ರಾಜಕಾರಣಿಗಳ ನೂತನ ಡ್ಯಾನ್ಸ್..


ರಾಜಕಾರಣಿಗಳ ನೂತನ ಡ್ಯಾನ್ಸ್ ಮಾದರಿಗಳು
ಲೇಖನ - ಶ್ರೀ ಅಣುಕು  ರಾಮನಾಥ್ 

ವಾಹಿನಿಗಳಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂದೋ, ಡ್ಯಾನ್ಸ್ ಮೇನಿಯಾ ಎಂದೋ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇರುವುದೆಲ್ಲವ ಬಿಟ್ಟು ಇರದ ಹೊಸವುಗಳನ್ನು ನೀಡುವುದೇ ಕೊಳಕು ರಾಜಕಾರಣಿಗಳ ಗರಿಮೆಯಲ್ಲವೇ! ಇದೋ ಇತ್ತೀಚಿಗೆ ನರ್ತನಕ್ಷೇತ್ರಕ್ಕೆ ಸೇರ್ಪಡೆಯಾದ ನೂತನ ಡ್ಯಾನ್ಸ್ ಮಾದರಿಗಳು:
ಬರತ್ತಾ ನಾಟ್ಯ: ನೂರು ವರ್ಷ ಸಮೀಪಿಸಿದ ಅಜ್ಜನ ತಲೆಯಂತೆ ಸರ್ಕಾರ ಅಲುಗಾಡುತ್ತಿದೆ. ಉಚ್ಛ್ವಾಸ-ನಿಶ್ವಾಸಕ್ಕೆ ಅವಸ್ಥೆ ಪಡುವುದು ಅಜ್ಜನಿಗಾದರೆ ವಿಶ್ವಾಸಕ್ಕೆ ಅವಸ್ಥೆ ಪಡುವುದು ಸರ್ಕಾರದ ಪರಿಸ್ಥಿತಿಯಾಗಿದೆ. ಇಂತಹ ಸಮಯದಲ್ಲಿಹೊರಹೋಗಿರುವ ಶಾಸಕರ ಬೆಂಬಲ ಬರತ್ತಾ ಇಲ್ಲವಾ?’ ಎಂದು ಅನುಮಾನದಲ್ಲಿ ಕಣ್ಣಿಗೆ ಕೈ ಅಡ್ಡ ಇಟ್ಟುಕೊಂಡುಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿಎನ್ನುವಾಗ ಅತ್ತಿತ್ತ ಹುಡುಕಾಡುವ ನೃತ್ಯದ ಭಂಗಿಯನ್ನು ಅನುಸರಿಸಿ ಮಾಡುವ ನಾಟ್ಯವೇ ಬರತ್ತಾ ನಾಟ್ಯ. 

