ಮಾಸ್ತಿ ಅವರ ಸಣ್ಣ ಕಥೆಗಳು -2

 ಮಾಸ್ತಿ ಅವರ ಸಣ್ಣ ಕಥೆಗಳು -2

ಲೇಖನ  – ರಾಮಮೂರ್ತಿ,  ಬೇಸಿಂಗ್ ಸ್ಟೋಕ್

ನಿಜಗಲ್ಲಿನ ರಾಣಿ ( ೧೯೩೦)

ಸುಮಾರು ಇನ್ನೂರ ವರ್ಷಗಳ ಹಿಂದೆ ಅನೇಕ ಪಾಳೆಪಟ್ಟುಗಳಲ್ಲಿ ನಿಜಗಲ್ಲು ಒಂದು. ಆ ಕಾಲದಲ್ಲಿ ಮರಾಠರು ಮೈಸೂರಿನ ಮೇಲೆ ಆಗಾಗ ಬರುತ್ತಿದ್ದರು, ದಾರಿಯಲ್ಲಿ ನಿಜಗಲ್ಲು ಸಿಕ್ಕುವುದು, ಅನೇಕ ಸಲಿ ಮರಾಠೆಯವರು ಇಲ್ಲಿ ನಿಂತು ಪಾಳೇಗಾರರಿಂದ ಅವರಿಗೆ ಕಪ್ಪವನ್ನು  ಕೊಡಲು  ಅಥವಾ ತಮ್ಮ ದಂಡನ್ನು ಅವರ ಜೊತೆಗೆ ಸಹಾಯಕ್ಕೆ ಕಳಿಸಬೇಕೆಂದು ಬೆದರಿಸುತ್ತಿದ್ದರು. 

ನಿಜಗಲ್ಲಿನ ಪಾಳೇಗಾರರಲ್ಲಿ  ರಾಮರಸ ನಾಯಕ ಒಳ್ಳೆಯವನೆಂದು ಹೆಸರುಪಡೆದಿದ್ದ. ಪಾಳೆಯಕ್ಕೆ ಸೇರಿದ ಸುಮಾರು ಐವತ್ತು ಗ್ರಾಮಗಳು ಬಿಟ್ಟು ಆಚೆ ಹೋಗಿ ಕಂದಾಯದ  ಹಣ ವಸೂಲಿ ಮಾಡುತ್ತಿರಲಿಲ್ಲ. ಇದಕ್ಕೆ ಪ್ರತಿಯಾಗಿ ಈ ಜನಗಳಿಗೆ  ಸಾಮಾನ್ಯವಾದ ದೊಂಬಿ ಧಾಳಿಗಳಿಂದ ರಕ್ಷಣೆ ಕೊಟ್ಟಿದ್ದಮೈಸೂರು ಅರಸರಿಗೆ ವಾಡಿಕೆಯೆಂತೆ ಕಪ್ಪವನ್ನು ಕಳಿಸಿ ಅವರಿಂದ ಮೈತ್ರಿಯನ್ನು ಪಡೆದಿದ್ದ.  ಇವನಿಗೆ ಇಬ್ಬರು ಹೆಂಡತಿಯರು , ಮೊದನೆಯವಳು ಲಕುಮವ್ವೆ, ರಾಮರಸ ಗದ್ದಿಗೆ ಏರುವುದಕ್ಕೆ ಸ್ವಲ್ಪ  ಮುಂಚೆ ಮದುವೆಯಾಗಿದ್ದ, ಹತ್ತು ವರ್ಷ ಕಳೆದರೂ  ಇವರಿಗೆ ಮಕ್ಕಳಾಗಿರಲಿಲ್ಲ. ಎರಡನೆಯವಳು ಗಿರಿಜವ್ವೆ. ರಾಮರಸನಿಗೆ ಒಡಹುಟ್ಟಿದವರು ಯಾರೂ ಇರಲಿಲ್ಲ ಆದ್ದರಿಂದ ಈ ವಂಶ ಇಲ್ಲಿಗೇ ನಿಂತುಹೋಗುವ ಶಂಕೆ ಇತ್ತು. ಊರಿನ ಮುಖಂಡರು ಯಾರನ್ನಾದರೂ ದತ್ತು ತೆಗೆದುಕೊಳ್ಳಬೇಕೆಂದು ಸಲಹೆ ಕೊಟ್ಟರು , ಆದರೆ ರಾಮರಸ ಇದಕ್ಕೆ ಒಪ್ಪಲಿಲ್ಲಲಕುಮುವ್ವೆ  ಇದನ್ನು ಅರಿತು ತನ್ನ ನೆಂಟರಲ್ಲಿ ಸೇರಿದ ಗಿರಿಜವ್ವೆನ್ನು ಅರಮನೆಗೆ ತಂದು ಎರಡು ಮೂರು ವರ್ಷ ಇವಳೊಂದಿಗೆ ಇದ್ದು  ನಾಯಕನ  ಕಣ್ಣಿಗೆ ಬೀಳುವಂತೆ ಮಾಡಿ  ಅವಳನ್ನು ಮದುವೆಯಾಗ ಬೇಕೆಂದು ಸಲಹೆಮಾಡಿದಳು . ರಾಮರಸ ಮರ್ಯಾದೆಯಿಂದಲೋ ಅಥವಾ ನಿಜವಾಗಿಯೂ ಬೇಡ ಅಂದಿದ್ದ, ಲಕುಮವ್ವೆ  ಗಂಡನಿಗೆ

