ಐಬು – ಆಗೀರಿ ತಬ್ಬಿಬ್ಬು

 ಐಬುಆಗೀರಿ ತಬ್ಬಿಬ್ಬು

ಹಾಸ್ಯ ಲೇಖನ - ಅಣುಕು ರಾಮನಾಥ್

ಸೂತ್ರಧಾರ: ನೀವೇನೇ ಹೇಳಿ, ಹದಿನೇಳು ಹದಿನೇಳೇ. ವಯಸ್ಸಿನಲ್ಲಿ ಮಾತ್ರ ಹದಿನೆಂಟಾಗಿಮೇಜರ್ಅನಿಸಿಕೊಂಡುಬಿಡಬೇಕೆನ್ನುವ ತಹತಹ ಇರುತ್ತದೆ. ‘ವಯಸ್ಸಾಗಲಿಎಂದು ಹಪಹಪಿಸುವುದು ಅದೇ ಕಡೆಯ ವರ್ಷ. ಅಂದಿನಿA ಕಡೆಯ ದಿನದವರೆಗೆ ಏರುತ್ತಿರುವ ವಯಸ್ಸನ್ನು ಮುಚ್ಚಿಡಲು ಅನೇಕ ಪ್ರಯತ್ನಗಳ ಆರಂಭ. ಆನೆಯ ಬಣ್ಣದ ಮೈಗೆ ವರ್ಣಮಯ ಅಲಂಕಾರ ಮಾಡಿ ಹಂಸ ಎನಿಸಿಕೊಳ್ಳುವ ಮಹದಾಸೆ. ವಯಸ್ಸಾದಂತೆ ಚಾಳೀಸ ಬಂದರೆ ಕನ್ನಡಕಕ್ಕಿಂತ ಕಾಂಟಾಕ್ಟ್ ಲೆನ್ಸ್ ಧರಿಸಿ ಹುಳುಕು ಮುಚ್ಚಿಟ್ಟುಕೊಳ್ಳುವ ಯತ್ನ. ಅದೊಂದು ವೃದ್ಧೆ ಬೆಳಗ್ಗೆ ದೇವಸ್ಥಾನದಲ್ಲಿನನಗೆ ದೀರ್ಘಾಯಸ್ಸು ಕೊಡು ದೇವಎಂದಾಗ ದೇವ ಪ್ರತ್ಯಕ್ಷನಾಗಿತಥಾಸ್ತುಎಂದ. ಸಂಜೆ ಬ್ಯೂಟಿ ಪಾರ್ಲರಿಂದ ಹೊರಬಂದಾಗ ಕಾರೊಂದರೆ ಟೈರಿಗೆ ಸಿಲುಕಿ ರೋಡಿನಮೇಲೆ ಮ್ಯಾಪ್ ಆದಳು. ಆತ್ಮ ದೇವಲೋಕಕ್ಕೆ ತೆರಳಿಎಲೈ ದೇವ. ದೀರ್ಘಾಯಸ್ಸನ್ನು ನೀಡುವೆನೆಂದು ಸಂಜೆಗೇ ಕರೆಸಿಕೊಂಡದ್ದೇಕೆ?’ ಎಂದು ಕೇಳಿದರೆಓಹ್! ಇಟ್ಸ್ ಯೂ. ಯಾಮ್ ಸೋ ಸಾರಿ. ಮೇಕಪ್ ಮಾಡಿಕೊಂಡ ನಿನ್ನನ್ನು ಸಮ್ ಯಂಗ್ ಗರ್ಲ್ ಅಂದ್ಕೊAಡು ್ಕೊಂಡ್ಬAದ್ಬಿಟ್ಟೆ. ನಿನ್ನ ದೇಹ ಇನ್ನೂ ದಫನ್ ಆಗಿಲ್ಲದಿದ್ದರೆ ಮರುಜೀವ ತುಂಬ್ತೀನಿಎಂದನAತೆ. ಅಜ್ಜಿಗೊಬ್ಬಳು ಘಟವಾಣಿ ಸೊಸೆಯಿದ್ದಳೆಂದಮೇಲೆ ಕೂಡಲೆ ದಫನ್ ಆಗಿತ್ತೆಂಬುದು ಪ್ರಶ್ನಾತೀತ.

ಕಥೆಯ ನೀತಿ ಏನೆಂದರೆ, ನಾವು ಆಗಿರುವ ವಯಸ್ಸನ್ನು ಯಥಾವತ್ತಾಗಿ ಒಪ್ಪಿಕೊಳ್ಳಬೇಕು. ಆದರೆ ನೀತಿ ಶಾಸ್ತಿçಗಳಿಗೂ ಗೊತ್ತಿಲ್ಲವೆನ್ನಿ. ಅವರೇ ಹೇಳುವಂತೆಕಿವಿ ಕೊಂಚ ಮಂದಹಾಗೂ ಅವರ ಮನೆಯವರು ಹೇಳುವಂತೆಬ್ರಹ್ಮಕಿವುಡುಆವರಿಸಿದ್ದರೂ, ಶಾಸ್ತಿçಗಳು ಯಾಮ್ ಆಲ್ರೈಟ್ ಜಸ್ಟ್ ನೌಎಂದು ಮೊಮ್ಮಗಳೊಡನೆ ನರ್ಸರಿ ರೈಮ್ಸ್ ಹೇಳಿಕೊಂಡು ಕಾಲ ಕಳೆಯುತ್ತಿದ್ದರು.

ಮಾಮೂಲಿ ಜನರಂತೆ ಶಾಸ್ತಿçಗಳೂರಾಮಾ ಕೃಷ್ಣಾಎಂದುಕೊAಡಿರುವ ಜಾತಿಯವರಾಗಿದ್ದರೆ ಏನೂ ತೊಂದರೆ ಆಗುತ್ತಿರಲಿಲ್ಲ. ಆದರೆ ಶಾಸ್ತಿçಗಳು ಭವಿಷ್ಯ ಹೇಳುವುದರಲ್ಲಿ, ಜಾತಕ ಹೊಂದಿಸುವುದರಲ್ಲಿ, ವಧು-ವರಾನ್ವೇಷಣೆಯಲ್ಲಿ ಎತ್ತಿದ ಕೈ. ಅವರ ಬಳಿ ದಿನವೂ ಬರುತ್ತಿದ್ದ ಮಂದಿಜಾತಕ ಕೂಡಿ ಬರತ್ತಾ?’ ಎಂದು ಕೇಳಿದರೆಪಾತಕ್ಕ ಕೋರ್ಟಿಗೆ ್ತಾಳಾ ಅಂದ್ರೇನು? ನಿಮ್ಮ ಜಾತಕದಲ್ಲಿ ಸ್ತಿçà ಕಂಟಕ ಇದೆ. ಬರಬಹುದುಎಂದೋ, ‘ ಸರತಿಯಾದರೂ ಮಗ ಎಸ್ಸೆಸ್ಸೆಲ್ಸಿ ಪಾಸಾಗ್ತಾನಾ ನೋಡಿಎಂದರೆಬಾಸ್ ಆಗ್ತಾನಾ ಅಂದ್ರೇನು? ಮಗನೇ? ಹೂಂ. ಐವತ್ತಾರನೆಯ ವಯಸ್ಸಿಗೆ ಮಜಕೇಸರಿ ಯೋಗ ಇದೆಎಂದೋ ಹೇಳುತ್ತಿದ್ದುದನ್ನು ತಡೆಯಲಾರದೆ ಜಾತಕ-ಪಕ್ಷಿಗಳು ಶ್ರೀಮತಿ ಶಾಸ್ತಿçಗಳಿಗೆ ದುಂಬಾಲು ಬಿದ್ದುದರ ಪರಿಣಾಮವಾಗಿ ಶಾಸ್ತಿçಗಳ ಜಾತಕದಲ್ಲಿಹಿಯರಿಂಗ್ ಏಯ್ಡ್ಯೋಗ ಮೂಡಿತು. ಆದರೆ ಪ್ರಯೋಜನ? ಬರ್ಮುಡಾ ಚೆಡ್ಡಿಯ ರಮಣಿಯರಿಗೆ ಪೂಚಂಪಲ್ಲಿ ಸೀರೆ ಕೊಟ್ಟಂತಾಯಿತು. ಹಿಯರಿಂಗ್ ಏಯ್ಡ್ ಎಲ್ಲೋ, ಶಾಸ್ತಿçಗಳೇ ಎಲ್ಲೋ!

