ಲಕ್ಷ್ಮೀ ನರಸಿಂಹ ದೇವಾಲಯ , ಜಾವಗಲ್ -2

 

ಲಕ್ಷ್ಮೀ ನರಸಿಂಹ ದೇವಾಲಯ , ಜಾವಗಲ್ - 2



ಲಕ್ಷ್ಮೀ ನರಸಿಂಹ ದೇವಾಲಯ , ಜಾವಗಲ್ 

ಲೇಖಕರು: ಮೈಸೂರು ಶ್ರೀನಿವಾಸ ಪುಟ್ಟಿ 


ಹಿಂದಿನ ಲೇಖನದಲ್ಲಿ ...........

ಹಾಸನ ಜಿಲ್ಲೆಯಲ್ಲಿರುವ ಜಾವಗಲ್, ಜಿಲ್ಲಾ ಕೇಂದ್ರ (ಹಾಸನ)ದಿಂದ ಬಾಣಾವರದ ಮಾರ್ಗದಲ್ಲಿ, ಸುಮಾರು 48 ಕಿ.ಮೀ. ದೂರದಲ್ಲಿದೆ. ಇಲ್ಲಿನ  ಹೊಯ್ಸಳ ತ್ರಿಕೂಟಾಚಲ ಅತ್ಯಂತ ಸುಂದರ ಶಿಲ್ಪಗಳನ್ನು ಹೊಂದಿದೆ. ಈ ತ್ರಿಕೂಟದ ದಕ್ಷಿಣ ಗರ್ಭಗುಡಿಯಲ್ಲಿ ವೇಣುಗೋಪಾಲ ನ ವಿಗ್ರಹವನ್ನೂ, ಪಶ್ಚಿಮದ ಗರ್ಭಗುಡಿಯಲ್ಲಿ ಅತ್ಯಂತ ಅಪರೂಪದ ಶ್ರೀಧರನ ವಿಗ್ರಹವನ್ನೂ,  ಮತ್ತು ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹನ ವಿಗ್ರಹವನ್ನೂ ಕಾಣಬಹುದು.

ಈ ದೇವಾಲಯದಲ್ಲಿ ಮೂರು ಅರ್ಚಾ ಮೂರ್ತಿಗಳಿದ್ದರೂ, ವಾಡಿಕೆಯಲ್ಲಿ ಲಕ್ಷ್ಮೀನರಸಿಂಹ ದೇವಾಲಯವೆಂದೇ  ಪ್ರಸಿದ್ಧವಾಗಿದೆ. ನಕ್ಷತ್ರಾಕಾರದ ಜಗತಿಯ ಮೇಲಿರುವ ಈ ತ್ರಿಕೂಟವು ಸರ್ವಾಲಂಕೃತವಾಗಿದ್ದು ಹೊಯ್ಸಳ ದೇವಾಲಯಗಳ ಎಲ್ಲ ವಿಭಾಗಗಳನ್ನೂ ಹೊಂದಿದೆ. 750 ವರ್ಷಗಳಿಗೂ ಹಿಂದೆ ನಿರ್ಮಾಣವಾದ ಈ ಸುಂದರವಾದ ದೇವಾಲಯವನ್ನು ಕೆಳಗೆ ತಿಳಿಸಿರುವಂತೆ ಏಳು ಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು  ಸೂಕ್ತ. 

ಭಾಗ - 2  ಮುಂದುವರೆದುದು... 

ದಕ್ಷಿಣ ಗರ್ಭಗುಡಿಯ ದಕ್ಷಿಣ ಭಾಗ

೨೦. ಕಾಲನ್ನು ಎತ್ತಿರುವ ತ್ರಿ ವಿಕ್ರಮ, ೨೧. ಹೂ ಗೊಂಚಲನ್ನು ಹಿಡಿದಿರುವ ಸ್ತ್ರೀ,  ೨೨. ಗೋವರ್ಧನಧಾರಿ,  ೨೩. ಪದ್ಮ ಮತ್ತು ಫಲಗಳನ್ನು ಹಿಡಿದಿರುವ ಸ್ತ್ರೀ,  ೨೪,೨೫,೨೬ . ಇಬ್ಬರು ದೇವಿಯರ ನಡುವೆ  ಲಕ್ಷ್ಮೀನಾರಾಯಣ,  ೨೭. ಗೋವಿಂದ (ಗ-ಪ-ಶಂ-ಚ)  ೨೮. ವಿಷ್ಣು (ಪ-ಶಂ-ಚ-ಗ)(ಶಿಲ್ಪಿ ಪಮಾಯನ),  ೨೯. ಮೋಹಿನಿ,  ೩೦. ತಾಂಡವ ಸರಸ್ವತೀ 

