ಜಿ. ಪಿ ರಾಜರತ್ನಂ

ಜಿ. ಪಿ ರಾಜರತ್ನಂ (೧೯೦೯-೧೯೭೯)


ಇವರ ಮಾತೃಭಾಷೆ  ಕನ್ನಡ ಅಲ್ಲ 

ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು - 2

ಲೇಖನ - ರಾಮಮೂರ್ತಿ, ಬೇಸಿಂಗ್ ಸ್ಟೋಕ್


ಕರ್ನಾಟಕದಲ್ಲಿ ಮಾತ್ರವೋ ಅಥವಾ ಹೊರಗೂ ಈ ವಿಚಾರ ಬಹಳ ಸಾಮಾನ್ಯವೋ ಗೊತ್ತಿಲ್ಲ.  ಉದಾಹರಣೆಗೆ,  ತಮಿಳು ನಾಡಿನಲ್ಲಿ  ನೆಲಸಿರುವ  ಕನ್ನಡ ದವರು  ತಮಿಳಿನಲ್ಲಿನಲ್ಲಿ ಬರೆಯುವ ಪ್ರಸಿದ್ಧ ಲೇಖಕರು ಇದ್ದಾರೋ  ನನಗೆ ಗೊತ್ತಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಈ  ವಿಚಾರ ನಮ್ಮ ಮನಸ್ಸಿಗೂ  ಬರುವುದಿಲ್ಲ  ಅಲ್ಲವೇ?  ಇಲ್ಲಿ ಇಂತಹ ಕೆಲವರನ್ನು  ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.   



                                             ಕರ್ನಾಟಕದಲ್ಲಿ ಹುಟ್ಟಿದ ಈಗಿನ ಮಕ್ಕಳು  ರಾಜರತ್ನಂ ಅವರ "ನಾಯಿ ಮರಿ ಮರಿ ತಿಂಡಿ ಬೇಕಾ ... ಅಥವಾ ಬಣ್ಣದ ತಗಡಿನ ತುತ್ತೂರಿ  ಇತ್ಯಾದಿ   ಹಾಡನ್ನು ಕೇಳದೆ ಇರಬಹುದು ಆದರೆ  ರತ್ನನ ಪದಗಳನ್ನು ಕೇಳದೇ  ಇರುವರು ಯಾರು

