ಮಾನವ ರ‍್ರಿಪೇರೆಬಲ್ ತಡಿಕೆ

 ಮಾನವ ರ‍್ರಿಪೇರೆಬಲ್ ತಡಿಕೆ

ಹಾಸ್ಯ ಲೇಖನ - ಶ್ರೀಮತಿ ಇಂದುಶ್ರೀ 

ನಿಮಗೆ ಹಳೇ ಕ್ಲಿಕ್ ಕ್ಯಾಮರಾನೋ, ದೊಡ್ಡ ಜ್ಯಾಮೆಟ್ರಿ ಬಾಕ್ಸ್ ತರಹದ ಫೋನೋ ಅಥವಾ ಬ್ಯಾಟರಿ ಡೌನ್ ಆಗಿರೋ ಕಾರನ್ನ ತಳ್ಳಿ ಸ್ಟಾರ್ಟ್ ಮಾಡೋಹಾಗೆ ಓಡ್ಕೊಂಡ್ಹೋಗಿ ಸ್ಟಾರ್ಟ್ ಮಾಡುತ್ತಿದ್ದ ರೈಟ್ ಬ್ರರ‍್ಸ್ನ ಏರೋಪ್ಲೇನನ್ನೋ ಒದಗಿಸಿದರೆ ಸ್ವೀಕಾರ ಮಾಡ್ತೀರಾ? ಕೊಶ್ಚೆನ್ ಕೇಳಿದವನನ್ನೇ ‘ಹೋಗಯ್ಯ ಸೈಡ್‌ಗೆ’ ಅಂತ ತಳ್ಹಾಕ್ಹೋಗ್ತೀರ. ಮ್ಯಾಟ್ರು ಹೀಗಿರೋವಾಗ ನೀರು ಬಿಟ್ಟಾಗ ನಾರುವ ಈ ದೇಹವು ಹೀಗಲ್ಲದೆ ಬೇರೆ ರೀತಿ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ವಾ ಅನ್ನೋದು ‘ನನ್ನ ಮನಸ್ಸಿನಲ್ಲಿ ಮೂಡುವ ಏಕೈಕ ಯೋಚನೆ’ ಆಗಿತ್ತು. 


ಭಗವಂತನ ಪ್ರಾಡಕ್ಟ್ ಆದ ಈ ದೇಹದ ಬಗ್ಗೆ ನನ್ನದು ಹೆಚ್ಚು ಆಕ್ಷೇಪಣೆ ಏನಿಲ್ಲ. ದೇಹದ ಇಂಜಿನಿಯರಿಂಗ್  ಸರಿಯಾಗೇ ಇದೆ. ರಕ್ತ, ಮಾಂಸ, ಮೂಳೆ, ಮಜ್ಜಿಗೆ, ನೊಣ.... ಕ್ಷಮಿಸಿ... ಮಜ್ಜೆ, ನೆಣ ಎಲ್ಲವೂ ಸರಿಯಾಗಿ ಪ್ಯಾಕ್ ಆಗೋಹಾಗೇ ಅಳವಡಿಸಿದಾನೆ. ಆದರೆ... ನೀವೇ ನೋಡಿದೀರಲ್ಲಾ... ಬೈಕೋ, ಕಾರೋ ಲೆಕ್ಕಕ್ಕೆ ತೊಗೊಂಡ್ರೆ ಪ್ರತೀ ಮೂರು ವರ್ಷಕ್ಕೊಂದು ಫೇಸ್ ಲಿಫ್ಟ್ ಮಾಡ್ತಾರೆ, ಇನ್ನೊಂದು ಸ್ವಲ್ಪ ವರ್ಷಕ್ಕೆ ಅಪ್‌ಡೇಟೆಡ್ ವರ್ಷನ್ ಬರತ್ತೆ. ನಮ್ಮ ದೇಹ ಮಾತ್ರ ಮ್ಯಾನುಫ್ಯಾಕ್ಚರ್ ಆದ ದಿನದಿಂದ ಈವರೆಗೆ ಅದೇ ಓಲ್ಡ್ ಮಾಡಲ್, ರ‍್ತಾ ರ‍್ತಾ ವಾಟ್ಸಪ್ಪು, ನೆಟ್‌ನಿಂದ ಫೇಸ್ ಡೌನ್, ಅಪ್‌ಡೇಟ್ ಬದಲು ಔಟ್‌ಡೇಟ್. ಅಪ್‌ಡೇಟೆಡ್ಡೋ, ಲೇಟೆಸ್ಟೋ ವರ್ಷನ್ನೇ ಇಲ್ಲದ ಲಕ್ಷಾಂತರ ವರ್ಷಗಳ ಓಲ್ಡ್ ಮಾಡಲ್ ಆಗಿದ್ದರೆ ಏನು ಚೆನ್ನ ಅಲ್ಲವೆ? ಸೆಲ್ಫ್ ಸ್ಟಾರ್ಟ್ ಆಗೋ ಗಾಡಿ ಬಂದ್ಮೇಲೂ ಕಿಕ್ ಸ್ಟಾರ್ಟ್ ಮಾಡ್ಕೊಂಡೇ ಇರೋಕ್ಕಾಗತ್ತಾ?