ಭರ್ತಿ ನಾಟ್ಯ: ಬೆಂಬಲಕ್ಕೆ ಬರುವುದಕ್ಕೆಕಂಡೀಷನ್ಸ್ ಅಪ್ಲೈಅಂದಾಗ, ‘ಓಕೆ, ವಿ ವಿಲ್ ಸಪ್ಲೈಎನ್ನುತ್ತಾ ಅವರು ಕೇಳಿದುದನ್ನೆಲ್ಲ, ‘ಬತ್ತ ರಾಗಿ ಕೊಯ್ಲಿಗೆ ಬಂತು (ವಿರಾಟ್ ಕೊಯ್ಲಿಗೆ ಅಲ್ಲ!) ಕೊಯ್ದ ಬೆಳೆಯು ಕಣಕ್ಕೆ ಬಂತುಎನ್ನುತ್ತಾ ಕಣವನ್ನು ತುಂಬುವುದನ್ನು ತೋರಿಸುವ ಭಂಗಿಯಲ್ಲಿ ಸಪ್ಲೈ ಮಾಡಿದುದನ್ನು ತೋರಿಸುವ ಡ್ಯಾನ್ಸ್ ರೀತಿಯೇ ಭರ್ತಿ ಡ್ಯಾನ್ಸ್.
ಬಾ ಇತ್ತ ನಾಟ್ಯ: ಅತ್ತ ಸತ್ಯಭಾಮೆ, ಇತ್ತ ರುಕ್ಮಿಣಿ. ಮಧ್ಯದಲ್ಲಿ ಕೃಷ್ಣ. ‘ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ ರುಕ್ಮಿಣಿಗಾಗಿಎಂದು ರುಕ್ಮಿಣಿ ಹಾಡಿದಂತೆ ಸಿಂಗಲ್ ಪಾರ್ಟಿಯೂ,  ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ ಇಬ್ಬರಿಗಾಗಿ, ಎಂದೂ ಇಬ್ಬರಿಗಾಗಿಎಂದು ಸತ್ಯಭಾಮೆ ಹಾಡುವಂತೆ ಸಮ್ಮಿಶ್ರ ಪಾರ್ಟಿಯೂ ವಿಕಾರವಿಕಾರವಾಗಿ ಹಾಡುತ್ತಾಅತೃಪ್ತರನ್ನುಇತ್ತ ಬಾ’, ‘ಇತ್ತ ಬಾಎಂದು ಕೈ ಹಿಡಿದು ಸೆಳೆಯುವ ವಿಶೇಷಸಾಂವಿಧಾನಿಕನೃತ್ಯವೇಬಾ ಇತ್ತ ನಾಟ್ಯ’.
ಬೈಲಾಟ: ಇದು ಯಕ್ಷಗಾನದ ಬಯಲಾಟಕ್ಕಿಂತ ಬಹಳ ಭಿನ್ನವಾದ ಮಾದರಿ. ಪುರಾತನ ಕಾಲದಲ್ಲಿ ಯಾರೋ ಮಾಡಿದ ತಪ್ಪನ್ನು ಇಂದು ಜ್ಞಾಪಿಸಿಕೊಂಡು ಎಂದೋ ಸತ್ತು, ಗೋರಿಯಲ್ಲಿ ಮೂಳೆಗಳೂ ಮಣ್ಣಾಗಿರುವ ವ್ಯಕ್ತಿಯಿಂದ ಹಿಡಿದು ಇನ್ನೂ ಗರ್ಭದಲ್ಲಿರುವ ಅವರ ವಂಶದ ಕುಡಿಯವರೆಗೆ ಅಮೆರಿಕನ್ನರಿಂದ ಎರವಲು ಪಡೆದ ಬೈಗುಳಗಳ ಜೊತೆಗೆ ಗುಡ್ ಓಲ್ಡ್ ಗ್ರಾಮ್ಯ ಬೈಗುಳಗಳನ್ನು ಸೇರಿಸಿಕೊಂಡು ಬೈಯುತ್ತಾ, ಲಲಾಟವನ್ನು ಘಟ್ಟಿಸಿಕೊಂಡು ವಿಲವಿಲನೆ ಒದ್ದಾಡುತ್ತಾ ಟಿವಿಗಳಿಗೆ ಅಪರಿಮಿತಬ್ರೇಕಿಂಗ್ ನ್ಯೂಸ್ಕೊಡಲು ಉದ್ಯುಕ್ತವಾಗುವ ಪರಿಯೇ ಬೈಲಾಟ. ಇದರ ಮತ್ತೊಂದು ಪ್ರಭೇದವೂ ಇದೆ. ಅದನ್ನು ಬೈಲೂಟಿ ಎಂದು ಕರೆಯುತ್ತಾರೆ. ನಾಟ್ಯಕ್ರಮದಲ್ಲಿ ಬೈದೂ ಬೈದೂ, ಬೈಗುಳ ನಿಲ್ಲಿಸೆಂದರೆ ಇಂತಿಷ್ಟು ಹಣ ನೀಡಬೇಕೆಂದುಖೂಳ ನಾ ಬಂದಿರುವೆ; ಬಾಗಿಲಲಿ ನಿಂದಿರುವೆ; ಲೂಟಿ ಮುಕ್ತದಿ ನೀಡಿ ಮರೆಯಾಗು ಗುರುವೆಎಂದು ಹೆದರಿಸುವರಕ್ಕಸಭಂಗಿ ನೃತ್ಯವೇ ಬೈಲೂಟಿ.

