ಯೋಗವಾಸಿಷ್ಠರ ಕಥೆಗಳು - ೨
ವೇತಾಲನ ಅನುಮಾನ ಪರಿಹಾರದ ಕಥೆ
ಲೇಖನ - ಬೇಲೂರು ರಾಮಮೂರ್ತಿ
ರಾಮ, ಕೇಳು,
ಈ ಮೊದಲು ಹೇಳಿದ ದೀಘೃದೃಕ್ಕುವಿನ ಕಥೆಗೆ ಪೂರಕವೋ ಎನ್ನುವಂತೆ ವೇತಾಲನ ಕಥೆಯೂ ಇದೆ. ಮಹಾರಣ್ಯದಲ್ಲಿ ಬೃಹದಾಕಾರ ಹೊಂದಿದ್ದ ವೇತಾಲನೊಬ್ಬನಿದ್ದ. ಸಜ್ಜನರಿರುವ ನಗರವೊಂದರಲ್ಲಿದ್ದ ವೇತಾಲನು ತನಗೆ ಹಸಿವಾದ ಸೂಚನೆ ಕೊಡುತ್ತಿದ್ದಂತೆ, ಎಲ್ಲರೂ ಅವನಿಗೆ ಬಲಿಗಳನ್ನು ತಂದುಕೊಡುತ್ತಿದ್ದರು. ಅದನ್ನು ತಿಂದು ಅವನು ಸುಖವಾಗಿದ್ದ. ಆ ವೇತಾಲನು ಎಷ್ಟು ಸಜ್ಜನ ಎಂದರೆ ಅವನಿಗೆ ಹಸಿವಾಗಿದ್ದರೂ ಎದುರಿಗೆ ಯಾರೇ ಬಂದರೂ, ಅವರು ಪಾಪಿಯಲ್ಲದಿದ್ದರೆ ಹಸಿವನ್ನು ತಡೆದುಕೊಳ್ಳುತ್ತಿದ್ದನೇ ಹೊರತು, ಅವರನ್ನು ಹೊಡೆದು ತಿನ್ನುತ್ತಿರಲಿಲ್ಲ. ಸಜ್ಜನರು ಯಾವಾಗಲೂ ನ್ಯಾಯಸಮ್ಮತವಾಗಿ ನಡೆಯುವಂತೆ ಆ ವೇತಾಲನೂ ಇದ್ದನು. ಅವನಿಗೆ ನ್ಯಾಯಸಮ್ಮತವಾಗಿ ತನಗೆ ಸಿಕ್ಕ ಜನರನ್ನು ಮಾತ್ರ ತಿನ್ನಬೇಕು ಎನಿಸಿತ್ತು. ಒಂದು ದಿನ ರಾತ್ರಿ ಆ ರಾಜ್ಯದ ರಾಜನು ತನ್ನ ಪ್ರಜೆಗಳ ಸ್ಥಿತಿಗತಿಗಳನ್ನು ಖುದ್ದಾಗಿ ನೋಡಬೇಕೆಂದು ತನ್ನ ವೇಷ ಮರೆಸಿಕೊಂಡು ನಗರದಲ್ಲಿ ಸುತ್ತಾಡುತ್ತಿದ್ದನು.
