ಬೆಂಜಮಿನ್ ರೈಸ್ - ಬ್ರಿಟೀಶ್ ಕನ್ನಡಿಗ


ಬೆಂಜಮಿನ್ ಲೂಯಿಸ್  ರೈಸ್
ಲೇಖನ - ರಾಮಮೂರ್ತಿ ಬೆಸಿಂಗ್ ಸ್ಟೋಕ್ UK

ನೀವು ಬೆಂಜಮಿನ್ ರೈಸ್ ಬಗ್ಗೆ ಹೆಚ್ಚಿಗೆ ಕೇಳಿರದಿದ್ದರೆ ಆಶ್ಚರ್ಯವೇನೂ ಇಲ್ಲ. ಆದರೆ ಈತ ನಮ್ಮ ಹಳೆಯ ಮೈಸೂರ್ ದೇಶದಲ್ಲಿ ಸುಮಾರು 120 ವರ್ಷಗಳ ಹಿಂದೆ, ಮೊದಲನೆಯ ಬಾರಿಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು (Primary Education) ಸ್ಥಾಪಿಸಿದ ಮಹಾನ್ ವ್ಯಕ್ತಿ.
ಸಾವಿರಾರು ಹಳೆಯ ಕನ್ನಡ ಮತ್ತು ಸಂಸ್ಕೃತ ಗ್ರಂಥಗಳು ಮತ್ತು ಶಾಸನಗಳನ್ನು ಸಂಗ್ರಹಿಸಿ ಅವನ್ನು ಮೊದಲನೇ ಬಾರಿಗೆ ಜನಗಳಿಗೆ ಪರಿಚಯ ಮಾಡಿದವರು.



7-7-1837 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಬೆಂಜಮಿನ್ ರೈಸ್ ಅವರ ತಂದೆಯವರಾದ ಬೆಂಜಮಿನ್ ಹೋಲ್ಟ್ ರೈಸ್ ಅವರು, 1800 ರಲ್ಲಿ ಇಂಗ್ಲೆಂಡ್ನಿಂದ ಬಂದವರು. ಇವರು ಕನ್ನಡದಲ್ಲಿ ಪಾಂಡಿತ್ಯ ಪಡೆದು ನಮ್ಮ ಚರಿತ್ರೆ, ಭೂಗೊಳ ಮತ್ತು ಗಣಿತದ ಪುಸ್ತಕಗಳನ್ನು ಬರೆದರು. ಕನ್ನಡದಲ್ಲಿ ರಚಿತವಾದ ಮೊದಲ  ಬೈಬಲ್ ಇವರದ್ದೆ. ಬೆಂಗಳೂರಿನಲ್ಲಿ  ಈಗಲೂ Rice Memorial Church ಇದೆ.   

ಬೆಂಜಮಿನ್ ಲೂಯಿಸ್  ರೈಸ್ ಅವರ ಪ್ರಾಥಮಿಕ ವಿಧ್ಯಾಬ್ಯಾಸ ನಡೆದದ್ದು  ಬೆಂಗಳೂರಿನಲ್ಲಿ. 1860 ರಲ್ಲಿ Cambridge ವಿಶ್ವವಿದ್ಯಾಲಯದಿಂದ ಬಿ ಪದವಿ ಪಡೆದು ಮೈಸೂರಿಗೆ ಹಿಂತಿರುಗಿ ಬಂದನಂತರ, ಬೆಂಗಳೂರ್ ಸೆಂಟ್ರಲ್ ಹೈಸ್ಕೂಲಿನ (ಈಗಿನ ಸೆಂಟ್ರಲ್ ಕಾಲೇಜ್) ಪ್ರಿನ್ಸಿಪಾಲ್ ಆಗಿ ಸೇರಿದರು. 5 ವರ್ಷಗಳ ನಂತರ Inspector of Schools ಆದರುಈತ ಕನ್ನಡ, ಹಿಂದಿ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಪಾಂಡಿತ್ಯ ಪದೆದವರುಅದರಲ್ಲೂ ಕನ್ನಡದಲ್ಲಿ, ಹುದ್ದೆಯಲ್ಲಿ ಮೈಸೂರ್ ಪ್ರಾಂತ್ಯದ ಎಲ್ಲ ಭಾಗಗಳಿಗೂ ಹೋದಾಗ ನೂರಾರುಕಲ್ಲಿನ  ಶಾಸನಗಳನ್ನು ಸ್ಥಳೀಯ ಜನರ ಸಹಾಯದಿಂದ, ಹಳೆ ಕನ್ನಡದಿಂದ ಹೊಸಗನ್ನಡಕ್ಕೆ ಭಾಷಾಂತರಿಸಿದರು. ಇದಲ್ಲದೆ  ಅನೇಕ ತಾಳೆಗರಿ  ಮತ್ತು ತಾಮ್ರ ಪತ್ರದ  ಮೇಲೆ ರಚಿಸಿದ ಪತ್ರಿಕೆಗಳು ಸಹ ದೊರಕಿದವು. ಇವೆಲ್ಲವೂ   Epigraphia Carnatica 12 ಸಂಪುಟದಲ್ಲಿ ಪ್ರಕಟವಾಯಿತು. ಸುಮಾರು 9000  ಶಾಸನಗಳ ಪ್ರತಿ ಇದೆ. ಇದರಿಂದ ಮೈಸೂರ್ ದೇಶದ ಎರಡು ಸಾವಿರ ವರ್ಷದ ಸಾಮಾಜಿಕ ಚರಿತ್ರೆ ಪರಿಚಯ ಜನಗಳಿಗೆ ಉಂಟಾಯಿತು. 


