ಆಹಾರವೇ ಔಷಧಿ (to avoid corona infection)



ಆಹಾರವೇ ಔಷಧಿ

Article by Raji Jayadev
Accredited Practicing Dietitian


ಕರೋನಾ ವೈರಸ್ ನ ಸೋಂಕು (infection) ತಡೆಗಟ್ಟಲು ನಾವು ಸೇವಿಸಬೇಕಾದ ಆಹಾರಗಳು.  


                                           ರೋಗಾಣುಗಳ ಸೋಂಕನ್ನು (infection) ತಡೆಗಟ್ಟಲು ನಮ್ಮ ದೇಹದ ರೋಗ ನಿರೋಧಕ ಶಕ್ತಿ (immunity) ಯನ್ನು ಪ್ರಬಲಗೊಳಿಸಬೇಕು. ಅನೇಕ ವಿಟಮಿನ್ಸ್, ಮಿನರಲ್ಸ್, Anti-oxidants ಮತ್ತು anti-inflamatory ಗುಣಗಳಿರುವಂತ ಆಹಾರಗಳು ದೇಹದ ನಿರೋಧಕ ಶಕ್ತಿ (immunity) ಚೆನ್ನಾಗಿ ಕೆಲಸ ಮಾಡುವುದಕ್ಕೆ ಸಹಾಯಮಾಡುತ್ತವೆ. ಹಣ್ಣುಗಳು, ತರಕಾರಿಗಳು ಮತ್ತು ಅರಶಿನ, ಶುಂಠಿ, ಏಲಕ್ಕಿ, ಲವಂಗ, ಜೀರಿಗೆ ಮುಂತಾದ ಮಸಾಲೆ ಪದಾರ್ಥಗಳು ಅತಿ ಹೆಚ್ಚು ಮತ್ತು ಪ್ರಭಾವಶಾಲಿಯಾದ ಪೋಷಕಾಂಶಗಳನ್ನು, antioxidant ಮತ್ತು antiinflamatory ರಾಸಾಯನಿಕಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಆಹಾರ ಪದಾರ್ಥಗಳನ್ನು ದಿನನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದಕ್ಕೆ ಸುಲಭವಾಗುವಂತ ಕೆಲವು ವಿಧಾನಗಳು ಈ ಕೆಳಗಿವೆ. ಇದರೊಂದಿಗೆ ನೀವು ಆರೋಗ್ಯಕರ ಆಹಾರ ಸೇವನೆಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಒಂದು ನಿಯಮವನ್ನಂತೂ ನೀವು ಕಡ್ಡಾಯವಾಗಿ ಪಾಲಿಸುತ್ತಿದ್ದೀರಿ, ಅದು ರೆಸ್ಟೋರೆಂಟ್ ಮತ್ತು ಭೋಜನಕೂಟಗಳಿಗೆ ಹೋಗದೆ ಮನೆಯಲ್ಲೇ ಮಾಡಿದ ಊಟ ತಿಂಡಿಗಳನ್ನು ಸೇವಿಸುವುದು.  

1. ನಿಂಬೆ ನೀರು/ಶುಂಠಿ ನೀರು:  
ಒಂದು ಜಗ್ ನಲ್ಲಿ ಒಂದು ಲೀಟರ್ ನೀರಿಗೆ ಒಂದು ನಿಂಬೆ ಹಣ್ಣಿನ ರಸ ಹಾಕಿಟ್ಟುಕೊಂಡು, ಈ ನೀರನ್ನು ದಿನವಿಡೀ ಕುಡಿಯಿರಿ. ಅಥವಾ ಒಂದು ಫ್ಲಾಸ್ಕ್ ನಲ್ಲಿ ಬಿಸಿನೀರು ಮತ್ತು ಒಂದೆರಡು ಚೂರು ಹಸಿ ಶುಂಠಿಯನ್ನು ಹಿಂದಿನ ರಾತ್ರಿ ಹಾಕಿಟ್ಟು, ಮಾರನೆಯ ದಿನ ಈ ನೀರನ್ನೇ ಕುಡಿಯಬಹುದು 

2. ವೆಜಿಟಬಲ್ ಜ್ಯೂಸ್: 



