ಸಿಡ್ನಿ ಕನ್ನಡ ಶಾಲೆ ರಾಜ್ಯೋತ್ಸವ

ಸಿಡ್ನಿ ಕನ್ನಡ ಶಾಲೆ ರಾಜ್ಯೋತ್ಸವ
ವರದಿ -  ಕನಕಾಪುರ ನಾರಾಯಣ

ನವೆಂಬರ್ ತಿಂಗಳು ಬಂತೆಂದರೆ ಕನ್ನಡಿಗರಿಗೆ ಸಂಭ್ರಮ. ಕರ್ನಾಟಕದಲ್ಲಂತೂ ಎಲ್ಲೆಲ್ಲೂ ಆಚರಣೆ ಸಂಭ್ರಮ. ಮೈಕು, ಹೂ ಹಾರ, ಹಳದಿ ಕೆಂಪು ಬಾವುಟ, ಟಿವಿಯಲ್ಲಿ ವಿಶೇಷ ಕಾರ್ಯಕ್ರಮಗಳು. ಸಣ್ಣ ಸಣ್ಣ ನಗರಗಳಲ್ಲಿ ಎದ್ದು ನಿಲುವ ಶಾಮಿಯಾನಗಳು. ಆರ್ಕೆಷ್ಟ್ರಾಗಳು, ಹಾಸ್ಯಕಾರ್ಯಕ್ರಮ, ನಾಟಕ, ಸಂಗೀತ ಸಂಜೆಗಳು ಇನ್ನೂ ಅನೇಕ ಆಯೋಜಿತ ಕಾರ್ಯಕ್ರಮಗಳು. ಎಲ್ಲಿ ಹೋಗುವುದು ಎನ್ನುವುದೇ ಗೊಂದಲ.

ನಮ್ಮ ಸಿಡ್ನಿ ಕನ್ನಡ ಶಾಲೆಯ ಎರಡೂ  ಶಾಖೆಗಳಲ್ಲಿಯೂ ಪ್ರತ್ಯೇಕವಾಗಿ ನಡೆದ ವಿಭಿನ್ನ ರೀತಿಯ ರಾಜ್ಯೋತ್ಸವ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು.ನವೆಂಬರ್ ೧೭ರಂದು ತೂಂಗಾಬ್ಬಿ ಶಾಲೆಯ ಮಕ್ಕಳು ಮತ್ತು ಪೋಷಕರೂ ಹಾಗೂ ಕೆಲವು ಅತಿಥಿಗಳನನ್ನು ಒಳಗೊಂಡು ಆವರಣ ಕಿಕ್ಕಿರಿದು ತುಂಬಿತ್ತು. ವಾಟಲ್  ಗ್ರೋವ್ (೨೩ರಂದು) ಶಾಖೆಯಲ್ಲೂ ಸಹ ನಿರೀಕ್ಷೆಗೂ ಮೀರಿ ಜನ ನೆರೆದಿದ್ದರು. ಎರಡೂ ಕಡೆ ಒಂದೇ ಥರಡಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲಿಗೆ ಮಕ್ಕಳಿಗಾಗಿ ೩೦ ನಿಮಿಷದ ವಿಡಿಯೋ ಪ್ರದರ್ಶನ. ಮೈಸೂರು ಮೃಗಾಲಯದ ಬಗ್ಗೆ ಉತ್ತಮ ದರ್ಜೆಯ ಸಾಕ್ಷಚಿತ್ರ ಪ್ರದರ್ಶನ ಮಕ್ಕಳಿಗೆ ಮನರಂಜನೆ, ಮಾಹಿತಿ ಹಾಗೂ ಪ್ರಾಣಿಗಳ ತುಂಟಾಟದ  ಹಾಸ್ಯ ಇವುಗಳಿಂದ ದೊಡ್ಡವರೂ ಕೂಡ ಕುತೂಹಲವಾಗಿ ನೋಡುವಂತಿತ್ತು.ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಆರಂಭವಾದ ಮೃಗಾಲಯದ ಇತಿಹಾಸ, ಪ್ರಾಣಿಗಳ ರಕ್ಷಣೆ, ರೋಗಗಳಿಂದ ಸಂರಕ್ಷಣೆ, ಪ್ರಾಣಿಗಳ ಮೂಲ ದೇಶ, ಅವುಗಳಿಗೆ ಸರಬರಾಜು ಮಾಡುವ ಆಹಾರ,ಪ್ರಾಣಿಗಳ ಮಲಗಳಿಂದ ತಯಾರಿಸುವ ಗೊಬ್ಬರ, ಪ್ರೇಕ್ಷಕರ ಸಂಖ್ಯೆ ಹೀಗೆ ಹಲವಾರು ವಿಷಯಗಳು ಎಲ್ಲರೂ ತಿಳಿಯುವಂತಾಯಿತು.   



