ಅಕ್ಕರೆಯ ಅಕ್ಷರಗಳ ಅಮೋಘ ಸಗ್ಗ

ಅಕ್ಕರೆಯ ಅಕ್ಷರಗಳ ಅಮೋಘ ಸಗ್ಗ

ಹಾಸ್ಯ ಲೇಖನ  - ಅಣುಕು ರಾಮನಾಥ್


                            ಲಾಗಾಯ್ತಿನಿಂದಲೂ ಕನ್ನಡದ ಬಗ್ಗೆ ಡೊಳ್ಳು ಬಾರಿಸಿದವರು ಎನಿತೋ. ಪಂಪನಂತಹವರು ಭಾಷೆಯ ನದಿಯನ್ನು ಹರಿಸಿದರು; ರನ್ನನಂತಹವರು ಭಾಷೆಗೆ ಗೆಜ್ಜೆ ಕಟ್ಟಿ ಕುಣಿಸಿದರು. ಪ್ರೊಫೆಸರ್ ಮಿತ್ರನಂತಹವರು ಭಾಷೆಯ ಮೊಗದಲ್ಲಿ ಸುಖಪ್ರದವಾದ ನಗೆಯನ್ನು ಚಿಮ್ಮಿಸಿದರು. ಕುಮಾರವ್ಯಾಸನಂತಹವರುವೇದಪುರುಷನ ಸುತನ ಸುತನ....’ ಎನ್ನುತ್ತಾ ನಿಗೂಢತೆಯನ್ನಿರಿಸಿ ಕೌತುಕವನ್ನು ಮೂಡಿಸಿದರು. ಲಕ್ಷ್ಮೀಶ ಶ್ಲೇಷಗಿರಿಯೇ ಆದರು. ಆದರೂ..... ಆಂಗ್ಲದವರು ವರ್ಣಮಾಲೆಯೊಳಗೋ, ಪದಗಳೊಳಗೋ ಗುರುತಿಸಿದ ಚಮತ್ಕಾರವನ್ನು ನಾವು ಈಗ ಕನ್ನಡದಲ್ಲೂ ಗುರುತಿಸುವ ಪ್ರಯತ್ನ ಮಾಡೋಣ.

ಕನ್ನಡದ ಅಕ್ಷರಮಾಲೆ ಅರ್ಧ ಶತಕ ಹೊಡೆದರೂನೆರೆಹೊರ್ಕೆ ನೆರೆ ಹೊರ್ಕೆನೇವೇಯಎಂದು ಕೈಲಾಸಂ ಹೇಳಿದಂತೆ ಅಕ್ಕಪಕ್ಕದ ಪದಗಳು ಸೇರಿ ಅರ್ಥಪೂರ್ಣವಾಗುವುದು ವಿರಳ. ಆಂಗ್ಲದಲ್ಲಿಡಿಇ’, ‘ಹೆಚ್’ ‘ಎನ್ಜೋಡಿಗಳು ಅಕ್ಕಪಕ್ಕದಲ್ಲಿದ್ದೂ ಕ್ರಮವಾಗಿಹೊರತಾಗಿಸು’, ‘ಹಾಯ್ಮತ್ತುನಕಾರ ಅರ್ಥಗಳನ್ನು ನೀಡುತ್ತವೆ. ಕನ್ನಡದಲ್ಲಿ ಸ್ವರಗಳಲ್ಲಿ ಇಂತಹ ಯಾವುದೇ ಜೋಡಿ ಕಂಡುಬರದಿದ್ದರೂ ವ್ಯಂಜನಗಳಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ‘ಖಗಎಂದರೆ ಗಗನ ಸಂಚಾರಿ; ‘ಢಣಶಬ್ದಸೂಚಿ; ‘ಧನಸಿರಿಸೂಚಿ; ‘ಲವಪದವಂತೂ ರಾಮಾಯಣದಿಂದ ಹಿಡಿದು ಸಮುದ್ರದವರೆಗೆ ಹರಡಿದ್ದು, ತುದಿಯನ್ನು ಅರ್ಧವಾಗಿಸಿದರೆ ಆಂಗ್ಲದಲ್ಲಿ ಬಹಳವಾಗಿ ಬಳಸುವ ಪದವಾದಲವ್ಆಗಿಬಿಡುತ್ತದೆ. ಲವನ ಹಿಂದೆಯೇವಶ’; ಅದರ ಹಿಂದೆಯೇಸಹ’.... ಚೆನ್ನಾಗಿದೆಯಲ್ಲವೇ! ಲವ ಪ್ರೀತಿಯಿದ್ದರೆ ವಶ ಆಗುತ್ತಾರೆ, ವಶವಾದರೆ ಸಹ ಜೀವನ ಕಟ್ಟಿಟ್ಟ ಬುತ್ತಿ! ‘ಖಗದಿಂದ ಹಿಡಿದುಸಹದವರೆಗಿನ ಪದಗಳನ್ನುಪಕ್ಕಾಕ್ಷರಿಎಂದು ಕರೆಯಬಹುದು.
ಅಕ್ಷರಗಳ ಜಾಡು ಬಿಟ್ಟು ವರ್ಗಗಳ ಜಾಡು ಹಿಡಿದರೆ ಇರುವ ಐದು ವರ್ಗಗಳಲ್ಲಿ ಐದರ ಕೆಳಗೆ ಐದನ್ನು ಹಾಕಿದರೆ ಕೂದಲು ಎಂಬ ಅರ್ಥ ಕೊಡುವಕಚ’, ಆನೆ ಎಂಬ ಅರ್ಥ ಕೊಡುವಗಜಗಳು ಕಂಡುಬರುತ್ತವೆ. ಎರಡು-ಮೂರರ ವರ್ಗದ ಜೋಡಿ ಪದಗಳೇ ಅತ್ಯಂತ ಅಪಾಯಕಾರಿ! ಮೊದಲೆರಡು ಅಕ್ಷರಗಳು ಸೇರಿಚಟಆದರೆ ಮೂರನೆಯ ಅಕ್ಷರಗಳು ಸೇರಿಜಡಆಗಿಬಿಡುತ್ತವೆ. ಮೂರು-ನಾಲ್ಕನೆಯ ವರ್ಗಗಳು ನಗರದ ನೆರೆಹೊರೆಯವರಂತೆಚೂರೂ ಹೊಂದಾಣಿಕೆ ಆಗದೆ ಅಪರಿಚಿತರಂತೆಯೇ ಉಳಿದುಬಿಡುತ್ತವೆ. ನಾಲ್ಕು-ಐದನೆಯ ವರ್ಗಗಳು ಶಾಂತಿ, ಸಂಯಮ, ವಿನಯಗಳನ್ನು ಪ್ರತಿಪಾದಿಸುವತ್ತವೆ. ಮಧ್ಯದ ಅಕ್ಷರಗಳ ಜೋಡಿಯಿಂದದಬಎಂಬ ಸದ್ದುಸೂಚಕ ಪದವೊಂದು ತೂರಿದರೂ ಮೊದಲ ಅಕ್ಷರಗಳ ಜೋಡಿತಪವನ್ನೂ, ಕಡೆಯ ಅಕ್ಷರಗಳ ಜೋಡಿನಮವನ್ನೂ ನೀಡಿ ಜೀವನದಲ್ಲಿ ತಗ್ಗಿಬಗ್ಗುವುದನ್ನು ಕಲಿಸುತ್ತವೆ.
ಇವೆಲ್ಲವೂಸಮಾನ ಸಾಲಿಗೆ ಸೇರಿದ ಪದಗಳು. ನಗರಗಳಲ್ಲಿ ಮನೆಯ ಪಕ್ಕದಲ್ಲಿ ಬಹುಮಹಡಿ ಕಟ್ಟಡಗಳು ಇರುವಂತೆ ಅದೇ ಅಕ್ಷರದ ಪಕ್ಕ ಅದಕ್ಕೊಂದು ಅದೇ ಒತ್ತನ್ನು ಇತ್ತ ಅಕ್ಷರಗಳನ್ನಿತ್ತರೆ ಮತ್ತಷ್ಟು ಪದಗಳು ಮೂಡುತ್ತವೆ. ಅಕ್ಷರಕ್ಕೆ ಕ್ಕ ಸೇರಿಸಿ ಚಿಕ್ಕಪ್ಪನನ್ನು ನೆನೆದೋ, ಶೌಚವನ್ನು ನೆನೆದೋ, ಜೊತೆಗೆ ಗ್ಗ ಹಾಕಿ ಮೊದ್ದನನ್ನು ಮನಕ್ಕೆ ತಂದುಕೊಳ್ಳಬಹುದು. ಅಂತೆಯೇ ದದ್ದ, ಪಪ್ಪ (ಈಚಿನ ಉತ್ತರಭಾರತೀಯ ಸೇರ್ಪಡೆ) ಮಮ್ಮ (ವಿದೇಶಿ ಸೇರ್ಪಡೆ)ಗಳನ್ನು ವರ್ಗೀಯ ವ್ಯಂಜನಗಳಲ್ಲೂ, ಹಹ್ಹ ಎಂಬ ಹಸಿತಪದವನ್ನು ಅವರ್ಗೀಯದಲ್ಲೂ ಕಾಣುತ್ತೇವೆ.