                                         ರಾಜರತ್ನಂ  ಪೂರ್ವಿಕರು ೧೯೦೬ ನಲ್ಲಿ ತಮಿಳ್ನಾಡಿನಿಂದ ಬಂದು ಚಾಮರಾಜನಗರದ ತಾಲೂಕ ಗುಂಡ್ಲ್ ಪೇಟೆ ಯಲ್ಲಿ ನೆಲಸಿದರು. ಕಡು ಬಡತನದಲ್ಲಿ ಬೆಳದು ವಿದ್ಯಾಭ್ಯಾಸಕ್ಕೆ ಪಡಬಾರದ ಕಷ್ಟ ಪಟ್ಟು B.A ಮತ್ತು M.A. ಪದವಿ ಪಡೆದರು. ಆದರೂ ಆ ಕಾಲದಲ್ಲಿ ಇವರಿಗೆ ಸರಿಯಾದ ಕೆಲಸ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಕೆಲವು ಪದ್ಯಗಳು ಮತ್ತು ಕಥೆಗಳನ್ನು ಬರೆಯುವುದಕ್ಕೆ ಆಗತಾನೆ ಶುರು ಮಾಡಿದ್ದರು ಆದರೆ ಆದಾಯಾ ಏನೂ ಇರಲಿಲ್ಲ. ಸಣ್ಣ ವಯಸ್ಸಿಗೆ ಮಾಡುವೆ ಬೇರೆ ಆಗಿತ್ತು .   ಒಂದು ಇಲಾಖೆ ಯಲ್ಲಿ ತಿಂಗಳಿಗೆ ೨೫ ರೂಪಾಯಿ ಕೊಡುವ ಕೆಲಸಕ್ಕೆ ಹೋದಾಗ, ಆ ಸಂಸ್ಥೆಯ ಮುಖ್ಯಸ್ಥ ಇನ್ನಾರು ಅಲ್ಲದೆ ಮಾಸ್ತಿ ಅವರೇ ! ಈ ಸಂಬಳ ನಾನೇ ಕೊಡುತ್ತೇನೆ ನಿನಗೆ ಈ ಕೆಲಸ ಬೇಡ ಅದರ ಬದಲು ಕನ್ನಡದಲ್ಲಿ ಬರಿ ಅಂತ ಮಾಸ್ತಿ  ಹೇಳಿದರಂತೆ. ಆಗ ಚೈನಾ ದೇಶದ ಭೌದ್ದ ಯಾತ್ರಿಕರು ಅನ್ನುವ  ಗ್ರಂಥ ೧೯೩೨ನಲ್ಲಿ ಬರೆಯುಲು ಸಾಧ್ಯವಾಯಿತು.  ೧೯೩೩ ರಲ್ಲಿ  ಈ ಬರಹಕ್ಕೆ ದೇವರಾಜ್ ಬಹದ್ದೂರ್ ಪ್ರಸ್ಥಿ ದೊರಕಿತು .  ಗಂಡುಕೊಡಲಿ ಎನ್ನುವ ನಾಟಕ, ಮಕ್ಕಳಿಗೆ  ಬರೆದ ಪದ್ಯ ತುತ್ತೊಂರಿ ಮತ್ತು  ರತ್ನನ ಪದಗಳು  ಮುಂತಾದ ರಚನೆಗಳು ಹೊರಗೆ ಬಂತು ಮತ್ತು ೧೯೩೫ ರಲ್ಲಿ  ಎರಡೇನಯ ದೇವರಾಜ್ ಬಹದ್ದೂರ್ ಪ್ರಸ್ಥಿ  ಅದೇ ವರ್ಷ ಬುದ್ಧ ವಚನ ಪರಿಚಯ ಪುಸ್ತಕ ಪ್ರಕವಾದಾಗ  ದೇವರಾಜ್ ಬಹದ್ದೂರ್ ಪ್ರಸ್ಥಿಯ ಹ್ಯಾಟ್ರಿಕ್ ಹೊಡೆದರು.  ಕೆಲವರ ಪ್ರಕಾರ ಕೈಲಾಸಂ ಪ್ರಭಾವದಿಂದ ರತ್ನನ ಪದ ಗಳನ್ನು ಬರೆದರು. 

                              ರಾಷ್ಟ್ರಕವಿ ಶಿವರುದ್ರಪ್ಪನವರು ೧೯೪೩ ರಲ್ಲಿ ತುಮಕೂರಿನಲ್ಲಿ ವಿದ್ಯಾರ್ಥಿ ಆಗಿದ್ದಾಗಅಲ್ಲಿ  ರಾಜರತ್ನಂ ಇವರ ಕನ್ನಡ ಉಪಾಧ್ಯಾಯರುಈ ಮೇಸ್ಟ್ರು ಖಾದಿ ಪಂಚೆಯ ಮೇಲೆ ಒಳ ಅಂಗಿ ಮಾತ್ರ ಧರಿಸಿ ಕಾಲೇಜಿಗೆ ಬರುವುದು ಮೇಲಿನ ಅಧಿಕಾರಿಗಳಿಗೆ ಹಿಡಸಲಿಲ್ಲವಾದ್ದರಿಂದ ಸರಿಯಾಗಿ ಉಡುಪು ಧರಿಸುವುದಕ್ಕೆ ಆದೇಶ ಕೊಟ್ಟರಅಂತೆ , ಇದಕ್ಕೆ ಪ್ರತಿಭಟನೆಗೆ ಇರಬೇಕು, ಉದ್ದದ ಕೋಟ್ ನ ಧರಿಸಿ ಬರುತ್ತಿದ್ದರು .  ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪಾಧ್ಯಾಯರಾಗಿ ಸೇರಿ  ಕೊನೆಗೆ ಬೆಂಗಳೂರು ಸೆಂಟ್ರಲ್ ಕಾಲೇಜ್ ನಲ್ಲಿ  ಕನ್ನಡ ಉಪನ್ಯಾಸಕರಾಗಿದ್ದರು.  ಆದರೆ  ಅಷ್ಟು ಪ್ರತಿಭೆ ಇದ್ದರೂ  ಪ್ರೊಫೆಸ್ಸರ್ ಅಗಲ್ಲಿಲ್ಲ, ಸರಿಯಾದ ಶಿಫಾರ್ಸು ಇರಲಿಲ್ಲ ವೇನೋ !   ಕಾಲೇಜಿನ ಕನ್ನಡ ಸಂಘದ  ಮೂಲಕ ಅನೇಕ ವಿದ್ಯಾರ್ಥಿಗಳು ಇವರ ಪ್ರಭಾವದಿಂದ ಮುಂದೆ ಬಂದವರು  ಪ್ರೊಫ್. ನಿಸಾರ್ ಅಹ್ಮದ್ , ಸಿ ರ್ ಸಿಂಹಲಂಕೇಶ್ ಮುಂತಾದವರು. 
ಪಾಳಿ ಮತ್ತು ಪ್ರಾಕೃತಿ ಭಾಷೆಗಳನ್ನು ಕಲಿತು  ಭೌದ್ಧ ,ಜೈನ ಮತ್ತು ಇಸ್ಲಾಂ ಮತಗಳ ಮೇಲೆ ಕೆಲವು ಪುಸ್ತಕಗಳನ್ನು ಬರೆದ್ದಿದ್ದಾರೆ. 