ಥೂಛೀಪುಡಿ ನೃತ್ಯ: ಕುಶೀಲವ ಎಂದರೆಪಯಣಿಸುವ ಕವಿ, ನಾಟ್ಯಗಾರಎಂದರ್ಥ. ಕುಶೀಲವ ಪುರ ಎಂಬುದು ಆಂಧ್ರಪ್ರದೇಶದ ಒಂದು ಹಳ್ಳಿಯಾಗಿದ್ದು, ಅದು ಜನರ ನಾಲಿಗೆಗೆ ಬಿದ್ದು ಕುಚೀಲವಪುರ ಆಗಿ, ಕುಚೀಲಪುರದಲ್ಲಿಯೇ ಉಗಮವಾದ ನೃತ್ಯಕ್ರಮಕ್ಕೆ ಕುಚೀಲಪುರ ಡ್ಯಾನ್ಸ್.... ಕುಚೀಪುರ ಡ್ಯಾನ್ಸ್.... ಕುಚೀಪುಡಿ ಡ್ಯಾನ್ಸ್ ಎಂದು ಕಾಲಕ್ರಮೇಣ ಬದಲಾಯಿತು. ಇದರ ಕ್ರಮದಂತೆಯೇ ಮೊದಲು ವಿವಿಧ ಪಾತ್ರಗಳ (ಇಲ್ಲಿ ಪಕ್ಷಗಳ) ಅಭ್ಯರ್ಥಿಗಳನ್ನು ಪರಿಚಯಿಸಿ, ನಂತರ ಪಾತ್ರಗಳಗುಣಗಾನಮಾಡಿ ಆದಮೇಲೆ, ಪಾತ್ರಗಳೇ ತಮ್ಮ ವಿಷಯಗಳನ್ನು ವಿಷದವಾಗಿ ಮಂಡಿಸುವ ನೃತ್ಯವೇ ಕುಚಿಪುಡಿಯ ಸಂಪೂರ್ಣ ಕುಲಗೆಟ್ಟ ಮತ್ತು ಎಂದಿಗೂ ಆಡಬಾರದ, ಹಾಗೂ ಅದೇ ಕಾರಣಕ್ಕಾಗಿ ರಾಜಕಾರಣಿಗಳು ಆಡುವ, ನೃತ್ಯವೇ ಥೂಛೀಪುಡಿ ನೃತ್ಯ. ಇದರಲ್ಲಿ ಪ್ರತಿ ಪಕ್ಷದ ಅಭ್ಯರ್ಥಿಯ ಚಿತ್ರವನ್ನು ಮೊದಲು ತೋರಿಸಿ, ಅವನ ಹಗರಣಗಳನ್ನು ವಿವರವಾಗಿ ಮಂಡಿಸಲಾಗುತ್ತದೆ. ನಂತರ ಅಭ್ಯರ್ಥಿಯೇ ಬಂದುಹಗರಣ ಆದುದು ನನ್ನಿಂದಲ್ಲ...’ ಎಂದು ಆರಂಭಿಸಿ, ‘ನಾನೊಬ್ನೇನಾ ತಿಂದಿರೋದೂ... ಆಪೊಸಿಷನ್ನವರೂ ಶಾಮೀಲ್ಆಗಿ ತಿಂದಿಲ್ವಾ...’ ಎನ್ನುವ ಮಟ್ಟ ತಲುಪುವವರೆಗೆ ವಿವಿಧ ಭಂಗಿಗಳನ್ನು ಪ್ರದರ್ಶಿಸಿ, ಗುಟ್ಕಾ ಪ್ರಿಯರು ಬೀದಿಯಲ್ಲಿ ಹೋಗುವಾಗ ವಿವಿಧ ರೀತಿಯಲ್ಲಿ ಉಗಿಯುವಂತೆ ಥೂ ಎನ್ನುತ್ತಾ, ಮಾಸ್ಟರ್ ಹಿರಣ್ಣಯ್ಯನವರಿಗೆ ರಾಜಕಾರಣಿಯ ಚಿತ್ರವನ್ನು ತೋರಿಸಿದರೆ ಅವರ ಮುಖದಲ್ಲಿ ಮೂಡುತ್ತಿದ್ದಛೀತ್ವವನ್ನು ಪ್ರದರ್ಶಿಸುತ್ತಾ ಪುಡಿ ಪುಢಾರಿಗಳು ಮಾಡುವ ನೃತ್ಯವೇ ಥೂಛೀಪುಡಿ ನೃತ್ಯ.
ಕಟ್ತಕ್ಕೊಳಿ ಡ್ಯಾನ್ಸ್: ಇದು ಚುನಾವಣೆಗೆ ಮುನ್ನ, ಚುನಾವಣೆ ನಡೆದು ಅತಂತ್ರ ಸ್ಥಿತಿ ಉಂಟಾದಾಗ ಮತ್ತು ಶಾಸಕರು ರೆಸಾರ್ಟ್ಗಳಲ್ಲಿ ಸೇರಿದಾಗ ಆಡುವ ವಿಶೇಷ ನೃತ್ಯರೂಪಕ. ಮುಂಚೆ ರೆಸಾರ್ಟಿನ ಬಾಗಿಲಿನಿಂದಅತೃಪ್ತರುಇರುವ ರೂಮಿನವರೆಗೆ ವಿವಿಧ ಪಕ್ಷಗಳವರು ಕೈಯಲ್ಲಿ ಸೂಟ್ ಕೇಸ್ ಹಿಡಿದು ವಿವಿಧ ರೀತಿಯ ಹೆಜ್ಜೆಗಳನ್ನು ಹಾಕುತ್ತಾನಿನಗಾಗಿಯೇ... ಸೂಟ್ಕೇಸೂ ಊಊ.... ಬ್ರೀಫ್ಕೇಸೂ ಊಊ.... ಬಾಗಿಲ್ತೆಗಿ ಚೆನ್ನ; ಮರೆಯದೆ ಇನ್ನ.... ಬಾ ನನ್ ಪಕ್ಷಕೆಎಂದು ಹಾಡುವ ಪರಿ. ಇದರ ಮೂಲ ಹೆಸರುಕಟ್ಟು ತೆಗೆದುಕೊಳ್ಳಿಎಂದು ಇದ್ದದ್ದು, ‘ನಿಂಬೆಹಣ್ಣು ಮಂತ್ರಿಎಂದೇ ಫೇಮಸ್ ಆದ ಬಂದರಣ್ಣ ಎಂಬುವರ ಕನ್ನಡದ ಹುಚ್ಛಾರದ ಪರಿಣಾಮವಾಗಿಕಟ್ತಕ್ಕೊಳಿಎಂದು ಬದಲಾಯಿತೆಂದು ಮೂರು ದಿನಗಳಿಂದ ಬರುತ್ತಿರುವಬ್ರೇಕಿಂಗ್ ನ್ಯೂಸ್ಹೇಳಿದೆ.
ಮೋಸಿನಿಯಾಟ್ಟಮ್: ‘ನಾನೂ ನೀನೂ ಜೋಡಿ; ಜೀವನ ಎತ್ತಿನ ಗಾಡಿಎಂದು ಆರಂಭಿಸಿ, ‘ನೀನೆಲ್ಲೋ ನಾನಲ್ಲೇ... ಜೀವ ನಿನ್ನಲ್ಲೇಎನ್ನುವವರೆಗೆ ಡ್ಯುಯೆಟ್ ಹಾಡುತ್ತಾ, ಛಕ್ಕನೆ ಟ್ಯೂನ್ ಬದಲಿಸಿಹೃದಯ ಸಮುದ್ರ ಕಲಕಿ ಹತ್ತಿದೆ ರೋಷದ ಬೆಂಕಿಎನ್ನುತ್ತಾ ದೂರ ಸರಿದು, ಜೊತೆಗಾರ ಬಳಿ ಬರಲು ಯತ್ನಿಸಿದಾಗದೂರ ದೂರ ಅಲ್ಲೆ ನಿಲ್ಲು ಕ್ರೂರ ದೆವ್ವವೆಎನ್ನುತ್ತಾಮೋಸಗೋಪುರಎಂದು ಬೋರ್ಡ್ ಇರುವತ್ತ ಸಾಗಿ, ಗೋಪುರಕ್ಕಿರುವ ಮೋಸದ ಮೆಟ್ಟಿಲುಗಳನ್ನು ಕುಣಿಕುಣಿಯುತ್ತಲೇ ಸಾಗುವ ವಿಶೇಷ ರುದ್ರ ನೃತ್ಯವೇ ಮೋಸಿನಿಯಾಟ್ಟಮ್. ಇದನ್ನು ಪ್ರಪಂಚಕ್ಕೆ ಡೆವಿಲ್ ದೌಡ್ ಎಂಬುವರು ಪರಿಚಯಿಸಿದರಂತೆ.
ಲಕ್ಷಗಾನ ಡ್ಯಾನ್ಸ್: ‘ರುಚಿಗೆ ತಕ್ಕಷ್ಟು ಉಪ್ಪುಎನ್ನುವ ರೀತಿಯಲ್ಲಿಯೇಸಮಯಕ್ಕೆ ತಕ್ಕಷ್ಟು ವಿಕ್ಸುಕಣ್ಣಿಗೆ ಲೇಪಿಸಿಕೊಂಡು, ದೂರದೂರದವರೆಗೆ ಕೇಳಿಸುವಂತೆ ಸತ್ತವರ ಮನೆಯ ಮುಂದಿನ ತಮಿಳು ಬ್ಯಾಂಡಿನವರನ್ನೂ ಮೀರಿಸುವಂತೆ ವಿಕವಿಕಾರವಾಗಿ ರೋದಿಸುತ್ತಾ ಹ್ಯಾಲೋಯಿನ್ ಡೇ ಡ್ಯಾನ್ಸ್ ಇವರ ನೃತ್ಯದ ಮುಂದೆ ಸೌಮ್ಯ ನೃತ್ಯದಂತೆ ತೋರುವ ರೀತಿಯಲ್ಲಿ ಕುಣಿಯುವ ನೃತ್ಯವೇ ಲಕ್ಷಗಾನ ಡ್ಯಾನ್ಸ್.  ಇದನ್ನು ಆರಂಭಿಸಲು ಹಣ ಕೊಡಬೇಕಾಗಿಲ್ಲವಾಗಿದ್ದು ನಿಲ್ಲಿಸಲು ಲಕ್ಷ ಲಕ್ಷ ಸುರಿಯಬೇಕಾದುದೇ ನೃತ್ಯದ ವೈಶಿಷ್ಟ್ಯ.

