ಜಗನ್ನಾಥ ದಾಸರು (1728-1809)

 ಜಗನ್ನಾಥ ದಾಸರು (1728–1809) – ಅಸಾಧಾರಣ ಕವಿಗಳು ಮತ್ತು ಹರಿದಾಸ ಸಾಹಿತ್ಯದ  ಆವಿಷ್ಕಾರಕರು       



ಪ್ರಪಂಚದ ಭಕ್ತಿ ಸಾಹಿತ್ಯ ಪ್ರಕಾರಗಳಲ್ಲಿ  ಕರ್ನಾಟಕದ ಭಕ್ತಿ ಸಾಹಿತ್ಯವು ಪ್ರಮುಖವಾಗಿದೆ. ಕರ್ನಾಟಕದ ಭಕ್ತಿ ಸಾಹಿತ್ಯದಲ್ಲಿ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಪ್ರಮುಖ ವಿಭಾಗಗಳು. 


ದಾಸ ಸಾಹಿತ್ಯವು  13ನೇ ಶತಮಾನದಲ್ಲಿ ಮಧ್ವಾಚಾರ್ಯರು ಸಂಸ್ಕೃತದಲ್ಲಿ ಹಾಡುಗಬ್ಬಗಳು (ದ್ವಾದಶ ಸ್ತೋತ್ರ) ಎಂದು ಕರೆಯುವ ಸಾಹಿತ್ಯ ಪ್ರಕಾರವನ್ನು ಸೃಷ್ಟಿ ಮಾಡಿದ  ಮೂಲಕ ಪ್ರಾರಂಭವಾಯಿತು. ಮುಂದೆ ಶ್ರೀಪಾದರಾಜರು ದಾಸಸಾಹಿತ್ಯಕ್ಕೆ ಒಂದು ರೂಪರೇಖೆಯನ್ನು ಕೊಟ್ಟು, ಒಂದು ಚೌಕಟ್ಟನ್ನು ನಿರ್ಮಿಸಿದರು. ಮುಂದೆ ವ್ಯಾಸರಾಯರು ಮತ್ತೆ ಅವರ ಶಿಷ್ಯರಾದ ಪುರಂದರದಾಸರು ಮತ್ತು ಕನಕದಾಸರು ದಾಸ ಸಾಹಿತ್ಯವನ್ನು ಉನ್ನತಮಟ್ಟಕ್ಕೆ ಏರಿಸಿದರು. 


ವಿಜಯನಗರದ ಪತನದ ನಂತರ ದಾಸ ಸಾಹಿತ್ಯವು ಸುಮಾರು ಒಂದು ಶತಮಾನ ಕಾಲ ಮುಚ್ಚಿಹೋಗಿತ್ತು. ಪುನ: ಅದರ ಪುನರುಜ್ಜೀವನವನ್ನು ವಿಜಯದಾಸರು ಪ್ರಾರಂಭ ಮಾಡಿದರು. ಅವರ ಶಿಷ್ಯರಾದ ಗೋಪಾಲದಾಸರು ಮತ್ತು ಜಗನ್ನಾಥದಾಸರು ಹರಿದಾಸ ಸಾಹಿತ್ಯಕ್ಕೆ ಸುಳಾದಿ ಮುಂತಾದ ಹೊಸ ಪ್ರಕಾರಗಳನ್ನು ಕೊಟ್ಟು ದಾಸ ಸಾಹಿತ್ಯದಲ್ಲಿ ಹೊಸ ಆಯಾಮವನ್ನು ತೋರಿಸಿದರು. ಜಗನ್ನಾಥದಾಸರು ವೇದಾಂತದ ತಾತ್ವಿಕ ಚಿಂತನೆಗಳನ್ನು ಕನ್ನಡ ಭಾಷೆಯಲ್ಲಿಭಾಮಿನಿ ಷಟ್ಪದಿ ಛಂದಸ್ಸಿನ ಮೂಲಕ ಹರಿಕಥಾಮೃತಸಾರ ಎಂಬ ಗ್ರಂಥದ ಮೂಲಕ ಕನ್ನಡ ಸಾಹಿತ್ಯದಲ್ಲಿ ನೂತನ ಆವಿಷ್ಕಾರವನ್ನು ಮಾಡಿದರು.


