ಏಕಶ್ಲೋಕೀ ರಾಮಾಯಣ

ಏಕಶ್ಲೋಕೀ ರಾಮಾಯಣ                  
ಲೇಖನ  - ಬೇಲೂರು ರಾಮಮೂರ್ತಿ

ಇಡೀ ರಾಮಾಯಣವನ್ನು ಒಂದೇ ಒಂದು ಶ್ಲೋಕದಲ್ಲಿ ಹೇಳುವುದೂ ಕೂಡಾ ಒಂದು ಕಲೆ. ಇದಕ್ಕೊಂದು ಕಥೆ ಇದೆ.

ಒಬ್ಬ ಭಿಕ್ಷುಕ ರಾಮಾಯಣ, ಮಹಾಭಾರತದ ಕತೆಗಳನ್ನು ಹಾಡಿಕೊಂಡು, ಹೇಳಿಕೊಂಡು, ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದನಂತೆ. ಹೀಗೊಂದು ದಿನ ಒಂದು ಮನೆಯ ಮುಂದೆ ನಿಂತು ಭಿಕ್ಷೆ ಬೇಡಿದನಂತೆ. ಆಗ ಮನೆಯವನು ನಾನು ನಿನಗೆ ಭಿಕ್ಷೆ ಕೊಟ್ಟರೆ ನೀನು ನನಗೆ ಏನು ಕೊಡುತ್ತೀಯ ಎಂದು ಕೇಳಿದನಂತೆ. ಭಿಕ್ಷುಕ ನಗುತ್ತಾ ನಾನೇನು ಕೊಡಬಲ್ಲೆ, ನಾನೊಬ್ಬ ಭಿಕ್ಷುಕ, ಬೇಡುವುದು, ಬೇಡಿದ್ದನ್ನು ಉಣ್ಣುವುದು, ಸಿಕ್ಕ ಜಾಗದಲ್ಲಿ ಮಲಗುವುದು ಇದೇ ನನ್ನ ಕಾಯಕ. ಆಗ ಮನೆಯವನು, ನೀನು ಒಂದೇ ಒಂದು ಶ್ಲೋಕದಲ್ಲಿ ರಾಮಾಯಣ ಹೇಳಿದರೆ ನಿನಗೆ ಭಿಕ್ಷೆ ಕೊಡುತ್ತೀನಿ  ಎಂದನಂತೆ. ಆಗ ಭಿಕ್ಷುಕ ಅದಕ್ಕೇನು,  ಹೇಳುತ್ತೀನಿ ಎಂದು ಈ ಶ್ಲೋಕ  ಹೇಳಿದನಂತೆ.

ಅದೌ ರಾಮತಪೋವನಾದಿಗಮನಂ ಹತ್ವಾಮೃಗಕಾಂಚನಂ
ವೈದೇಹೀ ಹರಣಂ ಜಟಾಯು ಮರಣಂ, ಸುಗ್ರೀವ  ಸಂಭಾಷಣಮ್
ವಾಲೀ ನಿರ್ಧನಲಂ, ಸಮುದ್ರತರಣಂ, ಲಂಪಾಪುರೀದಹನಂ
ಪಶ್ವಾದ್ರಾವಣ ಕುಂಭಕರ್ಣ ಹನನಮೇತದ್ದೆ ರಾಮಾಯಣಮ್    

ಎನ್ನುವ ಶ್ಲೋಕ  ಹೇಳಿದನಂತೆ

ಅಂದರೆ

ರಾಮ ಕಾಡಿಗೆ ಹೋದನು
ಬಂಗಾರದ ಜಿಂಕೆಯನ್ನು ಕೊಂದನು
ಸೀತೆಯ ಅಪಹರಣವಾಯ್ತು, ಜಠಾಯು ಸತ್ತ
ಸಗ್ರಿÃವನೊಡನೆ ರಾಮನ ಸಖ್ಯವಾಯ್ತು
ವಾಲಿ ವಧೆ ಆಯ್ತು, ಸಾಗರೋಲ್ಲಂಘನವೂ ಆಯ್ತು
ಹನುಮ ಲಂಕೆಯನ್ನು ಸುಟ್ಟದ್ದಾಯ್ತು
ರಾವಣ ಕುಂಭಕಣ್ರನ್ನು ಇತಿಶ್ರೀಗೊಳಿಸಲಾಯ್ತು
ಎಂಬಲ್ಲಿಗೆ ರಾಮಾಯಣ ಮುಕ್ತಾಯವಾಯಿತು


ಸರಿ ಇದರಿಂದ ಸಂಸತಗೊಂಡ ಮನೆಯವನು ಭಿಕ್ಷೆ ನೀಡಿ ಕಳಿಸಿದನಂತೆ.

