ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು

 ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು

 ಲೇಖಕರು : ಎಂ ಆರ್ ವೆಂಕಟರಾಮಯ್ಯ  

      “ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು, ಪೆಣ್ಣಲ್ಲವೆ ನಮ್ಮನೆಲ್ಲ ಪೊರೆದ ತಾಯಿ “ ಎಂದು ಮೂದಲಿಸಿ ಲಿಂಗ ಭೇದ ಮಾಡುವವರಿಗೆ ತನ್ನ ಮೊನಚಾದ ಮಾತುಗಳಲ್ಲೇ ಚಾಟಿ ಏಟು ಬೀಸಿದ್ದಾಳೆ ೧೭ ನೆಯ ಶತಮಾನದಲ್ಲಿದ್ದ ಸುಪ್ರಸಿದ್ದ ಈ ಕನ್ನಡ ಕವಿಯಿತ್ರಿ ಸಂಚಿ ಹೊನ್ನಮ್ಮ.  


   

 ೧೭ ನೆಯ ಶತಮಾನದಿಂದ ಇಂದಿನವರೆಗೆ ೪-೫ ಶಮಾನಗಳು ಕಳೆದಿವೆ. ಕಳೆದ ಈ ಅವಧಿಯಲ್ಲಿ  “ಮಕ್ಕಳಾದರೆ ಗಂಡೇ ಹುಟ್ಟಲಿ, ಹೆಣ್ಣು ಬೇಡವೇ ಬೇಡ, ಹೆಣ್ಣು ಎಂಬುದು ಹೆತ್ತವರ ಪಾಲಿಗೆ  ಹುಣ್ಣು,”  ಎಂದು ಹೆಣ್ಣು ಸಂತಾನವನ್ನು ಖಂಡಿಸಿ, ನಿರ್ಲಕ್ಷಿಸಿ, ಅಕಸ್ಮಾತ್ ಹೆಣ್ಣು ಹುಟ್ಟಿದರೆ ಅದು ಈ ಪ್ರಪಂಚದ ಬೆಳಕು ಕಾಣುವ ಮೊದಲೇ ಅದರ ಜೀವ ತೆಗೆಯತ್ತಿದ್ದ ಕಾಲವಿತ್ತು.  ಗರ್ಭದಲ್ಲಿರುವ ಮಗು ಜನಿಸುವ ಮೊದಲೇ ಹುಟ್ಟುವುದು ಗಂಡೋ ಹೆಣ್ಣೋ ಎಂದು ತಿಳಿಯಲು ಲಿಂಗ ಪತ್ತೆ ಪರೀಕ್ಷೆ ಮಾಡಿಸಿ (ಇದು ಕಾನೂನು ಬಾಹಿರ, ಅಪರಾಧವಾಗಿದ್ದರೂ ಕದ್ದು ಮುಚ್ಚಿ ಇದಕ್ಕೆ ಮುಂದಾಗುತ್ತಿದ್ದರು) ಹೆಣ್ಣು ಹುಟ್ಟುವುದಾದರೆ ಮಗುವೇ ಬೇಡ ಎಂದು ಗರ್ಭಪಾತಕ್ಕೆ ಸಿದ್ಧವಾಗುವ ಹಲವರನ್ನು ನೋಡುವ ದೌರ್ಭಾಗ್ಯವಿತ್ತು,. ಗರ್ಭಪಾತ ಮಹಾ ಪಾಪ ಎನ್ನುವವರು, ಭ್ರೂಣ ಪರೀಕ್ಷಿಸದೆ, ಮಗು ಜನಿಸುವವರೆಗೂ ಕಾದಿದ್ದು, ಹುಟ್ಟಿದ್ದು ಹೆಣ್ಣಾದರೆ ಅಯ್ಯೋ ! ಹೆಣ್ಣೇ ! ಇದು ಹುಟ್ಟದೇನೇ ಇದ್ದರೂ ಚೆನ್ನಾಗಿತ್ತಲ್ಲಪ್ಪಾ ! ಯಾಕಾಗಿ ನಮ್ಮ ಮನೆಯಲ್ಲಿ ಹುಟ್ಟಿತೋ ಎಂದು ತಲೆಯ ಮೇಲೆ ಕೈ ಹೊತ್ತು ಕೂತವರನ್ನು, ಗಂಡು ಸಂತಾನವನ್ನು ನೀಡÀಲಿಲ್ಲ ಎಂದು ಸೊಸೆಯನ್ನು ನಿಂದಿಸಿ ಶಪಿಸುವ, ಹಿಂಸಿಸುವ, ನಿನ್ನ ಗಂಡನಿಗೆ ಬೇರೊಂದು ಹುಡುಗಿಯನ್ನು ತಂದು ಮದುವೆ ಮಾಡಿ, ಅದರಿಂದ ಗಂಡು ಮಗು ಪಡೆದು ನಮ್ಮ ವಂಶವನ್ನು ಉದ್ದಾರವಾಗಿಸುತ್ತೇವೆ ಎನ್ನುತ್ತಿದ್ದ ಬಹು ಸಂಖ್ಯಾತರ ಕಾಲವೂ ಇತ್ತು.