ಆಗ ಅವನನ್ನು ಕಂಡ ವೇತಾಲನು ರಾಜನ ಎದುರಿಗೆ ಬಂದು “ ಎಲೈ ರಾಜನೇ,
ನಾನು ಅತಿ ಭಯಂಕರನಾದ ವೇತಾಲ. ಇವತ್ತು ನೀನು ನನ್ನ ಕೈಗೆ ಸಿಕ್ಕಿರುವೆ. ಇಲ್ಲಿಂದ ನೀನು ಬಿಡಿಸಿಕೊಂಡು ಹೋಗುವುದಂತೂ ಅಸಾಧ್ಯ. ನೀನು ನನಗೆ ಈಗ ಆಹಾರವಾಗುವೆ, ಅಲ್ಲಿಗೆ ನಿನ್ನ ಬದುಕಿನ ಕಡೆಯ ಪುಟವನ್ನೂ ಕಂಡಂತೆ ನಿನ್ನ ಆಯಸ್ಸು ಇದೀಗ ಪೂರ್ಣವಾಗಲಿದೆ. ಹೀಗಾಗಿ ನೀನು ನನಗೆ ಈಗ ಆಹಾರವಾಗು” ಎಂದನು. ಆಗ ರಾಜನಿಗೆ ವಿಪರೀತ ಕೋಪ ಬಂದು “ಎಲೈ ನಿಶಾಚರನೇ, ನ್ಯಾಯವಿಲ್ಲದೇ, ಬಲಾತ್ಕಾರದಿಂದ ನನ್ನನ್ನು ತಿನ್ನುವೆಯಾದರೆ ನಿನ್ನ ತಲೆಯು ಸಾವಿರ ಹೋಳುಗಳಾದೀತು ಎಚ್ಚರ” ಎಂದನು. ಅದಕ್ಕೆ ವೇತಾಲನು, “ನೀನು ಹೇಳುವುದು ಸರಿಯಾಗಿದೆ ರಾಜ, ನಾನು ನಿನ್ನನ್ನು ಬಲವಂತವಾಗಿ ತಿನ್ನುವುದಿಲ್ಲ, ನಾನು ಕೇಳುವ ನ್ಯಾಯವನ್ನು ನೀನು ಹೇಳು. ಎಲ್ಲ ಪ್ರಜೆಗಳ ಮನೋರಥಗಳನ್ನು ಈಡೇರಿಸುವವನು ನೀನು. ಹೀಗಾಗಿ ನನ್ನ ಮನೋರಥವನ್ನೂ ನೀನು ಪೂರ್ಣ ಮಾಡಬೇಕು. ನನ್ನದೊಂದು ಯೋಗ್ಯವಾದ ಆಸೆಯಿದೆ. ಅದು ಏನೆಂದರೆ ನಾನು ನಿನಗೆ ಕೆಲವು ಪ್ರೆಶ್ನೆಗಳನ್ನು ಕೇಳುವೆನು. ನೀನು ಅವುಗಳಿಗೆ ಸರಿಯಾದ ಉತ್ತರ ನೀಡಬೇಕು. ಕೇಳಲೇ ನನ್ನ ಪ್ರೆಶ್ನೆಗಳನ್ನು?” ಎಂದು ರಾಜನ ಮುಖ ನೋಡಿದನು. ರಾಜನಿಗೆ ಇವನ್ಯಾರು, ಇವನ್ಯಾಕೆ ಹೀಗೆ ಮಾತಾಡುತ್ತಾ ಇದ್ದಾನೆ. ಇವನ ಪ್ರೆಶ್ನೆಗಳಿಗೆ ನಾನೇಕೆ ಉತ್ತರ ಕೊಡಬೇಕು ಎಂಬ ಜಿಜ್ಞಾಸೆ ಮೂಡಿತು. ಆದರೂ ಅದೇನು ಪ್ರೆಶ್ನೆ ಕೇಳುತ್ತಾನೋ ಕೇಳಲಿ ಎಂದುಕೊಂಡು ಸಮ್ಮತಿ ನೀಡಿದನು. ಆಗ ವೇತಾಲನು ಹೀಗೆ ಪ್ರೆಶ್ನೆಗಳ ಸುರಿಮಳೆಗರೆದನು.
