ಕುಲ ಕುಲವೆಂದು ಹೊಡೆದಾಡದಿರಿ

 ಕುಲ ಕುಲವೆಂದು ಹೊಡೆದಾಡದಿರಿ

 ಲೇಖಕರು : ಎಂ ಆರ್ ವೆಂಕಟರಾಮಯ್ಯ   

ಶೀರ್ಷಿಕೆಯಲ್ಲಿನ ವಚನದ ಸಾಲು ಕನಕದಾಸರು ರಚಿಸಿದ ಕೃತಿಯ ಒಂದು ಭಾಗವಾಗಿದೆ. ಇದರ ಮುಂದುವರಿದ ಭಾಗವೆಂದರೆ “ಕುಲ ಕುಲ ಕುಲವೆಂದು ಹೊಡೆದಾ ಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಬಲ್ಲಿರ \ ಹುಟ್ಟದ ಯೋನಿಗಳಿಲ್ಲ ಮೆಟ್ಟಿದ ಭುಮಿಗಳಿಲ್ಲ \ಅಟ್ಟು ಉಣ್ಣದ  ವಸ್ತುಗಳಿಲ್ಲ\ ಕೂಟಕಾಣಿಸ ಬಂದು ಹಿರಿದೆನು ಕಿರಿದೆನು \ ನೆಟ್ಟನೆ ರ‍್ವಜ್ಞನ ನೆನೆಕ೦ಡ್ಯಾ ಮನುಜ \ಜಲವೇ ಸಕಲ ಕುಲಕ್ಕೆ ತಾಯಲ್ಲವೆ \ಜಲದ ಕುಲವನೆನಾ ದರು ಬಲ್ಲಿರಾ \ಜಲದೂ ಕುಳಿಯ೦ತೆ ಸ್ಥಿರವಲ್ಲ ಈ ದೇಹ  \ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ ” ಎಂಬುದಾಗಿದೆ. ಯಾರೀ ಕನಕದಾಸರು ? ಯಾವ ಯುಗದಲ್ಲಿದ್ದವರು ? ಏನಿವರ ಹಿರಿಮೆ ? ಎಂದು ಪ್ರಶ್ನಿಸಬಹದು ಇಂದಿನ ಕೆಲವರು. ಇಂತಹವರ ಮಾಹಿತಿಗಾಗಿ ಕನಕದಾಸರ ಬಗ್ಗೆ ಸಂಕ್ಷಿಪ್ತ ಮಾಹಿತಿ ಹೀಗಿದೆ : 



ಕಾಗಿನೆಲೆಯಲ್ಲಿನ ಬೀರೇಗೌಡ ಬೀಚಮ್ಮ ದಂಪತಿಗಳ ಪುತ್ರನಾಗಿ ಕುರುಬರ ಕುಟುಂಬದಲ್ಲಿ ಜನಿಸಿದವರು ಈ ಕನಕರು. ಪುರಂದರ ದಾಸರ ಸಮಕಾಲೀನರಾಗಿದ್ದ ಈ ಸಂತರು ಕುರುಬರ ಕುಟುಂಬದಲ್ಲಿ ಜನಿಸಿದ್ದರೂ ನಂತರದಲ್ಲಿ, ಕೆಲ ಕಾಲ ವ್ಯಾಸರಾಯರ ಶಿಷ್ಯರಾಗಿ, ವೈಷ್ಣವ ಪಂಥದ ಅನುಯಾಯಿಗಳಾಗಿ, ತಿರುಪತಿಯ ಶ್ರೀ ವೆಂಕಟೇಶ್ವರನ ಭಕ್ತರಾಗಿದ್ದವರು ಎಂದಿದ್ದಾರೆ ಹಲವು ಲೇಖಕರು.

     ಕ್ರಿ ಶ ೧೫೦೮-೧೬೦೬ ರ ಅವಧಿಯಲ್ಲೇ ಈ ಸಂತರು “ಕುಲ ಕುಲವೆಂದು ಹೊಡೆದಾಡ ದಿರಿ” ನೀವೆಲ್ಲಾ ಮನುಷ್ಯರು ಮನುಷ್ಯರಂತೆ ಬದುಕಿ ಬಾಳಿ ಎಂದು ಉಪದೇಶಿಸಿ ೫-೬ ಶತಮಾನಗಳ ಕಾಲ ಕಳೆದಿದ್ದÀರೂ ನಾವು ಮಾತ್ರ ಅವರೀ ಬೋಧನೆಯನ್ನು ನೆನಪಿಟ್ಟುಕೊಂಡು ಆದರಂತೆ ನಡೆಯದೆ, ಜಾತಿ, ಒಳ ಜಾತಿ, ಪಂಗಡ, ಒಳ ಪಂಗಡ, ಹಿಂದುಳಿದವರು, ಮುಂದುಳಿದವರು, ಮೇಲ್ವರ್ಗ ಕೆಳವರ್ಗ, ಅಲ್ಪ ಸಂಖ್ಯಾತರು, ಬಹುಸಂಖ್ಯಾತರು ಎಂಬೆಲ್ಲಾ ತಾರತಮ್ಮಗಳನ್ನು ನಾವೇ ಸೃಷ್ಟಿಸಿಕೊಂಡು, ಪರಸ್ಪರರು ಕಚ್ಛಾಡಿ, ಹೊಡೆದಾಡಿ, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದು, ಭೂಮಿಗೆ ಬಿದ್ದವರನ್ನು ಮೇಲೆತ್ತದೆ ಅವರನ್ನು ತುಳಿದುಕೊಂಡೇ ನಡೆಯುತ್ತಿದ್ದೇವೆ. ಭಸ್ಮಾಸುರನಂತೆ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ.