 " ನೋಡಿ  ನನ್ನನ್ನು  ಈ ಹತ್ತು ವರ್ಷ ಚೆನ್ನಾಗಿ ನೋಡಿಕೊಂಡರಿ ಆದರೆ ನಿಮಗೆ ಮಕ್ಕಳು ಕೊಡುವ ಭಾಗ್ಯ ನನಗೆ ದೇವರು ಕೊಡಲಿಲ್ಲ, ಆದ್ದರಿಂದ  ನೀವು ಗಿರಿಜವ್ವೆ ಯನ್ನು ಮದುವೆಯಾಗಿ  ಅವಳಿಂದ  ನಿಮಗೆ ಪುತ್ರಸಂತಾನವಾಗಬಹುದು" ಎಂದಳು . ರಾಮರಸ " ಅವಳು ನಿನ್ನನ್ನು  ಅಸಡ್ಡೆ ಮಾಡಿದರೆ ಏನು ಮಾಡುವೆ " ಎಂದ. ಲಕುಮವ್ವೆ " ಇವಳು ನಾನು ಸಾಕಿದ ಹುಡಗಿ ನಾನು ಹೇಳಿದಂತೆ ನಡುಕೊಳ್ಳುತ್ತಾಳೆ ನಿಮಗೆ ಅದರ ಚಿಂತೆ 

ಇಲ್ಲ " ಅಂತ ಹೇಳಿ ನಾಯಕನನ್ನು ಒಪ್ಪಿಸಿದ  ಮೇಲೆ  ಗಿರಿಜವ್ವನ ಮಾದುವೆಯಾಯಿತು.  

 ಗಿರಿಜವ್ವನ ಮದುವೆ ಆದ ಕೆಲವು ತಿಂಗಳಲ್ಲಿ ಅವಳ ತಾಯಿ ಮತ್ತು ತಮ್ಮ ಕಸ್ತೂರಿ ನಾಯಕ ಅರಮನೆಯಲ್ಲಿ ಬಂದು ಸೇರಿದರು . ಕ್ರಮೇಣ  ಇವಳ ತಾಯಿ ಲಕುಮವ್ವೆನನ್ನು ಅಸಡ್ಡೆಯಿಂದ ಕಾಣುವಂತೆ  ಗಿರಿಜವ್ವನಿಗೆ ಬೋಧನೆ ಮಾಡುವ ಪ್ರಯತ್ನಮಾಡಿದಳು ಆದರೆ ಗಿರಿಜವ್ವ ಈ ಮಾತುಗಳನ್ನು ಕಿವಿಗೆ ಹಾಕದೆ  ಸುಮ್ಮನ್ನಿದ್ದಳು.



 ಇವಳ  ತಮ್ಮ ಕಸ್ತೂರಿ ಪುಂಡತನದಿಂದ ಬೆಳೆದಿದ್ದ, ಈಗ ಅರಮನೆಯ ಊಟೋಪಚಾರಗಳಿಂದ  ಇವನ ಪುಂಡತನ ಇನ್ನೂ ಹೆಚ್ಚಾಗಿ  ಊರಿನ ತುಂಟರಿಗೂ  ಇವನ ಪರಿಚಯ ಬೆಳೆಯಿತು. ಒಂದು ಸಂಜೆ ಇವನು ಮತ್ತು ಸಂಗಡಿಗರ ದುರವರ್ತನೆಯ  ನಡತೆ ಅರಮನೆಗೆ ತಲಪಿತು, ಗಿರಿಜವ್ವೆ ಇವನನ್ನು ಕರೆದು ಅವನ ನಡತೆ ಸರಿಲ್ಲವೆಂದು ಬೈದಳು. ಆದರೆ ಇದು ಅವನ ಕಿವಿಗೆಹೋಗಲಿಲ್ಲ.   ತಾಯಿ ಮತ್ತು ತಮ್ಮನ ನಡತೆ ನೋಡಿ ಇವರನ್ನು  ಅವರ ಊರಿಗೆ ಕಳಿಸಿದರೆ  ಉತ್ತಮ ಎಂದು  ಯೋಚನೆಯೂ  ಬಂದಿತ್ತು. ಆದರೆ ಕ್ರಮೇಣ  ದಾರಿಗೆ ಬರಬುಹುದೆಂದು ಸುಮ್ಮನಾದಳು. 

ಮದುವೆಯಾದ ಎರಡು ವರ್ಷಕ್ಕೆ ಗಿರಿಜವ್ವ ಒಬ್ಬ ಮಗನನ್ನು ಹೆತ್ತಳು. ನಾಯಕನಿಗೂ ಮತ್ತು ಲಕುಮವ್ವೆಗೂ  ಬಹಳ ಆನಂದವಾಯಿತು, ಊರಿನ ಜನರೆಲ್ಲಾ ಉತ್ಸಾಹದಿಂದ ವಿಶೇಷ ಪೂಜೆಗಳನ್ನು ನಡಸಿದರು . 