ಪಾರ್ಟ್ ಬೈ ಪಾರ್ಟೇ ನೋಡಿ – ಮುಂದೆ ಎರಡು ಕಣ್ಣು ಕೊಟ್ಟ. ಆದರೆ ರಿಯರ್ ವ್ಯೂಗೆ ಇನ್ನೆರಡು ಕಣ್ಣು ಕೊಟ್ಟಿದ್ದಿದ್ರೆ ಬೆನ್ನಿಗೆ ಚೂರಿ ಹಾಕೊವ್ರೇ ರ‍್ತಿರ‍್ಲಿಲ್ಲ. ಎಕ್ಸಾಮ್‌ನಲ್ಲಿ ಸ್ಟೂಡೆಂಟ್ಸ್ಗೆ ಕಾಪಿ ಮಾಡಿ ಪಾಸ್ ಆಗೋಕೂ ಸುಲಭ ಆಗೋದು. ಅಕ್ಕಪಕ್ಕದಲ್ಲೂ ಒಂದೊಂದು ಇದ್ದಿದ್ರೆ ಒಂಥರಾ ಪ್ಯಾನೋರಾಮಿಕ್ ವ್ಯೂ ಇರೋದು. ಅತ್ತೆ, ಮಾವ, ಗಂಡ, ಮಗುವಿನ ಮೇಲೆ ತಲಾ ಒಂದು ಕಣ್ಣು ಇಡಬಹುದಿತ್ತು. ಝೂಮ್ ಆಪ್ಷನ್ನೂ ಇದ್ದಿದ್ರೆ ಕನ್ನಡಕದ ಖರ್ಚೂ ಉಳೀತಿತ್ತು. ಇದೆಂಥಾ ಡಬ್ಬ ಡಿಸೈನ್ ಅನ್ಸಲ್ವಾ? 

ವಯಸ್ಸಾಗ್ತಾ ಆಗ್ತಾ ಕೈಯೋ ಕಾಲೋ ಉದುರಿಹೋದರೆ ಹೇಗರ‍್ತಿತ್ತು ಅಂತ ಜಸ್ಟ್ ಒನ್ಸ್ ಯೋಚನೆ ಮಾಡಿ. ಆ ತರಹ ಏನಿಲ್ಲ ಅಲ್ವಾ? ಹೀಗಿರುವಾಗ ತಲೆಕೂದಲು ವಯಸ್ಸಾಗ್ತಾ ಆಗ್ತಾ ಯಾಕೆ ಉದುರಿಹೋಗಬೇಕು? ಕೂದಲಿನ ಜೊತೇನೇ ಬೆಳೆಯಕ್ಕೆ ಶುರುವಾದ ಉಗುರು ಸತ್ರೂ ಬೆಳೆಯೋದು ನಿಲ್ಲಲ್ಲ, ಕೂದಲು ಬೆಳೆಯೋದು ನಿಲ್ಲೋದಾದ್ರೂ ಓಕೆ, ಉದುರೋದ್ಯಾಕೆ? ಸಿಂಪಲ್ಲಾಗಿ ಆ್ಯಂಪಲ್ಲಾಗಿ ಗೊಬ್ಬರ ಹಾಕಿ ಬೆಳೆಸೋ ಹಾಗರ‍್ಬೇಕಿತ್ತು ಕೂದಲು. 

