ಬೆಂಗಳೂರು ಹಾಸ್ಯೋತ್ಸವ


ಬೆಂಗಳೂರಿನಲ್ಲಿ ಸಂಭ್ರಮ ಸಡಗರದ 24ನೇ ಹಾಸ್ಯೋತ್ಸವ 2019

ವರದಿ  - ಬೇಲೂರು ರಾಮಮೂರ್ತಿ


                                             ಎಂದಿನಂತೆ 25.12.2019 ರಂದು ಬೆಂಗಳೂರಿನ ಜಯನಗರದ ಎಚ್.ಎನ.ಕಲಾಕ್ಷೇತ್ರದಲ್ಲಿ ಸಂಭ್ರಮ ಸಡಗರದ 24ನೇ ಹಾಸ್ಯೋತ್ಸವ ಜರುಗಿತು. ಅಕಾಡೆಮಿ ಆಫ್ ಹ್ಯೂಮರ್ ಅಧ್ಯಕ್ಷ ಮತ್ತು ಸಂಚಾಲಕರಾದ ಬೇಲೂರು ರಾಮಮೂರ್ತಿಯವರ ನೇತ್ರತ್ವದಲ್ಲಿ ನಡೆದ ಹಾಸ್ಯೋತ್ಸವ ಒಂದು ರೀತಿಯಲ್ಲಿ ದಾಖಲೆಯ ಹಾಸ್ಯೋತ್ಸವ. ಸತತವಾಗಿ ಒಂದೇ ವೇದಿಕೆಯಲ್ಲಿ ಒಂದೇ ದಿನ ನಿರಂತರವಾಗಿ 24 ವರ್ಷಗಳಿಂದ ನಡೆದ ಯಾವುದಾದರೂ ಉತ್ಸವ ಇದ್ದರೆ ಅದು ಹಾಸ್ಯೋತ್ಸವ ಎಂಬುದು ಎಲ್ಲರ ಅಭಿಮತವಾಗಿತ್ತು. ಇದಕ್ಕಾಗಿ ಎಲ್ಲರೂ ಸತತವಾಗಿ 24 ವರ್ಷಗಳಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಹಾಸ್ಯೋತ್ಸವದಲ್ಲಿ ತೊಡಗಿಸಿಕೊಂಡಿರುವ ಬೇಲೂರು ರಾಮಮೂರ್ತಿಯವರನ್ನು ಅಭಿನಂದಿಸಿದರು. ವರ್ಷದ ಹಾಸ್ಯೋತ್ಸವದಲ್ಲಿ ಪ್ರಮುಖವಾಗಿ ಡಾ. ಗುರುರಾಜ ಕರ್ಜಗಿ ( ಬೇಂದ್ರೆಯವರು ಬದುಕು ಮತ್ತು ಸಾಹಿತ್ಯದಲ್ಲಿ ಹಾಸ್ಯದ ಸೊಗಡು ) ಹಿರೇಮಗಳೂರು ಕಣ್ಣನ್ ಅವರಿಂದ ಹಾಸ್ಯ ಮಂತ್ರಾರ್ಚನೆ, ಬೇಲೂರು ರಾಮಮೂರ್ತಿಯವರಿಂದ ಹಾಸ್ಯ ತುಣುಕುಗಳು. ಹಾಸ್ಯೋತ್ಸವದಲ್ಲಿ ಒಂದು ರೀತಿಯ ಟೈಮ್ ಮ್ಯಾನೇಜ್ಮೆಂಟ್ ಇದೆ ಅದಕ್ಕಾಗಿ ನಾವು ಪೆಪ್ಪರ್ಮಿಂಟ್ ಕಲ್ಚರ್ ಅಳವಡಿಸಿದ್ದೇವೆ ಎಂದ ಬೇಲೂರರು ಮಾಸ್ಟ್ರ್ ಹಿರಣ್ಣಯ್ಯನವರ ಒಂದು ಹಾಸ್ಯ ಪ್ರಸಂಗವನ್ನು ವಿವರಿಸಿದರು