ಹೀಗಿರುವಲ್ಲಿ, ಮರಾಠರ ಸದಾಶಿವರಾಯ ಪುನಃ ದಂಡೆತ್ತಿಬರುವ ಸುದ್ದಿ ಬಂತು, ಇವನು ಹಿಂದೆ ಎರಡು ಸಲ ನಿಜಗಲ್ಲಿನ ಕೋಟೆ ಧಾಳಿ ನಡೆಸುವ ಪ್ರಯತ್ನ ಪಟ್ಟಿದ್ದ. ಆದರೆ  ರಾಮರಸ ನಾಯಕಸುತ್ತಮುತ್ತಿನ ಪಾಳೇಗಾರರ ಸಹಾಯ ಕೋರಿ ಮೈಸೂರು ಅರಸರು ತಮ್ಮ ಸೈನ್ಯವನ್ನೇ ಕಳಿಸಿದ್ದಾರೆ ಅನ್ನುವ ವದಂತಿ ಹುಟ್ಟಿಸಿ ಮರಾಠೆಯವರು ಹಿಂತಿರುಗುವಂತೆ ಮಾಡಿದ್ದ  . 

 

ಮೂರನೇ ಸಲಿ ಮರಾಠರು ಬಂದು ಮೂರುದಿನ ಊರ ಹೊರಗೆ ತಂಗಿದ್ದರು, ನಾಲಕ್ಕನೆ ದಿನ  ರಾಮರಸ ಸುತ್ತಮುತ್ತಿನ ಪಾಳೇಗಾರದ ಸಹಾಯದಿಂದ  ಮರಾಠರು ಕಣ್ಣುಬಿಡುವ ಮುಂಚೆ  ನುಗ್ಗಿ  ಅವರನ್ನು  ಚೆಲ್ಲ ಪಿಲ್ಲಿ  ಓಡಿಸಿದನು. 

 

ಕೆಲವು  ದಿನಗಳಲ್ಲಿ ನಾಯಕನ ಮಗನ ಹುಟ್ಟಿದಹಬ್ಬ ಬಂತು, ಮರಾಠೆಯವರ ಮೇಲೆ ಯುದ್ಧ ಮಾಡಿ ಗೆದ್ದಿದ್ದ ಸಂತೋಷ ಮತ್ತು ಮಗನ  ಹುಟ್ಟಿದ ಹಬ್ಬದ ಸಂಭ್ರಮ ಬೇರೆ. ಊರಿನ ಜನರ  ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಅನೇಕ ಪೂಜೆಗಳು ಮತ್ತು ಉತ್ಸವಗಳು ನಡೆದವು.  ಇಂತಹ ಸಮಯದಲ್ಲಿ  ಕೆಲವು ಊರಿನ  ಪುಂಡರು ಈ ಸಂಭ್ರಮಹದಲ್ಲಿ  ಪಾಲುಗೊಂಡು ಮೆರೆದರು ಇವರ ಮುಖ್ಯಸ್ಥ ಕಸ್ತೂರಿ ನಾಯಕ, ರಾತ್ರಿಯೆಲ್ಲಾ  ಮಧ್ಯ ಕುಡಿದು ಕೆಲವು ಮಹಿಳೆರೊಂದಿಗೆ ಅವಮಾನಕರವಾದ ನಡತೆ ಊರಿನ ಜನರಿಗೆ ಕಾಣಿಸಿ ಮಾರನೆ  ದಿನ ಊರಿನ ಮುಖಂಡರು ರಾಮರಸನನ್ನು ಕಂಡು Iಕಸ್ತೂರಿ ನಾಯಕನ  ನಡುವಳಿಕೆ ನಿಮ್ಮ ಮನೆತನೆಗೆ ಕೆಟ್ಟ ಹೆಸರು ಬರುತ್ತೆ, ಇವನನ್ನು ಹತೋಟಿಯಲ್ಲಿ ಇಡಬೇಕೆಂದರು .  ಈ ಮಾತುಗಳನ್ನು ಕೇಳಿ ಕಸ್ತೂರಿ ನಾಯಕನನ್ನು ಸಭೆಗೆ ಕರಿಸಿ ಇನ್ನು ಮುಂದೆ ಇಂತಹ ನಡುವಳಿಕೆಗೆ ಶಿಕ್ಷೆ ಮಾಡುತ್ತೇನೆಂದು ಎಚ್ಚರಿಕೆ ಕೊಟ್ಟ, ಸಭೆಯಲ್ಲಿ ಎಲ್ಲರೆದರಿಗೆ ಈ ಮಾತುಗಳನ್ನು  ಕೇಳಿ ಕಸ್ತೂರಿ ನಾಯಕನಿಗೆ ಅವಮಾನವಾಯಿತು ಮತ್ತು  ಬಹಳ ಕೋಪವೂ  ಬಂತು. ತಪ್ಪು ಮಾಡಿದ್ದರೆ ಹೀಗೆ ಅವಮಾನ ಮಾಡುವುದೇ, ಕರೆದು ಬುದ್ದಿ ಹೇಳಬೇಕಾಗಿತ್ತು ಅಂತ ತನ್ನ ತಾಯಿ ಮತ್ತು ಅಕ್ಕನ್ನ ಮುಂದೆ ಕಿರಿಚಾಡಿದ.  ಗಿರಿಜವ್ವ ನಿನ್ನ ನಡತೆಯಿಂದ ನಮಗೆ  ಕೆಟ್ಟ ಹೆಸರು ಬಂದಿದೆ  ಇನ್ನುಮೇಲಿ ಈ ದಾರಿಯಲ್ಲಿ ಹೋಗಬೇಡ ಎಂದು ತಮ್ಮನಿಗೆ ಬುದ್ದಿ ಹೇಳಿದಳು . ಆದರೆ ಅವನ ತಾಯಿ ಇದಕ್ಕೆ ಲಕುಮವ್ವೆ ಕಾರಣ ಅವಳೇ ಅರಸನಿಗೆ ಹೀಗೆ ಮಾಡು ಅಂತ ಹೇಳಿರಬೇಕು ಅಂದಳು. ಈ ಕೋಪವನ್ನು ಹೇಗೆ ತೀರಿಸಿಕೊಳ್ಳಬೇಕೆಂದು ಕಸ್ತೂರಿ  ಆಲೋಚಿಸಿದ.  ತಾನೇಕೆ ಒಂದು ದಿನ ಪಾಳೇಗಾರನಾಗಬಾರದು ಅಂತಲೂ ಕನಸು ಕಂಡ  