ಕೆಲವರ ಕಿವೀನ ಹಿತ್ತಾಳೆ ಕಿವಿ ಅಂತಾರಲ್ಲ, ಹಾಗೆ ಅನ್ನಿಸಿಕೊಳ್ಳದಿರಕ್ಕೆ ಚಿನ್ನದ್ದೋ, ತಾಮ್ರದ್ದೋ, ಬೆಳ್ಳೀದೋ ಕಿವಿ ಚೇಂಜ್ ಮಾಡ್ಕೊಳಕ್ಕೆ ಅನುಕೂಲ ಆಗೋಹಾಗೆ ಕಿವಿಯನ್ನ ಡಿಟ್ಯಾಚೆಬಲ್ ಮಾಡಬೇಕಿತ್ತು. ‘ಫ್ರೆಂಡ್ಸ್, ರೋಮನ್ಸ್ ಅಂಡ್ ಕಂಟ್ರೀಮೆನ್, ಲೆಂಡ್ ಮೀ ಯುವರ ಇರ‍್ಸ್’ ಎಂದರೆ ‘ಓಕೆ. ರಿಟರ್ನ್ ಇಟ್ ಲೇಟರ್’ ಎನ್ನುತ್ತಾ ಬಿಚ್ಚಿಕೊಟ್ಟು ಹೋಗಬಹುದಿತ್ತು. 

ಮನುಷ್ಯನಲ್ಲಿ ಇರಲೇಬೇಕಾದ ಇನ್ನೊಂದು ಅಂಗ ಅಂದ್ರೆ ಮೂಗಿನ ಬದಲಿಗೆ ಸೊಂಡಿಲು. ಅದೊಂದು ಫೀಚರ್ ಇದ್ದಿದ್ದರೆ ಈಗಿನ ಪ್ಯಾಂಡಮಿಕ್ ಭೀತಿಯಿಲ್ಲದೆ ಡೈರೆಕ್ಟಾಗಿ ಊಟ ತಿಂಡಿ ತಿನಿಸುಗಳನ್ನ ಸೊಂಡಿಲಿನಿಂದಲೇ ಹೆಕ್ಕಿ ತಿನ್ನಬಹುದಾಗಿತ್ತು. ಮಾಸ್ಕ್ನ ಅಗತ್ಯವೂ ಇರುತ್ತಿರಲಿಲ್ಲ; ಸುಮ್ಮನೆ ಸೊಂಡಿಲನ್ನು ರೋಲ್ ಮಾಡಿಕೊಂಡಿದ್ದರೆ ಸಾಕಾಗುತ್ತಿತ್ತು. ಕೆಲಸದ ಒತ್ತಡವಿದ್ದು ವರ್ಕ್ ಫ್ರಂ ಹೋಮ್ ಮಾಡುವಾಗ ಎರಡೂ ಕೈಗಳಿಂದ ಟೈಪ್ ಮಾಡ್ತಾನೇ ಸೊಂಡಿಲಿನಿಂದ ತಿಂಡಿ ತಿನಿಸುಗಳನ್ನು ತಿಂದು, ಸ್ಟಾç ಇಲ್ಲದೆ ಜ್ಯೂಸ್, ಕಬ್ಬಿನಹಾಲು, ಎಳನೀರು, ತಂಪು ಪಾನೀಯಗಳನ್ನು ಸೊಂಡಿಲಿನಿಂದಲೇ ಹೀರಿ ಸೊರೆಯಬಹುದಿತ್ತು. ಪ್ಲಾಸ್ಟಿಕ್ ಬಳಕೆ 50% ರೆಡ್ಯೂಸ್ ಆಗರ‍್ತಿತ್ತು. ಸ್ಮೋಕ್ ಮಾಡೋವ್ರು ಎದುರಿಗೆ ಸಿಕ್ಕಾಗ ಸೊಂಡಿಲಿನ ಡೈರೆಕ್ಷನ್ ಚೇಂಜ್ ಮಾಡಿದರೆ ಪ್ಯಾಸಿವ್ ಸ್ಮೋಕಿಂಗ್‌ನ ಇಲ್ ಎಫೆಕ್ಟ್ಸ್  ಇಲ್ಲವಾಗ್ತಿದ್ವು. 

ಬ್ರೈನ್ ನಲ್ಲಿ ಮೆಮೊರಿ ಚಿಪ್ ಇನ್‌ಸ್ಟಾಲ್ ಮಾಡೋ ಅವಕಾಶ ಇರಬೇಕಿತ್ತು. ಎಕ್ಸ್ಟೆಂಡೆಬಲ್ ಮೆಮೊರಿ ಇದ್ದು ಈ ಜನ್ಮದ್ದಷ್ಟೇ ಅಲ್ಲದೆ ಹಿಂದಿನ ಎಲ್ಲಾ ಜನ್ಮಗಳ ಡಾಟಾ ಸ್ಟೋರೇಜ್‌ಗೆ ಅವಕಾಶ ಇರಬೇಕಿತ್ತು. ಆಗ ಪ್ರತಿ ಜನ್ಮದಲ್ಲೂ ಮತ್ತೆ ಮತ್ತೆ 1-10ರವರೆಗೆ ಕ್ಲಾಸ್ ಓದೋದು ತಪ್ತಿತ್ತು. ರೀಬೂಟ್/ಸ್ವಿಚ್ ಆಫ್ ಸ್ವಿಚ್ ಆನ್ ಆಪ್ಷನ್ ಇದ್ದಿದ್ದರೆ ತಲೆ ಕೆಟ್ಟಾಗ ಒಮ್ಮೆಲೆ ರೀಬೂಟ್ ಮಾಡಿ ಫ್ರೆಷ್ ಸ್ಟಾರ್ಟ್ ಮಾಡಬಹುದಾಗಿತ್ತು. ಹಾಗೆ ಮಾಡುವುದರಿಂದ ಕೌನ್ಸೆಲಿಂಗ್/ಸೈಕಿಯಾಟ್ರಿ ಫೀಸುಗಳನ್ನು ತೆರೋದು ತಪ್ಪೋದು. 

ಮುಂದೆ ಹುಟ್ಟೋ ಮಕ್ಕಳಿಗೆ ದೇಹದಲ್ಲೇ ಫೋನ್ ವಿತ್ ಸಿಮ್ ಇನ್ಸ್ಟಾಲ್ ಆಗಿ ಬಂದರೆ ಚೆನ್ನಾಗಿರತ್ತೆ. ಈಗಿನ ಕಾಲದಲ್ಲೆಲ್ಲ ಒಂದೊಂದೇ ಮಕ್ಕಳಲ್ವಾ, ಅವುಗಳು ತಮ್ಮ ಜೊತೆ ತಾವೇ ಆಡ್ಕೊಳಕ್ಕೆ ಇಂಟರ್ನಲ್ ಗೇಮ್ಸ್ ಅನುಕೂಲವಾಗತ್ವೆ. 

ನಮಗೆ ಯೂಷುಯಲಿ ಮೋಸ ಆಗೋದು ಯಾಕ್ಹೇಳಿ ನೋಡೋಣ? ಈ ಹಾಳಾದ್ ಹೊಟ್ಟೇಗೋಸ್ಕರಾನೇ ಕಣ್ರೀ. ಜಸ್ಟ್ ಥಿಂಕ್! ಹೊಟ್ಟೇನೇ ಇಲ್ಲದಿದ್ದಿದ್ರೆ? ಅಡಿಗೆ ಕೆಲಸ ಇರುತ್ತಿರಲಿಲ್ಲ, ಅನವಶ್ಯಕವಾಗಿ ಹೊಟ್ಟೆ ರ‍್ಕೊಳ್ಳೋವ್ರು ರ‍್ತಿರ‍್ಲಿಲ್ಲ. ‘ಕೊಯಿ ಮಿಲ್ ಗಯಾ’ ಫಿಲ್ಮ್ನಲ್ಲಿ ‘ಧೂಪ್ ಧೂಪ್’ ಅಂತ ಸನ್‌ಲೈಟ್‌ಗೆ ಬಂದಾಗ ಚಾರ್ಜ್  ಆಗ್ತಿದ್ದ ಹಾಗೇನೇ ಬ್ಯಾಟರಿಯಿಂದಾನೋ, ಎಣ್ಣೆಯಿಂದಾನೋ... ಐ ಮೀನ್ ಪೆಟ್ರೋಲ್ ಡೀಸೆಲ್‌ನಿಂದಾನೋ ಚಾರ್ಜ್ ಆಗೋ ಹಾಗಿದ್ದಿದ್ರೆ ಚೆನ್ನಾಗಿರೋದು. 

