ಫಣಿಯಮ್ಮ
ಲೇಖನ - ಅನು ಶಿವರಾಂ
ಸಿಡ್ನಿ
"ನೂರು
ವರುಷ ಬಾಳಿರಿ,
ನೂರು ದೀಪ
ಬೆಳಗಿರಿ" ಇದು
ನಮ್ಮ ಸಂಸ್ಕೃತಿಯಲ್ಲಿ
ಒಂದು ಸಾಮಾನ್ಯ
ಆಶೀರ್ವಾದ. ಆದರೆ
ಇದು ಫಲಿಸುವುದು ಕೆಲವು
ವಿಶೇಷ ವ್ಯಕ್ತಿಗಳಿಗೆ
ಮಾತ್ರ. ಅಂತಹ
ಒಬ್ಬ ವಿಶೇಷ
ವ್ಯಕ್ತಿ ನನ್ನ
ದೊಡ್ದಮ್ಮ ಶ್ರೀಮತಿ
ಫಣಿಯಮ್ಮನವರು.
“ಫಣಿಯಮ್ಮ”
ಎಂದೊಡನೆ ಎಂ.ಕೆ.
ಇಂದಿರಾ ಅವರ
ಪ್ರಸಿದ್ಧ ಕಾದಂಬರಿ
ಹಾಗೂ ಕಾದಂಬರಿ
ಆಧಾರಿತ ಸಿನಿಮಾದ
ಕಥಾನಾಯಕಿಯ ನೆನಪಾಗುವುದು
ಸಹಜ. ಈ
ಕಥೆಯ ನಾಯಕಿ
ಫಣಿಯಮ್ಮ ಕಾದಂಬರಿಯ
ನಾಯಕಿಗಿಂತ ಹೆಚ್ಚು
ಭಿನ್ನವಲ್ಲ. ಅದೇ
ಮಲೆನಾಡಿನ ಹಳ್ಳಿಗಳ
ವಾಸ,ಸಂಪ್ರದಾಯಸ್ಥ
ಬ್ರಾಹ್ಮಣ ಕುಟುಂಬದ
ಸುಖ-ದುಖಗಳು,ಅದೇ
ಸ್ವಾತಂತ್ರ್ಯ ಪೂರ್ವ
ಕಾಲದ ಹೆಣ್ಣಿನ ಸ್ಥಾನಮಾನ
ಮತ್ತು ಅದೇ
ದಿಟ್ಟ, ಧೀರ
ನಿಲುವು,ಅದೇ
ಅಂತಃಕರಣ, ಬದುಕನ್ನು
ಎದುರಿಸುವ ಸಮಚಿತ್ತ!
೧೯೧೯ರಲ್ಲಿ ತರೀಕೆರೆಯ
ಸುಬ್ಬರಾವ್ ಹಾಗೂ
ಜಾನಕಮ್ಮ ದಂಪತಿಗಳ
ಒಂಬತ್ತು ಮಕ್ಕಳಲ್ಲಿ
ಮೊದಲನೆಯವರಾಗಿ ಜನಿಸಿದರು
ಫಣಿಯಮ್ಮ.ಬಾಲ್ಯ
ಮುಗಿಯುವ ಮೊದಲೇ,
ಬದುಕಿನ ಪರಿಚಯವಾಗುವ
ಮೊದಲೇ ದೂರದ
ಸಂಬಂಧಿ ಸುಬ್ಬರಾಯರ
ಒಡನೆ ಮದುವೆಯಾಯಿತು.ಹತ್ತು
ವರ್ಷದ ಹೆಣ್ಣು,
ಹದಿನಾರರ ಗಂಡು!
ಸಂಸಾರ ಶುರುಮಾಡಲು
ಇನ್ನೂ ಸಮಯವಿತ್ತು.