 

ತಿಂಗಳ ನಂತರ ಮರಾಠ ಸೈನ್ಯ ಒಂದಕ್ಕೆ ಮೂರರಸ್ಟಾಗಿ ಮತ್ತೆ  ಬರುವ ಸುದ್ದಿ ಬಂತು .  ರಾಮರಸ ನಾಯಕ ಪುನಃ ಸುತ್ತ ಮುತ್ತಲಿನ ಪಾಳೇಗಾರ ಸಹಾಯ ಕೋರಿ ಮೈಸೂರಿನ ಅರಸರಿಗೂ  ಸಂದೇಶ ಕಳಿಸಿದ.  ಊರಿನಲ್ಲಿದ್ದ ಜನರನ್ನೂ ಹುರಿಗೊಳಿಸಿ ಶತ್ತ್ರುವಿನ ಮೇಲಿ ಬೀಳುವದೆಂದು ಯೋಚನೆಮಾಡಿದ.  ಕಸ್ತೂರಿ ನಾಯಕ ತನಗೆ ಈಗ ಬುದ್ದಿ ಬಂದಿದೆ ಈ ಕೋಟೆಯನ್ನು ಉಳಿಸುವುದಕ್ಕೆ ತನ್ನ ಬೆಂಬಲ ಇದೆ ಅಂತ ರಾಮರಸನಿಗೆ ಭರವಸೆ ಕೊಟ್ಟ. ಇದನ್ನು ನಂಬಿ ಅವನೊಂದಿಗೆ ಆ ರಾತ್ರಿ ಕೋಟೆಯ ಭದ್ರತೆ ಮಾಡಲು ಇಬ್ಬರೂ ಹೋಗಿ ಬೇಕಾದ್ದ ಸಿದ್ಧತೆಗಳನ್ನು ಮಾಡಿದರು.  ಆದರೆ ಕಸ್ತೂರಿ ನಾಯಕನ ಯೋಚನೆ ಬೇರೆ ಇತ್ತು, ತಾನೇಕೆ ಮರಾಠರ ಬಳಿ ಹೋಗಿ ಈ ಕೋಟೆಯ ರಹಸ್ಯಗಳನ್ನು ಹೇಳಿ  ಕೋಟೆ ಬಿದ್ದಮೇಲೆ ತನ್ನನ್ನೇ ಗದ್ದಿಗೇರಿಸಿ ಅಂತ ಒಪ್ಪಂದ ಮಾಡಬಾರದು ಅನ್ನುವ ದುರಾಲೋಚನೆ ತಲೆಗೆ ಬಂತು . ಎರಡು ಮೂರು ದಿನ ಹೀಗೆ ಯೋಚನೆ ಮಾಡಿ ತಾನು ಮಾಡುವುದು ಸರಿಎಂದು  ಮರಾಠ ದಳಪತಿಯನ್ನು ಭೇಟಿಮಾಡಿ ನಿಜಗಲ್ಲು ಬೀಳುವಂತೆ ನಾನು ನಿಮಗೆ ಸಹಾಯ ಮಾಡುತ್ತೇನೆ ನಂತರ ನನ್ನನ್ನು  ಇಲ್ಲಿಯ ಪಾಳೇಗಾರನಾಗಿ ನೇಮಕಮಾಡಿ ಅಂತ ಸಲಹೆ ಕೊಟ್ಟ.  ರಾತ್ರಿ ಕೋಟೆ ಬಾಗಿಲನ್ನು ತೆರುದುರಿತ್ತೇನೆ  ನೀವು ಅರಮನೆಯೊಳೆಗೆ  ನುಗ್ಗಿ ಅರಸನನ್ನು ಹಿಡಿಯಿರಿ ಅಂದ. 