ಕನ್ನಡದ ಶ್ರೀಮಂತಿಕೆ ಇರುವುದು ಸ್ವರವನ್ನು ವ್ಯಂಜನದೊಂದಿಗೆ ಸೇರಿಸಿ ಪಡೆಯುವಗುಣಿತದಲ್ಲಿ. ಮೊದಲ ಗುಣಿತವಾದ ಕಾಗುಣಿತದಲ್ಲಿಕಾಕಿಬಂದ ನಂತರ ಅಕ್ಷರ ದ್ವಿರುಕ್ತಿಯ ಮೂಲಕಕಾಕಾಮತ್ತುಕೋಕೋಗಳು ಕಂಡುಬಂದು, ಚಿಕ್ಕಪ್ಪನು ನಿಮಗೆ ಕೋಕೋ ಕುಡಿಸುವಂತಾದರೆ, ‘ಚಾಗುಣಿತದಲ್ಲಿಕಾಕಾ ಹೆಂಡತಿಚಾಚಿಬಂದುಚೌಚೌಮತ್ತುಚಂಚಂಗಳನ್ನು ಕೊಡಿಸುತ್ತಾಳೆ. ಏತನ್ಮಧ್ಯೆಗಾಗುಣಿತದಲ್ಲಿಗೀಗೀಪದಗಳು ಬಂದುಹೋಗಿರುತ್ತವೆ.
ಕಾಕಾ ಚಾಚಿಯರು ಇದ್ದಮೇಲೆ ಅವನು ಇವಳಿಗೆ ಹೂ ಕೊಡಿಸಲೇಬೇಕಲ್ಲವೆ. ಅದಕ್ಕೆಂದೇಜಾಗುಣಿತದಲ್ಲಿಜಾಜಿದೊರಕುತ್ತದೆ. ಕಾಕಾ ಚಾಚಿಯರು ಇದ್ದಮೇಲೆ ಮಕ್ಕಳಿದ್ದೇ ಇರುತ್ತವೆ. ಮಕ್ಕಳಿದ್ದಮೇಲೆಜೋಜೋಬೇಕೇಬೇಕಲ್ಲವೆ! ಜಕಾರದ ಜವಾನಿಯಲ್ಲಿ ಇವೆಲ್ಲವೂ ನಡೆದುಹೋಗುತ್ತವೆ. ಅಂತೆಯೇ ದಂಪತಿಗಳಿದ್ದಲ್ಲಿಛೆಛೆಎನ್ನುವುದು ಇದ್ದೇ ಇರುತ್ತದೆಂದು ಚವರ್ಗದ ಚಾಚಿ ನೆನಪಿಸುತ್ತಾಳೆ.