    ನಮ್ಮೆಲ್ಲರ ಜನನ ತಾಯಿಯ ಗರ್ಭದಲ್ಲೇ, ಆಕಾಶ, ಭೂಮಿ, ವಾಯು, ಅಗ್ನಿ, ಜಲ  ಎಂಬ ಪಂಚಭೂತಗಳಿAದ ಸೃಷ್ಟಿಸಲ್ಪಟ್ಟ ನಮ್ಮೆಲ್ಲರ ದೇಹಗಳೂ ಒಂದೇ ಆಗಿವೆ. ಜನಿಸಿದ ಮೇಲೆ ನಾವೆಲ್ಲಾ ಬಾಳುವುದು ಈ ಭೂಮಿಯ ಮೇಲೇ, ಸೂರ್ಯ, ಚಂದ್ರರ ಶಾಖ, ಬೆಳಕು  ನಮಗೆಲ್ಲರಿಗೂ ಒಂದೇ ಆಗಿವೆ. ತಿನ್ನುವ ಆಹಾರ ಪದಾರ್ಥಗಳು, ಕುಡಿಯುವ ನೀರು, ಮೈಯಲ್ಲಿ ಹರಿಯುವ ರಕ್ತ ಒಂದೇ ಆಗಿವೆ, ನೋವು, ನಲಿವಿನ ಸಂದರ್ಭಗಳಲ್ಲಿ ನಮ್ಮ ನಗೆ, ಅಳು, ಕಣ್ಣೀರು ಒಂದೇ ಆಗಿರುತ್ತದೆ. ಇಷ್ಟಲ್ಲಾ ಆದರೂ ಕಮಲದೆಲೆಯ ಮೇಲಿರುವ ಜಲ ಬಿಂದು ಯಾವ ಕ್ಷಣದಲ್ಲಾದರೂ ಒಡೆದು ಹೋಗುವಂತೆ ನಮ್ಮೀ ಅಶಾಶ್ವತ ದೇಹ ಯಾವ ಘಳಿಗೆಯಲ್ಲಾದರೂ ಮಣ್ಣು : ಅಗ್ನಿಗೆ ಆಹುತಿಯಾಗಬುಹುದು.  ಹೀಗಿರುವಾಗ, ಅಲ್ಪ ಕಾಲ ಬದುಕಿ ಕಣ್ಮರೆಯಾಗುವ ಮನುಷ್ಯ ಮನುಷ್ಯರ ನಡುವೆ ಅಡ್ಡಗೋಡೆಯಾಗಿ ನಿಂತು, ಜನರಲ್ಲಿ ತಾರತಮ್ಯ ಭಾವನೆ ಬೆಳೆಸಿ ಪರಸ್ಪರರನ್ನು ಬೇರ್ಪಡಿಸುವ ಈ ಕುಲ, ಜಾತಿ, ಮತ, ಪಂಥಗಳೇಕಿರಬೇಕು ? 