ಚಿಕ್ಕ ಹುಡುಗಿ ಫಣಿಗೆ
ಸಂಗೀತ ಕಲಿಯುವ
ಆಸೆ,ಆದರೆ
ಸಂಪ್ರದಾಯಸ್ಥ ಅತ್ತೆ
ಮನೆಯವರ ಅಭ್ಯಂತರ,ಹಾಗಾಗಿ
ತಾಯಿ ಹೇಳಿಕೊಟ್ಟ
ಆರತಿ ಹಾಡು,ಹಸೆಗೆ
ಕರೆಯುವ ಹಾಡುಗಳಲ್ಲೇ
ತೃಪ್ತಿ ಪಡಬೇಕಾಯಿತು.ಹಾಡಿನ
ಜೊತೆಗೇ ಅಡಿಗೆ,ರಂಗೋಲಿ,ಹೂವು
ಕಟ್ಟುವುದು,ಮನೆಗೆಲಸ
ಮಡಿ- ಹುಡಿ
ಎಲ್ಲ ಕಲಿತು
ತಯಾರಾದಳು ಪುಟ್ಟ
ಫಣಿ, ಸಂಸಾರದ
ನೊಗ ಹೊರಲು.
ಅಷ್ಟೊತ್ತಿಗೇ ಇಬ್ಬರು
ತಮ್ಮಂದಿರು,ಇಬ್ಬರು
ತಂಗಿಯರು ಹುಟ್ಟಿ-ಬಸಿರು,
ಬಾಣಂತನದ ಪ್ರತ್ಯಕ್ಷ
ಪಾಠವೂ ಸಾಕಷ್ಟು
ಆಗಿತ್ತು.ಈ
ಪಾಠದ ಪ್ರಯೋಗಕ್ಕೆ
ಹೆಚ್ಚು ದಿನ
ಬೇಕಾಗಲಿಲ್ಲ!ಮಹಾ
ಯುದ್ಧಗಳ ಅ
ದಿನಗಳಲ್ಲಿ ಎಲ್ಲಕ್ಕೂ
ಬರ,ರೇಷನ್ ಇದ್ದರೂ,ಮನೆ
ಮನೆಗಳಲ್ಲಿ ಸಂತಾನ
ಸಮೃದ್ಧಿ. ಇಂದಿನ
ದಿನಗಳಂತೆ ರಸ್ತೆಗೆರೆಡು
ಕೃತಕ ಗರ್ಭಧಾರಣಾ
ಕೇಂದ್ರಗಳು ಬೇಕಿರಲಿಲ್ಲ.
ಫಣಿಯಮ್ಮ, ಸುಬ್ಬರಾಯರ ಮನೆದೇವರು ಕುಕ್ಕೆ ಸುಬ್ರಮಣ್ಯನೆಂದ ಮೇಲೆ, ಅವರ ಮೊದಲ ಮಗಳಿಗೆ ನಾಗರತ್ನ ಎಂದು ಹೆಸರಿಟ್ಟರೆ ಆಶ್ಚರ್ಯವೇನೂ ಇಲ್ಲವಲ್ಲ?ನಾಗರತ್ನನ ಬೆನ್ನಿಗೇ ಹುಟ್ಟಿದ ರಾಮಮೂರ್ತಿ; ಮುತ್ತಿನಂತಹ ಹುಡುಗ, ಮುತ್ತು ಎಂದೇ ಅನ್ವರ್ಥನಾಮ, ಅವನಾದ ಮೇಲೆ ಹೆಸರಿನಂತೆಯೇ ಶಾಂತವಾದ ಮುದ್ದಾದ ಹೆಣ್ಣು ಮಗು ಶಾಂತ.ಸ್ವರ್ಣ ಗೌರಿ ಹಬ್ಬದ ದಿನ ಹುಟ್ಟಿದ ಮೂರನೇ ಹೆಣ್ಣು ಮಗಳು ಸಹಜವಾಗಿಯೇ ‘ಸ್ವರ್ಣ’ಳಾದಳು. ಅವಳ ಹೊಂಬಣ್ಣದ ಮೈಕಾಂತಿ ನೋಡಿ ಅವಳನ್ನು ಸ್ವರ್ಣ ಎಂದು ಕರೆದಿರಲಾರರು ! ಸ್ವರ್ಣಳ ಬೆನ್ನಿಗೆ ಹುಟ್ಟಿದ ಕುಲದೀಪಕ ಸತ್ಯನಾರಾಯಣ, ಎಲ್ಲರಿಗಿಂತ ಚಿಕ್ಕ ಮಗಳಿಗೆ ಇಟ್ಟರು ಆಧುನಿಕ ಹೆಸರು ಮಿಸ್ ಲೀಲಾವತಿ ಎಂದು! ಬಸಿರು, ಬಾಣಂತನ,ಮಕ್ಕಳ ಲಾಲನೆ ಪಾಲನೆ, ಹಬ್ಬ ಹುಣ್ಣಿಮೆ, ಸಂಸಾರ ಚಕ್ರದಲ್ಲಿ ಸಂಪೂರ್ಣವಾಗಿ ಸೇರಿಹೋದಳು ಪುಟ್ಟ ಫಣಿ;ಯಾವಾಗ ಫಣಿಯಮ್ಮನವರಾದಳೋ ಅವಳಿಗೇ ಗೊತ್ತಿಲ್ಲ! ದೊಡ್ಡ ಕುಟುಂಬದ ಜವಾಬ್ದಾರಿ, ಮೈದನ , ಒರಗಿತ್ತಿಯರ ಜೊತೆಯ ತುಂಬು ಸಂಸಾರವನ್ನು ನಗು ನಗುತ್ತಲೇ ಸಂಬಾಳಿಸಿದರು ಫಣಿಯಮ್ಮ. ತವರಿನ, ಒಡಹುಟ್ಟಿದವರ ಭಾಂಧವ್ಯ ಸಹ ಬೆಸೆದಿತ್ತು. ತಮ್ಮ ಮಕ್ಕಳ ಓರಿಗೆಯವರಾದ ತಂಗಿ ಹಾಗೂ ತಮ್ಮಂದಿರ ಮೇಲೆ ಮಾತೃಪ್ರೇಮವೇ ಬೆಳೆಯಿತು.
ಫಣಿಯಮ್ಮ, ಸುಬ್ಬರಾಯರ ಮನೆದೇವರು ಕುಕ್ಕೆ ಸುಬ್ರಮಣ್ಯನೆಂದ ಮೇಲೆ, ಅವರ ಮೊದಲ ಮಗಳಿಗೆ ನಾಗರತ್ನ ಎಂದು ಹೆಸರಿಟ್ಟರೆ ಆಶ್ಚರ್ಯವೇನೂ ಇಲ್ಲವಲ್ಲ?ನಾಗರತ್ನನ ಬೆನ್ನಿಗೇ ಹುಟ್ಟಿದ ರಾಮಮೂರ್ತಿ; ಮುತ್ತಿನಂತಹ ಹುಡುಗ, ಮುತ್ತು ಎಂದೇ ಅನ್ವರ್ಥನಾಮ, ಅವನಾದ ಮೇಲೆ ಹೆಸರಿನಂತೆಯೇ ಶಾಂತವಾದ ಮುದ್ದಾದ ಹೆಣ್ಣು ಮಗು ಶಾಂತ.ಸ್ವರ್ಣ ಗೌರಿ ಹಬ್ಬದ ದಿನ ಹುಟ್ಟಿದ ಮೂರನೇ ಹೆಣ್ಣು ಮಗಳು ಸಹಜವಾಗಿಯೇ ‘ಸ್ವರ್ಣ’ಳಾದಳು. ಅವಳ ಹೊಂಬಣ್ಣದ ಮೈಕಾಂತಿ ನೋಡಿ ಅವಳನ್ನು ಸ್ವರ್ಣ ಎಂದು ಕರೆದಿರಲಾರರು ! ಸ್ವರ್ಣಳ ಬೆನ್ನಿಗೆ ಹುಟ್ಟಿದ ಕುಲದೀಪಕ ಸತ್ಯನಾರಾಯಣ, ಎಲ್ಲರಿಗಿಂತ ಚಿಕ್ಕ ಮಗಳಿಗೆ ಇಟ್ಟರು ಆಧುನಿಕ ಹೆಸರು ಮಿಸ್ ಲೀಲಾವತಿ ಎಂದು! ಬಸಿರು, ಬಾಣಂತನ,ಮಕ್ಕಳ ಲಾಲನೆ ಪಾಲನೆ, ಹಬ್ಬ ಹುಣ್ಣಿಮೆ, ಸಂಸಾರ ಚಕ್ರದಲ್ಲಿ ಸಂಪೂರ್ಣವಾಗಿ ಸೇರಿಹೋದಳು ಪುಟ್ಟ ಫಣಿ;ಯಾವಾಗ ಫಣಿಯಮ್ಮನವರಾದಳೋ ಅವಳಿಗೇ ಗೊತ್ತಿಲ್ಲ! ದೊಡ್ಡ ಕುಟುಂಬದ ಜವಾಬ್ದಾರಿ, ಮೈದನ , ಒರಗಿತ್ತಿಯರ ಜೊತೆಯ ತುಂಬು ಸಂಸಾರವನ್ನು ನಗು ನಗುತ್ತಲೇ ಸಂಬಾಳಿಸಿದರು ಫಣಿಯಮ್ಮ. ತವರಿನ, ಒಡಹುಟ್ಟಿದವರ ಭಾಂಧವ್ಯ ಸಹ ಬೆಸೆದಿತ್ತು. ತಮ್ಮ ಮಕ್ಕಳ ಓರಿಗೆಯವರಾದ ತಂಗಿ ಹಾಗೂ ತಮ್ಮಂದಿರ ಮೇಲೆ ಮಾತೃಪ್ರೇಮವೇ ಬೆಳೆಯಿತು.
ಬಹುಷಃ ಆ
ಕಾಲದ ಎಲ್ಲ
ಹೆಂಗಸರಲ್ಲೂ ಇವರಂತೆಯೇ
ಅಪರಿಮಿತ ತಾಳ್ಮೆ,ಅನುಸರಿಸುವ,
ಹೊಂದಿಕೊಂಡು ಹೋಗುವ
ಸ್ವಭಾವ ಇತ್ತೇನೋ ಇಲ್ಲದಿದ್ದರೆ
ಒಟ್ಟು ಕುಟುಂಬದ
ಪರಿಕಲ್ಪನೆಯೂ ಸಾಧ್ಯವಾಗುತಿರಲಿಲ್ಲವೇನೋ.
೧೯೪೩ರಲ್ಲಿ ಸುಬ್ಬರಾವ್
ದೊಡ್ಡಪ್ಪ ಜೋಗದ
ವಿದ್ಯುತ್ ಕಾರ್ಯಾಗಾರದಲ್ಲಿ
ಕೆಲಸ ಆರಂಭಿಸಿದಾಗ
ದಟ್ಟ ಮಲೆನಾಡಿನ
ರುದ್ರ ರಮಣೀಯ
ಜೋಗದಲ್ಲಿ ಅವರ
ಪರಿವಾರವೂ ಬಂದು
ನೆಲೆಸಿತು. ಮಲೆನಾಡಿನ
ನಿರಂತರ ಜಡಿ
ಮಳೆ, ಕೊರೆಯುವ
ಚಳಿಯಲ್ಲಿ ಬಿಸಿ
ಬಿಸಿ ಅಡಿಗೆ
ಮಾಡಿ ತಮ್ಮ
ಸಂಸಾರವನ್ನು ಬೆಚ್ಚಗಿಟ್ಟರು
ಫಣಿಯಮ್ಮ. ಗಂಡ,
ಮಕ್ಕಳಿಗೆ ತಮ್ಮ
ಕೈಯಿಂದಲೇ ಬಟ್ಟೆ
ಹೊಲೆಯುತ್ತಿದರು.ಹೂ
ಬತ್ತಿ ಮಾಡುವುದು,
ಹಾರ ಕಟ್ಟುವುದು,
ಸ್ವೆಟರ್ ಹಾಕುವುದು
ಹಾಗೂ ಮಲೆನಾಡಿನ ಹಿಟ್ಟಂಡೆ
ಹುಲ್ಲಿನಲ್ಲಿ ಸುಂದರ
ಬುಟ್ಟಿ ಹೆಣೆಯುವುದು
ಹೀಗೆ ಹಲವಾರು
ಉಪಯುಕ್ತ ಕೈ
ಕೆಲಸಗಳನ್ನು ಮಾಡಿ,
ಸಂಸಾರವನ್ನು ಸಮರ್ಥವಾಗಿ
ನಿಭಾಯಿಸಿದರು. ಮಕ್ಕಳ್ಳೆಲ್ಲ
ಓದು ಮುಗಿಸಿ
ಕೆಲಸಕ್ಕೆ ಸೇರುವಂತಾದರು.
