ಹಾಸ್ಯೋತ್ಸವ 2018


ಹಾಸ್ಯೋತ್ಸವ 2018
ವರದಿ - ಬೇಲೂರು ರಾಮಮೂರ್ತಿ

ಬೆಂಗಳೂರಿನಲ್ಲಿ ಎಂದಿನಂತೆ ವಿಜೃಂಬಣೆಯಿಂದ ನಡೆದ ಹಾಸ್ಯೋತ್ಸವ 2018
ಡಿಸೆಂಬರ್ 25 ಅಂದರೆ ಕ್ರಿಸ್ ಮಸ್‍ಹೇಗೊ ಹಾಗೆ ಹಾಸ್ಯೋತ್ಸವ ಎನ್ನುವ ಹಾಗಾಗಿದೆ. ಹಾಸ್ಯವನ್ನು ಆಸ್ವಾದಿಸಲು ಪ್ರೇಕ್ಷಕರು ಸಿದ್ದರಿರುತ್ತಾರೆ. ಎಂದಿನಂತೆ ಮಂಗಳವಾರ, 25.12.2018ರಂದು ಬೆಂಗಳೂರಿನ 7ನೇ ಬ್ಮಾಕ್‍ನಲ್ಲಿರುವ ನ್ಯಾಷನಲ್ ಕಾಲೇಜಿನ ಆವರಣದ ಎಚ್. ಎನ್. ಕಲಾಕ್ಷೇತ್ರದಲ್ಲಿ ಡಾ. ಪ್ರಭುಶಂಕರ್ ಅವರ ನೆನಪಿನ ಹಾಸ್ಯೋತ್ಸವ ಜರುಗಿತು. 

ಮುಖ್ಯಮಂತ್ರಿ ಚಂದ್ರು ಹಾಸ್ಯೋತ್ಸವಕ್ಕೆ ಚಾಲನೆ ಕೊಟ್ಟರೆ, ಪ್ರೊ. ಅ.ರಾ. ಮಿತ್ರ, ಪ್ರೊ. ರೇಣುಕಾರ್ಯ, ಬೇಲೂರು ರಾಮಮೂರ್ತಿ ಮುಂತಾದವರು ಪ್ರಭುಶಂಕರ ಅವರ ನೆನಪನ್ನು ತಿರುವಿ ಹಾಕಿದರು. ಹಾಗೆ ನೋಡಿದರೆ 25.12.1995 ರಂದು ಪ್ರಪ್ರಥಮವಾಗಿ ಜರುಗಿದ ನಾ. ಕಸ್ತೂರಿ ಅವರ ಸಂಸ್ಮರಣೆಯ ಹಾಸ್ಯೋತ್ಸವದಲ್ಲಿ ಭಾಗವಹಿಸಿದ್ದ ಪ್ರಭುಶಂಕರ ಅವರು ನಾ. ಕಸ್ತೂರಿಯವರ ವಿಶಿಷ್ಟ ಹಾಸ್ಯವನ್ನು ಅಷ್ಟೇ ವಿಶಿಷ್ಟ ಶೈಲಿಯಿಂದ ಪರಿಚಯಿಸಿದ್ದರು.

ಇಡೀ ದಿನ ನಡೆದ ಹಾಸ್ಯೋತ್ಸವದಲ್ಲಿ ವೈ. ವಿ. ಗುಂಡೂರಾವ್, ಕೆ.ಪಿ. ಪುತ್ತೂರಾವ್, ಎಚ್. ಡುಂಡಿರಾಜ್, ಡಾ. ಡಿ.ವಿ. ಗುರುಪ್ರಸಾದ್ ಮುಂತಾದವರು ಭಾಗವಹಿಸಿದ್ದರು. ಗಾನವಿನೋದಿನಿ ತಂಡದಿಂದ ನಡೆದ ಹಾಸ್ಯ, ಗಾನ ವೈಭವ ಹಾಸ್ಯೋತ್ವವ 2018 ಕ್ಕೆ ತೆರೆ ಹಾಕಿತು.


Comments

  1. ವರದಿ ಚೆನ್ನಿದೆ ಧನ್ಯವಾದಗಳು

    ReplyDelete

Post a Comment