 ‘ಬಳ್ಳಿಗೆ ಕಾಯಿ ಭಾರವಲ್ಲ’ ಎಂಬ ವಿಶಾಲ ಹೃದಯವಿದ್ದ ಹೆಣ್ಣು ಹೆÀತ್ತ ಮಾತೆಯರು ‘ದೇವರು ಕೊಟ್ಟ ಫಲವಿದು’  ಎಂದು ಅದನ್ನು ಪ್ರೀತಿಯಿಂದ ಸಾಕಿ, ಬೆಳೆಸಿ, ಅದಕ್ಕೆ ವಿದ್ಯೆ ಬುದ್ಧಿಗಳನ್ನು ಕಲಿಸಿ, ತವiಗಿದ್ದ ಬಡತನವನ್ನೂ ಲೆಕ್ಕಿಸದೆ ಸಾಲ ಮಾಡಿಯಾದರೂ ಮದುವೆಗೆ ಲಕ್ಷಗಳಷ್ಟು ಹಣ ವೆಚ್ಚ ಮಾಡಿ ಅದು ಇಷ್ಟಪಟ್ಟ ಗಂಡಿನೊAದಿಗೆ ಅದ್ದುರಿಯಾಗಿ ಮದುವೆ ಮಾಡಿ, ‘ಧೀರ್ಘಕಾಲ ನೀವಿಬ್ಬರೂ ಅನ್ಯೋನ್ಯತೆಯಿಂದ ಸುಖವಾಗಿರಿ’ ಎಂದು ಹರಸಿ ಕಳಿಸುವ ಹಲವಾರು ಮಾತಾ ಪಿತರಿಗೆ, ಇವರ ಮಗಳ ಗಂಡ, ಅದೇ ಇವರ ಅಳಿಯನ ಕೊಡುಗೆ ಎಂತಹುದು ! ಇವನು, ಇವನ ಮನೆಯವರು ಇಚ್ಛಿಸಿದಷ್ಟು ವರದಕ್ಷಿಣೆ ಹೆಂಡತಿ ತರಲಿಲ್ಲ ಎಂದೋ, ತನ್ನ ದುರಭ್ಯಾಸಗಳಿಗಾಗಿ ಕೇಳಿದಾಗಲೆಲ್ಲಾ ಈಕೆ ಹಣ ಕೊಡುತ್ತಿಲ್ಲ ಎಂದೋ, ಅವಳ ಶೀಲವನ್ನು ಶಂಕಿಸಿಯೋ, ‘ಕಟ್ಟಿಕೊಂಡವಳಿಗಿAತಾ ಇಟ್ಟುಕೊಂಡವಳೇ ಸುಂದರಿ’ ಎನಿಸಿಯೋ, ವಿವಾಹಿತ ಹೆಂಡತಿಯನ್ನು ಹಿಂಸಿಸಿ ತವರಿಗೆ  ಓಡಿಸಿದ ಗಂಡುಗಳಿದ್ದ ಕಾಲವಿತ್ತು ( ಇಂತಹಾ ರಕ್ತ ಬೀಜಾಸುರನ ಸಂÀತತಿ ಇಂದೂ ಬೆಳೆಯುತ್ತಲೇಯಿದೆ)

