾಂಪತ್ಯ ಜೀವನದಲ್ಲಿ ಪತಿ-ಪತ್ನಿಯರು ಅನ್ಯೋನ್ಯರಾಗಿ ಬಾಳಿದರೆ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ. ಸರಸ-ಸಲ್ಲಾಪ ದಾಂಪತ್ಯ ಜೀವನಕ್ಕೆ ಮೆರಗು ನೀಡುವುದು. ಇದು ಪರಸ್ಪರ ಹೊಂದಾಣಿಕೆ ಇದ್ದಾಗಲೇ ಸಾಧ್ಯ. ಇದರ ಕೊರತೆಯಿಂದಾಗಿ ಇಂದು ಜಗಳ, ವೈವನಸ್ಸು, ವಿಚ್ಛೆದನೆ ಆಗುವುದನ್ನು ನಾವು ಕಾಣುತ್ತೇವೆ ಈ ಸಮಾಜದಲ್ಲಿ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕೊನೆಯತನಕವೂ ಅನ್ಯೋನ್ಯರಾಗಿ ಬಾಳಬೇಕೆಂಬುದೇ ವಿವಾಹದ ಮೂಲ ಉದ್ದೇಶ. ಬಾಳಿನಲ್ಲಿ ಅದೆಷ್ಟೋ ಎಡರು-ತೊಡರು ಬಂದರೂ ಕೂಡ ಪ್ರೀತಿ ಸಹೃದಯತೆಯಿಂದ ಬಾಳಿ ಬದುಕಿದರೆ ನೆಮ್ಮದಿ ಲಭಿಸುವುದೆಂದು ನನ್ನ ಮಿತ್ರ ವಿನಯ ಮನಗಂಡ. ಅದು ಹೇಗೆ ಎಂಬುದನ್ನು ವಿವರಿಸಲು ಈ ಪಿಠಿಕೆ.

ಆತ ಮಡದಿಯೊಂದಿಗೆ ಆಸ್ಟ್ರೇಲಿಯಾಕ್ಕೆ ಹೋದಾಗ ಜರುಗಿದ ಘಟನೆಯನ್ನು ಈ ರೀತಿಯಾಗಿ ವಿವರಿಸಿ ನನಗೆ ಹೇಳಿದ.....

ಒಮ್ಮೆ ದಂಪತಿಯೊಂದಿಗೆ ತಾನು ಆಸ್ಟ್ರೇಲಿಯಾದ ಪ್ರೇಕ್ಷಣೀಯ ಸ್ಥಳ ವೀಕ್ಷಿಸಲು ಹೋದಾಗ ತಾನು ಕಂಡ ಅಲ್ಲಿಯ ರಮಣೀಯ ದೃಶ್ಯ ವಿವರಿಸುತ್ತ ಅದರಲ್ಲೂ ಅಲ್ಲಿಯ ಸ್ತೀಯರನ್ನು ನೋಡಿದಾಗ ತನ್ನಲ್ಲಿ ಉಂಟಾದ ಭಾವನೆಯನ್ನು ತನ್ನ ಸಹಧರ್ಮಿಣಿಯೊಂದಿಗೆ ಈ ರೀತಿಯಾಗಿ ಹಂಚಿ ಕೊಂಡೆ" ಎಂದು ಹೇಳಿದ.

ನೋಡು! ಅಲ್ಲಿಯ ಸ್ತ್ರೀಯರ ಸೌಂದರ್ಯವನ್ನು, ಎಂದು ಹೇಳುತ್ತಾ, ಅಂದಿನ ಕಾಳಿದಾಸನ ಶಾಕುಂತಲೆಯ ಸಾಕಾರ ರೂಪವೇ ಇಲ್ಲಿಯ ಸ್ತೀಯರ ಮೈ-ಮಾಟ.

ಅವರನ್ನು ಗಮನಿಸಿದರೆ ಸೃಷ್ಠಿ ಕರ್ತನು ಬಿಡುವಿನ ವೇಳೆಯಲ್ಲಿ , ವಿಶ್ವದ ಎಲ್ಲಾ ಸೌಂದರ್ಯವನ್ನು ಬಳಿಸಿ ತನಗೆ ಅಂದವಾಗಿ ತೋರುವ ತನಕ ತಿದ್ದಿ ರೂಪಿಸಿದ ನಾರಿಯರ ಸಮೂಹವೆಂದೆನಿಸಿತು.

ರವಿವರ್ಮನ ಕಲಾಕೃತಿಗೂ ಮೀರಿದ ಜೀವಂತ ರೂಪ ರಾಶಿಯೇ ಓಡಾಡುವ ಅಲ್ಲಿಯ ವನಿತೆಯರ ವೇಷ-ಭೂಷಣ ಎಂಥಹ ಅರಸಿಕನಿಗೂ ಈ ಸೌಂದರ್ಯವನ್ನು ನೋಡಿ ನಲಿಯುವ ಮನಸ್ಸು ಬಾರದೇ ಇರದು

ಎಂಥಹ ಕಠೋರ ಮನಸ್ಸಿನವನಾದ ವಿಶ್ವಾಮಿತ್ರನಂಥವನಿದ್ದರೂ ಅಲ್ಲಿಯ ಅಪ್ಸರೆಯರನ್ನು ಕಂಡು ವಿಚಲಿತ ಮನಸ್ಸಿನವನಾಗದೇ ಇರನು.

ಈ ರೀತಿಯಾಗಿ ಅಲ್ಲಿಯ ವನಿತೆಯರ ರೂಪ-ಲಾವಣ್ಯವನ್ನು ಮಡದಿಯ ಮುಂದೆ ಬಣ್ಣಿಸಿದಾಗ ತುಸು ಕೋಪಗೊಂಡು " ನಾನು ಅಂದ- ಚಂದನಿಲ್ಲವೇ? ಎಂದು ಪ್ರಶ್ನಿಸಿದಳು. ಕೂಡಲೇ ನಾನಂದೆ " ನನ್ನ ಕಣ್ಣಿಗೆ ನೀನು ನಾನು ವಿವರಿಸಿದ ಹಾಗೆ ಕಂಡಿದ್ದಕ್ಕಲ್ಲವೇ ನಿನ್ನನ್ನು ವಿವಾಹವಾಗಿದ್ದು?" ಎಂದೆ . ಆಗ ಅವಳಿಗೆ ಸಮಾಧಾನವಾಗಿ ಸಂತಸ ಪಟ್ಟಳು. ಅವಳ ಸಂತೋಷದಲ್ಲಿ ನಾನು ಭಾಗಿಯಾದೆ. ಅವಳ ರೂಪವನ್ನು ಇನ್ನೂ ಹೆಚ್ಚು ಕೊಂಡಾಡಿದೆ. ಹೀಗೆ ಸಾಗಿತು ನಮ್ಮ ಆ ದಿನದ ಸರಸ-ಸಲ್ಲಾಪ". ಎಂದು ವಿವರಿಸಿ ಹೇಳಿದ ನನ್ನ ಮಿತ್ರ ವಿನಯ.

ಪರ-ಸ್ತ್ರಿಯರನ್ನು ಎಂದೂ ಮಡದಿಯ ಮುಂದೆ ಹೊಗಳಬಾರದು ಎಂದು ಹೇಳಲು ಮರೆಯಲಿಲ್ಲ ನನ್ನ ಮಿತ್ರ.

ಇದುವೇ ನನ್ನ ಮಿತ್ರನ ಪ್ರೇಮಾನುರಾಗದ ಕಥನ.

Comments