ಶಾಲೆ ವಾರ್ಷಿಕ ದಿನ ೨೦೧೮

ಶಾಲೆ ವಾರ್ಷಿಕ ದಿನ ೨೦೧೮
- ವರದಿ

ಸಿಡ್ನಿ ಕನ್ನಡ ಶಾಲೆ ವಾರ್ಷಿಕ ದಿನಾಚರಣೆಯ ಪ್ರಯುಕ್ತ 2018 ಡಿಸೆಂಬರ್ 15 ರಂದು Wattle Grove ಸಾರ್ವಜನಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪೋಷಕರೂ, ಮಕ್ಕಳೂ ಅತಿಥಿಗಳು ಎಲ್ಲರೂ ಸಮಯಕ್ಕೆ ಸರಿಯಾಗಿ ನೆರೆದು ಮಧ್ಯಾಹ್ನ ೩ಕ್ಕೆ ಶ್ರೀಯುತ ನಾರಾಯಣ ಕನಕಾಪುರ  ಎಲ್ಲರಿಗೂ ಸ್ವಾಗತ ಕೋರುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ನುಡಿದರು.


ನಂತರ ಮುಖ್ಯ ಅತಿಥಿಗಳಾದ ಶ್ರೀಯುತ ಅಶೋಕ್  ಮಕ್ಕಳಿಗೆ ಒಂದೆರೆಡು ಹಿತವಚನ ಹೇಳಿದರು.ದೂರದೂರಿನಲ್ಲಿ ಕನ್ನಡ ಕಲಿಯಲು ಬರುತ್ತಿರುವ ಮಕ್ಕಳ ಮತ್ತು ಅವರನ್ನು ಶಾಲೆಗೆ ಕರೆತರುವ ಪೋಷಕರನ್ನೂ ಪ್ರಶಂಸೆ ಮಾಡಿದರೂ.ಹಿರಿಯ ಶಿಕ್ಷಕಿ ಶ್ರೀಮತಿ  ಸುದರ್ಶನ್  ಅವರೂ ಅತಿಥಿಗಳ ಜೊತೆಗೆ ಉಪಸ್ಥಿತರಿದ್ದರು. ಮಕ್ಕಳು ಮತ್ತು ಪೋಷಕರನ್ನು ಉದ್ದೇಶಿಸಿ ಭಾಷೆ ಮತ್ತು  ಅವಶ್ಯಕತೆ ,ಕಲಿಕೆ ಮತ್ತು ನಿಭಾಯಿಸುವ  ಬಗ್ಗೆ ನುಡಿದರು. 



 ಶಾಲೆಯ ವಾರ್ಷಿಕ  ಆದಾಯ ಮತ್ತು ಖರ್ಚು ಇವುಗಳ ಬಗ್ಗೆ ಶ್ರೀ ನಾರಾಯಣ ಸಭೆಗೆ ಓದಿ ಒಪ್ಪಿಸಿದರು.ನಂತರ  ಅವರು ವರ್ಷದ ಅತ್ಯುತ್ತಮ ವಿಧ್ಯಾರ್ಥಿಗಳ ಹೆಸರು ಸೂಚಿಸಿ ಅವರಿಗೆ ಶ್ರೀ ಅಶೋಕ್  ಅವರಿಂದ ಉಡುಗೊರೆ, ಪ್ರಶಂಸಾ ಪತ್ರವನ್ನೂ ವಿತರಿಸಿದರು. ಶಾಲೆಯ ನಿರಂತರ ಸೇವೆಗೆ ನಿಂತಿರುವ ಶಿಕ್ಷಕರಿಗೂ ಉಡುಗೊರೆಗಳನ್ನು ಕೃತಜ್ಞತಾ ಭಾವದಿಂದ ಕೊಡಲಾಯಿತು.ಶಾಲೆಯ ಪ್ರಾಂಶುಪಾಲರಾದ  ಶ್ರೀಯುತ ನಾರಾಯಣ ಅವರು ಈಗಿನ ಪೀಳಿಗೆಯ  ಕನ್ನಡ ಸಾಹಿತ್ಯಡಾ ಅರಿವಿನ ಬಗ್ಗೆ  ಮನವರಿಕೆ ಮಾಡಿಕೊಡುತ್ತಾ ಮನೆಯಲ್ಲಿ ಸುಲಭವಾಗಿ  ಭಾಷೆ  ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ಕುತೂಹಲ ಮಾಹಿತಿಯನ್ನೂ ತಮ್ಮ ಪುಟ್ಟ ಭಾಷಣದಲ್ಲಿ ಅಳವಡಿಸಿ ಹೇಳಿದರು . ಮುಂದೆ ಮಕ್ಕಳು ನಡೆಸಿಕೊಟ್ಟ ಚಿಕ್ಕ ಮನರಂಜನಾ ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿತು. ಎಲ್ಲಾ ಮಕ್ಕಳ ದ್ವನಿ ಕೂಡಿಸಿ ತಿಂಡಿ ಹಾಡನ್ನು ಚೆನ್ನಾಗಿ ಹಾಡಿ ಪ್ರೇಕ್ಷಕರಿಗೆ ಮುದನೀಡಿದರು.ಲಘು ಉಪಹಾರದೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.

Comments

  1. Congratulations on yet another successful year of Kannada School. Keep up the good work!

    ReplyDelete
  2. Congratulations to all the kids. very good initiative in overseas. well done

    ReplyDelete

Post a Comment