ಮಾರನೆದಿನ ರಾತ್ರಿ ರಾಮರಸ ಎಂದಿನಂತೆ ಕೋಟೆಯ ಕಾವಲನ್ನು ನೋಡಿ , ಮೈಸೂರು ಮತ್ತು ನೆರೆಯ ಪಾಳೇಗಾರದಿಂದ ಅರ್ಧಮನಸ್ಸಿನಿಂದ ಬಂದ ಉತ್ತರಗಳನ್ನೂ ನೋಡಿ ಈ ಸಲ ಮರಾಠೆಯವರನ್ನು ತಡೆಯುವುದುಹೇಗೆ ಅನ್ನುವ ಚಿಂತೆಯಿಂದ ಮಲಗಿದ. ಕಸ್ತೂರಿ ತನ್ನ ಕಡೆಯವರನ್ನು ಕಾವಲು ಇಟ್ಟು ಮರಾಠರ ಸೈನ್ಯಕ್ಕೆ ಕಾದಿದ್ದ. ಊರೆಲ್ಲ ನಿಶ್ಯಬ್ದವಾದಮೇಲೆ  ಕೋಟೆಬಾಗಲನ್ನು ತೆಗೆದಾಗ  ಮರಾಠರ ಸೈನ್ಯ ಊರೊಳಗೆ ಬಂದು  ಮುಖ್ಯವಾದ ಸ್ಥಳಗಳನ್ನು ಆಕ್ರಮಿಸಿಕೊಂಡರು. ನಂತರ ಕೊಂಚ ಜನ ಅರಮನೆ ಮುಂದೆ ಬಂದು ಜಯಘೋಷಗಳನ್ನು ಕೂಗುತ್ತಾ  ಒಳೆಗೆ ನುಗ್ಗಿದರು. ಏನಾಯಿತೆಂದು ತಿಳಿಯದೆ ರಾಮರಸ ಕತ್ತಿಯನ್ನು ಹಿಡಿದು ಹೊರಕ್ಕೆ ಬಂದಾಗ ಕಸ್ತೂರಿ ಕಂಡು  " ಇಲ್ಲಿ ಏನು ಆಗುತ್ತಿದೆ ಕಸ್ತೂರಿ ?" ಅಂದ.  ಕಸ್ತೂರಿ ಅವನನ್ನು ತೋರಿಸಿ ಇವನನ್ನು ಹಿಡಿಯರಿ ಅಂತ ಕೂಗಿದ. ಹತ್ತಾರು ಜನ ರಾಮರಸನಮೇಲೆ ಬಿದ್ದು ಅವರಲ್ಲಿ ಒಬ್ಬ ರಾಮರಸನನ್ನು ಇರಿದನು. ರಾಮರಸ ಶಿವ ಶಿವ ಎನ್ನುತ್ತಾ ನೆಲೆಕ್ಕುರುಳಿದ. ಶತೃಗಳು ಮುಂದೆ ನುಗ್ಗಿದರು ಅರಮನೆ ಮರಾಠರ ಪಾಲಾಯಿತು. ಅರಮನೆಯ ಊಳಿಗದವರು   ಮತ್ತು ಇಬ್ಬ ರಾಣಿಯರು ಓಡಿಬಂದರು ಅದರೆ ರಾಮರಸ ಜೀವಂತವಾಗಿರಲಿಲ್ಲ. 

