ಮಗನ ಹುಟ್ಟು ಹಬ್ಬದ ದಿನ

ಮಗನ ಹುಟ್ಟು ಹಬ್ಬದ ದಿನ
- ಬೇಲೂರು ರಾಮಮೂರ್ತಿ

ರಾತ್ರಿ 1,30ಕ್ಕೆ ಫೋನ್ ಬರುತ್ತೆ ಮಗ ಫೋನ್ ಎತ್ತುತ್ತಾನೆ. ತಾಯಿಯ ಧ್ವನಿ!
"ಹುಟ್ಟು ಹಬ್ಬದ ಶುಭಾಷಯಗಳು ಚಿನ್ನು" ಮಗ ಕೋಪದಿಂದ "ಇಷ್ಟು ರಾತ್ರಿಯಲ್ಲಿ ಫೋನ್ ಯಾಕೆ ಮಾಡಿದೆ? ಬೆಳಗ್ಗೆ ಮಾಡಿದ್ದರೆ ಆಗ್ತಾ ಇರ್ಲಿಲ್ವಾ , 
ನನ್ನ ನಿದ್ದೆ ಎಲ್ಲಾ ಕೆಡಿಸಿಬಿಟ್ಟೆ" ಅಂತ ಫೋನ್ ಕಟ್ ಮಾಡ್ತಾನೆ.
ಏಕೆಂದರೆ ಪ್ರತಿ ವರ್ಷ ಇದೇ ಸಮಯಕ್ಕೆ ಅವನ ಅಮ್ಮನಿಂದ ಅವನಿಗೆ ಫೋನ್ ಬರುತ್ತದೆ.
ಸ್ವಲ್ಪ ಸಮಯದಲ್ಲೆ ತಂದೆಯ ಫೋನ್. ಆದರೆ ಮಗ ತಂದೆಯ ಮೇಲೆ ಕೋಪ ಮಾಡಿಕೊಳ್ಳುವುದಿಲ್ಲ. ಆದರೆ ಸಂಯಮದಿಂದ ಅಪ್ಪಾ ಬೆಳಗ್ಗೆ ಫೋನ್ ಮಾಡಿದ್ದರೆ ಆಗ್ತಿತ್ತಲ್ಲ.
ನೀನು ನಮ್ಮನ್ನು ಬಿಟ್ಟು ವಿದೇಶಕ್ಕೆ ಹೋಗಿ 25 ವರ್ಷ ಆಯಿತು. ಎಲ್ಲೋ ಒಂದೆರಡು ಸಾರಿ ಬಂದು ಒಂದೆರಡು ದಿನ ಇದ್ದ ಹಾಗೆ ಮಾಡಿದೀಯ. ಹೀಗಾಗಿ ಇಲ್ಲಿನ ಸ್ಥಿತಿಗತಿಗಳು ನಿನಗೆ ಸರಿಯಾಗಿ ತಿಳಿಯದು. ಏನ್ ಗೊತ್ತಾ ಮಗೂ ನಿನಗೆ ನಾನು ಒಂದು ವಿಷಯ ಹೇಳಲು ನಾನೂ ಇದೇ ಹೊತ್ತಿನಲ್ಲಿ ಫೋನ್ ಮಾಡ್ತಿದೀನಿ. ನಿನ್ನ ತಾಯಿ ಹುಚ್ಚಿ ಕಣೋ. ನಿನ್ನ ನೆನಪಿನಲ್ಲೇ ಅವಳು ಹುಚ್ಚಿಯಾಗಿದ್ದಾಳೆ. ಅವಳು ಹುಚ್ಚಿ ಆಗಿ 25 ವರ್ಷ ಆಯಿತು. ಆಗ ಡಾಕ್ಟರ್ ಹೇಳಿದ್ರು ನಿಮ್ಮ ಹೆಂಡತಿಗೆ ಆಪರೇಷನ್ ಮಾಡಿಸಿ ಇಲ್ಲದಿದ್ದರೆ ಅವರ ಪ್ರಾಣಕ್ಕೆ ಅಪಾಯವಿದೆ ಅಂದ. ಆಗ ನಿಮ್ಮಮ್ಮ ನಾನು ಸತ್ರೂ ಪರವಾಗಿಲ್ಲ ನಾನು ಆಪರೇಷನ್ ಮಾಡಿಸಿಕೊಳ್ಳುವುದಿಲ್ಲ ಅಂತ. ಆಗಲೇ ನಿಮ್ಮಮ್ಮ ಪೂರ್ತಿ ಹುಚ್ಚಿ ಆಗಿದ್ದು.