ಜಗನ್ನಾಥದಾಸರ ಜೀವನ ಚರಿತ್ರೆಯು ಒಂದು ಸಂದೇಶವನ್ನು ಕೊಡುತ್ತದೆ. ಮೊದಲು ಅವರು ಖ್ಯಾತ ಸಂಸ್ಕೃತ ಪಂಡಿತ ಆಗಿದ್ದರು. ಕನ್ನಡ ಸಾಹಿತ್ಯ ಎಂದರೆ ಒಂದು ತರಹ ತಿರಸ್ಕಾರ ಭಾವನೆ ಇತ್ತು. ವಿಜಯ ದಾಸರಂತಹ ಮಹಾನುಭಾವರನ್ನು ಅಹಂಕಾರದಿಂದ ಅವಮಾನ ಮಾಡಿದರು. ನಂತರ ಬಹಳ ತೊಂದರೆ ಅನುಭವಿಸಿ ರಾಘವೇಂದ್ರ ಸ್ವಾಮಿಗಳ ಮೊರೆಹೊಕ್ಕಿ ವಿಜಯದಾಸರಿಗೆ ಶರಣಾಗತರಾದರು. ನಂತರ ಹರಿದಾಸ ದೀಕ್ಷೆಯನ್ನು ಪಡೆದು ಹರಿದಾಸರು ಆದರು. ಅವರ ಜೀವನ ಸಂದೇಶ ಏನೆಂದರೆ ಮಾನವರು ಅಹಂಕಾರದ ಭಾವನೆಗಳನ್ನು ತೊರೆದು ಭಕ್ತಿಯ, ಶರಣಾಗತಿಯ ಮಾರ್ಗವನ್ನು ಅವಲಂಬಿಸಿದರೆ ಜೀವನದಲ್ಲಿ ಒಂದು ರೂಪಾಂತರವಾಗುತ್ತದೆ. ದೇವರ ಕಡೆಗೆ ಹೋಗಲು ಸಾಧ್ಯವಾಗುತ್ತದೆ ಎಂಬ ಸಂದೇಶ ಕೊಟ್ಟಿದ್ದಾರೆ.


ಅವರ ಮಿಕ್ಕ ಜೀವನವನ್ನು ಹರಿದಾಸ ಸಾಹಿತ್ಯಕ್ಕೆ ಮುಡುಪಾಗಿಟ್ಟರು. ರಾಘವೇಂದ್ರ ಸ್ವಾಮಿಗಳ ಮೇಲೆ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. 68ನೇ ವಯಸ್ಸಿನಲ್ಲಿ ಹರಿಕಥಾಮೃತಸಾರ ಎಂಬ ಮೇರುಕೃತಿಯನ್ನು ರಚಿಸಿದರು. 

ಹರಿಕಥಾಮೃತಸಾರ ಗ್ರಂಥದಲ್ಲಿ  ಅಧ್ಯಾತ್ಮಿಕ ಸಂಖ್ಯಾಶಾಸ್ತ್ರವನ್ನು ತೋರಿಸಿದ್ದಾರೆ. ಇದರಿಂದ ಖ್ಯಾತ ಸಾಹಿತಿ ದ.ರಾ. ಬೇಂದ್ರೆಯವರು ಪ್ರಭಾವಿತರಾಗಿದ್ದರು. ಅವರು ಬನ್ನಂಜೆ ಗೋವಿಂದಾಚಾರ್ಯರಿಗೆ ಈ ಆಧ್ಯಾತ್ಮಿಕ ಸಂಖ್ಯಾಶಾಸ್ತ್ರ ಜಗನ್ನಾಥದಾಸರ ಒಂದು ವಿನೂತನ ಕೊಡುಗೆ. ಇದನ್ನು ನೀವು ಎಲ್ಲಾ  ಕನ್ನಡಿಗರಿಗೂ ತಿಳಿಸಬೇಕು ಎಂದು ಹೇಳುತ್ತಿದ್ದರು. ಇದು ಶ್ರೀ ಜಗನ್ನಾಥದಾಸರ ಸಾಹಿತ್ಯದ ಕೊಡುಗೆಗಳ ಬಗ್ಗೆ ಒಂದು ಕಿರು ಪರಿಚಯ. ದಯವಿಟ್ಟು ಎಲ್ಲರೂ ಶ್ರೀ ಜಗನ್ನಾಥದಾಸರ ಚಲನಚಿತ್ರವನ್ನು ನೋಡಿ.   ಅವರ ಜೀವನದ ಸಂದೇಶಗಳನ್ನು ಸಾಹಿತ್ಯದ ಸಂದೇಶವನ್ನು ನೋಡೋಣ.  


