ಕೋರವಂಗಲದ ಬೂಚೇಶ್ವರ ದೇವಾಲಯ

 ಕೋರವಂಗಲದ  ಬೂಚೇಶ್ವರ ದೇವಾಲಯ  

ಸಂಗ್ರಹ ಲೇಖನ- ಪ್ರೊ ಶ್ರೀ ಶ್ರೀನಿವಾಸ ಪುಟ್ಟಿ, ಮೈಸೂರು 



ಕೋರವಂಗಲವು ಹಾಸನ ಜಿಲ್ಲೆ ಮತ್ತು ಹಾಸನ ತಾಲೂಕಿಗೆ ಸೇರಿದ ಒಂದು ಗ್ರಾಮ. ಈ ಗ್ರಾಮವು ಜಿಲ್ಲಾ ಕೇಂದ್ರ ಹಾಸನದಿಂದ ಈಶಾನ್ಯ (northeast) ಕ್ಕೆ ೧೧ ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದ ಮೂರು ದೇವಾಲಯಗಳಿದ್ದು, ಅವುಗಳಲ್ಲಿ ಬೂಚೇಶ್ವರ (ಭೂತನಾಥೇಶ್ವರದ ಅಪಭ್ರಂಶ) ದೇವಾಲಯವು ಅತ್ಯಂತ ಭವ್ಯವಾಗಿಯೂ, ಸುಂದರವಾಗಿಯೂ ಮತ್ತು ದೇವಾಲಯ ನಿರ್ಮಾಣವಾದ ನಂತರದಲ್ಲಿ ಯಾವುದೇ ಸೇರ್ಪಡೆಯೂ ಇಲ್ಲದೇ, ಇದ್ದಂತೆಯೇ ಇದ್ದು, ಹೊಯ್ಸಳ ವಾಸ್ತು ಶಿಲ್ಪಕ್ಕೆ ಒಂದು ಉತ್ತಮ ಉದಾಹರಣೆಯಾಗಿ ಉಳಿದಿದೆ. ದೇವಾಲಯದ ಆಗ್ನೇಯ ಭಾಗದಲ್ಲಿ (Southeast) ಕಂಡುಬರುವ ಬೃಹತ್ ಶಾಸನದ ರೀತ್ಯಾ ಈ ದೇವಾಲಯದ ನಿರ್ಮಾಣವಾದದ್ದು, ಕ್ರಿಸ್ತಶಕ ೧೧೭೩ರಲ್ಲಿ, ಒಂದನೇ ನರಸಿಂಹನ ದಂಡನಾಯಕನಾಗಿದ್ದ ಬೂಚಿರಾಜನು, ಇಮ್ಮಡಿ ವೀರಬಲ್ಲಾಳನ ಪಟ್ಟಾಭಿಷೇಕದ ನೆನಪಿಗಾಗಿ ಈ ದೇವಾಲಯದ ನಿರ್ಮಾಣ ಮಾಡಿದನೆಂದು ಮೇಲೆ ಉಲ್ಲೇಖಿಸಿರುವ ಶಾಸನದಿಂದ ತಿಳಿದುಬರುತ್ತದೆ.............

Comments