   ವಿದ್ಯೆ ಬುದ್ಧಿ ಕಲಿಯದ ಹಲವು ದುಷ್ಟರು ಸ್ತಿçÃಯರ ಆಭರಣ ಕದಿಯುವ, ಎಲ್ಲರನ್ನೂ ಕಾಮದ ಕಣ್ಣಿನಿಂದಲೇ ಕಾಣುವ ಒಳ್ಳೆಯ ಸಂಸ್ಕೃತಿ-ಸAಸ್ಕಾರವಿಲ್ಲದ ವಯಸ್ಕ, ಅಪ್ರಾಪ್ತ ಬೀದಿ ಕಾಮಣ್ಣರು ಸಾರ್ವಜನಿಕ ರಸ್ತೆಗಳಲ್ಲಿ ಕಂಡ ಹೆಣ್ಣುಗಳನ್ನು ಹಿಂಬಾಲಿಸಿ, ಅವರನ್ನು ತಮ್ಮ ವಶಪಡಿಸಿಕೊಳ್ಳಲು ಪ್ರಯತ್ನಿಸುವ,  ೧-೨ ವರ್ಷದ ಎಳೆಯರಿಂದ ೮೦ ವರ್ಷದ ವೃದ್ಧರವರೆಗಿನ ಯಾವ ಸ್ತಿçಯಾದರೂ ಸರಿ, ಅವೆಲ್ಲರೂ ತನ್ನ ಸ್ವತ್ತೇ ಎಂದು ಅವರ ಮೇಲೆ ಲೈಂಗಿಕ ಹಲ್ಲೆ ಮಾಡಿ, ಅವರನ್ನು ಸಜೀವಿಗಳನ್ನಾಗಿ ಬಿಟ್ಟರೆ ತಮ್ಮ ಗುರ್ತು ಬಹಿರಂಗಪಡಿಸಿ ಶಿಕ್ಷೆಗೆ ಗುರಿಪಡಿಸುತ್ತಾರೆ ಎಂದು ಹೆದರಿ ಅಮಾಯಕರ ಜೀವ ತೆಗೆದ ಕಾಲವೂ ಇತ್ತು (ಇಂದೂ  ಈ ಹಲವು ನರ ರಾಕ್ಷಸರು ಜನರ ಮಧ್ಯೆಯೇ ನಿರ್ಭೀತರಾಗಿ ಓಡಾಡುತ್ತಿದ್ದಾರೆ).

ಕುಟಂಬದ ನಿರ್ವಹಣೆಗೆ ಸಾಕಾಗುವಷ್ಟು ೫-೬ ಅಂಕಿ ಸಂಬಳವಿರುವ ಒಳ್ಳೆಯ, ಖಾಯಂ ಆದ ಉದ್ಯೋಗ ತನಗಿದ್ದರೂ ಬೇಜವಾಬ್ಧಾರಿಯಾಗಿ, ಐಶಾರಾಮಿ ಜೀವನ ನಡೆಸುತ್ತಾ, ಸಾಲ ಮಾಡಿಯಾದರೂ ತುಪ್ಪದ ಅನ್ನ ಭುಂಜಿಸುವ ಹಲವರು, ತಮ್ಮ  ಹೆಂಡತಿ ಕೆಲಸಕ್ಕೆ ಹೋಗಲೇಬೇಕು, ಅವಳ ಕೆಲಸ ಅದೆಷ್ಟೇ ಕಷ್ಟ ಎನಿಸಿÀದರೂ  ಆ ಕೆಲಸ ಮಾಡಲೇಬೇಕು, ಅವಳ ಸಂಬಳವೆಲ್ಲಾ ತಮ್ಮ ಕೈ ಸೇರಬೇಕು ಎಂದು ಆಗ್ರಹಿಸಿ, ಅವಳ ಗಳಿಕಯಲ್ಲೇ ಇವರು ತಮ್ಮ  ಹೊಟ್ಟೆ ತುಂಬಿಸಿಕೊಳ್ಳುತ್ತಿರುವ, ಇದಕ್ಕೆ ಹೆಂಡತಿ ವಿರೋಧ ವ್ಯಕ್ತಪಡಿಸಿದರೆ, ಇವರು ಹುಲಿವೇಷ ಹಾಕಿ ಅವಳನ್ನು ಹಿಂಸಿಸುತ್ತಿರುವ ಹಲವರನ್ನೂ ಕಂಡು, ‘ದಾರಿಯಾವುದಯ್ಯಾ ವೈಕುಂಠಕ್ಕೆ ! ಎಂಬAತೆ ಇವಕ್ಕೆಲ್ಲಾ ಪರಿಹಾರ : ದಾರಿ ಕಾಣದೆ ಕೊರಗಿದÀ ಮಾತಾ ಪಿತರು ಅಂದೂ ಇದ್ದರು, ಇಂದೂ ನಮ್ಮ ಮಧ್ಯೆಯೇ ಇದ್ದಾರೆ. 



     ಇವೆಲ್ಲದರ ನಡುವೆಯೇ, ತಮ್ಮ ಕಷ್ಟ ನೋವುಗಳನ್ನು ತಮ್ಮ ಹೆತ್ತವರಿಗೆ ತಿಳಿಸಿ ಅವರನ್ನು ದುಃಖದ ಮಡುವಿನಲ್ಲಿ ಮೀಯಿಸುವುದು, ಬೇಯಿಸವುದು ಬೇಡೆವೆನಿಸಿದ ಅಮಾಯಕ ದೌರ್ಭಾಗ್ಯದ ಹೆಣ್ಣುಗಳು, ಗಂಡನ ಕಾಟ ಸಹಿಸಲಾರದ ಹಲವರು, ಆತ್ಮಹತ್ಯೆಗೆ ಶರಣಾದರೆ, ತಾವು ಮದುವೆಯಾದದ್ದೇ  ತಪ್ಪಾಯಿತು, ಈಗ ಕಷ್ಟಕ್ಕೆ ಹೆದರಿ ತಮ್ಮ ಜೀವ ತ್ಯಜಿಸಿದರೆ ತಮ್ಮ ಎಳೆಯ ಸಂತಾನ ಅನಾಥವಾಗುತ್ತಲ್ಲಾ, ತಮ್ಮ, ತವರಿನ ಮರ್ಯಾದೆ ಮಣ್ಣು ಪಾಲಾಗುತ್ತಲ್ಲಾ ಎಂದು ಹೆದರಿ. ‘ಈಸಬೇಕು, ಇದ್ದು ಜೈಸಬೇಕು’ ಎಂದು ನಿರ್ಧರಿಸಿ, ಕಷ್ಟನ್ನೆಲ್ಲಾ ವಿಷಕಂಠನAತೆ ನುಂಗಿಕೊAಡು, ಹೊರಗಿನವರೆದುರು ತಮಗೇನಾಗಿಲ್ಲ ಎಂದು ತೋರ್ಪಡಿಸುತ್ತಾ ಬಾಳ್ವೆ ನಡೆಸುತ್ತಿರುವ ಸಾತ್ವಿಕ ಸ್ತಿçÃಯರು ಅದೆಷ್ಟೋ ಮಂದಿ ಅಂದೂ ಇದ್ದರು, ಇಂದೂ ಇದ್ದಾರೆ. 

     ಆದರೆ ಕಳೆದ ಅರ್ಧ ಶತಮಾನದಿಂದೀಚೆಗೆ ಕಾಲ ಚಕ್ರ ತಿರುಗಿ ಹೆಣ್ಣು ಸಂತಾನಕ್ಕೆ  ಶುಕ್ರ ದೆಸೆ ಬಂದAತಿದೆ. ಇಂದಿನ  ಜನಸಂಖ್ಯೆಯ ಅಂಕಿ ಅಂಶಗಳ ಪ್ರಕಾರ ಗಂಡು ಸಂAತಾನದ ಜನನ ಸಂಖ್ಯೆ ಹೆಚ್ಚಿ ಹೆಣ್ಣು ಸಂತಾನದ ಜನನ ಪ್ರಮಾಣ  ತೀವ್ರವಾಗಿ ಕಡಿಮೆಯಾಗಿದೆ.  ಹೀಗೆ ಜನಿಸಿದ ಹೆಣ್ಣುಗಳ ಪೈಕಿಯೂ ಇಂದಿನ ಕಾಲ ಪರಿಸ್ಥಿತಿಗನುಗುಣವಾಗಿ ಬಹಳಷ್ಟು ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಾಗಿ, ಉನ್ನತ ಉದ್ಯೋಗಗಳನ್ನು ಗಳಿಸಿ, ತಿಂಗಳಿಗೆ  ಅರ್ಧ ಲಕ್ಷ ರೂಗಳಷ್ಟು ವೇತನ ಪಡೆಯುತ್ತಿರುವುದು ಕಂಡುಬರುತ್ತಿದೆ.  ಇದರ ಪರಿಣಾಮ, ಗಂಡಿನ  ವಿವಾಹಕ್ಕೆ ಹೆಣ್ಣು ಸಿಗದೆ, ಯಾರದಾದರೂ ಮನೆಯಲ್ಲಿ ಹೆಣ್ಣೊಂದು ವಿವಾಹದ ವಯಸ್ಸಿನಲ್ಲಿದೆ ಎಂಬ ಸುದ್ದಿ ತಿಳಿದಕೂಡಲೇ ಗಂಡು ಹೆತ್ತ ಮಾತಾ ಪಿತರು ಆ ಕನ್ಯೆಯ ಮನೆತ್ತ  ಕಾತುರದಿಂದ ಧಾವಿಸಿ, ಅಮ್ಮಾ, ಅಪ್ಪಾ, ನಮ್ಮ ಹುಡುಗನಿಗೆ ಮದುವೆಗೆ ಹೆಣ್ಣು  ಹುಡುಕಿ ಸಾಕಾಗಿದೆ, ನಿಮ್ಮ ಮಗಳನ್ನು ನಮ್ಮ ಮಗನಿಗೆ ವಿವಾಹ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿರುವ,  ಆದರೆ  ಆ ಹುಡುಗಿ ಹೆತ್ತವರು ನಾವಿನ್ನೂ ಅವಳ ಮದುವೆ ಯೋಚನೆ ಮಾಢಿಲ್ಲ ಎಂದರೆ, ನೀವು ಯಾವಾಗಲಾದರೂ ಮಾಡಿ, ಪರವಾಗಿಲ್ಲ,  ಅಲ್ಲಿಯವರೆಗೆ ಕಾಯ್ತೇವೆ. ಆದರೆ ನಾವು ಪರಸ್ಪರರು ಒಪ್ಪಂದ ಮಾಡಿಕೊಳ್ಳೋಣ ಎನ್ನುತ್ತಿರುವ ಗಂಡು ಹೆತ್ತವರ ದೈನೇಶಿ (ಸಿ) ಬೇಡಿಕೆ ಕಂಡುಬರುತ್ತಿದೆ. ಇದಕ್ಕೆ ಹೆಣಿನ ಕಡೆಯವರ  ‘ನ’ ಕಾರ ಕೇಳಿಬರುತ್ತಿವುದು ತಿಳಿದುಬಂದಿದೆ. ( ಇಂತಹುದೇ ಪರಿಸ್ಥಿತಿ ನಮ್ನ ಬಂಧುಗಳ ಮನೆಯಲ್ಲಿ ನಡೆದಿದೆ) 