ಟಾಗುಣಿತವಂತೂ ಕನ್ನಡಕ್ಕಿಂತ ಇಂಗ್ಲಿಷ್ ಸಂಸ್ಕøತಿಗೇ ಹೆಚ್ಚು ಹತ್ತಿರ. ‘ಟೈಕಟ್ಟಿಕೊಂಡುಟಾಟಾಮಾಡಿ ಮನೆಯಿಂದ ಹೊರಟುಟೀ ಟೀಎಂದು ಮಾರುವವನಿಂದ ಟೀ ಪಡೆದು, ಆಟೋ ಹಿಡಿದುಟು’ (ಹೋಗಬೇಕಾದ ಜಾಗ) ಹೇಳುವುದಕ್ಕೆಟಾಗುಣಿತದಲ್ಲೇ ಎಡೆ ಇರುವುದು. ಒಂದಕ್ಷರ ಮುಂದೆ ಹೋದರೆ ಮುನಿಸು! ‘ಠೂಠೂಬಿಡುವುದೊಂದೇ ಠಾಗುಣಿತದಲ್ಲಿನ ಲಾಭ. ಅಂತೆಯೇಡಾಗುಣಿತದಲ್ಲಿಯೂ ಆಂಗ್ಲದ ದಿನಡೇ’, ಹೆಣ್ಣು ಜಿಂಕೆ (ಡೋ), ಇನ್ನಿಲ್ಲದ ಪಕ್ಷಿ (ಡೋಡೋ) ಮತ್ತು ಸರ್ವಕಾಲದಲ್ಲಿ ಕಂಡುಬರುವ ಪಕ್ಷಿ (ಡೌ) ಕಂಡುಬರುತ್ತವೆ. ಕನ್ನಡಮೆನೆ ಟಠಡಢಣಂ ಎನಲದು ಸಟೆಯಂ ಗಡಾ; ಆಂಗ್ಲದೂಷಿತಂ ಗಡಾ!
    
ತಾ-ಥಾಗುಣಿತದಳು ಪದವಿಹೀನವು. ‘ದಾಗುಣಿತಕ್ಕೆ ದಾಂಗುಡಿ ಇಡುತ್ತಿದ್ದಂತೆಯೇದಾದಿಎದುರಾಗುತ್ತಾಳೆ. ಹಿಂದಿಯದೀದೀಯೂ ಎದುರುಗೊಳ್ಳುತ್ತಾಳೆ. ‘ಥೂಎಂದು ಉಗುಸಿಕೊಳ್ಳದೆಥೈಎಂದು ಸಾಗುತ್ತಾಧೀಶಕ್ತಿಯನ್ನ ಬಳಸಿ ಮುಂದೆ ಹೋದರೆನಾನಿನಿಮ್ಮನ್ನು ನೋಡಿಕೊಳ್ಳುತ್ತಾಳೆ. ‘ನಾನುಎನ್ನುವುದು ಕ್ರಮವಲ್ಲ, ‘ನೀನುಎನ್ನುವುದೇ ಕ್ರಮ ಎಂದುನಾಗುಣಿತತೋರಿಸಿಕೊಡುತ್ತದೆ.ಪಾಗುಣಿತಕನ್ನಡಗುಣಿತಗಳಲ್ಲೇ ಕೆಟ್ಟದ್ದನ್ನು ಹೊಂದಿದೆ. ಇಲ್ಲಿ ಆರಂಭದಲ್ಲೇಪಾಪಿಬಂದುಪೀಪೀಊದತೊಡಗುತ್ತಾನೆ. ಸುಮ್ಮನಿರಲು ಹಣ ಕೊಡಿ ಎನ್ನಲು ಆಂಗ್ಲದಲ್ಲಿಪೇಎಂದು ಕೇಳುತ್ತಾನೆ. ‘ಪೈಕೊಟ್ಟರೆ ಪೋಗುತ್ತಾನೆ. ‘ಬಾಗುಣಿತಕನ್ನಡದಸಂಸಾರಿ ಗುಣಿತ’. ಇದರಲ್ಲಿಬೀಬೀಬರುತ್ತಾಳೆ, ‘ಬೈಯುತ್ತಾಳೆ. ಇನ್ನೂ ಗಮನಿಸದೆ ಬೆಬೆಬೇ ಎನ್ನುತ್ತಿದ್ದರೆಬೌಎನ್ನುತ್ತಾಳೆ. ನಿಮ್ಮನ್ನು ಕಾಪಾಡಲು ಮುಂದಿನ ಮನೆಯಭಾಭಿಯೇ ಬರಬೇಕಾದೀತು.
ಮಾಗುಣಿತಕ್ಕೆ ಕರುಳಿನ ಸಂಬಂಧವಿದೆ. ‘ಮಮಾ’ ‘ಮಂಅಥವಮಾಮಿಎಂದು ಅಮ್ಮನನ್ನು ಇಂದಿನ ಮಕ್ಕಳು ಕರೆಯುವ ಪರಿ ಇಲ್ಲಿದೆ. ಆಂಗ್ಲದಹಾಟ್ ಸ್ಟಾರ್ಮಿಮೀ ಇಲ್ಲಿದ್ದಾಳೆ. ಮೇ ತಿಂಗಳು ಇಲ್ಲೇ ಸಿಗುತ್ತದೆ. ಮೇ ತಿಂಗಳ ರಜೆಯಲ್ಲಿ ತಿನ್ನಲುಮೋಮೋಸಹ ಇಲ್ಲೇ ಪಡೆಯಬಹುದು.
ಯಾಗುಣಿತವನ್ನುಬೀದಿಗುಣಿತಎಂದು ಕರೆಯಬಹುದು. ಎಲ್ಲೋ ನೋಡಿಕೊಂಡು ನಡೆಯುವವನನ್ನು ಯೇ, ಯೋ, ಯೌ ಎಂದು ಕರೆಯಲು ಇಲ್ಲಿನ ಅಕ್ಷರಗಳೇ ಸೂಕ್ತ. ಈಗಿನ ಮಕ್ಕಳುರುಚಿಕರವಾಗಿದೆಎಂದು ಹೇಳುವ ಪದಾಕ್ಷರವೂ ಇಲ್ಲೇ ದೊರಕುತ್ತದೆಯಂ!  