ಕೈಕಾಲುಗಳೂ ಅಷ್ಟೆ. ಈಗಿನ ‘ಫಿಕ್ಸೆಡ್ ಡಿಪಾಸಿಟ್’ ಮಾಡಲ್ ಬದಲು ಬೂಮರ್‌ನ ಕೈಕಾಲುಗಳ ಹಾಗೆ ಎಷ್ಟು ಉದ್ದ ಬೇಕೋ ಅಷ್ಟು ಉದ್ದ ಆಗಬೇಕಿತ್ತು. ಬಟ್ಟೆ ಒಣಗಹಾಕೋವಾಗ, ಮೇಲಿಂದ ಸಾಮಾನು ತೆಗೆಯೋವಾಗ, ಕೆಟ್ಹೋಗಿರೋ ಸ್ಟ್ರೀಟ್  ಲೈಟ್‌ನ ರಿಪೇರೀನೋ ಚೇಂಜೋ ಮಾಡೋವಾಗ ಲ್ಯಾಡರ್ ಇಲ್ಲದೇನೇ ಕೆಲಸ ಸಾಧಿಸಬಹುದಾಗಿತ್ತು. ಸಾವಿರ ಜನರ ಸಭೇಲಿ ಎಲ್ಲರನ್ನೂ ಸೇರಿಸಿ ಸೆಲ್ಫಿ ತೆಗೀಬೇಕೂಂದ್ರೆ ಊಊಊದ್ದದ ಕೈಯಿಂದ ಸೆಲ್ಫಿ ತೆಗೀಬಹುದಾಗಿತ್ತು. ನಂರ‍್ಸ್ನಲ್ಲೂ ಭಗವಂತ ಒಂಚೂರು ಎಡವಿದ್ದಾನೆ. ಗಂಡ್ಸಿಗೂ ಎರಡು, ಹೆಂಗ್ಸಿಗೂ ಎರಡೇ ಕೈಯೇ? ಛೆ! ಹೆಣ್ಣಿಗೆ ಎಂಟೋ ಹತ್ತೋ ಕೈಗಳಿದ್ದಿದ್ರೆ ಕೆಲಸ ಬೇಗಾಗ್ತಿತ್ತು. ಹೊರಗೆ ಹೋಗುವಾಗಲೂ ಒಂದು ಕೈಯಲ್ಲಿ ಪೆಪ್ಪರ್ ಸ್ಪ್ರೇ , ಸೇಫ್ಟಿ ಟೂಲ್ಸ್ ಇಟ್ಕೊಂಡು, ಇನ್ನೊಂದ್ರಲ್ಲಿ ಮೇಕಪ್ ಕಿಟ್ಟು, ಒಂದರಲ್ಲಿ ಸೆಲ್‌ಫೋನು, ಒಂದರಲ್ಲಿ ಪುಟ್ಪರ್ಸು ಎಲ್ಲಾ ಇಟ್ಕೋಬಹುದಾಗಿತ್ತು. ಮಲ್ಟಿಪಲ್ ಹ್ಯಾಂಡ್ಸ್ ಇಂದ ಮೇಕಪ್ಪೂ ಕ್ವಿಕ್ಕಾಗಿ ಆಗ್ತಿತ್ತು. 

ಸೆಂಟ್ರಲ್ ಥೀಮ್‌ಗೆ ಬರೋಣ. ಹನುಮಂತ ತನ್ನ ಎದೆಯನ್ನ ಬಗೆದು ತೋರಿಸಿದ ಹಾಗೇನೇ ಬೇಕಾದಾಗ ಓಪನ್ ಆಗಿ, ವಾಪಸ್ ಕೂಡಿಸಿದಾಗ ಗಟ್ಟಿಯಾಗಿ ಅಂಟ್ಕೊಳೋ ಹಾಗೆ ಕಟ್ & ಪೇಸ್ಟ್ ಆಪ್ಷನ್ ಇರಬೇಕಿತ್ತು. ಆಗ ಡಾಕ್ಟರ್ ಹತ್ರ ಹೋದಾಗ, ಏನಾಗಿದೆ ಅಂತ ಕೇಳ್ದಾಗ, ದೇಹದ ಎಲ್ಲಾ ಭಾಗಗಳನ್ನೂ ಓಪನ್ ಮಾಡಿ ತೋರಿಸೋಹಾಗಿದ್ದಿದ್ರೆ ಆಪರೇಷನ್, ಎಂಆರ್‌ಐ, ಎಕ್ಸ್ರೇ ಇತ್ಯಾದಿಗಳ ಖರ್ಚೂ ಉಳೀತಿತ್ತು. 