ಯಾವ ಸೂರ್ಯನ ಕಿರಣಗಳಲ್ಲಿ ಬ್ರಹ್ಮಾಂಡಗಳೆಲ್ಲವೂ ಅಣುವಿನಷ್ಟು ಸಣ್ಣಗೆ ಕಾಣುವುವು. ಯಾವ ವಾಯುವಿನಲ್ಲಿ ಮಹಾ ಗಗನ ರೇಣುಗಳು ಹಾರಾಡುತ್ತಿರುವುವು ಸ್ವಪ್ನದಿಂದ ಸ್ವಪ್ನಕ್ಕೆ ಹೋಗುತ್ತಾ ನೂರು ಸಾವಿರ ಕನಸುಗಳನ್ನು ಕಾಣುತ್ತಿದ್ದರೂ ಪೂರ್ವ ರೂಪವನ್ನು ಬಿಡುತ್ತಿದ್ದರೂ ತನ್ನ ವಿರಾಜಿಸುತ್ತಿರುವ ಸ್ವರೂಪವನ್ನು ಬಿಡದವನು ಯಾರು ಬಾಳೆಯ ಮರವನ್ನು ಸುಲಿಯುತ್ತಿದ್ದರೆ ಪಟ್ಟಿಗಳು ಬರುತ್ತಲೇ ಇರುವಂತೆ ಎಷ್ಟೆಷ್ಟು ಒಳಗೆ ಒಳಗೆ ಹೋದರೂ ಇನ್ನೂ ಒಳಗೆ ಇರುವ ಅಣುವು ಯಾವುದು ಬ್ರಹ್ಮಾಂಡಗಳು, ಅವಕ್ಕೆ ಅವಕಾಶ ಕೊಟ್ಟಿರುವ ಆಕಾಶ, ಅವುಗಳಲ್ಲಿರುವ ಪ್ರಾಣಿ ಸಮೂಹಗಳು, ಸೂರ್ಯಮಂಡಲಗಳು, ಮೇರುಗಳು ಇವೆಲ್ಲವೂ ತನ್ನ ಅಣುತ್ವವನ್ನು ಬಿಡದೇ ಕುಳಿತಿರುವ ಯಾವ ಅಣುವಿಗೆ ಹೋಲಿಸಿದರೆ ಪರಮಾಣುಗಳಾಗುವುವು ಅವಯವ ವಿಭಾಗವಿಲ್ಲದ ಯಾವ ಪರಮಾಣು ಸ್ವರೂಪವಾದ ಮಹಾಗಿರಿಯಲ್ಲಿ ಈ ಜಗತ್ರಯವು ಬಂಡೆಯೊಳಗಿರುವ ಏಕಾಂತವೂ ಆದ ರೂಪಮಜ್ಜೆಯಂತಿರುವುದು
“ಈ ಎಲ್ಲಾ ಪ್ರೆಶ್ನೆಗಳಿಗೂ ನನಗೆ ಸಮಂಜಸವಾದ ಉತ್ತರವನ್ನು ನೀನು ನೀಡದೇ ಹೋದರೆ ನೀನು ನನಗೆ ಆಹಾರವಾಗುವುದರ ಹೊರತು ಅನ್ಯ ಮಾರ್ಗ ನಿನಗಿಲ್ಲ” ಎಂದನು. ವೇತಾಲನನ್ನು ನೋಡಿ ನಕ್ಕ ರಾಜನು “ ತಗೋ ಉತ್ತರವನ್ನು ನಿನ್ನ ಪ್ರೆಶ್ನೆಗಳಿಗೆ “ ಎಂದು ಹೇಳಲಾರಂಭಿಸಿದನು. ಯಾವುದೋ ಒಂದು ಕಾಲದಲ್ಲಿ ಆದ ಬ್ರಹ್ಮಾಂಡವೆಂಬ ಈ ಒಂದು ಹಣ್ಣು ಇದೆ. ಇದು ಯಾವಾಗಲೂ ಹೀಗೆಯೇ ಇರುವುದರಿಂದ ಬಲ್ಲವರು ಇದನ್ನು ಅಜರವೆನ್ನುವರು. ಇದರಲ್ಲಿ ಪೃಥಿವ್ಯಾದಿ ಭೂತಗಳು ಒಂದಕ್ಕಿಂತ ಒಂದು ಹತ್ತು ಹತ್ತರಷ್ಟು ಅಧಿಕವಾಗಿರುವುವು. ಈ ಭೂತಗಳು ಈ ಬ್ರಹ್ಮಾಂಡವನ್ನು ತ್ವಕ್ಕಿನಂತೆ ಸುತ್ತಿಕೊಂಡಿರುವುವು.. ಇಂತಹ ಬ್ರಹ್ಮಾಂಡಗಳು ಇರುವುದು ಒಂದಲ್ಲ ಎರಡಲ್ಲ, ಸಾವಿರಾರು. ಅಂತಹ ಸಾವಿರಾರು ಫಲಗಳನ್ನು ಕಾಯ್ದಿರತಕ್ಕ ಕೊಂಬೆಯು ವಿಸ್ತಾರವಾದ ಪರ್ವತಗಳೆಂಬ ಪಲ್ಲವಗಳುಳ್ಳದ್ದಾಗಿ ಬಹಳ ಎತ್ತರವಾಗಿ ಬೆಳೆದಿರುವುದು. ಅಂತಹ ಶಾಖೆಗಳು ಸಾವಿರಾರು ಉಳ್ಳ ಮಹಾ ವೃಕ್ಷವೊಂದು ವಿಫುಲಾಕೃತಿಯಾಗಿ ದೃಷ್ಟಿಗೆ ಗೋಚರವಾಗದಷ್ಟು ಭಾರಿಯಾಗಿರುವುದು ಇಂತಹ ಮಹಾ ವೃಕ್ಷಗಳು ಸಾವಿರಾರು ಉಳ್ಳ ಒಂದು ಭಾರಿಯ ವನವಿರುವುದು. ಅದು ಅನಂತವಾದ ತರು ಮತ್ತು ಗುಲ್ಮಗಳುಳ್ಳದ್ದು. ಅಂತಹ ವನಗಳು ಸಾವಿರಾರು ಉಳ್ಳ ಒಂದು ಭಾರೀ ಪರ್ವತ ಶೃಂಗವಿರುವುದು.; ಅದರಲ್ಲಿ ಅಂತಹ ಭಾರೀ ವನಗಳು ತುಂಬಿಹೋಗಿರುವುವು. ಅಂತಹ ಶೃಂಗಗಳು ಸಾವಿರಾರು ಉಳ್ಳ ಅತಿ ವಿಸ್ತೀರ್ಣವಾದ ದೇಶವೊಂದಿರುವುದು. ಆ ದೇಶವು ವಿಫುಲವಾದ ಕೋಟರವುಳ್ಳದ್ದು. ಅಂತಹ ದೇಶಗಳು ಸಾವಿರಾರು ಉಳ್ಳ ಒಂದು ಬ್ರಹ್ಮದ್ವೀಪವಿರುವುದು. ಅಲ್ಲಿ ಮಹಾರುದ್ರಗಳೂ ಮಹಾ ನದಿಗಳೂ ಇರುವುವು. ಅಂತಹ ದ್ವೀಪಗಳು ಸಾವಿರಾರು ಉಳ್ಳ ಮಹೀಪೀಠವೊಂದಿರುವುದು. ಅದು ವಿಚಿತ್ರವಾದ ರಚನೆಯಿಂದ ಕೂಡಿರುವುದು. ಅಂತಹ ಪೃಥ್ವಿಗಳು ಸಾವಿರಾರು ಉಳ್ಳ ಅತಿ ವಿಸ್ತಾರವಾದ ಭುವನವೊಂದಿರುವುದು. ಅಂತಹ ಮಹಾ ಭುವನಗಳು ಸಾವಿರಾರು ಇರುವ ಮಹಾ ಬ್ರಹ್ಮಾಂಡವೊಂದು ಭಯಂಕರವಾದ ಆಕಾಶ ಪೀಠವೋ ಎಂಬಂತೆ ಇರುವುದು. ಇಂತಹ ಬ್ರಹ್ಮಾಂಡಗಳು ಸಾವಿರಾರು ಉಳ್ಳ ಭರಣಿಗಳೋ ಎಂಬಂತೆ ಇರುವ ಬ್ರಹ್ಮಾಂಡ ಕೋಶಗಳು ಉಂಟು. ಅಂತಹ ಕರಂಡಕಗಳು ಸಾವಿರಾರು ಉಳ್ಳ ವಿಸ್ತಾರವಾದ ಸಾಗರವೊಂದುಂಟು