 ರಾಗುಣಿತ’  ಕನ್ನಡದಲ್ಲೇ ಅತ್ಯಂತ ಶ್ರೀಮಂತವಾದ ಗುಣಿತ. ಏಕೆಂದರೆ ಇದರಲ್ಲಿರೂಇದೆ! ಗಂಡನನ್ನು ನಿಂತಲ್ಲೇ ಅಲುಗಿಸುವ ಕೂಗಾದರೀಸಹ ಇಲ್ಲೇ ಇದೆ. ‘ರೇರಾಜ್ಯವೂ ಸೇರಿ, ‘ರೈವಂಶವನ್ನೂ ಹೊಂದಿರುವರಾಗುಣಿತಶ್ರೀಮಂತಿಕೆ ಹೆಚ್ಚಾದರೆ ಕುಡಿತ ದೂರವಿಲ್ಲ ಎನ್ನುವುದನ್ನು ಸೂಚಿಸಲೋ ಎಂಬಂತೆರಂಅನ್ನೂ ಹೊಂದಿದೆಲಾಗುಣಿತವುಲಾಲಿಯನ್ನು ಹೊಂದಿರುವುದರಿಂದ ಇದನ್ನುಜೋಗುಳಗುಣಿತಎನ್ನಬಹುದಾದರೂಲಾಡಸ್ ನಾಟ್ ಪರ್ಮಿಟ್ ಎನ್ನುವರಂತೆ ಕನ್ನಡದ ಲಾಯರ್ಗಳು. ಒಂದು ಕಾಲದಲ್ಲಿ ಇಂಗ್ಲೆಂಡಿನ ಬ್ಯಾಟ್ಸ್ಮನ್ಗಳ ಜೀವನವನ್ನು ಬರಬಾದ್ ಆಗಿಸಿದ ಲಿಲೀ (ಥಾಮ್ಸನ್ ಜೊತೆಗಾರ ಡೆನಿಸ್ ಲಿಲೀ) ಇಲ್ಲೇ ಸಿಗುತ್ತಾನೆ. ಜಗದ ಅತಿ ದೊಡ್ಡ ಸೂಪರ್ ಮಾರ್ಕೆಟ್ ಆದ ಲುಲೂಗೆ ನುಗ್ಗಿಜೋ ಭೀ ಚಾಹೆ ಲೇಲೇಎನ್ನುತಾ ಸಾಗಿ, ದುಡ್ಡು ಕೊಡಲು ಮರೆತು ಸಾಮಾನು ಹೊರತಂದರೆಲೇ...’ ಎಂದೋಲೋಎಂದೋ ನಿಮ್ಮ ಹಿಂದೆ ಜನ ಓಡಿಬರುವುದು ಖಚಿತ. ಹ್ಞಾಂ! ಹದಿಹರೆಯದವರಿಗಂತೂ ಇದು ಬಹಳ ಇಷ್ಟವಾದ ಗುಣಿತ - ಲೌ ಇದೆಯಲ್ಲ!

ವಾಗುಣಿತಹಿಂಗ್ಲಿಷರಿಗೇ ಹೆಚ್ಚು ಪ್ರಿಯವೆನಿಸೀತು. ಶಾಯರಿ ಮೆಚ್ಚಿದವರು ಹೇಳುವವಾವಾಹಿಂದಿಯದಾದರೆ, ‘ನಾನು ಎಂಬುದ ಬಿಟ್ಟುಎನ್ನಲು ಆಂಗ್ಲದಲ್ಲಿ ಬಳಸುವವೀ’, ಮಾರ್ಗಸೂಚಕವಾದವೇ’, ಪ್ರಶ್ನೆಗಳ ರಾಜನಾದ ವೈ, ಶಪಥ-ಸಂಕಷ್ಟ-ಸಾಲ ಮೂರೂ ಪದಗಳನ್ನು ಸೂಚಿಸುವ ಏಕೋಚ್ಚಾರವಾದ ವೋ, ಅಚ್ಚರಿಸೂಚಕವಾದವೌಗಳು ಕಂಡುಬರುವುದು ಸಾಲಿನಲ್ಲೇ.

ಮೃಚ್ಛಕಟಿಕಾದ ಶಕಾರನನ್ನು ನೆನಪಿಸುತ್ತಲೇ ಆರಂಭವಾಗುವಶಾಗುಣಿತವನ್ನುಸ್ತ್ರೀಗುಣಿತವೆನ್ನಬಹುದೇನೋ... ಬೆಳ್ಳನೆಯ, ಮುದ್ದಾದ ಮೊಲದ ಸಂಸ್ಕøತಪದವಾದಶಶವನ್ನು ಹೊಂದಿರುವುದಲ್ಲದೆ ಬ್ಲಾಂಡ್ ಗರ್ಲ್ಗಳ ಸೂಚಕವಾದಶಿಯನ್ನೂ, ಅವಳ ಹಿಂದೆಯೇ ಬಿದ್ದರೆ ತಿರಸ್ಕಾರಕ್ಕೆ ಗುರಿಯಾದಾಗ ಹೊರಡುವಶಿಶೀಯನ್ನೂ, ಅವಳ ಮೊಗ ರಕ್ತರಂಜಿತವಾದರೆ ಅದನ್ನು ಸೂಚಿಸುವಶೈಯನ್ನೂ, ಅವಳೊಪ್ಪದೆ ತಳ್ಳಿದರೆ ಅದನ್ನು ಸೂಚಿಸುವಶೌಅನ್ನೂ ಹೊಂದಿದೆ. ಶಾಗುಣಿತದ ತಮ್ಮಷಾಗುಣಿತವನ್ನು ಕನ್ನಡಮ್ಮನ ಪಾದಸೇವೆಗೆ ಮೀಸಲಾದ ಆಂಗ್ಲತಳಿ ಎನ್ನಬಹುದೆಂದು ಗುಣಿತದಲ್ಲಿ ಬರುವಷೂಸೂಚಿಸುತ್ತದೆ.