    ಪ್ರತಿ ವರ್ಷವೂ ಕನಕದಾಸರ, ಬಸವಣ್ಣ, ಅಂಬೇಡ್ಕರ್ ಜಯಂತಿಗಳನ್ನು ಆಚರಿಸತ್ತಿದ್ದೇವೆ. ಅªರ ನೆನಪಿನಲ್ಲಿ ಸರ್ಕಾರ ಶಾಲಾ ಕಾಲೇಜು ಕಛೇರಿಗಳಿಗೆ ರಜೆಯನ್ನೂ ಘೋಷಿಸುತ್ತಿದೆ. ಇದೇ ಸಂದರ್ಭದಲ್ಲಿ,  ಇವರನ್ನು ಒಬ್ಬ ಮಹಾನ್ ಕ್ರಾಂತಿಕಾರ, ಸಂತ, ದೂರದೃಷ್ಟಿಯುಳ್ಳ ದಾರ್ಶನಿಕ ಎಂದು ಹಲವರು ನೆನಪಿಸಿಕೊಳ್ಳುವುದಿಲ್ಲ. ಅದರ ಬದಲಿಗೆ, ಇವರನ್ನು ಒಂದು ಜಾತಿಗೇ ಸೀಮಿತಗೊಳಿಸಿ, ಇವರು ನಮ್ಮ ಜಾತಿಯವರು. ಆವರಿದ್ದ ಕಾಲದ ಸಮಾಜ ಅವರನ್ನು ಕಡೆಗಾಣಿಸಿತ್ತು, ಕೀಳಾಗಿ ಕಂಡಿತ್ತು. ಅದಕ್ಕೇ ನಾವು ಮೇಲೇರಲಾಗಲಿಲ್ಲ. ಅದಾಕ್ಕಾಗಿಯೇ ನಮ್ಮ ಜಾತಿಯವರೆಲ್ಲಾ ಇಂದು ಒಗ್ಗಟ್ಟಾಗಬೇಕು. ನಮ್ಮ ಜಾತೀಯ ಹೆಸರಿನಲ್ಲಿ ಸಂಘ ಮಠ ಕಟ್ಟಿ ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕು, ವಿದ್ಯಾಭ್ಯಾಸ ಉದ್ಯೋಗ ಎಲ್ಲದರಲ್ಲೂ ಹೆಚ್ಚು ಮೀಸಲಾತಿ ಪಡೆಯಬೇಕು” ಇತ್ಯಾದಿ ಪ್ರಚೋದಕ ಭಾಷಣಗಳನ್ನು ಈ ಸಮಾಜದಲ್ಲಿನ ಹಲವು ಸ್ವಯಂಘೋಷಿತ ನಾಯಕರು, ಬುದ್ಧಿಜೀವಿಗಳು, ಪ್ರತಿನಿಧಿಗಳು ಎನಿಸಿಕೊಂಡ ಜನರಿಂದ ಕೇಳುತ್ತಿರುತ್ತೇವೆ. ಸಮಾಜದಲ್ಲಿ ಎಲ್ಲ ವರ್ಗದವರ ಒಗ್ಗಟ್ಟನ್ನು ಸಾಧಿಸಿ ಭೇದರಹಿತ ಸಮಾಜ ನಿರ್ಮಿಸುವ ಅಗತ್ಯತೆ ಹಿಂದೆದೆಂದಿಗಿಂತಾ ಇದು ಹೆಚ್ಚು ಅಗತ್ಯವಾÀಗಿದ್ದರೂ ಇದಕ್ಕೆ ಅವಕಾಶ ನೀಡದೆ,  ಜನರ ನಡುವೆ ಹೆಚ್ಚು ಹೆಚ್ಚು ಭೇದಭಾವ, ತಾರತಮ್ಯ ಸೃಷ್ಟಿಸಿ, ಜನರನ್ನು ಜಾತಿ, ಮತ, ಧರ್ಮದ ಹೆಸರಿನಲ್ಲಿ ಒಡೆಯುವ ಪ್ರಚೋದಕ ಮಾತುಗಳು ಕೇಳಿಬರುತ್ತಿವೆ. ಇದು ಸ್ವಾಮಿ, ಸಂತ ದಾರ್ಶನಿಕರು ಎನಿಸಿಕೊಂಡವರನ್ನು ನಾವು ಸ್ಮರಿಸುವ ಪರಿ, ಆ ಮಹಾನ್ ಚೇತನಗಳಿಗೆ ಕೃತಜ್ಞತೆ ಸಲ್ಲಿಸುವ ವೈಖರಿ. 

ಬ್ರಿಟಿಷರು ಹಿಂದೂಸ್ಥಾನವನ್ನು ಧೀರ್ಘಕಾಲ ತಮ್ಮ ವಶದಲ್ಲಿಟ್ಟುಕೊಳ್ಳಲು “ಡಿವೈಡ್ ಅಂಡ್ ರೂಲ್” ಎಂಬ ಒಡೆದು  ಆಳುವ ನೀತಿಯನ್ನು ಅನುಸರಿಸಿದರು. ಜನರಲ್ಲಿ ಒಗ್ಗಟ್ಟನ್ನು ಒಡೆದರು ಎಂದು ಆಕ್ಷೇಪಿಸುವವರು ನಾವು. ಆದರೆ ಸದಾ ಸಹಕಾರ ಸಾಮರಸ್ಯಗಳಿಂದ ತಮ್ಮ ವೃತ್ತಿ ಕಸುಬುಗಳಲ್ಲಿ ನಿರತರಾಗಿ ತಮ್ಮ ಉದ್ದಾರಕ್ಕಾಗಿ ಶ್ರಮಿಸುತ್ತಿರುವ ನಮ್ಮ ಜನರಲ್ಲಿ ‘ಜಾತಿ’ ಎಂಬ ವಿಷ ಬೀಜ ಭಿತ್ತಿ, ಜನರ ಜನರ ನಡುವೆ ‘ಜಾತಿ’ ಎಂಬ ಅಡ್ಡ  ಗೋಡೆ ನಿರ್ಮಿಸಿ ಒಡೆದು ಆಳುತ್ತಿರುವವರು ಇಂದು ನಮ್ಮವರೇ ಆಗಿರುವಾಗ, ನಮ್ಮವರೇ ನಮಗೆ ಶತ್ರುಗಳಂತೆ ವರ್ತಿಸುತ್ತಿರುವಾಗ, ಅಂದು ಹೊರಗಿನಿಂದ ಬಂದ ಬ್ರಿಟಿಷರನ್ನು ಶತ್ರುಗಳೆಂದು, ನಮ್ಮಲ್ಲಿನ ಒಗ್ಗಟ್ಟನ್ನು ಒಡೆದವರೆಂದು ನಿಂದಿಸುವುದರಲ್ಲಿ ಅರ್ಥವಿದೆಯೇ !  ದುಶ್ಮನ್ ಕಹಾ ಹೈ ? ಎಂದವರಿಗೆ ಬಗಲ್ ಮೆ ಹೈ ಎಂದುತ್ತರಿಸಬೇಕಾಗುತ್ತದೆ.

‘ಜಾತಿ’ ಮಾತು ಬಂದಾಗ, ನಮ್ಮಲ್ಲಿನ ಸ್ವಯಂಘೋಷಿತ ನಾಯಕರು, ಬುದ್ಧಿ ಜೀವಿಗಳೆಂದು ತಮಗೆ ತಾವೇ ಹಣೆಪಟ್ಟಿ ಕಟ್ಟಿಕೊಂಡವರು ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವುದು ಗಮನಾರ್ಹ ವಿಷಯವಾಗಿದೆ.  “ಜಾತಿ ಜಾತಿಗಳ ನಡುವೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಬರಬೇಕು. ಇದಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕ ಪ್ರಜ್ಞೆ ಮನೋಭಾವ ಬೆಳೆಯಬೇಕು. ಕನಕದಾಸರ ಜಯಂತಿಯಲ್ಲಿ ಸಿಳ್ಳೆ ಕೇಕೆ ಹಾಕಿ ಹೋದರೆ ಸಾಲದು. ಅವರ ವಿಚಾರಗಳನ್ನು ಸಂದೇಶಗಳನ್ನು ಮೌಲ್ಯಗಳನ್ನು ಬೆಳೆಸಿಕೊಳ್ಳುವ ಕೆಲಸ ಆಗಬೇಕು. ಆಗ ಮಾತ್ರ ಸಂತ ಶ್ರೇಷ್ಠರಿಗೆ ಗೌರವ ಸಲ್ಲಿಸಿದಂತಾಗುತ್ತದೆ” ಎಂದವರು ಅಂದು ಅಧಿಕಾರದಲ್ಲಿದ್ದವರು ನಮ್ಮ ನಾಯಕರೇ. 

ಒಮ್ಮೆ ಸುವ್ಯವಸ್ಥೆ ಪ್ರಗತಿಗೆ ಜಾತಿ ಅಡ್ಡಿ, ಅದು ಇರಬಾರದು ಎನ್ನುವವರೂ ಇವರೇ. ಮತ್ತೊಮ್ಮೆ, ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಸಮಾನತೆ ಜಾತಿ ಜಾತಿಗಳ ನಡುವೆ ಬಂದಿಲ್ಲ. ಅದು ಬರುವರೆಗೆ ಜಾತಿ ಇರಬೇಕು ಎನ್ನುವ ಇವರದು ದ್ವಂದ್ವ ನೀತಿ, ಎರಡು ಮುಖಗಳು, ಜಾತಿ ವ್ಯವಸ್ಥೆ ತಮಗೆ ಅನುಕೂಲ ಎನಿಸಿದಾಗ, ಇದಿರಲಿ ಎನುವ, ಜಾತಿ ವ್ಯವಸ್ಥೆ ತಮಗೆ ಪ್ರಯೋಜನವಿಲ್ಲ ಎನಿಸಿದಾಗಲೋ, ಜಾತ್ಯಾತೀತ ಮನೋಭಾವದವರು ಇವರು ಎಂಬ ಭೇಷ್‌ಗಿರಿ ಪಡೆಯಬೇಕೆನಿಸಿದಾಗ, “ಏ, ಜಾತಿ ವ್ಯವಸ್ಥೆ ಪ್ರಗತಿಗೆ ಮಾರಕ, ಇದು ಹೋಗಬೇಕು” ಎನ್ನುವ ಇಬ್ಬಗೆಯ ನೀತಿ ನಮ್ಮವರದಾಗಿದೆ.   ನಮ್ಮ ಮಧ್ಯೆ ಇರುವ ಹಲವರಾಗಿದೆ.

