ನಿಸಾರ್ ಅಹ್ಮದ್

ಪ್ರೊಫೆಸ್ಸರ್ ಕೊಕ್ಕರೆ ಹೊಸಹಳ್ಳಿ ಶೇಖರ್ ನಿಸಾರ್ ಅಹ್ಮದ್ (೫/೨/೧೯೩೬)


ಇವರ ಮಾತೃಭಾಷೆ  ಕನ್ನಡ ಅಲ್ಲ 

ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು - 4

ಲೇಖನ - ರಾಮಮೂರ್ತಿ, ಬೇಸಿಂಗ್ ಸ್ಟೋಕ್

ಕರ್ನಾಟಕದಲ್ಲಿ ಮಾತ್ರವೋ ಅಥವಾ ಹೊರಗೂ ಈ ವಿಚಾರ ಬಹಳ ಸಾಮಾನ್ಯವೋ ಗೊತ್ತಿಲ್ಲ.  ಉದಾಹರಣೆಗೆ,  ತಮಿಳು ನಾಡಿನಲ್ಲಿ  ನೆಲಸಿರುವ  ಕನ್ನಡ ದವರು  ತಮಿಳಿನಲ್ಲಿನಲ್ಲಿ ಬರೆಯುವ ಪ್ರಸಿದ್ಧ ಲೇಖಕರು ಇದ್ದಾರೋ  ನನಗೆ ಗೊತ್ತಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಈ  ವಿಚಾರ ನಮ್ಮ ಮನಸ್ಸಿಗೂ  ಬರುವುದಿಲ್ಲ  ಅಲ್ಲವೇ?  ಇಲ್ಲಿ ಇಂತಹ ಕೆಲವರನ್ನು  ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.


ಜೋಗಿನಸಿರಿ ಬೆಳಕಿನಲ್ಲಿ ..... ಹಾಡನ್ನು ನಾವೇಲ್ಲರೂ  ಕೇಳಿದ್ದೇವೆ ಮತ್ತು ಹಾಡಲೂ ಪ್ರಯತ್ನ ಪಟ್ಟಿರಬೇಕು ಅಲ್ಲವೇ


ಕನ್ನಡಿಗರಿಗೆ ನಿಸಾರ್ ಅಹ್ಮದ್ ಅವರ  ಪರಿಚಯ ಮಾಡಿಕೊಡುವುದು ಅಗತ್ಯವಿಲ್ಲ  ೨೦೦೮ ನಲ್ಲಿ ನಡೆದ ಕನ್ನಡ ಬಳಗದ ರಜತಮಹೋತ್ಸವದ  ಮುಖ್ಯ ಅಥಿತಿಗಳಾಗಿ ಬಂದು ನಮ್ಮಗಳ ಜೊತೆ ಸುಮಾರು ಒಂದು ತಿಂಗಳು ಕಳೆದಿದ್ದು ನಮ್ಮ ಭಾಗ್ಯವೇ ಸರಿ.  ಹುಟ್ಟಿದ ಊರು ದೇವನಹಳ್ಳಿ, ತಂದೆ ಹೈದರ್ ಸ್ಯಾನಿಟರಿ ಇನ್ಸ್ಪಪೆಕ್ಟರ್. ನಿಸಾರ್ ಅಹ್ಮದ್ ಅವರು ಭೂವಿಜ್ಞಾನದಲ್ಲಿ ಪದವಿ ಪಡೆದು ಗುಲ್ಬರ್ಗ ದಲ್ಲಿ ಕೆಲಸ ಶುರುಮಾಡಿದರು. ಆಗಲೇ ಇವರು  ಪದ್ಯಗಳನ್ನು ಬರೆದು ಕುವೆಂಪು ಅವರ ಗಮನಕ್ಕೆ ಬಂದಿದ್ದರು .   ೧೯೫೯ ರಲ್ಲಿ ನಡೆದ ಮೈಸೂರು ದಸರಾ ಹಬ್ಬದ ಕವಿ ಸಮ್ಮೇಳನಕ್ಕೆ ಭಾಗವಾಸಿಸುವುದಕ್ಕೆ  ಕುವೆಂಪು ಅವರಿಂದ ಅಹ್ವಾನ ಸಹ ಬಂತು. 

