ಕನ್ನಡ ಶಾಲೆ ವಾರ್ಷಿಕೋತ್ಸವ 2019

ಸಿಡ್ನಿ ಕನ್ನಡ ಶಾಲೆ ವಾರ್ಷಿಕೋತ್ಸವ  2019

ವರದಿ - ಶ್ರೀಮತಿ ರಾಜಲಕ್ಷ್ಮಿ ನಾರಾಯಣ

ALL PHOTOS

                                              ಸಿಡ್ನಿ ಕನ್ನಡ ಶಾಲೆ ವಾರ್ಷಿಕ ದಿನಾಚರಣೆಯ ಪ್ರಯುಕ್ತ  ಡಿಸೆಂಬರ್ ೨೧ ರಂದು Wattle Grove ಸಾರ್ವಜನಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪೋಷಕರೂ, ಮಕ್ಕಳೂ ಅತಿಥಿಗಳು ಎಲ್ಲರೂ ಸಮಯಕ್ಕೆ ಸರಿಯಾಗಿ ನೆರೆಡಿದ್ದರು. ವಿಪರೀತ ಸೆಖೆಯಿದ್ದ ದಿನ ಅಂದಿನ ತಾಪಮಾನ ೪೨ ಡಿಗ್ರಿ.ಹೀಗಿದ್ದರೂ ಸಹ  ಮಕ್ಕಳು  ಮಾತ್ರ ಹುಮ್ಮಸ್ಸಿನಿಂದ ಸೇರಿದ್ದರು.    ಮಧ್ಯಾಹ್ನ ೩ಕ್ಕೆ ಶ್ರೀಯುತ ನಾರಾಯಣ ಕನಕಾಪುರ  ಎಲ್ಲರಿಗೂ ಸ್ವಾಗತ ಕೋರುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ನುಡಿದರು.

                             ಶಾಲೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸ್ಮಿತಾ ಮೇಲ್ಕೋಟೆಯವರು ಮೊದಲು ಪುಟ್ಟ ಭಾಷಣ ಮಾಡಿದವರಾದರು. ಸರಳ ಸುಲಭವಾದ ನಮ್ಮ ಕನ್ನಡ  ಕನಿಷ್ಟ  ಪಕ್ಷ ಮಕ್ಕಳಿಗೆ ಸ್ವಚ್ಛವಾಗಿ ಬೈಬೇಕಾದರೆ ನಮ್ಮ ಭಾಷೇನೇ ಚೆನ್ನ ನೋಡಿ ಬೇರೆ ಭಾಷೆಯಲ್ಲಿ ಬೈದರೆ ಅದು ಮಜಾ ಬರೋಲ್ಲ ಎನ್ನುವ ಹಾಸ್ಯದ ಧಾಟಿಯಲ್ಲಿ ಹೇಳಿದರು. ಅವರ ನಂತರ ಮುಖ್ಯ ಅತಿಥಿಗಳಾದ ಶ್ರೀಯುತ ಡಾ ಅನಂತ ರಾವ್ ಮಕ್ಕಳನ್ನು ಉದ್ದೇಶಿಸಿ ಹೇಳಿದ ಜಿ ಪಿ ರಾಜರತ್ನಂ ಅವರ  ಶಿಶುಗೀತೆ ಸಂಸ್ಕೃತದಷ್ಟೇ ಸೊಗಸಾಗಿ ಕನ್ನಡದಲ್ಲೂ ರಚನೆಯಿದೆ ಎಂಬುದಾಗಿ ಸಾಬೀತು ಪಡಿಸಿದರು. ಪುರಂದರ ದಾಸರ ಡೊಂಕುಬಾಲದ ನಾಯಕರೇ ನೀವೇನೂಟವ ಮಾಡಿದಿರಿ ಎನ್ನುವ ಹಾಡಂತೂ ಬಹಳ ಸೊಗಸಾಗಿತ್ತು. ಹಿರಿಯರೇ ಹೆಚ್ಚು ಅನುಭವಸಿ ನಗೆಯ ಅಲೆ ಎಬ್ಬಿಸಿದರು. ದೂರದೂರಿನಲ್ಲಿ ಕನ್ನಡ ಕಲಿಯಲು ಬರುತ್ತಿರುವ ಮಕ್ಕಳನ್ನು, ಅವರನ್ನು ಶಾಲೆಗೆ ಕರೆತರುವ ಪೋಷಕರನ್ನೂ ಹಾಗೂ ಶಾಲೆ ನಡೆಯಲು ಸಹಕರಿಸುತ್ತಿರುವ ಶಿಕ್ಷಕವರ್ಗದವರಿಗೂ ಪ್ರಶಂಸೆ ಮಾಡಿದರು.