   ಒಂದು ಜಾತಿಯವನ ಕಾಯಿಲೆಗೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ಉಪಚಾರ, ಇನ್ನೊಂದು ಜಾತಿಯವನಿಗೆ ಈ  ಸೌಕರ್ಯ, ಉಹೂಂ ಇಲ್ಲ, ಕೊಡಲಾಗದು  ಏಕೆಂದರೆ ಇವನು ಹಿಂದುಳಿದವನಲ್ಲ, ಮುಂದುವರಿದವನು ಎಂಬುದು ಇವರ ಇಂದಿನ ನೀತಿ.  ಮಕ್ಕಳು ಅಮಾಯಕರು, ಸುಳ್ಳು, ಮೋಸ ಅರಿಯದವರು, ಇವರು ದೇವರ ಸಮಾನ ಎನ್ನುವವರೂ ಇವರೇ ಇದೇ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತç, ಊಟ, ಸೈಕಲ್ ವಿತರಣೆ ವಿಷಯ ಬಂದಾಗ ಇವೆಲ್ಲಾ ಒಂದು ಜಾತಿಯವರಿಗೇ  ಸೀಮಿತ, ಉಳಿದವರಿಗೆ ಇದು ಅಲಭ್ಯ ಎನ್ನುವವರು ಇವರು. ಈ ಅಸಮಾನತೆ ಏಕೆ ? ಎಂಬ ಪ್ರಶ್ನೆಗೆ ಆಳುವವರ ಉತ್ತರ ಎಂದರೆ ಇವರು ಈ ಜಾತಿಯಲ್ಲಿ ಹುಟ್ಟಿದವರಲ್ಲ,  ಬೇರೆಯ ಜಾತಿಯವರು ಎಂಬುದಾಗಿದೆ. ಅಂದರೆ ಇದರರ್ಥ, ಈ ಬೇರೆ ಜಾತಿಯವರು ಎಂದರೆ ಬೇರಾವುದೋ ದೇಶದಿಂದಲೋ, ಲೋಕದಿಂದಲೋ ಬಂದವರು,  ಏಲಿಯನ್ಸ್ ಎಂಬAತೆ ವರ್ತನೆ ಆಳುವ ಪ್ರಭುಗಳದು. ಹೀಗಾಗಿ  ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕದಾಸರ ಬೋಧನೆ  ಪ್ರಭುಗಳಿಗೆ ಕೇಳಿಸದು ಎನ್ನೋಣವೇ ! ಅರ್ಥವಾಗಿಲ್ಲ ಎನ್ನಬಹುದೇ ? ಅಥವಾ ಈ ದಾಸರು  ನಮ್ಮವರೇರೀ,  ಆದರೆ ಇವರ ಈ ಬೋಧನೆ ! ಉಹೂಂ, ಇಂದಿನ ಕಾಲಕ್ಕೆ ಸರಿಹೊಂದದು ಬಿಡಿ, ಅದಕ್ಕೇ ಇವರನ್ನ ನಾವು ನಮ್ಮವರು ಎಂದು ಒಪ್ಪಿ  ಅಪ್ಪಿ ತಬ್ಬಿ, ಇವರ ಬೋಧನೆಯನ್ನು ದೂರವಿಟ್ಟಿರುವುದು” ಎನ್ನುವ ಇವರ ನಿಲುವು ಸರಿ, ಒಪ್ಪತಕ್ಕದ್ದೇ ಅನ್ನ ಬೇಕೇ  !


ಇದರರ್ಥ, ನಮ್ಮ ಹಲವು ನಾಯಕರಿಗೆ ಜನರ ಪ್ರಗತಿ ಬೇಕಾಗಿಲ್ಲ. ಇವರದು ಒಡೆದು ಆಳುವ ನೀತಿ, ತಮ್ಮವರಲ್ಲದವರನ್ನು ನೆಲಕ್ಕೆ  ತುಳಿಯವುದು, ತಮ್ಮವರಾದವರನ್ನು ಮೇಲೆತ್ತುವುದು, ಹೀಗೇಕೆ ? ಎಂದವರಿಗೆ, ನೆಲಕ್ಕೆ ಬಿದ್ದವನು ಸಬಲ, ತುಳಿದರೂ ಹೇಗೋ ಮೇಲೇಳುತ್ತಾನೆ, ಅದರಿಂದ ಅವನನ್ನು ತುಳಿದರೆ ತಪ್ಪಾಗುವುದಿಲ್ಲ ಎನ್ನುವರು ಇವರು. ತಮ್ಮ ಇಂತಹಾ ಕೆಟ್ಟ ವಾದಕ್ಕೆ ಸಮರ್ಥನೆಯಾಗಿದೆ.