ದಕ್ಷಿಣ ಗರ್ಭಗುಡಿಯ ಪಶ್ಚಿಮ ಭಾಗ

೩೧. ಗಡ್ಡಧಾರಿ ಬ್ರಹ್ಮ , ೩೨,೩೩,೩೪. ಇಬ್ಬರು ದೇವಿಯರ ನಡುವೆ ಮಧುಸೂದನ (ಶಂ-ಪ-ಗ-ಚ) (ಶಿಲ್ಪಿ: ಮಲಿತಂಮ),  ೩೫,೩೬,೩೭. ಇಬ್ಬರು ಚಾಮರಧಾರಿಣಿಯರ ನಡುವೆ ಲಕ್ಷ್ಮೀ ನಾರಾಯಣ,  ೩೮. ಪದ್ಮ ಮತ್ತು ಫಲಗಳನ್ನು ಹಿಡಿದಿರುವ ಸ್ತ್ರೀ,  ೩೯. ಹಣ್ಣನ್ನು ಕುಕ್ಕುತ್ತಿರುವ ಗಿಣಿಯನ್ನು ಹಿಡಿದಿರುವ ಸ್ತ್ರೀ 


ನವರಂಗದ ನ್ಯೆರುತ್ಯ (South-west of Navaranga)



೪೦. ಮೋಹಿನಿ- ಕಪಿ, ೪೧,೪೨,೪೩. ಇಬ್ಬರು ದೇವಿಯರ ನಡುವೆ ವಾಮನ (ಚ-ಗ-ಪ-ಶಂ),  ೪೪,೪೫. ಐರಾವತದ ಮೇಲಿನ ಇಂದ್ರ ಮತ್ತು ಶಚಿ ಹಾಗೂ ಕೃಷ್ಣ-ಸತ್ಯ ಭಾಮೆಯರೊಡನೆ ಯುದ್ಧ 


೪೬,೪೭‌. ವಾಮನ (ಚ-ಗ-ಪ-ಶಂ) ಎಡದಲ್ಲಿ ದೇವಿ ( ಶಿಲ್ಪಿ ಮಲಿತಂಮ), ೪೮,೪೯,೫೦. ಶ್ರೀಧರ (ಚ-ಗ-ಶಂ-ಪ) ಇಕ್ಕೆಲಗಳಲ್ಲಿ ಪರಿಚಾರಕರು. (ಕೆಳಗಡೆ ಶ್ರೀಧರ ದೇವರು ಎಂದು ಬರೆಯಲಾಗಿದೆ. ಶಿಲ್ಪಿ ಮಲಿತಂಮ), ೫೧ ಗರುಡ 