ದಿನ ಮಕ್ಕಳು ಆನ್ಲೈನ್ ಕೆಲಸದಲ್ಲಿ, ಹೆಂಡತಿಕಾಂಪೌAಡ್ ಮೀಟಿಂಗ್ನಲ್ಲಿ, ಮೊಮ್ಮಕ್ಕಳು ಪಬ್ಜೀ ಇತ್ಯಾದಿಗಳಲ್ಲಿ ಮುಳುಗಿದ್ದಾಗ ಬಾಗಿಲ ಬಳಿ ನೆರಳಾಡಿತು. ಹೊರಗೆ ಸೆನ್ಸಸ್ ಮಂಡಳಿಯ ವ್ಯಕ್ತಿಯೊಬ್ಬ ಶಾಸ್ತಿçಗಳನ್ನು ಕಾಣುತ್ತಲೇ ಪ್ರಶ್ನಿಸಲು ತನ್ನ ಪ್ರಶ್ನೆಪಟ್ಟಿಯ ಬತ್ತಳಿಕೆಯಿಂದ ಒಂದೊAದಾಗಿ ಬಾಣಗಳನ್ನು ಬಿಡಲಾರಂಭಿಸಿದ. ಇದೋ ನಿಮ್ಮ ಕಣ್ಮುಂದೆಯೇ ಅಂದು ನಡೆದ ಪ್ರಸಂಗದ ಫ್ಲಾö್ಯಶ್ಬ್ಯಾಕ್:

 

ದೃಶ್ಯ 1


(ಶಾಸ್ತಿçಗಳು ಮನೆಯಿಂದ ಹೊರಬರುತ್ತಾರೆ. ಸೆನ್ಸಸ್ನವ ಅವರಿಂದ ಆರು ಅಡಿ ದೂರದಲ್ಲಿ ನಿಲ್ಲುತ್ತಾನೆ)

ಶಾಸ್ತಿçಗಳು: ಯಾರು?

ನೆನ್ಸಸ್ನವ: ನನ್ನ ಹೆಸರು ವೇಣು ಅಂತ...

ಶಾ: ಹಂತವೇ? ಇದು ಬನಶಂಕರಿ ಎರಡನೇ ಹಂತ.

ವೇ: ಅಲ್ಲ ಸಾರ್... (ವಿಸಿಟಿಂಗ್ ಕಾರ್ಡ್ ಕೊಡುತ್ತಾ) ನನ್ನ ಹೆಸರು ವೇಣು. ಸೆನ್ಸಸ್ ಮಂಡಳಿಯ ಪರವಾಗಿ ಬಂದಿದ್ದೇನೆ.

ಶಾ: ‘ಪರವಾಗಿಲ್ಲಅಂತ ನೀವೇ ಹೇಳಿದರೆ ಹೇಗೆ? ನಾನು ನೀವು ಬಂದದ್ದು ಪರವಾಗಿಲ್ಲ ಅಂತ ಹೇಳ್ಬೇಕು. ಇರಲಿ.

ಪ್ರಶ್ನೆಗಳನ್ನು ಕೇಳಿ.

ವೇ: (ಸ್ವಗತ) ಕೊಂಚ ಅರಳುಮರಳಿರಬಹುದು. ಇವೆಲ್ಲವೂ ಪ್ರೊಫೆಷನಲ್ ಹೆಜಾರ್ಡ್ಸ್. ಅವಶ್ಯಂ ಅನುಭುಕ್ತವ್ಯಂ. (ಪ್ರಕಾಶ) ಶಾಸ್ತಿçಗಳೆ, ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ?

ಶಾ: (ಕುತೂಹಲವನ್ನು ಮುಖದಲ್ಲಿ ತೋರಿಸುತ್ತಾ) ? ಏನು ಗುಟ್ಟು ಹೇಳಿದ್ರಿ ಇನ್ನೊಂದ್ಸರ್ತಿ ಹೇಳಿ (ಎನ್ನುತ್ತಾ ವೇಣುವಿನ ಬಾಯಿಯತ್ತ ಅವರ ಕಿವಿ ಒಯ್ಯುವರು)

ವೇ: (ಜೋರಾಗಿ) ಗುಟ್ಟು ಹೇಳಲಿಲ್ಲ ಶಾಸ್ತಿçಗಳೆ, ಒಟ್ಟು ಹೌ ಮೆನಿ ಪೀಪಲ್ ಇನ್ ಯವರ್ ಹೌಸ್?

ಶಾ: ಸೋಮವಾರದಿಂದ ಶುಕ್ರವಾರ ದಿನಕ್ಕೆ 30-35. ಶನಿವಾರ-ಭಾನುವಾರ 100-120

ವೇ: (ಜೋರಾಗಿ) ಅಷ್ಟೊಂದು ಜನ ಇದ್ದಾರಾ?

ಶಾ: ಇದ್ದಾರೆ ಅಲ್ಲ, ್ತಾರೆ... ಶಾಸ್ತç ಕೇಳಕ್ಕೆ ್ತಾರಲ್ಲ...

ವೇ: ಅಯ್ಯೋ... ನಾವು ಕೇಳಿದ್ದು ನಿಮ್ಮ ಮನೇಲಿ ರೆಸಿಡೆಂಟ್ಸ್ ಎಷ್ಟು ಅಂತ...

ಶಾ: ಆಕ್ಸಿಡೆಂಟ್ಸೇ? ಇಲ್ಲಪ್ಪ... ದೇವರ ದಯೆ... ಆಕ್ಸಿಡೆಂಟೇನೂ ಆಗಿಲ್ಲ

ವೇ: (ಜೋರಾಗಿ) ಆಕ್ಸಿಡೆಂಟಲ್ಲ... ರೆಸಿಡೆಂಟೂ.... ವಾಸ ಮಾಡೋ ಜನ....

ಶಾ: ವಾಸಿ ಮಾಡೋ ಜನರೇ? ವೈದ್ಯರೇ? ಊಹೂಂ. ಯಾರೋ ತಪ್ಪಡ್ರೆಸ್ ಕೊಟ್ಟಿದಾರೆ. ಇಲ್ಲಿ ಯಾರೂ ಡಾಕ್ಟರ್ ಇಲ್ಲ.

ವೇ: (ಜೋರಾಗಿ) ವಾಸಿ ಮಾಡೋವ್ರಲ್ಲ... ವಾಸ.... ದೇವರನ್ನ ನೀವು ಹಿಮಗಿರಿವಾಸನೆ ಅನ್ನೋಹಾಗೆ... ವಾಸ...

ಶಾ: ವಾಸನೇನೇ? ಏನು ವಾಸನೆ ಇದೆ ಇಲ್ಲಿ?

ವೇ: (ಚೀಟಿಯಲ್ಲಿ ಬರೆದು ತೋರಿಸುತ್ತಾ) ಮನೆಯಲ್ಲಿ ಎಷ್ಟು ಜನ ವಾಸ ಇದ್ದೀರಿ?

ಶಾ: ಇದೂ ಬರೀಬೇಕೇ? ಮಾತು ಕಲೀಬೇಕ್ರೀ ನೀವೂ... ಆರು ಜನ ವಾಸ ಇದ್ದೀವಿ

ವೇ: (ಜೋರಾಗಿ) ಗಂಡೆಷ್ಟು, ಹೆಣ್ಣೆಷ್ಟು?

ಶಾ: ವಾರಕ್ಕೆ ಎರಡು ದಿನ ಮಾತ್ರ 40-50 ಗಂಡುಗಳು, 25-30 ಹೆಣ್ಣುಗಳು ್ತಾರೆ... ವರ-ವಧು ಅನ್ವೇಷಣಾ ಕೇಂದ್ರ ನಡೆಸ್ತೀವಲ್ಲಾ...

ವೇ: (ತಲೆ ಚಚ್ಚಿಕೊಳ್ಳುತ್ತಾ, ಏರುದನಿಯಲ್ಲಿ) ಅದಲ್ಲ ಶಾಸ್ತಿçಗಳೆ, ಇಲ್ಲಿ ದಿನಾ ಇರೋವ್ರು...

ಶಾ: ನಾನು, ನನ್ನ ಇಬ್ಬರು ಗಂಡುಮಕ್ಕಳು ಮಾತ್ರ ಇಲ್ಲಿ ದಿನಾ ಇರೋವ್ರು...

ವೇ: (ಅದೇ ಏರುದನಿಯಲ್ಲಿ) ಮಿಕ್ಕವರು? ಹೆಂಗಸರು?