ನಂತರ ಬೆಂಗಳೂರು ಸೆಂಟ್ರಲ್ ಕಾಲೇಜ್ ಮತ್ತು ಚಿತ್ರದುರ್ಗ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಮಾಡಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ೧೯೬೭-೧೯೭೮ ಭೂವಿಜ್ಞಾನದ ಪ್ರಾಧ್ಯಾಪಕ ರಾದರು. ಅವರ ಪ್ರಸಿದ್ದವಾದ ಪದ್ಯ ಸಂಕಲನನಿತ್ಯೋತ್ಸವ  ರಚನೆ ಇಲ್ಲೇ ಮತ್ತು ನಿತ್ಯೋತ್ಸವ ಕವಿ ಅಂತಲೇ ಹೆಸರುಬಂತು. ೧೯೭೮ ನಲ್ಲಿ ಅನಂತಸ್ವಾಮಿ ಅವರು ಈ ಹಾಡುಗಳ ಕಸ್ಸೆಟ್ ತಂದ ಮೇಲೆ  ಇವರ ಹೆಸರು  ಇಡೀ  ಕರ್ನಾಟಕದ ದಲ್ಲಿ ಹರಡಿತು ನಿಸಾರ್ ಬರೆದಿರುವ ಪದ್ಯಗಳು ಅನೇಕ. "ಬರೀ ಮರ್ಯಾದಸ್ಥರೇ " ಕವನ ಚಿಲಿ ದೇಶದ ಕವಿ ಪ್ಯಾಬ್ಲೋ ನೆರೂಡ ಬರೆದರ ಅನುವಾದ. "ಕುರಿಗಳು ಸಾರ್ ಕುರಿಗಳು" ರಾಜಕಾರಣಿ ಮೇಲೆ ಮಾಡಿದ ಹಾಸ್ಯ, ಕವಿ ಇಕ್ಬಾಲ್ ಅವರ  saare jahaan se achha "ಭಾರತವು ನಮ್ಮ ದೇಶ" , "ಬೆಣ್ಣೆ ಕದ್ದ ನಮ್ಮ ಕೃಷ್ಣ" ಮುಂತಾದವು ಇವರ ಬಹುಮುಖಿ ಪ್ರತಿಭೆ. ಇವರು ಅನೇಕ ಷೇಕ್ಸ್ ಪಿಯರ್ ನಾಟಕಗಳನ್ನ ಕನ್ನಡಕ್ಕೆ ಅನುವಾದ ಮಾಡಿದ್ದಾರೆ  ನಿಮ್ಮೊಡನಿದ್ದು ನಿಮಂತಾಗದೆ ಎಂಬ ಕಾವ್ಯ ತಮ್ಮ ಜಾತ್ಯಾತೀಯ ಮೂಲವನ್ನು ಉಳಿಸಿಕೊಳ್ಳುವ   ಉಭಯಸಂಕಟ  ಸ್ವಲ್ಪ ನೋವಿನಿಂದಲೇ ಬರೆದಿದ್ದು ಅಂತ ಕೆಲವು ವಿಮರ್ಶಕರ ಅಭಿಪ್ರಾಯ. 