ಇದುವರೆಗೆ ಹೇಳಿದ್ದು, ಕೇಳಿದ್ದು  ನಮ್ಮ ನಾಯಕರು, ಬುದ್ಧಿಜೀವಿಗಳು ಎನಿಸಿಕೊಂಡ ಹಲವರ ಉವಾಚ. ಈ ಬಗ್ಗೆ ನಮ್ಮ ಜನರ ನಿಲುವೇನು  ಎಂದಿರಾ ! ಅದು ಗ್ರಾಮವೋ ಪಟ್ಟಣವೋ  ನಗರವೋ, ಯಾವುದೇ  ಇರಲಿ. ಜನ ಮಾತ್ರ ಈ ನಾಯಕರ ಮಾತುಗಳಿಗೆ ಕಿವಿಗೊಡದೆ ಹಿಂದುಳಿದವರು, ಮುಂದುವರಿದÀವರು ಇವ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಈ ಸಾಮಾನ್ಯ ಜನ, ‘ಯಾರೇ, ಏನೇ, ಕೂಗಾಡಲಿ’ ನಿರ್ಲಿಪ್ತರಾಗಿ ತಮ್ಮ ವಿದ್ಯೆ ಉದ್ಯೋಗ ಕೆರಿಯರ್‌ಗಳನ್ನು ಉತ್ತಮಪಡಿಸಿಕೊಂಡು ಜೀವನದಲ್ಲಿ ಮೇಲೇರಲು ಶ್ರಮಿಸುತ್ತಾ ತಮ್ಮ ಸಹಪಾಠಿ ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಶಾಂತಿ ನೆಮ್ಮದಿಗಳಿಂದ ಬಾಳುತ್ತಿದ್ದಾರೆ.

    ಇದನ್ನು ಸಹಿಸದ ಹಲವು ಸ್ವಯಂಘೋಷಿತ ಉದ್ದಾರಕರು, ಸುಧಾರಕರು, ಎನಿಸಿಕೊಂಡವರು ನೆಮ್ಮದಿಯಿಂದಿರುವವರ ನಡುವೆ ‘ಜಾತಿ’ ಎಂಬ ವಿಷದ ಹುಳಿ ಹಿಂಡುವ ಕೆಲಸವನ್ನು ಮಾಡುವ ಮೂಲಕ ಸಮಾಜವನ್ನು ಒಡೆಯುತ್ತಿದ್ದಾರೆ. ಅಂದು ಹೊರಗಿನಿಂದ ನಮ್ಮ ದೇಶಕ್ಕೆ ಬಂದ ಬ್ರಿಟಿಷರು ಮಾಡಿದ ಒಡೆದು ಆಳಿದ ಹಾಳು ಕೆಲಸವನ್ನು ನಮ್ಮೊಳಗಿರುವ ಈ ನಮ್ಮವರೇ ಆದ ಒಳ ಬ್ರಿಟಿಷರು ಇಂದು ಮಾಡುತ್ತಿದ್ದಾರೆ. ಆದರೂ ಪ್ರe್ಞÁವಂತ ನಾಗರಿಕರಿಗೆ ಸುಶಿಕ್ಷಿತರಿಗೆ ಈ ಸ್ವಯಂಘೋಷಿತ ಪ್ರಚಾರಕರ ಬಗ್ಗೆ ಕಿಂಚಿತ್ತೂ ಸಹಾನುಭೂತಿ ಸಹಕಾರಗಳಿ;ಲ್ಲ.

     ಕನಕ, ಬಸವಣ್ಣ, ಬುದ್ಧ ಮೊದಲಾದ ಸಂತ, ಸಮಾಜೋದ್ಧಾರಕರಾರೂ ‘ಜಾತಿ’ ಹೆಸರಿನಲ್ಲಿ ಜನರಲ್ಲಿ ತಾರತಮ್ಯ ಭಾವನೆ ಬೆಳೆಸಿ ಎಂದು ಭೋದಿಸದೆ, ‘ಇವನಾರವ, ಇವನಾರವ ಎನ್ನದೆ, ಇವ ನಮ್ಮವ, ಇವ ನಮ್ಮವ’ ‘ ಎನ್ನಿ ಎಂದು ಭೋದಿಸಿರುವುದನ್ನು ಈ ಘಳಿಗೆಯಿಂದಾದರೂ ಸ್ಮರಿಸಿ, ‘ಜಾತಿ’ ಎಂಬ ಭೂತದ ಹೆಸರನ್ನು ಸಾರ್ವಜನಿಕ ಕಾಗದ ಪತ್ರ ದಾಖಲೆಗಳಲ್ಲಿ ಸೂಚಿಸಲು ಹೇಳದೆ, ಜಾತಿ ಮತ ಧರ್ಮ ಆಚಾರ ಮೊದಲಾದುವು ವ್ಯಕ್ತಿಯ ವೈಯಕ್ತಿಕ ವಿಚಾರಗಳು. ಇವನ್ನು ಅವರವರ ಮನೆಯ ನಾಲ್ಕು ಗೋಡೆಗಳೊಳಗೆ ಸೀಮಿತಗೊಳಿಸುವ ವ್ಯವಸ್ಥೆಯನ್ನು ಜನ,  ನಾಯಕರು ಪ್ರಭುಗಳು ಮಾಡಿದರೆ, “ಜಾತಿ” ಎಂಬ ಅನಿಷ್ಟ ಪದ, ವಿಷ ಬೀಜ, ವಿಷ ವೃಕ್ಕ ಸಾರ್ವಜನಿಕ ಜೀವನದಿಂದ ಒಮ್ಮೆಲೇ ಮಾಯವಾಗಲು ಸಾಧ್ಯ. ಇದರಿಂದ ಯಾರಿಗೂ ಎಂತಹುದೇ ಅನ್ಯಾಯವಾಗಲಾರದು. ಇದಕ್ಕೆ ಬೇಕಾದ್ದು ಇಚ್ಛಾಶಕ್ತಿ. ಈ ಇಚ್ಛಾಶಕ್ತಿಯಿದ್ದರೆ ಎಲ್ಲವೂ ಸಾಧ್ಯ. 