ಸಾಗುಣಿತವಂತೂಮಧುರಗುಣಿತವೇ ಸೈ. ಸಂಗೀತ ಕಲಿಯುವ ಎಲ್ಲರೂ ಆರಂಭಿಸುವ ....ಸಾ...ಗಳಲ್ಲಿ ಎರಡು ಅಕ್ಷರಗಳಾದ , ಸಾ ಗಳಿಂದಲೇ ಆರಂಭವಾಗುವ ಗುಣಿತ ಕನ್ನಡದಸಿಹಿ ಅಪಭ್ರಂಶವಾದಸೀಯನ್ನು ಹೊಂದಿರುವುದು ಗುಣಿತವನ್ನುರುಚಿಗುಣಿತಎನ್ನಲು ಪ್ರೇರೇಪಿಸುತ್ತದೆ. ‘ಠೂಬಿಟ್ಟ ಮಕ್ಕಳು ಮತ್ತೆ ಜೊತೆಗೂಡಲು ಬಳಸುವಸೇಇಲ್ಲಿರುವುದರಿಂದ ಇದುಸಂಧಾನಗುಣಿತವೂ ಹೌದು. ‘ಸರಿಎನ್ನಲು ಬಳಸುವಸೈಹೊಂದಿರುವ ಗುಣಿತಕ್ಕೆ ಆಂಗ್ಲದ ಛಾಯೆಯನ್ನು ಅಳವಡಿಸಿದರಂತೂ ಔದ್ಯೋಗಿಕವಾದಸಾ(ಗರಗಸ), ಸಾಗರಪದವಾದಸೀ’, ನುಡಿ ಎನ್ನಲು ಬಳಸುವಸೇ’, ನಿರಾಳದ ನಿಟ್ಟುಸಿರಿನಸೈ’, ಬಿತ್ತನೆಯನ್ನು ಸೂಚಿಸುವಸೋಗಳನ್ನು ಹೊಂದಿದ್ದು ಜೀವನದ ವಿವಿಧ ಮಜಲುಗಳ ದ್ಯೋತಕಗುಣಿತವಾಗಿದೆ.

ಹಾಗುಣಿತವನ್ನುಆನಂದಗುಣಿತಎನ್ನಬಹುದು. ನಗೆಯ ಹಹಾ ಇಂದಲೇ ಆರಂಬವಾಗಿ, ಹಿಹೀ ಎಂಬ ಹಲ್ಕಿರಿತದ ನಗೆಯತ್ತ ಸಾಗಿ ಹೆಹೇ ಎಂಬ ದೇಶಾವರಿ ನಗೆಯನ್ನು ದಾಟಿ ಹೊಹೋ ಎಂಬ ಅಟ್ಟಹಾಸದವರೆಗೆ ತಲುಪಿ, ಸಮ್ಮತಿ ಮತ್ತು ಕುಸುವ ಸೂಚಕವಾದಹೂಗಳನ್ನು ಹೊಂದಿದ್ದು, ಉದ್ದಕ್ಕೂ ಸಮ್ಮತಿ, ಸಂತೋಷಗಳನ್ನೇ ಬೆಳೆಸಿಕೊಂಡಿದೆ.

ಪಕ್ಕಾಕ್ಷರಿಗಳ ಸೊಗಡು ಹೀಗಿದ್ದರೆ, ‘ತಾಗುಣಿತಮತ್ತುಪಾಗುಣಿತಗಳು ತಮ್ಮೊಳಗೆ ಸಣ್ಣ ಕಥೆಗಳನ್ನೇ ಅಡಗಿಸಿಕೊಂಡಿವೆ. ಪದಗಳ ಸೃಷ್ಟಿ ಆರಂಭವಾಗುತ್ತಿದ್ದ ಕಾಲದಲ್ಲಿ ಹುಟ್ಟಿದ ಮಗುವನ್ನು ಮಗು ಎನ್ನುವುದರ ಬದಲು ತಾತ ಎನ್ನಬಹುದಾಗಿತ್ತು, ಜೀವನದ ಸಂಜೆಯಲ್ಲಿರುವ ವ್ಯಕ್ತಿಯನ್ನು ಮಗು ಅನ್ನಬಹುದಾಗಿತ್ತು. ಆದರೆ ವಯಸ್ಸಾದವನೇ ತಾತ ಎನ್ನಲು ಕಾರಣ ಬಲವತ್ತರವಾಗಿದೆ!
ಮನುಜ ಅಕ್ಷರಮಾಲೆ ಬರೆಯುವುದಕ್ಕೂ ಮುಂಚೆ ಹುಟ್ಟುತ್ತಿದ್ದ, ಸಾಯುತ್ತಿದ್ದ. ಅಂದಿನ ದಿನಗಳಲ್ಲಿ ಅಲ್ಪಪ್ರಾಣ, ಮಹಾಪ್ರಾಣಗಳ ಸದ್ಬಳಕೆ (ಇಂದಿನ ಹಲವಾರು ನಿರೂಪಕಿಯರಲ್ಲೂ ಅದು ಇಲ್ಲ ಬಿಡಿ) ಇರಲಿಲ್ಲ. ಹೀಗಾಗಿಕಾಗುಣಿತ ಬಳಕೆಯಲ್ಲಿಖಾಗುಣಿತ ಅಕ್ಷರಗಳೂ ಸೇರುತ್ತಿದ್ದ ಕಾಲ. ಸಾಯುತ್ತಿದ್ದ ಮನುಷ್ಯನಿಗೆ ದಿನಗಳಲ್ಲೂ ತಿಥಿ ಮಾಡುವುದಿತ್ತು. ಸತ್ತನಂತ ತಿಥಿಯಾದ್ದರಿಂದ, ತಿಥಿಗೆ ಮುಂಚಿನ ಪರಿಸ್ಥಿತಿಯನ್ನು ತಾತ ಎಂದು ಕರೆದರು! ಹಿನ್ನೆಲೆಯಲ್ಲಿ ಈಗತಾಗುಣಿತನೋಡಿ:  ತಾತ ಹೋದ; ತಿತಿ(ಥಿ) ಆಯಿತು. ತಾತ ಬಿಟ್ಟಿರುವ ಆಸ್ತಿಗಾಗಿ ಜಗಳ ಆರಂಭವಾಗಿ ಅಣ್ಣತಮ್ಮಂದಿರು, ದಾಯಾದಿಗಳುತೂತೂಅಥವಥೂಥೂಎಂದು ಉಗಿದಾಡಿಕೊಂಡರು. ‘ತೆಗೆ ಲೆಕ್ಕಎನ್ನುತ್ತಾ ಹರಿಹಾಯತೊಡಗಿ, ಏದುಸಿರು ಬಿಡುತ್ತಾತೆಗಿಎನ್ನುವಲ್ಲಿನಗಿಹೇಳಲೂ ಆಗದಷ್ಟು ಏದುತ್ತಾತೆ...ತೇಎನ್ನುತ್ತಾತೈಅಥವಥೈಎಂದು ಕುಣಿಯತೊಡಗಿದರು. ರಂಪವನ್ನು ನೋಡಲಾಗದ ಕೆಲವು ಹಿರಿಯರು ಎಲ್ಲರನ್ನೂ ಸಮಾಧಾನಗೊಳಿಸಿತೊ(ಗೊ)... ತೋ(ತೊಗೊಳೋ ಲೇ ಎಂಬ ದೀರ್ಘದ ಹ್ರಸ್ವ)’ ಎನ್ನುತ್ತಾ ಆಸ್ತಿ ಹಂಚಿದರು ಎಂಬುದನ್ನುತತಾತಿತೀತುತೂತೇತೈತೊತೋಸೂಚಿಸುತ್ತದೆ.

