ಆಹಾರವೇ ಔಷಧಿ - ಹಾಗಲಕಾಯಿ


ಆಹಾರವೇ ಔಷಧಿ 
ಹಾಗಲಕಾಯಿ


Article by - ಶ್ರೀಮತಿ ರಾಜೇಶ್ವರಿ ಜಯದೇವ್ 
Accredited Practicing Dietitian, Sydney

ಹಲವಾರು ಮಾರಕ ರೋಗಗಳಿಗೆ ಉತ್ತಮ ಜೀವನಶೈಲಿಯೇ ಅತಿ ಪ್ರಭಾವಶಾಲಿಯಾದ ಔಷಧಿ ಎಂದು ನಮಗೆಲ್ಲ ತಿಳಿದಿದೆ.  ಇದರಲ್ಲಿ ಅತಿ ಮುಖ್ಯವಾದದ್ದು ಆರೋಗ್ಯಕರವಾದ ಆಹಾರ ಸೇವನೆ. ಈ ನಿಟ್ಟಿನಲ್ಲಿ ಹಾಗಲಕಾಯಿಯನ್ನು ಔಷಧಿಯಾಗಿ ಬಳಸುವ ಬಗೆಯನ್ನು ತಿಳಿಯೋಣ. 
ಹಾಗಲಕಾಯಿ ರಕ್ತದ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡುತ್ತದೆ ಎಂದು ಹಲವಾರು ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿದೆ. ಪ್ರಸಿದ್ಧ ಡಯಟೀಷಿಯನ್  Sue Radd ಅವರು ಬರೆದಿರುವ Food As Medicine ಪುಸ್ತಕದಲ್ಲಿ, ಹಾಗಲಕಾಯಿ ರಸ ತಯಾರಿಸುವ ಮತ್ತು ಸೇವಿಸುವ ಬಗೆಯನ್ನು ಹೇಳಿದ್ದಾರೆ. 

ಹಾಗಲಕಾಯಿ ರಸ  
1 ದೊಡ್ಡ ಹಾಗಲಕಾಯಿ (300 ಗ್ರಾಂ)
1/8 ಲೋಟ ನಿಂಬೆಹಣ್ಣಿನ ರಸ (30 ಮಿ.ಲಿ.)
1 ಲೋಟ ನೀರು (250 ಮಿ.ಲಿ.)
1. ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಉದ್ದಕ್ಕೆ ಸೀಳಿ, ಬೀಜವನ್ನು ತೆಗೆದುಚಿಕ್ಕದಾಗಿ ಕತ್ತರಿಸಿ, ನೀರಿನೊಂದಿಗೆ ಬ್ಲೆಂಡರ್ ನಲ್ಲಿ ಹಾಕಿ ನುಣ್ಣಗೆ ಅರೆಯಿರಿ. 
2. ನಿಂಬೆರಸ ಸೇರಿಸಿ, ಚೆನ್ನಾಗಿ ಕಲಕಿ, ಒಂದು ಬಾಟಲಿಯಲ್ಲಿ ಹಾಕಿ, ಮುಚ್ಚಳ ಮುಚ್ಚಿ, ಫ್ರಿಡ್ಜ್ ನಲ್ಲಿಡಿ. ನಿಂಬೆರಸ ಹಾಕಿರುವುದರಿಂದ 4-5 ದಿನಗಳವರೆಗೆ ಕೆಡುವುದಿಲ್ಲ. 
3. ಪ್ರತಿದಿನ ರಾತ್ರಿ  ಊಟವಾದ ಕೂಡಲೇ 30 ಮಿ.ಲಿ. ಈ ರಸವನ್ನು ಸೇವಿಸಿ. ಇಷ್ಟವಿದ್ದಲ್ಲಿ ಮಧ್ಯಾಹ್ನದ ಊಟದ ನಂತರ ಕೂಡ ಸೇವಿಸಬಹುದು. 
ವಿಶೇಷ ಸೂಚನೆ: 30 ಮಿಲಿಗಿಂತ ಹೆಚ್ಚು ಸೇವಿಸಬೇಡಿ.  




  • ಮಕ್ಕಳಿಗೆ ಕೊಡಬೇಡಿ. 
  • ಹಾಗಲಕಾಯಿಯಲ್ಲಿ ವಿಟಮಿನ್ ‘ಸಿ’ ಮತ್ತು ಫೋಲೇಟ್ ಹೆಚ್ಚು ಪ್ರಮಾಣದಲ್ಲಿದೆ. ನಿಂಬೆರಸಕಹಿಯನ್ನು ಕಡಿಮೆಮಾಡುತ್ತದೆ. 
  • ಗರ್ಭಿಣಿಯರಿಗೆ ಸೂಕ್ತವಲ್ಲ.
ಡಯಾಬಿಟಿಸ್ ಗೆ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಡಿ. ಪ್ರತಿದಿನ ರಕ್ತ ಪರೀಕ್ಷೆ ಮಾಡಿ, ಸಕ್ಕರೆಯ ಪ್ರಮಾಣವನ್ನು ಬರೆದಿಡಿ. ಸಕ್ಕರೆಯ ಅಂಶ ಕಡಿಮೆಯಾಗುತ್ತಿದ್ದರೆ ನಿಮ್ಮ ವೈದ್ಯರನ್ನು ನೋಡಿ. ಔಷಧಿಯ dose ಬಗ್ಗೆ ಅವರು ನಿರ್ಧರಿಸುತ್ತಾರೆ. ಸಕ್ಕರೆಯ ಅಂಶ ಕಡಿಮೆಯಾಗದಿದ್ದರೆ ಚಿಂತೆಯಿಲ್ಲ. ಏಕೆಂದರೆ ಇದರಿಂದ ಅಡ್ಡ ಪರಿಣಾಮಗಳಿಲ್ಲ ಮತ್ತು ವಿಟಮಿನ್ಸಿಮತ್ತು ಫೋಲೇಟ್ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ.          
--------------------

ಮುಂದಿನ ತಿಂಗಳು, ಶುಂಠಿಯನ್ನು ಔಷಧಿಯಾಗಿ ಉಪಯೋಗಿಸುವ ಬಗ್ಗೆ ತಿಳಿಯೋಣ.  

Comments

  1. ನಿಂಬೆರಸ, ಕಹಿಯನ್ನು ಕಡಿಮೆಮಾಡುತ್ತದೆ. was not aware of this information.Many thanks for your article

    ReplyDelete
  2. ನಮ್ಮ ದಿನನಿತ್ಯದ ಆಹಾರಗಳಿಂದಲೇ ಕಾಯಿಲೆಗಳಿಗೆ ಔಷಧವನ್ನು ಮಾಡಿಕೊಳ್ಳಲು ನಿಮ್ಮ ಲೇಖನಗಳು ಬಹಳ ಸಹಕಾರಿಯಾಗಿರುತ್ತವೆ.

    ReplyDelete
  3. ಹಾಗಲಕಾಯಿಯ ಉಪಯುಕ್ತ ಮಾಹಿತಿಯೊಂದಿಗೆ ರೆಸಿಪ್ಪಿಯನ್ನೂ ಹಂಚಿಕೊಂಡಿದ್ದೀರಿ. ಧನ್ಯವಾದಗಳು

    ReplyDelete

Post a Comment