ಶಾ: ವಾರಕ್ಕೆ ಮೂರು ದಿನವಾದರೂ ಕೋಪ ಮಾಡ್ಕೊಂಡೋ, ಹಬ್ಬಕ್ಕೆ ಅಂತಾನೋ ತವರುಮನೆಗೆ ಹೋಗ್ತಾರೆ...

ವೇ: ಮನೆಯ ಯಜಮಾನರು ಯಾರು?

ಶಾ: ಮಾನಾನೇ? ಕೆಲವು ಸರತಿ ಅವರು ಇವರು ಕಳೀತಾರೆ...

ವೇ: ಮಾನ ಅಲ್ಲ (ಜೋರಾಗಿ) ಯಜಮಾನ... ಯಜಮಾನರು ಯಾರು?

ಶಾ: ಇನ್ನೂ ತೀರ್ಮಾನ ಆಗಿಲ್ಲ... ಅದನ್ನ ತೀರ್ಮಾನಿಸಕ್ಕೆ ಅಂತಾನೇ ನಾನು, ನನ್ನ ಹೆಂಡತಿ ಜಗಳ ಆಡೋದೂ...

ವೇ: ಮನೆಯಲ್ಲಿ ಓದ್ಕೊಂಡಿರೋವ್ರು ಎಷ್ಟು ಜನ?

ಶಾ: (ಕಿವಿ ಆನಿಸುತ್ತಾ) ಏನು ಕೊಂಡಿರೋವ್ರು?

ವೇ: (ಜೋರಾಗಿ) ಏನೂ ಕೊಂಡಿರೋವ್ರಲ್ಲ... ಓದ್ಕೊಂಡಿರೋವ್ರೂ... ಲಿಟರೇಟ್ಸ್

ಶಾ: ಯಾವ ರೇಟ್ಸು? ಪಾಮಿಸ್ಟಿçಗಾದ್ರೆ ಹಂಡ್ರೆಡ್ಡು, ನ್ಯೂಮರಾಲಜಿಗೆ ಒನ್ಫಿಫ್ಟಿ...

ವೇ: (ಕಿರಿಕಿರಿಗೊಳ್ಳುತ್ತಾ) ರೇಟ್ಸ್ ಅಲ್ಲ ಸಾರ್... ಲಿಟರೇಟ್ಸ್... ಅಕ್ಷರಸ್ಥರು...

ಶಾ: ಅಕ್ಷಯ ತದಿಗೇನೇ? ಅದರ ಪೂಜೆಗಾದರೆ ಬೇರೆ ರೇಟ್ ಫಿಕ್ಸ್ ಮಾಡ್ಬೇಕು...

ವೇ: ಸರಿ. ಎಜುಕೇಷನ್ ಅತ್ಲಾಗಿ ಹಾಳಾಗ್ಲಿ... ನಿಮ್ಮ ಮಕ್ಕಳಿಗೆ ಪೋಲಿಯೋ...

ಶಾ: ಯರ್ನಪ್ಪ ನೀವು ಪೋಲಿ ಅನ್ನೋದೂ... ಧರ್ಮಶಾಸ್ತçವಿದ್ಯಾಪಾರಂಗತ ಮಹಾಮಹೋಪಾಧ್ಯಾಯ ಪೋಲಿನಾ..?

ವೇ: ಪೋಲಿ ಅಲ್ಲ ಸಾರ್.... ಪೋಲಿಯೋ (ಬ್ರೋಚರ್ ತೆಗೆದು ತೋರಿಸಿ, ಜೋರಾಗಿ) ಇದು... ಇದನ್ನ ಮಕ್ಕಳಿಗೆ ಹಾಕಿಸಿದ್ದೀರಾ?

ಶಾ: (ಅದನ್ನು ಓದಿ) ಇದು ಸ್ವಿಗ್ಗೀಲಿ ಸಿಗತ್ತಾ? ಸಿಕ್ರೆ ಆರ್ಡರ್ ಮಾಡಿ ಕುಡಿದರ್ತಾರೆ....

ವೇ: (ಹಣೆ ಚಚ್ಚಿಕೊಳ್ಳುತ್ತಾ) ಹೋಗಲಿ, ನಿಮ್ಮ ಮನೆ ನಂಬರ್ ಆದ್ರೂ ಹೇಳಿ

ಶಾ: ? ಏನು ಹೇಳಿದ್ರಿ?

ವೇ: (ಜೋರಾಗಿ) ನಂಬರ್... ಸಂಖ್ಯೆ...

ಶಾ: ಹೇಳಿ... ನ್ಯೂಮರಾಲಜಿ ಪ್ರಕಾರ ಶಾಸ್ತç ಹೇಳ್ತೀನೀ...

ವೇ: (ಧಪ್ಪೆಂದು ಪುಸ್ತಕ ಮುಚ್ಚಿ) ಸ್ವಾಮಿ... ಮೊದಲು ಒಂದು ಹಿಯರಿಂಗ್ ಏಡ್ ತೊಗೊಳಿ

ಶಾ: ಏನು?

ವೇ: (ಇಯರ್ ಫೋನ್ ಚಿತ್ರ ಬರೆದು) ಇದನ್ನ ತೊಗೊಳಿ...

ಶಾ: (ಜುಬ್ಬಾದ ಜೇಬಿನಿಂದ ತೆಗೆಯುತ್ತಾ) ಮೊದಲೇ ಕೇಳ್ಸಲ್ಲಾಂತ ಹೇಳ್ಬರ್ದಾಗಿತ್ತಾ.... ತೊಗೊಳಿ.

(ವೇಣುಸೆನ್ಸ್ಲೆಸ್ಎನ್ನುತ್ತಾ ತಲೆ ಅಡ್ಡಡ್ಡಲಾಗಿ ಆಡಿಸುತ್ತಾ ಗೊಣಗುತ್ತಾ ನಿರ್ಗಮನ).

* * *


ಸೂತ್ರಧಾರ: ಅತ್ತ ಶಾಸ್ತçಗಳ ಕಥೆ ಹಾಗಿದ್ದರೆ ಅವರಗಳಸ್ಯ ಕಂಠಸ್ಯಆದ ರಾಯರೂ ಅದೇ ಹಾದಿ ತುಳಿದಿದ್ದರು. ಹಿಂದೊಮ್ಮೆ ಪ್ರತಿದಿನ ಶಾಸ್ತಿçಗಳೊಡನೆ ಕಾಲ ಕಳೆದು ಭವಿಷ್ಯಕ್ಷೇತ್ರದ ರಾಹು-ಕೇತುಗಳಲ್ಲಿ ರಾಹು ಎನಿಸಿಕೊಂಡಿದ್ದ ರಾಯರು ಎಂದಿನAತೆ ತಮ್ಮ ಹಿಯರಿಂಗ್ ಏಯ್ಡನ್ನು ದೇವರ ಕೋಣೆಯಲ್ಲಿಟ್ಟು ಹೊರಬಂದರು. ಸೇಲ್ಸ್ಮನ್ ಸಲೀಮ್ ಅದೇ ಸಮಯಕ್ಕೆ ಒಕ್ಕರಿಸಿಕೊಂಡ. ಇದೋ ನಿಮಗಾಗಿ ರಾಯರು ಬಂದರು ಸಲೀಮನ ಬಳಿಗೆ...

ದೃಶ್ಯ 2

ರಾಯರು: (ತುಳಸಿಕಟ್ಟೆಯನ್ನು ಸುತ್ತುತ್ತಾ, ಒಂದು ಕ್ಷಣ ನಿಂತು, ಸ್ವಗತ) ಮೂರಾಯ್ತೋ, ಎರಡಾಯ್ತೋ? ಮೊದಲನೆ ಸುತ್ತಿನಲ್ಲಿ ಎದುರುಮನೆಯ ಮೀನಾಕ್ಷಮ್ಮನವರು ಕೊಟ್ಟ ಕೋಡುಬಳೆಯ ಬಗ್ಗೆ ಯೋಚಿಸ್ತಿದ್ದೆ. ಎರಡನೆಯ ಸುತ್ತಿನಲ್ಲಿ ಪಕ್ಕದ ಮನೆಯ ಡಿಂಪಲ್ ನೆನಪಾದಳು... ಆಹಾ! ವೈಜಯಂತಿಮಾಲಾನೇ.... ‘ಕ್ಯಾ ಕರು ರಾಮ್ ಮುಝೆ ಬುಡ್ಡಾ ಮಿಲ್ಗಯಾಅಂತ ಕುಣಿದರೆ ಇವಳೂ ಹಾಗೇ ್ತಾಳೆ. ಮೂರನೆಯ ಸುತ್ತು.... ಎಲ್ಬಂತೂ.... ಡಿಂಪಲ್ ಯೋಚನೇಲೇ ನಿಂತುಬಿಟ್ಟಿದ್ದೀನಿ. ಮೂರನೆಯ ಸುತ್ತು ಹಾಕಿಬಿಡ್ತೀನಿ... (ಪ್ರಕಾಶ್) ಗೋವಿಂದ ನಾರಾಯಣಾ ಶ್ರೀಹರೀ...

