ಫಿಜಿ ಎಂಬ ಮಾಯಾ ದ್ವೀಪ

ಫಿಜಿ ಎಂಬ ಮಾಯಾ ದ್ವೀಪ
ಅನುಭವ ಲೇಖನ  - ಮಹಂತೇಶ್ ಚರಂತಿಮಠ

ಮೋಡದ ಮೇಲಿಂದ ಕಾಣುತ್ತಿದ್ದ ಪುಟ್ಟ ಪುಟ್ಟ ದ್ವೀಪಗಳು, ಸುತ್ತಲೂ ಧಾರಾಳವಾಗಿ ಕಂಡು ಬರುವ, ಹಸಿರುಹೊದ್ದು ಮಲಗಿರುವ ಪರ್ವತಗಳು, ಚಿತ್ರ-ವಿನ್ಯಾಸದ ಬಟ್ಟೆ ತೊಟ್ಟ ಪಿಜಿಯನ್ನಯರು, ಧಾರಾಕಾರವಾಗಿ ಸುರಿಯುತ್ತಿರುವ ಬೆವರು,ಅದನ್ನು ಲೆಕ್ಕಿಸದೇ ಕೆಲಸದಲ್ಲಿ ನಿರತರಾದ ಜನರು, ಹೋದಲೆಲ್ಲಾ ಕೇಳಿ ಬರುವ ಬುಲಾ(bula), ವನಕ್ಕಾಗಳು (vi-nakka), ದಡೂತಿ ದೇಹಗಳು, ಬೇರೆ ಬೇರೆ ಭಾಷೆಯನ್ನು ಜೋರಾಗಿ  ಮಾತಾಡುವ ಜನರು, ಪೊಲೀಸರಿಗೆ ಅವಾಜ್ ಹಾಕುವ ವಾಹನ ಚಾಲಕರು, ವಲಸೆ ಬಂದ ಭಾರತೀಯರು, ಚೈನೀಸರು, ದಾರಿಯಲ್ಲಿ ಯಚ್ಛೇಥವಾಗಿ ಕಾಣುವ ಭಾರತೀಯ ಹೋಟೆಲಗಳು, ಅಂಗಡಿಗಳು ಕಂಡು ಬಂದದ್ದು ಫಿಜಿಯ ಪ್ರಸಿದ್ಧ ಸ್ಥಳವಾದ ನಂದಿಯಲ್ಲಿ().
                             ಇಂಗ್ಲೀಷನಲ್ಲಿ ಬರೆವುದು ನಾಡಿ (nadi) ಆದರೂ ಕರೆವುದು ನಾಂದಿ ಎಂದು. ನನಗೆ ನಂದಿಯೇ ಸರಿ ಎನಿಸಿತು. ಎಲ್ಲಡೆ ಪ್ರವಾಸಿಗರು, ಅವರಿಗೆ ಸಹಾಯ ಮಾಡುತ್ತಿರುವ ಜನರು, ಊರಿನಿಂದ ಸ್ವಲ್ಪ ದೂರ ಹೋದರೆ ಕಾಣುವ ಕಬ್ಬಿನ ಗದ್ದೆಗಳು , ಫಿಜಿ ಹಿಂದಿ ಮಾತಾಡುವ ಭಾರತೀಯರು, ರಗ್ಬಿ ಆಟವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸ್ಥಳೀಯರು, ಕಡಲು ಪ್ರಕೃತಿ ಜೊತೆ ಅತ್ತ್ಯುತ್ತಮ ಸಂಬಂಧ ಹೊಂದಿರುವ ಪಿಜಿಯನ್ನರು. ಸಾವಿರಾರು ವರ್ಷಗಳ ಹಿಂದೆ ಆಫ್ರಿಕಾದಿಂದ ಕಡಲಿನ ಮುಖಾಂತರ ವಲಸೆ ಬಂದ ಮೂಲನಿವಾಸಿಗಳು, ಹಲವಾರು ಭಾಷೆ ಮಾತಾಡಬಲ್ಲರು. ಆದರೆ ಬರೆಯುವ ಲಿಪಿ ಮಾತ್ರ ಇಂಗ್ಲೀಷ್. ನಾನು ಭೇಟಿ ಕೊಟ್ಟ ಹಳ್ಳಿ ನಮ್ಮ ದೇಶದ ಹಳ್ಳಿ ಥರ. ನೆಲಕ್ಕೆ ಸಮನಾಗಿ ಕಟ್ಟಿದ ಮನೆ, ಪಡಸಾಲೆ, ಮತ್ತೊಂದು ಕೋಣೆ, ಅಡುಗೆ ಮನೆ, ಮತ್ತು ಒಂದು ಸಣ್ಣ ಬಚ್ಚಲ ಮನೆ. ಆ ಹಳ್ಳಿಗೆ ಒಬ್ಬ ಮುಖಂಡ, ಆತನ ಅಲ್ಲಿ ಸ್ವಲ್ಪ ವಿಶೇಷ ಎನ್ನಿಸುವಂತ ಮನೆ, ಅಲ್ಲಿ ಅವನದೇ ಅಂತಿಮ ನಿರ್ಣಯ. ಸಾದಾರಣವಾಗಿ ಹಳ್ಳಿಯಲ್ಲಿ ೨೦-೪೦(20-40) ಮನೆಗಳು, ೧೦೦-೧೫೦ (100-150) ಜನರು ವಾಸಿಸುವರು. ಕುಟುಂಬ ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟ ನಿವಾಸಿಗಳು ತುಂಬಾ ಹಿಂದೆ ಕ್ರೈಸ್ತ ಮತಕ್ಕೆ ಪರಿವರ್ತಿರಾಗಿ ಕೂಡ, ತಮ್ಮ ಸಂಸ್ಕ್ರತಿಯಲ್ಲಿ ಅಪಾರ ನಂಬಿಕೆ ಕಂಡು ಬರುವುದು ಸರ್ವೇಸಾಮಾನ್ಯ.

