ಮಾಸ್ತಿ ವೆಂಕಟೇಶ ಅಯಂಗಾರ್



ಇವರ ಮಾತೃಭಾಷೆ  ಕನ್ನಡ ಅಲ್ಲ 
ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು - 2
ಲೇಖನ - ರಾಮಮೂರ್ತಿ, ಬೇಸಿಂಗ್ ಸ್ಟೋಕ್


ಕರ್ನಾಟಕದಲ್ಲಿ ಮಾತ್ರವೋ ಅಥವಾ ಹೊರಗೂ ಈ ವಿಚಾರ ಬಹಳ ಸಾಮಾನ್ಯವೋ ಗೊತ್ತಿಲ್ಲ.  ಉದಾಹರಣೆಗೆ,  ತಮಿಳು ನಾಡಿನಲ್ಲಿ  ನೆಲಸಿರುವ  ಕನ್ನಡ ದವರು  ತಮಿಳಿನಲ್ಲಿನಲ್ಲಿ ಬರೆಯುವ ಪ್ರಸಿದ್ಧ ಲೇಖಕರು ಇದ್ದಾರೋ  ನನಗೆ ಗೊತ್ತಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಈ  ವಿಚಾರ ನಮ್ಮ ಮನಸ್ಸಿಗೂ  ಬರುವುದಿಲ್ಲ  ಅಲ್ಲವೇ?  ಇಲ್ಲಿ ಇಂತಹ ಕೆಲವರನ್ನು  ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.   


ಮಾಸ್ತಿ  ವೆಂಕಟೇಶ ಅಯಂಗಾರ್

ಇವರ ಮಾತೃ  ಭಾಷೆ ತಮಿಳು ಶ್ರೀ ವೈಷ್ಣವ ಮನೆತನದವರು. ಕೋಲಾರ ತಾಲ್ಲೂಕು ಹುಂಗೇನಹಳ್ಳಿ ಯಲ್ಲಿ ಹುಟ್ಟಿದರೂ ಹತ್ತಿರಿದ ಮಾಸ್ತಿ ಎಂಬ ಹಳ್ಳಿಯಲ್ಲಿ ತಮ್ಮ ಬಾಲ್ಯವನ್ನು ಕಳೆದರು. 
ಆಗಿನ ಕಾಲದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಾಗಿತ್ತು. ಅಲ್ಲಿ ಮಾಸ್ತಿ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ M A ಪದವಿಯನ್ನು ಪಡೆದು ಮೈಸೂರ್ ಸಿವಿಲ್ ಸೆರ್ವಿಸ್ ನಲ್ಲಿ ಅನೇಕ ದೊಡ್ಡ  ಹುದ್ದೆಗಳಲಿದ್ದು ೧೯೪೩ ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಕಾರಣ, ಇವರಿಗಿಂತ ಬಹಳ ಕೆಳದರ್ಜೆಯಲ್ಲಿ ಇದ್ದವರಿಗೆ  ಮೇಲಕ್ಕೆ ತಂದಿದಕ್ಕೆ. 
ಇವರ ಮೊಟ್ಟಮೊದಲನೆಯ ಬರಹ ರಂಗಣ್ಣನ ಮಾದುವೆಇದು ೧೯೧೦ ರಲ್ಲಿ. ಒಟ್ಟು ೧೨೩ ಕನ್ನಡದಲ್ಲಿ ಮತ್ತು ೧೭ ಇಂಗ್ಲಿಷ್ನನಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಕೊನೆ ಪುಸ್ತಕ ೧೯೮೬ರಲ್ಲಿ ಮಾತುಗಾರ ರಾಮಣ್ಣ. 