ಸೇಲ್ಸ್ಮನ್: ಸಾಬ್....

ರಾ: (ಸುತ್ತುತ್ತಿದ್ದವರು ನಿಂತು) ಇದೇನಿದು? ಯಾರೋ ಸಾಬ್ ಅಂದ್ರೆ? ಇರಲಾರದು. ಪ್ರತಿದಿನ ಟಿವಿಯಲ್ಲಿ ಸಾಬ್ ಸ್ಟೋರಿ... ಗೋಳಿನ ಕಥೆ... ನೋಡೀ ನೋಡೀ ಅದೇ ಭ್ರಮೆ ಅನ್ಸತ್ತೆ... (ಮತ್ತೆ ಸುತ್ತುತ್ತಾ) ಗೋವಿಂದ ನಾರಾಯಣಾ...

ಸೇಲ್ಸ್ಮನ್: ಸಾಬ್.... ಯಜಮಾನ್...

ರಾ: ಯಜಮಾನ್? ರಿಟೈರಾಗಿ ಜ್ಯೋತಿಷ್ಯ ಹೇಳಕ್ಕಿಳಿದ್ಮೇಲೆ ರಾಯರೇ ಅಂದವರು ಇದ್ದಾರೆ. ಆದರೆ ಯಜಮಾನ್...? ಮನೇಲಿಲ್ಲದ ಯಜಮಾನಿಕೆ ಇವನ ಕರೇಲಾದ್ರೂ ಇದೆಯಲ್ಲಾ... (ಗೇಟಿನ ಬಳಿ ಯಾರೋ ನಿಂತಿರುವುದನ್ನು ನೋಡಿ) ಯಾರು? ಬನ್ನಿ ಒಳಗೆ... ನಿಮ್ಮ ನಾಮಧೇಯ?

ಸೇ: (ಜೋರಾಗಿ) ಇಸ್ಮೆöÊಲ್ ಸಲೀಮ್

ರಾಯರು ನಗೆ ಬೀರುತ್ತಾ ಸುಮ್ಮನೆ ನಿಲ್ಲುವರು. ಅವನೂ ಸುಮ್ಮನೆ ನಿಲ್ಲುವನು. ಕೊಂಚ ಸಮಯದ ನಂತರ)

ರಾ: ಎಲ್ಲಿ ಕ್ಯಾಮರಾ?

ಸೇ: ಕ್ಯಾಮರಾ? ಯಾಕೆ? (ಸನ್ನೆಯಿಂದ ಕೇಳುವನು)

ರಾ: ಸ್ಮೆöÊಲ್ ಪ್ಲೀಸ್ ಅಂದಿರಲ್ಲಾ, ಅದಕ್ಕೇ ನಗ್ತಾ ನಿಂತಿದ್ದೆ.

ಸೇ: ನಾವು ಹೇಳ್ತಾರೆ ನಮ್ದೂಕೆ ನಾಮ್ ಇಸ್ಮೆöÊಲ್ ಸಲೀಮ್...

ರಾ: ಏನು? ಸ್ಲಿಮ್ ಅಂದ್ರಾ? ಅದು ನೋಡಿದರೇನೇ ಗೊತ್ತಾಗತ್ತೆ... ಹೇಳ್ಬೇಕೇ...

ಸೇ: (ಜೋರಾಗಿ) ಸ್ಲಿಮ್ ಅಲ್ಲ.... ಸಲೀಮ್...

ರಾ: ಓಹ್! ಸರಿ. ಸರಿ. ನಿಮ್ಮ ಕೈ ಕೊಡಿ

ಸೇ: (ಜೋರಾಗಿ) ಹಾಥ್ಥು? ಕ್ಯೂ?

ರಾ: ಕ್ಯೂ ಎಲ್ಲಿದೆ. ಇರೋದೇ ನೀವೊಬ್ರು... ಕೈ ಕೊಡಿ

ಸೇ: ಅದೇ ಕೇಳ್ತಾರೆ.... ಕೈ ಕೊಡಬೇಕು ಯಾಕೆ? (ಎನ್ನುತ್ತಾ ಕೈ ಹಿಂದಕ್ಕೆ ಎಳೆದುಕೊಳ್ಳುತ್ತಾನೆ)

ರಾ: ಪಾಮಿಸ್ಟಿç ಅಲ್ಲವಾ... ನ್ಯೂಮರಾಲಜೀನಾ.... ಸರಿ. ನಿಮ್ಮ ಡೇಟ್ ಆಫ್ ಬರ್ತ್ ಹೇಳಿ

ಸೇ: (ಜೇಬಿನಿಂದ ಟಿಕೆಟ್ಟೊಂದನ್ನು ತೆಗೆದು) ಬರ್ತ್ ನಂಬರ್ ಎಸ್ 32 ವೇಯ್ಟಿಂಗ್ ಲಿಸ್ಟ್ 6

ರಾ: ಏನಂದ್ರೀ...?

ಸೇ: (ಜೋರಾಗಿ) ಬರ್ತ್ ನಂಬರ್ ಎಸ್ 32, ವೇಯ್ಟಿಂಗ್ ಲಿಸ್ಟ್ 6

ರಾ: ಥೂ ನಿಮ್ಮ! ರೈಲು ರಿಸರ್ವೇಷನ್ ನಂಬರ್ ಅಲ್ಲ, ನಿಮ್ಮ ಬರ್ತ್ ನಂಬರ್

ಸೇ: ಒಹೀಚ್ ಮೇರಾ ನಂಬರು ಜೀ...

ರಾ: ನಮ್ಮನ್ನ ನಂಬರು ಅಂತೀರಾ? ಜ್ಯೋತಿಷ್ಯ ನಂಬಬೇಕು... ಇಲ್ಲವಾದರೆ ಇಲ್ಲಿಗ್ಯಾಕೆ ಬಂದ್ರಿ?

ಸೇ: ಆಪಲ್ ಪಾಡ್ ಮಾರಕ್ಕೆ ಬಂದಿದಾರೆ

ರಾ: ಏನು? ಜೋರಾಗಿ ಹೇಳ್ರೀ...

ಸೇ: (ಜೋರಾಗಿ) ಆಪಲ್ ಪಾಡ್ ಸಾರ್...

ರಾ: ಕನ್ನಡದಲ್ಲಿ ಹೇಳ್ಬರ್ದೇ... ಎರಡು ಡಜನ್ ಕೊಡಿ

ಸೇ: (ಬೆರಗಾಗಿ, ಬೆರಳು ತೋರಿಸುತ್ತಾ) ಎರಡು ಡಜನ್?

ರಾ: ಹೂಂ. ಇರಿ ಬುಟ್ಟಿ ್ತೀನೀ...

ಸೇ: ಬುಟ್ಟಿ? ಇದು ಪಾಡ್ ಸಾಮೀ...

ರಾ: ಅದೇನ್ಹೇಳ್ತೀರೋ ಜೋರಾಗಿ ಹೇಳ್ರೀ

ಸೇ: (ಜೋರಾಗಿ) ಇದು ಪಾಡ್ ಸಾಮೀ...

ರಾ: ಅದೇನೂಂತ ಅರಚ್ತೀರೀ... ನನಗೂ ಇಂಗ್ಲಿಷ್ ಗೊತ್ತು... ಪಾಡ್ ಅಂದ್ರೆ ನನ್ನ ಪಾಡು ಅಂತ. ನಿಮ್ಮ ಪಾಡು ನಿಮಗೆ, ನನ್ನ ಪಾಡು ನನಗೆ. ಈಗ ಎರಡು ಡಜನ್ ಸೇಬು ಕೊಟ್ಟು ಹೋಗಿ, ಹಾಕಿ ಬುಟ್ಟೀಲಿ...

(ಇಸ್ಮೆöÊಲ್ ಗೊಣಗುತ್ತಾ, ಹಣೆ ಚಚ್ಚಿಕೊಂಡುಸುಬೇ ಸುಬೇ ಕಿಸ್ಕಾ ಮುಹ್ ದೇಖಾರೇಎನ್ನುತ್ತಾ ನಿರ್ಗಮನ).