ಮರಾಠರ ದಳಪತಿ ಕೋಟೆ ಕಾವಲಿಗೆ ತನ್ನಕಡೆಯವರನ್ನ ಇಟ್ಟುಎಲ್ಲರಿಗೂ ತಿಳಿಯುವಂತೆ ನಿಜಗಲ್ಲು ಈಗ ಅವರ ವಶದಲ್ಲಿದೆ, ಜನಗಳು ಊರು ಬಿಟ್ಟು ಹೋಗುವಹಾಗೆ ಇಲ್ಲ, ನಮ್ಮ ಪರವಾಗಿ ಇನ್ನೊಬ್ಬ ಪಾಳೇಗಾರನ್ನಾಗಿ ಇರುಸುತ್ತೇವೆ ಎಂದು ಡಂಗೂರ ಹೊಡೆಸಿದ .  ಕಸ್ತೂರಿ ಜೊತೆಯಲ್ಲಿ ಅರಮನೆಗೆ ಬಂದು ಅರಸನ ಕೊನೆ ಸಂಸ್ಕಾರಗಳನ್ನು ಮಾಡಿಸುತ್ತೇವೆ ಅಂತ ಧೈರ್ಯ ಕೊಟ್ಟ.  ಊರಿನವರಿಗೆ ಮತ್ತು ಅರಮನೆಯ ಊಳಿಗದವರಿಗೆ ಕಸ್ತೂರಿ ಮಾಡಿದ ಪಿತೂರಿ ತಿಳಿಯಿತು, ಬಹು ದುಃಖದಲ್ಲಿ ಲಕುಮವ್ವೆ ಮತ್ತು ಗಿರಿಜವ್ವೆ ದಳಪತಿಯನ್ನು ಕುರಿತು   ಸಂಸ್ಕಾರಗಳನ್ನು  ಮಾಡಿದನಂತರ ಅರಸನ ಮಗನನ್ನು ಗದ್ದಿಗೇರಿಸಬೇಕೆಂದು ಮತ್ತು ಊರಿನ ಪ್ರಜೆಗಳನ್ನು ಪಾಲಿಸಬೇಕೆಂದು ಕೋರಿದರು . ಕಸ್ತೂರಿ ತಲೆ ತಗ್ಗಿಸಿಕೊಂಡು ನಿಂತಿದ್ದ ಗಿರಿಜವ್ವೆ ಅವನ ಕಡೆಸಹ ನೋಡಲಿಲ್ಲ, ಇದನ್ನು ದಳಪತಿ ನೋಡಿದ.  ಗಿರಿಜವ್ವೆ ಕಸ್ತೂರಿ ಉಂಡ ಮನೆಗೆ  ದ್ರೋಹ ಮಾಡಿದನೇ ಎಂದು  ಕುದಿಯುತ್ತಿದ್ದಳು . ಅರಸನು ಹೋದಮೇಲೆ ನಾನಿನ್ನು ಬದಕಿರುವುದು ಬೇಡ ನನ್ನ ಮಗ ಗದ್ದಿಗೇರಿದಮೇಲೆ ನೀವು ನನ್ನ ಮಗನನ್ನು  ನೋಡಿಕೊಳ್ಳಿ  ನಾನು ಸಹಗಮನ ಮಾಡುವೆ ಎಂದು ಲಕುಮವ್ವೆ ಗೆ ಮನವಿಸದಳು.   ಲಕುಮವ್ವೆ ಇದಕ್ಕೆ ಸಮ್ಮತಿ ಕೊಡದೆ ತಾನು ಸಹಗಮನ ಮಾಡುತ್ತೇನೆ ನೀನು ಮಗನನ್ನು ಮುಂದೆ ತರುವ ಜವಾಬ್ದಾರಿ ಅಂದಳು, ಅಷ್ಟರಲ್ಲಿ ಊರಿನ ಮುಖಂಡರು ಬಂದು ಯಾರೂ ಸಹಗಮನ ಮಾಡಕೂಡದೆಂದು ಬೇಡಿಕೊಂಡರು. ಆ ದಿನವೇ ಉತ್ತರಕ್ರಿಯೆಗಳೆಲ್ಲ ನಡೆಯಿತು