         ನಾಂದಿಯಲ್ಲಿ ಎಲ್ಲ ತರದ ಆಟಗಳು ಎಲ್ಲ ವಯಸ್ಸಿನರಿಗೂ ಲಭ್ಯ. ಗುಂಡಿಗೆ ಗಟ್ಟಿಯಿದ್ದರೆ ಸ್ಕೂಬಾ ಡೈವಿಂಗ್, ಸ್ನೋಕಲಿಂಗ್ ಮತ್ತಿತರ ಸಾಹಸಗಳು, ಕಾಸು ಮನಸ್ಸು ಇದ್ದರೇ, ಸ್ಕೈ ಡೈವಿಂಗ್. ನೀರಿನಲ್ಲಿ ಇಳಿಯದೇ ಎಲ್ಲ ನೋಡಬೇಕಾದವರಿಗೆ ಸಬ್ಮ್ ಮರೀನ್ ನಂತಹ ಗ್ಲಾಸ್ಸಿನ ದೋಣಿ, ಶರಧಿ ತಳವನ್ನು ಗ್ಲಾಸ್ ತಳದ ಮೂಲಕ ನೋಡುತ್ತಾ ಕೋರಲ್ (ಹವಳದ ದಿಬ್ಬಗಳು), ಚಿಕ್ಕ , ದೊಡ್ದ ತರದ ಮೀನುಗಳು ಮತ್ತು ಅನೇಕ ಜಲಚರಗಳನ್ನು ನೋಡುವ ಸೌಭಾಗ್ಯ. ಪ್ರವಾಸಿಗರನ್ನು ಕೈ ಬಿಸಿ ಕರೆಯುವ ಹಲವಾರು ಪುಟ್ಟ ದ್ವೀಪಗಳು, ನಾವು ಹೋಗಿದ್ದ ಸೌತ್ ಸೀ ಐಲೆಂಡ್(south see south sea island) ರಮಣೀಯವಾಗಿಯೂ ಸುಂದರವಾಗಿಯೂ ಇತ್ತು. ಈ ದ್ವೀಪದ ಉದ್ದ ಸುಮಾರು ೨೦೦-೨೫೦ (200-250) ಮಿಟರ್ರು ಮತ್ತು ಅಗಲ ೧೦೦-೧೨೫ (100-125)ಮೀಟರ್. ಊರಿನ ಸುತ್ತಲೂ ಹರಡಿರುವ ಕಡಲ ದಂಡೆಗಳು, ಅಲ್ಲಿ ನಲಿದಾಡುವ ಕಿರಿಯರು, ಹಿರಿಯರು, ಹುಡುಗ/ಗಿ/ರು, ವಯಸ್ಸಾದವರು, ನಡು ವಯಸ್ಸಿನವರು ಸಂತೋಷದಿಂದ ನಲಿದಾಡುವದನ್ನು ನೋಡಬಹುದು.
     ಅವಸರವಿಲ್ಲ, ಚಿಂತೆಯಿಲ್ಲ ನೀವೀಗ ಪಿಜಿ ಸಮಯದಲ್ಲಿದ್ದಿರಿ( No hurry, no worry -Your are on Fiji Time ) -ಅನ್ನುವ ಘೋಷಣೆ, ಕವಿ ಕುವೆಂಪು ಅವರ "ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ,  ಯಾರು ಮೇಲಿಲ್ಲ, ಯಾರು ಕೀಳಲ್ಲ, ನೀರೆಲ್ಲವೂ ಅಮೃತ"  ಸಮನಾಗುತ್ತದೆ