ಬಣ್ಣ ಬಣ್ಣದ ಹಣ್ಣು ಮತ್ತು ತರಕಾರಿಗಳಲ್ಲಿ  antioxidant ಮತ್ತು anti inflammatory ಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಕೇಸರಿ, ಕೆಂಪು, ಹಸಿರು ಬಣ್ಣದ ತರಕಾರಿಗಳನ್ನು ಉಪಯೋಗಿಸಿ. ಉದಾಹರಣೆಗೆ ಕ್ಯಾರಟ್, ಟೊಮೊಟೊ, ಸೊಪ್ಪು. ಈ ಜ್ಯೂಸ್  ಮಾಡುವಾಗ 1 ಕಪ್ ಜ್ಯೂಸ್ ಗೆ 1-2 ಟೀಸ್ಪೂನ್ ಮೊಸರು, ಚಿಟಿಕೆ ಮೆಣಸಿನ ಪುಡಿ, ಬೇಕಿದ್ದರೆ ¼  ಟೀಸ್ಪೂನ್ ಉಪ್ಪು ಸೇರಿಸಿದರೆ ರುಚಿ ಹೆಚ್ಚು.  ½ ಸೌತೆಕಾಯಿ, ಒಂದು ಹಣ್ಣಾದ ಟೊಮೇಟೊ ಸೇರಿಸಿ ಮಾಡಿದ ಜ್ಯೂಸ್ ಕೂಡ ರುಚಿಯಾಗಿರುತ್ತೆ.

3. ಕೆಂಪು ದ್ರಾಕ್ಷಿಹಣ್ಣಿನ ರಸ:
ಮನೆಯಲ್ಲೇ ಮಾಡಿದ್ದು. ಕೆಂಪು ಸಿಪ್ಪೆಯಲ್ಲಿರುವ resveratol ಎಂಬ ರಾಸಾಯನಿಕ, antioxidant ಮತ್ತು anti inflammatory ಗುಣಗಳನ್ನು ಹೊಂದಿದೆ.

4. ಆರೇಂಜ್ ಜ್ಯೂಸು: ಮನೆಯಲ್ಲೇ ಮಾಡಿದ್ದು. ಆರೆಂಜ್ ನ ಸಿಪ್ಪೆ ತೆಗೆದು, ಮಿಕ್ಸಿಯಲ್ಲಿ ಅರೆದರೆ ಉತ್ತಮ. ಸಿಟ್ರಸ್ ಹಣ್ಣುಗಳಲ್ಲಿ ಅತಿ ಹೆಚ್ಚು ವಿಟಮಿನ್ ‘ಸಿ’ ಇರುತ್ತದೆ. ವಿಟಮಿನ್ ‘ಸಿ’ ಪ್ರಭಾವಶಾಲಿಯಾದ antioxidant.



5. ಅರಶಿಣದ ಹಾಲು: ಚಿನ್ನದ ಬಣ್ಣ, ಚಿನ್ನದ ಗುಣವಿರುವ ಅರಶಿಣಕ್ಕೆ ಹಲವಾರು ಔಷಧೀಯ ಗುಣಗಳಿವೆ ಎಂದು ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ. ಇದನ್ನು ತಯಾರಿಸುವ ವಿಧಾನ:
1 ಲೋಟ (250 ಮಿಲಿ) ಕೊಬ್ಬಿಲ್ಲದ (ಸ್ಕಿಮ್) ಹಾಲು, ¼- ½ ಟೀಸ್ಪೂನ್ ಅರಶಿನದ ಪುಡಿ, ಚಿಟಿಕೆ ಮೆಣಸಿನ ಕಾಳಿನ ಪುಡಿ, 2 ಸ್ಲೈಸ್ ಹಸಿಶುಂಠಿ, 2 ಜಜ್ಜಿದ ಏಲಕ್ಕಿ, ಒಂದು ಚೂರು ಚಕ್ಕೆ,  ಎಲ್ಲವನ್ನು 2-3 ನಿಮಿಷ ಕುದಿಸಿ, ಶೋಧಿಸಿ, 1 ಟೀಸ್ಪೂನ್ ಜೇನುತುಪ್ಪ ಕದಡಿ, ಕುಡಿಯಿರಿ. 
6. ಕಷಾಯ: ಜೀರಿಗೆಯಲ್ಲಿ ನೋವು ನಿವಾರಕ ಸ್ಯಾಲಿಸಿಲಿಕ್ ಆಸಿಡ್ (salicylic acid) ಅತಿ ಹೆಚ್ಚಿನ ಪ್ರಮಾಣದಲ್ಲಿದೆ. ಕಾಳು ಮೆಣಸು ಇತರ ಮಸಾಲೆ ಪದಾರ್ಥಗಳಲ್ಲಿರುವ ರಾಸಾಯನಿಕಗಳ ಪ್ರಭಾವವನ್ನು ಹೆಚ್ಚಿಸುತ್ತದೆ.  
1 ಲೋಟ ದನಿಯ, 1/2 ಲೋಟ ಜೀರಿಗೆ, 1/4 ಲೋಟ ಕಾಳು ಮೆಣಸು. ಇಷ್ಟವಿದ್ದಲ್ಲಿ 1 ಟೀಸ್ಪೂನ್ ಅರಶಿನ, 1 ಟೀಸ್ಪೂನ್ ಶುಂಠಿ ಪುಡಿ ಸೇರಿಸಬಹುದು. 
ಎಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. 4 ಟೀಸ್ಪೂನ್ ಕಷಾಯ ಪುಡಿ, ನಿಮಗೆ ಬೇಕಿದಷ್ಟು ಬೆಲ್ಲವನ್ನು  1 ಲೋಟ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ, 1/2 ಲೋಟದಷ್ಟಾದಾಗ ಶೋಧಿಸಿ, ಹಾಲು ಬೆರಸಿ ಕುಡಿಯಿರಿ.   