   ಹಲವಾರು ಮ್ಯಾರೇಜ್ ಬ್ಯೂರೋ,  ವಿವಾಹ  ಸಮಾವೇಶಗಳಲ್ಲಿ ಭಾಗವಹಿಸಿದ ಹಲವಾರು ಗಂಡುಗಳ ಬಾಯಲ್ಲಿ   ಛೇ, ಯಾವುದೂ  ಸೆಟ್ ಆಗ್ಲಿಲ್ಲಪ್ಪ  ನನಗೆ ಎಂಬ  ನಿರುತ್ಸಾಹದ ಮಾತುಗಳು ಕೇಳಿ ರ‍್ತಿವೆ. ಒಂದು ಕಾಲಕ್ಕೆ “ಹೆಣ್ಣು ಎಂದರೆ ಹುಣ್ಣು”  ಎನ್ನುತ್ತಿದ್ದ ಗಂಡು ಸಂತಾನವನ್ನೇ ಇಚ್ಚಿಸುತ್ತಿದ್ದ ಹೆಚ್ಚಿನ ಸಂಖೈಯ ಮಾತಾ ಪಿತರ ಬಾಯಿಂದ ೆ : “ ಅಯ್ಯೋ, ಒಂದು ಕಾಲಕ್ಕೆ “ಅಪುತ್ರಸ್ಯ ಗತಿರ್ನಾಸ್ತಿ, ಗಂಡು ಮಕ್ಕಳು ವಂಶೋದ್ಧಾರಕ ಅಂತಾಯಿದ್ದರು ಜನ. ಆದರೆ ಇಂದಿನ ಕಾಲ ಘಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಮನೆಗಳಲ್ಲಿನ  ವೃದ್ಧ ಮಾತಾ ಪಿತರ ಗಂಡು ಮಕ್ಕಳು (ಕಾರಣಗಳು ಹಲವಿರಬಹುದು) ಇಂದು ಹೆತ್ತವರ ರಕ್ಷಣೆ ನಿರ್ಲಕ್ಷಿಸುತ್ತಿರುವುದು, ಆಸ್ತಿ ಕೊಡೆಂದು ಹಿಂಸಿಸುತ್ತಿರುವುದು, ವೃದ್ಧಾಶ್ರಮಗಳಿಗೆ ಸೇರಿÀಸಿ,  ತಮ್ಮ ಹೊಣೆ ಮುಗಿಯಿತೆಂದು ಕೈ ಜಾಡಿಸಿಕೊಳ್ತಿದ್ದಾರಪ್ಪಾ, ಈಗ ಹೆತ್ತವರಿಗೆ ಆಸರೆಯಾಗಿ ನಿಂತು ಯೋಗಕ್ಷೇಮ ನೋಡುತ್ತಿರುವವರು ಹೆಣ್ಣು  ಮಕ್ಕಳೇನಪ್ಪಾ, ಗಂಡು ಮಕ್ಕಳೇನಿದ್ರೂ ಆಸ್ತಿಗಾಗಿ ಹೆತ್ತವರನ್ನು ನೋಡುವವರು, ಇಂದು ಹೆಣ್ಣೇ ಹೆತ್ತವರಿಗೆ ಕಣ್ಣಾಗಿದ್ದಾರಪ್ಪಾ” ಎಂಬುದಾಗಿ ಉದುರುತ್ತಿರುವ ಅಣಿ ಮುತ್ತುಗಳು ಆಗಿವೆ.     