ನೀನು ರಾತ್ರಿ ಒಂದೂವರೆಗೆ ಹುಟ್ಟಿದೆ. ಅದಕ್ಕೆ ನಿನಗೆ ಶುಭಾಷಯ ತಿಳಿಸಲು ಇಷ್ಟು ರಾತ್ರಿಯಲ್ಲೇ ನಿನಗೆ ಫೋನ್ ಮಾಡ್ತಾಳೆ. ಎಷ್ಟೋ ವರ್ಷ ನೀನು ಅವಳ ಫೋನ್ ರಿಸೀವ್ ಮಾಡೇ ಇಲ್ಲ. ಈ ವರ್ಷ ರಿಸೀವ್ ಮಾಡಿ ಅವಳಿಗೆ ಬೇಜಾರು ಮಾಡಿ ಫೋನ್ ಕಟ್ ಮಾಡಿದೆ. ಆದರೆ ನೀನು ಹುಟ್ಟುವ ದಿನ ಅವಳು ಸಂಜೆ 6ರಿಂದ ರಾತ್ರಿ ಒಂದೂವರೆ ತನಕ ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ನೀನು ಹುಟ್ಟಿದ್ದೇ ತಡ ಅವಳ ಸಂತೋಷಕ್ಕೆ ಪಾರವೇ ಇಲ್ಲ. ಆ ಎಲ್ಲಾ ನೋವು ಮರೆತುಬಿಟ್ಟಿದ್ಲು. ಆದರೆ ನೀನು ಹುಟ್ಟುವ ಮೊದಲು ಡಾಕ್ಟರ್ ನನ್ನ ಹತ್ತಿರ ಬಂದು ಒಂದು ಪತ್ರದಲ್ಲಿ ಸಹಿ ಮಾಡಿಸಿಕೊಂಡಿದ್ದರು. ಅದರಲ್ಲಿ ನನ್ನ ಹೆಂಡತಿಗೆ ಏನಾದರೂ ಆದರೆ ಡಾಕ್ಟರು ಜವಾಬ್ದಾರರಲ್ಲ್ಲ ಅಂತ ಬರೆದುಕೊಟ್ಟಿದ್ದೆ.

ಮಗೂ ನಿನಗೆ ಅವಳು ವರ್ಷದಲ್ಲಿ ಒಂದು ದಿನ ರಾತ್ರಿ ಫೋನ್ ಮಾಡಿದ್ದಕ್ಕೆ ನಿನ್ನ ನಿದ್ರೆ ಕೆಟ್ಟಿತು ಅಲ್ವಾ. ಆದರೆ ಅವಳು ಸುಮಾರು 25 ವಷರ್óದಿಂದ ಪ್ರತಿ ರಾತ್ರಿ ಒಂದೂವರೆಗೆ ನನ್ನನ್ನು ಎಬ್ಬಿಸುತ್ತಾಳೆ. ನನ್ನ ಚಿನ್ನು ಹುಟ್ಟಿದ್ದು ಇದೇ ಸಮಯದಲ್ಲಿ ಅಲ್ವಾ ಅಂತ ಕೇಳುತ್ತಾಳೆ. ನಾನು ಹೌದು ಅನ್ನುತ್ತೇನೆ. ನನ್ನ ಚಿನ್ನ ಎಲ್ಲಿದ್ದಾನೋ ಹೇಗಿದ್ದಾನೋ ಅಂದು ಕಣ್ಣೀರು ಹಾಕುತ್ತಾಳೆ. ನೀನು ಹುಟ್ಟಿದ ದಿನ ಬಂದಾಗ ನಾನು ಬೇಡವೆಂದರೂ ನಿನಗೆ ಫೋನ್ ಮಾಡ್ತಾಳೆ. ನಾನು ನಿನಗೆ ಇದನ್ನು ಹೇಳಲು ಫೋನ್ ಮಾಡಿದ್ದು ಅಷ್ಟೆ ಅಂದು ಫೋನ್ ಕಟ್ ಮಾಡ್ತಾರೆ.

ಮಗನ ಮನಸ್ಸಿಗೆ ನೋವಾಯಿತು. ಈ ಮಾತುಗಳನ್ನು ಕೇಳಿ ನೊಂದುಕೊಂಡ. ಕೇವಲ ಆರು ತಿಂಗಳಲ್ಲಿ ಅವನು ಅಮೆರಿಕಾದಿಂದ ಭಾರತಕ್ಕೆ ಬಂದ. ತಾಯಿಯ ಕಾಲು ಹಿಡಿದು ಕ್ಷಮೆ ಕೇಳಿದ. ಪಾಪ ತಾಯಿಗೆ ಏನೂ ತಿಳಿಯದು. ಮಗನನ್ನು ಎದುರಿಗೆ ನೋಡಿ ಕಣ್ಣು ಅರಳುತ್ತದೆ. ಗಂಡನ ಕಡೆ ನೋಡಿ ರೀ ನಮ್ಮ ಚಿನ್ನು ಬಂದಿದ್ದಾನೆ ಎನ್ನುತ್ತಾಳೆ.
ಮಗ ತಂದೆ ತಾಯಿಯರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ತಾಯಿ ಕಣ್ಣಲ್ಲಿ ನೀರು ಹಾಕಿಕೊಂಡು ನೀನು ನನ್ನ ಮಗ ಕಣೋ ನೀನು ಏನು ತಪ್ಪು ಮಾಡಿದೀಯಾಂತ ಕ್ಷಮೆ ಕೇಳ್ತಿದೀಯ. ನೀನು ಒಳ್ಳೆ ಮಗ. ನೀನು ನಮ್ಮನ್ನು ಚನ್ನಾಗಿ ನೋಡ್ಕೊತೀಯ ಅಂತ ನಮಗೆ ಭರವಸೆ ಇದೆ ಅಂದು ಅಳುತ್ತಾಳೆ.

Comments

  1. ಕಥೆ ಹೃದಯಸ್ಪರ್ಶಿಯಾಗಿದೆ. ಆದರೆ ಭಾರತದಲ್ಲಿ ನಡುರಾತ್ರಿ ಯಾದರೆ ಅಮೇರಿಕಾದಲ್ಲಿ ನಡು ಹಗಲಲ್ಲವೇ? ತಾಯಿ ಮಾತನಾಡುವುದನ್ನು ಕೇಳಿದರೆ ಆಕೆ ಹುಚ್ಚಿ ಎಂದು ನನಗೇನೂ ಅನಿಸಲಿಲ್ಲ.

    ReplyDelete
  2. short but there is a message in this. Nice

    ReplyDelete

Post a Comment