ಇವರ ಸಣ್ಣ ಕಥೆಗಳು ನಾಲಕ್ಕು ಸಂಪುಟದಲ್ಲಿ ಪ್ರಕಟವಾದಾಗ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು.  ಕಾಕನಕೋಟೆ ಮುಂತಾದ ನಾಟಕಗಳು, ಇವರ ಆತ್ಮ ಚರಿತ್ರೆ ಭಾವ ಇತ್ಯಾದಿ ಅನೇಕ ಪ್ರಕಟಣೆಗಳು ,  ಬಹಳ ವರ್ಷ ಇವರು ಜೀವನ ಅನ್ನುವ ಮಾಸಪತ್ರಿಕೆಯ ಸಂಪಾದಿಕರಾಗಿದ್ದರು. ಇವರ ಕಾವ್ಯನಾಮ   ಶ್ರೀನಿವಾಸ . 
೧೯೮೩ರಲ್ಲಿ ಜ್ಞಾನಪೀಠ ಪ್ರಶಸ್ತಿ ಕೊಡಗಿನ ಕೊನೆಯ ರಾಜರಾಗಿದ್ದ ಚಿಕ್ಕವೀರ ರಾಜೇಂದ್ರರ ಮೇಲೆ ಬರೆದ ಕಾದಂಬರಿಗೆ.  ಇದು ಪ್ರಕಟವಾದಾಗ ಮಾಸ್ತಿಯವರ ಮೇಲೆ ಒಂದು  ಮತದ ಕೆಲವು ರಾಜಕಾರಣಿಗಳು ತಮ್ಮ ಮತಕ್ಕೆ ಅವಮಾನ ಆಯಿತು ಅಂತ   ಆರೋಪಣೆ ತಂದು ಭಾರತದ ಲೋಕಸಭೆಯಲ್ಲೂ ಚರ್ಚಿಸುವುದಕ್ಕೆ ಪ್ರಯತ್ನ ಪಟ್ಟರು. ಆದರೆ ರಾಷ್ಟ್ರಕವಿ ಶಿವರುದ್ರಪ್ಪ ನವರ ನೇತೃತ್ರದಲ್ಲಿ ಅನೇಕರು ಮಾಸ್ತಿ ಅವರಿಗೆ ಬೆಂಬಲನೀಡಿ ಪ್ರೋತ್ಸಾಹಿಸದರು. 
ಮಾಸ್ತಿ ಅವರ  ಕಾಲದಲ್ಲಿ ನಡೆದ ಅನೇಕ ಪ್ರಸಂಗಗಳು ಇವರ ಸಣ್ಣ ಕಥೆಗಳ ವಿಶೇಷ. ಉದಾಹರಣೆಗೆರಂಗೇನಹಳ್ಳಿ ರಾಮ ಅನ್ನುವ ಕಥೆಯಲ್ಲಿ ನಿರಾಳವಾಗಿ ಕನ್ನಡ ಮಾತನಾಡುವ  ಒಬ್ಬಆಂಗ್ಲ ಅಧಿಕಾರಿ ಕೋಲಾಟದ ಹಾಡು ಕೇಳಿ ಸಂಶಯ ಬಂದು ಮರಳಿನಲ್ಲಿ ಮುಳಗಿದ್ದ ಒಂದು ಹಳ್ಳಿಯ ದೇವಸ್ಥಾನವನ್ನು ಹೇಗೆ ಪುನರ್ರಚಿಸಿದ ಅನ್ನುವುದನ್ನು ಬಹಳ ಸ್ವಾರಸ್ಯ ವಾಗಿ ವರ್ಣಿಸಿದ್ದಾರೆ. ಇದು  ನಿಜವಾಗಿ ನಡೆದಿದ್ದೋ ಅಥವಾ ಕಲ್ಪನೆಯೋ ಗೊತ್ತಿಲ್ಲ. ಆದರೆ ಇದು ಸೊಗಸಾದ ಕಥೆ.   ೨ ನೇ ಸಂಪುಟದಲ್ಲಿ  ಪ್ರಕಟಕಾಗಿರುವ ನಿಜಗಲ್ಲಿನ ರಾಣಿ , ಒಂದು ಇತಿಹಾಸದ ಕಥೆ.   ಇದೆ ರೀತಿ ೪ ಸಂಪುಟದಲ್ಲಿ ಪ್ರಕಟಣೆ ಆಗಿರುವ ಸಣ್ಣ ಕಥೆಗಳು ನೂರಾರು. 
ಮಾಸ್ತಿ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಜ್ಞಾನಪೀಠ ಪ್ರಶಸ್ತಿ, ಮೈಸೂರ್ ಸರ್ಕಾರದಿಂದ ರಾಜಸೇವಾಪ್ರಸ್ತಕ, ಸಾಹಿತ್ಯ ಅಕಾಡಮಿ ಗೌರವ  ಮಾಸ್ತಿಯವರು ಕಣ್ಮರೆ ಆದಮೇಲೆ ಜೀವನ ಕಾರ್ಯಾಲಯ ಟ್ರಸ್ಟ್ ಮುಖಾಂತರ ಮಾಸ್ತಿಯವರು  ಬರೆದ ಎಲ್ಲಾ ಪುಸ್ತಕಗಳನ್ನೂ ಪುನಃ ಕಂಪ್ಯೂಟರ್ ನಲ್ಲಿ ಜೋಡಿಸಿ ಪ್ರಕಟಿಸಿದ್ದಾರೆ. ಇದಕ್ಕೆ ಮಾಸ್ತಿ ಅವರ ಮೊಮ್ಮಗಳು ಮತ್ತು  ನಮ್ಮ ಕನ್ನಡಬಳಗದ ಆಜೀವ ಸದಸ್ಯರಾದ ಡಾ. ವಸಂತಶ್ರೀ ಬಹಳ ಶ್ರಮ ಪಟ್ಟಿದಾರೆ, ಈಗ ಮಾಸ್ತಿ ಅವರ ಮನೆ  (ಬಸವನಗುಡಿ ) ಗ್ರಂಥಾಲಯ ಮತ್ತು ಮ್ಯೂಸಿಯಂ ಆಗಿದೆ. ಇದಲ್ಲದೇ  ಕರ್ನಾಟಕ ಸರ್ಕಾರ ಮಾಸ್ತಿ ಹಳ್ಳಿಯಲ್ಲಿ ಒಂದು ಲೈಬ್ರರಿ ಸಹ ನಡೆಸುತ್ತಿದ್ದಾರೆ ಪ್ರತಿವರ್ಷ ಮಾಸ್ತಿ ಪ್ರಶಸ್ತಿ ಕನ್ನಡದ ಹೆಸರಾಂತ ಸಾಹಿತಿ ಅಥವಾ ಕವಿಗಳಿಗೆ ಕೊಡಲಾಗುತ್ತೆ. ಇತ್ತೀಚಿನ ಪುರಸ್ಕಾರರು ನಮ್ಮ ಮೆಚ್ಚಿನ ಕವಿ ಪ್ರೊ. ನಿಸಾರ್ ಅಹ್ಮದ್.
  