ಪಾಗುಣಿತನಂತರದಲ್ಲಿ ಬರುವುದಲ್ಲವೇ... ಅದು ಇಂದಿನ ಕಂಗ್ಲಿಷ್ ಕಥೆಯನ್ನು ಹೇಳುತ್ತದೆ. ಮದುವೆಮನೆ... ಪಪಾ (ಅಥವ ಪಪ್ಪಾ) ಕೂತಿದ್ದನೆ; ಮಗು ಬಂದುಪಪಾ ಪಿಪೀಎನ್ನುತ್ತಾ ಪೀಪಿ ಕೊಡಿಸಲು ಪೀಡಿಸಿತು. ಕಂಗ್ಲೀಷಪ್ಪ ಮಗುವಿನ ಬೇಡಿಕೆಗೆಠಿooh ಠಿooh’ (ಪುಪೂ...) ಎಂದ. ಮಗು ಹಠ ಬಿಡದೆಪೇಎಂದಿತು. ಆಗ ಅಪ್ಪನಿಗೆ ಮಗನತ್ತ ಗಮನ ಬಂದುಏನು ಬೇಕೋ?’ ಎಂದ. ಮಗಪೈಎಂದ. ತಿಂಗಳ ಕೊನೆ, ಮದುವೆಮನೆಯ ಉಡುಗೊರೆಯ ಖರ್ಚಿನಿಂದ ಹೈರಾಣಾಗಿದ್ದ ಅಪ್ಪಪೊಪೋ’ (ಹೋಗುಹೋಗೆಲೋ) ಎಂದ. ಮಗ ರಾಗ ಸರಾಗದಲ್ಲಿ ಅಳಲಾರಂಭಿಸಿದ. ಕಂಗ್ಲೀಷಪ್ಪ ಮಗನಿಗೆಪೌಎಂದು ಗುದ್ದಿದ. ಅಳು ಜೋರಾಗಿ ಬಿಕ್ಕಳಿಸುತ್ತಾ ಮಗಮಮ್ಮಾಎನ್ನಲು ಯತ್ನಿಸಿದರೂ ಅವನ ಬಾಯಿಯಿಂದಪಂಪಃಎಂಬ ದನಿಯೇ ಹೊರಟಿತು ಎಂಬುದನ್ನೇಪಪಾಪಿಪೀಪುಪೂಪೆಪೇಪೈಪೊಪೋಪೌಪಂಪಃಸೂಚಿಸುತ್ತದೆ.

ಕಚಟತಪ ವರ್ಗಗಳನ್ನು ಒಂದರ ಕೆಳಗೊಂದು ಜೋಡಿಸಿದಂತೆಕಾಗುಣಿತದಿಂದಹಾಗುಣಿತದವರೆಗೆ ಒಂದರ ಕೆಳಗೊಂದನ್ನು ಜೋಡಿಸಿದಾಗ ಕೇವಲಸಾ-ಹಾಗುಣಿತಗಳಲ್ಲಿಪರಸ್ಪರ ಹೊಂದಾಣಿಕೆಇರುವ ಎರಡು ಜೋಡಿಗಳು ಕಂಡುಬರುತ್ತವೆ. ಮೇಲಿನಿಂದ ಕೆಳಕ್ಕೆಸಹಆಗಿ, ಕೆಳಗಿನಿಂದ ಮೇಲಕ್ಕೆಹಸ’ (ಹಳ್ಳಿಭಾಷೆಯ ಹಸು) ಆದರೆ, ‘ಸಿಹಿಮತ್ತುಹಿಸಿಗಳೂ ಇದೇ ವರ್ಗಕ್ಕೆ ಸೇರುತ್ತವೆ. ಇವುಗಳ ಹೊರತಾಗಿ ಹೀಗಿರುವಅನ್ಯೋನ್ಯಪದಗಳ ಜೋಡಿ ಎಲ್ಲಿಯೂ ಕಂಡುಬರುವುದಿಲ್ಲ.