ಹಿರಿಯ ಮಗಳು
ನಾಗರತ್ನನಿಗೆ ಮದುವೆಯಾಗಿ
ಮಕ್ಕಳೂ ಹುಟ್ಟಿಯಾಯಿತು. ನೆಮ್ಮದಿಯಿಂದ
ಸಾಗುತಿದ್ದ ಸಂಸಾರ
ನೌಕೆ, ಇದ್ದಕ್ಕಿದಂತೆ
ಬಿರುಗಾಳಿಗೆ ಸಿಲುಕಿತು.
ಬೆಂಗಳೂರಿನ ವಿಧಾನಸೌಧದಲ್ಲಿ ಆಗಷ್ಟೇ
ಕೆಲಸಕ್ಕೆ ಸೇರಿದ್ದ
ಹಿರಿಯ ಮಗ
ರಾಮಮೂರ್ತಿಗೆ ಮೆದುಳಿನಲ್ಲಿ
ಗಡ್ಡೆ ಬೆಳೆದು,
ಚಿಕಿತ್ಸೆ ದೊರೆಯುವ ಮುನ್ನವೇ
ವಿಧಿವಶನಾದನು. ಬೆಳೆದ
ಮಗನನ್ನು ಕಳೆದುಕೊಂಡ
ತಾಯ್-ತಂದೆಯರ
ನೋವು ಊಹಿಸುವುದೂ
ಕಷ್ಟಸಾಧ್ಯ. ಹೆತ್ತ
ಕರುಳಿನ ಸಂಕಟವನ್ನು
ಮುಚ್ಚಿಟ್ಟು ಕುಟುಂಬದಲ್ಲಿ
ತಮ್ಮ ಜವಾಬ್ದಾರಿಯನ್ನು
ನಿಭಾಯಿಸುವ ಧೈರ್ಯ,
ಸ್ಥೈರ್ಯ ಅ
ದಿನಗಳಲ್ಲಿ ಹೇಗೆ
ಬಂತು ಈ
ಹೆಣ್ಣಿಗೆ ಎಂದು
ಆಶ್ಚರ್ಯವಾಗುತ್ತದೆ!
ಮಗನ ಕೊರಗಿನಲ್ಲೇ
ದಿನಕಳೆಯುತ್ತಿದ ದೊಡ್ಡಪ್ಪನವರಿಗೆ
ಇದ್ದಕಿದಂತೆ ಹೃದಯಾಘಾತವಾದಾಗ
ಫಣಿಯಮ್ಮಅದನ್ನು ಧೈರ್ಯವಾಗಿ ಎದುರಿಸಿ
ಅವರಿಗೆ ಸಮಯೋಚಿತ
ವೈದ್ಯಕೀಯ ನೆರವು
ಕೊಡಿಸಿದರು . ಮುಂದೆ
ಅವರ ಊಟ,
ಪಥ್ಯ, ಔಷಧಿಗಳ
ಬಗ್ಗೆ ಪರಿಣಿತ
ನರ್ಸ್ ನಂತೆ
ಕಾಳಜಿ ವಹಿಸಿ
ಅವರ ಪ್ರಾಣ
ಕಾಪಾಡಿದರು. ಸತಿ
ಸಾವಿತ್ರಿಯಂತೆ ಯಮನೊಡನೆ
ಹೋರಾಡಿ ಪತಿಯನ್ನು ಉಳಿಸಿಕೊಂಡರು.