ಮಾಸ್ತಿ ನಮ್ಮ ಆಸ್ತಿ ಖಂಡಿತ ಹೌದು,

Comments

  1. ಮಾಸ್ತಿಯವರ ಬಗ್ಗೆ ಚಿಕ್ಕ ಚೊಕ್ಕ ಲೇಖನ ಸೊಗಸಾಗಿ ಮೂಡಿ ಬಂದಿದೆ.ಸಾಹಿತ್ಯ ದಾಖಲೆಯಲ್ಲದೆ ಮಾಹಿತಿ ಕೂಡಾ ತಿಳಿಸಿದ್ದೀರಿ. ಮಾತೃ ಭಾಷೆ ನೋಡುವುದಾದರೆ ಈ ಥರದ ಉದಾಹರಣೆಗಳು ಬಹಳ ಸಿಗುತ್ತವೆ. ಕನ್ನಡದ ಮಣ್ಣಿನಲ್ಲೇ ಇದ್ದು ಅನೇಕ ಪರಭಾಷಿಕರ (ಹೀಗೆಂದರೆ ತಪ್ಪಾಗಬಹುದು) ಕೊಡುಗೆ ಅಪಾರ ಇದೆ.ವಿವಿಧ ಕ್ಷೇತ್ರಗಳಲ್ಲಿಯೂ ಹೌದು. ನಮ್ಮ ನಾಡು ವಲಸಿಗರಿಗೆ ಆಶ್ರಯ ಒಂದೇ ಅಲ್ಲ, ಅಲ್ಲಿನ ಮಣ್ಣಿನ ಸೇವೆಯನ್ನೂ ಪಡೆಯುತ್ತದೆ ಅನ್ನುವುದಕ್ಕೆ ಮಾಸ್ತಿ ಕನ್ನಡದ ಆಸ್ತಿ ಅನ್ನುವ ಮಾತು ಸುಳ್ಳಲ್ಲ. thank you