ಖಿheಡಿe ಪದದ ಒಂದೊಂದೇ ಅಕ್ಷರಗಳನ್ನು ತೆಗೆಯುತ್ತಾ ಹೋದಂತೆ ಕೊನೆಯಲ್ಲಿ ‘e’ ಮಾತ್ರ ಉಳಿದರೂ ಅದಕ್ಕೂನಿಷ್ಕ್ರಮಣಎಂಬ ಅರ್ಥವಿದ್ದು, ಹೀಗೆ ಪದ ಕ್ಷೀಣಿಸಿ ಅಕ್ಷರವಾಗಿ ತಲುಪಿದರೂ ಅರ್ಥವನ್ನು ಹೊಂದುವಂತಹ ಪದಗಳನ್ನುಪಿರಮಿಡ್ಪದಗಳು ಎನ್ನುತ್ತಾರೆ. ಕನ್ನಡದಲ್ಲಿಸಾಗರ’, ‘ಶ್ರೀನಿವಾಸ’, ‘ಯಜಮಾನಮುಂತಾದ ಪದಗಳು ಮೊದಲನೆಯದರಿಂದ ಒಂದೊಂದೇ ಅಕ್ಷರ ಕಳೆದರೂ ವಿವಿಧ ಅರ್ಥಗಳನ್ನು ನೀಡುತ್ತವೆ. ಇವನ್ನು ಕನ್ನಡದಲ್ಲಿಗೋಪುರಪದಗಳು ಎನ್ನಬಹುದು.

ಆಂಗ್ಲದ ಮತ್ತೊಂದು ವಿಶೇಷವೆಂದರೆಕಾಂಗರೂಪದಗಳು. ‘ಅಪ್ರೋಪ್ರಿಯೇಟ್ಎಂಬ ಪದದಲ್ಲೇ ಅದೇ ಅರ್ಥವನ್ನು ಇಟ್ಟುಕೊಂಡಿರುವಆಪ್ಟ್ಪದ ಅಡಗಿದೆ. ಕನ್ನಡದಲ್ಲಿಶ್ರೀಲಕ್ಷ್ಮಿಯಲ್ಲೇಶ್ರೀಅಡಗಿದ್ದಾಳಲ್ಲಾ... ಶ್ರೀ ಎಂದರೆ ಲಕ್ಷ್ಮೀ ಎಂದೇ ಅರ್ಥ. ಲೋಕನಾಥ ಎಂದರೆ ವಿಷ್ಣು ಅಥವ ಬ್ರಹ್ಮ; ಪದದಲ್ಲಿನಅಕ್ಷರವೂ ಅವೇ ಅರ್ಥಗಳನ್ನು ಹೊಂದಿದೆ. ‘’, ‘’, ‘’, ‘ಅಕ್ಷರಗಳಿಗೆ ಇರುವ ವಿಶೇಷ ಅರ್ಥಗಳನ್ನೇ ನೀಡುವಂತಹ ಅನೇಕ ಪದಗಳಿವೆ. ಇವೆಲ್ಲವೂ ಕನ್ನಡದಕಾಂಗರೂಪದಗಳೇ. ಹ್ಞಾಂ! ‘ಸುಕುಮಾರಿಎನ್ನುವ ಪದದಲ್ಲಿಮಾರಿಇದೆ, ಅದೂ ಕಾಂಗರೂ ಪದ ಎಂದು ಹೇಳಿ ಸಂಟಕ್ಕೊಳಗಾಗೀರಿ ಜೋಕೆ... ‘ಎಂದರೆ ಯಮ ಎಂಬ ಅರ್ಥವೂ ಇದ್ದು ಸಂಕಟ ಯಮಸಂಕಟವಾದೀತು!

ಎರಡು ವಿರುದ್ಧಾರ್ಥದ ಪದಗಳು ಸೇರಿ ಇನ್ನೊಂದು ಅರ್ಥವನ್ನು ಕೊಡುವ ಪದವಾದಾಗ ಅದನ್ನುಆಕ್ಸಿಮೊರೋನ್ಎನ್ನುತ್ತೇವೆ. ‘ತೀರಾ ಕಡಿಮೆ’, ‘ಹಿಡಿದುಬಿಡು’, ‘ಪರಮಾಣುಮುಂತಾದವನ್ನೇ ನೋಡಿ... ತೀರಾ ಎಂದರೆ ಹೆಚ್ಚು ಎಂದಾಯಿತು. ಕಡಿಮೆ ಎಂದರೆ ಸ್ವಲ್ಪ. ತೀರಾ ಕಡಿಮೆ ಎಂದರೆ ಕಡಿಮೆಯಲ್ಲಿ ಕಡಿಮೆ ಎಂದಾಯಿತು. ‘ಪರಮಾಣುವಿನಲ್ಲಿನಪರಮಉತ್ತುಂಗವನ್ನು ಸೂಚಿಸಿ, ‘ಅಣುತಳವನ್ನು ಸೂಚಿಸಿದರೆಪರಮಾಣುಅನ್ಯಾರ್ಥವನ್ನೇ ಕೊಡುತ್ತದೆ. ಅತ್ತ ಸಂಖ್ಯೆ, ಇತ್ತ ಲಾಂಛನ ಕೂಡಿ ಒಂದು ನಾಣ್ಯವಾಗುವಂತೆಯೇ ಇವೂ ಇರುವುದರಿಂದ ಇವುಗಳನ್ನುನಾಣ್ಯಪದಗಳುಎನ್ನಬಹುದೇನೋ.