1873 ರಲ್ಲಿ Director of Public Instruction ಆಗಿ, ಪ್ರಾಥಮಿಕ ವಿಧ್ಯಾಭಾಸವನ್ನು (Primary Education) ಸ್ಥಾಪಿಸಿದರುಪ್ರತಿ ಹೋಬಳಿಯಲ್ಲೂ ಒಂದು ಶಾಲೆ ಸ್ಥಾಪಿಸಿದವರು ಇವರೆ. ಆದರೆ ಇವರ ಗುರಿ ಪ್ರತಿ  ಹಳ್ಳಿಯಲ್ಲಿಯೂ  ಒಂದು ಶಾಲೆ ಇರಬೇಕು ಅನ್ನುವುದಾಗಿತ್ತು. ಆದರೆ ಸರಿಯಾದ ಉಪಾದ್ಯಾಯರ ಕೊರತೆ ಇದ್ದದ್ದರಿಂದ ಯೋಜನೆ ಸ್ವಲ್ಪ ಕಷ್ಟವೇ ಆಯಿತು. ಆಗಿನ ಮಹಾರಾಜರ ಆಡಳಿತದಲ್ಲಿ ಇವರನ್ನು ಮೈಸೂರಿನ ಜನಗಣತಿ ( Census) ನಡೆಸಲು ನೇಮಿಸಲಾಯಿತು. ಮುಂದೆ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಇಡೀ  ಭಾರತದ ಶಿಕ್ಷಣ ನೀತಿ ( Education Policy) ಇವರಿಂದ  ಪ್ರಾರಂಭವಾಯಿತು 

ಕೃಷ್ಣ ರಾಜ ಒಡೆಯರ್ ಮಹಾರಾಜರು 


1884 ರಲ್ಲಿ ಪುರಾತತ್ವಶಾಸ್ತ್ರ ಇಲಾಖೆಯ (Department of Archaeology) ನಿರ್ದೇಶಕರಾಗಿ ಕೆಲಸ ಶುರು ಮಾಡಿದರು. ಅಶೋಕನ ಕಾಲದ ಹಲವಾರು ಶಾಸನಗಳು, ರೋಮ್ ಸಾಮ್ರಾಜ್ಯದ  ನಾಣ್ಯಗಳು ಹೀಗೆ ಮುಂತಾದವು ಸಿಕ್ಕಿದ ಮೇಲೆ, ಅನೇಕರಿಗೆ ನಮ್ಮ ದೇಶದ ಚರಿತ್ರೆಯ ಪರಿಚಯವಾಯಿತು. ನೇಪಾಳದ ರಾಜ್ಯವಂಶವನ್ನು ಪ್ರಾರಂಬಿಸಿದ ನನ್ಯದೇವ, ಕರ್ನಾಟಕದ ಗಂಗ ವಂಶದವನು ಅಂತ ಸಾಧಿಸಿದ್ದು ರೈಸ್ ಅವರು.  1876 ಮತ್ತು 1897 ರಲ್ಲಿ ಪ್ರಾರಂಭಿಸಿದ Mysore Gazetteer, ಇವರು ನಡೆಸಿದ ಇನ್ನೊಂದು ಮಹಾ ಸಾಹಸ. ಇದರಲ್ಲಿ ಮೈಸೂರ್ ಮತ್ತು ಕೂರ್ಗ್ ದೇಶದ ಪಟ್ಟಣ ಮತ್ತು ಕೆಲವು ಹಳ್ಳಿಗಳ  ಚರಿತ್ರೆಯನ್ನು ಬರೆದಿದ್ದಾರೆ. 1906ರಲ್ಲಿ ಇವರು ನಿವೃತ್ತಿ ಹೊಂದುವ ಮುಂಚೆ Bibliotheca Carnatica, a collection major Kannada literary Texts, ಅನ್ನು 6 ಸಂಪುಟಗಳಲ್ಲಿ  ಪ್ರಕಟಿಸದರು. ಸುಮಾರು 300 ಕನ್ನಡ ಸಾಹಿತಿಗಳು ಮತ್ತು ಕವಿಗಳ ಬಗ್ಗೆ ಇದರಲ್ಲಿ ವಿವರವಾಗಿ ಪ್ರಸ್ತಾಪಿಸಿದ್ದಾರೆ. ರೈಸ್ ಅವರಿಗೆ ನಮ್ಮ ಭಾಷೆ, ಚರಿತ್ರೆ ಮತ್ತು ಧಾರ್ಮಿಕ ವಿಷಯಗಳ ಸಹಿಷ್ಣುತೆಯ ಮೇಲೆ ಬಹಳ ಹೆಮ್ಮೆ ಇತ್ತು