ಮಾರನೇದಿನ ಕಸ್ತೂರಿಗೆ ಮತ್ತು ದಳಪತಿಗೆ ಮುಂದಿನ ಏರ್ಪಾಡಿನಮೇಲೆ ಮನಸ್ತಾಪ ಬಂತು, ಗಿರಿಜವ್ವೆ ತುಂಬಾ ಸುಂದರ ವಾದ ಹೆಂಗಸು ಅನ್ನುವುದನ್ನ ದಳಪತಿ ಗಮನಿಸಿದ್ದ . ರಾಮರಸ ಮಗನನ್ನು ಗದ್ದಿಗೇರಿಸಿ ಲಕುಮವ್ವೆಯನ್ನೂ  ಮತ್ತು ಕಸ್ತೂರಿಯನ್ನೂ  ಅವನ ರಕ್ಷಣೆಗೆ ನಿಲ್ಲಿಸಿ ತಾನು ಗಿರಿಜವ್ವೆ ಯನ್ನು ಕರೆದುಕೊಂಡು ಹೋಗುವದಾಗಿ ತಿಳಿಸಿದ, ಕಸ್ತೂರಿ ತಾನು ಗದ್ದಿಗೇರಬೇಕು ಗಿರಿಜವ್ವ ಒಪ್ಪಿದರೆ ಅವಳನ್ನು ಕರೆದುಕೊಂಡು ಹೋಗಬಹುದೆಂದ. ಆದರೆ ಇವರು ಒಬ್ಬರಮಾತಿಗೊಬ್ಬರು ಒಪ್ಪಲಿಲ್ಲ, ಕಸ್ತೂರಿ ದಳಪತಿ ಕೊಟ್ಟ ಮಾತನ್ನು ಜ್ಞಾಪಿಸಿದ ಆಗ ದಳಪತಿ " ನೀನು ಅರಸನಿಗೆ ಮಗ ಇರುವ ವಿಚಾರ ನನಗೆ ತಿಳಸಲಿಲ್ಲ " ಎಂದ.  ದಳಪತಿ ಈ ಮಾತನ್ನು ಚರ್ಚುಸುವುದಕ್ಕೆ ಇಬ್ಬರು ರಾಣಿಯರಿಗೂ ಹೇಳಿಕಳಿಸಿ ಒಬ್ಬರಾಗಿ ಬರಬೇಂದು ಹೇಳಿದ ಮತ್ತು ಇವನೊಂದಿಗೆ  ಕಸ್ತೂರಿ ಇರುತ್ತಾನೆ ಅಂತಲೂ ಹೇಳಿದ . ಮೊದಲು ಲಕುಮವ್ವೆ ಬಂದು ಯಾರು ನಾಯಕರಾಗಬೇಕೆಂದು ಅವಳೊಂದಿಗೆ ಚರ್ಚಿಸಿದ, ನಂತರ ಗಿರಿಜವ್ವೆಯನ್ನೂ ಇದೇ  ಮಾತನ್ನು ಕೇಳಿದ, ಗಿರಿಜವ್ವೆ ನಮ್ಮ ಹಿರಿಯ ರಾಣಿ ಹೇಗೆ ಹೇಳಿದಂತೆ ಮಾಡಿ ಎಂದು ತಲೆತಗ್ಗಿಸಿ ಮಾತನಾಡಿದಳು. ದಳಪತಿ ಕೊನೆಗೆ  ಗಿರಿಜವ್ವ ತನ್ನ ವಶವಾಬೇಕೆಂದು ಹೇಳಿದ. ಆಗ ಅವಳು ತಲೆ ಎತ್ತಿ ಕಸ್ತೂರಿಯನ್ನು  ನೋಡಿ ಇವನು ಇದಕ್ಕೆ ಒಪ್ಪಿದ್ದಾನೆಯೇ ಎಂದಳು. ದಳಪತಿ ಒಪ್ಪಿದ್ದಾನೆ ಅಂದ. ಸ್ವಲ್ಪಹೊತ್ತು ಯೋಚನೆ ಮಾಡಿ ನಾನು ಬೇಡ ಅನ್ನುವುದಿಲ್ಲ  ಅಂದಾಗ  ಕಸೂರಿಗೆ ಆಶ್ಚರ್ಯವೇ ಆಯಿತು, ದಳಪತಿ ತಾನು ಬೇಗ ಹಿಂತಿಗಬೇಕಾಗಿದೆ ಆದ್ದರಿಂದ ಎರಡು ಅಥವ ಮೂರು ದಿನಗಳಲ್ಲಿ ಎಲ್ಲ ಸಿದ್ಧತೆಗಳಾಕಬೇಕು ಎಂದ.  ಸರಿ ಎಂದು ಹೇಳಿ  ನಂತರ  ಅವಳು ದಳಪತಿಯನ್ನು ವರಿಸುವುದಕ್ಕೆ ತನ್ನ ಒಪ್ಪಿಗೆ ಇದೆ ಅಂತ  ಹೇಳಿ ಎಲ್ಲ ಸಿದ್ಧತೆಗಳನ್ನು ಮಾಡಿ ಎಂದಳು .  ಇದನ್ನು ಲಕುಮವ್ವೆ ಕೇಳಿ ಗಿರಿಜವ್ವೆ ಯನ್ನು ನೋಡಲು ಬಂದಾಗ ಅವಳನ್ನು ನೋಡುವುದಿಲ್ಲ ವೆಂದಳು. ಊರಿನಲ್ಲಿ ಈ ಸುದ್ದಿ ಹರಡಿ ಗಿರಿಜವ್ವೆ ಮಾಡುವುದು ಸರಿಯಲ್ಲ ಎಂದು ಮಾತಾಡಿಕೊಂಡರು ಆದರೆ ದಳಪತಿ ವಿರುದ್ಧ ನಿಲ್ಲುವ ಧೈರ್ಯ ಯಾರಿಗೂ ಇರಲಿಲ್ಲ, ಇಷ್ಟದಂತೆ ಎಲ್ಲ ಸಿದ್ದವಾಯಿತು. 