ಹಣಪದ ನೃತ್ಯ: ‘ಹಣದಲ್ಲಿ ಕೀಳ್ಯಾವುದೋ ಹುಚ್ಚಪ್ಪ; ಪಕ್ಷದಲ್ಲಿ ಮೇಲ್ಯಾವುದೋ; ಕೋಟಿ ಲೂಟಿಯ ಮಾಡೋ ಪಕ್ಷಗ್ಳೆ ಇಲ್ಲೆಲ್ಲ ಕೀಳ್ಯಾವುದ್ಮೇಲ್ಯಾವುದೋ; ಹೋಯ್! ಕೀಳೋದೇ ಮೇಲೆಂಬ್ವುದೋ; ದೈಯ್ಯ ಕುತ್ತಾ ಗಿಡಿಗಿಡಿ ದೈಯ್ಯ ಕುತ್ತಾ; ಹಾ ಕಿತ್ತಿರಿ; ಸರಿ ಕಿತ್ತಿರಿ; ಕಿತ್ತಿರಿ ಕಿತ್ತಿರಿ ಕಿತ್ತಿರಿ ಕಿತ್ತಿರಿಎನ್ನುತ್ತಾ ಪ್ರಜಾಪ್ರಭುತ್ವ ಎಂಬ ಗೊಂಬೆಯನ್ನು ಗೋರಿಗೆ ಎಳೆಯುತ್ತಾ ಸ್ಮಶಾನಸದೃಶವಾದ ಭೂತದ ಕುಣಿತವನ್ನು ಪ್ರದರ್ಶಿಸುವ ಪರಿಯೇ ಹಣಪದ ನೃತ್ಯ.  
ಬ್ರೇಕಿಂಗ್ ಡ್ಯಾನ್ಸ್: ಪಾರ್ಲಿಮೆಂಟಿನ ಕುರ್ಚಿ, ಮೇಜು, ಮೈಕು, ಪೇಪರ್ ವೇಯ್ಟ್, ಇತ್ಯಾದಿಗಳನ್ನು ಗಾಳಿಗೆ ತೂರಿ, ಅವು ಚೂರುಚೂರಾದಾಗ ಕತ್ತೆಯಂತೆ ಕಿರುಚಿದ (ಬ್ರೇ ಎಂದರೆ ಕತ್ತೆಯ ಕೂಗಲ್ಲವೆ) ಬ್ರೇ-ಕಿಂಗ್ಗಳ ನೃತ್ಯವೇ ಬ್ರೇಕಿಂಗ್ ಡ್ಯಾನ್ಸ್. ಮಂತ್ರಿಗಳ ಮಕ್ಕಳು ಮಧ್ಯರಾತ್ರಿಯಲ್ಲಿ ನುಗ್ಗಿದ ಹೊಟೇಲ್ಗಳಲ್ಲಿ ಮತ್ತು ಮಂತ್ರಿಗಳು ವಿಧಾನಸೌಧವೂ ಸೇರಿದಂತೆ ಮನಬಂದಲ್ಲಿ ಆಡುವ ನೃತ್ಯ ಬಹಳ ಅಧಿಕಾರಜನಪ್ರಿಯ.
ಎಲ್ಲ ನೃತ್ಯಭಂಗಿಗಳೂ ಮುಂದಿನ ಕೆಲವೇ ಕ್ಷಣಗಳಲ್ಲಿ ಟಿವಿ ಪರದೆಯ ಮೇಲೆ ಮೂಡಿ ಬರಲಿವೆ. ವೀಕ್ಷಿಸಿ, ಆನಂದಿಸಿ.
ವಿ.ಸೂ: ಪಕ್ಕದಲ್ಲೇ ವಿಕ್ಸ್ ಡಬ್ಬಿ ಇರಲಿ.
ವಿ.ವಿ.ಸೂ.: ಕಷ್ಟವೆನಿಸಿದಾಗ ರಿಮೋಟ್ ಬಳಸುವ ಜಾಣ್ಮೆ ಇರಲಿ.