                          ಹನಿಗಳು ಎನ್ನುವ ಪುಸ್ತಕದಲ್ಲಿ ರಾಜರತ್ನಂ ಮಾಸ್ತಿ  ಮತ್ತು ಕೈಲಾಸಂ ಬಗ್ಗೆ ತಮ್ಮ ಉಪಾಖ್ಯಾನಗಳು (anecdotes) ಬಹಳ ಚೆನ್ನಾಗಿ ವಿವರಿಸಿದ್ದಾರೆ. ಇವರ ಕೊನೆ ದಿನಗಳಲ್ಲಿ ಸತ್ಯ ಸಾಯಿಬಾಬ ಅವರ ಮೇಲೆ ತುಂಬಾ ಭಕ್ತಿ ಉಂಟಾಯಿತು, ಕಾರಣ, ರಾಜರತ್ನಂ ಕಾಲಿಗೆ ಗಾಜಿನ ಚೂರಿನಿಂದ ಪೆಟ್ಟಾಗಿ gangrene ಆಗಿ  ವೈದ್ಯರು ಕಾಲನ್ನು amputate ಮಾಡಬೇಕೆಂದರು, ಆದರೆ ರಾಜರತ್ನಂ ಪ್ರಕಾರ ಅವತ್ತಿನ ರಾತ್ರಿ ಕನಸಿನಲ್ಲಿ ಸತ್ಯ ಸಾಯಿಬಾಬ ಕಾಣಿಸಕೊಂಡರಂತೆ, ಎರಡು ಮೂರು ದಿನದಲ್ಲಿ ಕಾಲು ತುಂಬಾ ವಾಸಿ ಆಗಿ amputation ಬೇಕಾಗಲಿಲ್ಲ, ಇದಾದ ನಂತರ ಇವರಿಗೆ ಸಾಯಿ ಬಾಬಾ ಮೇಲೆ ತುಂಬಾ ಭಕ್ತಿ ಬಂತು . ಪ್ರಸಿದ್ಧ ಹಾಸ್ಯಗಾರ ಬೀಚಿ ತಮ್ಮ ಆತ್ಮ ಚರಿತ್ರೆ  ಭಯಾಗ್ರಫಿ (Bhayagraphy)  ನಲ್ಲಿ ರಾಜರತ್ನಂ ಗೆ ಮೂಢ ನಂಬಿಕೆ ಅಂತ ಟೀಕೆ ಮಾಡಿದ್ದು  ಇವರಿಗೆ ಅಸಮಾಧಾನವಾಯಿತು. ನಂತರ ತಮ್ಮ ಆತ್ಮ ಚರಿತ್ರೆ ನಿರ್ಭಯಾಗ್ರಫಿ ಆರು ಸಂಪುಟದಲ್ಲಿ ಪ್ರಕಟವಾಗಿ ವಾಗಿ ತಮ್ಮ ಪ್ರತಿಕ್ರಿಯನ್ನು ವ್ಯಕ್ತ ಪಡಿಸಿದರು. 