7. ಮಸಾಲಾ ಟೀ:
6 ಏಲಕ್ಕಿ, 6 ಲವಂಗ, 1 ಸೆಂಟಿಮೀಟರ್ ಚಕ್ಕೆ, ½ ಟೀಸ್ಪೂನ್ ಮೆಣಸಿನ ಕಾಳು, ಇವುಗಳನ್ನು ಪುಡಿ ಮಾಡಿ. 1 ಲೋಟ ನೀರಿಗೆ ¼ -½ ಟೀಸ್ಪೂನ್ ಮಸಾಲಾ ಪುಡಿ, ಒಂದು ಸಣ್ಣ ಚೂರು ಹಸಿ ಶುಂಠಿ, 1 ಟೀಸ್ಪೂನ್ ಟೀ ಪುಡಿ ಹಾಕಿ, ಕುದಿಸಿ. ಹಾಲು ಸಕ್ಕರೆ ಬೆರೆಸಿ ಸವಿಯಿರಿ.
ನನ್ನ ಸಲಹೆ: ಊಟ ಮಾಡುವಾಗ ನೀರಿನ ಬದಲು ವೆಜಿಟಬಲ್ ಜ್ಯೂಸ್; ಬೆಳಿಗ್ಗೆ, ಮಧ್ಯಾಹ್ನ , ಸಾಯಂಕಾಲ/ರಾತ್ರಿ ಅರಶಿಣದ ಹಾಲು, ಕಷಾಯ, ಮಸಾಲಾ ಟೀ ಕುಡಿಯಬಹುದೇ? ಯೋಚಿಸಿ. 
ಸರ್ವೇ ಜನಾ ಸುಖಿನೋ ಭವಂತು.      

Comments

  1. ಆಹಾರವೇ ಔಷಧಿ. ಈ ನಗ್ನ ಸತ್ಯ ಗೊತ್ತಿದ್ದರೂ, ಅಲಕ್ಷಿಸುವುದೇ ಹೆಚ್ಚು. ನಿಮ್ಮ ಈ ಬರಹ ಪ್ರಸ್ತುತ ಕೊರೋನ ಸನ್ನಿವೇಶದಲ್ಲಿ ಎಲ್ಲರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದಂತೆ ಕಾಣಿಸುತ್ತಿದೆ. ಕೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕೆ ಹುಡುಕುವ ನಾವು ಈ ನಿಮ್ಮ ಬರಹದಿಂದ ಔಷದೀಯ ಪದಾರ್ಥಗಳ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡರೆ ಅದು ನಮಗೇ ಒಳಿತಾಗುತ್ತದೆ. ಬಹಳ ಚೆನ್ನಾಗಿ ವಿವರಿಸಿದ್ದೀರಿ. ತುಂಬಾ ಇಷ್ಟ ಆಯ್ತು. - ಬದರಿ

    ReplyDelete
  2. ಸಮಯಕ್ಕೆ ತಕ್ಕ ಲೇಖನ ಒದಗಿಸಿಕೊಟ್ಟಿದ್ದೀರಿ. ಎಲ್ಲ ತರಹದ ಕಷಾಯಗಳೂ ಪರಿಣಾಮಕಾರಿಯಾಗಿವೆ. ನಾವೂ ಮಾಡಿ ಸೇವಿಸಿದೆವು. ಲೇಖನ ಓದಿದ ಇನ್ನೂ ಕೆಲವರು ಉಪಯೋಗ ಪಡೆದು ತಿಳಿಸಿದ್ದಾರೆ. ತಮ್ಮ ಲೇಖನಗಳು ಬಹುಜನರ ಕೈಸೇರುತ್ತಿದೆ. ಧನ್ಯವಾದಗಳು. Very useful kashaya recipe. Your article provides info to understand the food in both dietitian and patient perspective. Proud to say your article about ದ್ವಿದಳ ಧಾನ್ಯ is one of the all time high in number of reads.

    ReplyDelete

Post a Comment