    ReplyDelete
  2. 'ಮಾಸ್ತಿ ಕನ್ನಡದ ಆಸ್ತಿ', 'ಬೆಂದರೆ ಬೇಂದ್ರೆ' ಎನ್ನುವ ನುಡಿಗಟ್ಟುಗಳನ್ನು ಕೊಟ್ಟವರು ಪ್ರಕಾಂಡ ಪಂಡಿತರಾಗಿಯೂ ಪ್ರಸಿದ್ಧರಾಗದ ಸಿರಸಿಯ ಬಿ.ಹೆಚ್. ಶ್ರೀಧರ

    ReplyDelete
  3. ಮಾಸ್ತಿಯವರ (೧೮೯೧-೧೯೮೬) ನೆನಪನ್ನು ಮಾಡಿಕೊಟ್ಟ ಶ್ರೀ ರಾಮಮೂರ್ತಿ ಅವರಿಗೆ ಧನ್ಯವಾದಗಳು. ನಿಜವಾಗಿ ಶಕಪುರುಷಲ್ಲಿ ಒಬ್ಬರು ಎನ್ನ ಬಹುದಾದ ಮಾಸ್ತಿಯವರ ಬಗ್ಗೆ ಎಷ್ಟು ಬರೆದರೂ ಅದು ಸ್ವಲ್ಪವೇ. ಅವರು ತಮ್ಮ ವೃತ್ತಿಗೆ ೧೯೪೩ರಲ್ಲಿ ರಾಜೀನಾಮೆ ಕೊಟ್ಟರು ಎಂದು ತಿಳಿಸಿದ್ದಾರೆ. ಅವರ ವೃತ್ತಿ ಜೀವನ ಪ್ರಾರಂಭವಾದದ್ದು ಯಾವಾಗ ಮತ್ತು ಅವರ ಜೀವನದ ಇತರ ಮೈಲಿಗಲ್ಲುಗಳ ಮೇಲೆ ಒಂದೆರಡು ಸಾಲುಗಳನ್ನು ಸೇರಿಸಿದ್ದರೆ ಸೂಕ್ತವಾಗುತ್ತಿತ್ತು ಎಂದು ನನ್ನ ಅನಿಸಿಕೆ.
    ಕನ್ನಡದಲ್ಲಿ ಸಣ್ಣ ಕತೆಗಳನ್ನು ಬರೆದವರಲ್ಲಿ ಮಾಸ್ತಿಯವರು ಮೊದಲಿಗರಲ್ಲದಿದ್ದರೂ, ಅವರ ಸಮಾನರಾದ ಕತೆಗಾರರು ಕನ್ನಡವೇ ಏಕೆ, ಇತರ ಭಾಷೆಗಳಲ್ಲೂ ಅಪರೂಪ. ಅವರ “ಒಂದು ಹಳೆಯ ಕತೆ” ಅಂತಹ ಒಂದು ಕಥೆಯನ್ನು ಬರೆದರೂ ಅದು ಸಾರ್ಥಕ, ಒಂದು ಮಹತ್ತ್ವದ ಸಾಧನೆ.

    ReplyDelete

Post a Comment