Comments

  1. ಅನುಭವ ಲೇಖನ ಚೆನ್ನಾಗಿದೆ ಮಹಾಂತೇಶ್. ಲೇಖನ ಓದಿದ ಮೇಲೆ ಆದಷ್ಟು ಬೇಗ ನಮಗೂ ಒಮ್ಮೆ ನೋಡಿಬರುವ ಆಸೆಯಾಗಿದೆ.
    ಫಿಜಿ ದೇಶಕ್ಕೆ ಸಕ್ಕರೆ ಕಾರ್ಖಾನೆಯಲ್ಲಿ ದುಡಿಸಿಕೊಳ್ಳಲು ಭಾರತದಿಂದಲೂ ಖೈದಿಗಳನ್ನು ಕರೆತಂದಿದ್ದರು. ಅವರೇ ಈಗಿನ ಫಿಜಿ ಭಾರತೀಯರು. ಎಲ್ಲಾ ರಾಜ್ಯಗಳಿಂದ ಸ್ವಲ್ಪ ಜನರನ್ನು ಕರೆತಂದರು. ಈಗ ಮುಖ್ಯವಾಗಿ ಉಳಿದಿರುವುದು ಹಿಂದಿ ಮತ್ತು ತಮಿಳರು. ಕನ್ನಡದವರು ಯಾರಾದರೂ ಇದ್ದಾರಾ ಎಂದು ಅನುಮಾನ ಇತ್ತು, ಇತ್ತೀಚಿಗೆ ಒಬ್ಬರು ಭೇಟಿಯಾದರು ಆದರೆ ಕನ್ನಡ ಪದಗಳೇ ಅವರ ಭಾಷೆಯಲ್ಲಿ ಹೆಚ್ಚಾಗಿ ಬಳಸಲು ಇಲ್ಲವಾಗಿದೆ.

    ReplyDelete
    Replies
    1. ನಮಸ್ಕಾರ, ಪ್ರತಿಕ್ರಿಯೆಗೆ ಮತ್ತು ಮಾಹಿತಿಗೆ ಧನ್ಯವಾದ.

      Delete
  2. Nice article. Good to know many things from your article.

    ReplyDelete

  3. ಹೊರನಾಡ ಚಿಲುಮೆ ಪತ್ರಿಕೆಗೆ ಒಳ್ಳೆಯ ಲೇಖನ ಒದಗಿಸಿದ್ದೀರಿ. ಧನ್ಯವಾದಗಳು Mahantesh

    ReplyDelete
    Replies
    1. ನಮಸ್ಕಾರ ನಾಣಿಯವರಿಗೆ,
      ಪ್ರತಿಕ್ರಿಯೆಗೆ ಧನ್ಯವಾದಗಳು.

      Delete

Post a Comment