Comments

  1. Rajakaranavanna nrutyakke holisiddu Chennagide...

    ReplyDelete
    Replies
    1. ಧನ್ಯವಾದಗಳು. ಪ್ರತಿ ಪ್ರತಿಕ್ರಿಯೆಯೂ ಹತ್ತು ಕಪ್ ಫ್ರೆಷ್ ಕಾಫಿ ನೀಡಬಹುದಾದ ಚೈತನ್ಯಕ್ಕೆ ಸಮ.

      Delete
  2. ಹೀಗೂ ಯೋಚನೆ ಮಾಡಬಹುದು ಅಂತ ತೋರಿಸಿದ್ದೀರಿ. ಬರತ್ತಾ ನಾಟ್ಯ ಅಂತ ಓದಿ ಇನ್ನೂ ನಗ್ತಾ ಇದ್ದೀನಿ. ಹೊಸ ಅವಿಷ್ಕಾರದ ಅರ್ಥಗಳು..😀😀

    ReplyDelete
  3. ನನ್ನ ಕಣ್ಣನ್ನು ನೋಡಿದಿರಲ್ಲ.... ಇರುವುದೇ ವಕ್ರದೃಷ್ಟಿ..... ಅದರದೇ ಪ್ರಭಾವ! ನಿಮ್ಮಂತಹ ಅರ್ಥ ಮಾಡಿಕೊಳ್ಳುವ ಓದುಗರು ದೊರೆತಾಗ ಮಾತ್ರ ಇಂತಹವಕ್ಕೆ ನಿಜ ಮೆರಗು.