                                                                 ಮಾಸ್ಟರ್ ಹಿರಣ್ಣಯ್ಯನವರು ಮೈಕ್ ಮುಂದೆ ನಿಂತರೆ ಅವರಿಗೆ ಸಮಯದ ಪರಿವೆ ಇರುತ್ತಿರಲಿಲ್ಲ. ಸಭಿಕರಿಗೂ ಎಷ್ಟು ಮಾತು ಕೇಳಿದರೂ ಸಾಲದು ಎನಿಸುತ್ತಿತ್ತು. ಆದರೆ ಇದು ಅನೇಕ ವೇಳೆ ಮುಜುಗರಕ್ಕೂ ಈಡುಮಾಡಿತ್ತು. ಅದಕ್ಕೆ ಹಿರಣ್ಣಯ್ಯನವರ ಮನೆಯವರು ಒಂದುಪಾಯ ಮಾಡಿದ್ದರು. ಅದರಂತೆ ಹಿರಣ್ಣಯ್ಯನವರು ಭಾಷಣಕ್ಕೆ ಹೋಗುವಾಗ ಅವರ ಜುಬ್ಬದ ಜೋಬಿನಲ್ಲಿ ಒಂದು ಪೆಪ್ಪರ್ಮಿಂಟ್ ಇಡುವುದು. ಹಿರಣ್ಣಯ್ಯನವರು ಮಾತು ಷುರುಮಾಡುವ ಮುಂಚೆ ಪೆಪ್ಪರ್ಮಿಂಟನ್ನು ಬಾಯಲ್ಲಿ ಹಾಕಿಕೊಳ್ಳುವುದು. ಪೆಪ್ಪರ್ ಮಿಂಟ್ ಕರಗುವವರೆಗೂ ಹಿರಣ್ಣಯ್ಯನವರು ಮಾತಾಡುತ್ತಿರುವುದು. ಪೆಪ್ಪರ್ಮಿಂಟ್ ಕರಗಿದ ನಂತರ ಮಾತು ಮುಗಿಸುವುದು. ಪೆಪ್ಪರ್ಮಿಂಟ್ ಕರಗೋಕೆ ಸುಮಾರು ಅರ್ಧ ಗಂಟೆ ಬೇಕಾಗುತ್ತಿತ್ತು. ಅದು ಭಾಷಣದ ಸಮಯಕ್ಕೂ ಸಾಕಾಗುತ್ತಿತ್ತು. ಇದು ಸುಮಾರು ದಿವಸಗಳು ನಡೆದಿತ್ತು. ಒಂದು ಸಾರಿ ಹಿರಣ್ಣಯ್ಯನವರು ಮಾತು ಷುರುಮಾಡುವಾಗ ಎಂದಿನಂತೆ ಪೆಪ್ಪರ್ಮಿಂಟನ್ನು ಬಾಯಲ್ಲಿ ಹಾಕಿಕೊಂಡು ಮಾತು ಪ್ರಾರಂಭಿಸಿದರು. ಆದರೆ ಒಂದೂವರೆ ಗಂಟೆ ಆದರೂ ಮಾತು ಮುಗಿಯಲಿಲ್ಲ. ಕಡೆಗೂ ಹಿರಣ್ಣಯ್ಯನವರು ಮಾತು ಮುಗಿಸಿ ತಮ್ಮ ಕುರ್ಚಿಗೆ ಬಂದು ಬಾಯಲ್ಲಿದ್ದ ಪೆಪ್ಪರ್ಮಿಂಟನ್ನು ತೆಗೆದು ನೋಡಿದರೆ ಅದು ಪೆಪ್ಪರ್ಮಿಂಟಲ್ಲ, ಬದಲಿಗೆ ಜುಬ್ಬದ ಕಳಚಿಬಿದ್ದಿದ್ದ ಗುಂಡಿ. ಅವತ್ತು ಹಿರಣ್ಣಯ್ಯನವರ ಮನೆಯವರು ಪೆಪ್ಪರ್ಮಿಂಟ್ ಇಡೋದು ಮರೆತಿದ್ದರು. ಆದರೆ ಕಳಚಿದ್ದ ಜುಬ್ಬದ ಗುಂಡಿ ಜೋಬಲ್ಲಿತ್ತು. ಪ್ರಸಂಗವನ್ನು ಬೇಲೂರರು ಹಾಸ್ಯೋತ್ಸವದಲ್ಲಿ ಹೇಳಿದಾಗ ಜನ ಬಿದ್ದೂ ಬಿದ್ದೂ ನಕ್ಕರು.