* * *

ಸೂತ್ರಧಾರ: ಶಾಸ್ತಿçಗಳನ್ನು ನೋಡಿದರೆ ಹಾಗೆ. ರಾಯರನ್ನು ನೋಡಿದರೆ ಹೀಗೆ. ಒಂದು ವೇಳೆ, ಬೈ ಛಾನ್ಸ್, ಬೈ ಮಿಸ್ಟೇಕ್ ಅಥವಾ ಬೈ ಪ್ರಾವಿಡೆನ್ಸ್ ಇಬ್ಬರೂ ಮೀಟ್ ಆದರೆ ಏನಾಗಬಹುದು? ನಡೆದದ್ದನ್ನೂ ಊಹಿಸ್ಬೇಕೇ? ರಾಯರು ವೆರಾಂಡಾದಲ್ಲಿ ಕೋಡುಬಳೆ ಕುಟ್ಟಿ ಪುಡಿ ಮಾಡಿಕೊಂಡು ತಿನ್ನುತ್ತಿದ್ದಾಗ ಶಾಸ್ತಿçಗಳು ಬಂದೇಬಿಟ್ಟರು. ನೋಡಿ ಮುಂದೆ ಏನಾಯ್ತೂಂತ.

 

ದೃಶ್ಯ 3

 

ರಾ: (ಕುಳಿತಲ್ಲಿಂದಲೇ ಕೈಬೀಸಿ ಕರೆಯುತ್ತಾ) ಬನ್ನೀ ಶಾಸ್ತಿçಗಳೇ, ಬನ್ನಿ. ಹೇಗಿದ್ದಾರೆ ನಿಮ್ಮ ಮನೆಯ ಜನವೆಲ್ಲ?

ಶಾ: ? ಶ್ವಾನಗಳೆಲ್ಲ ಅಂದ್ರೆ? ಎಲ್ಲೋ ಚೈನ್ ಬಿಚ್ಕೊಂಡು ಹೋಗಿವೆ. ಸುತ್ತಾಡ್ಕೊಂಡು ಬರತ್ವೆ.

ರಾ: ಏನಂದ್ರಿ? ವ್ಯಾನುಗಳಲ್ಲಿ ಹೋಗಿದಾರೆ ಅಂದ್ರೆ? ನಿಮ್ಮಲ್ಲಿ ಇದ್ದಿದ್ದು ಕಾರ್ ಅಲ್ಲವೇ? ಕಾರ್ (ಸ್ಟೀರಿಂಗ್ ವೀಲ್ ಸನ್ನೆ ಮಾಡುವನು)

ಶಾ: ಚಕ್ರವೇ? ಯಾವುದು ಬೇಕು? ಶ್ರೀಚಕ್ರವೋ, ಪದ್ಮಚಕ್ರವೋ, ಧನಚಕ್ರವೋ?

ರಾ: ಶಕ್ರವೇ ಅಂದಿರೇನು? ಪರವಾಯಿಲ್ಲ ಸ್ವಲ್ಪ ಹಾಕಿ. ಮಧುಮೇಹ ಏನಿಲ್ಲ

ಶಾ: (ದನಿಯೇರಿಸಿ) ಏನಂದ್ರಿ? ಇಲ್ಲಿ ಕೊಂಚ ಶಬ್ದ ಜಾಸ್ತಿ... ಒಸಿ ಧ್ವನಿ ಏರಿಸಿದರೆ ವಾಸಿ...

ರಾ: (ದನಿಯೇರಿಸಿ) ಮಧುಮೇಹ ಇಲ್ಲ ಅಂದೆ...

ಶಾ: (ತಲೆಯಾಡಿಸುತ್ತಾ) ಸರಿಯೇ. ವಯಸ್ಸಿನಲ್ಲಿ ವಧುಮೋಹ ಇರೋದು ತಪ್ಪೇ...

ರಾ: ಕಪ್ಪೆ? ಇಲ್ಲಿ ಕಪ್ಪೆಗಳು ಹೆಚ್ಚಾಗಿ ಇವೆಯೇನು? ! ಕಪ್ಪು ಮೀನಿಂಗ್ ಬ್ಲಾö್ಯಕು! ಕಪ್ಪೇ ಅಂದ್ರೆ ನೀವು ನನಗೆ? ಕರಿಬಣ್ಣ ನಾನಿದ್ರೆ ನಿಮಗೇನು ತೊಂದರೆ? ಮನುಷ್ಯ ಕಪ್ಪು ಇರೋದು ತಪ್ಪೆ?

ಶಾ: (ಕಿರಿಕಿರಿಯಿಂದ) ? ಬೆಪ್ಪೆ ಅಂದಿರೆ? ನಾನು ಬೆಪ್ಪೆ? ಮೊದ್ದೇ ನಾನು? ಊರಿಗೆಲ್ಲ ಶಾಸ್ತç ಹೇಳೋ ನಾನು ಮೊದ್ದೆ?

ರಾ: ಬಹಳ ಸದ್ದು... ಸರಿಯಾಗಿ ಕೇಳೋದೇ ಇಲ್ಲ... ನಿದ್ದೆ ಅಂದ್ರೆ ನೀವು? ಮಲಗಿ. ಆಮೇಲೆ ್ತೀನಿ (ಹೊರಹೊರಡುವರು)

ಶಾ: (ಗೊಂದಲಗೊAಡು) ಅಯ್ಯೋ, ಹಾಗೇ ಹೊರಟಿರಲ್ಲ.... ಬನ್ನಿ ಬನ್ನಿ (ಕೈಹಿಡಿದು ನಿಲ್ಲಿಸುವನು)

ರಾ: ನಿಮ್ಮ ಕೈ ಹಿಡಿದಾಕೆ ಇಲ್ಲವೇ ಮನೇಲಿ?

ಶಾ: ಯಾರು?

ರಾ: (ದನಿಯೇರಿಸಿ) ನಿಮ್ಮ ಹೆಂಡತಿ... ಸತಿ...

ಶಾ: ನನ್ನ ಹೆಂಡತಿ ತಿಥೀನೇ? ಯಾಕ್ರಾಯ್ರೇ ಏನೇನೋ ಹೇಳ್ತಿದೀರೀ... (ಕಣ್ಣಲ್ಲಿ ನೀರು ತುಂಬಿಕೊಳ್ಳುವನು)

ರಾ: (ಗೊಂದಲದಿA) ಏನಾಯ್ತು?

ಶಾ: ನನ್ನ ಹೆಂಡತಿ ತಿಥಿ ಅಂದ್ರಲ್ಲಾ ನೀವೂ... (ಹೆಂಡತಿ ಎನ್ನಲು ಮೂಗುಬೊಟ್ಟು, ತಿಥಿ ಎನ್ನಲು ಸತ್ತಿರುವ ಭಂಗಿ ತೋರಿಸುವನು)

ರಾ: ಅಯ್ಯೋ... ತಿಥಿ ಅನ್ನಲಿಲ್ಲ ನಾನು, ಸತಿ ಅಂದೇ... (ಕೈಯಲ್ಲಿ ತಿ ಬರೆದು ತೋರಿಸಿ, ಎಲ್ಲಿ ಎಂಬ ಸನ್ನೆ ಮಾಡುತ್ತಾ) ಸತಿ ಎಲ್ಲಿ ಅಂದೆ... ಕ್ಷಮಿಸಿ... ಸುತ್ತಲೂ ಸದ್ದು ಬಹಳ ನೋಡಿ... ಅಪಾರ್ಥವಾಯಿತು...

ಶಾ: (ದನಿಯೇರಿಸಿ) ಸತಿ ಎಲ್ಲಿ ಅಂದ್ರಾ... ಟಾಯ್ಲೆಟ್ಗೆ ಹೋಗ್ರ್ತೀನೀಂತ ಹೋದಳು. ಸಂಜೆ ್ತಾಳೆ

ರಾ: (ಅಚ್ಚರಿಯಿಂದ, ಜೋರಾಗಿ) ಟಾಯ್ಲೆಟ್ಗೆ ಹೋಗಬೇಕಾದರೆ ಅರ್ಧ ದಿನ ಬೇಕೆ?

ಶಾ: ಛಿ! ನೀವು ತಿಳಿದ ಹಾಗೆ ಅಲ್ಲ ರಾಯರೇ.... ಫಿಲ್ಮ್... ಹಿಂದಿ ಫಿಲ್ಮ್.... (ಆಕ್ಷನ್ ಮೂಲಕ ತೋರಿಸುವನು)

ರಾ: ಓಹ್! ತಿಳಿಯಿತು. ಇಲ್ಲ ಫಿಲ್ಮ್ಗೆ ಹೋಗಿ ಬಹಳ ದಿನ ಆಯ್ತು. ನಿಮ್ಮ ಆರೋಗ್ಯ ಹೇಗಿದೆ?