ಇವರ ರಾಮಾಯಣ, ಮಹಾಭಾರತ ಮತ್ತು ಗೀತೆ ಮೇಲೆ ಅನೇಕ ವ್ಯಾಕ್ಯಾನ ಗಳನ್ನೂ ಮಾಡಿದ್ದಾರೆ ಆದರೆ ಇವರು ನಿಷ್ಠ ಮುಸಲಮಾನರೂ  ಹೌದು. ಬೆಂಗಳೂರಿನ ಗಾಂಧಿ ಬಜಾರ್ ಇವರ ನೆಚ್ಚಿನ ರಸ್ತೆ. ಅಲ್ಲಿರುವ ವಿದ್ಯಾರ್ಥಿ ಭವನ್ ನಲ್ಲಿ ಇವರ ಅಚ್ಚುಮೆಚ್ಚಿನ ದೋಸೆ ತಿನ್ನುವ ಸ್ಥಳ. ನೀವು ಮುಂದಿನ ಜಲ್ಮದಲ್ಲಿ ಎಲ್ಲಿ ಹುಟ್ಟಬೇಕು ಅನ್ನುವ ಪ್ರಶ್ನೆಗೆ , ನಿಸಾರ್ , ಭಾರತದಲ್ಲಿ ಬೆಂಗಳೂರಿನಲ್ಲಿ ಮತ್ತು ಗಾಂಧಿ ಬಜಾರ್ ಹತ್ತಿರ ಅಂತ ಹೇಳಿದರಂತೆ !!
ಶಿವಮೊಗ್ಗ ದಲ್ಲಿ ನಡೆದ ೭೩ ರನೇ  ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಬಹಳ ಯೆಶಸ್ವಿಯಾಗಿ ನಡೆಸಿ ಕೊಟ್ಟರು. ಈ ಸಮಯದಲ್ಲಿ ದೊಡ್ಡ ರಂಗೇ ಗೌಡರ ಸಂಪಾದಕೀಯದಲ್ಲಿ ಹೊರೆ ತಂದ  ಸರಸ್ವತಿ ಸಿರಿ ಯಲ್ಲಿ ಅನೇಕರು ನಿಸಾರ್ ಅವರ ಬರಹದ ಮೇಲೆ ಪ್ರಸ್ತಾವನೆ ಮಾಡಿದ್ದಾರೆ. ನಾನು ಕನ್ನಡಕ್ಕೆ ಮಾಡಿರುವುದು ಅಳಿಲ ಸೇವೆ ಆದರೆ ಕನ್ನಡಿಗರು  ನನಗೆ ತೋರಿಸುವ ಪ್ರೇಮ ಅಪಾರ ಎಂದು ಹೇಳಿದ್ದಾರೆ
.


ಇವರ ಪ್ರಶಸ್ತಿಗಳು ಅನೇಕ, ೨೦೧೭ ದಸರ ಹಬ್ಬದ ಉದ್ಘಾಟನೆ ಇವರು ನೆರವೇರಿಸಿದರು, ೨೦೦೩ ನಲ್ಲಿ ನಾಡೋಜ, ೨೦೦೮ ನಲ್ಲಿ ಪದ್ಮಶ್ರೀ ಮತ್ತು ಪಂಪ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲನದ ಡಾಕ್ಟ್ರೇಟ್ ಪದವಿ ಬಂದಿದೆಚಳಿ ಇರಲಿ ಬಿಸಿಲು ಇರಲಿ ಯಾವಾಗಲೂ ಸೂಟ್ ಮತ್ತು ಟೈ ಧರಿಸುವ  ನಿಸಾರ್ ನಮ್ಮೆಲ್ಲ  ರ ನೆಚ್ಚಿನ ಕವಿಗಳು ಎನ್ನುವುದರಲ್ಲಿ ಸಂದೇಹ ಇಲ್ಲ .

Comments

  1. ಲೇಖನ ಚಿಕ್ಕದಾಗಿಯೂ ಚೊಕ್ಕವಾಗಿಯೂ ಇದೆ .ಅವರ ರಾಮಾಯಣ, ಮಹಾಭಾರತ ಮತ್ತು ಗೀತೆ ಮೇಲಿನ ವ್ಯಾಖ್ಯಾನ ಕೇಳಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದಗಳು.
    ಅವರನ್ನು ಭೇಟಿ ಮಾಡಿದ ನೆನಪು ನಂದೂ ಒಂದಿದೆ. ಭಾರತದಲ್ಲಿದ್ದಾಗ ನಮ್ಮ ಕಚೇರಿಯಲ್ಲಿ ಮೊತ್ತ ಮೊದಲು ರಾಜ್ಯೋತ್ಸವ ಸಮಾರಂಭಕ್ಕೆ ನಿಸ್ಸಾರರು ಬಂದಿದ್ದರು. ಅವರ ಮುಂದೆ ಜೋಗದ ಸಿರಿ ಹಾಡುವ ಭಾಗ್ಯ ನಮ್ಮದಾಗಿತ್ತು.

    ReplyDelete

Post a Comment