                                        ಎಂದಿನಂತೆ ಗಂಗಾವತಿ ಪ್ರಾಣೇಶ್, ಗುಂಡೂರಾವ್, ಡುಂಡಿರಾಜ್, ರಾಮನಾಥ್ ಮತ್ತು ಗಾನವಿನೋದಿನಿ ತಂಡದ ಹಾಸ್ಯ ಪ್ರಸಂಗಗಳು ಜನರನ್ನು ರಂಜಿಸಿದವು. ನಮ್ಮಲ್ಲಿಗೂ ಬಂದು ಇಂಥಾ ಹಾಸ್ಯೋತ್ಸವವನ್ನು ನಡೆಸಿಕೊಡಿ ಎಂದು ನಾಡಿನ ಹಲವಾರು ಪ್ರಾಂತ್ಯಗಳಿಂದ ಬಂದಿದ್ದ ಹಾಸ್ಯಾಭಿಮಾನಿಗಳು ನೀಡಿದ ಕೋರಿಗೆ ಬಾರಿಯ ಹಾಸ್ಯೋತ್ಸವದ ವೈಶಿಷ್ಟ್ಯವಾಗಿತ್ತು.  







Comments

  1. ಹಾಸ್ಯಕಾರ್ಯಕ್ರಮದ ನೆಪದಲ್ಲಿ ದಿಗ್ಗಜರೇ ಸೇರಿದ್ದಾರೆ. ಲೇಖನ ಚಿಕ್ಕದಾದೂ ಸೊಗಸಾಗಿದೆ ಶ್ರೀ ರಾಮ ಮೂರ್ತಿಯವರೇ.ಸಮಯಪ್ರಜ್ಞೆಗೆ ಹೆಸರಾದ ಹಿರಣ್ಣಯ್ಯನವರ ಮನೆಯವರ ಉಪಾಯ (ಪೆಪ್ಪರ್ ಮಿಂಟ್) ಓದಿ ಆಶ್ಚರ್ಯ ಸಂತೋಷ ಎರಡೂ ಅನಿಸಿತು. ಗುರುರಾಜ ಖರ್ಜಗಿ, ಕಣ್ಣನ್ ಮತ್ತಿತರರನ್ನು ನೋಡಿ ತುಂಬಾ ಖುಷಿಯಾಯ್ತು. ಅವರು ಖಂಡಿತ ಏನಾದರೂ ವಿಶೇಷ ಮಾತಾಡಿರುತ್ತಾರೆ. ಹಂಚಿಕೊಂಡಿದ್ದಾರೆ ಚೆನ್ನಾಗಿತ್ತು.

    ReplyDelete
  2. ಪುಟ್ಟದಾಗಿದೆ ಆದರೂ ಚೆನ್ನಾಗಿದೆ ಲೇಖನ... ನಾನು ಇಂತಹ ಸಭೆಗಳನ್ನು ತಿಂಬ ಮಿಸ್ ಮಾಡ್ಕೋತೀನಿ

    ReplyDelete
    Replies
    1. True we too miss when we are far from motherland.

      Delete
    2. yeh feels like we miss many of these when far from homeland.

      Delete
  3. Looks like nice program with great people around. Thanks for sharing the report.

    ReplyDelete

Post a Comment