ಎದೆಯಿಂದ ಕೆಳಗಿಳಿದರೆ ಹೊಟ್ಟೆಯ ಕಥೆ. ಎಷ್ಟೇ ಪೀಟ್ಝಾ, ಬರ್ಗರ್, ಬೋಂಡಾ ಬಜ್ಜಿಗಳನ್ನ ತಿಂದರೂ ಹೊಟ್ಟೆ ಸಣ್ಣದಾಗೇ, ಫ್ಲ್ಯಾಟ್ ಸ್ಟೊಮಕ್ ಆಗೇ ಇರಬೇಕಾಗಿತ್ತು. 

ಲಾಸ್ಟ್ ಬಟ್ ನಾಟ್ ದ ಲೀಸ್ಟ್ – ದೇಹ ಕೆಟ್ಹೋದಾಗ, ಇಷ್ಟವಾಗದೇಯಿದ್ದಾಗ ಪರಕಾಯಪ್ರವೇಶ ಮಾಡಿ ಇಷ್ಟವಾದ ದೇಹಕ್ಕೆ ಹೋಗೋಹಾಗೆ ಮತ್ತೆ ಗೇಮ್ಸ್ನಲ್ಲಿ ಡಿಕ್ಕಿ ಹೊಡೆದು ಸತ್ತ ಕ್ಯಾರೆಕ್ಟುç ಎಕ್ಸ್ಟ್ರಾ ಲೈಫ್ ಪಡೆದು ಎದ್ದುಬರೋಹಾಗೆ ನಮಗೂ ಐದಾರು ಲೈಫ್ಸ್ ಇರಬೇಕಿತ್ತು. ಮಿಸ್ಟರ್ ಭಗವಾನ್, ಪ್ಲೀಸ್ ಲೆಂಡ್ ಮೀ ಯುವರ್ ಇಯರ್ಸ್... ನಾ ಹೇಳಿದ ಸಿಸ್ಟಮ್ನಲ್ಲಲ್ಲ, ಇನ್ ದ ಗುಡ್ ಓಲ್ಡ್ ಸಿಸ್ಟಮ್ಮು ಅಂಡ್ ಜಾರ್ಗನ್ನು.  


Comments

  1. ಇಂದುಶ್ರೀ ಮೇಡಂ ತಮ್ಮ ಪ್ರಖ್ಯಾತ ವಾಕ್ ಚಾತುರ್ಯ ನೋಡಿದ್ವಿ. ಮಾತನಾಡುವ ಬೋಂಬೆ ಹಿಡಿದು ಅಧ್ಭೂತ ಮೋಡಿಮಾಡುತ್ತಿರುವ ನೀವು ಈಗ ಲೇಖನಿ ಹಿಡಿದು ತಮ್ಮ ಹೊಸ ಕಲೆಪರಿಚಯಿಸಿಕೊಂಡಿದ್ದೀರಿ. ಸೂಪರ್ ಆಲೋಚನೆ. ಕಿವಿ ಹಿತ್ತಾಳೆದೋ ಚಿನ್ನದ್ದೋ ಬೆಳ್ಳಿದೊ ಒಳ್ಳೆ ಪಂಚ್ ಸಾಲು. ಮುಂದುವರೆಯಲಿ ತಮ್ಮ ಬರಹ. ನಮ್ಮ ಚಿಲುಮೆಯ ಕುಲುಮೆಗೆ ಮತ್ತೆ ಬಿಸಿ ಹೆಚ್ಚುವ ಸಾಧ್ಯತೆ ಕಾಣುತ್ತಿದೆ. ಹೊರನಾಡ ಚಿಲುಮೆ ಲೇಖಕರ ಬಳಗಕ್ಕೆ ಸ್ವಾಗತ

    ReplyDelete
  2. Can`t imagine if your imagination comes true OMG! liked nice light humor in your article

    ReplyDelete

Post a Comment