ಇಂತಹ ಸಾಗರಗಳು ಸಾವಿರಾರು ಕೂಡಾ ಎಲ್ಲಿ ಸಪ್ಪೆಯಾದ ಒಂದು ಅಲೆಯೆನ್ನಬಹುದೋ ಅಂತಹ ಮಹಾರ್ಣವವೊಂದಿರುವುದು ಅದು ಬಹು ನಿರ್ಮಲವಾದುದು. ಸ್ವವಿಲಾಸನಾದ ಆತ್ಮ ಎಂದು ಅದರ ಹೆಸರು. ಅಂತಹ ಮಹಾರ್ಣವಗಳು ಸಾವಿರಾರು ಯಾವನ ಹೊಟ್ಟೆಯಲ್ಲಿ ಕುಡಿದ ನೀರಿನಂತೆ ಇರುವುವೋ ಅಂತಹ ಒಬ್ಬ ಪುರುಷನುಂಟು. ಆತನು ಮಹಾಕಾರವುಳ್ಳವನು. ಅಂತಹ ಪುರುಷರು ಒಂದು ಲಕ್ಷವನ್ನು ಮಾಲೆಯಂತೆ ಎದೆಯಲ್ಲಿ ಧರಿಸಿಕೊಂಡಿರುವ ಸರ್ವ ಪ್ರಾಣಿಗಳಿಂದಲೂ ಶ್ರೇಷ್ಠನಾದ ಪರಮ ಪುರುಷನು ಒಬ್ಬನಿರುವನು. ಮಹಾತ್ಮನಾದ ಅಂತಹ ಪುರುಷ ಶ್ರೇಷ್ಠರು ದೇಹದಲ್ಲಿ ರೋಮಜಾಲಗಳು ಹೇಗೋ ಹಾಗೆ ಸಾವಿರಾರು ಮಂದಿ ತುಂಬಿ ಹೋಗಿರುವ ಮಂಡಲವೊಂದುಂಟು.
ಅದು ಮಹಾದಿತ್ಯಮಂಡಲವು. ಅದನ್ನು ಅಂತದೃಷ್ಟಿಯಿಂದ ನೋಡಿದರೆ ರುದ್ರಾದಿ ಬ್ರಹ್ಮಾಂಡಾಂತವಾಗಿರುವ ಅಸಂಖ್ಯ ಕಲ್ಪನೆಗಳೆಲ್ಲವೂ ಆ ಆದಿತ್ಯ ಮಂಡಲದಿಂದ ಹೊರಡುವ ಕಿರಣಗಳು. ಅ ಮಹಾದಿತ್ಯನ ಕಿರಣಗಳೇ ಬ್ರಹ್ಮಾಂಡಗಳೆಂಬ ತ್ರಸರೇಣುಗಳು. ನಾನು ಯಾವುದನ್ನು ಚಿತ್ಸೂರ್ಯನೆಂದೆನೋ ಆ ಆದಿತ್ಯನೇ ಎಲ್ಲವನ್ನೂ ಪ್ರಕಾಶಿಸುವನು. ಅವನೇ ವಿಜ್ಞಾನಾತ್ಮನು. ಅವನು ಮಹಾ ಪ್ರಕಾಶವುಳ್ಳ ಮಹಾತ್ಮನು. ಈ ವಿಸ್ತಾರವಾದ ಭುವನ ಭುವನಗಳೆಲ್ಲವೂ ಆ ಮಹಾತ್ಮನ ಕಿರಣಗಳಲ್ಲಿ ಕಾಣುವ ಪ್ರಸರೇಣುಗಳು.