ಶಾ: ಅಯೋಗ್ಯನೆ? ಯಾರು?

ರಾ: (ದನಿಯೇರಿಸಿ) ಆರೋಗ್ಯ... ಹೆಲ್ತ್...

ಶಾ: ವೆಲ್ತೇ? (ಸಂಶಯದಿA) ರಾಯರೇ... ನೀವು ಲೋಕಾಯುಕ್ತ, ಎಸಿಬಿ, ಸಿಸಿಬಿ, ಯಾವುದಾದರೂ ಡಿಪಾರ್ಟ್ ಮೆಂಟಲ್ ಜನ ಅಲ್ಲ ತಾನೆ?

ರಾ: ಮೆಂಟಲ್ಲೂ... ನನ್ನನ್ನ ನೋಡಿದರೆ ನಿಮಗೆ ಮೆಂಟಲ್ಲೂ ಅನ್ನಿಸ್ತೇ? ನಿಮ್ಮ ಮನೆಗೆ ಬಂದವರಿಗೆ ಇದೇನೇನ್ರೀ ನೀವು ತೋರಿಸೋ (ದನಿಯೇರಿಸಿ) ಹಾಸ್ಪಿಟಾಲಿಟಿ...?

ಶಾ: ಹಾಸ್ಪಿಟಲ್ನಿಂದ ಬಂದಿರೇ... ಪಾಪ! ನೋಡಿದಾಗಲೇ ಅಂದ್ಕೊAಡೆ... ಬಹಳ (ದನಿಯೇರಿಸಿ) ಬಡವಾಗಿದೀರೀ..

ರಾ: (ಸ್ವಗತ) ಬಡವ? ನಾನು ಬಡವನ ತರಹ ಇದೀನಾ? ಅಥವಾ... ಭಡವ ಅಂತ ಬೈದ್ನೋ ಶಾಸ್ತಿç....? (ಪ್ರಕಾಶ) ನಾನು ಬಡವನೆ? ನನ್ನ ಮಗ ಮೊನ್ನೆ (ದನಿಯೇರಿಸಿ) ಮರ್ಸಿಡಿಸ್ ಬೆಂಜ್ ತೊಗೊಂಡ ತಿಳೀತೇ?

ಶಾ: ಬೆಂಚೇ.... ಬುದ್ಧಿ ಇಲ್ಲ ಅವನಿಗೆ... ಈಗಿನ ಕಾಲಕ್ಕೆ ಸ್ಪೇಸ್ ಆಕ್ಯುಪೈ ಮಾಡೋ ಬೆಂಚಿಗಿA ಫೋಲ್ಡಿಂಗ್ ಚೇರ್ ವಾಸಿ ರಾಯರೇ...

ರಾ: ಏನಂದ್ರಿ....? ಕೋಲ್ಡ್ ಡ್ರಿಂಕ್ಸ್ ಕೊಡ್ತೀನಿ ಅಂದ್ರೆ? ಬೇಡ. ಶೀತ ಆಗತ್ತೆ (ಎಂದು ಅಡ್ಡಡ್ಡ ಕೈಯಾಡಿಸುವನು)

ಶಾ: (ಸ್ವಗತ) ಬೇಡವಾದರೆ ಬಿಡಿ. ಪ್ಯಾಸೇಜ್ ತರಹದ ಹಾಲಲ್ಲಿ ಬೆಂಚು ಹಾಕ್ಕೊಳ್ಳೋ ಹುಚ್ಚು ಈವಯ್ಯನಿಗೆ. (ಪ್ರಕಾಶ) ಬೆಂಚೇ ಬೇಕು ಅಂದ್ರೆ ನಾನೇನ್ಮಾಡಕ್ಕಾಗತ್ತೆ... ಇರಲಿ... ಏನು ಸಂದರ್ಭ ಬಂದದ್ದೂAತೀನೀ...

ರಾ: ಒಂದು ಶುಭ ಸಂದರ್ಭ ತಿಳಿಸೋಣ ಅಂತ ನಿಮ್ಮ ಹತ್ರ ಬಂದೆ

ಶಾ: ? ಏನಂದ್ರಿ?

ರಾ: ಸಂದರ್ಭ ಅಂದೆ... ಶುಭ ಸಂದರ್ಭ

ಶಾ: ತಿಳೀತು ತಿಳೀತು... ಶವ ಸಂದರ್ಭ.... ಸರಿ ಸರಿ ಸಂತೋಷ...

ರಾ: ಹಾ! ಶುಭ ಸಂದರ್ಭವೇ... ನಮ್ಮ ಮನೆಯಲ್ಲಿ ದೇವರ ಸಮಾರಾಧನೆ ಇಟ್ಕೊಂಡಿದೀವಿ

ಶಾ: ? ಏನಂದ್ರಿ?

ರಾ: ದೇವರ ಸಮಾರಾಧನೆ ಅಂದೆ... (ದನಿಯೇರಿಸಿ) ಶ್ರೀಕಂಠನ ಮದುವೇದು...

ಶಾ: ತಿಳೀತು ತಿಳೀತು... (ಗಟ್ಟಿಯಾಗಿ) ವೈಕುಂಠ ...

ರಾ: ಶ್ರೀಕಂಠಾ... ಶ್ರೀಕಂಠನ ಮದುವೇದು

ಶಾ: ತಿಳೀತೂ ವೈಕುಂಠಾ ವೈಕುಂಠ ಸಮಾರಾಧನೇದು.... (ಜೋರಾಗಿ) ಸಮಾರಾಧನೆ

ರಾ: ಕರೆಕ್ಟ್... ಸಮಾರಾಧನೆ...

ಶಾ: ಯಾವತ್ತು?

ರಾ: (ಎರಡೂ ಕೈಬೆರಳುಗಳನ್ನು ತೋರಿಸುತ್ತಾ) ಇಂದಿನಿA ಒಂಬತ್ತು ದಿನಕ್ಕೆ....

ಶಾ: ಸರಿ ಸರಿ. ಇಂದಿನಿA ಒಂಬತ್ತು ದಿನಕ್ಕೆ.... ಅಂದರೆ ನಾಲ್ಕು ದಿನ ಹಿಂದೆ ತೀರಿಕೊಂಡಿದ್ದು ಅನ್ನಿ.... (ನಾಲ್ಕು ಅನ್ನುವುದನ್ನು ಬೆರಳುಗಳಲ್ಲಿ ತೋರಿಸುವನು)

ರಾ: ನಿಜ. (ಕಣ್ಣಲ್ಲಿ ನೀರು ತಂದುಕೊAಡು) ನಾಲ್ಕು ವರ್ಷದಿಂದ ಲವ್ ಮಾಡ್ತಿದ್ರಂತೆ... ನಮ್ಮ ಗ್ರಹಚಾರ...

ಶಾ: ಅಳಬೇಡಿ... ಎಲ್ಲಾ ಜಗನ್ನಿಯಾಮಕನ ಆಟ.

ರಾ: ?

ಶಾ: ಎಲ್ಲ ಅವನ ಆಟ ಅಂದೆ... (ಜೋರಾಗಿ) ಆಟಾ...

ರಾ: ಹೂ. ಬಹಳ ಆಟ ಆಡ್ಬಿಟ್ಟ.... ಮಳ್ಳ, ಮಳ್ಳ ಇದ್ದಹಾಗಿದ್ದ... ಗೊತ್ತೇ ಆಗಲಿಲ್ಲ (ಮತ್ತೆ ಅಳುವನು)

ಶಾ: ಅಳಬೇಡಿ ರಾಯರೇ,

ರಾ: ?

ಶಾ: ಅವನು ಕರೆದಾಗ ನಾವು ಹೋಗಲೇಬೇಕು.... (ಹೋಗಲೇಬೇಕು ಅನ್ನುವುದನ್ನು ಸೂಚಿಸುವನು)

ರಾ: ನಿಜ. ಹೋಗಲೇಬೇಕು. ಒಬ್ಬನೇ ಮಗ. ಕುಲಪುತ್ರ. ಆದ್ರೂ... ಕುಲಪಾತಕಿ ಕುಲಪಾತಕಿ

ಶಾ: ಕೊಲೆಪಾತಕಿ? ಕೊಲೆ ಆದನೇನು? ಯಾರು?

ರಾ: ?