     “ಹೆಣ್ಣೇ ಹೆತ್ತವರಿಗೆ ಕಣ್ಣಾಗಿದ್ದಾರೆ”  ಎಂಬ ಮಾತು ಅದೆಷ್ಟು ಸತ್ಯ ಎಂಬುದನ್ನು ನಿಮಗೆ ತಿಳಿಸುತ್ತಿದೆ  ಈ ಪ್ರಸಂಗ 

      ಆತ  ಭಾರತದ ಒಂದು ರಾಜ್ಯದ ಮುಖ್ಯ ಮಂತ್ರಿಯಾಗಿದ್ದವರು. ಇದಕ್ಕೂ ಮುಂಚೆ ಈತ ಆ ರಾಜ್ಯದಲ್ಲಿ ಪ್ರಮುಖ ರಾಜಕೀಯ ಪಕ್ಷವನ್ನು ಕಟ್ಟಿ ಬೆಳೆಸಿ ಆ ಪಕ್ಷದ ಅಧ್ಯಕ್ಷರಾಗಿದ್ದವರು. ಹಲವು  ಚುನಾವಣೆಗಳಲ್ಲಿ ಗೆದ್ದು  ವಿಧಾನಸಭಾ : ಲೋಕಸಭಾ ಸದಸ್ಯರಾಗಿ ಬೀಗಿದವರು. ಯಾವುದೋ ಒಂದು  ವಿವಾದ, ತೊಡಕಿನ ಕಾರಣ ಈತ ಮುಖ್ಯ ಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾದಾಗ ಈತನ ಪಕ್ಷ ಮುಖ್ಯ ಮಂತ್ರಿ ಸ್ಥಾನಕ್ಕೆ ಹೊಸಬರನ್ನು ಕೂರಿಸದೆ ಈ ಮುಖ್ಯ ಮಂತ್ರಿಯ ಪತ್ನಿಯನ್ನೇ ಸಿ ಎಂ ಎಂದು ಘೋಷಿಸಿ ಆಕೆಯನ್ನು ಸಿಎಂ ಮಾಡಿತ್ತು ಆ ರಾಜ್ಯ.  ನಂತರದಲ್ಲಿ ಈತ ಕೇಂದ್ರ  ಸರ್ಕಾರದ ಮಂತ್ರಿ ಮಂಡಲದಲ್ಲಿ ಸಚಿವರಾಗಿ÷ಶಕ್ತಿಶಶಾಲಿ ಖಾತೆಯನ್ನು ವಹಿಸಿಕೊಂಡು ದರ್ಬಾರ್ ಮಾಡಿದವರು, ‘ಇನ್ ಆಫೀಸ್ ಆರ್ ಔಟ್ ಆಫ್ ಆಫೀಸ್’ ಎಂಬ ಇಂಗ್ಲೀಷಿನ ವಾಕ್ಯದಂತೆ ಅಧಿÀಕಾರದಲ್ಲಿ ಇರಲಿ, ಇಲ್ಲದಿರಲಿ ಒಂದೇ ಗತ್ತು, ಜೋರು,  ದರ್ಬಾರು ಈತನದಾಗಿತ್ತು., ತನಗಿದ್ದ ಅಧಿಕಾರ, ಪ್ರಭಾವ ಬಳಸಿ ತನ್ನ ಗಂಡು ಮಕ್ಕಳನ್ನು ಈತನ ರಾಜ್ಯದ ರಾಜಕಾರಣದಲ್ಲಿ  ಪ್ರಮುಖ ಸ್ಥಾನಗಳಲ್ಲಿ ಕೂರಿಸಿ, ಹಣ ಗಳಿಸಲು ವ್ಯವಸ್ಥೆ ಮಾಡಿದ್ದಾತ, ತನ್ನ ಹಲವು ಪುತ್ರಿಯರನ್ನು ಬಹಳ ಅನುಕೂಲಸ್ಥ  ಸಿರಿವಂತರ ಮನೆಗಳ ಹುಡುಗರೊಂದಿಗೆ ವಿವಾಹ ಮಾಡಿದ್ದರು..