ಸಾಮಾಜಿಕ ನ್ಯಾಯ ವಿತರಣೆ ಎಂದರೆ ಸಬಲನನ್ನು ನೆಲಕ್ಕೆ ತುಳಿದು, ದುರ್ಬಲನನ್ನು ಕೈ ಹಿಡಿದೆತ್ತುವುದಲ್ಲ, ಬದ ಲಿಗೆ ವ್ಯಕ್ತಿಯ ಜನ್ಮ ಕುಲ, ಬಣ್ಣ ರೂಪ ನೋಡದೆ, ನೀನ್ಯಾವ ಜಾತಿ ಎಂದು ಪ್ರಶ್ನಿಸದೆ, ಅಸಹಾಯಕರಿಗೆ, ದುರ್ಬಲರಿಗೆ, ನೆರವು ಅಗತ್ಯವಾದವರಿಗೆ  ಮೂಲಭೂತ ಅಗತ್ಯಗಳನ್ನು, ಅಂದ್ರೆ,  ಹಸಿದವನಿಗೆ ಅನ್ನ, ಬೆತ್ತಲೆಯಿರುವವನಿಗೆ ವಸ್ತç, ಸೂರಿಲ್ಲದವನಿಗೆ ಮನೆ, ರೋಗ ಪೀಡಿತನಿಗೆ ವೈದ್ಯಕೀಯ ಚಿಕಿತ್ಸೆ,  ನಿರಕ್ಷರಸ್ಥನಿಗೆ ವಿದ್ಯೆ, ನಿರುದ್ಯೋಗಿಗೆ (ನಿರುದ್ಯೋಗ ಭತ್ಯೆ ನೀಡಿ ಅವನನ್ನು ಸೋಮಾರಿಯನ್ನಾಗಿ ಮಾಡದೆ) ಉದ್ಯೋಗ ಗಳಿಸಲು ಅಗತ್ಯವಾದ ತರಬೇತಿ ಕಲಿಸುವುದು ಅತ್ಯಗತ್ಯ.

     ಈ ಸಂದರ್ಭದಲ್ಲಿ ಮನೆಯಲ್ಲಿರುವ ನಮ್ಮ ಮಾತೆಯರ ನಡವಳಿಯನ್ನು ಗಮನಿಸಿ. ಆಕೆ ತನ್ನ ಮಕ್ಕಳಲ್ಲೊಬ್ಬ ದುರ್ಬಲನೋ ರೋಗಿಯೋ, ಅಂಗವಿಕಲನೋ, ಬುದ್ಧಿಮಾಂದ್ಯನೋ ಇದ್ದರೆ, ಅವನ ಬಗ್ಗೆ ಕಿಂಚಿತ್  ವಿಶೇಷ ಕಾಳಜಿ ವಹಿಸಿ ಅವನನ್ನು ಸಬಲನನ್ನಾಗಿ ಮಾಡುವಳೇ ಹೊರತು  ಉಳಿದ ಮಕ್ಕಳನ್ನು ದುರ್ಬಲರನ್ನಾಗಿ ಮಾಡುವುದೋ ಅವರ ಅಗತ್ಯತೆಗಳನ್ನು ಕಡೆಗಣಿಸುವುದೋ ಮಾಡಿ ಮಕ್ಕಳ ಮಕ್ಕಳ  ಮಧ್ಯೆ ಭೇದವೆಣಿಸುವುದಿಲ್ಲ. ತಾರತಮ್ಯ ಮಾಡುವುದಿಲ್ಲ. ತನ್ನ ಮಕ್ಕಳೆಲ್ಲರೂ ಉತ್ತಮ ಸ್ಥಿತಿ ಹೊಂದಬೇಕು ಎಂಬುದೇ ಆಕೆಯ ಏಕೈಕ ಧ್ಯೇಯವಾಗಿರುತ್ತದೆ ಹೀಗೇನೇ, ನಮ್ಮನ್ನು  ಆಳುವವರು ತಮ್ಮ ಮಕ್ಕಳ : ಪ್ರಜೆಗಳ ನಡುವೆ  ಎಂತಹುದೇ ತಾರತಮ್ಯ ನೀತಿ ಅನುಸರಿಸದಿದ್ದರೆ ನಮ್ಮದು ‘ಸೆಕ್ಯುಲಾರ್ ಸ್ಟೇಟ್, ಜಾತ್ಯಾತೀತ ರಾಷ್ಟç’ ಎಂದು ನಾವೇ ಒಪ್ಪಿ, ನಾವೇ ರಚಿಸಿಕೊಂಡಿರುವ ಸಂವಿಧಾನಕ್ಕೆ ನಾವೇ ಗೌರವ ಸೂಚಿಸಿದಂತಾಗುತ್ತದೆ. 