ವಿಜ್ಞಾನ ಸಂಪನ್ನರಾದವರಿಗೆ ಪ್ರಕಟವಾಗುವ, ಅದಿಲ್ಲದೇ ಜಂತುಮಾತ್ರವಾಗಿ ಇರುವ ಪಾಮರರಿಗೆ ಕೊಂಚವೂ ಕಾಣಿಸದೇ ಇರುವ, ತ್ರೈಲೋಕ್ಯಮಂಡಪಮಣಿಯಾದ ಪರಮಾತ್ಮನಲ್ಲಿ, ಬೆಂಕಿಯ ಕಿಡಿಗಳಂತೆ ಕಾಣಿಸಿಕೊಳ್ಳುವ, ಜೀವ ಜಗತ್ತುಗಳ ಮನೆಯಂತಿರುವ ಲೋಕ ಲೋಕಗಳು ಎಂಬ ಸಂಭ್ರಮತೆಯ ದೊಡ್ಡ ದೊಡ್ಡ ರೇಖೆಗಳು ಇರುವುವು. ಆದರೆ ಅವೊಂದೂ ಸತ್ಯವಲ್ಲ. ಹೀಗಾಗಿ ಎಲೈ ವೇತಾಲನೇ, ನೀನು ಶಾಂತವಾಗಿರು” ಎಂದನು. ರಾಜನ ಮಾತಿನಿಂದ ವೇತಾಲನಿಗೆ ಇನ್ನೂ ಗೊಂದಲ ಕಡಿಮೆಯಾದಂತಿರಲಿಲ್ಲ, ಆಗ ರಾಜನು ಮತ್ತೆ ತನ್ನ ಮಾತನ್ನು ಮುಂದುವರಿಸಿದನು.
“ಎಲೈ ವೇತಾಲನೇ, ಜೀವನದಲ್ಲಿ ಮಹತ್ತಾದುದು ಕೇವಲ ನಾಲ್ಕೇ ನಾಲ್ಕು. ಅವು ಯಾವುವೆಂದರೆ ಕಾಲ ಸತ್ತಾ, ನಭ: ಸತ್ತಾ, ಸ್ವಂದ ಸತ್ತಾ, ಚಿನ್ಮಯವಾದ ಶುದ್ಧ ಚೇತನ ಸತ್ತಾ. ಈ ನಾಲ್ಕನ್ನು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಇವು ಪಾವನವಾದುವು. ಏಕೆಂದರೆ ಇವುಗಳಲ್ಲಿ ರಜಸ್ಸೆಂಬುದು ಇಲ್ಲ. ಇದರರ್ಥ, ಕಾಲವನ್ನು ಹಿಡಿದು ಆಕಾಶ ಹುಟ್ಟಿತು. ಆಕಾಶದಲ್ಲಿ ವ್ಯಾಪಾರ ಹುಟ್ಟಿತು, ವ್ಯಾಪಾರದಿಂದ ಜೀವನವಾಯಿತು, ಅದರಿಂದ ಕಾಲ, ಆಕಾಶ, ವ್ಯಾಪಾರ, ಜೀವ ಎಂಬಿವೇ ಭೇದ ಚತುಷ್ಟಯ. ಇದರಿಂದಲೇ ಜಗತ್ತೆಲ್ಲಾ. ಆದರೆ ಈ ನಾಲ್ಕೂ ಚಿನ್ಮಯಗಳಾದುದರಿಂದ ಪಾವನವಾಗಿವೆ. ಇಲ್ಲಿಂದ ಮುಂದಿನ ಸೃಷ್ಟಿಯೆಲ್ಲಾ ಭ್ರಮಾಜನ್ಯವಾದುದರಿಂದ ಅಪಾವನಗಳು” ಎನ್ನುತ್ತಾರೆ.