ಆಶ್ಚರ್ಯವೆಂದರೆ ಎರಡೂ ಶಾಖೆಗಳಲ್ಲಿ ಬೇರೆ ಬೇರೆ ನುರಿತ ಗಾಯಕರಿಂದ ಒಂದೇ ಹಾಡು ಹಾಡಲಾಯಿತು. ಆಯೋಜಕರಿಗೂ ಅದು ಕಡೆಯ ಘಳಿಗೆಯವರೆಗೂ ತಿಳಿದಿರಲಿಲ್ಲ. ಕುವೆಂಪು ವಿರಚಿತ ಇಳಿದುಬಾ ತಾಯಿ ಹಾಡು. ಶ್ರೀಮತಿ ಮಹಾಲಕ್ಷ್ಮಿ ಕೇಶವ ಟೋನ್ಗಬ್ಬಿಯಲ್ಲಿ ಹಾಡಿದರೆ ವಾಟಲ್ ಗ್ರೋವ ಶಾಖೆಯಲ್ಲಿ ಶ್ರೀಮತಿ ಚೈತ್ರ ನಾಗರಾಜ್ ಅದೇ ಹಾಡನ್ನು ಅಷ್ಟೇ ಸೊಗಸಾಗಿ ಹಾಡಿದರು. ಶ್ರೀಮತಿ ಮಹಾಲಕ್ಷ್ಮಿ ಕೇಶವ  ಮತ್ತೊಂದು ಹಾಡನ್ನು ಕ್ಯಾರೆಯೋಕೆ ಜೊತೆಗೂಡಿ ಹಾಡಿ ಅಲ್ಲಿದ್ದವರ ಚಪ್ಪಾಳೆ ಮೂಲಕ ಮನಗೆದ್ದರು.


ಈ ಕಾರ್ಯಕ್ರಮದಲ್ಲಿ ಅತಿ ಲವಲವಿಕೆ ಉತ್ಸಾಹ ತುಂಬಿ ಎಲ್ಲರೂ ಭಾಗವಹಿಸಿದ್ದು ೨೦ಪ್ರಶ್ನೆಗಳ ಕ್ವಿಝ್. ಶಾಲೆಯ ಶಿಕ್ಷಕರಾದ ಶ್ರೀಮತಿ ರಮ್ಯಾ ಮತ್ತು ಸುಮಾ ಅವರು ಅತಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದರು.ತದನಂತರ ಬಿಸಿ ಬಿಸಿ ಬೋಂಡಾ ಮತ್ತು ಕ್ಯಾರೆಟ್ ಪಾಯಸ ಸಮಯಕ್ಕೆ ಸರಿಯಾಗಿ ಹೇಳಿ ಮಾಡಿಸಿದಹಾಗೆ ಇತ್ತು.



Comments

  1. ಅಲ್ಲೂ ಕ್ವಿಜ್ ಇತ್ತಾ������ ಸೂಪರ್...������

    ReplyDelete
    Replies
    1. ಹೂ ಸೀತು, ೨೦ ಪ್ರಶ್ನೆಗಳು / ಮಲ್ಟಿಪಲ್ ಚಾಯ್ಸ್ ಇತ್ತು

      Delete

Post a Comment