     ಈ ಹಿನ್ನೆಲೆಯಲ್ಲಿ, “ಭಾರತ ಎಂದರೆ ಜಾತಿ ಪೀಡಿತ ದೇಶ, ಜನನದಿಂದ ಮರಣದವರೆಗೂ ಇಲ್ಲಿ ಎಲ್ಲಕ್ಕೂ ಜಾತಿಯೇ ಆಧಾರ “ ಎಂಬ ನಮ್ಮ ದೇಶದ ಹೆಸರಿನೊಂದಿಗೆ ಥಳಕು ಹಾಕಿಕೊಂಡಿರುವ ಕೆಟ್ಟ ಹೆಸರನ್ನು ನಮ್ಮ ವರ್ತನೆಯಿಂದ ತೊಡೆದುಹಾಕಿ, ‘ನಾವು ಜಾತ್ಯಾತೀತರು’ ‘ನಾವು ಸಂವಿಧಾನ ಬದ್ಧರು’ ಎಂಬುದನ್ನು ನಮ್ಮ ನಡೆಯಲ್ಲಿ ವ್ಯಕ್ತಪಡಿಸÀಲು ಇದು ಸುಸಮಯವಲ್ಲವೇ ?

       “ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ! ಎಂದು ಕುಲಕ್ಕೆ ಅಂಟಿಕೊಂಡವರನ್ನು ಪ್ರಶ್ನಿಸುತ್ತಾ, “ಕುಲವಾವುದು ಸತ್ಯ ಸುಜನರಿಗೆ, ಆತ್ಮನಾವ ಕುಲ, ಜೀವನಾವ ಕುಲ,” ಎಂಬ ಕೃತಿಗಳಲ್ಲಿ ಜಾತಿಯ ಮೇಲಾಟ ಅರ್ಥವಿಲ್ಲದ್ದು ಎಂದು ಎಚ್ಛರಿಸುತ್ತಾ, ಜನರಲ್ಲಿ ಜಾತಿಯ ಸಂಘರ್ಷವನ್ನು ತೊಡೆದುಹಾಕಲು  ಪ್ರಯತ್ನಿಸಿದವರು ಈ ಕನಕರು.  ‘ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ, ನೆಲೆಯನರಿತು ನೀ ನೆನೆ ಕಂಡ್ಯಾ ಮನುಜಾ’ ಎಂಬ  ಸರ್ವ ಕಾಲಗಳಲ್ಲೂ ಪ್ರಸ್ತುತವೆನಿಸಿದ ತತ್ವಗಳನ್ನು  ಜನರು ಪಾಲಿಸಿದಾಗ ಮಾತ್ರ ಇವರಿಗೆ ನಿಜವಾದ ಅರ್ಥದಲ್ಲಿ ಕೃತಜ್ಞತೆ ಸಲ್ಲಿಸಿ ದಂತಾಗಿ ಜನರ ಬಾಳೂ ಹಸನಾಗಲು ಸಾಧ್ಯ.                


Comments

  1. ಸತ್ಯ ನುಡಿ ಸಾರ್ , ಅವರನ್ನು ಒಂದು ಜಾತಿಗೆ ಒಳಗೂಡಿಸಿ ಅವರ ಹೆಸರಿನಲ್ಲಿ ಸಂಘ ಗುಂಪು ಕಟ್ಟಿ ಹೆಚ್ಚು ಭೇದಭಾವ, ತಾರತಮ್ಯ ಸೃಷ್ಟಿಸಿದ್ದಾರೆ ಕೆಲವರು. ಅವರ ಮುಖ್ಯ ಸಂದೇಶ ಮಹತ್ತರವಾದುದು. ಗೂಡಾರ್ಥಪದಗಳು, ಮುಂಡಿಗೆಗಳು ಅಸಾಮಾನ್ಯ ರಚನೆಗಳನ್ನು ಕನಕದಾಸರು ಮಾಡಿದ್ದಾರೆ

    ReplyDelete
    Replies
    1. Vandanegalu sir. sippe thindu hannu bisado jana.'Endu thilivudo manuja kula' emba kavi vani elli smaranaarha.

      Delete

Post a Comment