69 ವರ್ಷಗಳ ನಂತರ ತಾವು ಹುಟ್ಟಿದ ಬೆಂಗಳೂರನ್ನು ಬಿಟ್ಟು, 1906 ರಲ್ಲಿ ಇವರು ತಮ್ಮ ಕುಟುಂಬದ ಸಮೇತ ಇಂಗ್ಲೆಂಡಿಗೆ ತೆರಳಿದರು. ಅಲ್ಲೂ  ಅವರು ಕನ್ನಡ ಭಾಷೆಯನ್ನು ಮರೆಯಲ್ಲಿಲ್ಲ. 1924 ರಲ್ಲಿ ಲಂಡನ್ನಿನ ಒಂದು ವಸ್ತುಪ್ರದರ್ಶನ (exhibition) ದಲ್ಲಿ ಕನ್ನಡದವರನ್ನು ಭೇಟಿಯಾದರು. ಆತ ಇಂಗ್ಲಿಷಿನಲ್ಲಿ ಮಾತನಾಡಿ ದಾಗ ರೈಸ್ ಅವರು, "ಅಯ್ಯಾ ಕನ್ನಡದಲ್ಲಿ ಮಾತನಾಡೋಣಮುದ್ದಿನ ಕನ್ನಡ ನನ್ನ ಕಿವಿಗೆ ಬಿದ್ದು ಬಹಳ ದಿನಗಳಾಯಿತು" ಎಂದರಂತೆ !! 1927 ಏಪ್ರಿಲಿನಲ್ಲಿ ಅವರ ಸ್ನೇಹಿತರಾಗಿದ್ದ ಶ್ರೀ ನರಸಿಂಹಾಚಾರ್ ಅವರ ಬಗ್ಗೆ ಹೀಗೆ ಬರೆದಿದ್ದಾರೆRemember me to all. My love to Mysore is unending” ! 10-07-1927 ರಲ್ಲಿ ರೈಸ್ ಅವರು ನಿಧನರಾದರು. ಇವರು 43 ವರ್ಷಗಳ ಕಾಲ  ಕನ್ನಡಕ್ಕೆ ಮಾಡಿರುವ ಸೇವೆಯನ್ನು ಕರ್ನಾಟಕ ಮತ್ತು ಕನ್ನಡಿಗರು ಎಂದಿಗೂ ಮರೆಯುವ ಹಾಗಿಲ್ಲ. ಆದರೆ ಕರ್ನಾಟಕದಲ್ಲಿ ಮಹಾನ್ ವ್ಯಕ್ತಿಯನ್ನು  ಈಗ ನೆನಸುವರು ಕೆಲವರು ಮಾತ್ರ ಎಂದು ನನ್ನ ಭಾವನೆ. ಏಕೆಂದರೆ ಇವರ ಬಗ್ಗೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ನನ್ನ ಲೇಖನದ ಉದ್ದೇಶ, ಮಹಾನ್ ವ್ಯಕ್ತಿಯನ್ನು ನಮ್ಮ ಬಳಗದ ಕನ್ನಡಿಗರಿಗೆ ಪರಿಚಯಿಸುವುದಾಗಿದೆ. ಇದರ ಮೂಲಕ ನಮ್ಮವರಿಗೆ ಇಂಗ್ಲೇಂಡಿನ ಕನ್ನಡಾಭಿಮಾನಿಯ ಬಗ್ಗೆ ತಿಳಿಯಲಿ.  

Comments

  1. This article is a timely reminder of what we owe to many dedicated Orientalists, both Indian and foreign, of the 18th and 19th centuries.

    Benjamin Rice contributed to the History of Mysore, Kannada language and literature more than any other Kannadiga. Indeed a major part of our current knowledge on the History of Mysore comes from his researches on thousands of inscriptions, copper plate and palm-leaf documents as well as many local folklore that he collected.
    Some Sydney Kannadigas may recall that I made a power point presentation on the life and achievements of B.L. Rice. This was about four years ago, in 2015.
    One of the Kannada people that he met in London in 1924 was Mr S.G. Shastri, a senior public servant and well-known Kannada author.
    There are punctuation errors in the English quote. The correct form is “Remember me to all. My love to Mysore is unending”!

    ReplyDelete
  2. Nice to go through. Kannada has been enriched by contributors from many non kannadigas. Is it the beauty of the language itself or the sahrudayate of kannadigas? May be a combination of both. Let's continue to enjoy the beauty of the language and its glorious history.

    ReplyDelete

Post a Comment