ಆಹಾರವೇ ಔಷಧ - ಕಷಾಯ

ಆಹಾರವೇ ಔಷಧ ಕಷಾಯ

Article by Raji Jayadev
Accredited Practicing Dietitian
Sydney
                                     
ಹಲವಾರು ಮಾರಕ ರೋಗಗಳಿಗೆ ಉತ್ತಮ ಜೀವನಶೈಲಿಯೇ ಪ್ರಭಾವಶಾಲಿಯಾದ ಔಷಧಿ ಎಂದು ನಮಗೆಲ್ಲ ತಿಳಿದಿದೆ. ಇದರಲ್ಲಿ ಅತಿ ಮುಖ್ಯವಾದದ್ದು ಆರೋಗ್ಯಕರವಾದ ಆಹಾರ ಸೇವನೆ. ಉತ್ತಮ ಆಹಾರ ಸೇವನೆಯಿಂದ ಹಲವಾರು ಮಾರಕ ರೋಗಗಳನ್ನು ನಿಯಂತ್ರಣದಲ್ಲಿಡಬಹುದೆಂದು ನೂರಾರು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಕೆಲವು ಮಸಾಲೆ ಪದಾರ್ಥಗಳಿಂದ ಕಷಾಯವನ್ನು ತಯಾರಿಸಿ, ಅದನ್ನು ಔಷಧಿಯಾಗಿ ಬಳಸುವ ಬಗೆಯನ್ನು ತಿಳಿಯೋಣ.

ಭಾರತದ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಬಗೆ ಬಗೆಯ ಕಷಾಯಗಳನ್ನು ತಯಾರಿಸಿ ಗಂಟಲು ನೋವು, ಕೆಮ್ಮು, ನೆಗಡಿ ಮತ್ತು ಕಫ ನಿವಾರಿಸಲು ಉಪಯೋಗಿಸುತ್ತಾರೆ. ಮಸಾಲೆ ಪದಾರ್ಥಗಳು ಅತಿ ಹೆಚ್ಚು ಮತ್ತು ಪ್ರಭಾವಶಾಲಿಯಾದ ಪೋಷಕಾಂಶಗಳನ್ನೂ, ಉತ್ಕರ್ಷಣ ನಿರೋಧಕ (antioxidents) ಮತ್ತು ಉರಿಯೂತ ನಿರೋಧಕ (anti-inflamatory) ರಾಸಾಯನಿಕಗಳನ್ನೂ ಹೊಂದಿವೆ. ನಾನು ತಯಾರಿಸುವ ಕಷಾಯದಲ್ಲಿ ಬಳಸುವ ಮಸಾಲೆ ಪದಾರ್ಥಗಳ ಪಟ್ಟಿ ಮತ್ತು ತಯಾರಿಸುವ ವಿಧಾನ ಇಲ್ಲಿದೆ.


ಜೀರಿಗೆ: ನೋವು ನಿವಾರಕ ಸ್ಯಾಲಿಸಿಲಿಕ್ ಆಸಿಡ್ ಅನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಹೊಂದಿದೆ. (Aspirin™ ಮಾತ್ರೆಯ ಪ್ರಮುಖ ಘಟಕ, ಸ್ಯಾಲಿಸಿಲಿಕ್ ಆಸಿಡ್). 
ಕಾಳು ಮೆಣಸು: ಸೂಕ್ಷ್ಮಜೀವಿಗಳ (ಬ್ಯಾಕ್ಟೀರಿಯಾ, ವೈರಸ್) ಹಾವಳಿಯಿಂದ ನಮ್ಮನ್ನು ರಕ್ಷಿಸುತ್ತದೆ.
ಇದರಲ್ಲಿರುವ ಪೈಪರಿನ್ ಎಂಬ ರಾಸಾಯನಿಕ ಅರಶಿನದ ಪ್ರಭಾವವನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಹಿಡಿಯುತ್ತದೆ ಎಂದು ಕಂಡುಬಂದಿದೆ.
ಅರಶಿನ: ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಆರ್ಥ್ರೈಟಿಸ್ ನಿಂದಾಗುವ ನೋವನ್ನು ಕಡಿಮೆಗೊಳಿಸುತ್ತದೆ. ಕ್ಯಾನ್ಸರ್ ಉಂಟುಮಾಡುವ ಹಲವಾರು ರಾಸಾಯನಿಕಗಳು ದೇಹದಲ್ಲಿ ಉತ್ಪತ್ತಿಯಾಗುವುದನ್ನು  ತಡೆಹಿಡಿಯುತ್ತದೆ. 
ಕೊತ್ತಂಬರಿ ಬೀಜ: ಸೂಕ್ಷ್ಮಜೀವಿಗಳ (ಬ್ಯಾಕ್ಟೀರಿಯಾ, ವೈರಸ್) ಹಾವಳಿಯಿಂದ ನಮ್ಮನ್ನು ರಕ್ಷಿಸುತ್ತದೆ.