ಪರಮಾತ್ಮನೆಂಬ ಮಹಾವಾಯುವಿನಲ್ಲಿ ಚಂಚಲವಾದ ರಜಸ್ಸು ಏಳುವುದು. ಕುಸುಮ ಶರೀರದಲ್ಲಿ ಏಳುವ ಪರಿಮಳದಂತೆ ಅದು ತದ್ರೂಪವೂ ಹೌದು, ಅತದ್ರೂಪವೂ ಹೌದು. ಈ ತದತದ್ರೂಪಗಳು ಸ್ವತ: ಬಂದುವು. ಜಗತ್ತು ಎಂಬುದು ಒಂದು ಮಹಾ ಸ್ವಪ್ನ. ಅದರಲ್ಲಿ ಸ್ವಪ್ನದಿಂದ ಸ್ವಪ್ನಕ್ಕೆ ಹೋಗುತ್ತಾ ಇದ್ದರೂ ಜೀವನು ತನ್ನ ರೂಪವನ್ನು ಬಿಡುವುದಿಲ್ಲ. ಸ್ವಪ್ನವನ್ನು ಕಾಣುತ್ತಿದ್ದರೂ ಸ್ವಪ್ನಗಳಿಂದ ಜೀವನು ದುಷ್ಟನಾಗುವುದಿಲ್ಲವಾದುದರಿಂದ ಶಾಂತನಾಗಿರುವನು. ಇಷ್ಟಾದರೂ ಆ ಜೀವನು ಬೋಧ ಮಾತ್ರ ಸ್ವರೂಪನಾದ ಬ್ರಹ್ಮವಾಗಿ ಬೃಂಹಣವಿಲ್ಲದೆ ಶಾಂತನಾಗಿರುವನು.
ಬಾಳೆಯ ಕಂಬವು
ಹೇಗೆ ಎಷ್ಟೆಷ್ಟು ತೆಗೆದರೂ ಬರಿಯ ಪತ್ರ ಮಾತ್ರವಲ್ಲದೇ ಇನ್ನೇನೂ ಅಲ್ಲವೋ ಹಾಗೆಯೇ ಈ ವಿಶ್ವವೂ ಎಷ್ಟೆಷ್ಟು ನೋಡುತ್ತಿದ್ದರೂ ವಿವರ್ತವಾದುದರಿಂದ ಬ್ರಹ್ಮವಿಲ್ಲದೇ ಇನ್ನೇನೂ ಇಲ್ಲ. ( ವಿವರ್ತವೆಂದರೆ ಪೂರ್ವರೂಪಕ್ಕೆ ನಾಶವಿಲ್ಲದೇ ಪರ ರೂಪವನ್ನು ವಹಿಸುವಿಕೆ, ಹೇಗೆಂದರೆ ಚಿನ್ನವು ಕಡಗವಾಗುವಂತೆ ) ಸತ್, ಆತ್ಮ ಮೊದಲಾದ ಶಬ್ದಗಳಿಂದ ಯಾವುದನ್ನು ಕುರಿತು ಹೇಳುವರೋ ಅದು ಶೂನ್ಯವು. ಅವ್ಯಪದೇಶವು ಅಂದರೆ ಗುರುತಿಸುವುದಕ್ಕೆ ಆಗದಂತದ್ದು, ಅದರಿಂದ ಅದನ್ನು ಇಂಥದ್ದೆಂದು ಖಚಿತವಾಗಿ ತಿಳಿಯಹೇಳುವುದು ಅಸಾಧ್ಯ.