     ಇ.ಂತಹಾ ರಾಜಕಾರಣಿ, ಅಧಿಕಾರದಲ್ಲಿದ್ದಾಗ ಅಧಿಕಾರ : ಸರ್ಕಾರದ ಹಣ ದುರುಪಯೋಗದ ಆರೋಪವೋ  ಯಾವುದೋ ನೆನಪಿಲ್ಲ,  ಇದರ ಶಿಕ್ಷೆಯ ಅಂಗವಾಗಿ ಸೆರೆವಾಸದಲ್ಲಿದ್ದಾತ.  ವೃದ್ಧಾಪ್ಯ ; ಅನಾರೋಗ್ಯಕ್ಕೆ ಚಿಕಿತ್ಸೆ ಕಾರಣಕ್ಕಾಗಿ ಜಾಮೀನಿನನ ಮೇಲೆ ಹೊರ ಬಂದವರೀತ ಎಂಬ ನೆನಪು. ಈ ಅವಧಿಯಲ್ಲಿ ಈತನಿಗೆ ಕಿಡ್ನಿ ವಿಫಲತೆ ಕಾಡಿತು. ಇಷ್ಟು ಹೊತ್ತಿಗೆ ನಿಮಗೇ ಗೊತ್ತಾಗಿರುತ್ತೆ ಈತ  ಯಾರು ? ಎಂದ, ಆದರೂ ಈತನ ಹೆಸರು ಇಲ್ಲಿ ಸೂಚಿಸುವುದು ಅನಾವಶ್ಯಕ,  ನಮ್ಮೀ ನಾಯಕನಿಗೆ ಯಾರಾದರೂ ದಾನಿಗಳಿಂದಲೋ, ಅಥವಾ ಕೇಳಿದಷ್ಟು ಹಣ ಚೆಲ್ಲಿ ಕಿಡ್ನಿಯನ್ನು ಕೊಂಡುಕೊಳ್ಳುವ ಶಕ್ತಿ ಇದ್ದಿತು, 

    ಈ ಮಧ್ಯೆ ಈತನ  ವಂಶೋದ್ಧಾರಕ ಸುಪುತ್ರರು ಯಾರಾದರೂ ಅಪ್ಪನಿಗೆ ಕಿಡ್ನಿ ದಾನ  ಕೊಡಲು ಮುಂದಾಗಿದ್ದರೋ, ಇಲ್ಲವೋ, ಇಲ್ಲದಿದ್ದರೆ ಅದೇಕೆ ಮುಂದಾಗಲಿಲ್ಲ ? ಮುಂದಾಗಿದ್ದರೆ   ಇದಕ್ಕೆ ಅಪ್ಪನೇ ಸಮ್ಮತಿಸಿರಲಿಲ್ಲವೋ ಇವ್ಯಾವುವೂ ಸಾರ್ವಜನಿಕವಾಗಿ ತಿಳಿದುಬರಲಿಲ್ಲ. ಸಾರ್ವಜನಿಕವಾಗಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವರದಿಯಾದ ಮಾಹಿತಿ  ಎಂದರೆ ಈತನ  ಮಧ್ಯ ವಯಸ್ಸಿನ ಪುತ್ರಿಯೊಬ್ಬರು ತಮ್ಮ ಕಿಡ್ನಿಯನ್ನು ಅಪ್ಪನಿಗೆ ದಾನಮಾಡಿದರು. ವೈದ್ಯರ ಜಾಗರೂಕತೆಯ ಚಿಕಿತ್ಸೆಯಿಂದ ಅಪ್ಪ ಮಗಳು ಇಬ್ಬರೂ ಆರೋಗ್ಯವಾಗಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ ಎಂಬುದು. ಈ ಘಟನೆ ಮುಗಿದ ಮೇಲೆ ಹಲವು  ರಾಜಕೀಯ ಪ್ರಮುಖರಿಂದ  ಪುತ್ರಿಯನ್ನು ಹೊಗಳಿದ ಪ್ರತಿಕ್ರಿಯೆಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡುವು. 