ಈ ರೀತಿಯ
ಸಮಯಸ್ಫೂರ್ತಿ, ಸಾಮಾನ್ಯ
ಜ್ಞಾನ, ಕಲಿಯುವ
ಆಸೆ, ವಿದ್ಯೆಯ
ದಾಹ, ನಿರ್ಧಾರ,ಧೃಡತೆ
ಅಂದಿನ ಎಷ್ಟೋ
ಹೆಣ್ಣು ಮಕ್ಕಳಿಗೆ
. ಇವರಿಗೆಲ್ಲ ಇಂದಿನ
ವಿದ್ಯೆ ,ಅವಕಾಶ
ಸೌಲಭ್ಯಗಳು ಸಿಕ್ಕಿದಿದ್ದರೆ!
- ಅವರ ಹಾಗೂ
ಅವರ ಸಂಸಾರದ
ಬೆಳವಣಿಗೆಗೆ ಆಕಾಶವೇ
ಸೀಮೆಯಾಗಿರುತ್ತಿತೇನೋ! ತಾವು
ಪಡೆಯದೇ ಇದ್ದ
ವಿದ್ಯೆ, ಪದವಿ,
ನೌಕರಿಯನ್ನು ಪಡೆಯಲು
ತಮ್ಮ ಮಕ್ಕಳಿಗೆ
ಸಂಪೂರ್ಣ ಪ್ರೋತ್ಸಾಹ,
ಸಹಕಾರ ಕೊಟ್ಟರು;
ಗಂಡು, ಹೆಣ್ಣು
ಎಂಬ ಭೇದವಿಲ್ಲದೆ.
ನನ್ನ ಮನಸಿನಲ್ಲಿ
ಧೃಡವಾಗಿರುವ ಚಿತ್ರ
ದೊಡಮ್ಮ ಮಾಡಿದ
ಲಕ್ಷ ಕುಂಕುಮಾರ್ಚನೆಯದು.
ಹಣೆಯಲ್ಲಿ ಅಡ್ಡ
ಕುಂಕುಮವಿಟ್ಟು, ಅಂಚು
ಸೆರಗಿನ ಸೀರೆಯುಟ್ಟು,
ಮುಡಿಯಲ್ಲಿ ಪ್ರಸಾದದ
ಮಲ್ಲಿಗೆ ದವನ
ಮುಡಿದು ಚಿಕ್ಕಮಂಗಳೂರಿನ
ಪೇಟೆ ಬೀದಿಯ
ಮನೆಯ ನಡುಮನೆಯಲ್ಲಿ
ನೀಲಾಂಜನ ಹಚ್ಚಿ,
ನೇರವಾಗಿ ಕುಳಿತು
ಅವರು ಪೂಜೆ
ಮಾಡುತ್ತಿದ್ದರೆ ಎಳೆ
ವಯಸ್ಸಿನ ನನಗೆ
ಯಾವುದೋ ವರ್ಣಿಸಲಾಗದ
ಅಲೌಕಿಕ ಅನುಭವ!
ಅವರ ಪೂಜೆ,
ನಿಷ್ಠೆ, ನಿಯಮಗಳೇ
ಇಂದಿಗೂ ಅವರ
ಮಕ್ಕಳು,ಮೊಮ್ಮಕ್ಕಳಷ್ಟೇ
ಅಲ್ಲ ಮರಿಮಕ್ಕಳ್ಳನ್ನು
ಸಹ ಕಾಪಾಡುತ್ತಿದೆ
ಎಂದರೆ ತಪ್ಪಾಗಲಾರದು.
ಎಲ್ಲರೂ ಉತ್ತಮ,
ವಿದ್ಯೆ, ಕಲೆ,
ಸಂಸ್ಕಾರ ಪಡೆದು
ದೇಶ ವಿದೇಶಗಳಲ್ಲಿ
ಹೆಸರು ಮಾಡಿದ್ದಾರೆ,
ಸಾರ್ಥಕ ಜೀವನ
ನಡೆಸಿ ಸತ್ಪ್ರಜೆಗಳಾಗಿದ್ದಾರೆ.