ಪರಮಾತ್ಮನು ಸೂಕ್ಷ್ಮಾತ್ ಸೂಕ್ಷನು ಮತ್ತು ಅಲಭ್ಯನು. ಅದರಿಂದ ಪರಮ ಸೂಕ್ಷ್ಮನಾದ ಅಣುಕನು. ಆದರೂ ಅನಂತನಾದುದರಿಂದ ಇದೇ ಪರಮಾತ್ಮ, ಮೇರು ಮೊದಲಾದ ಬೃಹದಾರ್ಥಗಳಿಗೆ ಮೂಲನಾಗಿರುವನು. ಅಣುವಾಗಿದ್ದರೂ ಅನಂತಕ್ಕೂ ಮೀರಿದವನಾದ ಈ ಪುರುಷೋತ್ತಮನಿಗೆ ಹೋಲಿಸಿದರೆ ಜಗದಾದಿಗಳೆಲ್ಲವೂ ಪ್ರತೀತವಾಗಿರುವುದರಿಂದ (ಇಂದ್ರಿಯ ಗೋಚರವಾಗುವುದರಿಂದ ) ಹಾಗೆ ಪ್ರತೀತವಾಗಿದ್ದರೂ ರೂಪವೇ ಇಲ್ಲದ ಪರಮಾಣುಗಳಂತೆ ಇರುವುವು. ಇಂಥಾ ಪುರುಷೋತ್ತಮನು ಅಲಭ್ಯನಾದುದರಿಂದ ಪರಮ ಸೂಕ್ಷ್ಮವಾದ ಅಣುವು. ಎಲ್ಲವನ್ನೂ ತುಂಬಿರುವವನಾದುದರಿಂದ ಮಹಾ ಗಿರಿಯು. ಅವನಿಗೆ ಸರ್ವ ಅವಯವಗಳೂ ಇರುವಂತೆ ಕಾಣುತ್ತಿದ್ದರೂ ಯಾವ ಅವಯವವೂ ಇಲ್ಲದವನು.
ಹೀಗಾಗಿ ಎಲೈ ವೇತಾಲನೇ, ವಿಜ್ಞಾನ ಮಾತ್ರದಲ್ಲಿ ತೋರುವ ಕಲ್ಪನಗಳಿಂದ ಆದುದು ಆ ಜಗತ್ತು. ಅನಂತರೂಪವಾಗಿ ಮನೋಹರವಾಗಿರುವ ಪೃಥಕ್ಕಾದ ಸ್ವಭಾವವುಳ್ಳದಾಗಿ ತೋರಿದರೂ ಇದು ಶಾಂತವಾದ ಬ್ರಹ್ಮವೇ ಹೊರತು ಅನ್ಯಥಾ ಅಲ್ಲ. ಆ ಬ್ರಹ್ಮಪದವು ಇಂದ್ರಿಯ ಗೋಚರವಾಗುವುದಿಲ್ಲ. ಆದರಿಂದ ಹೀಗೇ ನೀನೇ ಅದನ್ನು ನಿನ್ನಲ್ಲಿಯೇ ಅನುಭವಿಸಿ ನೋಡಿ ಶಾಂತವಾಗಿರು
ರಾಜನ ಇಷ್ಟು
ವಿವರಣೆಗಳನ್ನು ಕೇಳಿದ ಮೇಲೆ ತನ್ನ ಪ್ರೆಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿತು ಎಂತು ವೇತಾಲನು ಸಮಾಧಾನ ಹೊಂದಿದನು. ಮತ್ತು ಅಲ್ಲಿಂದ ಮುಂದೆ ರಾಜನು ಹೇಳಿದ ಮಾತುಗಳನ್ನು ಅನುಸಂಧಾನ ಮಾಡಿಕೊಳ್ಳುತ್ತಾ ಕ್ರಮೇಣ ತನ್ನ ಮನಸ್ಸನ್ನು ಆಧ್ಯಾತ್ಮದಲ್ಲಿ ನಿಲ್ಲಿಸಿ ಪರಮಪದವನ್ನು ಪಡೆದನು.
Comments
Post a Comment