ಕಷಾಯದ ಪುಡಿ 
ಬೇಕಾಗುವ ಸಾಮಗ್ರಿಗಳು:

  • ಒಂದು  ಲೋಟ ಕೊತ್ತಂಬರಿ ಬೀಜ 
  • ಅರ್ಧ ಲೋಟ ಜೀರಿಗೆ
  • ಕಾಲು ಲೋಟ ಕರಿ ಮೆಣಸು 


  • ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ತರಿತರಿಯಾಗಿ ಪುಡಿಮಾಡಿ. ಬಿಗಿಯಾದ ಮುಚ್ಚಳವಿರುವ ಗಾಜಿನ ಜಾಡಿಯಲ್ಲಿ ಅಥವಾ ಸ್ಟೀಲಿನ ಡಬ್ಬದಲ್ಲಿ ಶೇಖರಿಸಿ. 


ಕಷಾಯ ಮಾಡುವ ವಿಧಾನ 
ಒಂದು ಲೋಟ ನೀರಿಗೆ ಒಂದು ಟೇಬಲ್ ಚಮಚ ಕಷಾಯದ ಪುಡಿ ಮತ್ತು ಕಾಲು ಟೀ ಚಮಚ ಅರಶಿನದ ಪುಡಿ ಅಥವಾ ಅರ್ಧ ಟೀ ಚಮಚ ಜಜ್ಜಿದ ಹಸಿ ಅರಶಿನದ ಬೇರು ಹಾಕಿ, ಸಣ್ಣ ಉರಿಯಲ್ಲಿ ಸುಮಾರು ಐದು ನಿಮಿಷ ಕುದಿಸಿ. ಮುಕ್ಕಾಲು ಲೋಟದಷ್ಟಾದಾಗ ಅರ್ಧ ಟೀ ಚಮಚ ಜೇನುತುಪ್ಪ ಮತ್ತು ಕಾಲು ಲೋಟ ಹಾಲು ಬೆರಸಿ, ಉರಿಯನ್ನು ನಂದಿಸಿ. ಶೋಧಿಸಿ, ಕುಡಿಯಿರಿ. 

ಸಂಜೆಯ ಕಾಫಿ, ಟೀ ಬದಲು ಅಥವಾ ಮಲಗುವ ಮುನ್ನ ಈ ಆರೋಗ್ಯದಾಯಕ ಕಷಾಯವನ್ನು ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.

ಉಕ್ತಿ: ಆಹಾರವೇ ನಿನಗೆ ಔಷಧಿಯಾಗಲಿ, ಔಷಧಿಯೇ ನಿನ್ನ ಆಹಾರವಾಗಲಿ – ಹಿಪೋಕ್ರಟೀಸ್

Comments

  1. Very useful information. I use one cup Jeera and half a cup Coriander seeds.
    Also these are all to be taken regularly.