ಇದನ್ನು ನೋಡುತ್ತಿದ್ದ ಒಬ್ಬ ಜಿಪುಣ ಭಿಕ್ಷುಕ ನನ್ನು ಕರೆದು ಒಂದು ಮೆಣಸಿನಕಾಯಿ ಕೊಟ್ಟು ಇದು ನನ್ನ ಭಿಕ್ಷೆ ನೀನು ನನಗೆ ರಾಮಾಯಣ ಕಥೆಯನ್ನು ಹೇಳು ಎಂದನಂತೆ. ಎದುರು ಮನೆಯವರೇನೋ ಕೈ ನೀಡಿ ಭಿಕ್ಷೆ ಕೊಟ್ಟರು. ಆದರೆ ನೀವು ಕೊಡುತ್ತಿರುವ ಒಂದು ಸಣ್ಣ ಮೆಣಸಿನಕಾಯಿಗೆ ಹೇಗೆ ರಾಮಾಯಣ ಹೇಳುವುದು ಎಂದನಂತೆ. ಅದಕ್ಕೆ ಜಿಪುಣ ನನಗೆ ಅದೆಲ್ಲಾ ಗೊತ್ತಿಲ್ಲ. ನಾನು ನಿನಗೆ ಭಿಕ್ಷೆ ಕೊಟ್ಟಿದ್ದಿÃನಿ. ನೀನು ನನಗೆ ರಾಮಾಯಣ ಹೇಳಲೇಬೇಕು ಎಂದನಂತೆ.

ಆಗ ಭಿಕ್ಷುಕ  ಹುಟ್ಟಿ, ಕಟ್ಟಿ, ಕುಟ್ಟಿ ಮತ್ತು ಮೆಟ್ಟಿ – ಇದೇ ರಾಮಾಯಣ ಅಂದನಂತೆ

ಅದಕ್ಕೆ ಜಿಪುಣ ಹುಬ್ಬೇರಿಸಿ  ಇದೇನು ರಾಮಾಯಣವೇ ಅಂತ ಕೇಳಿದ್ದಕ್ಕೆ – ಒಂದು ಮೆಣಸಿನ ಕಾಯಿಗೆ ಇನ್ನೆಂಥಾ ರಾಮಾಯಣ ಕತೆ ಹೇಳುವುದು. ಆದರೂ ಹೇಳಿದ್ದೇನೆ  ಕೇಳು.

ಶ್ರೀ ರಾಮಚಂದ್ರನು ಹುಟ್ಟಿ
ವಾನರ ಸೇನೆಯನ್ನು ಕಟ್ಟಿ
ರಾವಣಾಸುರನನ್ನು ಕುಟ್ಟಿ
ಮರಳಿ ಅಯೋಧ್ಯೆಯ ಮೆಟ್ಟಿ

ಎಂಬಲ್ಲಿಗೆ ರಾಮಾಯಣ ಕತೆ ಮುಗಿಯಿತು ಎಂದನಂತೆ

Comments

  1. ಚಿಕ್ಕ ಚೊಕ್ಕ ಲೇಖನ ಚೆನ್ನಾಗಿದೆ ಸಾರ್. ಭಿಕ್ಷುಕನ ಸಂಗತಿ (ಹುಟ್ಟಿ, ಕಟ್ಟಿ, ಕುಟ್ಟಿ ಮತ್ತು ಮೆಟ್ಟಿ) ಕೂಡಾ ಚೆನ್ನಿದೆ

    ReplyDelete
  2. ಹೊರನಾಡ ಚಿಲುಮೆ ಪತ್ರಿಕೆಗೆ ಒಳ್ಳೆಯ ಲೇಖನ ಒದಗಿಸಿದ್ದೀರಿ. ಧನ್ಯವಾದಗಳು Ramamurthy sir

    ReplyDelete

Post a Comment