ಇದು ಶ್ರೀ ಜಗನ್ನಾಥದಾಸರ ಸಾಹಿತ್ಯದ ಕೊಡುಗೆಗಳ ಬಗ್ಗೆ ಒಂದು ಕಿರು ಪರಿಚಯ. ದಯವಿಟ್ಟು ಎಲ್ಲರೂ ಶ್ರೀ ಜಗನ್ನಾಥದಾಸರ ಚಲನಚಿತ್ರವನ್ನು ನೋಡಿ.   ಅವರ ಜೀವನದ ಸಂದೇಶಗಳನ್ನು ಸಾಹಿತ್ಯದ ಸಂದೇಶವನ್ನು ನೋಡೋಣ

 ಜಗನ್ನಾಥ ದಾಸರು ಜೀವನವು ನಮಗೆಲ್ಲರಿಗೂ  ಒಬ್ಬ ಅಹಂಕಾರದಿಂದ , ದರ್ಪ, ಗರ್ವ ದಿಂದ ಇದ್ದ ವ್ಯಕ್ತಿ , ಹೇಗೆ ಭಕ್ತಿಯಿಂದ  , ಶರಣಾಗತಿಯಿಂದ  ಪರಿವರ್ತಿತರಾಗಿ  ಸಾಧನೆಯ ಕೊನೆಯನ್ನು ಮುಟ್ಟಿದರು, ಎಲ್ಲರಿಗೂ ಮಾರ್ಗ ದರ್ಶನ ನೀಡುವಂಥ  ವ್ಯಕ್ತಿ ಯಾದರು  ಎಂದು ತೋರಿಸುತ್ತದೆ.   ಈ ಸಂದೇಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳ ಬಹುದು.


ನಿಮ್ಮ ಸ್ನೇಹಿತರಿಗೆ ಈ ಚಲನ ಚಿತ್ರದ ಬಗ್ಗೆ ತಿಳಿಸಿ. ಕನ್ನಡ ದವರು ಆಗಿಲ್ಲದಿದ್ದರು ಪರವಾಗಿಲ್ಲ. ಇಂಗ್ಲಿಷ್ subtitles ಇವೆ. ಈ ಚಿತ್ರವನ್ನು ಈ ಚಿತ್ರದ ಆಧ್ಯಾತ್ಮಿಕ ಸಂದೇಶವನ್ನು ಎಲ್ಲರಿಗು ತಿಳಿಸೋಣ.  ಹರಿದಾಸ ಸಾಹಿತ್ಯದ ಸೊಬಗನ್ನು, ಸಂದೇಶವನ್ನು, ಭಕ್ತಿ ಮಾರ್ಗವನ್ನು  ಪ್ರಪಂಚದ ಎಲ್ಲೆಡೆ ಹರಡೋಣ.  


ಚಲನ ಚಿತ್ರವನ್ನು ನೋಡುವ ಮತ್ತು ಧನ ಸಹಾಯ ಮಾಡುವ ವಿವರಗಳು

ಈ ಚಲನಚಿತ್ರವನ್ನು ನವೆಂಬರ್ ೧೧ ರಂದು  ರ್ನಾಟಕದಲ್ಲಿ ಚಲನ ಚಿತ್ರ ಮಂದಿರ ಗಳಲ್ಲಿಮತ್ತು kott streaming  ವೇದಿಕೆಯಲ್ಲಿ(https://kott.tv) ಭಾರತದ ಹೊರಗಡೆಯ ಎಲ್ಲ ದೇಶಗಳಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಟಿಕೆಟಿನ ಬಗ್ಗೆ ವಿವರಗಳು kott.tv ವೇದಿಕೆಯಲ್ಲಿ ಮತ್ತು ಕೆಳಗಿರುವ FB page ಮತ್ತು FB group ನಲ್ಲಿ ಸದ್ಯದಲ್ಲೇ ಬರಲಿದೆ.


ಕರ್ನಾಟಕದ ಮತ್ತು ಭಾರತದ ಹರಿದಾಸರ ಆಧ್ಯಾತ್ಮಿಕ ಸಂದೇಶಕ್ಕೆ ಸ್ಪಂದಿಸುವ ಎಲ್ಲ ಜನರು ಈ ಚಲನಚಿತ್ರವನ್ನು ನೋಡಬೇಕು. ಬೇರೆಲ್ಲ ಜನಗಳಿಗೆ ಇದರ ಬಗ್ಗೆ ಹೇಳಬೇಕು ಎಂಬುದು ನಮ್ಮ ಆಶಯ. ಜನಗಳು ಈ ಚಲನಚಿತ್ರ ಮತ್ತು ಮುಂಬರುವ ಇತರ ಹರಿದಾಸರ ಮೇಲೆ ಮುಂಬರುವ ಚಲನಚಿತ್ರಗಳನ್ನು ಜನ ಧನ ಸಹಾಯದಿಂದ ಬೆಳೆಸಬೇಕು ಎಂಬುದು ನಮ್ಮ ಆಶಯ. ಧನ ಸಹಾಯ ಮಾಡುವವರು ಇಲ್ಲಿ ಮಾಡಬಹುದು.