ಆಂಗ್ಲದಲ್ಲಿ ಅದೇ ಅಕ್ಷರಗಳು ಸ್ಥಾನಪಲ್ಲಟವಾದಾಗ ಸಂಭವಿಸುವ ಪದಗಳನ್ನುಅನಾಗ್ರಾಮ್ಎನ್ನುತ್ತಾರೆ. ಕನ್ನಡದಲ್ಲಿಯೂ ಇಂತಹ ಪದಗಳ ಬರವಿಲ್ಲ. ಈಶ್ವರನ ಪಂಗಡ ಉರುಫ್ಹರಗಣವ್ಯತ್ಯಾಸವಾದರೆಹಗರಣಆಗುತ್ತದೆ. ಪರ್ಮಿಷನ್ ಉರುಫ್ರಹದಾರಿದೂರವಾಗಿಹರದಾರಿಆಗುತ್ತದೆ, ಆರೊಗ್ಯಕರತರಕಾರಿಬದಲಾಗಿತಕರಾರಿಆಗಿಬಿಡುತ್ತಾನೆ!
ಸಂಸ್ಕøತದ ಸಭಂಗ, ಅಭಂಗ, ಆಂಗ್ಲದ ಮತ್ತಷ್ಟು ವಿಧಾನಗಳು ಹಾಗೂ ಒತ್ತಕ್ಷರಪಲ್ಲಟ ಮತ್ತು ವಿಸರ್ಗಪಲ್ಲಟಗಳಿಂದ ಆಗುವ ವೈಶಿಷ್ಟ್ಯಗಳನ್ನು ಬಳಸಿದರೆ ಕನ್ನಡದ ಮತ್ತಷ್ಟು ಸಿರಿವಂತಿಕೆ ಕಂಡುಬರುತ್ತದೆ.

ಕನ್ನಡ ಮತ್ತು ಸಂಸ್ಕೃತಗಳಿಗೆ ಮಾತ್ರ ವಿಶೇಷವಾದ ಪದವೊಂದಿದೆ. ಆ ಪದವೇ ಜೀವನ. ಪದ ಇಡಿಯಾಗಿ ಮತ್ತು ಬಿಡಿಯಾಗಿ ಒಂದೇ ಅರ್ಥ ಕೊಡುತ್ತದೆ. ಜೀವ ಎಂದರೂ ನೀರು; ವನ ಎಂದರೂ ನೀರು; ಜೀವನ ಎಂದರೂ ನೀರು. ಪ್ರಾಯಶಃ ಇಂತಹ ಪದಗಳು ಜಗತ್ತಿನ ಬೇರಾವ ದೇಶಗಳಲ್ಲಿಯೂ ಸಿಗಲಾರವು.

ಹೋ! ‘ಒಂದು ಪುಟದ ಲೇಖನಎಂದು ಣಾಣಿ... (ಕ್ಷಮಿಸಿ... ಪಕ್ಕಾಕ್ಷರಿಗಳ ಗುಂಗಿನಲ್ಲಿನಾಣಿಹೋಗಿಣಾಣಿಆಗಿಬಿಟ್ಟರು....) ಹೇಳಿದ್ದರು.  ಲೇಖನ ದೀರ್ಫವಾಯಿತಲ್ಲವೆ. ಮುಗಿಸಬೇಕು... ಆದರೆಹೌ?’

Comments

  1. ರಾಮನಾಥ್ ಲೇಖನ ಸಿಖ್ಖಾಪಟ್ಟೆ ಚೆನ್ನಾಗಿದೆ
    ಈಥರ ಬರೆಯೋಕ್ಕೆ ತಮ್ಮಿಂದ ಮಾತ್ರ ಸಾಧ್ಯ
    ಹಾಸ್ಯಕ್ಕೆ ಈಪಾಟಿ ಪವರ್ ಇದೆ ಅಂತ ಗೊತ್ತಾಗಕ್ಕೆ ಈ ಲೇಖನ ಓದಲೇ ಬೇಕು
    My favorite line is whole article
    ಯಪ್ಪಾ! ಯಪ್ಪಾ! ನಗು ನಿಲ್ಲಿಸಲೇ ಆಗುತ್ತಿಲ್ಲ, ಹಾಸ್ಯ ಲೇಖನ ಎಂದರೆ ಅಲ್ಲಲ್ಲಿ ಹಾಸ್ಯ ಕಾಣುತ್ತೇವೆ. ಆದರೆ ಈ ಲೇಖನ ಲೇಖನದುದ್ದಕ್ಕೂ ಹಾಸ್ಯ.ಅದ್ಭುತ ಪದ ಸೇರ್ಪಡೆಗಳು. ಪ್ರಾಣಪ್ರತಿಷ್ಠಾಪನೆಯ ಮಂತ್ರದಲ್ಲಿ ಬರುವ ಯರಲವಸಶಾನೂ ಸೇರಿಸಬಹುದಿತ್ತು.

    ReplyDelete
    Replies
    1. ಇನ್ನೂ ಆಳಕ್ಕಿಳಿದರೆ ಮತ್ತಷ್ಟು ರತ್ನಗಳು ದೊರೆತಾವು. ನಾವು ಕನ್ನಡಿಗರು ಅಪ್ಪಟ ಸೋಮಾರಿಗಳು (ನಿಮ್ಮನ್ನು ಸೇರಿಸುವಂತಿಲ್ಲ ಈ ಗಣಕ್ಕೆ; ಜಪಾನಿ ಸಂಸ್ಥೆಯವರ ಕೆಳಗೆ ಕೆಲಸ ಮಾಡಿ ಚುರುಕಾದುದರಿಂದ ನೀವು 'ಕುಲಗೆಟ್ಟಿರಿ' ಎನ್ನಬಹುದು). ಆದಾಗ ಹುಡುಕಿ ಮತ್ತಷ್ಟು ಹೆಕ್ಕುತ್ತೇನೆ. ನಿಮ್ಮ ಪ್ರತಿಕ್ರಿಯೆ ಎಂದಿನಂತೆ ಸಂತೋಷದಾಯಕವೇ

      Delete
  2. Happened to read both articles today. last month and this totally different approach but lots of humor. This one is hilarious. What an imagination and penned down so nicely. Have become your fan.

    ReplyDelete

Post a Comment