                                        ಕನ್ನಡಿಗರು ಪುಸ್ತಕ ಕೊಂಡುಕೊಳ್ಳುವುದಕ್ಕೆ ರಾಜರತ್ನಂ ತುಂಬಾ ಪ್ರಯತ್ನಪಟ್ಟಿದ್ದಾರೆ. ಇವರನ್ನು ಭಾಷಣಕ್ಕೆ ಕರೆದರೆ ನಾನು ಪುಸ್ತಕಗಳನ್ನ  ಮಾರುವುದಕ್ಕೆ ತರುತ್ತೇನೆ  ಅಂತ ಹೇಳುತ್ತಿದ್ದರು.  ಇವರ ರತ್ನನ ಮತ್ತು ನಾಗನ ಪದಗಳು ಬಹಳ ವರ್ಷದಿಂದ ಕನ್ನಡಿಗರಿಗೆ ಪರಿಚಯ ಆಗಿದೆ. ಬ್ರಹ್ಮ ಜೋಡಿಸ್ತೀನಿಎಂಡ  ಮುಟ್ಟದ ಕೈನ ಮತ್ತು ಮಡಿಕೇರಿ ಮೇಲೆ ಮಂಜು ಇಂತಹ ಅದ್ಭುತವಾದ 
ಹಾಡುಗಳ ನ್ನ  ಪ್ರಸಿದ್ಧ ಗಾಯಕ ಮೈಸೂರು ಅನಂತ ಸ್ವಾಮಿ ವರು ರಾಜರತ್ನಂ ಅವರನ್ನ ಮರೆಯದಹಾಗೆ ಮಾಡಿದರು.

ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ 
೧೯೩೧ ನಲ್ಲಿ ಬಿ,ಮ್. ಶ್ರೀ ಅವರ ಸ್ವರ್ಣ ಪದಕ 
೧೯೩೫-೧೯೩೭ ದೇವರಾಜ ಬಹದ್ದೂರ್ ಸನ್ಮಾನ, ಮೂರು ಸಲಿ 
ರಾಜ್ಯ ಸಾಹಿತ್ಯ ಪ್ರಶಸ್ತಿ ೧೯೬೯
ರಾಜ್ಯೋತ್ಸವ ಪ್ರಶಸ್ತಿ ೧೯೭೦

Comments

  1. ಕೀರ್ತಿಶೇಷ ರಾಜರತ್ನಂ ಅವರ ಮರು ಪರಿಚಯ ಮಾಡಿಕೊಟ್ಟಿದ್ದಕ್ಕೆ ಶ್ರೀ ರಾಮಮೂರ್ತಿ ಅವರಿಗೆ ಧನ್ಯವಾದಗಳು.
    ನನ್ನಲ್ಲಿ ಶ್ರೀ ರಾಜರತ್ನಂ ಅವರು ಬರೆದ "ಹನಿಗಳು" ಎಂಬ ಪುಸ್ತಕದ ಪ್ರತಿ ಇದೆ. ಶಿವಮೊಗ್ಗದ ಕರ್ನಾಟಕ ಸಂಘದವರು ಇದನ್ನು ೧೯೩೩ ರಲ್ಲಿ ಪ್ರಕಟಿಸಿದ್ದರು. ಇದರಲ್ಲಿ ೫೦ ಮುಖ್ಯವಾಗಿ ನೀತಿಬೋಧಕವಾದ ಕಿರುಗತೆಗಳಿವೆ. ಇವು ಯಾವುದೂ ಮಾಸ್ತಿಯವರನ್ನಾಗಲಿ, ಕೈಲಾಸಂ ಅವರನ್ನಾಗಲಿ ಕುರಿತದ್ದಲ್ಲ. ಲೇಖಕರು ಪುಸ್ತಕದ ಹೆಸರನ್ನು ಮತ್ತೊಮ್ಮೆ ಪರಿಶೀಲಿಸಿ ಓದುಗರಿಗೆ ದಯವಿಟ್ಟು ತಿಳಿಸಬೇಕು

    ReplyDelete

Post a Comment