    ಇದೆಲ್ಲಾ ಒತ್ತಟ್ಟಿಗಿರಲಿ, ನಮ್ಮ ಇಂದಿನ  ಚರ್ಚೆಗೆ ಅಗತ್ಯವಾದ ವಿಷಯ ಎಂದರೆ  ‘ಅಪುತ್ರಸ್ಯ ಗತಿರ್ನಾಸ್ತಿ’ ಪುತ್ರ ಸಂತಾನವಿಲ್ಲದಿದ್ದರೆ ಹೆತ್ತವರಿಗೆ ಗತಿ : ಸದ್ಗತಿಯೇ ಇಲ್ಲ ಎಂದಿದ್ದ ಹಲವು ಶತಮಾನಗಳ ಹಿಂದಿನ ಕಾಲದ ಘೋಷಣೆ ಇಂದೂ ಪ್ರಸ್ತುತ ಎನಿಸುತ್ತಿದೆಯೇ !  ಈ ಪ್ರಸಂಗದಲ್ಲಿ ಅಪ್ಪನಿಗೆ ಪುತ್ರರಿದ್ದೂ ಇವರಿಂದ  ಕಿಡ್ನಿ ದಾನ ಸಿಗಲಿಲ್ಲವಾದ ಕಾರಣ, ‘ಅಪುತ್ರಸ್ಯ ಗತಿರ್ನಾಸ್ತಿ ಎಂಬ ಹಳೆಯ ಘೋಷಣೆ ಸವೆದು, ಸವಕಲಾಗಿ, ಪಕ್ಕಕ್ಕೆ ಸರಿದು ಹೋದ ಘೋಷಣೆ ಎಂದು ಪರಿಭಾವಿಸಬೇಕೇ ? “ಹೆಣ್ಣು ಹೆತ್ತವರಿಗೆ ಹುಣ್ಣು, ಭಾರ, ಹೆತ್ತವರಿಗೆ ಈ ಹೆಣ್ಣು ಸಂತಾನ ಗತಿ, ಸದ್ಗತಿ ಕೊಡಿಸಲಾರಳು” ಎಂದು ಹಿಂದೊAದು ಕಾಲಕ್ಕೆ  ಪುರುಷ ಪ್ರಧಾನ ಸಮಾಜದಿಂದ ತೀವ್ರ ಖಂಡನೆ, ನಿರ್ಲಕ್ಷö್ಯ ತಿರಸ್ಕಾರಕ್ಕೆ ಗುರಿಯಾಗಿ ಮೂಲೆಗೆ ಒತ್ತರಿಸಲ್ಪಟ್ಟ ಹೆಣ್ಣೇ ಇಂದು ಅಪ್ಪನಿಗೆ ಜೀವ ದಾನ ಮಾಡಿದ  “ಅಪರೂಪದಲ್ಲಿ ಅಪರೂಪ’ ರೇರೆಸ್ಟ್ ಆಫ್ ದಿ  ರೇರ್” ಪ್ರಸಂಗ ನಮ್ಮೀ ಪುರುಷ ಪ್ರಧಾನ ಸಮಾಜಕ್ಕೆ  ಕೊಡುತ್ತಿರುವ ಸಂದೇಶ ಎಂತಹುದು ? ಇಲ್ಲಿ ಬಾರಿಸಿರುವ ಎಚ್ಚರಿಕೆಯ ಗಂಟೆಯ  ಸದ್ದು ಇಂದಿನ ಸಮಾಜವನ್ನು  ಮುಂದೆ ಹೇಗೆ ಸಜ್ಜುಗೊಳಿಸ ಬೇಕು ! ?  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು . . . . .  ! ? 

Comments

  1. ಬೆಂಗಳೂರಿನಲ್ಲಿ ಹಲವಾರು ಲಾರಿಗಳ ಹಿಂದೆ ಈ slogan ಅನ್ನು ನೋಡಿದೆ-
    ಬೇಟಿ ಬಚಾವೋ, ಬೇಟಿ ಪಡಾವೋ.‌

    ReplyDelete
    Replies
    1. Nudiyodu ondu nade mattondu embude Nammallina bahalashtu janara neetiyaguttide

      Delete

Post a Comment