ಅವರು ಮಾಡಿದ
ಪೂಜೆಯ ಫಲರೂಪವಾಗಿ
ಚಿನ್ನದಂಥ ಹುಡುಗಿ
ಹೇಮಲತಾ ಸೊಸೆಯಾಗಿ
ಬಂದಿದ್ದಾಳೆ. ಅತ್ತೆ,
ಮಾವಂದಿರನ್ನು ಗೌರವಿಸಿ,
ಆದರಿಸಿ, ಅತ್ತಿಗೆ,
ನಾದಿನಿಯರಲ್ಲಿ, ಬಂಧು
ಮಿತ್ರರಲ್ಲಿ ಮೈತ್ರಿ
ಬೆಸೆದಿರುವ ಅಪರೂಪದ
ಹೆಣ್ಣು. ದೊಡ್ಡಪ್ಪನ
ಕಾಲಾನಂತರ ಅತ್ತೆಯನ್ನು
ತಾವು ಕೆಲಸದ
ನಿಮಿತ್ತ ಹೋದ
ದೇಶದ ಹಲವಾರು
ಭಾಗಗಳಿಗೆ ತಮ್ಮೊಂದಿಗೆ
ಕರೆದೊಯ್ದು ಇಷ್ಟು
ವರ್ಷಗಳೂ ಪ್ರೀತಿಯಿಂದ
ಅವರನ್ನು ನೋಡಿಕೊಂಡಿದ್ದಾರೆ
ಮಗ ಸೊಸೆ.
ತಾಯಿಯ ಸೇವೆ,
ಸುಶ್ರೂಷೆಯನ್ನು ಹೆಣ್ಣು
ಮಕ್ಕಳೂ ಸಂತೋಷದಿಂದ
ಮಾಡಿದ್ದಾರೆ. ಫಣಿಯಮ್ಮಎಂದರೆ
ವಿಸ್ತಾರವಾದ ಹಿರಿಯ
ಆಲದ ಮರ
ನೆನಪಾಗುತ್ತದೆ. ಹತ್ತಾರು
ಸಧೃಡ ಬೇರುಗಳನ್ನು
ಬಿಟ್ಟು,ಪ್ರತಿ
ಭಾಗದಲ್ಲೂ ಸಾರ್ಥಕವಾದ
ಮರ; ಇಡೀ
ಶತಮಾನದ ಆಗು
ಹೋಗುಗಳಿಗೆ ಮೂಕ
ಸಾಕ್ಷಿಯಾಗಿ ನಿಂತ
ಹೆಮ್ಮರ. ಈ
ನಡುವೆ ಮಾತು
ಕಡಿಮೆಯಾಗಿದ್ದರೂ ಒಮ್ಮೊಮ್ಮೆ
ಯಾವುದೋ ಪೂಜೆಯ
ಹಾಡನ್ನೋ, ಆರತಿಯ
ಹಾಡನ್ನೋ ದೊಡ್ಡಮ್ಮ ಗುನುಗುಟ್ಟುವುದಿದೆ.
ಸಂಗೀತದ್ದು ಮಾಂತ್ರಿಕ
ಎಳೆತ, ಮಾತು
ಮರೆತರೂ ಭಾವ
ಮರೆಯದು ಅಲ್ಲವೇ
?

This comment has been removed by the author.