https://hdcusa.org/movie

ಈ ಚಲನಚಿತ್ರವನ್ನು ನವೆಂಬರ್ ೧೧ ರಂದು  ರ್ನಾಟಕದಲ್ಲಿ ಚಲನ ಚಿತ್ರ ಮಂದಿರ ಗಳಲ್ಲಿಮತ್ತು kott streaming  ವೇದಿಕೆಯಲ್ಲಿ(https://kott.tv) ಭಾರತದ ಹೊರಗಡೆಯ ಎಲ್ಲ ದೇಶಗಳಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಟಿಕೆಟಿನ ಬಗ್ಗೆ ವಿವರಗಳು kott.tv ವೇದಿಕೆಯಲ್ಲಿ ಮತ್ತು ಕೆಳಗಿರುವ FB page ಮತ್ತು FB group ನಲ್ಲಿ ಸದ್ಯದಲ್ಲೇ ಬರಲಿದೆ.


ಕರ್ನಾಟಕದ ಮತ್ತು ಭಾರತದ ಹರಿದಾಸರ ಆಧ್ಯಾತ್ಮಿಕ ಸಂದೇಶಕ್ಕೆ ಸ್ಪಂದಿಸುವ ಎಲ್ಲ ಜನರು ಈ ಚಲನಚಿತ್ರವನ್ನು ನೋಡಬೇಕು. ಬೇರೆಲ್ಲ ಜನಗಳಿಗೆ ಇದರ ಬಗ್ಗೆ ಹೇಳಬೇಕು ಎಂಬುದು ನಮ್ಮ ಆಶಯ. ಜನಗಳು ಈ ಚಲನಚಿತ್ರ ಮತ್ತು ಮುಂಬರುವ ಇತರ ಹರಿದಾಸರ ಮೇಲೆ ಮುಂಬರುವ ಚಲನಚಿತ್ರಗಳನ್ನು ಜನ ಧನ ಸಹಾಯದಿಂದ ಬೆಳೆಸಬೇಕು ಎಂಬುದು ನಮ್ಮ ಆಶಯ. ಧನ ಸಹಾಯ ಮಾಡುವವರು ಇಲ್ಲಿ ಮಾಡಬಹುದು.

https://hdcusa.org/movie

Facebook group:

https://www.facebook.com/groups/2673114022992604

Twitter:  https://twitter.com/sjdthemovie

Instagram: https://www.instagram.com/sjdthemovie/

Pinterest: https://in.pinterest.com/SriJagannathaDaasaru/

Comments

  1. Hope it will be available on amazon too soon. Good article

    ReplyDelete
  2. This comment has been removed by the author.

    ReplyDelete
  3. ಚಿತ್ರದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಆದಷ್ಟು ಬೇಗ ನೋಡಬೇಕೆಂಬ ಬಯಕೆಯಾಗಿದೆ. ಉತ್ತಮ ಮಾಹಿತಿಯುಳ್ಳ ಲೇಖನಕ್ಕೆ ಧನ್ಯವಾದಗಳು

    ReplyDelete
  4. ಶ್ರೀ ಜಗನ್ನಾಥ ದಾಸರು ಚಲನ ಚಿತ್ರ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಗುರು ಶಿಷ್ಯರ ಸಂಬಂಧ ನೋಡಬೇಕೆ? - ನೋಡಲೇ ಬೇಕು ಈ ಚಿತ್ರವನ್ನು. 'ತೊಗಿರೆ ರಾಯರ - ತೂಗಿರೆ ಗುರುಗಳ' ರಚಿಸಿದ ಮಹಾನುಭಾವರಿಗೆ ಇಂತಹ ಸಾಹಿತ್ಯ ರಚಿಸುವ ಪ್ರೇರಣೆ ಹೇಗಾಯಿತು? - ಇದಕ್ಕಾಗಿ ನೋಡಲೇಬೇಕು ಈ ಚಿತ್ರವನ್ನು!

    ReplyDelete

Post a Comment