ಶಾ: ಯಾರು? ಯಾರೂಂದೆ (ಕೈಸನ್ನೆಯಲ್ಲಿ ಯಾರು ಎಂದು ತೋರಿಸುತ್ತಾ ದನಿಯೇರಿಸುವರು)

ರಾ: ಯಾರೂಂದ್ರೇ.... ನನ್ನ ಮಗ....

ಶಾ: ? ಮಗನೇ? ಕೊಲೆ ಆದನೆ?

ರಾ: ?

ಶಾ: ಕೊಲೆ.... ಕೊಲೆ...

ರಾ: (ತಲೆಯಾಡಿಸುತ್ತಾ, ಸ್ವಗತಏನೋ ಲೆಲೆ ಅಂತಿದಾನೆ, ಬಲೆನೆ ಇರಬೇಕು) ನಿಜ. ಬಲೆ... ಬಲೇನೇ... ಅವಳ ಬಲೇಲಿ ಇವನು ಸಿಕ್ಕಿ ನಮಗೆ (ನಟನೆಯಲ್ಲಿ ತೋರಿಸುತ್ತಾ) ಬೆನ್ನಿಗೆ ಚೂರಿ ಹಾಕ್ಬಿಟ್ಟ

ಶಾ: ತ್ಸುತ್ಸುತ್ಸು.... ಚೂರಿಯಿಂದ ಕೊಲೆ ಆಯ್ತೂನ್ನಿ.... (ಜೋರಾಗಿ) ಪಾಪ ಪಾಪ!

ರಾ: ಪಾಪವೇ ಅಲ್ಲವೇ ಮತ್ತೆ! ಕರುಳು, ಕರುಳು (ಹೊಟ್ಟೆಯನ್ನು ತೋರಿಸುತ್ತಾ) ಕರುಳು ಚುರ್ ಅನ್ನತ್ತೆ ಸ್ವಾಮೀ...

ಶಾ: (ಹೊಟ್ಟೆಯನ್ನೇ ನೋಡುತ್ತಾ) ಛೆಛೆ! ಹೊಟ್ಟೆಗೂ ಚೂರಿ ಹಾಕಿದರೇನು? ಛೆ! ಅನ್ಯಾಯ. ಅದರ್ಲಿ... ಅಸ್ಥಿ ಸಂಚಯನ ಎಲ್ಲಿ ಮಾಡಿದಿರಿ?

ರಾ: ?

ಶಾ: ಅಸ್ಥಿ... ಅಸ್ಥಿ...

ರಾ: ಹೂ... ಅದರಲ್ಲೇನು ತೊಂದರೆ ಇಲ್ಲ ಅನ್ನಿ.... ಆಸ್ತಿ ಚೆನ್ನಾಗೇ ಇದೆ. ಬೆಂಗಳೂರಲ್ಲಿ ಫರ್ಟಿ ಸಿಕ್ಸ್ಟಿ ಸೈಟು... ಚನ್ನರಾಯಪಟ್ಟಣದಲ್ಲಿ ಜಮೀನು...

ಶಾ: ಎಲ್ಲಿ?

ರಾ: ಚನ್ನರಾಯಪಟ್ಟಣ....

ಶಾ: ತಿಳೀತು ತಿಳೀತು... ಪಟ್ಟಣ... ಶ್ರೀರಂಗಪಟ್ಟಣ... ಅಸ್ಥಿ ಸಂಚಯನ ಅಲ್ಲಾಯಿತೂನ್ನಿ... ಲೋಕಪಾವನಿ ನದಿ

ರಾ: ? ಗೋಧೀನೇ? ಚನ್ನರಾಯಪಟ್ಟಣದಲ್ಲಿ ಗೋಧಿ ಎಲ್ಬಂತು... ಚನ್ನರಾಯಪಟ್ಟಣ... ತೆಂಗಿನಕಾಯಿ (ತೆಂಗಿನಕಾಯಿ ಆಕಾರವನ್ನು ತೋರಿಸುವನು. ಶಾಸ್ತಿçಗಳಿಗೆ ತಿಳಿಯದೆ ಇರಲು ಬೊಗಸೆ ಹಿಡಿದು ಕೊಬ್ಬರಿ ಗಿಟುಕಿನ ಸನ್ನೆ ಮಾಡುವರು)

ಶಾ: ! ನಿಮ್ಮ ಕೈಗೆ ಚಿಪ್ಪೇ ಗಟ್ಟಿ ಅಂದ್ರೇ? ಮಗ ಹೋದ್ಮೇಲೆ ಹಾಗನ್ಸೋದು ಸಹಜ.... ಇರಲಿ. ಮಗ ಹೋಗಿದ್ದು ಯಾವ ನಕ್ಷತ್ರದಲ್ಲೋ

ರಾ: ಏನಂದ್ರೀ? ಕೊಂಚ ಗಟ್ಟಿಯಾಗಿ ಹೇಳ್ರೀ...

ಶಾ: (ಜೋರಾಗಿ) ನಕ್ಷತ್ರ... ನಕ್ಷತ್ರ.... (ಆಕಾಶ, ನಕ್ಷತ್ರಗಳನ್ನು ಸನ್ನೆಯಿಂದ ತೋರಿಸುವರು)

ರಾ: ಅಯ್ಯೋ ಅದೆಲ್ಲಾ ಆಮೇಲಿನದಪ್ಪಾ.... ಮದುವೆ ನಂತರದ್ದಕ್ಕೆಲ್ಲ ಐದು ನಕ್ಷತ್ರದ್ದೇ, ಫೈವ್ ಸ್ಟಾರೇ ಬುಕ್ ಮಾಡಿದಾನೆ. ಫೈವ್ ಸ್ಟಾರೂ... (ಐದು ಮತ್ತು ನಕ್ಷತ್ರ ಎರಡನ್ನೂ ಕೈಯಲ್ಲಿ ತೋರಿಸುವರು)

ಶಾ: ತಿಳೀತು... (ಲೆಕ್ಕ ಹಾಕುತ್ತಾ) ಐದನೇ ನಕ್ಷತ್ರ... ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶೀರ್ಷಾ.... (ದನಿಯೇರಿಸಿ) ಓಹೋ... ಮಾರ್ಗಶಿರಾ (ಮತ್ತೂ ಏರಿಸಿ) ಮಾರ್ಗಶಿರದಲ್ಲೇನು ಮಗ ಹೋಗಿದ್ದೂ...?

ರಾ: ಹೌದ್ಹೌದು... ಶಿರಾ ಮಾರ್ಗದ ಹೋಟೆಲಲ್ಲೇ ಇವರ ಪ್ರೇಮ ಶುರು ಆಗಿದ್ದಂತೆ...

ಶಾ: ಪಾಪ ಪಾಪ! (ಹೆಂಡತಿಯನ್ನು ತೋರಿಸುವ ಸನ್ನೆ ಮಾಡುತ್ತಾ) ನಿಮ್ಮ ಹೆಂಡತಿ ಇದನ್ನ ಹೇಗೆ ತೆಗೆದುಕೊಂಡರು?

ರಾ: (ಸನ್ನೆಯಲ್ಲೇ) ಏನನ್ನ?

ಶಾ: ನಿಮ್ಮ ಮಗ (ಜೋರಾಗಿ) ತೀರಿಕೊಂಡದ್ದನ್ನ...

ರಾ: ಮಗ ಟಿ ವಿ ಕೊಂಡದ್ದನ್ನೇ? (ರಿಮೋಟ್ ಗುಂಡಿ ಒತ್ತುವ ಆಕ್ಷನ್ ಮಾಡುತ್ತಾ) ಈಗ ರಿಮೋಟ್ ಕಂಟ್ರೋಲ್ ಅವಳ ಕೈಯಲ್ಲೇ... ಬಹಳ ಸೀರಿಯಲ್ ನೋಡ್ತಾಳೆ...

ಶಾ: ? ಏನಂದ್ರಿ?

ರಾ: (ಜೋರಾಗಿ) ತುಂಬಾ ಸೀರಿಯಲ್ಸು....

ಶಾ: ತುಂಬಾ ಸೀರಿಯಸ್ಸೇ...? ನಿಜಕ್ಕೂ? (ಸ್ವಗತ) ಅಚ್ಚೇ ದಿನ್ ಅಂದ್ರೆ ಇದೇನೇನೋ... ಒಂದೆ ತಿಂಗಳಲ್ಲಿ ಎರಡು ವೈಕುಂಠದ ಊಟ ಸಿಗೋ ಯೋಗ ಇದ್ಹಾಗಿದೆ... (ಪ್ರಕಾಶ) ಯಾವ ನರ್ಸಿಂಗ್ ಹೋಮು?