    ReplyDelete
  4. ಹಾಸ್ಯದ ಸಿರಿ ಹೊನಲಿನಲ್ಲಿ,
    ಪುಡಾರಿಗಳ ಪರದಾಟದಲ್ಲಿ,
    ಓಟು ಸೀಟು ನೋಟು ಎಂಬ
    ರಾಜಕೀಯದಾಟದಲ್ಲಿ,
    ಡ್ಯಾನ್ಸೋತ್ಸವ ನಿನಗೆ ಡ್ಯಾನ್ಸೋತ್ಸವ,
    ಡ್ಯಾನ್ಸೋತ್ಸವ ರಾಮ್ನಾಥ್ ಡ್ಯಾನ್ಸೋತ್ಸವ.

    ReplyDelete
    Replies
    1. Wow ಕಾವ್ಯಮಯ ಪ್ರತಿಕ್ರಿಯೆ, ಇನ್ನೆಷ್ಟು ಎಂಜಾಯ್ ಮಾಡಿದ್ದೀರಾ ನೀವು super

      Delete
    2. ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
      ಏನೆಂದು ಕೇಳಲು ಹೇಳಿತು ಚೆನ್ನಾಗಿ ಬರೆದಿದ್ದೀಯಾ....

      ಬಹಳ ಆಭಾರಿಯೂ ಆಗಿಹೆ ನಾನು...
      ಅರಳಿದ ಕುಸುಮಕೆ ವಂದಿಪೆ ನಾನು..
      ಹಾಸ್ಯದ ಕ್ಷೇತ್ರದಿ ತುಂಬೆಯ ಹೂ ನಾನು.... ತುಂಬೆಯ ಹೂ ನಾನು....

      Delete
  5. ರಾಮನಾಥ್ ಸಾರ್,
    ಕಟ್ತಕ್ಕೊಳಿ ಡ್ಯಾನ್ಸ್ , ಮೋಸಿನಿಯಾಟ್ಟಮ್ ,ಥೂಛೀಪುಡಿ ನೃತ್ಯ , ಬರತ್ತಾ ನಾಟ್ಯ ಎಲ್ಲಿತ್ತು ಸಾರ್ ಈ ಹೆಸರುಗಳು ಹೇಗೆ ಹೊಳೀತು ನಿಮಗೆ? ಒಂದೊಂದಕ್ಕೂ ಕೊಟ್ಟಿರುವ ವಿವರಣೆ, ಕಾರಣ, ಓದಿ ನಕ್ಕು ನಕ್ಕು ಸಾಕಾಯ್ತು
    ಹಣಪದ ನೃತ್ಯದಲ್ಲಿ ಕುಲದಲ್ಲಿ ಕೀಳ್ಯಾವುದೋ ಹಾಡು ಸಖತ್ ಮಜಾ ಇದೆ
    ಅಂತ್ಯ ಕೂಡಾ ಹಾಸ್ಯ ಹಾಗೂ ಅರ್ಥಪೂರ್ಣವಾಗಿದೆ

    ReplyDelete
  6. ಕೆಲವು ಲೇಖನಗಳು ತಲೆಯಲ್ಲಿ ಮೂಡುತ್ತಲೇ ಖುಷಿ ಕೊಡತ್ತೆ ನಾಣಿ. ಇದು ಆ ತರಹದ್ದು. ಅವತ್ತಿನ ಪೇಪರ್‍ನಲ್ಲಿ ಡ್ನಾನ್ಸ್ ಕರ್ನಾಟಕ ಡ್ಯಾನ್ಸ್ ಅಡ್ವರ್ಟೈಸ್‍ಮೆಂಟ್ ನೋಡಿದ ತಕ್ಷಣ ಕಟ್ತೊಕ್ಕಳಿ ಡ್ಯಾನ್ಸ್ ತಲೆಗೆ ಬಂತು. ಮಿಕ್ಕವೆಲ್ಲ ಆ ಧೂಮಕೇತುವಿನ ಬಾಲ. ನಿಮ್ಮ ಮನಸ್ಸಿಗೆ ಹಿಡಿಸಿದ್ದು ನನಗೆ ಆನಂದ.

    ReplyDelete

Post a Comment