ಮಾರನೇ ದಿನ ಗಿರಿಜವ್ವೆ ಸ್ನಾನ ಮುಗಿಸಿ ದೇವರ ಪೂಜೆ ಮುಗಿಸಿ ಮಗುವಿನೊಂದಿಗೆ ಲಕುಮವ್ವೆ ಬಳಿಗೆ ಬಂದು ಈ ಮಗು ಇನ್ನಮೇಲೆ ನನ್ನದಲ್ಲ  ಇವನನ್ನು ಕಾಪಾಡುವ ಕೆಲಸ ನಿಮ್ಮದು ಅಂದಳು. ಲಕುಮವ್ವೆ "ನಿನ್ನ ಬುದ್ಧಿಯೆಲ್ಲಾ ಎಲ್ಲಿಹೋಯಿತು ನಿನಗೆ ಇಷ್ಟವಿಲ್ಲದಿದ್ದರೆ ಬೇಡ ಅನ್ನು" ಎಂದಳು. ಆದರೆ ಗಿರಿಜವ್ವೆವನ ಮನಸ್ಸು ಧೃಡವಾಗಿತ್ತು, ಮದುವೆ ವಧುವಂತೆ ಅಲಂಕಾರ ಮಾಡಿಕೊಂಡು ಅರಮನೆಯಿಂದ ಹೊರಟು   ಕಸ್ತೂರಿಗೆ ಕೋಟೆಮೇಲೆ ಬರುವಂತೆ ಹೇಳಿಕಳಿಸಿದಳು.  ನಿಜಗಲ್ಲು  ಕೋಟೆ ಬಂಡೆಯಮೇಲೆ ಕಟ್ಟಿದ ಗೋಡೆಗಳು. ರಸ್ತೆಯಿಂದ ಮೇಲೆ ಹೋಗುವುದಕ್ಕೆ ಮೆಟ್ಟಲುಗಳು. ಮೇಲೆ ನಿಂತು ನೋಡಿದರೆ ಹತ್ತಾರು ಮೈಲಿಗಳ ದೂರ ಇರುವ ಹಳ್ಳಿ ಮತ್ತು ಕಾಡಿನ ಪ್ರದೇಶ ಕಾಣುವುದು. ಗಿರಿಜವ್ವೆ ಮೇಲಿ ಹತ್ತಿ ಕಸ್ತೂರಿ ಬರುವುದನ್ನು ನೋಡಿ, ಆರತಿ ತಟ್ಟೆಯನ್ನು ತರುವಂತೆ ಹೇಳಿದಳು. ಕಸ್ತೂರಿ ಎದುರಿಗೆ ಬಂದು ನಿಂತಮೇಲೆ " ಕಸ್ತೂರಿ ನಿನ್ನಿಂದ ನನಗೆ  ಈ ಭಾಗ್ಯ ಬಂದಿದೆ ನಿನಗೆ ಗದ್ದಿಗೇರುವ ಸಮಯ ಈಗ ಬಂದಿದೆ  " ಎನ್ನುತ್ತಾ ಕರ್ಕಶದ ಧ್ವನಿಯಿಂದ " ನೀನು ದೇಶ ದ್ರೋಹಿ ರಾಮರಸನ ಮನೆ ಕೆಟ್ಟಿತು ನಮ್ಮನ್ನು ಹೆತ್ತವರಿಗೆ ಅಪಕೀರ್ತಿ ಬಂತುಕಸ್ತೂರಿ ನಾವು ಇನ್ನು ಬದಕಬಾರದು " ಅಂತ ಗಟ್ಟಿಯಾಗಿ ಹೇಳಿ ಅವನನ್ನು ತಬ್ಬಿಕೊಂಡು ಗೋಡೆಯ ಹೊರಕ್ಕೆ ಬಂಡೆಗಳ ಮೇಲೆ ಧುಮಕಿದಳು,  ಕೆಳಗೆ ಅನೇಕ ಜನರು ಸೇರಿದ್ದರು ಈ ಧೃಶ್ಯವನ್ನು ನೋಡಿ ಹಾ ಎನ್ನುವಒಳಗೆ ಅಕ್ಕ ತಮ್ಮನ ದೇಹಗಳು  ಬಂಡೆಯಮೇಲೆ ಬಿದ್ದಿತ್ತು. 

 

ರಾಮರಸನ ಮಗನನ್ನು ಲಕುಮವ್ವೆ ನಿಜಗಲ್ಲಿನ ಗದ್ದಿಗೇರಿಸಿದಳು, ಮರಾಠರ ವಶವರ್ತಿಯಾಗಿರುವ ಭರವಸೆ ಕೊಟ್ಟು ಆಡಳಿತವನ್ನು  ಊರಿನ ಮುಖಂಡರ ಸಹಾಯದಿಂದ ನಡೆಸಿದಳು.

 

ಊರಿಗೆ ಉಪಧ್ರುವವಾಗಿ  ಬಂದಿದ್ದ ಕಸ್ತೂರಿ ನಾಯಕನನ್ನು  ಕೊನೆಗಾಣಿಸಿದ ಕಿರಿಯ ರಾಣಿಯನ್ನು ಊರಿನವರು ಬಹಳವರ್ಷ ಊರದೇವತೆಯಂತೆ  ಪೂಜಿಸಿ ಆ ವೀರ ರಮಣಿಯ ಆತ್ಮ ಯಜ್ಞದಿಂದ ಪವಿತ್ರವಾದ ಬಂಡೆಯನ್ನು ತೋರಿಸುವರು. 

                                                         ..... ೦೦೦೦೦೦ .... 

 ಎರಡು ಕಥೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಬರೆದಿದೆ, ಸಂಪೂರ್ಣ ಕಥೆ  ಮಾಸ್ತಿ ಅವರ ಸಣ್ಣಕಥೆಗಳು, ಸಂಪುಟ ೨ ದಲ್ಲಿ ಓದಬಹುದು ಜೀವನ ಕಾರ್ಯಾಲದವರ ಪ್ರಕಟಣೆ 

ರಾಮಮೂರ್ತಿ 

ಬೇಸಿಂಗ್ ಸ್ಟೋಕ್ 

Comments

  1. Very interesting story. It is so sad that our own people stab from back on many instances like this. Wonderful ending. well written sir

    ReplyDelete
  2. Thank you. Please read Masti's Sanna Kathegalu published in 5 volumes.

    ReplyDelete
  3. ಈ ಥರದ ಸಣ್ಣ ಕಥೆಗಳು ಓದಲು ರೋಮಾಚನ. ಬಹಳ ಒಳ್ಳೆಯ ಪರಿಚಯ ಮಾಡಿಸಿದ್ದೀರಿ ಸಾರ್ . ಈ ಕಥೆ ಓದಿದಮೇಲೆ ಆ ಪುಸ್ತಕ ಓದಲೇ ಬೇಕು ಎನ್ನುವ ಹಂಬಲ ಹೆಚ್ಚಾಗಿದೆ.

    ReplyDelete

Post a Comment