ಮುಖ್ಯ ಗರ್ಭಗುಡಿಯ ದಕ್ಷಿಣಭಾಗ


೫೨,೫೩. ಉಗ್ರನರಸಿಂಹ ; ಎಡದಲ್ಲಿ ಪ್ರಹ್ಲಾದ, ೫೪,೫೫. ವೇಣುಗೋಪಾಲ; ಎಡದಲ್ಲಿ ಚಾಮರಧಾರಿಣಿ,   ೫೬. ಹಲಾಯುಧ,    ೫೭. ಹೃಷೀಕೇಶ (ಚ-ಪ-ಶಂ-ಗ),   ೫೮. ಬಲದಲ್ಲಿ ಲಕ್ಷ್ಮೀ  ೫೯,೬೦,೬೧. ಇಕ್ಕೆಲಗಳಲ್ಲಿ ಚಾಮರಧಾರಿಣಿಯರ ನಡುವೆ ವ್ಯೆಕುಂಠ ನಾರಾಯಣ ( ಕೆಳಗೆ ಸುಮಾರು ಹದಿನಾರನೆಯ ಶತಮಾನದ ಬರವಣಿಗೆ: ಸನಮಾದ (ಸಣ್ಣಮಾದ) ಬಡಗಿ ಮಲೈಯೆನ   ಮಗ ಕೈಯಮಾಡಿದ (ಬಹುಶಃ ಮುರಿದಿದ್ದ ಕೈ ಒಂದನ್ನು ಸಣ್ಣಮಾದ ಸರಿಪಡಿಸಿದನೆಂದು ತೋರುತ್ತದೆ)  ೬೨,೬೩,೬೪. ಇಬ್ಬರು ದೇವಿಯರ ನಡುವೆ ಪದ್ಮನಾಭ ( ಪ-ಚ-ಗ-ಶಂ)   ೬೫. ಅಷ್ಟಭುಜ ನೃತ್ಯಲಕ್ಷ್ಮೀ (ಪಾಶ ಲಂಬ ಹಸ್ತ,ಪದ್ಮ,ಅಂಕುಶ ಸ್ವರ್ಗಹಸ್ತ, ಪಾಶ, ಫಲ ಮತ್ತು ಕಳಶ) ಕೆಳಗೆ ಮೃದಂಗವಾದಕರು ಕೆಳಗೆ ಲಕ್ಷುಮಿದೇವಿ ಎಂದು ಬರೆಯಲಾಗಿದೆ. ಶಿಲ್ಪಿ ಮಲಿತಂಮ.  

ಮುಖ್ಯ ಗರ್ಭಗುಡಿಯ ಪಶ್ಚಿಮ ಭಾಗ

೬೬. ಯೋಗನಾರಾಯಣ, ೬೭,೬೮,೬೯. ಇಬ್ಬರು ದೇವಿಯರ ನಡುವೆ ದಾಮೋದರ (ಶಂ-ಗ-ಚ-ಪ) ಕೆಳಗೆ ಕನ್ನಡದಲ್ಲಿ ದಾಮೋದರ ದೇವರು ಎಂದು ಬರೆಯಲಾಗಿದೆ. (ಶಿಲ್ಪಿ ಮಲಿತಂಮ),  ೭೦,೭೧,೭೨. ಇಬ್ಬರು ದೇವಿಯರ ನಡುವೆ ಲಕ್ಷ್ಮೀನಾರಾಯಣ.ಲಕ್ಷ್ಮಿಯ ಕೆಳಗೆ ಗಜ.,  ೭೩,೭೪,೭೫. ಸಂಕರ್ಷಣ (ಶಂ-ಪ-ಚ-ಗ). ಇಕ್ಕೆಲಗಳಲ್ಲಿ ದೇವಿಯರು.,  ೭೬. ಆಸೀನ ಲಕ್ಷ್ಮೀ (ಶಂ-ಚ-ಕಳಶ-ಅಭಯ)  