ReplyDeleteಎಂ. ಕೆ. ಇಂದಿರಾ ಅವರ ಫಣಿಯಮ್ಮನಿಗೂ ಶ್ರೀಮತಿ ಅನು ಶಿವರಾಂ ಅವರ ದೊಡ್ದಮ್ಮನವರಿಗೂ ಹೆಸರಿನಲ್ಲಿ ಮಾತ್ರವಲ್ಲ, ಈ ಲೇಖನ ತಿಳಿಸಿಕೊಡುವಂತೆ, ಅನೇಕ ಬಗೆಗಳಲ್ಲಿ ಸಾಮ್ಯವಿದೆ. ಇಬ್ಬರೂ ದೊಡ್ಡ ಮನಸ್ಸಿನ ಉದಾತ್ತ ಜೀವಿಗಳು, ನಿಸ್ವಾರ್ಥಿಗಳು, ನೂರಾರು ಜನಕ್ಕೆ ಬೇಕಾದವರು. ಈ ಉತ್ತಮ ಬರಹದ ಲೇಖಕಿಗೆ ನನ್ನ ಅನೇಕ ಅಭಿನಂದನೆ ಮತ್ತು ಧನ್ಯವಾದಗಳು
ReplyDeleteನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು
Deleteಇಂದಿನ ದಿನಗಳಲ್ಲಿ ಹಿರಿಯರ ಒಡನಾಟ ಬಯಸುವವರೇ ಕಡಿಮೆ. ನಿಜಕ್ಕೂ ಇಂತಹವರ ಜೊತೆ ಕುಳಿತು, ಬೆರೆತು, ಮಾತನಾಡುವ ಅವಕಾಶ ದೊರೆತರೆ, ಅದೊಂದು ಸೌಭಾಗ್ಯ, ಬೆಲೆ ಕಟ್ಟಲಾಗದ ಅನುಭವ.
ReplyDeleteಅದನ್ನು ನೀವು ಪಡೆದುದೇ ಅಲ್ಲದೆ ನಮ್ಮೊಂದಿಗೆ ಹಂಚಿಕೊಂಡಿರುವುದು, ನೀವು ಹಿರಿಯರಿಗೆ ನೀಡುವ ಗೌರವವನ್ನು ಎತ್ತಿ ತೋರುತ್ತದೆ.
ಧನ್ಯವಾದಗಳು.
ಧನ್ಯವಾದಗಳು ಇದು ಹಿರಿಯರಿಂದಲೇ ಬಂದ ಸಂಸ್ಕಾರ ವಲ್ಲವೇ ?
Deleteಶ್ರೀಮತಿ ಅನು ಶಿವರಾಂ ತಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲೂ "ಇವರಿಗೆಲ್ಲ ಇಂದಿನ ವಿದ್ಯೆ ,ಅವಕಾಶ ಸೌಲಭ್ಯಗಳು ಸಿಕ್ಕಿದಿದ್ದರೆ! " ಎಂಬ ಮಾತು ಸತ್ಯ. ತಮ್ಮ ಒಳ್ಳೆಯ ಲೇಖನಗಳಿಗೆ ಧನ್ಯವಾದಗಳು.
ReplyDeleteನಿಮ್ಮ ನಿರಂತರ ಪ್ರೋತ್ಸಾಹ ನನ್ನಂಥವರಿಗೆ ಬರೆಯುವ ಸ್ಫೂರ್ತಿ ಕೊಡುತ್ತದೆ .ನಿಮಗೆ ಹೃತ್ಪೂರ್ವಕ ಧನ್ಯವಾದಗಳು .
Deleteಹೀಗೆ ತಾಳ್ಮೆ ಜವಾಬ್ದಾರಿಯಿಂದ ಮನೆಯ ಹಿರಿಯರು ಇದ್ದಿದ್ದರೆ ಎಲ್ಲರ ಮನೆಯ ಮಕ್ಕಳು ಒಳ್ಳೆಯ ಸ್ಥಿತಿಯಲ್ಲಿರುತ್ತಿದ್ದರು ಅನ್ಸುತ್ತೆ ಎಲ್ಲದ್ದಕ್ಕೂ ಪಡೆದುಕೊಂಡು ಬಂದಿರಬೇಕು..... ಫಣಿಯಮ್ಮ ಈ ಹೆಸರೆ ಹಾಗೆ ಅನ್ಸುತ್ತೆ ಎಂ ಕೆ ಇಂದಿರಾರವರ ಫಣಿಯಮ್ಮನ ಹಾಗೆ.
ReplyDelete