ರಾ: ಹೋಮವೇ? ಮಾಡಿಸಬೇಕು ಶಾಸ್ತಿçಗಳೆ. ಗಣಹೋಮ, ಆಯುಷ್ಯ ಹೋಮ...

ಶಾ: ಯಾವುದು ಅಂದ್ರಿ?

ರಾ: (ಜೋರಾಗಿ) ಆಯುಷ್ಯ ಹೋಮಾಂದೆ...

ಶಾ: (ತಲೆಯಾಡಿಸುತ್ತಾ) ನಿಜ. ನರ್ಸಿಂಗ್ ಹೋಂಗೆÀ ಸೇರಿದರೆ ಇರೋ ಆಯುಷ್ಯಾನೂ ಹೋಮ ಮಾಡೋದೇ... ಛೆ! ಅಂದ್ಹಾಗೇ ರಾಯರೇ, ಮಗ ಹೋದ್ಮೇಲೆ ಏನೂ ತೊಂದರೆ ಆಗಲಿಲ್ವಾ? ಬೊಂಬು, ಗಳ, ತೆಂಗಿನಗರಿ ಎಲ್ಲವೂ ಚಟ್ಟಕ್ಕೆ ಸುಲಭವಾಗಿ ಸಿಗ್ತಾ?

ರಾ: (ಸನ್ನೆಯಿಂದ) ಏನು ಸಿಗ್ತಾ ಅಂದ್ರಿ?

ಶಾ: (ಜೋರಾಗಿ, ಸನ್ನೆಯ ಮೂಲಕ ಎಲ್ಲವನ್ನೂ ತೋರಿಸುತ್ತಾ) ಬೊಂಬು, ಗಳ, ತೆಂಗಿನಗರಿ...

ರಾ: ಹೂಂ. ಅವೆಲ್ಲ ವ್ಯವಸ್ಥೆ ಆಗಿದೆ. ಮುನಿಯಪ್ಪನೇ ಬಂದು ಚಪ್ಪರ ಹಾಕ್ತೀನಿ ಸಮಾರಾಧನೆಗೆ ಹಿಂದಿನ ದಿನ ಅಂದಿದಾನೆ. (ಎಲ್ಲವನ್ನೂ ಆಕ್ಷನ್ ಮೂಲಕ ಹೇಳುತ್ತಾನೆ)

ಶಾ: (ಜೋರಾಗಿ) ಸೌದೇನೋ, ಎಲೆಕ್ಟಿçಕ್ಕೋ?

ರಾ: (ಅಷ್ಟೇ ಜೋರಾಗಿ) ಗ್ಯಾಸ್!

ಶಾ: ಕ್ಯಾಷ್? ! ಸ್ಮಶಾನದಲ್ಲಿ ಇನ್ನೂ ಆನ್ಲೈನ್ ಟ್ರಾನ್ಸ್ಫರ್, ಆಧಾರ್ ಲಿಂಕ್ ಎಲ್ಲ ಬಂದಿಲ್ಲ ಅನ್ಸತ್ತೆ...! ಸರಿ. ಸಮಾರಾಧನೆಗೆ ಎಷ್ಟು ಹೊತ್ತಿಗೆ ಬರಬೇಕು?

ರಾ: (ಜೇಬಿನಿಂದ ಚೀಟಿ ತೆಗೆದು) ಇದೋ... ಚಪ್ಪರದ ಪೂಜೆಯ ಮುಹೂರ್ತ, ಹೂವೀಳ್ಯದ ಟೈಮು, ಇನ್ವಿಟೇಷನ್ ಕಾರ್ಡು ಇಷ್ಟೂ ತೊಗೊಳಿ...

ಶಾ: (ಕಾರ್ಡನ್ನು ನೋಡಿ, ಗೊಂದಲದಿA) ಇಷ್ಟೆಲ್ಲ ಹತ್ತಿರದಲ್ಲಿ ಮದುವೆ ಇದ್ದಾಗ ಹೋಗಿಬಿಟ್ಟನೇ ಮಗ...? ಅಯ್ಯೋ ಪಾಪ! (ಎಂದು ಬಿಕ್ಕಿ ಅಳುವನು)

ರಾ: (ಏನೋ ಹೊಳೆದು, ಜೇಬಿಗೆ ಕೈಹಾಕಿ, ಇಯರ್ ಫೋನ್ ತೆಗೆದು ಹಾಕಿಕೊಂಡು) ಯಾಕಳ್ತಿದೀರಿ ಶಾಸ್ತಿçಗಳೆ? ಏನಾಯ್ತು? ಯಾರೋ ಹೋಗ್ಬಿಟ್ಟ ಹಾಗೆ ಅಳ್ತಿದೀರಲ್ಲಾ, ಯಾಕೆ?

ಶಾ: (ತಬ್ಬಿಕೊಂಡು) ಇಷ್ಟೆಲ್ಲಾ ಪ್ಲಾö್ಯನ್ ಮಾಡಿರುವಾಗ ನಿಮ್ಮ ಮಗನ ಕೊಲೆ ಆಗಬಾರದಿತ್ತು.....

ರಾ: (ಶಾಸ್ತಿçಗಳ ಕಿವಿಯಿಂದ ಹೊರಕ್ಕೆ ನೇತಾಡುತ್ತಿದ್ದ ಇಯರ್ ಫೋನನ್ನು ಸರಿಯಾಗಿ ಕಿವಿಗೆ ಸಿಕ್ಕಿಸಿ) ಈಗ ಹೇಳಿ.... ಯಾರ ಕೊಲೆ ಆಯಿತು?

ಶಾ: ನಿಮ್ಮ ಮಗನದು....

ರಾ: ಹುಚ್ಚಪ್ಪ... ಕೊಲೆ ಅಲ್ಲ.... ಬಲೆ... ಪ್ರೀತಿಯ ಬಲೆ...

ಶಾ: ಮತ್ತೇ..... ವೈಕುಂಠ ಸಮಾರಾಧನೆ....

ರಾ: ಅಲ್ಲ... ದೇವರ ಸಮಾರಾಧನೆ....

(ಒಂದು ಕ್ಷಣ ಇಬ್ಬರೂ ಗೊಂದಲದಿA ಹೊರಬಂದು ಸಂತಸದಿA ನಗುವರು. ಮರುಕ್ಷಣವೇ ಇಬ್ಬರೂ ಗೊಳೋ ಎಂದು ಅಳುತ್ತಾ.... ತಮ್ಮ ಕಿವಿಗಳಿಂದ ನೇತಾಡುತ್ತಿದ್ದ ಇಯರ್ ಫೋನ್ಗಳನ್ನು ನೋಡುತ್ತಾ.... ‘ನಮ್ನಮ್ಮ ಐಬುಗಳನ್ನ ಒಪ್ಕೋಬೇಕು ರಾಯ್ರೇಎಂದು ಶಾಸ್ತಿçಗಳೂ, ‘ವಯಸ್ಸಾದವರು ವಯಸ್ನರ್ಹಾಗೆ ಆಡಿದರೆ ಅಪದ್ಧವೇ ಶಾಸ್ತಿçಗಳೇಎಂದು ರಾಯರೂ ಪೇಚಾಡುತ್ತಿರುವಾಗ)

ತೆರೆ

Comments

  1. ಬ್ರಹ್ಮಕಿವುಡು ಅಬ್ಬಬ್ಬಬ್ಬ ದೃಶ್ಯ ೧ ೨ ಸಾಕು ಸಾಕಾಯ್ತು ನಕ್ಕು ನಕ್ಕು. ನಿಮಗೆ ಬರೆಯುವಾಗ ನಗು ಬರತ್ತಾ? ಇದು ನನ್ನಪ್ರಶ್ನೆ. ರಾಮ್ ಸಾರ್ ಅದೆಷ್ಟು ಸಬ್ಜೆಕ್ಟ್ ಟಚ್ ಮಾಡಿದಿರಾ ಸ್ಲೀಮ್ಮ್ - ಸಲೀಮ್ ಮಧುಮೇಹ, ಐಪ್ಯಾಡ್, ಇನ್ನು ದೃಶ್ಯ ೩ ಅಲ್ಟಿಮೇಟ್

    ReplyDelete
  2. Could not stop laughing scene 1,2 & 3 felt like watching a comedy drama on stage. thanks to the writer and the publishers too

    ReplyDelete
  3. I can say too much humor on this article ha ha ha ha ha

    ReplyDelete

Post a Comment