ಗರ್ಭಗುಡಿ ಮತ್ತು ಶುಕನಾಸಿಯ ಉತ್ತರ ಭಾಗ


೭೭. ದಶಭುಜ ನೃತ್ಯ ಸರಸ್ವತಿ (ಬಲಭಾಗದ ಕೆಳಗೈನಿಂದ  ಪ್ರದಕ್ಷಿಣಾಕಾರವಾಗಿ : (ಲಂಬಹಸ್ತ, ಪದ್ಮ, ಭಗ್ನ, ಅಂಕುಶ, ಚಿನ್ಮುದ್ರಾ, ಪಾಶ,ಭಗ್ನ, ರತ್ನ i e, jewel ಪುಸ್ತಕ ಮತ್ತು ಫಲ ) (ಭಗ್ನ -Broken ), ೭೮,೭೯. ವಾಸುದೇವ (ಶಂ-ಚ-ಪ-ಗ), ಎಡದಲ್ಲಿ ಲಕ್ಷ್ಮೀ (ವಾಸುದೇವ ಎಂದು ಕನ್ನಡದಲ್ಲಿ ನಮೂದಿಸಲಾಗಿದೆ),  ೮೦. ಗಿಣಿ ಮತ್ತು ಹಣ್ಣುಗಳನ್ನು ಹಿಡಿದಿರುವ ಸ್ತ್ರೀ,  ೮೧,೮೨,೮೩,೮೪. ಕೋದಂಡರಾಮ, ಲಕ್ಷ್ಮಣ,ಸೀತಾ,ಹನುಮಂತ,  ೮೫,೮೬,೮೭. ಪ್ರದ್ಯುಮ್ನ (ಶಂ-ಗ-ಪ-ಚ) ಇಕ್ಕೆಲಗಳಲ್ಲಿ ದೇವಿಯರು,  ೮೮. ಆಸೀನ ಸರಸ್ವತೀ (ಅಂಕುಶ, ಪಾಶ, ಪುಸ್ತಕ,ಅಕ್ಷಮಾಲ),  ೮೯,೯೦,೯೧,೯೨.  ಇಬ್ಬರು ದೇವಿಯರ ನಡುವೆ ಉಗ್ರನರಸಿಂಹ; ಬಲಭಾಗದಲ್ಲಿ ಗರುಡ.  

ನವರಂಗದ ವಾಯವ್ಯ (North- west of Navaranga)


೯೩,೯೪. ಅನಿರುದ್ಧ (ಗ-ಶಂ-ಪ-ಚ), ದೇವಿ, ೯೫,೯೬. ಪ್ರದ್ಯುಮ್ನ (ಶಂ-ಗ-ಪ-ಚ) ಎಡದಲ್ಲಿ ದೇವಿ,  ೯೭. ಪುರುಷೋತ್ತಮ (ಪ-ಶಂ-ಗ-ಚ),  ೯೮. ಷಡ್ಭುಜ ನೃತ್ಯ ಪಾರ್ವತಿ ( ಬಲ ಕೆಳಗೈಯಿಂದ: ಅಕ್ಷಮಾಲ,ಲಂಬಹಸ್ತ , ಅಂಕುಶ, ಸ್ವರ್ಗಹಸ್ತ, ಪಾಶ ಫಲ ), ಬಲದಲ್ಲಿ ಗಣೇಶ, ಎಡದಲ್ಲಿ ಷಣ್ಮುಖ ಮತ್ತು ಪೀಠದಲ್ಲಿ ಹಲ್ಲಿ .  




೯೯. ಮಹಿಷಾಸುರ ಮರ್ದಿನಿ (೯೮ ಮತ್ತು ೯೯ ರ ಶಿಲ್ಪಿ ಚಿಕ ಮಲಿತಂಮ), ೧೦೦,೧೦೧. ದೇವಿಯೊಡನೆ ಆಧೊಕ್ಷಜ (ಗ-ಶಂ-ಚ-ಫ), ೧೦೨. ಗಿಣಿಗೆ ಆಹಾರ ನೀಡುತ್ತಿರುವ ಸ್ತ್ರೀ, ೧೦೩,೧೦೪. ಮೋಹಿನೀ –ಸರ್ಪ 

Comments

  1. Shrinivas sir the photos are amazing. the details explained if very meaningful when explained with photos. Many thanks for your wonderful article.

    ReplyDelete
  2. Missed these places to visit. Next time Javagal is must visit. Nice informative article

    ReplyDelete
  3. ಬೆರಗುಗೊಳಿಸುವಂತಹ ಕೆತ್ತನೆ, ಅತ್ಯುತ್ತಮ ಛಾಯಾ ಗ್ರಹಣ. ನಮ್ಮ ನಾಡಿನವರು ನಿಜಕ್ಕೂ ಹೆಮ್ಮೆ ಪಡಬಹುದಾದ ದೇವಾಲಯ. ಚಿತ್ರಗಳ ಕೆಳಗಿನ ವಿವರಣೆ ಬಲದಿಂದ ಎಡಕ್ಕೆ ಎಂದು ತಿಳಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ಅನಿಸುತ್ತದೆ.

    ReplyDelete
  4. My sincere thanks to the readers for their kind and very encouraging words about my article. I am grateful to them for their very valuable suggestions and I assure everyone that I shall try to implement the suggestions in the next article.

    ReplyDelete

Post a Comment