                                               ನಂತರ ನಾರಾಯಣರವರು ಮಕ್ಕಳು ಮತ್ತು ಪೋಷಕರನ್ನು ಉದ್ದೇಶಿಸಿ ಕಲಿಕೆಗೆ ಪ್ರತಿದಿನ ಸಮಯ ಕೊಡುವ ಬಗ್ಗೆ ಮತ್ತು ನಿಭಾಯಿಸುವ  ಬಗ್ಗೆ ನುಡಿದರು. ಹಾಗೆಯೇ  ಅವರು ವರ್ಷದ ಅತ್ಯುತ್ತಮ ವಿಧ್ಯಾರ್ಥಿಗಳ ಹೆಸರು ಸೂಚಿಸಿ ಅವರಿಗೆ ಶ್ರೀಯುತರಾದ  ಡಾ ಅನಂತ ರಾವ್ ಅವರ ಕೈಯ್ಯಾರ  ಉಡುಗೊರೆ, ಪ್ರಶಂಸಾ ಪತ್ರವನ್ನೂ ವಿತರಿಸಿದರು. ಸಂತಸದ ವಿಚಾರವೇನೆಂದರೆ ಈ ವರುಷದಿಂದ  ರಂಗಭೂಮಿ ಕಲಾವಿದ ದಿವಂಗತ ಮಾಸ್ಟರ್ ಹಿರಣಯ್ಯನವರ ಹೆಸರಿನಲ್ಲಿ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯೊಂದನ್ನು ಆರಂಭಿಸಲಾಗಿತ್ತು. ಈ ಪ್ರಶಸ್ತಿಯನ್ನು ತೂಂಗಾಬ್ಬಿ ಶಾಲೆಯ ವಿದ್ಯಾರ್ಥಿ ಕು ಸಿಮ್ರನ್ ಸುನಿಲ್ ಪಡೆದುಕೊಂಡಳು. ಈ ಪ್ರಶಸ್ತಿಯನ್ನು ಖುದ್ದಾಗಿ ಹಿರಣ್ಣಯ್ಯನವರ ಮಕ್ಕಳೇ ಪ್ರಾಯೋಜಿಸಿದ್ದರು.

                                                ಶಾಲೆಯ ನಿರಂತರ ಸೇವೆಗೆ ನಿಂತಿರುವ  ಶಿಕ್ಷಕರಾದ ಶ್ರೀಮತಿ ಸುಮಾ, ಶ್ರೀಮತಿ ಸುಜಾತ, ಶ್ರೀಮತಿ ಪೂಜಾ, ನನಗೂ, ಶ್ರೀಯುತ ಅಂಜಿನ್, ಶ್ರೀಮತಿ ರಮ್ಯಾ, ಶ್ರೀಮತಿ ವೀಣಾ, ಶ್ರೀಮತಿ ಶ್ವೇತಾ, ಹಾಗೂ ಕುಮಾರಿ ಸಿಂಚನ ಅವರಿಗೆ ಶಾಲೆಯ ಪರವಾಗಿ ಪುಟ್ಟ  ಉಡುಗೊರೆಗಳನ್ನು ಕೃತಜ್ಞತಾ ಭಾವದಿಂದ ಕೊಡಲಾಯಿತು. ಶಾಲೆಯ ಪ್ರಾಂಶುಪಾಲರಾದ  ಶ್ರೀಯುತ ನಾರಾಯಣ ಅವರು ಈಗಿನ ಪೀಳಿಗೆಯ  ಕನ್ನಡ ಸಾಹಿತ್ಯದ ಅರಿವಿನ ಬಗ್ಗೆ  ಮನವರಿಕೆ ಮಾಡಿಕೊಡುತ್ತಾ ಮನೆಯಲ್ಲಿ ಸುಲಭವಾಗಿ  ಭಾಷೆ  ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ಕುತೂಹಲ ಮಾಹಿತಿಯನ್ನೂ ತಮ್ಮ ಪುಟ್ಟ ಭಾಷಣದಲ್ಲಿ ಅಳವಡಿಸಿ ಹೇಳಿದರು . ಮುಂದೆ ಮಕ್ಕಳು ನಡೆಸಿಕೊಟ್ಟ ಚಿಕ್ಕ ಮನರಂಜನಾ ಕಾರ್ಯಕ್ರಮ ಸೊಗಸಾಗಿ  ಮೂಡಿ ಬಂದಿತು. ಎಲ್ಲಾ ಮಕ್ಕಳ ದ್ವನಿ ಕೂಡಿಸಿ ತಿಂಡಿ ಹಾಡನ್ನು ಚೆನ್ನಾಗಿ ಹಾಡಿ ಪ್ರೇಕ್ಷಕರಿಗೆ ಮುದ ನೀಡಿದರು.ಲಘು ಉಪಹಾರ ಮಜ್ಜಿಗೆ ಸಮೋಸದೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು. ಅಷ್ಟರಲ್ಲಿ ತಂಪಾದ ಗಾಳಿ ಬೀಸಲು ಶುರುವಾಗಿ ಉಷ್ಣತೆ ೨೨ ಡಿಗ್ರಿಗೆ ಇಳಿದಿತ್ತು.

Comments

  1. ಅತ್ಯುತ್ತಮ ವಿವರಣ

    ReplyDelete
  2. ವಾರ್ಷಿಕ ದಿನದ ವರದಿ ಸಂಕ್ಷಿಪ್ತವಾಗಿ ಸರಳವಾಗಿ ಮೂಡಿಬಂದಿದೆ. ಒಳ್ಳೆಯ ಫೋಟೋಗಳು ಕೂಡ. ಸೌ|| ರಾಜಲಕ್ಷ್ಮಿ ಅವರಿಗೆ ಅಭಿನಂದನೆಗಳು. ಶಾಲೆಯ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಸಿಡ್ನಿ ಕನ್ನಡ ಸಮುದಾಯ ಆಭಾರಿಯಾಗಿದೆ.
    ಕಾರ್ಯಕ್ರಮ ನಡೆದ ದಿನಾಂಕ ಡಿಸೆಂಬರ್ 51 ಎಂದು ಮುದ್ರಿತವಾಗಿದೆ. ಇದನ್ನು ತಿದ್ದಬೇಕು.

    ReplyDelete
    Replies
    1. ಧನ್ಯವಾದಗಳು ಡಾ ಮಧುಸೂದನ್ ,
      ದಿನಾಂಕ ತಿದ್ದುಪಡಿ ಮಾಡಲಾಗಿದೆ.

      Delete

Post a Comment