    ReplyDelete
    Replies
    1. from: ರಾಜಿ ಜಯದೇವ್
      ಉಷಾರವರಿಗೆ ಧನ್ಯವಾದಗಳು.
      ನೀವು ಒಂದು ಲೋಟ ಜೀರಿಗೆ ಮತ್ತು ಅರ್ಧ ಲೋಟ ಕೊತ್ತಂಬರಿ ಬೀಜವನ್ನು ಬಳಸುತ್ತೇನೆ ಎಂದು ಹೇಳಿದಿರಿ. ನನಗೂ ಅದೇ ಉತ್ತಮ ಎಂದು ತೋರುತ್ತದೆ. ಏಕೆಂದರೆ ಕೊತ್ತಂಬರಿ ಬೀಜದ ಬಗ್ಗೆ ಮಾಹಿತಿ ಹುಡಿಕಿದಾಗ ನನಗೆ ತಿಳಿದದ್ದು - ಇದು ಸೂಕ್ಷ್ಮಜೀವಿಗಳ (ಬ್ಯಾಕ್ಟೀರಿಯಾ, ವೈರಸ್) ಹಾವಳಿಯಿಂದ ನಮ್ಮನ್ನು ರಕ್ಷಿಸುತ್ತದೆ ಎಂಬ ಒಂದು ಗುಣ ಮಾತ್ರ. ಆದರೆ ಜೀರಿಗೆಯಲ್ಲಿ ಅನೇಕ ಆರೋಗ್ಯದಾಯಕ ಗುಣಗಳಿವೆ. ಮುಖ್ಯವಾಗಿ ಜೀರಿಗೆಯಲ್ಲಿರುವ ನೋವು ನಿವಾರಕ ಸ್ಯಾಲಿಸಿಲಿಕ್ ಆಸಿಡ್ ನಮಗೆ ಅತಿಮುಖ್ಯ. ಒಂದು ಟೀ ಸ್ಪೂನ್ ಜೀರಿಗೆಯಲ್ಲಿ ಒಂದು ಸಣ್ಣ ಆಸ್ಪಿರಿನ್ (75 mg) ಮಾತ್ರೆಯಲ್ಲಿರುವಷ್ಟೇ ಸ್ಯಾಲಿಸಿಲಿಕ್ ಆಸಿಡ್ ಇದೆ.
      ಓದುಗರೇ, ಕಷಾಯಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ಈ ಕೆಳಕಂಡಂತೆ ಬದಲಾಯಿಸಿಕೊಳ್ಳಿ.
      ಒಂದು ಲೋಟ ಜೀರಿಗೆ, ಅರ್ಧ ಲೋಟ ಕೊತ್ತಂಬರಿ ಬೀಜ, ಕಾಲು ಲೋಟ ಮೆಣಸಿನ ಕಾಳು.
      ರಾಜಿ ಜಯದೇವ್

      Delete
    2. Thanks Mrs Raji Jayadev I follow all your articles. This info is useful.

      Delete
  2. This article is informative, in fact all of yous, that too in our language. Madam Can you write about the uses of asofotida ಇಂಗು if possible. Is it just a flavor or it has any health benefits? Also fresh vegetables which can and cannot be eaten (fresh)

    ReplyDelete
    Replies
    1. From Raji Jayadev:

      Thanks Rama, for your comments and feedback.
      I will write about many health benefits of Asafoetida in a month or two.
      With regard to vegetables, do you mean which vegetables we can eat raw (uncooked) and which vegetables have to be cooked?

      Delete
  3. ನಮ್ಮವರಿಂದ ನಮ್ಮ ಭಾಷೆಯಲ್ಲೇ ಆರೋಗ್ಯ ಸಲಹೆ ಓದಲು ಸ್ವಾರಸ್ಯ ಎನಿಸುತ್ತದೆ. ನಾವು ಮನೆಯಲ್ಲೇ ಮೇಲಿನ ಅಳತೆಯಲ್ಲಿ ಕಷಾಯ ಮಾಡಿ ಕುಡಿದೆವು. ಚಳಿಗಾಲಕ್ಕೆ ಸೂಕ್ತ

    ReplyDelete
  4. ಸಾಂಕ್ರಾಮಿಕ ರೋಗವು ಎಲ್ಲೆಡೆ ತನ್ನ ಕರಾಳ ಹಸ್ತವನ್ನು ಚಾಚುತ್ತಿರುವ ಈ ಸಮಯದಲ್ಲಿ, ಅದನ್ನು ದೂರವಿಡಲು ಸಹಕಾರಿಯಾಗುವ ಕಷಾಯದ ಬಗ್ಗೆ ಲೇಖನ ಬಲು ಸಮಯೋಚಿತ ಹಾಗೂ ಸಹಾಯಕಾರಿಯಾಗಿದೆ. ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ, ಔಷಧೀಯ ಗುಣಗಳನ್ನು ಹೊಂದಿರುವ ಕಷಾಯದ ಬಗ್ಗೆ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.

    ReplyDelete

Post a Comment